ಬದುಕ್ಕಿದ್ದೀನಿ

ನಿಜಕ್ಕೂ ಮಾತಿಗಿಂತ ಕೃತಿ ಲೇಸೇ ?!!

ನಾನು ಗುರುವಾರ ಬೆಳಿಗ್ಗೆಯಿಂದ ಭಯೋತ್ಪಾದನೆಗೆ ವಿರೋಧ ಸೂಚಕವಾಗಿ ಕಪ್ಪು ಹಣೆ ಪಟ್ಟಿ ಮಾಡಿದ್ದೆ. ಆದರೆ ಯಾರಿಗೂ ಏನು ಗೊತ್ತಾಗಲೇ ಇಲ್ಲ. ಮುಂಬಯಿ ಸ್ಪೋಟಕ್ಕೆ ಬ್ಲಾಗಿಗರ ಸ್ಪಂದನದ ಲಿಸ್ಟ್ ನಲ್ಲಿ ನನ್ನ ಹೆಸರೇ ಇಲ್ಲ 😦 ಷೇ ! ನಾನು ಹಾಗಾಗಿ ಹೀಗೆ ಮಾಡಿದ್ದು ಎಂದೆಲ್ಲ ಭಾಷಣ ಕೊಟ್ಟು ಮಾಡಬೇಕಿತ್ತು. ಕಾರಣ ವಿವರಿಸದೇ ಮಾಡಿಬಿಟ್ಟಿದ್ದೆ. ನಾನೇನೋ ಇದು ಮೌನದ ಸಮಯ ಎಂದು ಮಾತಾಡದೇ ವಿರೋಧ ಸೂಚಿಸಿದ್ದೆ. ಆದರೆ ಮಾತನಾಡದೇ ಮಾಡುವ ಮೌನಕ್ಕೆ ಯಾವುದೇ ಬೆಲೆ ಇಲ್ಲ ಎಂದು ಇವತ್ತು ಗೊತ್ತಾಯಿತು. ಇನ್ನೂ ಮುಂದೆ ಮೌನದ ಬಗ್ಗೆ ಮಾತನಾಡಿ ಮೌನವಾಗುತ್ತೇನೆಆದರೂ ಅಚ್ಚರಿಯಾಗುತ್ತೆ. ಎಲ್ಲ ಕಡೆ ಮಾತಿಗಿಂತ ಕೃತಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ!!

ಹಾಗಂತ ನಿಮ್ಮದೇನೂ ತಪ್ಪಿಲ್ಲ ಬಿಡಿ. ಏನೋ ಟೆಕ್ನಿಕಲ್ ಏರರ್ ಅಂದು ಕೊಂಡಿರುತ್ತೀರಾ. ಹೆಡ್ಡಿಂಗ್ ಫೋಟೋ ಅನ್ದವಾಗಿದೆ ಅನ್ನುವವರು ಸಲ ಕಪ್ಪು ಯಾಕಾಗಿದೆ ಎಂದು ಕೇಳಲಿಲ್ಲ. ! ನೀವು ಮೌನದಲ್ಲಿದ್ದೀರಾ ? (ವೈಶಾಲಿ ಒಬ್ಬರಿಗೆ ಕಾರಣ ಹೊಳೆದದ್ದು ನನ್ನ ಪುಣ್ಯ!)

