Archive for the ‘ಕಪ್ಪು ಹಣೆ ಪಟ್ಟಿ’ Category

ಸ್ಪರ್ಧೆ ರದ್ದಾಗಿದೆ

ಜನವರಿ 30, 2009

ಹುಂ ಕಣ್ರಿ. ಒಂದೇ ಒಂದು ಎಂಟ್ರಿನೂ ಬರದೇ ಇದ್ದರಿಂದ ಸ್ಪರ್ಧೆಗಳನ್ನು ರದ್ದುಗೊಳಿಸಲಾಗಿದೆ.
ತೇಜಸ್ವಿನಿ ಹೆಗಡೆಯವರು ಮಾತ್ರ ಲಾಂಛನ ಸ್ಪರ್ಧೆಗೆ ಲೊಗೊ ಕಳಿಸಿಕೊಟ್ಟಿದ್ದರು. ಅದು ತಿದ್ದುಪಡಿಗೆ ಹೋಗಿದ್ದು ಸಮಯದ ಅಭಾವದ ಕಾರಣ ವಾಪಸ್ಸು ಸ್ಪರ್ಧೆಗೆ ಬಂದಿರಲಿಲ್ಲ. ಆದರೆ ಒಬ್ಬರಾದರೂ ಬಂದಿದ್ದರಲ್ಲ ಅಂತ ನನ್ನ ಬೆನ್ನನ್ನು ನಾನೇ ಸವರಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.

ಸ್ಪರ್ಧೆ ವಿಫಲವಾಗಲು ನಾ ಹುಡುಕಿದ ಕೆಲ ಕಾರಣಗಳು;
1. ಈ ಲಾಂಛನ ಮತ್ತು ಪ್ರಬಂಧದಿಂದ ಭಯೊತ್ಪಾದನೆಯ ಬಗ್ಗೆ ತಿಳುವಳಿಕೆ ಹರಡಬಹುದೆಂಬ ಅಂಶದಲ್ಲಿ ನಂಬಿಕೆ ಇಲ್ಲದಿರುವುದು.
2. ಸ್ಪರ್ಧೆಯಲ್ಲಿ ನಿಜವಾಗಿಯೂ ನಗದು ಮೊತ್ತವನ್ನು ಕೊಡದೇ ಕೇವಲ ಇ-ಸರ್ಟಿಫಿಕೇಟ್ ಕೊಡಲಾಗುವುದೆಂದು ಘೋಷಿಸಿದ್ದು.
3. ಓದುಗರಿಗೆ ಭಯೊತ್ಪಾದನೆ ಬಗ್ಗೆ ಓದಿ-ಓದಿ ಸಾಕಾಗಿ ಹೊಸ ಗಾಳಿ ಪಡೆಯಲು ಬೇರೆ ದಿಕ್ಕಿಗೆ ಮುಖ ಮಾಡಿರುವುದು.
4. ರಿಸೆಶನ್ನಿಂದಾಗಿ ಆಫೀಸಿನಲ್ಲಿ ನೆಟ್ ಬಳಕೆ ಕಡಿಮೆಯಾಗಿರುವುದು 😉
5. ಸ್ವಂತ ಕೆಲಸದ ಒತ್ತಡಗಳ ನಡುವೆ ಈ ವಿಷಯದ ಬಗ್ಗೆ ಗಮನಿಸದಿರಲು ಆಗದಿರುವುದು.
6. ಸ್ಲಮ್ ಡಾಗ್, ಪಬ್ ದಾಳಿ ಈ ತರಹದ ಅನೇಕ ವಿಷಯಗಳಲ್ಲಿ ಓದುಗರು ಕಳೆದು ಹೋಗಿರುವುದು.
7. ಇನ್ನು ನೀವು ಹೇಳಿ……..

( ಸ್ಪರ್ಧೆಯನ್ನು ಘೋಷಿಸಿದ್ದ ಬರಹಕ್ಕೆ 244 ಕ್ಲಿಕ್ ಗಳಿದ್ದವು !)

