ನಾನು…

july1813

ಒಂದೊಳ್ಳೆ ಅನಿಮೇಶನ್ ಕಂಪನಿಯಲ್ಲಿ ಸಿಜಿ ಆರ್ಟಿಸ್ಟ್ ಆಗಿ ಖುಷಿ ಖುಷಿ ಕೆಲಸ,

ಅಲ್ಲಿ ಎಲ್ಲ ಸೇರ್ಕೊಂಡು ಮಾಡೋ ಚೆಂದ ಚೆಂದ ಅಂತರಾಷ್ಟ್ರೀಯ ಸಿನೆಮಾ,

ಮುಂಬಯಿ ವಾಸ,  ಶಿರಸಿ ಊರು, ಪತ್ರಿಕೋದ್ಯಮ ಪದವಿ,

ಕತೆ ಹೇಳೋದು ಮತ್ತು ಕೇಳೋದು ತುಂಬಾನೇ ಇಷ್ಟ,

ಜೀವ ಮತ್ತು ಜೀವನದ ಮೇಲೆ ಸಕತ್ ಪ್ರೀತಿ,

ಪುಸ್ತಕ, ಸಿನೆಮಾ, ನಾಟಕ, ಆರ್ಟ್, ಕ್ರಾಫ್ಟ್, ಡೆಕೋರ್, ಗಾರ್ಡನ್, ಅಡಿಗೆ, ಚರಿತ್ರೆ, ಫಿಲೋಸಫಿ, ತಿರುಗಾಟ, ಫೋಟೋಗ್ರಾಫಿ, ನೆಟ್ ಸರ್ಫಿಂಗ್, ಫ್ರೆಂಡ್ಸು, ಜನರು….

ಹೀಂಗೆ ಉದ್ದ ಲೈಕ್ ಲಿಸ್ಟು. ಒಟ್ಟಿನಲ್ಲಿ ಯಾವುದರ ಎಗ್ಗಿಲ್ಲದೆ ಬದುಕೋಕೆ ಇಷ್ಟ.

ಅಷ್ಟೇ.

-ನೀಲಾಂಜಲ, Dec 1st  2013

———————————————————

my_avatar

ಶಿರಸಿಯವಳು, ಹಾಗೆಂದು ಒಪ್ಪಿಕೊಂಡಿದ್ದೇನೆ. (ತಂದೆಯವರು ಮೂಲತಃ  ಸಾಗರದವರಾಗಿದ್ದರು ಸಹಿತ)

ಸಧ್ಯ ಇರುವುದು ಮುಂಬಯಿನಲ್ಲಿ

ಕೊಟ್ಟಿದ್ದು ಅಲ್ಲ ಕೊಡಿಸಿ ಕೊಂಡಿದ್ದು ಮಂಗಳೂರು

(ಈ ಜಿಲ್ಲೆ ಕಂಡರೆ ಮೊದಲಿನಿಂದಲು ಅಷ್ಟಕಷ್ಟೆ. N Kಯನ್ನು D K ನುಂಗಿ ಹಾಕಿದೆ ಅಂತ. ಎಲ್ಲರಿಗೂ South Canara ಗೊತ್ತು, North Canara ಗೊತ್ತಿಲ್ಲ. ಬೇಕಾದ್ರೆ ಕೇಳಿ ನೋಡಿ. NK ಅಂದರೆ North Karnataka , ಇಲ್ಲ UK ಅಂದರೆ United Kingdom ಮಾಡಿಯಾರು)

ಓದಿದ್ದು ಪತ್ರಿಕೋದ್ಯಮ ಮತ್ತು ಅನಿಮೇಶನ್.

ಸದ್ಯ ಇರೊ ಕೆಲಸ ಬಿಟ್ಟು blog ಇಸೋ ಗೀಳು ಅಂಟಿಸಿಕೊಂಡಿದ್ದೇನೆ 🙂

ಸೌಪರ್ಣಿಕಾ ಹೊಳ್ಳ, Aug 9th  2008

 

 ————————————————–

9 Responses to “ನಾನು…”

  1. vinayak ram Says:

    thamma blog aparOOPakke ello sikkitu. ondakshara bidade odide. kollurina souparnika nadiyali minda anubhava ayitu. keep it up….

