ನಿಜ, ನಿಮಗಿದೋ ಸುವರ್ಣಾವಕಾಶ!
ಭಾಗವಹಿಸುವ ಎಲ್ಲರಿಗೂ ಬಹುಮಾನಗಳು **
ಲಾಂಛನ ಸ್ಪರ್ಧೆ
ವಿಷಯ : anti terrorist
ಪ್ರಥಮ ಬಹುಮಾನ : 5,000/-*
ದ್ವಿತೀಯ ಬಹುಮಾನ : 3,000/-*
ತೃತೀಯ ಬಹುಮಾನ : 1,000/-*
ನಿಯಮಗಳು :
೧. ಈ ಶಬ್ದವನ್ನು ಯಾವ ರೀತಿಯಲ್ಲೂ ಚಿತ್ರಿಸಬಹುದು.
೨. ಕೆಳಗಿನ ತಲೆಬರಹವನ್ನು ಸಹ ಬದಲಾಯಿಸಬಹುದು.
೩. ಯಾವುದೇ ಧರ್ಮವನ್ನು/ವ್ಯಕ್ತಿಯನ್ನು/ಸನ್ಘಟನೆಯನ್ನು ಹೋಲುವನ್ತಿರಬಾರದು.
೪. ಕಳುಹಿಸಿದ ಎಲ್ಲ ಡಿಸೈನ್ ಗಳನ್ನು ಇಲ್ಲಿ ಹಾಕಲಾಗುತ್ತದೆ.
೫. ಎಲ್ಲ ಡಿಸೈನ್ ಗಳು ಸಾರ್ವಜನಿಕ ಸ್ವತ್ತುಗಳಾಗುತ್ತವೆ.
೬. ಸೈಜ್ : 220 pixel width (for blog side bar display)
೭. ಪ್ರಿನ್ಟಿನ್ಗ್ ಸಲುವಾಗಿ ಮಾಡುವರಿದ್ದರೆ Adobe Illustrator/Corel Drawನಲ್ಲಿ ಮಾಡಿ, File ನ್ನು zip ಮಾಡಿ ಕಳುಹಿಸಬೇಕು.
ಪ್ರಬಂಧ ಸ್ಪರ್ಧೆ
ವಿಷಯ : ಭಯೋತ್ಪಾದನೆ
ಪ್ರಥಮ ಬಹುಮಾನ : 10,000/-*
ದ್ವಿತೀಯ ಬಹುಮಾನ : 7,500/-*
ತೃತೀಯ ಬಹುಮಾನ : 3,500/-*
ನಿಯಮಗಳು :
೧. ಶಬ್ದದ ನಿರೂಪಣಾ ವ್ಯಾಖ್ಯೆ, ಗುಣ ಲಕ್ಷಣ, ಮೂಲ ಸ್ವರೂಪ
೨. ಭಯೋತ್ಪಾದನೆಯ ಉಗಮ, ಬೆಳೆದು ಬಂದ ದಾರಿ, ಚರಿತ್ರೆ
೩. ಇದರ ವಿಧಗಳು, ಪ್ರಕಾರಗಳು
೪. ಸಾಮಾಜಿಕ/ರಾಜನೈತಿಕ ಕಾರಣಗಳು
೫. ಸಂಬದಿಸಿದ ಕಾನೂನುಗಳು
೬. ಭಯೋತ್ಪಾದನಾ ಗುಂಪುಗಳು/ಸಂಘಟನೆಗಳು, ಇವುಗಳ ವಿವರ
೭. ಇದರ ವಿರುದ್ಧ ಹೊರಾಡುವ ಬಗೆ, ಕಾರ್ಯರೂಪಕ್ಕೆ ಇಳಿಸಬಲ್ಲಂತಹ ಸಲಹೆಗಳು/ವಿಚಾರಗಳು/ಕಲ್ಪನೆಗಳು
೮. ಇದರ ವಿರುದ್ಧ ಸಾಮಾನ್ಯ ಪ್ರಜೆಯ/ಸಮಾಜದ ಕರ್ತವ್ಯ
೯…….. ಇನ್ನೂ ಅನೇಕ
ಇವುಗಳಲ್ಲಿ ಯಾವುದೇ ವಿಷಯದ ಬಗ್ಗೆ ಪ್ರಬಂಧ ಮನ್ಡಿಸಬಹುದು. ಎಲ್ಲ ಪ್ರಬಂಧಗಳನ್ನು ತಮ್ಮ ತಮ್ಮ ಹೆಸರಿನಲ್ಲಿ ಪ್ರಕಟಿಸಲಾಗುವುದು.