ಹೋಗಲಿ ಯಾರೊಬ್ಬರೂ ನನ್ನ ಸುರಕ್ಷಿತ ವಾಗಿದ್ದೀರಾ ಎಂದು ಕೇಳಲಿಲ್ಲ (ಮೌನಗಾಳ, ಕೆನೆಕಾಫಿ ಬಿಟ್ಟು). ಸಹ ಬ್ಲಾಗೀಗ ಬದುಕಿದ್ದಾನಾ ಸತ್ತಿದ್ದಾನಾ ಅಂತಲೂ ವಿಚಾರಿಸಲಿಲ್ಲ. ಅಕ್ಕ ಪಕ್ಕದವರ ಬಗ್ಗೆ ವಿಚಾರಿಸಿಕೊಳ್ಳದ ನಾವು ನಮ್ಮಂತಾ ನರಸತ್ತವರಿಂದಲೇ ಆರಿಸಲ್ಪಟ್ಟವನಿಂದ ಪ್ರತಿಸ್ಪಂದನೆ ಬಯಸ್ತಿದ್ದೀವಿ. ನಮ್ಮೆಲ್ಲರ ಪ್ರತಿನಿಧಿಯಲ್ಲವೇ ಅವನುನಮಗಿಲ್ಲದ ಸ್ಪಂದನೆ ಅವನಿಗೆಲ್ಲಿನ್ದ ಬರುತ್ತದೆ?. ಆದರೂ ಇದಕ್ಕೆಲ್ಲ ಅವನೇ ಕಾರಣ ಎಂದು ಬೊಬ್ಬೆ ಹಾಕುತ್ತಿದ್ದೀವಿ.

ಹಾಗಂತ ನಿಮ್ಮ ಬಗ್ಗೆ ನಂಗೆ ಖಂಡಿತ ಬೇಸರವಿಲ್ಲ. ( ನಾನು ಸಹ ಶೆಟ್ಟರನ್ನು ವಿಚಾರಿಸಿಲ್ಲ ). ನಾನು ಮುಂಬಯಿವಾಸಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ನಾನೇನು ಪ್ರತಿದಿನ ನಿಮ್ಮ ಬ್ಲಾಗ್ ನೋಡಿದರು ಸಹಿತ ಕಮೆನ್ಟಿಸುತ್ತೇನೆಯೇ? ನಾನು ನಿಮ್ಮನ್ನು ವಿಚಾರಿಸಿಲ್ಲ. ಅದಕ್ಕೆ ನೀವು ನನ್ನ ವಿಚಾರಿಸಿಲ್ಲ. ಸರಿಯಿದೆ. ನಮ್ಮಲ್ಲಿ ಎಷ್ಟೋ ಜನ ಟೈಮ್ ಪಾಸ್ ಎಂದೋ, ಬೋರ್ ಆಗುತ್ತೆ ಎಂದೋ ಆಫೀಸಿನ ದುಡ್ಡಲ್ಲೇ, ಅಲ್ಲೇ ಕೂತು ಬ್ಲಾಗ್ ಓದಿ ನಮ್ಮ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿಸುತ್ತೀವಲ್ಲ. ನಮಗ್ಯಾಕೆ ಸ್ವಾಮಿ ಬೇರೆಯವರ ಉಸಾಬರಿ. ಬರೆದ್ರೆ ನೋಡೋದು, ಇಲ್ಲ ಅಂದ್ರೆ ಬೇರೆ ಬ್ಲಾಗ್ ಓದುತ್ತಾ ಇರೋದು.

