Archive for the ‘ನನ್ ಡೈರಿ’ Category

ಸ್ಥಳಾಂತರ

ಏಪ್ರಿಲ್ 16, 2010

ನಾಳೆಯಿಂದ ನಾನಿಲ್ಲಿ ಇರುವುದಿಲ್ಲ ಎಂದು ಇವಕ್ಕೆ ಹೇಗೆ ಹೇಳುವುದು? ಪ್ರತಿದಿನ ಮಧ್ಯಾಹ್ನದ ಊಟದ ಜೊತೆಗೆ, ಟೀ ಜೊತೆಗೆ ಕಂಪನಿ ಕೊಡುತ್ತಿದ್ದ ಇವುಗಳನ್ನು ಇಲ್ಲಿಯೇ ಬಿಟ್ಟು ದೂರ ಹೋಗುತ್ತಿದ್ದೇನೆ. ಇನ್ಮುಂದೆ ಬೇಕಾದಾಗ ಬಂದು ನೀರಲ್ಲಿ ಆಡಲು ಇವಕ್ಕೆ ಇಲ್ಲಿ ನೀರುದಾನಿ ಇರುವುದಿಲ್ಲ. ಬೇಕಾದಾಗ ಬಂದು ತಿನ್ನಲು ಕಾಳುಗಳೂ ಇರುವುದಿಲ್ಲ. ಕಾಳುಗಳು ಖಾಲಿಯಾದಾಗ ಕಂಬಿಯ ಮೇಲೆ ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದರೆ, ಅತ್ತಿಂದಿತ್ತ ಕಿಟಕಿಯ ಬಳಿ ಸುಳಿಯುತ್ತಿದ್ದರೆ ಗಮನಿಸುವರ್‍ಯಾರಿಲ್ಲ. ಮುಂದೆ ನಮ್ಮ ಜಾಗದಲ್ಲಿ ಬರುವವರು ಕೊಳಕು ಪಾರಿವಾಳಗಳು ಎಂದು ಇವನ್ನು ಓಡಿಸಿ ಕಿಟಕಿಗೆ ಜಾಲಿ ಹಾಕಿಸಿದರೆ ಬಿಸಿಲಲ್ಲಿ ತಂಪಾರಿಸಿಕೊಳ್ಳಲು ಛಾವಣಿಯೊಂದಿರುವುದಿಲ್ಲ. ಕಾಗೆಗೆ, ಗುಬ್ಬಿಗೆ, ಮೈನಾಗೆ, ಬುಲ್ ಬುಲ್ಲಿಗೆ ಒಂದು ತುತ್ತು ಅನ್ನವೂ ದೊರಕುವುದಿಲ್ಲ. ಬಾಯಾರಿ ಕೂಗಿದರೆ ಮುಚ್ಚಿದ ಕಿಟಕಿ ಬಾಗಿಲು ತೆರೆಯುವುದಿಲ್ಲ.

ಹಾಗಂತ ಕೋಳಿ ಕೂಗಿದರೇನೆ ಬೆಳಗಾಗಬೇಕೆಂದಿಲ್ಲವಲ್ಲ. ಇನ್ನೊಂದು ಕೊಡುವ ಕೈ ಇವಕ್ಕಾಗಿ ಕಾದಿರುತ್ತದೆ. ನಾನಿಲ್ಲದಿದ್ದರೆ ಬೇರೊಬ್ಬ. ಇರುವಷ್ಟು ದಿನ ನನ್ನ ಕರ್ತವ್ಯ. ಬೇರೆಲ್ಲೊ ಇನ್ನೊಂದು ಜೀವಿಗಳ ಗುಂಪಿನ ಜೊತೆ ಸ್ನೇಹದ ವಿನಿಮಯ ನಡೆಯಲಿದೆ. ಅಷ್ಟೇ.

ನಾನು ಮತ್ತು ಔರಂಗಜೇಬ

ಆಗಷ್ಟ್ 21, 2009

ಮನೆಯಲ್ಲಿ ಎಲ್ಲರೂ ನನ್ನ ಔರಂಗಜೇಬ* ಎಂದು ತೀರ್ಮಾನಿಸಿ ಆಗಿದೆ. ಅದೂ ಈಗೀಗ ಅಲ್ಲ, ತುಂಬಾ ಮೊದಲಿನಿಂದ.

ನನ್ನ ಅಮ್ಮ ಸೀತಾರವಾದಕಿ ಹಾಗೂ ಅಪ್ಪ ಮೃದಂಗ ಮತ್ತು ಮೋರ್ಚಿಂಗ್ ಕಲಿತವರು. ಆದರಿಂದ ಸಹಜವಾಗಿ ನನ್ನನ್ನೂ ಸಂಗೀತ ಕಲಿಯಲು ಚಿಕ್ಕ ವಯಸ್ಸಿನಿಂದಲೇ ತಯಾರು ಮಾಡಲಾಯಿತು. ಅಮ್ಮನ ಗುರುಗಳ ಬಳಿಯಿಂದಲೇ ಪಾಠ ಪ್ರಾರಂಭವಾಯಿತು. ಆದರೆ ’ಸ’ ಇಂದ ಆರಂಭವಾಗಿದ್ದು ಸಪ್ತಮ ’ಸ’ ಗೆ ಏರಲೇ ಇಲ್ಲ. ನನಗೆ ಕಿಂಚಿತ್ತೂ ಸ್ವರಜ್ಞಾನವಿಲ್ಲವೆಂದು ಅವರು ಮುಂದಿನ ಪಾಠ ನಿರಾಕರಿಸಿದರು. ಆದರೆ ಆಶಾವಾದಿಯಾದ ನನ್ನ ಅಮ್ಮ ಬಿಡಬೇಕಲ್ಲ. ಸ್ವಲ್ಪ ವರ್ಷದ ಬಳಿಕ ಇನ್ನೊಬ್ಬರಲ್ಲಿ ಪಾಠಕ್ಕೆ ಸೇರಿಸಿದರು. ನಾನು ವಿಧೇಯ ವಿದ್ಯಾರ್ಥಿಯಂತೆ ಅವರ ಬಳಿ ಹಲವು ವಾರಗಳ ಕಾಲ ಅಭ್ಯಸಿಸಿದೆ. ಒಮ್ಮೆ ಅಮ್ಮ ನನ್ನ ಜೊತೆ ಕ್ಲಾಸಿಗೆ ಬಂದಾಗ ನನ್ನ ತಾಲೀಮು ಕೇಳಿ ಅವತ್ತಿನಿಂದ ಯಾವತ್ತೂ ನಾನು ಸಂಗೀತ ಶಾಲೆಯತ್ತ ಸುಳಿಯಲಿಲ್ಲ.

ನಿಜವಾಗಿಯೂ ನನಗೆ ಸ ಮತ್ತು ಸಾ ದ ವ್ಯತ್ಯಾಸ ತಿಳಿಯುವುದಿಲ್ಲ. ಗ ವನ್ನು ಪ ದಂತೆ ಯಾಕೆ ಹಾಡಬಾರದು ಎಂದು ಗೊತ್ತಾಗುವುದಿಲ್ಲ. ಏರಿಸುವುದಂತೆ ಆಮೇಲೆ ಇಳಿಸುವುದಂತೆ. ಏನೋಪಾ, ನನ್ನ ಮಿದುಳಿಗೆ ತಲೆಬಿಸಿಯಾಗುತ್ತದೆ. ಯಾಕೆ ಹೀಗೇ ಹೇಳಬೇಕು ಅಂತ.

ಹೋಗಲಿ ನೃತ್ಯ ಕಲಿಸುವ ಅಂತ ಅದಕ್ಕೆ ಸೇರಿಸಿದರು. ಕುಚಿಪುಡಿಯೂ ಮುಗಿಯಿತು, ಭರತನಾಟ್ಯವೂ ಆಯಿತು. ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಸಪ್ಪೆ ಮುಖದಿಂದ ನಾನು ನಗುಮುಖದಿಂದ ಮನೆಗೆ ತೆರಳಿದೆವು.

