ಸ್ಪರ್ಧೆ ರದ್ದಾಗಿದೆ

ಹುಂ ಕಣ್ರಿ. ಒಂದೇ ಒಂದು ಎಂಟ್ರಿನೂ ಬರದೇ ಇದ್ದರಿಂದ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ.
ತೇಜಸ್ವಿನಿ ಹೆಗಡೆಯವರು ಮಾತ್ರ ಲಾಂಛನ ಸ್ಪರ್ಧೆಗೆ ಲೊಗೊ ಕಳಿಸಿಕೊಟ್ಟಿದ್ದರು. ಅದು ತಿದ್ದುಪಡಿಗೆ ಹೋಗಿದ್ದು ಸಮಯದ ಅಭಾವದ ಕಾರಣ ವಾಪಸ್ಸು ಸ್ಪರ್ಧೆಗೆ ಬಂದಿರಲಿಲ್ಲ. ಆದರೆ ಒಬ್ಬರಾದರೂ ಬಂದಿದ್ದರಲ್ಲ ಅಂತ ನನ್ನ ಬೆನ್ನನ್ನು ನಾನೇ ಸವರಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.

ಸ್ಪರ್ಧೆ ವಿಫಲವಾಗಲು ನಾ ಹುಡುಕಿದ ಕೆಲ ಕಾರಣಗಳು;
1. ಈ ಲಾಂಛನ ಮತ್ತು ಪ್ರಬಂಧದಿಂದ ಭಯೊತ್ಪಾದನೆಯ ಬಗ್ಗೆ ತಿಳುವಳಿಕೆ ಹರಡಬಹುದೆಂಬ ಅಂಶದಲ್ಲಿ ನಂಬಿಕೆ ಇಲ್ಲದಿರುವುದು.
2. ಸ್ಪರ್ಧೆಯಲ್ಲಿ ನಿಜವಾಗಿಯೂ ನಗದು ಮೊತ್ತವನ್ನು ಕೊಡದೇ ಕೇವಲ ಇ-ಸರ್ಟಿಫಿಕೇಟ್ ಕೊಡಲಾಗುವುದೆಂದು ಘೋಷಿಸಿದ್ದು.
3. ಓದುಗರಿಗೆ ಭಯೊತ್ಪಾದನೆ ಬಗ್ಗೆ ಓದಿ-ಓದಿ ಸಾಕಾಗಿ ಹೊಸ ಗಾಳಿ ಪಡೆಯಲು ಬೇರೆ ದಿಕ್ಕಿಗೆ ಮುಖ ಮಾಡಿರುವುದು.
4. ರಿಸೆಶನ್ನಿಂದಾಗಿ ಆಫೀಸಿನಲ್ಲಿ ನೆಟ್ ಬಳಕೆ ಕಡಿಮೆಯಾಗಿರುವುದು 😉
5. ಸ್ವಂತ ಕೆಲಸದ ಒತ್ತಡಗಳ ನಡುವೆ ಈ ವಿಷಯದ ಬಗ್ಗೆ ಗಮನಿಸದಿರಲು ಆಗದಿರುವುದು.
6. ಸ್ಲಮ್ ಡಾಗ್, ಪಬ್ ದಾಳಿ ಈ ತರಹದ ಅನೇಕ ವಿಷಯಗಳಲ್ಲಿ ಓದುಗರು ಕಳೆದು ಹೋಗಿರುವುದು.
7. ಇನ್ನು ನೀವು ಹೇಳಿ……..

( ಸ್ಪರ್ಧೆಯನ್ನು ಘೋಷಿಸಿದ್ದ ಬರಹಕ್ಕೆ 244 ಕ್ಲಿಕ್ ಗಳಿದ್ದವು !)

10 Responses to “ಸ್ಪರ್ಧೆ ರದ್ದಾಗಿದೆ”

  1. ಸುನಾಥ Says:

    ಲೇಖನಕ್ಕೆ ಬೇಕಾದ ಸಾಹಿತ್ಯ ಹಾಗು ಸಾಮರ್ಥ್ಯ ನನ್ನಲ್ಲಿ ಇಲ್ಲದ್ದಕ್ಕಾಗಿ ನಾನು ಬರೆಯಲಿಲ್ಲ.