ಹೋಗಲಿ ಬಿಡಿಎಲ್ಲ ಕಾಲದ ಮಹಿಮೆಈಗ ಯಾರ ಹತ್ರನೂ ಪಕ್ಕದಲ್ಲೇ ಏನಾಗ್ತಿದೆ ಎಂದು ನೋಡೋ ಪುರುಸೊತ್ತು ಇಲ್ಲಇನ್ಟರೆಸ್ಟು ಇಲ್ಲನಮ್ಮ ಬದುಕೇ ನಮ್ಮ ಮುಂದೆ ಹರಕೊಂಡು ಬಿದ್ದಿದೆಅದನ್ನು ಸರಿ ಮಾಡೋದೆ ಆಗ್ತಾ ಇಲ್ಲಇನ್ನು ಬೀದಿಲಿ ಹೋಗೋ ಮಾರಿನ ತಲೆ ಮೇಲೆ ಏಳ್ಕೊಳಕ್ಕೆ ಆಗುತ್ತಾ?
ನಾವೆಲ್ಲ ಸಾಮಾನ್ಯ ಪ್ರಜೆಗಳು. ಬುದ್ಧಿ ಇಲ್ಲದವರು, ಕೈಲಾಗದವರು. ಎರಡು ಜನ ಭಯೋತ್ಪಾದಕರನ್ನ ಅಲ್ಲಿದ್ದವರೇ ಸಾಯಿಸೋದಾ! ಜನರೆಲ್ಲ ಸೇರಿ ವಿಲನ್ ನನ್ನು ತದುಕೋದು ಬರೀ ಸಿನೆಮಾಕ್ಕೆ, ಕತೆಗೆ ಸೈ. ನಿಜ ಜೀವನದಲ್ಲಿ ಮಾಡೊಕಾಗೊಲ್ಲ. ಪೋಲಿಸ್ ಎಲ್ಲ ಡೈ ಹಾರ್ಡ್ ತರಹ ಸ್ಟನ್ಟ್ ಮಾಡೋಲ್ಲ.
ನಮ್ಮನ್ನು ನೋಡಿಕೊಳ್ಳೊಕೆ ಅನ್ತಾನೇ ಸರಕಾರ ಇರೋದಲ್ವಾ, ಅದು ಮಾಡಬೇಕಿರೊ ಕೆಲಸ ನಾವ್ಯಾಕೆ ಮಾಡಬೇಕುಜನರಿಂದ ಜನರಿಗಾಗಿ ಜನರಿಂದಲೇ ನಡೆಯೋ ಸರಕಾರನಾ, ಹೋಗಿ ಸ್ವಾಮಿ. ಸರಕಾರನೇ ಬೇರೆ, ಜನರೇ ಬೇರೆ. ಹಾಗೆಲ್ಲಾ ರಾಜಕಾರಣಿಯ ಸಾಮರ್ಥ್ಯದ ಬಗ್ಗೆ ಕೇಳೊದು ಜಾಹೀರಾತಲ್ಲಿ ಮಾತ್ರ……………………..

15 Responses to “ಬದುಕ್ಕಿದ್ದೀನಿ”

  1. ವೈಶಾಲಿ Says:

    ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು, ಆತ್ಮ, ಬುದ್ದಿ ಯಾವುದೂ ನಮ್ಮೊಳಗಿಲ್ಲ. ಕೆಸರಿನಲ್ಲಿದ್ದೇವೆ. ಹಾಗಾಗಿ ಎರಚಾಟ ಖುಷಿ ಕೊಡುತ್ತಿದೆ ಅಷ್ಟೆ. ಜಗತ್ತು ನೋಡಿ ನಗಬಹುದೆಂಬ ಪರಿವೆ ಇಲ್ಲ. ಶಾಂತಿಮಂತ್ರ ಹೇಳಿಕೊಂಡಿದ್ದರೆ ತಡೆವಷ್ಟು ದಿನ ತಡೆದೀತು. ಕಡೆಗೊಂದು ದಿನ ಯಾವುದೋ ಧರ್ಮಾಂಧರ ಕೈಯಲ್ಲಿ ಸಿಕ್ಕು ನಮ್ಮ ಧರ್ಮದ ದೇವರ ನೆನೆದು ಪ್ರಾಣ ಬಿಟ್ಟರಾಯಿತು. ಇಂದಲ್ಲ ನಾಳೆ ಸಾವು ಎಲ್ಲರಿಗೂ ಬರುತ್ತದೆ ತಾನೆ?

    ಬಿಡಿ. ಮಾತಾಡಿ ‘ಹಗುರ’ ವಾಗೋದಷ್ಟೇ. ಪತ್ರಕರ್ತ ಮಿತ್ರನೊಬ್ಬ ಕೇಳುತ್ತಿದ್ದ. ಜನ, ಪತ್ರಿಕೆಗಳು ಹೋರಾಡಿದರೂ ಏನು ಮಾಡಲಾದೀತು? ಸರ್ಕಾರ ಹೋಗಬಹುದಷ್ಟೇ. ಭಯೋತ್ಪಾದಕರ ಮನಸ್ಸು ಬದಲಾಗಬೇಕು !! ಸಂಘಟನೆ ಸುಲಭವೆನ್ನಿಸುತ್ತದಾ ನಿಮಗೆ ನೀಲಾಂಜಲಾ?