ಕಡೆಯ ದಿನಾಂಕ : ಜನವರಿ ೨೬, ೨೦೦೯
ಕಳುಹಿಸಬೇಕಾದ ವಿಳಾಸ : blackblogheader@gmail.com
ರಿಸಲ್ಟ್ ನ ದಿನಾಂಕ : ಜನವರಿ ೩೦, ೨೦೦೯ ( ವಿಜೇತರನ್ನು ವೋಟಿನ ಮೂಲಕ ಆರಿಸಲಾಗುವುದು)
ಕನ್ನಡ/ಹಿಂದಿ/ಇಂಗ್ಲೀಷ್ ಈ ಮೂರು ಭಾಷೆಗಳಲ್ಲೂ ಇರಬಹುದು.
ಪ್ರತಿ ಎಂಟ್ರಿಯ ಜೊತೆ ನಿಮ್ಮ ಹೆಸರು, ವಿದ್ಯಾಭ್ಯಾಸ, ಉದ್ಯೋಗ, ಇ– ಮೇಲ್ ಕಳಿಸುವುದು ಕಡ್ಡಾಯ. ಯಾರು ಎಷ್ಟು ಬೇಕಾದರೂ ಎಂಟ್ರಿ ಕಳಿಸಬಹುದು.
ಶಬ್ದದ ಮಿತಿ, ವಯೋಮಿತಿ ಇಲ್ಲ.
(ತುಂಬಾನೆ ಜಾಸ್ತಿ ವಿಷಯ ಸಂಗ್ರಹಿಸಿದ್ರೆ ಭಾಗಗಳಲ್ಲಿ ಹಾಕಿದ್ರಾಯ್ತು.)
[**ಶರತ್ತುಗಳು ಅನ್ವಯಿಸುತ್ತವೆ. *ಮೇಲೆ ಕಾಣಿಸಿದ ಮೊತ್ತವನ್ನು ಪ್ರದರ್ಶಿಸುವ ಸರ್ಟಿಫಿಕೇಟ್ ಗಳನ್ನು ನಿಮ್ಮ ಇ–ವಿಳಾಸಕ್ಕೆ ಇ–ಮೇಲ್ ಮಾಡಲಾಗುವುದು. ಯಾವುದೇ ನಗದು ಮೊತ್ತವನ್ನು ನೀಡಲಾಗುವುದಿಲ್ಲ. ಸ್ಪರ್ಧೆಯನ್ನು ರದ್ದುಗೊಳಿಸುವ ಅಥವಾ ಬಹುಮಾನವನ್ನು ಬದಲಿಸುವ ಎಲ್ಲ ಹಕ್ಕುಗಳು ಈ ಬ್ಲಾಗಿನದ್ದಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ : neelanjala@gmail.com]
ಡಿಸೆಂಬರ್ 17, 2008 ರಲ್ಲಿ 2:18 ಅಪರಾಹ್ನ |
Huh! :O
LikeLike
ಡಿಸೆಂಬರ್ 18, 2008 ರಲ್ಲಿ 9:30 ಫೂರ್ವಾಹ್ನ |
So what are those certificates? Who is sponsoring them?
How do you verify that votes are legitimate? That, no one is voting multiple times?
LikeLike
ಡಿಸೆಂಬರ್ 18, 2008 ರಲ್ಲಿ 11:24 ಫೂರ್ವಾಹ್ನ |
ಪ್ರಬಂಧಕ್ಕೆ ವಿಷಯ ಸಂಗ್ರಹಿಸಲು ಪಾಕಿಸ್ತಾನಕ್ಕೆ ಹೊರಟಿದ್ದೀನಿ:).
ವಾಪಾಸ್ ಬಂದ್ರೆ ಬರೆದು ಕಳಿಸ್ತೀನಿ.