ಥಾ ಥೈ, ಥಕ ಥೈ….. ಒಂದು ಕಾಲು ಹೀಗೆ, ಇನ್ನೊಂದು ಕಾಲು ಹಾಗೆ. ಸೊಂಟ ಈ ಕಡೆ ಸ್ವಲ್ಪ ವಾರೆ, ತಲೆ ಆ ಕಡೆ ವಾರೆ. ಎರಡು ಹೆಜ್ಜೆ ಬಲಗಾಲಿಂದಕ್ಕೆ, ಒಂದು ಹೆಜ್ಜೆ ಎಡಗಾಲಿಂದು. ಒಂದು ಬೆರಳನ್ನು ಮಡಚಿ ಇನ್ನೊಂದಕ್ಕೆ ತಾಗಿಸಿದರೆ ಅದೊಂದು ಮುದ್ರೆ………. ಉಫ್! ನನಗೆ ಇವೆಲ್ಲಾ ಯಾಕೆ ಏನೆಂದು ಯಾವಾಗಲೂ ತಿಳಿಯಲೇ ಇಲ್ಲ. ದೊಡ್ಡವಳಾದ ಮೇಲೆನೆ ಈ ತಾಳ, ಲಯ, ಅಭಿನಯ ಅಂತೆಲ್ಲಾ ಗೊತ್ತಾಗಿದ್ದು. ಆಗ ಒಂದೇ ಹುಬ್ಬನ್ನು ಕುಣಿಸುವುದಿರಲಿ, ತಲೆಯನ್ನು ಚೆನ್ನಪಟ್ಟಣದ ಸ್ಪ್ರಿಂಗ್ ಗೊಂಬೆಯಂತೆ ಕುಣಿಸುವುದೂ ನನ್ನ ಕೈಯಲ್ಲಿ ಆಗಲಿಲ್ಲ.

ನಾನು ಸಂಗೀತ ಸಭೆಗಳಿಗೆ ಹೋದಾಗಲೆಲ್ಲ ಅಕ್ಕ-ಪಕ್ಕದವರು ವಾಹ್, ವ್ಹಾ ಅಂದರೆ ಬೆಚ್ಚಿ ಬೀಳುತ್ತೇನೆ. ನನಗೆ ಅರ್ಥವಾಗದ್ದು ಇವರಿಗೆಲ್ಲ ಏಷ್ಟು ಸುಲಭವಾಗಿ ಅರ್ಥವಾಗುತ್ತೆ ಎಂದು ಪೆಚ್ಚು ನಗು ಸೂಸುತ್ತೇನೆ. ಟಿವಿಯಲ್ಲಿ ರಾತ್ರಿ ಊಟವಾದ ಮೇಲೆ ಅದೆಂಥೊ ಸಂಗೀತ, ನಾಟ್ಯ ಕಾರ್ಯಕ್ರಮಗಳು ಬರುತ್ತವೆ. ಅದನ್ನು ಅಪ್ಪ-ಅಮ್ಮ ಇಬ್ಬರೂ ಕೂತು ವೀಕ್ಷಿಸುತ್ತಿರುತ್ತಾರೆ. ಹೊಗಳುತ್ತ, ತೆಗಳುತ್ತ. ನಾನು ಅವರತ್ತಿರ ಏಷ್ಟೊ ಸಲ ಈ ಸಂಗೀತಕ್ಕೆ ವಾಹ್ ಹೇಗೆ ಹೇಳುವುದು ಎಂದು ತಿಳಿಯಲು ಪ್ರಯತ್ನಿಸಿದ್ದಿದೆ. ಆದರೆ ಅಮ್ಮ ಹೇಳುವ ಮಾತ್ರೆಗಳ ಲೆಕ್ಕಾಚಾರ ನನ್ನ ತಲೆಗೆ ಇಂದಿನವರೆಗೂ ಹೋಗಲಿಲ್ಲ.

ಈ ಮಾತ್ರೆ ಅಂದಕೂಡಲೇ ನೆನಪಾಗುವುದು ಹಳಗನ್ನಡ. ಸ್ಕೂಲಿನಿಂದ ಪ್ರಾರಂಭವಾದ ಮಾತ್ರೆಗಳ ಲೆಕ್ಕಾಚಾರ ಡಿಗ್ರಿಯವರೆಗೂ ನನ್ನ ಕಾಡಿಬಿಟ್ಟಿತು. ಡಿಗ್ರಿಯ ಕೊನೆಯ ವರ್ಷದಲ್ಲಿ ಐಚ್ಛಿಕ ಕನ್ನಡದಲ್ಲಿ ಹಳಗನ್ನಡದ ಒಂದು ಪೇಪರ್ರು ಇತ್ತು. ಅದಕ್ಕೆ ಕವಿರಾಜಮಾರ್ಗ ಕಲಿಯಬೇಕಿತ್ತು. ಮಾತ್ರೆಗಳನ್ನು ಲೆಕ್ಕ ಹಾಕಿ ಅವು ಯಾವ ಛಂಧಕ್ಕೆ ಸೇರಿದವು ಎಂದು ಹೇಳಬೇಕಿತ್ತು. ಜೊತೆಗೆ ಹಳಗನ್ನಡದ ವ್ಯಾಕರಣ ಸೂಕ್ತಿಗಳನ್ನು ಬೇರೆ ಬಾಯಿಪಾಠ ಮಾಡಿ ನಮೂದಿಸಬೇಕಿತ್ತು. ಅಗ ಯಾಕೆ ಹೊಸಗನ್ನಡ ಬದಲಾಗಿ ಹೋಗಿದೆ ಎಂದು ಕೊರಗುತ್ತಿದ್ದೆ. ಏಕಂದ್ರೆ ನನಗೆ ಹಳಗನ್ನಡ ಬಿಡಿಸಿ ಓದಲು ಬರುವುದಿಲ್ಲ, ಅರ್ಥವೂ ಆಗುವುದಿಲ್ಲ.

ಹೊಸಗನ್ನಡದ ಇನ್ನೊಂದು ಪೇಪರಿನಲ್ಲಿ ಎಲ್ಲ ಕವಿಗಳ ಬಗ್ಗೆ ಇತ್ತು. ನೆನಪಿದ್ದಂತೆ ಬೆಂದ್ರೆಯವರ ಸಖಿಗೀತವೂ ಇತ್ತು. ಅಬ್ಬಾ! ಅದೂ ನನಗೆ ಯಾವತ್ತೂ ಜೀರ್ಣವಾಗಲಿಲ್ಲ. ಓದುವಾಗ ಕಷ್ಟವಾಗುತ್ತಿದ್ದ ಸಾಲುಗಳನ್ನು ಲೆಕ್ಚರ್ ಹೇಗೆ ಹೊಸ ಅರ್ಥ ಅದಕ್ಕೆ ಹೊಂದಿಸುತ್ತಾರೆ ಅನ್ನುವುದೇ ಅಚ್ಚರಿಯಾಗಿತ್ತು. ಬೇಂದ್ರೆ ಕ್ಲಾಸಿನಲ್ಲಿ ಇಷ್ಟವಾಗುತ್ತಿದ್ದದೆಂದರೆ ನಮ್ಮ ಲೆಕ್ಚರ್ ಅದನ್ನು ಅವರ ಜೀವನ ಕತೆಯೊಂದಿಗೆ ತಾಳೆಹಾಕುತಿದ್ದದ್ದು.