ಲಾಂಛನ ಮತ್ತು ಪ್ರಬಂಧ ಸ್ಪರ್ಧೆಗಳು- ಬನ್ನಿ, ಪಾಲ್ಗೊಳ್ಳಿ ಮತ್ತು ಗೆಲ್ಲಿರಿ-ಅಪರಿಮಿತ ಬಹುಮಾನಗಳು

ಡಿಸೆಂಬರ್ 17, 2008

ನಿಜ, ನಿಮಗಿದೋ ಸುವರ್ಣಾವಕಾಶ!

ಭಾಗವಹಿಸುವ ಎಲ್ಲರಿಗೂ ಬಹುಮಾನಗಳು **

ಲಾಂಛನ ಸ್ಪರ್ಧೆ

ವಿಷಯ : anti terrorist

ಪ್ರಥಮ ಬಹುಮಾನ : 5,000/-*
ದ್ವಿತೀಯ ಬಹುಮಾನ : 3,000/-*
ತೃತೀಯ ಬಹುಮಾನ : 1,000/-*

anti11

ನಿಯಮಗಳು :
. ಶಬ್ದವನ್ನು ಯಾವ ರೀತಿಯಲ್ಲೂ ಚಿತ್ರಿಸಬಹುದು.
. ಕೆಳಗಿನ ತಲೆಬರಹವನ್ನು ಸಹ ಬದಲಾಯಿಸಬಹುದು.
. ಯಾವುದೇ ಧರ್ಮವನ್ನು/ವ್ಯಕ್ತಿಯನ್ನು/ಸನ್ಘಟನೆಯನ್ನು ಹೋಲುವನ್ತಿರಬಾರದು.
. ಕಳುಹಿಸಿದ ಎಲ್ಲ ಡಿಸೈನ್ ಗಳನ್ನು ಇಲ್ಲಿ ಹಾಕಲಾಗುತ್ತದೆ.
. ಎಲ್ಲ ಡಿಸೈನ್ ಗಳು ಸಾರ್ವಜನಿಕ ಸ್ವತ್ತುಗಳಾಗುತ್ತವೆ.
. ಸೈಜ್ :  220 pixel width (for blog side bar display)
. ಪ್ರಿನ್ಟಿನ್ಗ್ ಸಲುವಾಗಿ ಮಾಡುವರಿದ್ದರೆ Adobe Illustrator/Corel Drawನಲ್ಲಿ ಮಾಡಿ, File ನ್ನು zip ಮಾಡಿ ಕಳುಹಿಸಬೇಕು.

ಪ್ರಬಂಧ ಸ್ಪರ್ಧೆ

ವಿಷಯ : ಭಯೋತ್ಪಾದನೆ

ಪ್ರಥಮ ಬಹುಮಾನ : 10,000/-*
ದ್ವಿತೀಯ ಬಹುಮಾನ : 7,500/-*
ತೃತೀಯ ಬಹುಮಾನ : 3,500/-*

ನಿಯಮಗಳು :
. ಶಬ್ದದ ನಿರೂಪಣಾ ವ್ಯಾಖ್ಯೆ, ಗುಣ ಲಕ್ಷಣ, ಮೂಲ ಸ್ವರೂಪ
. ಭಯೋತ್ಪಾದನೆಯ ಉಗಮ, ಬೆಳೆದು ಬಂದ ದಾರಿ, ಚರಿತ್ರೆ
. ಇದರ ವಿಧಗಳು, ಪ್ರಕಾರಗಳು
. ಸಾಮಾಜಿಕ/ರಾಜನೈತಿಕ ಕಾರಣಗಳು
. ಸಂಬದಿಸಿದ ಕಾನೂನುಗಳು
. ಭಯೋತ್ಪಾದನಾ ಗುಂಪುಗಳು/ಸಂಘಟನೆಗಳು, ಇವುಗಳ ವಿವರ
. ಇದರ ವಿರುದ್ಧ ಹೊರಾಡುವ ಬಗೆ, ಕಾರ್ಯರೂಪಕ್ಕೆ ಇಳಿಸಬಲ್ಲಂತಹ ಸಲಹೆಗಳು/ವಿಚಾರಗಳು/ಕಲ್ಪನೆಗಳು
. ಇದರ ವಿರುದ್ಧ ಸಾಮಾನ್ಯ ಪ್ರಜೆಯ/ಸಮಾಜದ ಕರ್ತವ್ಯ
…….. ಇನ್ನೂ ಅನೇಕ
ಇವುಗಳಲ್ಲಿ ಯಾವುದೇ ವಿಷಯದ ಬಗ್ಗೆ ಪ್ರಬಂಧ ಮನ್ಡಿಸಬಹುದು. ಎಲ್ಲ ಪ್ರಬಂಧಗಳನ್ನು ತಮ್ಮ ತಮ್ಮ ಹೆಸರಿನಲ್ಲಿ ಪ್ರಕಟಿಸಲಾಗುವುದು.

