ಕೆಲ ದಿನಗಳಿಂದ ಮತಾಂಧತೆ, ಮುಸ್ಲಿಮರು, ಕ್ರೈಸ್ತರು, ವೈದಿಕ ಧರ್ಮ, ಹಿಂದೂ ಧರ್ಮ, ಅಸ್ಪ್ರಶ್ಯತೆ..ಹೀಗೆ ಮುಂತಾದ ಲೇಖನಗಳನ್ನು ಓದುತ್ತಿದ್ದೇನೆ. ನನಗೊಂದು ಸಮಸ್ಯೆ ಬಂದು ಬಿಟ್ಟಿದೆ. sc/stನ ದೊಡ್ಡ ಆಫೀಸರ್ / ಶ್ರೀಮಂತನ ಮನೆಯಲ್ಲಿ ಅವನು ಪರಿಚಾರಕರ ಜೊತೆಗೆನೆ ಊಟ ಮಾಡ್ತಾನ ? ಅವರ ಮನೆಯಲ್ಲಿ ಕೆಲಸದವರು ಅಂತ ಕೀಳಾಗಿ ವರ್ತಿಸುವುದೇ ಇಲ್ಲವೇ ? ಅವರಿಗೆಂದು ಬೇರೆ ಲೋಟ, ತಟ್ಟೆ, ಬಟ್ಟೆ… ಇರುವುದಿಲ್ಲವೇ ? ಅವರನ್ನು ಮನೆಯ ದೇವರ ಕೊಣೆಯೊಳಗೆ ಪೂಜೆ ಮಾಡಲು / ಒಳಗೆ ಕೂರಲು ಬಿಡುತ್ತಾರೆಯೆ ? ಅದೇ ಕೆಲಸವನ್ನು ಹುಟ್ಟಿನಿಂದ ಬ್ರಾಹ್ಮಣ ಅಂತಾದವನು (ಕೆಲಸದವರು sc/stಗಳಾಗಿದ್ದರೆ) ಮಾಡಿದರೆ ? ಹಾಗೆಯೇ ಬಾಸ್ ಒಬ್ಬ ತನ್ನ ಕೈ ಕೆಳಗಿನವನ ಜೊತೆ ಚೆನ್ನಾಗಿ ವರ್ತಿಸುವುದಿಲ್ಲ, ಕಿರುಕುಳ ಕೊಡುತ್ತಾನೆ ಅಂತಿಟ್ಟುಕೊಳ್ಳೊಣ. ಬಾಸ್ ಬ್ರಾಹ್ಮಣ/ಹಿಂದೂ ಆಗಿ, ಕೆಳಗಿನವನು sc/st/ಮುಸ್ಲಿಂ ಆಗಿದ್ದರೆ ? ಅಥವಾ ಬಾಸ್ sc/st/ಮುಸ್ಲಿಂ ಆಗಿ ಕೆಳಗಿನವನು ಬ್ರಾಹ್ಮಣ/ಹಿಂದೂ ಆಗಿದ್ದರೆ ?
ಮನುಷ್ಯನ ಕೀಳು ಭಾವನೆಗಳಿಗೆ, ಅಸೂಯೆ, ಮತ್ಸರ, ದ್ವೇಷಗಳಿಗೆ ನಾವ್ಯಾಕೆ ಜಾತಿ / ಧರ್ಮದ ಬಣ್ಣ ಬಳಿಯುತ್ತೇವೆ ?