LikeLike
ಡಿಸೆಂಬರ್ 18, 2008 ರಲ್ಲಿ 1:08 ಅಪರಾಹ್ನ |
ನೀಲಾಂಜಲರೇ,
ಸ್ಪರ್ಧೆ ನಡೆಸುವುದು ಅಷ್ಟೊಂದು ಸೂಕ್ತವಲ್ಲ ಅಂತಾ ನನಗನ್ನಿಸುತ್ತಿದೆ. ಸ್ಪರ್ಧೆ ಒಂದು ವಿಚಾರವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ನಡೆಯಬೇಕು. ನಾವಿಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿರುವುದು. ಹಾಗಾಗಿ ಸ್ಪರ್ಧೆ ಸರಿಯಲ್ಲ. ಸ್ಪರ್ಧೆಯಿಂದ ಜಾಗೃತಿ ಮೂಡುತ್ತದೆ ಎಂಬುದನ್ನು ನಾನು ಒಪ್ಪಲಾರೆ. ಇದೇ ಮೊತ್ತವನ್ನು ಬೇರೆ ಕಾರ್ಯಕ್ಕೆ ವಿನಿಯೋಗಿಸಲು ಸಾದ್ಯವಾ? ಒಮ್ಮೆ ಆಲೋಚಿಸಿ. ಒಬ್ಬ ಸೈನಿಕನಿಗೆ ಈ ಮೊತ್ತದಿಂದ ಸಹಾಯವಾಗಬಹುದಾ? ಅಥವಾ ಇಂದಿನ ಯುವಕರನ್ನು ಸೈನ್ಯದತ್ತ ಕಳುಹಿಸಲು ಪ್ರೋತ್ಸಾಹ ನೀಡುವ ಯೋಜನೆಗಳನ್ನು ರೂಪಿಸಬಹುದಾ? ಒಮ್ಮೆ ಚಿಂತನೆ ಮಾಡಿ.
ಪ್ರೀತಿಯಿಂದ
ವಿನಾಯಕ ಕೋಡ್ಸರ.
LikeLike
ಡಿಸೆಂಬರ್ 18, 2008 ರಲ್ಲಿ 1:28 ಅಪರಾಹ್ನ |
ABC,
1. certificates are sponsored by neelanjala and anti terrorist blog.
no cash involved. Better to understand * and ** marks and read condition apply below.
2. votes, wait till Jan26. U will be knowing. Its in the pattern of forum competations. Don’t worry about this. Have faith in me. That’s must for our movement. I am not going to betray any. Participate first. Read and understand all rules. If u still have query, ask me again in your name. not like ABC, pls.
ಸಂದೀಪ,
ನೀವು ಪಾಕಿಸ್ತಾನಕ್ಕೆ ಹೋಗುವುದೆನೂ ಬೇಡ. ಸ್ವಲ್ಪ ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಸಿಗುತ್ತೆ. ಇಲ್ಲ ಅಂತ ಇದ್ರೆ http://www.antiterrorist.wordpress.com/ ಬ್ಲಾಗ್ ನಲ್ಲಿ ಇರೋ ಲಿಂಕ್ಸ್ ನೋಡಿ.
ವಿನಾಯಕ,
ನೀವು ಸಹ ಕೆಳಗೆ ಕೊಟ್ಟಿರುವ ಪ್ಯಾರಾವನ್ನು ಓದಿಲ್ಲ ಅನ್ನಿಸುತ್ತಿದೆ. ನಿಮಗೆ * ಮತ್ತು ** ಇದರ ಅರ್ಥ ಗೊತ್ತಿರಬೇಕಲ್ಲವಾ?
ಕೆಳಗೆ ಕೊಟ್ಟಿರುವ ಪ್ಯಾರಾ; (**ಶರತ್ತುಗಳು ಅನ್ವಯಿಸುತ್ತವೆ. *ಮೇಲೆ ಕಾಣಿಸಿದ ಮೊತ್ತವನ್ನು ಪ್ರದರ್ಶಿಸುವ ಸರ್ಟಿಫಿಕೇಟ್ ಗಳನ್ನು ನಿಮ್ಮ ಇ-ವಿಳಾಸಕ್ಕೆ ಇ-ಮೇಲ್ ಮಾಡಲಾಗುವುದು. ಯಾವುದೇ ನಗದು ಮೊತ್ತವನ್ನು ನೀಡಲಾಗುವುದಿಲ್ಲ.)
ಭಯೋತ್ಪಾದನೆಯ ವಿರುದ್ಧ ಹೊರಡುವ ಮೊದಲು ಭಯೋತ್ಪಾದನೆ ಅಂದರೆ ಏನು ಅಂತ ಗೊತ್ತಿರಬೇಕಾಗುತ್ತದೆ. ಭಯೋತ್ಪಾದನೆ ಅಂದರೆ ಕೇವಲ ಮುಸ್ಲಿಮರು ಮತ್ತು ಪಾಕಿಸ್ತಾನಿಗಳು ಎಂದು ಕಣ್ಮುಚ್ಚಿ ಕುಳಿತಿರುವ ಎಲ್ಲರನ್ನೂ ಎಬ್ಬಿಸಿ ಸ್ವಲ್ಪ ಓದಿಸುವ ಪ್ರಯತ್ನವಿದು. ಈಗ ಹೇಳಿ, ನಿಮ್ಮ ಉತ್ತರಕ್ಕೆ ಕಾದಿರುವೆ.