    ಆದರೂ ತೀರಾ ನರಸತ್ತವರಾಗೋದು ಬೇಡ. ಯಾವುದೋ ಒಂದು ರೀತಿ. ಪ್ರತಿಭಟಿಸೋಣ. ಕೈಲಾದಷ್ಟು. ಟೀನಾ ರವರ ಐಡಿಯಾ ಏನೋ ತುಂಬ ಚೆನ್ನಾಗಿದೆ. ಆದ್ರೆ ಕಾರ್ಯರೂಪಕ್ಕಿಳಿದೀತು ಹೇಗೆ?
    ಇನ್ನೊಂದು ಮಾತು. ನೀವು ಹೇಳಿದ ಹಾಗೆ ಮಾಡಿದರೆ ಬಂದ ಲಾಭಾಂಶದಲ್ಲಿ ಮಡಿದವರ ಕುಟುಂಬಕ್ಕೆ ಸಹಾಯ ಮಾಡುವುದಕ್ಕಿಂತ ರಕ್ಷಣೆಗಾಗಿನ ಯಾವುದೋ ಕಾರ್ಯಕ್ಕೆ ಬಳಸಿಕೊಂಡರೆ ಉತ್ತಮ ಎಂಬುದು ನನ್ನ ಭಾವನೆ.

    ಇವೆಲ್ಲ ಮಾತುಗಳಲ್ಲೇ ಉಳಿಯುವುದೋ, ಮನಸ್ಸಿನಲ್ಲಿರುವ ಕುದಿ ಆರುವಷ್ಟು ದಿನ ಚಾಲ್ತಿಯಲ್ಲಿರುವುದೋ ಅಥವಾ ನಿಜಕ್ಕೂ ಸಮಾಜದ ಒಡಲಲ್ಲಿ ಇಳಿದು ಬದಲಾವಣೆ ತರುವುದೋ ಗೊತ್ತಿಲ್ಲ. ಆದರೆ ಆ ನಿರೀಕ್ಷೆಯಂತೂ ಇದೆ. ರಾಜಕಾರಣಿಗಳು, ಭಾಷಣಕಾರರು, ಮಾತು, ಕೃತಿ, ಧರ್ಮ, ಜಾತಿ ಅಂತೆಲ್ಲ ಬಡಬಡಿಸುವವರು, ಮುಖವಾಡಗಳು ಅವರ ಪಾಡಿಗಿರಲಿ. ನಾನು ನಿಮ್ಮೊಂದಿಗೇ ರೆಡಿಯಾಗಿದ್ದೇನೆ.

    Like

  2. ರಂಜಿತ್ Says:

    ನೀವು ನೋಡಿದರೆ ಅವರ ಲಿಸ್ಟ್ ನಲ್ಲಿ ನಿಮ್ಮ ಹೆಸರಿಲ್ಲ ಅಂತಿದೀರಿ.
    ನಿಮ್ಮನ್ನು ಯಾರೂ ಕೇಳದೇ ಹೋದರು ಅನ್ನುತ್ತಿರುವಿರಿ. ಎಲ್ಲರಿಗೂ ನಿಮ್ಮ ಬಗ್ಗೆ ತಿಳಿದಿರಬೇಕೆಂದಿಲ್ಲ (ತಿಳಿದಿಲ್ಲ) ಅಲ್ಲವೆ?

    ಅವರು ನೋಡಿದರೆ ಬ್ಲಾಗ್ ನಲ್ಲಿ ಆ ವಿಷಯ ಬರೆಯವದವರೆಲ್ಲರೂ ಬೇಜವಾಬ್ದಾರಿಯವರನ್ನುತ್ತಿದ್ದಾರೆ.