    Like

  2. ಜಿತೇಂದ್ರ ಸಿ.ರಾ.ಹುಂಡಿ Says:

    ಇನ್ನೊಂದು ಕಾರಣ,

    ಬರೆಯೋ ಮನಸ್ಸಿದ್ದರೂ ಬರೆಯಲಾಗದಂತ ಮನಸ್ಥಿತಿಯಲ್ಲಿರೋ ನನ್ನಂತವರ ಸೋಮಾರಿತನ!

    Like

  3. ಶೆಟ್ಟರು (Shettaru) Says:

    ನಾನೂ ಬರೆಯಲಿಲ್ಲ. 😦

    I feel shame….

    Like

  4. Sharath Chandra Says:

    ತುಂಬಾ ನಿರಾಸೆ ಮತ್ತು ಬೇಸರ ಆಗ್ತಾ ಇದೆ 😦
    ನಾನು ಯಾವುದೇ ಕಾಮೆಂಟ್ ಮಾಡದೇ ಇದ್ರೂ ನಿಮ್ಮ ಅನ್ನು ತುಂಬಾ ಸಮಯದಿಂದ ಫಾಲೋ ಮಾಡ್ತಾ ಇದ್ದೆ.
    ಆದರೆ ಸ್ಪರ್ಧೆಯಲ್ಲಿ ಯಾವುದೇ Entry ಇಲ್ಲದೆ ಇರೋದಕ್ಕೆ ಕಾರಣ ನಮ್ಮಲ್ಲಿ ನಿಜವಾದ ಕಾಳಜಿ ಇಲ್ಲದೆ ಇರೋದು..!!

    Like

  5. ಗುರು ಬಾಳಿಗ Says:

    ನಿಮ್ಮ ಬಳಿಕದ ಬರಹವೊಂದರಲ್ಲಿ ನೀವು ಹಿಂಸೆಯ ರಂಜಕತೆಯನ್ನು ಕಲಾತ್ಮಕತೆಯ ಹೆಸರಿನಲ್ಲಿ ಸಮರ್ಥಿಸಿದ ಶೈಲಿ ಕೂಡ ಈ ಸ್ಪರ್ಧೆಯ ಹಿಂದಿನ ನಿಮ್ಮ ಉದ್ದೇಶವನ್ನು ಟೊಳ್ಳುಗೊಳಿಸಿದೆ.

    Like

  6. ನೀಲಾಂಜಲ Says:

    ಸುನಾಥ,ಜಿತೇಂದ್ರ ಸಿ.ರಾ.ಹುಂಡಿ, Sharath Chandra,
    ಬೇರೆ ಕಾರಣಗಳನ್ನು ಕೊಟ್ಟಿದ್ದಕ್ಕೆ thanx

    Sharath Chandra,
    ನಿರಾಸೆ, ಬೇಸರ ಮಾಡಿಕೊಬೇಡಿ. ಇನ್ನೂ anti-terrorist campaign ಚಾಲೂ ಇದೆ. ಅಷ್ಟೂ ಬೇಗ ನಿಂತು ಹೋಗುವುದಿಲ್ಲ. 😀

    ಶೆಟ್ಟರು,
    ಇದಕ್ಕೆಲ್ಲ ಏನು shame ಮಾಡಿಕೊಳ್ಳೊದು, ಎಲ್ಲಾ ಸಲನೂ ಎಲ್ಲದರಲ್ಲೂ participate ಮಾಡಕೆ ಆಗೋಲ್ಲವಲ್ಲಾ. ಕೆಲವೊಂದು success ಆಗುತ್ತೆ ಕೆಲವು unsuccessful ಆಗುತ್ತೆ. ಏನು ಮಾಡಕೆ ಆಗೋಲ್ಲ. ಓದುಗ ದೇವರ ಇಚ್ಛೆ 😉

    ಗುರು ಬಾಳಿಗ,
    ಹ್ಹ ಹ್ಹ ಹ್ಹಾ, ಓದಿ ನಗು ಬಂತು. ಆದರೆ ನಿಮ್ಮ /ನಿಮ್ಮಂತವರ ಮಾತುಗಳು ನನ್ನ ಕಾಲುಗಳು ಯಾವತ್ತೂ ನೆಲದ ಮೇಲೆ ಇರುವಂತೆ ಮಾಡುತ್ತವೆ ಹಾಗೂ ನನ್ನ ಯೋಚನೆಗಳನ್ನು cross check ಮಾಡಿಕೊಳ್ಳಲು ಸಹಕರಿಸುತ್ತವೆ.