LikeLike
ಡಿಸೆಂಬರ್ 18, 2008 ರಲ್ಲಿ 3:52 ಅಪರಾಹ್ನ |
ನಾನಂತೂ ತಯಾರು.. ಲೋಗೋ ಸ್ಪರ್ಧೆಗೆ ನನ್ನ ಹೆಸರನ್ನು ನೋಂದಾಯಿಸುತ್ತಿದ್ದೇನೆ. ಪ್ರಬಂಧ ಸ್ಫರ್ಧೆಗೆ ಮಾತ್ರ ನನ್ನ ಮಗಳ ಅನುಮತಿ ಬೇಕು. ಅವಳು ಸಮಯ ಕೊಟ್ಟರೆ ಅದಕ್ಕೂ ರೆಡಿ 🙂 ತುಂಬಾ ಆಕರ್ಷಕವಾಗಿವೆ ಬಹುಮಾನಗಳು 🙂
LikeLike
ಡಿಸೆಂಬರ್ 18, 2008 ರಲ್ಲಿ 6:29 ಅಪರಾಹ್ನ |
ನನಗೆ ಗೂಗಲ್ ಸರ್ಚ್ ನಲ್ಲಿ ನಂಬಿಕೆ ಇಲ್ಲ ನಾನು ಸ್ವಥ ಪಾಕಿಸ್ತಾನ ಮತ್ತೆ ತಾಲಿಬಾನ್ ಗೆ ಹೋಗಿ ರೀಸರ್ಚ್ ಮಾಡಿ ಪ್ರಬಂಧ ಬರೀತಿನಿ.
LikeLike
ಡಿಸೆಂಬರ್ 18, 2008 ರಲ್ಲಿ 6:50 ಅಪರಾಹ್ನ |
ನೀಲಾಂಜಲರೇ,
ಆ ಪ್ಯಾರಾ ಓದಿದದರೂ ಅದು ನನಗೆ ಅರ್ಥವಾಗಲಿಲ್ಲ. ಸ್ವಲ್ಪ ಕಷ್ಟವಾಗಿದೆ ಆ ಪ್ಯಾರಾ! ನಿಮ್ಮ ಮಾತು ನಿಜ. ಭಯೋತ್ಪಾದನೆ ಎಂಬುದು ಮುಸ್ಲಿಂ, ಪಾಕಿಸ್ತಾನಕ್ಕೆ ಸೀಮಿತವಾಗಿರದಿದ್ದರೂ, ಅವರೆಲ್ಲಾ ಭಯೋತ್ಪಾದನೆಗೆ ಸೀಮಿತರು! ಬರಹ, ಬೋಧನೆ ಕಾಲ ಮುಗಿದಿದೆ. ಸಾಕಷ್ಟು ಬರಹಗಾರರು ಭಯೋತ್ಪಾದನೆ ವಿರುದ್ದ ಪುಟಗಟ್ಟಲೇ ಬರೆದಿದ್ದಾರೆ, ಬರೆಯುತ್ತಿದ್ದಾರೆ. ನಾವು ಮತ್ತೆ ಅದನ್ನೇ ಮಾಡುತ್ತಾ ಕೂರುವುದು ಸರಿಯಲ್ಲ. ಹಾಗಾಗಿ ಕಾರ್ಯರೂಪದ ಆಲೋಚನೆಗಳನ್ನು ಮಾಡುವುದು ಒಳಿತು ಅನ್ನಿಸುತ್ತಿದೆ ನನಗೆ.
ಸತ್ತ ಮೇಲೆ ಒಬ್ಬ ಸೈನಿಕನನ್ನು ಗೌರವಿಸುವುದಕ್ಕಿಂತ, ಸೈನ್ಯದ ಕುರಿತು ಒಲವು ಮೂಡಿಸುವುದು, ಸೈನ್ಯಕ್ಕೆ ಸೇರುವ ಯುವಕರಿಗೆ ಪ್ರೋತ್ಸಾಹ ನೀಡುವುದು ಉತ್ತಮವಲ್ಲವೇ? ಬದುಕಿರುವ ಅದ್ಬುತ ಸೈನಿಕರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸುವ ಪ್ರಯತ್ನ ಮಾಡಬಹುದಲ್ಲಾ? ಈ ಕುರಿತು ಒಂಚೂರು ಆಲೋಚಿಸಿ.