ಕಡೆಯ ದಿನಾಂಕ : ಜನವರಿ ೨೬, ೨೦೦೯

ಕಳುಹಿಸಬೇಕಾದ ವಿಳಾಸ : blackblogheader@gmail.com

ರಿಸಲ್ಟ್ ದಿನಾಂಕ : ಜನವರಿ ೩೦, ೨೦೦೯ ( ವಿಜೇತರನ್ನು ವೋಟಿನ ಮೂಲಕ ಆರಿಸಲಾಗುವುದು)

ಕನ್ನಡ/ಹಿಂದಿ/ಇಂಗ್ಲೀಷ್ ಮೂರು ಭಾಷೆಗಳಲ್ಲೂ ಇರಬಹುದು.

ಪ್ರತಿ ಎಂಟ್ರಿಯ ಜೊತೆ ನಿಮ್ಮ ಹೆಸರು, ವಿದ್ಯಾಭ್ಯಾಸ, ಉದ್ಯೋಗ, ಮೇಲ್ ಕಳಿಸುವುದು ಕಡ್ಡಾಯ. ಯಾರು ಎಷ್ಟು ಬೇಕಾದರೂ ಎಂಟ್ರಿ ಕಳಿಸಬಹುದು.

ಶಬ್ದದ ಮಿತಿ, ವಯೋಮಿತಿ ಇಲ್ಲ.
(ತುಂಬಾನೆ
ಜಾಸ್ತಿ ವಿಷಯ ಸಂಗ್ರಹಿಸಿದ್ರೆ ಭಾಗಗಳಲ್ಲಿ ಹಾಕಿದ್ರಾಯ್ತು.)

[**ಶರತ್ತುಗಳು ಅನ್ವಯಿಸುತ್ತವೆ. *ಮೇಲೆ ಕಾಣಿಸಿದ ಮೊತ್ತವನ್ನು ಪ್ರದರ್ಶಿಸುವ ಸರ್ಟಿಫಿಕೇಟ್ ಗಳನ್ನು ನಿಮ್ಮ ವಿಳಾಸಕ್ಕೆ ಮೇಲ್ ಮಾಡಲಾಗುವುದು. ಯಾವುದೇ ನಗದು ಮೊತ್ತವನ್ನು ನೀಡಲಾಗುವುದಿಲ್ಲ. ಸ್ಪರ್ಧೆಯನ್ನು ರದ್ದುಗೊಳಿಸುವ ಅಥವಾ ಬಹುಮಾನವನ್ನು ಬದಲಿಸುವ ಎಲ್ಲ ಹಕ್ಕುಗಳು ಬ್ಲಾಗಿನದ್ದಾಗಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ವಿಳಾಸ : neelanjala@gmail.com]

ಮುಂದೆ ಹೀಗೆ ಮಾಡೋಣವೇ ?