ಅಂತಾಕ್ಷರಿ ಸಾಧಾರಣವಾಗಿ ಎಲ್ಲರಿಗೂ ಇಷ್ಟದ ಆಟ. ನಾನು ಮಾತ್ರ ಇದರಿಂದ ದೂರ ಸರಿಯುತ್ತೇನೆ. ಹಾಡು ಗೊತ್ತಿಲ್ಲ ಅನ್ನುವುದಕ್ಕಿಂತ ಹಾಡಬೇಕಲ್ಲ ಅನ್ನುವುದಕ್ಕೆ. ಇನ್ನೂ ನೆನಪಿದೆ ನನಗೆ. ನವೋದಯದಲ್ಲಿ ಸಂಗೀತವೂ ಪಠ್ಯದ ವಿಷಯವಾಗಿತ್ತು. ಅದರಲ್ಲಿ ಅರ್ಧ ಅಂಕಗಳಿಗೆ ಪ್ರಾಕ್ಟಿಕಲ್ ಬೇರೆ ಇರುತ್ತಿತ್ತು. ಆ ಒಂದು ಸಲ ಪ್ರಾಕ್ಟಿಕಲ್ ಪರೀಕ್ಷೆಗೆ ಕ್ಲಾಸಿನ ಎಲ್ಲರೆದುರು ನಿಂತು ಹಾಡಬೇಕಾಗಿತ್ತು. ನಾನು ಎದ್ದು ನಿಂತ ಕೂಡಲೇ ಸುಮ್ಮನಿದ್ದ ಕ್ಲಾಸ್ ನಾನು ಹಾಡಲು ಶುರುವಿಟ್ಟುಕೊಂಡ ಕೂಡಲೇ ಗೋವಿಂದವಾಯಿತು. ನಮ್ಮ ಮ್ಯೂಸಿಕ್ ಟೀಚರ್ರಿಗೆ ಎಲ್ಲಿಲ್ಲದ ಕೋಪ ಬಂತು. ಅವರು ಸೈಲೆನ್ಸ್ ಅಂದರೆ ಕೇಳುವರಾರು. ನಾನು ರಾಗ(!) ಪ್ರಾರಂಭಿಸುವುದಕ್ಕೂ ಒಬ್ಬರಾದ ಮೇಲೆ ಒಬ್ಬರು ಹ್ಹಿ ಹ್ಹಿ ಎಂದು ನಗುವುದಕ್ಕೂ ಸರಿ ಹೋಯಿತು. ಸರ್ರು ಇನ್ನೊಮ್ಮೆ ಯಾರಾರು ನಕ್ಕರೆ ಕ್ಲಾಸಿನಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿದರು. ಒಬ್ಬರಾದ ಮೇಲೆ ಒಬ್ಬರು ಹೊರಗೆ ಹೋಗಲಾರಂಭಿಸಿದರು. ಕೊನೆಗೆ ಸೋತು ನಾನು “ಸಿರಿಯಸ್” ಇಲ್ಲದ್ದಕ್ಕೆ ನನ್ನೇ ಹೊರಹಾಕಿದರು. ನಾನೇನು ಮಾಡುವುದು? ನನಗೆ ಹಾಡನ್ನು ಎಲ್ಲಿ ಏರಿಸಿ ಎಲ್ಲಿ ಇಳಿಸಬೇಕೆಂದು ತಿಳಿಯುವುದಿಲ್ಲ. ಎಲ್ಲ ಹಾಡುಗಳು ಒಂದೇ ಲಯ, ತಾಳದಲ್ಲಿರುತ್ತವೆ. ಹಾಗಂತ ಇದರ ಬಗ್ಗೆ ನನಗೆ ನಾಚಿಕೆಯಂತೂ ಖಂಡಿತ ಇಲ್ಲ.

ಬ್ಲಾಗುಗಳಲ್ಲಿ ಉಳಿದವರು ಘಜಲ್ ಕೋಟ್ ಮಾಡಿ ಏನೇನೊ ಬರೆಯುವಾಗ ನಾನೂ ನನಗೂ ಆ ರಸಾನುಭವ ಆಗಲಿ ಎಂದು ಅಪೇಕ್ಷಿಸಿ ಸಿಡಿ ಹಾಕಿಕೊಳ್ಳುತ್ತೇನೆ. ಅದರ ಜೊತೆ ಈ ಸಲ ಪೂರ್ತಿಯಾಗಿ ಘಜಲ್ ಕೇಳುತ್ತೇನೆ ಎಂದು ಪ್ರಮಾಣ ಮಾಡಿಕೊಳ್ಳುತ್ತೇನೆ. ಒಂದತ್ತು ನಿಮಿಷ. ಗುಲ್ಜಾರ್ರು, ಜಗಜೀತು ಎಲ್ಲರೂ ಮಿಕ್ಸ್ ಆಗಿ ಭೂತಾಕಾರವಾಗಿ ಹೆದರಿ ಸಿಡಿ ಇಜೆಕ್ಟ್ ಮಾಡುತ್ತೇನೆ.

ಹಾಗಂತ ಅಪರೂಪಕ್ಕೆ ಕೇಳುತ್ತೇನೆ. ಅದೂ ಒಂಧರ್ಧ ಗಂಟೆ ಫುಲ್ ವಾಲ್ಯೂಮ್ ಜೊತೆ. ಸೊಂಟದ ವಿಸ್ಯ ಮಸ್ತ ಆಗಿ ಕೇಳಿದ ಹಾಗೆ ಒಂದೊಂದೆ ಬಚ್ಚಿಟ್ಟ ಮಾತು ನೂ ಕೇಳುತ್ತೇನೆ. ಒಂದು ಸ್ಪೀಕರಿನಿಂದ ಇನ್ನೊಂದು ಸ್ಪೀಕರಿಗೆ ಹೋಗುವುದು, ಒಂದು ಸಲ ಲೆಫ್ಟ್, ಇನ್ನೊಂದು ಸಲ ರೈಟ್, ಇದೆಲ್ಲ ಚೆನ್ನಗಾಗುತ್ತೆ. ಆದರೆ ರಾಕ್,ಸ್ಟಾರ್ರು, ಸಿಲ್ವರ್ರು ಇದೆಲ್ಲ ಆಗುವುದಿಲ್ಲ. ತಲೆ ನೋಯುತ್ತೆ.

ಸಂತೆಯಲ್ಲಿನ ಗದ್ದಲಕ್ಕೂ ಬೇಜಾರಾಗದ ನನಗೆ ಈ ಮೈಕು, ಸಿಡಿ, ಟಿವಿ ಕೇಳಿದ್ರೆ ಸ್ವಲ್ಪ ಹೊತ್ತಿಗೆ ಓಡಿ ಹೋಗೊಣ ಅನ್ನಿಸುತ್ತೆ. ಯಾಕೆ ಅಂತ ನನ್ನಾಣೆಗೂ ತಿಳಿದಿಲ್ಲ.

——————————

(*ಹೆಚ್ಚಿನ ಮೊಗಲ್ ರಾಜರುಗಳು ಕಲಾಪ್ರಿಯರಾಗಿದ್ದರೂ, ಈ ಔರಂಗಜೇಬನಿಗೆ ಮಾತ್ರ ಸಂಗೀತ-ನೃತ್ಯದ ಗಂಧ ಗಾಳಿಯೂ ಗೊತ್ತಿರಲಿಲ್ಲವಂತೆ. ಆತನ ಆಸ್ಥಾನದಲ್ಲಿ ಇವೆರಡನ್ನು ನಿಷೇಧಿಸಲಾಗಿತ್ತಂತೆ)

ನಿಮ್ಮೊಂದಿಗೆ

ಮಾರ್ಚ್ 4, 2009

ಹೌದು, ನಾನು ಬ್ಲಾಗ್ ಪ್ರಾರಂಭಿಸಿ ಮೊನ್ನೆಗೆ ಒಂದು ವರ್ಷ ತುಂಬಿತು. ಹಾಗಂತ ನಂಗೆ ಏನೂ ಖುಷಿ ಆಗ್ತಾ ಇಲ್ಲ. ಬದಲಿಗೆ ಬೇಜಾರಾಗ್ತಾ ಇದೆ. ಒಂದು ವರ್ಷ! ಅಬ್ಬಾ, ನಾನು ಮನೇಲಿ ಕೂತು ಒಂದು ವರ್ಷ ಆಗೊಯ್ತಾ? ಏನೂ ಮಾಡಲಿಲ್ಲ.