ಪ್ರೀತಿಯಿಂದ,
ಕೋಡ್ಸರ
LikeLike
ಡಿಸೆಂಬರ್ 19, 2008 ರಲ್ಲಿ 11:26 ಫೂರ್ವಾಹ್ನ |
ಸಂದೀಪ,
ನಿಜಕ್ಕೂ ಓಳ್ಳೆ ಯೋಚನೆ. ಪ್ರಬಂಧ ಬರಿಯಲು ಪಾಕಿಸ್ತಾನ ಮತ್ತೆ ತಾಲಿಬಾನ್ ಗೆ ಹೋಗಿ ಬನ್ನಿ. ಯಾವಾಗ ಹೋಗ್ತಿದ್ದೀರಾ? ಏಷ್ಟು ದಿನ ?
ವಿನಾಯಕ,
ನಿಜ, ಹೀಗೆ ಮಾಡಬಹುದು. ನಮ್ಮ anti-terrorist ಬ್ಲಾಗ್ ಗೆ ನೀವು ಮೇಲೆ ಹೇಳಿದ ವಿಷಯದ ಬಗ್ಗೆ ಲೇಖನ ಮಾಲೆ ಬರೆದು ಕೊಡ್ತಿರಾ? ನೀವು ವೃತ್ತಿಯಲ್ಲಿ ಪತ್ರಕರ್ತರಾದ್ದರಿಂದ, ಅನುಭವದ ಹಿನ್ನಲೆಯಲ್ಲಿ ಈ ಕೆಲಸವನ್ನು ನಿಮಗೆ ವಹಿಸಲಾಗಿದೆ. ದಯವಿಟ್ಟು ಬರೆದು ಕೊಡ್ತಿರಾ?
ಹಾಗೇನೆ ಇನ್ನೊಂದು ವಿಷಯ, ಪ್ರಬಂಧ ಸ್ಪರ್ಧೆ ಇರುವುದು “ಭಯೋತ್ಪಾದನೆ ವಿರುದ್ಧ ” ಅಲ್ಲ. “ಭಯೋತ್ಪಾದನೆ ” ಕುರಿತು. ಲೋಗೊ ಸ್ಪರ್ಧೆ ಮಾತ್ರ ಭಯೋತ್ಪಾದನೆ ವಿರುದ್ಧ. ಈಗಾಗಲೇ ಯಾರದರೂ ಪುಟಗಟ್ಟಲೆ ಭಯೋತ್ಪಾದನೆಗೆ ಸಂಬದಿಸಿದ ಮಾಹಿತಿಗಳನ್ನು ಕನ್ನಡ ಬ್ಲಾಗಿನಲ್ಲಿ ಕೊಟ್ಟಿದ್ದರೆ ದಯವಿಟ್ಟು ಕಳುಹಿಸುವುದು. ಅದನ್ನು anti-terrorist ಬ್ಲಾಗ್ ನಲ್ಲಿ ಹಾಕಲಾಗುವುದು.
LikeLike
ಡಿಸೆಂಬರ್ 19, 2008 ರಲ್ಲಿ 12:20 ಅಪರಾಹ್ನ |
k try maadtini
kodasara
LikeLike
ಡಿಸೆಂಬರ್ 19, 2008 ರಲ್ಲಿ 5:01 ಅಪರಾಹ್ನ |
ಸಂದೀಪ್, ಮೊದಲು ನಮ್ಮೊಳಗೆ ನಾವು ನೋಡಿಕೊಂಡು, ನಂತರ ಪಾಕ್-ತಾಲಿಬಾನ್ ಟ್ರಿಪ್ ಮಾಡುವುದು ಸೂಕ್ತ ಅಂತ ನನ್ನ ಅನಿಸಿಕೆ. ಪಾಕಿಸ್ತಾನ್-ಗೋ ತಾಲಿಬಾನ್-ಗೋ ಹೋಗಿ ಬಂದರೆ ನಮ್ಮ ಬರಹದ ಧಾಟಿ ಬದಲಾದರೂ ಆಗಬಹುದೇನೋ ಗೊತ್ತಿಲ್ಲ, ಆದರೆ ನನಗೆ ನಮ್ಮೊಳಗೆ ನಾವು ನೋಡಿಕೊಳ್ಳುವುದರಲ್ಲಿ ಹೆಚ್ಚು ನಂಬಿಕೆ
ನೀಲಾಂಜಲ, ಭಯೋತ್ಪಾದನೆ ಕುರಿತ ಪ್ರಬಂಧ ಸ್ಪರ್ಧೆಗೆ ನಾನಿದ್ದೇನೆ… ಪಾಕಿಸ್ತಾನಕ್ಕಾಗಲೀ ತಾಲಿಬಾನಿಗಾಗಲೀ ಹೋಗದೆಯೇ, ನಮ್ಮ ಸುತ್ತ ಕಾಣುವುದರ ಬಗ್ಗೆಯೇ ಪುಟಗಟ್ಟಲೇ ಬರೆದಿದ್ದೇನೆ 🙂 ಬ್ಲಾಗಲ್ಲಿ ಹಾಕುವುದೋ ಬೇಡವೋ ಅಂತ ತೂಗಾಡುತ್ತಿದ್ದೆ, ಈಗ ನಿಮಗೆ ಕಳುಹಿಸಬಹುದು ಅನಿಸಿದೆ. ನೋಡೋಣ, ಶೀಘ್ರದಲ್ಲಿಯೇ ಕಳುಹಿಸುತ್ತೇನೆ, ಏನು ಮಾಡಬಹುದು ಅಂತ ನೋಡಿ.