ಡಿಸೆಂಬರ್ 12, 2008

ಪ್ರಿಯ ಓದುಗರೇ ಮತ್ತು ಸಹ ಬ್ಲಾಗಿಗರೇ,
ಮೊನ್ನೆ ಡಿಸೆಂಬರ್ 1 ರಿಂದ ಪ್ರಾರಂಭವಾದ ನಮ್ಮ ಕಪ್ಪು ಪಟ್ಟಿ ಆಂದೋಲನ ಕೇವಲ 11 ದಿನಗಳಲ್ಲಿ 50ಕ್ಕೂ ಹೆಚ್ಚು ಬ್ಲಾಗಿಗರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇದನ್ನು ಬೆಂಬಲಿಸಿ ಮೊದಲ ಹೆಜ್ಜೆಯ ಯಶಸ್ಸಿಗೆ ಕಾರಣರಾದ ನಾವೆಲ್ಲರೂ ಅಭಿನಂದನೆಗೆ ಅರ್ಹರು. Yes, WE did it. ಸಂತಸದ ಸಂಗತಿಯೆಂದರೆ ಪ್ರತಿದಿನವೂ ಹೊಸ ಬೆಂಬಲಿಗರನ್ನು ಪಡೆಯುತ್ತಿದ್ದೇವೆ. ಮಾತಿನಿಂದ ಮಾತಿಗೆ, ಬ್ಲಾಗಿನಿಂದ ಬ್ಲಾಗಿಗೆ ಹೀಗೆ ನಿಧಾನವಾಗಿ ಹರಡುತ್ತಿದೆ. ನಿಜಕ್ಕೂ , ಎಲ್ಲ ತಕರಾರುಗಳ ನಡುವೆಯೂಹೀಗೇಯೂ ಮಾಡಬಹುದುಎಂದು ತೋರಿಸಿಕೊಟ್ಟಿದ್ದೇವೆ. ಅಭಿನಂದನೆಗಳು.

ಇನ್ನೂ ಮುಂದಿನ ದಾರಿಯ ಕುರಿತು;
ಮೊದಲೇ ಹೇಳಿದಂತೆ ಇದಕ್ಕೆ ಸಂಭಂದಿಸಿದಂತೆ ಒಂದು ವೆಬ್ ಸೈಟ್ ನ್ನು ಮಾಡುವ ಉದ್ದೇಶವಿತ್ತು. ಆದರೆ ಇದನ್ನು ಸಧ್ಯಕ್ಕೆ ಕೈ ಬಿಡಲಾಗಿದೆ. domain name, web space, web management ಹೇಳಿ ಆಗುವ ಖರ್ಚು ಬಹಳ. ಸನ್ಘಟಿತ ಕಾರ್ಯ ಪ್ರಾರಂಭವಾಗುವ ಮೊದಲೇ ದೇಣಿಗೆ ಪೆಟ್ಟಿಗೆ, ಖಚಾಂಚಿಯ ನಿಯೋಜನೆ ಸರಿಯಾದದ್ದು ಅಲ್ಲ. ಮೊದಲ ಹಂತದಲ್ಲೇ ಇಷ್ಟು ಹಣ ಖರ್ಚು ಮಾಡುವುದು ಅನವಶ್ಯಕ ಕಾರಣ ವಿಷಯಕ್ಕೆ ಸಂಭದಿಸಿದಂತೆ ಹೊಸ ಬ್ಲಾಗ್ ತೆರೆಯಲಾಗಿದೆ. (ಆಫೀಶಿಯಲ್ ಉದ್ಘಾಟನೆ ಸಧ್ಯದಲ್ಲೇ ಆಗಲಿದೆ 😉 ) ಹಾಗೇನೆ ನೀಲಾನ್ಜಲ ಖಾಸಗಿ ಬ್ಲಾಗ್ ಆದ್ದರಿಂದ ವಿಷಯವನ್ನು ಚರ್ಚಿಸಲು ಒಂದು ಸಾಂಘಿಕ ಬ್ಲಾಗ್ ಬೇಕೆನಿಸಿತು. ಮುಂದೊಂದು ದಿನ ನಾವೆಲ್ಲ ಸೇರಿ ಅಗತ್ಯವಿದ್ದರೆ ವೆಬ್ ಸೈಟ್ ಪ್ರಾರಂಭಿಸಬಹುದು.