ಆವತ್ತು ಸಹ ಕಂಪ್ಯೂಟರ್ ಮುಂದೆ ಬೇಜಾರಾಗಿ ಕೂತಿದ್ದೆ. ನಂಗೆ ಆಫೀಸಿಗೆ ಹೋಗಿ ಹೋಗಿ ಬೊರ್ ಬಂದಿತ್ತು. ಇವತ್ತು ಮನೇಲಿ ಇದ್ದು ಇದ್ದು ಬೇಜಾರು ಬಂದಿದೆ. ಆಗಲೂ ನಂಗೆ ಲೈಫಲ್ಲಿ ಚೇಂಜ್ ಬೇಕಿತ್ತು. ಈಗ್ಲೂ ಚೇಂಜ್ ಬೇಕು. ಮತ್ತೆ ಕೆಲಸಕ್ಕೆ ಹೋಗಬೇಕು. ಆದರೆ ನಾನು ಕೆಲಸಕ್ಕೆ ಹೋದ್ರೆ, ವಾಪಸ್ಸು ಮನೆಗೆ ಬಂದಾಗ ಯಾರೂ ಟೀ ಮಾಡಿ ಕೊಡಲ್ಲ, ಊಟ ರೆಡಿ ಮಾಡಿ ಟೇಬಲಲ್ಲಿ ಸಿಂಗರಿಸಿ ಇಡಲ್ಲ. ಮತ್ತೆ ನಾನೇ ಮಾಡ್ಕೋಬೇಕು. ನಿಜ, ನಾನು ’ಗಂಡ’ ನಲ್ಲವಲ್ಲ!
————
ನೀಲಾಂಜಲ ನನ್ನ ಹೊಸ ಐಡೆಂಟಿಟಿ. ಇದು ನಂಗೆ ಬೇಕಾಗಿತ್ತು. ಆಗ ನಂಗೆ ಮಾತಾಡ್ತಾ ಇರಬೇಕಾದರೆ ಶಬ್ದಗಳೇ ಮರೆತು ಹೋಗ್ತಾ ಇತ್ತು. ನಂಗೆ ಏನು ಅನ್ನಿಸ್ತಿದೆ ಅನ್ನೊದನ್ನು ಕ್ರೂಡೀಕರಿಸಿ ಹೇಳೊಕೆ ಕಷ್ಟ ಆಗ್ತಾ ಇತ್ತು. ಇಲ್ಲಿ ಬರೀತಾ ಬರೀತಾ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅಭಿಪ್ರಾಯ ಮಂಡನೆ ನಿಧಾನವಾಗಿ ಕರಗತವಾಗ್ತಿದೆ.
————-
ಮೊದಲು ಬರಿಯೋಕೆ ಪೆನ್ನು ಎತ್ತಿದ್ರೆ ಯಾತನೆಯಾಗ್ತಾ ಇತ್ತು. ನಾನು ಮೊದಲು ಬರೀತಾ ಇದ್ದ ಪತ್ರಗಳು ನೆನಪಿಗೆ ಬಂದು ಬಿಡ್ತಿತ್ತು. ಒಂದೂ ಅಕ್ಷರ ಮೂಡ್ತಿರಲಿಲ್ಲ. ಈಗ ಹಳೆಯ ನೆನಪುಗಳು ಖಾಲಿಯಾಗಿದೆ. ಆರಾಂ ಆಗಿ ಪೆನ್ನು ಓಡುತ್ತೆ. ಒಂದು ಮಾತನ್ನು ಹೇಗೆ ಹೇಳಿದರೆ ಜಾಸ್ತಿ ಇಫೆಕ್ಟ್ ಆಗಬಹುದು ಎಂದೆಲ್ಲಾ ಮನಸ್ಸು ತರ್ಕಿಸುತ್ತದೆ. ತಡೆದು ಹಿಡಿದಿದ್ದ ಮಾತೆಲ್ಲ ಸರಾಗವಾಗಿ ಹರಿಯುತ್ತಿದೆ.
————-
ನಾನು ಮೊದಲು ೧,೦೦೦ ಕ್ಲಿಕಗಳಾದಾಗ ಸೆಲೆಬ್ರೇಟ್ ಮಾಡಬೇಕು ಅಂದು ಕೊಂಡಿದ್ದೆ. ಅದು ಯಾವಾಗ ಆಯ್ತೋ, ಆಮೇಲೆ ೫,೦೦೦ ಅಂದು ಕೊಂಡೆ. ಅದು ಸಹ ಗಮನಕ್ಕೆ ಬರಲಿಲ್ಲ. ಕೊನೆಗೆ ಹೋಗ್ಲಿ ೧೦,೦೦೦ ಅಂದುಕೊಂಡೆ. ಬ್ಲಾಗಿಗೆ ಒಂದು ವರ್ಷ ತುಂಬಿದ ದಿನದಂದು ಆಗಲಿ ಅಂದು ಕೊಂಡ್ರೆ ಒಂದು ವಾರ ಮೊದಲೇ ಆಗಿ ಹೋಯ್ತು. 😦

ಹಾಗೇನೆ ಬ್ಲಾಗ್ ಆರಂಭಿಸಿದ ಪ್ರಾರಂಭದಲ್ಲಿ ನನ್ನ ಬ್ಲಾಗೂ ಕೆಂಡಸಂಪಿಗೇಲಿ ಬರಲಿ ಅಂತಾ ಆಶಿಸ್ತಾ ಇದ್ದೆ. ಬರ್ತಾನೆ ಇರಲಿಲ್ಲ. ಕೊನೆಗೊಂದು ದಿನ ಅಲ್ಲಿ ಬಂದು ಬಿಡ್ತು. ಆಹಾ, ಏಷ್ಟು ಖುಷಿ ಆಯ್ತು ಗೊತ್ತಾ, ಆಮೇಲೆ ಅವಧಿ ಮೇಲೆ ಸಿಟ್ಟು ತಿರುಗಿತು. ನನ್ನ ಬ್ಲಾಗು ಇವರ ಕಣ್ಣಿಗೆ ಬೀಳೊದೇ ಇಲ್ವಲ್ಲಾ ಅಂತ. ಕಡೆಗೊಂದು ದಿನ ಅಲ್ಲೂ ಬಂತು:)

ಆಗೆಲ್ಲ ನಾನು ನನ್ನ ಬ್ಲಾಗ್ ಹೆಸರು ವರ್ಡ್ ಪ್ರೆಸ್ಸಿನ ಟಾಪ್ ಲಿಸ್ಟನಲ್ಲಿ ಬಂದರೆ ವಿಪರೀತ ಖುಷಿ ಪಡ್ತಾ ಇದ್ದೆ. ಅದರ ಸ್ಕ್ರೀನ್ ಶಾಟ್ ತೆಗೆದು ಸೆವ್ ಮಾಡಿ ಇಟ್ಟು ಕೊಳ್ತಾ ಇದ್ದೆ. ದಿನ ಕಳೆದಂತೆ ಎಲ್ಲವೂ ರೂಢಿ ಆಗ್ತಾ ಬಂತು. ಕನ್ನಡ ಪ್ರಭಾದಲ್ಲಿ ಬಂದಾಗ ಒಂಚೂರು ಖುಷಿನೇ ಆಗಲಿಲ್ಲ. ಓಹೊ ಅನ್ನಿಸ್ತು. ಕ್ಲಿಕಿಂಗ್ ಜಾಸ್ತಿ ಆಗಿದ್ದಕ್ಕೆ ಖುಷಿ ಆಯ್ತು.