    ಯಾಕಿಂಥ ಬೇರೆಮಾಡುವಿಕೆಗಳು? ಬ್ಲಾಗಿಗರೆಲ್ಲಾ ಒಗ್ಗಟ್ಟಾಗುವುದೆಂದು?

    ನಿಮ್ಮ ಈ ಲೇಖನಕ್ಕೆ ನನ್ನ ವಿರೋಧವಿದ್ದಷ್ಟೇ “ಹೀಗ್ಯಾಕೆ ಮಾಡಬಾರದು? ಲೇಖನಕ್ಕೆ ತುಂಬು ಸಪೋರ್ಟ್ ಇದೆ..

    Like

  3. chetana chaitanya Says:

    😦

    Like

  4. chetana chaitanya Says:

    baraha index nalli appear Aguva blog gaLannu mAtra gamanisiddakkE heegAytu. 😦

    Like

  5. ನೀಲಾಂಜಲ Says:

    Ranjeet and Chetana,
    -ನಂಗೆ ಲಿಸ್ಟನಲ್ಲಿ ಹೆಸರಿಲ್ಲದಿದ್ದಕ್ಕೆ ಬೇಜಾರಿಲ್ಲ.
    Ranjeet,
    -ಮಾತನಾಡದೇ ಮಾಡುವ ಮೌನಕ್ಕೆ ಯಾವುದೇ ಬೆಲೆ ಇಲ್ಲ ಎಂದು ಇವತ್ತು ಗೊತ್ತಾಯಿತು. ಹಾಗಂತ ನಿಮ್ಮದೇನೂ ತಪ್ಪಿಲ್ಲ ಬಿಡಿ. ಏನೋ ಟೆಕ್ನಿಕಲ್ ಏರರ್ ಅಂದು ಕೊಂಡಿರುತ್ತೀರಾ. ನಾನು ಮುಂಬಯಿವಾಸಿ ಎಂದು “ನಿಮಗೆ ಗೊತ್ತಿರಲಿಕ್ಕಿಲ್ಲ”. ನಾನೇನು ಪ್ರತಿದಿನ ನಿಮ್ಮ ಬ್ಲಾಗ್ ನೋಡಿದರು ಸಹಿತ ಕಮೆನ್ಟಿಸುತ್ತೇನೆಯೇ? ನಾನು ನಿಮ್ಮನ್ನು ವಿಚಾರಿಸಿಲ್ಲ. ಅದಕ್ಕೆ ನೀವು ನನ್ನ ವಿಚಾರಿಸಿಲ್ಲ. ಸರಿಯಿದೆ. ಸಹ ಬ್ಲಾಗೀಗ ಬದುಕಿದ್ದಾನಾ ಸತ್ತಿದ್ದಾನಾ ಅಂತಲೂ ವಿಚಾರಿಸಲಿಲ್ಲ. ಅಕ್ಕ ಪಕ್ಕದವರ ಬಗ್ಗೆ ವಿಚಾರಿಸಿಕೊಳ್ಳದ ನಾವು ನಮ್ಮಂತಾ ನರಸತ್ತವರಿಂದಲೇ ಆರಿಸಲ್ಪಟ್ಟವನಿಂದ ಪ್ರತಿಸ್ಪಂದನೆ ಬಯಸ್ತಿದ್ದೀವಿ. ನಮ್ಮೆಲ್ಲರ ಪ್ರತಿನಿಧಿಯಲ್ಲವೇ ಅವನು. ನಮಗಿಲ್ಲದ ಸ್ಪಂದನೆ ಅವನಿಗೆಲ್ಲಿನ್ದ ಬರುತ್ತದೆ?
    😀
    – “ಬೇರೆ ಮಾಡುವಿಕೆ” ಮಾಡ್ತಾ ಇಲ್ಲ. ನಮ್ಮ ಸರ್ಕಲ್ ನ ಸಣ್ಣ ಸಣ್ಣ ವಿಷಯಗಳನ್ನು ಗಮನಿಸದ ನಾವು ದೊಡ್ಡ ದೊಡ್ಡ ವಿಷಯಗಳ ಬಗ್ಗೆ ತಗಾದೆ ಎತ್ತುತ್ತೇವೆ ಎಂದು. ನಾನು ಸಹ ಶೆಟ್ಟರನ್ನು ವಿಚಾರಿಸಿಲ್ಲ. ತವಿಶ್ರಿ ಯವರನ್ನು ಒರ್ಕುಟನಲ್ಲಿ ಒಮ್ಮೆ ವಿಚಾರಿಸಿದ್ದೆ.