ಇನ್ನೂ ಲಾಂಛನದ ಕುರಿತು. ನಮ್ಮಲ್ಲೇ ಯಾರದರೂ ಮಾಡಿಕೊಡುವರಿದ್ದರೆ ಮುಂದೆ ಬನ್ನಿ ಎಂದು ಕೇಳಿದ್ದಕ್ಕೆ ಉತ್ತರ ಬಂದಿಲ್ಲದ ಕಾರಣ, ಇದಕ್ಕೆ ಸಂಭಂದಿ ಒಂದು ಚಿಕ್ಕ ಸ್ಪರ್ಧೆಯನ್ನು ಆಯೋಜಿಸುವುದು. ಆಗ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು.

ಇದೆಲ್ಲಕ್ಕಿಂತ ಮುಖ್ಯವಾದದ್ದು ಭಯೋತ್ಪಾದನೆ ವಿಷಯದ ಹೊರಗುಒಳಗು ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳುವುದುಭಯೋತ್ಪಾದನೆ ಎಂಬುದು ಸಾಮಾಜಿಕ ಪಿಡುಗು. ನಿಮಗೆ ಶಾಲೆಯಲ್ಲಿ ನಕ್ಸಲ್ ವಾದ , ಮಾವೋ ವಾದ ಇವುಗಳ ಜೊತೆ ಭಯೋತ್ಪಾದನೆಯ ಕುರಿತು ಓದಿದ್ದು ನೆನಪಿದೆಯಾ? ಬಡತನ , ಅನಕ್ಷರತೆ, ನಿರುದ್ಯೋಗ……. ಮುಂತಾದವುಗಳ ಜೊತೆಗೆ ಇದನ್ನು ಓದಿದ್ದ ನೆನಪು ನನಗಿದೆ. ಭಯೋತ್ಪಾದನೆಯ ಮೂಲ ಅರಸುತ್ತಾ ಹೋದರೆ ೧ನೇ ಶತಮಾನದಷ್ಟು ಹಿಂದೆ ಹೋಗಬೇಕಾಗುತ್ತದೆ. ಇದರ ಬಗ್ಗೆ ನಾನಿನ್ನೂ ಓದುತ್ತಿದ್ದೇನೆ. ಒಂದಾದ ಮೇಲೊಂದು ಹೊಸ ಸಂಗತಿಗಳು ತೆರೆದು ಕೊಳ್ಳುತ್ತ ನಾನಂದು ಕೊಂಡಿದ್ದನ್ನೆಲ್ಲ ಸುಳ್ಳಾಗಿಸಿದೆ. ನಾನು ಭಯೋತ್ಪಾದನೆ ಮುಸ್ಲಿಮರಿಂದಲೇ ಹುಟ್ಟಿದ್ದು , ಪಾಕಿಸ್ತಾನಭಾರತ ಎಂದು ಇಭ್ಬಾಗವಾದಾಗ ಉಂಟಾದ ಕಾಶ್ಮೀರ ಸಮಸ್ಯೆಯಿಂದ ಭಯೋತ್ಪಾದಕರು ಹುಟ್ಟಿದ್ದಾರೆ ಎಂದೆಲ್ಲಾ ಭಾವಿಸಿದ್ದೆ. ನಮ್ಮೊಳಗಿನ ಕೆಟ್ಟ ರಾಜಕಾರಣ, ಭ್ರಷ್ಟ ವ್ಯವಸ್ಥೆ ಇದಕ್ಕೆ ಕಾರಣ ಎಂದು ಅಂದುಕೊಂಡಿದ್ದೆ. ಜಾಸ್ತಿ ಓದುತ್ತಾ ಇದ್ದ ಹಾಗೆ ವಿಪರೀತ ಗೊಂದಲಗಳು ಏಳುತ್ತಿವೆನಾವೆಲ್ಲ ಬಾಯಿಗೆ ಬಂದ ಹಾಗೆ, ಮನಸ್ಸಿಗೆ ತೋಚಿದ ಹಾಗೆ ಬರೆಯುವಷ್ಟು ಮಾಮೂಲಾಗಿಲ್ಲ ವಿಷಯ. ನಿಜಕ್ಕೂ ಭಯೋತ್ಪಾದನೆಯನ್ನು ನಾಶಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೈಯಲ್ಲಿ ಕೋವಿ ಹಿಡಿದು ಸಾಯಿಸಲು ಹೊರಟರೆ ಏಷ್ಟು ಜನ ಅಂತ ಕೊಲ್ಲುವುದು ? ಬಡತನ ಸಮಸ್ಯೆಯನ್ನು ನೀಗಲು ಜಗತ್ತಿನ ಎಲ್ಲಾ ಬಡವರನ್ನು ಸಾಯಿಸಬೇಕು ಎಂಬ ತೀರ್ಪಿನಷ್ಟೇ ಇದು ಅಸಂಬದ್ಧವಾಗುತ್ತದೆ.