ಪ್ರಾರಂಭದಲ್ಲಿ ದಿನಕ್ಕೆ ಹನ್ನೆರಡು ಸಲ ನನ್ನ ಬ್ಲಾಗೇ ನಾನು ತೆಗೆದು ನೋಡ್ತಿದ್ದೆ. ನನ್ನ ಕ್ಲಿಕ್ ನಿಂದಾದರೂ ಟಾಪ್ ಲಿಸ್ಟನಲ್ಲಿ ಬರಲಿ ಅಂತ;) ಈಗ ಲೊಗಿನ್ ಆಗೇ ಬ್ಲಾಗ್ ನೋಡುವುದು. ಟಾಪ್ ಲಿಸ್ಟನಲ್ಲಿ ಆಗಾಗ ಬಂದಾಗ ನಿಜಕ್ಕೂ ಜನ ಓದುತ್ತಿದ್ದಾರೆ ಅಂತ ಸಮಾಧಾನವಾಗುತ್ತೆ.
——————
ನನಗೆ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಒಂದು ಜೊತೆ ಬೇಕಿತ್ತು. ಕಾಲೇಜಿನ ದಿನಗಳಲ್ಲಿ ಪ್ರಜ್ಞಾ ಇದ್ದಳು, ಕೆಲ ಒಳ್ಳೆಯ ಉಪನ್ಯಾಸಕರಿದ್ದರು. ಇನ್ನೂ ಕೆಲವು ವಾದಗಳಿಗೆ ಮನೆಗೆ/ಪ್ರೆಸ್ಸಿಗೆ ಬರುತ್ತಿದ್ದ ಅನೇಕ ಪರಿಚಯದವರಿದ್ದರು. ಎಲ್ಲಕ್ಕೂ ಜಾಸ್ತಿ ಅಮ್ಮನಿದ್ದಳಲ್ಲ. ಬೆಂಗಳೂರಿಗೆ ಬಂದಾಗಿನಿಂದ ಆಪ್ತ ವಲಯ ಕಡಿಮೆಯಾಗತೊಡಗಿತು ಅಥವಾ ನಾನು “ಪ್ರೊಫೆಷನಲ್” ಆಗಲು ಹೊರಟಿದ್ದೆ. ಮಾತು-ಕತೆ ಕೇವಲ ಕೆಲಸಕ್ಕೆ ಸೀಮಿತವಾಯಿತು. ಹಾಗೇಯೇ ಪರಿಚಯವಾದ ನನ್ನ ಹುಡುಗನಿಗೂ ಈ ಚರ್ಚೆಗಳಲ್ಲಿ ಅಂತಹ ಆಸಕ್ತಿಗಳಿಲ್ಲ. ಅವನಿಗೆ ತನ್ನ ಕೆಲಸ ಮತ್ತು ಅವನ ಗುರಿ ಬಿಟ್ರೆ ಬೇರೆ ವಿಷಯಗಳೆಡೆ ಗಮನವಿಲ್ಲ. ಆದ್ದರಿಂದ ಮಾತೆಲ್ಲ ಹೊಸ ಟೆಕ್ನಿಕ್, ಎನಿಮೇಷನ್ ಮೂವಿ, ವೆಬ್ ಸೈಟ್, … ಇವುಗಳ ಸುತ್ತ ಮಾತ್ರ ಸುತ್ತುತಿತ್ತು. ಹೊಸದು ಓದಿದರೂ ಹೇಳಿಕೊಳ್ಳಕೆ ಜನ ಬೇಕಲ್ವಾ? ತಲೆಯಲ್ಲಿ ಮೂಡುತ್ತಿರುವ ವಿಚಾರಗಳನ್ನು ಚರ್ಚಿಸಲು ಒಂದು ಜೊತೆ ಬೇಕಲ್ವಾ? ನನ್ನ ಸುತ್ತ ಮುತ್ತಲಿನ ಜನರಿಗೆಲ್ಲ ಅವರವರದ್ದೇ ಚಿಂತೆ ಜಾಸ್ತಿ. ಹಾಗಾಗಿ ಮನಸ್ಸು ಮಾತಾಡುವುದನ್ನೇ ನಿಲ್ಲಿಸ್ತಾ ಬಂತು.
—————–
ಮೊದಲು ನಾನು ಫ್ಲಿಕ್ಕರ್ ನಲ್ಲೇ ಜಾಸ್ತಿ ಕಾಲ ಕಳೆತಿದ್ದೆ. ಅಲ್ಲಿನ ಅರ್ಚನಾಳ ಫೋಟೋಗಳು ನಂಗೆ ತುಂಬಾ ಇಷ್ಟ. ಅವಳ ಬ್ಲಾಗಿನಿಂದಲೇ ನನಗೆ ಮೊತ್ತ ಮೊದಲ ಬಾರಿಗೆ ಬ್ಲಾಗ್ ಲೋಕದ ಸಾಮರ್ಥ್ಯ ಅರ್ಥವಾಗಿದ್ದು. ಅದಕ್ಕೂ ಮೊದಲು ರೆಡಿಫ್ ನ ಲಾಗಿನ್ ಪೇಜಿನಲ್ಲಿದ್ದ ಅನೇಕ ಬ್ಲಾಗ್ ಗಳನ್ನು ಕಣ್ಣಾಯಿಸಿದ್ದೆ. ಅರ್ಚನಾಳಿಂದ ಎಷ್ಟೆಲ್ಲಾ ಒಳ್ಳೆಯ ಕ್ರಿಯೇಟಿವ್ ಬ್ಲಾಗ್ ಗಳ ಪರಿಚಯ ನನಗಾಯ್ತು. ಆಮೇಲೆ ನೆನಪಿದ್ದಂತೆ ಪರಿಚಯವಾಗಿದ್ದು ಅವಧಿ. ಅದರಲ್ಲೂ ಅದರಲ್ಲಿ ಬರುತ್ತಿದ್ದ ಭಾಮಿನಿ ಷಟ್ಪದಿ. ದಿನಾ ಅವಧಿ ತೆಗೆದು ಇವತ್ತು ಚೇತನಾಳ ಹೊಸ ಬರಹ ಬಂದಿದೆಯಾ ಅಂತ ನೋಡುತ್ತಿದ್ದೆ. ಬ್ಲಾಗ್ ಲೋಕ ಪರಿಚಯವಾದ ಮೇಲೆನೇ ಅವರು ದಿನಾ ಬರೆಯುವುದಿಲ್ಲ ಅಂತ ಗೊತ್ತಾಗಿದ್ದು. ಹಾಗೆನೆ ಅಬ್ದುಲ್ ರಷೀದರ ಮೈಸೂರು ಪೋಸ್ಟ್. ಈ ಎರಡು ದಿನಾ ಆಫೀಸಿಗೆ ಬಂದ ಕೂಡಲೇ ಫಸ್ಟ್ ಓಪನ್ ಮಾಡೊದಾಗಿತ್ತು. ಕೆಂಡಸಂಪಿಗೆ ಬರೊ ಹೊತ್ತಿಗೆ ಬ್ಲಾಗ್ ಬಗ್ಗೆ ನನ್ನ ಇಂಟರೆಸ್ಟ್ ಕಡಿಮೆಯಾಗಿತ್ತು.