    Like

  2. ಗುರು ಬಾಳಿಗ Says:

    ಅಸ್ಟಕಸ್ಟೆ ಅಂದರೆ ಏನು ಸೌ?

    Like

  3. suma Says:

    hello!! yaake souparnika tumba dinadinda enu barede illa? I hava red all of your articles,and I am waiting for more.

    Like

  4. keshava prasad Says:

    blog chennagide

    Like

  5. Anjana Hulse Says:

    Hi Soupi, Nice blog. I could not stop laughing after reading some of your posts! I mean to say, I enjoyed a lot reading them…including your profile description!! Continue writing….
    Best wishes,
    Anjana

    Like

  6. mshebbar Says:

    ಒಮ್ಮೆ ನೋಡಿದ್ದೇನೆ, ನಂತರ ಬರುತ್ತೇನೆ

    Like

  7. mshebbar Says:

    N Kಯನ್ನು D K ನುಂಗಿ ಹಾಕಿದೆ ಅಂತ. = D ‘n’ K ಅಲ್ವಾ?

    Like

  8. Ravi Poojari Says:

    ನಮಸ್ಕಾರ ಸೌಪರ್ಣಿಕಾ,

    ಅಂತರ್ಜಾಲದಲ್ಲಿ ಕನ್ನಡದ ಕೆಲವು ಪದಪುಂಜ ಹುಡುಕುವಾಗ ನಿಮ್ಮ ಬ್ಲಾಗ್ ನೋಡಿದೆ. ಹಾಗೆ ಪುಟ ತಿರುವಿ ಹಾಕುತ್ತಿದ್ದಂತೆ ನಿಮ್ಮ ಬರವಣಿಗೆಯ ಚಮತ್ಕಾರದಲ್ಲೊಮ್ಮೆ ಗಿರಕಿ ಹೊಡೆದು ಬಂದೆ, ಬಹಳ ಸೊಗಸಾಗಿದೆ. ಸಿಕ್ಕಾಪಟ್ಟೆ ಒಳ್ಳೆಯ ಬರಹಗಳಿವೆ, ಪುರ್ಸೋತ್ ಮಾಡಿಕೊಂಡು ಕಂಡಿತ ಓದುವೆ. ಭಾಷೆ ಮತ್ತು ಬರವಣಿಗೆಯ ಮೆರವಣಿಗೆ ಸದಾ ಅಬ್ಬರದಲ್ಲಿ ಸಾಗಲಿ. ಮೊದಲಿಗೆ ಈ ಬ್ಲಾಗ್ ಕಂಡು ನನ್ನ ಮಡದಿ ದೀಪಿಕಾಳ (ದೀಪಿಕಾ ಕೂಡ ಸಾಗರದ ನಿವಾಸಿ) ಅತ್ಮೀಯ ಗೆಳತಿ ಸೌಪರ್ಣಿಕಾಳದ್ದೇ ಇರಬಹುದೆಂದುಕೊಂಡೆ. ಸೌಪಿ ಶಿವಮೊಗ್ಗದ ನಿವಾಸಿ. ಅಂದ ಹಾಗೆ, ಚರಕ ಹೆಗ್ಗೋಡು ಅಂತಿದೆಯಲ್ಲ, ನೀವು ಹೇಗೆ ಇದಕ್ಕೆ ಸಂಭಂದ. ಹೆಗ್ಗೋಡಿನ ಚರಕ ಮತ್ತು ಸ್ಥಳೀಯ ಪರಿಚಿತ ವೈಕ್ತಿ ಸುಂದರಣ್ಣ, ದೀಪಿಕಾಳ ಚಿಕ್ಕಪ್ಪ.

    Like

  9. ಶಶಿ ಸಂಪಳ್ಳಿ Says:

    ಹಾಯ್.. ನಿಮ್ಮ ಬರಹ, ಆಲೋಚನಾ ರೀತಿ ಇಷ್ಟವಾಯಿತು.. ಥ್ಯಾಂಕ್ಯೂ.

    Like

ನಿಮ್ಮ ಟಿಪ್ಪಣಿ ಬರೆಯಿರಿ