ಮಾವೊವಾದಿಗಳು, ನಕ್ಸಲರು, ಭಯೋತ್ಪಾದಕರು ಎಲ್ಲರೂ ಒಂದಲ್ಲ ಒಂದು ಧ್ಯೇಯಕ್ಕಾಗಿ ಸನ್ಘಟಿತರಾಗಿ , ಯೋಜಿತರಾಗಿ, ಕಾರ್ಯಸೂಚಿಯನ್ನು ರೂಪಿಸಿಕೊಂಡು ಹೊರಾಡುತ್ತಿರುವವರು. ಒಂದಲ್ಲ ಒಂದು ರೀತಿಯಿಂದ ಸ್ವಸ್ಥ ಸಮಾಜದ ಮೂಲ ಕಲ್ಪನೆಯನ್ನು ನಾಶಮಾಡಲು ಹೊರಟಿರುವವರು. ಭಯೋತ್ಪಾದಕನಿಗೆ ಮತ್ತು ಕೊಲೆಗಡುಕನಿಗೆ/ದರೋಡೆಕೋರನಿಗೆ ಮೂಲ ಉದ್ದೇಶದಲ್ಲಿ ವ್ಯತ್ಯಾಸವಿದೆ. ಹಾಗೇನೆ ಭಾರತದ ಏಜೆಂಟ ಶತ್ರು ದೇಶದಲ್ಲಿ ದೇಶದ್ರೋಹಿ ಎನ್ನಿಸಿಕೊಂಡರೆ, ನಮ್ಮ ಕಣ್ಣಲ್ಲಿ ದೇಶಭಕ್ತ ಅನ್ನಿಸಿಕೊಳ್ಳುತ್ತಾನೆ. ತರಹ ಅನೇಕ ಭಿನ್ನತೆಗಳನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದನೆಯ ಕುರಿತು ಮಾತನಾಡಬೇಕಾಗುತ್ತದೆ.
ಇದೆಲ್ಲದರ ಬಗ್ಗೆ ಯೋಚಿಸಿ, ಭಯೋತ್ಪಾದನೆಯನ್ನು ದಮನ ಮಾಡಲು ಅದರ ಉಗಮ, ಬೆಳೆದು ಬಂದ ಹಾದಿ, ಚರಿತ್ರೆ, ಸಾಮಾಜಿಕ ಕಾರಣಗಳು, ಭಯೋತ್ಪಾದಕ ಸಂಘಟನೆಗಳ ವಿವರಅವುಗಳ ಧ್ಯೇಯ, ಕಾರ್ಯ ಪದ್ಧತಿ ಮುಂತಾದವುಗಳ ಬಗ್ಗೆ ತಿಳಿಯುವುದು ಬಹು ಮುಖ್ಯವಾಗುತ್ತದೆ. ಕಾರಣ ವಿಷಯದ ಬಗ್ಗೆನೂ ಪ್ರಭನ್ಧ ಸ್ಪರ್ಧೆಯನ್ನು ಏರ್ಪಡಿಸುವುದು. ಮತ್ತು ಸದ್ಯ ಕೇವಲ ರಾಜಕಾರಣಿಗಳನ್ನು, ನಮ್ಮ ಭ್ರಷ್ಟ ವ್ಯವಸ್ಥೆಯನ್ನು ಬಯ್ಯುತ್ತಿರುವ ಎಲ್ಲರನ್ನೂ ಇದರ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಅಧ್ಯಯನ ಮಾಡಲು ಹೇಳುವುದು. ಇದಕ್ಕೆ ಸಂಭದಿಸಿದ ಕಾನೂನುಗಳನ್ನು, ಸರ್ಕಾರ/ಸರ್ಕಾರೇತರ ಸಂಘಗಳನ್ನು ಪರಿಚಯಿಸಿಕೊಳ್ಳುವುದು. ಈಗಾಗಲೇ ಹೊಸ ಬ್ಲಾಗಿನಲ್ಲಿ ವಿಷಯದ ಬಗ್ಗೆ ಮಾಹಿತಿ ಕೊಡುವ ಕೆಲ ಲಿಂಕ್ ಗಳನ್ನು ಕಾಣಬಹುದು. ನಿಮಗೂ ಗೊತ್ತಿದ್ದರೆ ಹೇಳಿ. ಸೇರಿಸಲಾಗುವುದು.