————-
ನಮ್ಮನೆಗೆ ನೆಟ್ ತಗೊಂಡಾದ ಹೊತ್ತಿಗೆ ಸರಿಯಾಗಿ ಹೊಸ ಕ್ಯಾಮೆರಾವು ಬಂದಿತ್ತು. ಹೀಗೆ ಮತ್ತೆ ನೆಟ್ನಲ್ಲಿ ಅಪ್ ಲೋಡ್ ಮಾಡೊ ಹುಚ್ಚು ಹತ್ತಿತು. ಕೊನೆಗೊಂದು ದಿನ ನಂದು ಒಂದು ಬ್ಲಾಗ್ ಅಂತ ಬೇಕು ಅಂತಾ ನೀಲಾಂಜಲ ತೆಗೆದೆ. ಹೆಸರು ಇಡಕೆ ಏಷ್ಟು ಕಷ್ಟ ಆಗಿತ್ತು ಗೊತ್ತಾ? ನಾನು ಏನು ಹಾಕಿದರೂ ಮೊದಲೇ ಇದೆ ಅಂತ ಬರ್ತಾ ಇತ್ತು. ಆಗ ನನಗೆ ನೀಲಾಂಜನ ಅಂತ ಫೇಮಸ್ ಬ್ಲಾಗಿದೆ ಅಂತ  ಗೊತ್ತಿದ್ರೆ ಈ ಹೆಸರೇ ಇಡ್ತಾ ಇರಲಿಲ್ಲ. ಈ ಹೆಸರಿಂದ ಎಲ್ಲರಿಗೂ ಏಷ್ಟೆಲ್ಲಾ ಕನ್ ಫ್ಯೂಸ್ ಆಯ್ತು. ಈಗ್ಲೂ ಮಾಡ್ಕೊಳ್ಳೊರಿದ್ದಾರೆ. ಲ ಮತ್ತು ನ ಗೆ ವ್ಯತ್ಯಾಸ ಇಷ್ಟು ಕಡಿಮೆ ಇದೆ ಅಂತ ಗೊತ್ತಾಗಿದ್ದೆ ಈಗ ನಂಗೆ 😀
————
ಇಲ್ಲಿ ಅಂದರೆ ಮುಂಬಯಿಗೆ ಬಂದ ಮೇಲೆ ನಾನು ಸೀರಿಯಸ್ ಆಗಿ ಬ್ಲಾಗಿಸೊಕೆ ಪ್ರಾರಂಭಿಸಿದ್ದು. ಇಡೀ ದಿನ ಮನೆಲಿ ಒಬ್ಬಳೇ ಇರೊದ್ರಿಂದ ಮಾತಾಡೊಕೆ ಯಾರಾದ್ರೂ ಬೇಕಾಯಿತಲ್ವ. ನಾನು ಟಿವಿ ನೋಡೊಲ್ಲ. ನೋಡೊಕೆ ಕೂತ್ರೆ ಅದರ ಮುಂದಿನಿಂದ ಏಳೊದಿಲ್ಲ. ದಿನಕ್ಕೆ ೩-೪ ಸಿನೆಮಾ ಆರಾಮಾಗಿ ನೋಡಬಲ್ಲೆ. ಸೀರಿಯಲ್ ಯಾವುದು ಬರುತ್ತೆ ಅಂತ ಮಾತ್ರ ಗೊತ್ತಿರೊಲ್ಲ.  ಬ.ಡೇಗೆ ನನ್ನ ಹುಡುಗನಿಂದ ಆನ್ ಲಿಮಿಟೆಡ್ ನೆಟ್ ಪ್ರಸೆಂಟ್ ಸಿಕ್ಕಿದ ಮೇಲಾಗಿನಿಂದ ನನ್ನ ಪ್ರತಿ ದಿನ ನೆಟ್ಟಿನಲ್ಲೇ ಮುಳುಗಿ ಹೋಗಿರುತ್ತೆ. ತರಾವಾರಿ ಜನರು, ವಿವಿಧ ವಿಚಾರಗಳು, ಹೊಸ ಡಿಸೈನ್ ಗಳು, ಐಡಿಯಾಗಳು……… ಹೀಗೆ ರಾತ್ರಿಯಾಗಿಬಿಡುತ್ತೆ.
———–
ಈ ಒಂದು ವರ್ಷದಲ್ಲಿ ಅನೇಕ ಹೊಸ ಜನರ ಪರಿಚಯ ನನಗಾಗಿದೆ. ನನಗೆ ನೆಟ್ ನಿಂದ ಯಾವುದೇ ಇನ್ ಕಂ ಬರದೇ ಇದ್ದರೂ ಅದೂ ನನ್ನ ಒಂಟಿತನವನ್ನು ಹೊಗಲಾಡಿಸಿದೆ. ನನ್ನ ಭಾವನೆಗಳನ್ನು ಕೇಳಿಕೊಳ್ಳಲು ಒಬ್ಬ ಅಸದೃಶ್ಯ ಓದುಗ ನನಗೆ ದೊರಕಿದ್ದಾನೆ. ಕೆಲವೊಬ್ಬರು ನಿಶಬ್ಧವಾಗಿ ನನ್ನ ಮಾತು ಕೇಳಿಸಿಕೊಂಡರೆ ಇನ್ನುಳಿದವರು ಸಶಬ್ಧವಾಗಿ. ಎಲ್ಲರ ಒಳಗೆ ಈ ಬರಹಗಳು ಮೂಡಿಸಿದ ಸ್ವಲ್ಪ ಸ್ವಲ್ಪ ಸಂವೇದನೆಗಳು ಸೇರಿ ನನ್ನ ಕಲ್ಪನೆಯ ಸಹೃದಯನ ನಿರ್ಮಾಣವಾಗಿದೆ. ಹೀಗೆ ನನಗೊಂದು ಆತ್ಮೀಯನನ್ನು ನೀವೆಲ್ಲ ಸೇರಿ ಒದಗಿಸಿಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು*.