    Like

  6. ಸಂದೀಪ್ ಕಾಮತ್ Says:

    ನೀಲಾಂಜಲ ಬೆಂಗಳೂರಿನಲ್ಲಿ ಸ್ಫೋಟಗಳಾದಗ ’ನನ್ಮ್ಮನ್ನೂ ’ ಯಾರೂ ವಿಚಾರಿಸಿರಲಿಲ್ಲ.

    Like

  7. ಸಂದೀಪ್ ಕಾಮತ್ Says:

    ಸೌಪರ್ಣಿಕ ಸಾಧ್ಯ ಆದ್ರೆ ನಿಮ್ಮ ಮೈಲ್ ಐಡಿ ಕೊಡಿ ನಂಗೆ.
    ಯಾಕಂದ್ರೆ ನಂಗೆ ನಿಮ್ಮ ಬಗ್ಗೆ ಏನಾದ್ರೂ ಅಸಮಧಾನ ಉಂಟಾದ್ರೆ ಅದನ್ನು ಇಲ್ಲಿ ಎಲ್ಲರಿಗೂ ಕಾಣೋ ಹಾಗೆ ಬರೆಯಲು ಮುಜುಗರ ಆಗುತ್ತೆ.
    ಎಲ್ಲರಿಗೂ ಕಾಣೋ ಹಾಗೆ ಹೊಗಳಬೇಕು . ಯಾರಿಗೂ ಗೊತ್ತಾಗದ ಹಾಗೆ ಬಯ್ಯಬೇಕು ಅನ್ನೋದು ನನ್ನ ಪ್ರಿನ್ಸಿಪಲ್.
    sandeepkamath82 at yahoo.com

    Like

  8. ನೀಲಾಂಜಲ Says:

    ಸಂದೀಪ್,
    ಬಯ್ಯೋದಿದ್ರೆ ಬಯ್ರಿ ಸ್ವಾಮಿ. ತಪ್ಪು ಅಂತ ಕಂಡಿದ್ದನ್ನು ತಪ್ಪು ಎಂದು ಹೇಳೊಕೆ ಯಾರು ಬೇಡ ಅಂದಿದ್ದಾರೆ.
    ನಿಮ್ಮ ತೆಗಳಿಕೆ ಹಾಗೂ ಹೊಗಳಿಕೆ ಎರಡನ್ನೂ ನೀಲಾಂಜಲ ಸ್ವಾಗತಿಸುತ್ತದೆ.
    ಹಾಗೆ ಬೆಂಗಳೂರಲ್ಲಿ ಮೊನ್ನೆ ಆದಾಗ ಜಾಸ್ತಿ ಜನಕ್ಕೆ ಗಾಯ ಆಗಿಲ್ಲ ಅಂತ ಗೊತ್ತಾಗಿತ್ತು. ಸತ್ತವರ ಹೆಸರು ಪ್ರಕಟವಾಗಿತ್ತಲ್ಲ.
    ನಾನು ಸಹ ನಿಮ್ಮನ್ನು ವಿಚಾರಿಸಿಲ್ಲ, ಅದಕ್ಕೆ ನೀವು ನನ್ನ ವಿಚಾರಿಸಿಲ್ಲ.
    ಹಾ, ಗೊತ್ತು. ನನ್ನ ತಪ್ಪು ಇದ್ದ ಮೇಲೆ ಬೇರೆಯವರ ತಪ್ಪು ಗುರುತಿಸಬಾರದೆಂದು. ಅದನ್ನೇ ನಾನು ಹೇಳುತ್ತಿರೋದು.