LikeLike
ಡಿಸೆಂಬರ್ 19, 2008 ರಲ್ಲಿ 5:40 ಅಪರಾಹ್ನ |
ಆಶಯ ಚೆನ್ನಾಗಿದೆ.
ಆಮೇಲೆ, ವಿನಾಯಕರಿಗೆ ನನ್ನದೊಂದು ಸಲಹೆ. ಭಯೋತ್ಪಾದನೆ ಬಗ್ಗೆ ಬರೆಯಲು ಪಾಕಿಸ್ತಾನ/ಅಫ್ಘಾನಿಸ್ತಾನಕ್ಕೆ ಹೋಗೋ ಬದಲು, ನಮ್ಮ ಸಂಸತ್ತಿನೊಳಗೆ ಹೊಕ್ಕು, ರಾಜಕೀಯ ಪಕ್ಷಗಳ ಒಳಗೆ ಹೊಕ್ಕು ಪರಿಶೋಧಿಸಿದರೆ ಮತ್ತು ನಮ್ಮ ಪೊಲೀಸ್ ವ್ಯವಸ್ಥೆಯನ್ನು, ಅಧಿಕಾರಶಾಹಿಯನ್ನು ಆಮೂಲಾಗ್ಗ್ರವಾಗಿ ಶೋಧಿಸಿದರೆ ಗೊತ್ತಾಗಬಹುದು. ಒಂದ್ಸಲ ಮುಂಬಯಿಯೊಳಗೆ ನಡೆಯುತ್ತಿರುವ ರಾಜಕಾರಣದ, ಗ್ಯಾಂಗುವಾರ್ ಇತ್ಯಾದಿಗಳ ಮೇಲೆ ಗಮನ ಹರಿಸಿದರೂ ಸಾಕು. 🙂
LikeLike
ಡಿಸೆಂಬರ್ 19, 2008 ರಲ್ಲಿ 10:28 ಅಪರಾಹ್ನ |
ಪ್ರಬಂಧ ಸ್ಪರ್ಧೆ ಆಕರ್ಷಕವಾಗಿದೆ. ಎಲ್ಲರಿಗೂ ಮೊದಲು ಭಯೋತ್ಪಾದನೆ ಎಂದರೇನೆಂಬುದು ಅರ್ಥವಾಗುವುದು ಒಳಿತು. ಶಬ್ಧಗಳ ಮಿತಿ ಇದೆಯೇ ?
LikeLike
ಡಿಸೆಂಬರ್ 20, 2008 ರಲ್ಲಿ 2:19 ಫೂರ್ವಾಹ್ನ |
>>>> ಭಯೋತ್ಪಾದನೆಯ ವಿರುದ್ಧ ಹೊರಡುವ ಮೊದಲು ಭಯೋತ್ಪಾದನೆ ಅಂದರೆ ಏನು ಅಂತ ಗೊತ್ತಿರಬೇಕಾಗುತ್ತದೆ. ಭಯೋತ್ಪಾದನೆ ಅಂದರೆ ಕೇವಲ ಮುಸ್ಲಿಮರು ಮತ್ತು ಪಾಕಿಸ್ತಾನಿಗಳು ಎಂದು ಕಣ್ಮುಚ್ಚಿ ಕುಳಿತಿರುವ ಎಲ್ಲರನ್ನೂ ಎಬ್ಬಿಸಿ ಸ್ವಲ್ಪ ಓದಿಸುವ ಪ್ರಯತ್ನವಿದು.
>>>>>>>
ನೀಲಾಂಜನರವರೇ ,
ಈ ಮೇಲಿನ ಸಾಲುಗಳನ್ನು ಆದಷ್ಟು ದಪ್ಪ ಅಕ್ಷರಗಳಲ್ಲಿ ಹಾಕಿ ಪ್ಲೀಸ್.