ನನ್ನ ಪ್ರಕಾರ ಭಯೋತ್ಪಾದನೆ ಈಗೀನ ಪ್ರಮುಖ ಸಾಮಾಜಿಕ ಸಮಸ್ಯೆ. ಭ್ರಷ್ಟ ವ್ಯವಸ್ಥೆ, ಕೆಟ್ಟ ರಾಜಕಾರಣಿಗಳು, ಸ್ವಾರ್ಥಿ ಪ್ರಜೆಗಳು ಇದಕ್ಕೆ ಸಹಕಾರ ನೀಡುತ್ತಿರುವವರು. ನಮ್ಮ ವ್ಯವಸ್ಥೆಯನ್ನು ಸರಿ ಮಾಡಲು ಪ್ರಯತ್ನ ಪಡುವುದು ಇದರ ಬಲ ಕುನ್ದಿಸಬಹುದೇ ಹೊರತು ಮೂಲ ಸಮಸ್ಯೆಯ ನಿವಾರಣೆಯಾಗಲಾರದು. ಬದಲು ಇನ್ನೊಂದು ರೂಪದಲ್ಲಿ ಎದ್ದು ಬರಬಹುದು. ಸುವ್ಯವಸ್ಥೆ ರಚನೆಯಿಂದ ಆಗುವ ಸಾವು ನೋವುಗಳನ್ನು ಸ್ವಲ್ಪ ಕಡಿಮೆ ಮಾಡಬಹುದು. ಸಮಾಜ ಅನ್ನುವುದು ಇರುವ ತನಕ ಸಮಾಜ ಘಾತುಕ ಶಕ್ತಿಗಳು ಇದ್ದೇ ಇರುತ್ತವೆ. ಹಾಗಂತ ಸುಮ್ಮನಿದ್ದರೂ ಆಗುವುದಿಲ್ಲವಲ್ಲ.

ಎರಡನೆಯ ಹೆಜ್ಜೆಯಾಗಿ ; ಲೋಗೋ ಸ್ಪರ್ಧೆ ಮತ್ತು ಪ್ರಭನ್ದ ಸ್ಪರ್ಧೆ. ಇನ್ನೊಂದು ದಿನದೊಳಗೆ ಪೂರ್ಣ ವಿವರಗಳನ್ನು ಎರಡು ಬ್ಲಾಗಿನಲ್ಲೂ ಹಾಕಲಾಗುವುದು. ನಂತರದಲ್ಲಿ ರೆಡಿಯಾಗುತ್ತಿರುವ ಮುಂದಿನ ಕಾರ್ಯಸೂಚಿಯ ಪೋಸ್ಟ. ( ತರ್ಕಿಸಿ, ಯೋಚಿಸಿ ಮಾಡದಿದ್ದರೆ ನಾನು ATS ಅಥವಾ ನಮ್ಮೊಳಗಿನ terrorist supporter ಕೈಯಿಂದ ತೊಂದರೆಗೊಳಗಾಗುವ ಸಾಧ್ಯತೆಗಳು ಇವೆ 😀 ) . ಆಗ ನಮ್ಮ ನಿರ್ಧಾರಗಳನ್ನುಸಲಹೆಗಳನ್ನು ಅದಕ್ಕೆ ಅಳವಡಿಸಿಕೊಳ್ಳಬಹುದುಬ್ಲಾಗಿನಿಂದ ಶುರುವಾದ ಹರಿವು ಬ್ಲಾಗಿನ ಮೂಲಕವೇ ಸಾಗಲಿಸಹಸ್ರ ಓದುಗರನ್ನು ತಲುಪಲಿ.