ಪ್ರೀತಿಯಿಂದ,
ನೀಲಾಂಜಲ
ಫೆಬ್ರವರಿ ೨೮, ೨೦೦೯

*ಜೊತೆಗೆ ಈ ಬ್ಲಾಗಿನ ಪ್ರಾಯೋಜತ್ವ(ಇಂಟರ್ನೆಟ್ ಬಿಲ್) ಹೊದ್ದುಕೊಂಡಿರುವ ನನ್ನ ಹುಡುಗನಿಗೂ ಧನ್ಯವಾದಗಳು 😉

ನಲ್ಮೆಯ ಓದುಗ,

ಜನವರಿ 1, 2009

02

ನಲ್ಮೆಯ ಓದುಗ,

ನಿನಗೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು
ಹೊಸ ವರುಷ ಹೊಸ ಕನಸುಗಳನ್ನು ತರಲಿ
ಹಿಂದೆ ಕಂಡ ಕನಸುಗಳೆಲ್ಲ ನನಸಾಗಲಿ
ಸೊಗಸಾದ ದಿನಗಳು ನಿನ್ನದಾಗಲಿ
ಎಂಬ ಹಾರೈಕೆಯೊಂದಿಗೆ,

ಪ್ರೀತಿಯಿಂದ
ನೀಲಾಂಜಲಾ
01 01 2009

ENJOYY ಮಗಾ 😉

ಮಿರರ್ ಚಾ ಮತ್ತು ಬೂಸ್ಟು

ನವೆಂಬರ್ 19, 2008

ಇವತ್ತಿನ ಸ್ಪೇಷಲ್ಲು ಮುಂಬೈ ಮಿರರ್ ಚಾ ಮತ್ತು ಬೂಸ್ಟು !! ಹಾಗಾಂದ್ರೆ ಏನು ಅಂತೀರಾ? ಹ್ಹ ಹ್ಹ ಹ್ಹ. ಏನಾಯ್ತು ಅಂದ್ರೆ ಇವತ್ತು ಬೆಳಿಗ್ಗೆ ಚಾ ಕುದಿತಾ ಇರುವಾಗಲೇ ಅಡಿಗೆ ಗ್ಯಾಸ್ ಖಾಲಿ ಆಗಿ ಹೋಯ್ತುಬೇರೆ ಉಪಾಯ ಇಲ್ಲದೇ ಇರೋದರಿಂದ ನಾನು ಮತ್ತು ಸುನೀತಾ (ಭಾಯಿ) ಪ್ಪೆ ಮುಖದಿಂದ ಅದನ್ನೇ ಕುಡಿದ್ವಿ. ‘ ಭಾರತ್ಗೆ ಫೋನ್ ಮಾಡಿದ್ರೆ ಸಂಜೆ/ ನಾಳೆ ಬೆಳಿಗ್ಗೆ ಕಳಿಸ್ತೇನೆ ಎಂದು ನಾನು ಸ್ವಲ್ಪ ಅರ್ಜೆನ್ಟ ಅನ್ನೋದರ ಒಳಗೆ ಭೂಪ ಕಟ್ ಮಾಡಿ ಬಿಟ್ಟ. ಮನೆಗೆ ಮನೆಓನರ್ ಪೈಪ್ ಲೈನ್ ಗ್ಯಾಸ ಕನೆಕ್ಷನ್ ತಗೊಂಡಿಲ್ಲಜೊತೆಗೆ ಆಗ ಇಲ್ಲಿ ಹೊಸ ಸಿಲೆನ್ಡರ್ ಗ್ಯಾಸ್‌ಗೆ ಅಪ್ಲೈ ಮಾಡಿದಾಗ ಎರಡು ಸಿಲೆನ್ಡರ್ ಸಹ ಕೊಡ್ತಾ ಇರಲಿಲ್ಲ. 😦

ಮಧ್ಯಾಹ್ನ ಆಗೋ ಹೊತ್ತಿಗೆ ನನ್ನ ನಾಲಿಗೆ ಚಾ ಕುಡಿಲೇ ಬೇಕು ಅಂತ ಶುರು ಮಾಡಿತುಅದಕ್ಕೆ ಯಾವತ್ತೂ ಇಲ್ದೇ ಇರೋ ಅಷ್ಟು ಆಸೆ ಇವತ್ತಾಗಿತ್ತು. ಹೊರಗೆ ಉರಿಬಿಸಿಲಲ್ಲಿ ಹೋಗಿ ಪಾನಕದ ಟೇಸ್ಟಿನ ಚಾ ಕುಡಿಯೊಕೆ ಮನಸ್ಸಾಗಲಿಲ್ಲ. ಕರೆಂಟ್ ಬೇರೆ ಇರಲಿಲ್ಲ. ಇಲ್ಲಿ ರ್ ತಾಸು ಲೋಡ್ ಶೆಡ್ಡಿನ್ಗುಹಾಗಾಗಿ ಮಾಡಕೆ ಬೇರೆ ಏನು ಕೆಲಸ ಕಾಣ್ತಾ ಇರಲಿಲ್ಲ. ಅದಕ್ಕೆ ನಾನ್ಯಾಕೆ ಲೆ ಉರಿಸಬಾರದು ಅನ್ನೋ ಹೊಸ ಐಡಿಯಾ ತಲೆಗೆ ಹೊಳಿತು.

ಸೀದಾ ಎದ್ದು ಅಡಿಗೆ ಮನೆಗೆ ಹೋದೆ. ದೀಪಾವಳಿ ಆದ ಮೇಲೆ ತೆಗೆದಿಟ್ಟಿದ್ದ ಹಣತೆಗಳನ್ನೆಲ್ಲ ಹೊರಗೆ ತೆಗೆದೆ. ಕಿಟಕಿ ಹೊರಗಡೆ ಇಟ್ಟಿದ್ದ ಟೈಲ್ಸ್ ಪೀಸ್ ಎತ್ತುಕೊನ್ಡು ನೆಲದ ಮೇಲೆ ಇಟ್ಟೆ. ಅದರ ಮೇಲೆ ನಾಲ್ಕುನಾಲ್ಕು ಹಣತೆಗಳನ್ನ ಬೋರಲು ಮಲಗಿಸಿ ಸುಮಾರು ಮೂರು ಇಂಚು ಎತ್ತರದ ಮೂರು ಗುಪ್ಪೆ ಮಾಡಿದೆ. ಅದರ ಮೇಲೆ ಸಕ್ಕರೆ, ಚಾ ಪುಡಿ ಬೆರೆಸಿದ ಹಾಲು ಹಾಕಿದ ಚಿಕ್ಕ ಪಾತ್ರೆ ಇಟ್ಟೆ. ನನ್ನ ಮಿನಿ ಲೆ ತಯಾರಾಗಿತ್ತು. ಇನ್ನೂ ಲೆ ಉರಿಸಲು ರಟ್ಟಾಗಲಿ, ಮರದ ಚೂರಾಗಲಿ ಇಲ್ಲದ್ದರಿಂದ ಮುಂಬಯಿ ಮಿರರ್ರೇ ಗತಿ ಆಯಿತು. ಅದಕ್ಕೆ ಬೇರೆ ಸೀಮೆ ಎಣ್ಣೆ ವಾಸನೆ ಇದೆ ! ಪ್ರಿಂಟಿಂಗ್ ಇಂಕ್ ಗೆ ಏನು ಸೇರಿಸ್ತಾರೊ ಏನೋ. ಆದರೆ ಟೈಮ್ಸ್ ಅಲ್ವಾವ್ರು ಹಾಗೆಲ್ಲಾ ಕಡಿಮೆ ಬೆಲೆ ಇಂಕ್ ಉಪಯೋಗಿಸೋದು ಸುಳ್ಳು ಅನ್ನಿಸ್ತು. ಅವರತ್ತಿರ ಬೇರೆ ಕೋಸ್ಟಲಿ ಮೆಷೆನರೀಸ್ ಇರುತ್ತೆ. ಪ್ರಿಂಟಿಂಗ್ ಡ್ರಮ್ ಹೋಗುತ್ತಲ್ವಾ…….. ಆದ್ರೆ ನಾನ್ಯಾಕೆ ಚಿಂತೆ ಮಾಡಲಿ ನಂಗೆ ಚಾ ರೆಡಿ ಆದ್ರೆ ಸಾಕಾಗಿತ್ತು.

ಹಾಗಾಗಿ ಮಿರರ್ ನ್ನು ಪೀಸ್ ಪೀಸ್ ಮಾಡಿ ಒಂದೊಂದೇ ಚೂರನ್ನು ಲೆಯ ಒಳಗೆ ನೂಕಿ ಬೆಂಕಿಯಲ್ಲಿ ಅದ್ದುತ್ತಾ ಕುಳಿತುಕೊಂಡೆ. ಸಖತ್ ಆಗಿತ್ತುತುಂಬಾ ಮಜಾ ಬಂತು. ಒಂದತ್ತು ನಿಮಿಷದಲ್ಲಿ ಚಾ ಕುದಿಯೊಕೆ ಶುರುವಾಯ್ತು. ಆಹಾ!   ನಿನ್ನೆ ಅಷ್ಟೇ ಫ್ರೆಂಡ್ ಹತ್ತಿರ MSEZ ವಿರುದ್ದ ಮಾತಾಡಿದ್ದು ನೆನಪಿಗೆ ಬಂತು. ಬದುಕೋಕೆ ನಿಜವಾಗಿಯೂ economic development ಬೇಕೇ ಬೇಕಾಗಿಲ್ಲ. ನಾವು ನೆಲ ಕಾಣದೆ ಇರೋ ಹಾಗೆ ಬೆಳೆತಿದ್ದೀವಿ ಅನ್ನಿಸ್ತು. ಇಕೊ ಫ್ರೆಂಡ್ಲಿ ಮನೆಗಳು, ಯೊ ಡೀಸೆಲ್ಲುಕಾಡು ಮನುಷ್ಯರು ಎಲ್ಲ ನೆನಪಾಗ್ತಾ ಇತ್ತು. ಹೋಗಲಿ ಬಿಡಿ. ಮಿರರ್ ಚಾ ಹೈ ಕ್ಲಾಸ್ ಆಗಿತ್ತು. ಏನೋ ಹೊಸದು ಮಾಡಿದ ಥ್ರಿಲ್ ಇತ್ತು. ಕೆಂಡದಲ್ಲಿ ಸುಟ್ಟ ರೊಟ್ಟಿ ತುಂಬಾ ರುಚಿಯಂತೆ. ಹೌದಾ?