ಕೆಲವರಿಗಂತೂ ತಾವು ಎಲ್ಲ ಬಲ್ಲವರೆನ್ನುವ ಧೈರ್ಯವಿದೆ. ಅಹಂ ಎನ್ನಲಾರೆ.
ಆದ್ದರಿಂದ ಅವರು ಪಾಕಿಸ್ತಾನಕ್ಕೋ ಅಲ್ಲ ಇರಾಕಿಗೋ ಹೋಗಿ ಬರಲಿ ಬಿಡಿ. ತಡೆಯುವುದು ಯಾಕೆ. !!!
ನಿಮ್ಮ ಪ್ರಯತ್ನ ಒಳ್ಳೆಯದೇ. ನಾನು ಖಂಡಿತವಾಗಿಯೂ ಇಲ್ಲಿ ಬರುವ ಬರಹಗಳನ್ನು ಓದುವೆ.
ಪ್ರತಿಕ್ರಿಯೆಗೆ ಒಳ್ಳೆಯ ವೇದಿಕೆ ಒದಗಿಸಿಕೊಟ್ಟಿದ್ದೀರಿ.
ಆದರೆ ಕ್ಷಮಿಸಿ. ಈ ಬಗ್ಗೆ ಇನ್ನೂ ಹೆಚ್ಚು ಓದಿಕೊಂಡು ಬರೆಯುವ ಪ್ರಯತ್ನ ಮಾಡಲಾರೆ. ನಾನು ಬರೆದು ನನ್ನ ಅರಿವನ್ನು ಹೆಚ್ಚಿಸಿಕೊಳ್ಳುವ ತುಡಿತ ನನಗಿಲ್ಲ. ಓದುವುದಕ್ಕೇ ಸಾಕಷ್ಟು ಇದೆ.
ನನ್ನ ಆಶಯ ಏನೆಂದರೆ, ಇದು ಮತ್ತೊಂದು ಬ್ಲಾಗ್ ಆಗದೆ, ವಾದ, ವಾದ, ಪ್ರತಿವಾದಕ್ಕೆ ಸೀಮಿತವಾಗದೆ ನಮ್ಮ ತಿಳುವಳಿಕೆಯನ್ನು ವಿಸ್ತರಿಸಲು ; ಮಿಥ್ ಗಳನ್ನು ಗುರುತಿಸಿ ಒಡೆಯಲು ಸಾಧ್ಯವಾದಲ್ಲಿ ; ನಮ್ಮ ನಮ್ಮ ಮಿತಿಯೊಳಗೆ ನಾವು ಮಾಡಬಹುದಾದ ಅಥವಾ ಮಾಡದೇ ಇರಬಹುದಾದ (ನಮ್ಮ prejudiced, stereotyped attitudes and actions) ಕೆಲವು ಸಣ್ಣ ಸಣ್ಣ ಕ್ರಿಯೆಗಳನ್ನು ಈ ಬ್ಲಾಗ್ ಮೂಲಕ ಅರ್ಥ ಮಾಡಿಕೊಳ್ಳುವಂತಾದರೆ ಅದೇ ಭಯೋತ್ಪಾದನೆಯ ವಿರುದ್ಧ ನಮ್ಮ ಗೆಲುವು ಅನ್ನಬಹುದು.
good luck and i stand by your zeal and zest.
LikeLike
ಡಿಸೆಂಬರ್ 20, 2008 ರಲ್ಲಿ 1:02 ಅಪರಾಹ್ನ |
Vinayaka,
ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. anti-terrorist ಬ್ಲಾಗ ನಿಮ್ಮ ಬರಹದ ನಿರೀಕ್ಷೆಯಲ್ಲಿದೆ.
Avi,
ನೀವು ವಿನಾಯಕರಿಗೆ ಸಲಹೆ ಕೊಟ್ಟ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವವರ ಬಗ್ಗೆ ವಿಷದವಾಗಿ ಬರೆದು ಕೊಡ್ತೀರಾ? ನಮ್ಮ anti-terrorist ಬ್ಲಾಗ್ನಲ್ಲಿ ಹಾಕಬಹುದು. ಸಮಯಾವಕಾಶ ಇದ್ದಲ್ಲಿ, ಇದರ ಬಗ್ಗೆ ಪ್ರಬಂದ ಬರೆದು ಕಳಿಸಿದರೆ ಇನ್ನಷ್ಟು ಸಂತೋಷ.
ಶ್ರೀ,
ಅವಶ್ಯ ಕಳುಹಿಸಿ.