    Like

  9. ರಂಜಿತ್ Says:

    ಸಂದೀಪ್ ಕಾಮತ್,

    🙂 🙂

    Like

  10. ಶೆಟ್ಟರು (Shettaru) Says:

    ಇದರಲ್ಲಿ ಯಾರ ತಪ್ಪು ಇಲ್ಲ ಎಂಬುದು ನನ್ನ ಅಭಿಪ್ರಾಯ, ಈ ಬಾಂಬ್ ದಾಳಿ, ಸಾವು, ನಷ್ಟ ಇವುಗಳು ನಮಗೆಲ್ಲ ಎಷ್ಟು ಹೋಂದಿಕೊಂಡಿವೆಯೆಂದರೆ ಇವುಗಳಿಲ್ಲದೆ ನಮ್ಮ ದಿನನಿತ್ಯದ ಆಗು ಹೋಗುಗಳಿಂದ ದೂರವಾದಂತಾಗುತ್ತದೆ, ಎನೂ ಆಗದ ದಿನ ಎನನ್ನೊ ಕಳೆದುಕೊಂಡಂತೆ ಆಗುವಷ್ಟು use to it ಆಗಿದ್ದೆವೆ.

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

    Like

  11. ಜಿತೇಂದ್ರ Says:

    ನೀಲಾಂಜಲ,

    ಬ್ಲಾಗಿಗರ ಸ್ಪಂದನದ ಲಿಸ್ಟಿನಲ್ಲಿ ನಿಮ್ಮ ಬ್ಲಾಗು ಬಿಟ್ಟುಹೋಗಿದ್ದಕ್ಕೆ ಕ್ಷಮೆ ಇರಲಿ. ಜೊತೆಗೆ ಈ ಕುರಿತು ಬರೆದ ಇತರ ಕೆಲವು ಬ್ಲಾಗುಗಳೂ ಬಿಟ್ಟುಹೋಗಿವೆ. ಕಾರಣ ಇಷ್ಟೆ ಇದ್ದ ಒಂದಿಷ್ಟು ಸಮಯದೊಳಗೆ ಬರೆಯಬೇಕಾದ ತರಾತುರಿಯಲ್ಲಿ ಗಮನಿಸಲಾಗಲಿಲ್ಲ. ಸಾರಿ….

    ಇನ್ನೂ ನೀವು ಮುಂಬೈ ನಲ್ಲಿದ್ದೀರಾ ಅನ್ನುವುದು ಮರೆತಿತ್ತು (ಉದ್ದೇಶಪೂರ್ವಕವಾಗಿಯಂತೂ ಖಂಡಿತ ಅಲ್ಲ). ನೆನಪಿದ್ದಿದ್ದರೆ ಬರಲಿಕ್ಕಲ್ಲವಾದರೂ ಹೇಗಿದ್ದೀರಿ ಅಂತ ಸೌಜನ್ಯಕ್ಕಾದರೂ ಒಂದು ಕಮೆಂಟು ಹಾಕುತ್ತಿದ್ದೆ.

    ಎಲ್ಲದಕ್ಕೂ ಕ್ಷಮೆ ಇರಲಿ.