    Like

  7. ರಂಜಿತ್ Says:

    ಕಾರಣ..: ಭಾಗವಹಿಸಲು ಸ್ಪರ್ಧೆಯ ಲೆವೆಲ್ ಗೆ ನನ್ನ ಮನಸ್ಸಿನ್ನೂ ಮೈನರ್ ಅನ್ಸಿದ್ದರಿಂದ!..:)

    Like

  8. Tejaswini Hegde Says:

    ನೀಲಾಂಜಲ,

    ನನಗೆ ನನ್ನ ಲೋಗೋವಾದರೂ ಸ್ಪರ್ಧೆಗೆ ಪರಿಗಣಿಸಲು ಸಾಧ್ಯವಾಗುವಂತೆ ತಿದ್ದುಪಡಿ ಮಾಡಿ ಮತ್ತೆ ಕಳುಹಿಸಬೇಕೆಂದಿತ್ತು. ಆದರೆ ನಾನಾ ಕೆಲಸಗಳ ಒತ್ತಡದಲ್ಲಿ ಆಗಲೇ ಇಲ್ಲ. ಅದಕ್ಕಾಗಿ ತುಂಬಾ ಬೇಸರವಿದೆ. ಆದರೂ ಭಾಗವಹಿಸಿದ್ದ ಅಲ್ಪ ತೃಪ್ತಿಯಾದರೂ ನನ್ನೊಂದಿಗೆ. ಅದೇ ತುಸು ಸಮಾಧಾನ ಅಷ್ಟೇ!

    Like

  9. vinayaka kodsara Says:

    ನೀಲಾಂಜಲರೇ,
    ನಾನು ಭಯೋತ್ಪಾದನೆ ಕುರಿತು ಒಂದು ಪುಸ್ತಕ ಬರೆಯಬೇಕು ಅಂತಾ ಹೊಂಚುಹಾಕಿ ಕುಳಿತ್ತಿದ್ದೇನೆ! ಹಾಗಾಗಿ ಸ್ಪರ್ಧೆಯಲ್ಲಿ ಭಾಗವಹಿಸಲಿಲ್ಲ. ಪಂಚವಾರ್ಷಿಕ ಯೋಜನೆಯಡಿಯಲ್ಲಾದರೂ ಪುಸ್ತಕ ಹೊರ ತರಬೇಕು ಅಂದುಕೊಂಡಿರುವೆ. ಆ ಕುರಿತು ನೆಟ್ ಪ್ರಾಕ್ಟೀಸ್ ಆರಂಭವಾಗಿದೆ! ಭಾಗವಹಿಸದೇ ಹೋಗಿದ್ದಕ್ಕೆ, ಭಯೋತ್ಪಾದನೆ ವಿರುದ್ಧ್ದ ಬರೆಯದೇ ಹೋಗಿದಕ್ಕೆ ಕ್ಷಮೆ ಇರಲಿ.

    Like

  10. ಶ್ರೀ Says:

    ನಮ್ಮ ನಡುವಿರುವ ಭಯೋತ್ಪಾದಕರನ್ನೇ ಮಟ್ಟ ಹಾಕಲು ಸಾಧ್ಯವಾಗುತ್ತಿಲ್ಲ, ಬರೆದು ಏನು ಮಾಡಲಿ ಅಂತ ನಿರಾಸಕ್ತಿ ಹುಟ್ಟಿಕೊಂಡಿತು. ಅದಕ್ಕೆ ಬರೆಯಲಿಲ್ಲ. ಒಂದು ಹಂತದಲ್ಲಿ ತುಂಬಾ ಬೇಸರ ಆಗಿಬಿಡುತ್ತೇರೀ…

    Like

ನಿಮ್ಮ ಟಿಪ್ಪಣಿ ಬರೆಯಿರಿ