ಚಂದ್ರಕಾಂತ,
ಇಲ್ಲ. ನೀವು ಕೇಳಿದ್ದು ಓಳ್ಳೆದಾಯ್ತು. ಮೇಲೆ ಪ್ರಕಟನೆಯಲ್ಲಿ ನೀವು ಕೇಳಿದ್ದರ ಕುರಿತು ಉತ್ತರಿಸಿದ್ದೇನೆ.
hEmAsHrEe,
ನಿಮ್ಮ ಬೆಂಬಲಕ್ಕೆ ಕೃತಜ್ಞತೆಗಳು. ನಿಮ್ಮ ಆಶಯ ನಮ್ಮೆಲ್ಲರದ್ದು ಆಗಿದೆ/ಆಗಲಿ .
LikeLike
ಡಿಸೆಂಬರ್ 21, 2008 ರಲ್ಲಿ 12:02 ಅಪರಾಹ್ನ |
ನೀಲಾಂಜಲರೇ,
ನಾನಿನ್ನು ಪತ್ರಿಕೋದ್ಯಮದಲ್ಲಿ ಅಂಬೆಗಾಲುಡಿತ್ತಿರುವವನು. ಹಾಗಾಗಿ ನನಗೆ ಅಪಾರ ಅನುಭವವಿಲ್ಲ. ಜತೆಗೆ ಹೇಳುವಷ್ಟು ಜ್ಞಾನವೂ ಇಲ್ಲ. ಆದರೆ ದೇಶ ಅಂದಕೂಡಲೇ ಒಪ್ಪಿಕೊಳ್ಳದೇ ಇರಲು ಮನಸ್ಸಾಗಲಿಲ್ಲ. ಖಂಡಿತಾ ಬರೆದುಕೊಡುವೆ. ಯಾವ ರೀತಿ ಬರೆಯಬೇಕು, ಏನೇನೂ ವಿಚಾರಗಳು ಬರಬೇಕು ಅಂತಾ ಒಂಚೂರು ಸೂಚಿಸಿ. ಜತೆಗೆ ಅಧ್ಯಯನಕ್ಕೆ ಪೂರಕವಾದ ಒಂದಿಷ್ಟು ಪುಸ್ತಕಗಳನ್ನು ಬಲ್ಲವರು ಹೇಳಬಹುದು. ಭಯೋತ್ಪಾದನೆ ಕುರಿತು ನೀವು ಓದಿರುವ ಪುಸ್ತಕಗಳನ್ನು ಸೂಚಿಸಬಹುದು.(ಇದು ಸಮಸ್ತ ಬ್ಲಾಗ್ ಲೋಕಕ್ಕೆ ಅನ್ವಯ)
ಅವಿಯವರೇ,
ನೀಲಾಂಜಲರವರು ಹೇಳಿದಂತೆ ಆ ವಿಚಾರವನ್ನು ನೀವು ಬರೆದರೆ ಉತ್ತಮ ಅನ್ನಿಸುತ್ತದೆ. ಅದಕ್ಕೆ ಪೂರಕವಾದ ಬೆಂಬಲ ಬ್ಲಾಗ್ಲೋಕದಿಂದ ದೊರೆಯಲಿದೆ ಎಂಬ ಭರವಸೆಯಿದೆ.
ವಿನಾಯಕ ಕೋಡ್ಸರ
LikeLike
ಡಿಸೆಂಬರ್ 24, 2008 ರಲ್ಲಿ 9:33 ಅಪರಾಹ್ನ |
ಒಹ್ ಬುದ್ಧಿಜೀವಿಗಳ ಸಂಘಕ್ಕೆ ಪದಾದಿಕಾರಿಗಳು ಸಿಕ್ಕಿದ ಹಾಗಿದೆ.ಕಂಗ್ರಾಟ್ಸ್.
LikeLike
ಡಿಸೆಂಬರ್ 24, 2008 ರಲ್ಲಿ 9:56 ಅಪರಾಹ್ನ |
ಸಂದೀಪ್,
What do u mean by this ?
ಬುದ್ಧಿಜೀವಿಗಳ ಸಂಘ?? ಪದಾದಿಕಾರಿಗಳು??? ಕಂಗ್ರಾಟ್ಸ್ for what????
LikeLike
ಜನವರಿ 30, 2009 ರಲ್ಲಿ 6:54 ಅಪರಾಹ್ನ |
[…] ಒಂದೇ ಒಂದು ಎಂಟ್ರಿನೂ ಬರದೇ ಇದ್ದರಿಂದ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ. ತೇಜಸ್ವಿನಿ […]
LikeLike