    ಕಪ್ಪುಪಟ್ಟಿ ಮೂಲಕ ಪ್ರತಿಭಟಿಸಿದ್ದು ಒಳ್ಳೆಯ ವಿಚಾರ. ಹೀಗೆ ಮುಂದುವರಿಯಲಿ

    -ಜಿತೇಂದ್ರ

    Like

  12. ರಾಧಾಕೃಷ್ಣ ಆನೆಗುಂಡಿ Says:

    ನಾನು ನಿಮ್ಮೆಲ್ಲರ ಮಾತಿಗೆ ಸೆಲ್ಯೂಟ್

    Like

  13. Tina Says:

    ನೀಲಾ,
    ಅಸಲು ನಿಮ್ಮ ಮಾತಿನ ಅಡಿಗಡಗಿರುವ ಕಾಳಜಿ. ಒಳ್ಳೆಯದು. ನಿಮ್ಮ ಬೇಸರವೂ ತಕ್ಕುದಾದುದು. ಇಲ್ಲಿ ಒಂದು ಪುಟ್ಟ ಸಮಜಾಯಿಶಿ. ನೀವು ಮುಂಬಯಿ ಅಟ್ಯಾಕುಗಳು ಆಗಿದಂದಿನಿಂದ ಈ ಬಗ್ಗೆ ಬ್ಲಾಗಿಸುತ್ತಲೆ ಇದೀರಿ. ಎಲ್ಲರಿಗಿಂತ ಬಹುಶಃ ಕೊಂಚ ತೀವ್ರವಾಗಿ.(ಇಲ್ಲಿ ಪುನಹ ನಿಮ್ಮ ದುಖ ಹೆಚ್ಚು ನನ್ನದು ಕದಮೆ ಅನ್ನುತ್ತಿಲ್ಲ ನಾನು!). But the very fact that you are blogging actively means that you must be safe and sane enough to have an opinion. But this is not an excuse. We are sorry we did not ask about the your and other mumbai bloggers’ safety. Guess we were too overwhelmed at that point by people who terrorised and people who died. My brother in law whom I adore was in Mumbai at that point. We remembered after a long time that he was there. He said he understood because he too was shocked enough to have forgotten to give us a ring and inform about his safety. we felt terrible. ಇದೆಲ್ಲ aftermath reactions. ಇಲ್ಲಿ ಆ ಸಮಯದಲ್ಲಿ ಮರೆತೇಹೋಗಿದ್ದ ನೋವು ಬೇಸರಗಳು ಮರಳುವುದು ಸಹಜ. ದಯವಿಟ್ಟು ಬೇಸರಿಸದಿರಿ. ನಮ್ಮಗಳ ಒಳಗಿರಬೇಕಾದ ಸಹಜಭಾವಗಳ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದ.

    Keep faith, it works.
    Tina

    Like

  14. sri Says:

    nanna suttamutta avaghaDagaLu sambhavisidaaga (ponnudurai magaLa bagge bareyOkkE bahaLaShTide), blog, baraha ellaa asambaddha enisuttide 😦 – aadaroo itararannu nODi normal mukhavaaDa tOrabEkenisuttide

    mattomme baruve

    gurudEva dayaa karo deena jane

    Like

  15. ನೀಲಾಂಜಲ Says:

    ಶೆಟ್ಟರು,
    ನಿಮ್ಮ ಮಾತನ್ನು ಒಪ್ಪುತ್ತೇನೆ.
    ಜಿತೇಂದ್ರ,
    ನಂಗೆ ಖಂಡಿತವಾಗಿಯೂ ಬೇಜಾರಿಲ್ಲ. ಅರ್ಥ ಆಗುತ್ತೆ.
    ರಾಧಾಕೃಷ್ಣ,
    😀
    Teena,
    ನಿಜಕ್ಕೂ ಬೇಸರವಿಲ್ಲ. ಬರೆದದ್ದು ಹೇಳಬೇಕಾದದ್ದನ್ನು ಹೇಳದೇ ಅಪಾರ್ಥವಾಗಿದ್ದಕ್ಕೆ ನನ್ನ ಬರವಣಿಗೆ ಬಗ್ಗೆ ಬೇಸರವಿದೆ. “ನಮ್ಮಗಳ ಒಳಗಿರಬೇಕಾದ ಸಹಜಭಾವಗಳ ಬಗ್ಗೆ “, thanx 😀
    sri,
    😦

    Like

ನಿಮ್ಮ ಟಿಪ್ಪಣಿ ಬರೆಯಿರಿ