ಇನ್ನೂ ಗ್ಯಾಸ್ ಬಂದಿಲ್ಲ. ಅದಕ್ಕೆ ಮತ್ತೆ ಲೆ ಒಟ್ಟಿ ಮಿರರ್ ಸುಟ್ಟು ಹಾಲು ಕಾಯಿಸಿ ಬೂಸ್ಟ್ ಮಾಡಿ ಕುಡಿದು ಬರೀತಾ ಇದ್ದೀನಿ. ಫೋಟೋ ತೆಗೆಯೋಣ ಅಂದುಕೊಂಡೆ. ಲ್ಲಾದ್ರೂ ಇದು ಮನೆ ಓನರ್ ಕೈಗೆ ಸಿಕ್ಕಿದರೆ ! ಏನೋ educated ಅಂತ ಕೊಟ್ಟರೆ ಒಳ್ಳೇ uneducated ತರಹ ಮನೆ ಗೋಡೆ ಕಪ್ಪಗೆ ಮಾಡ್ತಿದ್ದೀರೇನ್ರಿ ಅಂತ ರೇಗಿದರೆ ? ಬೇಡಪ್ಪ ಬೇಡ. ಏನೋ ಒಂದ್ಸಲ ತರಲೆ ಐಡಿಯಾ ಬಂದು ಹಿಂಗೆ ಮಾಡಿದ್ದಕ್ಕೆ ಪರಮನೆಂಟ್ ಹಣೆ ಪಟ್ಟಿ ಪಡೆಯೊದಾ, ಅದಕ್ಕೆ ಹಾಗ್ತಿಲ್ಲ. ಜೊತೆಗೆ ಸಂಪ್ರದಾಯಸ್ಥರು ಚಿತ್ರ ನೋಡಿ, ದೀಪ ಹಚ್ಚೋ ಹಣತೆ ಉಪಯೋಗಿಸಿ ಯಾರಾದ್ರೂ ಬೆಂಕಿ ಹಚ್ಚತಾರಾ ಅಂತ ಹೀಗೆಳೆದರೆ? ರೇಜಿಗೆನೆ ಬೇಡರಿ. ಹಾಗೆನೆ ನೀವು ಸಹ ಇದನ್ನು ಯಾರಿಗೂ ಹೇಳಕೆ ಹೋಗ್ಬೇಡಿ. ಇದು ನಮ್ಮಿಬ್ಬರ ನಡುವಿನ ಗುಟ್ಟು, ಆಯ್ತಾ ?

ನನ್ನ ಹುಡುಗ ಹೇಳಿದ್ದು ………..

ಅಕ್ಟೋಬರ್ 21, 2008

ಮರದ ಮೇಲೆ ಕಾಗೆಕಾ ಕಾ
ನೆಲದ ಮೇಲೆ ಇಣಚಿಚೀ ಚೀ
ಇಂಟರ್ ನೆಟ್ ನಲ್ಲಿ ಸೌಪಿಪೀ ಪೀ
(ಇದು ನಾನು ದಿನಾ ಗೀಚುವ ಪುಸ್ತಕದಲ್ಲಿ ಬರೆದಿಟ್ಟಿದ್ದು )

ನಾನು ಹುಟ್ಟಿದ್ದು ಇಲ್ಲಿ
ಓದಿದ್ದು ಅಲ್ಲಿ
ಬೆಳೆದದ್ದು ಎಲ್ಲೆಲ್ಲೋ
(ಇದುನಿಮ್ಮಂತ ಮಹಾನುಭಾವರು‘   ಅಂದರೆ ನಾನು ಬರೆಯೋದು ಹೇಗಿರುತ್ತೆ ಎನ್ನುವುದರ ಉದಾಹರಣೆ )

ಇವತ್ತಿನ ಸಾರು ಎಂದಿನಂತಿಲ್ಲ
ಇವತ್ತು ಕುಕ್ಕರ್ ಸೀಟಿ ಹೊಡೆದಿದೆ!!”
ಇವತ್ತು ಹಾಲು ಉಕ್ಕಿ ಹೋಗಿದೆ” , …………….
( ಇವೆಲ್ಲ ಇಂದಿನ ಚಹಾ ಎಂದಿನಂತಿಲ್ಲ ಓದಾದ ಮೇಲಿನಿಂದ ಶುರುವಾದದ್ದು)

ಹೇಳು, ನಾ ಸತ್ತ ಮೇಲೂ ನನ್ನ ಓದ್ಕೊತಿಯಾ? ದಿಲ್ ಸೆ!

ಸೆಪ್ಟೆಂಬರ್ 13, 2008

ಹೇಯ್,

ನನ್ನ ಹತ್ರ ಜಾಸ್ತಿ ಸಮಯ ಉಳಿದಿಲ್ಲ.

ನಾ ಸತ್ತು ಹೋದ ಮೇಲೂ ನನ್ನ ಹೀಗೆ ಓದ್ಕೊತಿಯಾ?
ದಿನಾ ಇದೆ ರೀತಿ ನನ್ನ ಹುಡುಕ್ತಿಯಾ ?
ಹೊಸದಿಲ್ಲ ಅಂತ ಚಡಪಡಿಸ್ತಿಯಾ?
ಇಲಾ, ಇನ್ನೊಂದು ಕ್ಲಿಕ್ ಗೆ ಹೊಸದರ ಬೆನ್ನು ಬೀಳ್ತಿಯಾ?
ಆಂ ?

ನೀ ನನ್ನ ಮರೆತು ಬಿಡ್ತಿಯ ಅಲಾ,
ನಾನಿದ್ದೆ ಅನ್ನೊದೇ !
ಲೈಬ್ರರೀಲಿ ವರ್ಷಗಟ್ಟಳೇ ಧೂಳು ಹಿಡಿದ ಪುಸ್ತಕದಂತೆ !!
ಮತ್ತೆಲ್ಲೋ ಓದಿದಾಗ ತರಹವೇ ಮೊದಲು ನೋಡಿದ್ದೆ ಅನ್ಕೊತಿಯಾ ?
ಇಲಾ, ಅಲ್ಲಿ ನಿನ್ನ ಕಣ್ ತುಂಬಿ ಬಂದು ನನ್ನೇ ಹುಡುಕುತ್ತಿಯಾ ?
ಹೇಳು………… ಆಂ ?

ಗುಮ್ಮನೇ ಕೂತು ನಿನ್ನನ್ನೇ ಕೇಳುತ್ತಿರೊದು, ರಗಳೆ ಮಾಡ್ಬೇಡ ,
ಒತ್ತಿ ಬಿಡ್ತಿನಿ ಅಂತಿಯಾ ?
ಓಹೋ ! ಮಾಡ್ಬೇಕಾಗಿದ್ದ ಕೆಲಸ ಈಗ ನೆನಪಿಗೆ ಬಂತಾ ?

ಇಲಾ, ನೀ ಏನ್ ನನ್ನ ಜೊತೆ ಅಂತೂ ಬರಲ್ಲ,
ನನ್ನೇ ನಿನ್ನ ಜೊತೆ ಕರ್ಕೊಂಡು ಹೋಗು ಅಂತಿಯಾ ?
ದಿಲ್ ಸೆ ?
ಒಂದೇ ಒಂದು ಕ್ಷಣ ………………….
ಡಮಾರ್ !

ದಿಲ್ ಸೆ ರೇ ……

( ಈಗಷ್ಟೇದಿಲ್ ಸೆಪಿಕ್ಚರ್ ನೋಡ್ದೆ 😀   )