ಕಪ್ಪು ಹಣೆ ಪಟ್ಟಿ ಪ್ರದರ್ಶನ-ಮುಂದೆ………(ಭಾಗ 2)

ಡಿಸೆಂಬರ್ 10, 2008

ಸಂದೀಪ ಕಾಮತ್

  • ಪಾಕಿಸ್ತಾನವನ್ನು ಪ್ರಪಂಚದ ಭೂಪಟದಿಂದ ತೆಗೆಯೊದೊಂದೆ ದಾರಿ!
    ನಿಮ್ಮಂಥ ಸಾಧು ಸ್ವಭಾವದವರಿಗೆ ಇದು ಸಹ್ಯ ಅಲ್ಲ ಅಂತ ನಂಗೆ ಗೊತ್ತು, ಬಟ್ ಸ್ಟಿಲ್ ದಾಟ್ಸ್ ಓನ್ಲೀ ವೇ!!!. ನನ್ನ ಸಹಕಾರ ಯಾವಾಗೂ ಇರುತ್ತೆ. ಜೈ ಹಿಂದ್

ವಿಜಯರಾಜ್ ಕನ್ನಂತ

  • “ಕಪ್ಪು ಪಟ್ಟಿ ಹಾಕುವುದು ಕೇವಲ ಸಾಂಕೇತಿಕವೇ ಇರಬಹುದು… ಆದರೆ ಈಗ ನಲವತ್ತು ಜನ ನಿಮ್ಮ ಆಲೋಚನೆಗೆ ಬೆಂಬಲ ಕೊಡುವವರು ಸಿಕ್ಕಿದ್ದಾರಲ್ವೇ. ನಿಮ್ಮ ಮುಂದಿನ ಯೊಚನೆಗಳು ಕೂಡಾ ತುಂಬಾ ಚೆನ್ನಾಗಿವೆ. ನನ್ನ ಒಂದು ಸಲಹೆ ಅಂದ್ರೆ ಈ ಕಾರ್ಯ ಮಾಡೋಕೆ ಇನ್ನಷ್ಟು ಜನ ಬೇಂಬಲ ಬೇಕೇ ಬೇಕು… ಈ ಮೂಲಕ ಮಾಧ್ಯಮಗಳಲ್ಲಿರುವ (ಟಿ.ವಿ. ಯಾ ಪತ್ರಿಕೆ) ನಮ್ಮ ಸಹ-ಬ್ಲಾಗಿಗರು ಇದಕ್ಕೆ ಸ್ಪಂದಿಸಿ ಈ ಆಂದೋಲನಕ್ಕೆ ಇನ್ನಷ್ಟು ಜನರನ್ನು ಒಟ್ಟುಗೂಡಿಸಲು ತಮ್ಮ ಮಾಧ್ಯಮದ ಮುಖಾಂತರ ಏನಾದರೂ ಮಾಡಲು ಸಾಧ್ಯವೇ….? ಜೊತೆಗೆ ನಿಮಗೆ ಗೊತ್ತಿರುವ ಅನ್ಯ ಭಾಷೆಯ ಬ್ಲಾಗಿಗರು ಯಾರದರು ಇದ್ದರೆ ಅವರನ್ನೂ ಸೇರಿಸಿಕೊಂಡರೆ ಉದ್ಧೇಶಕ್ಕೆ ಇನ್ನಷ್ಟು ಬಲ ಬಂದೀತೆಂದು ಆಶಿಸುವೆ.
    ನಿಮ್ಮ ಪ್ರಯತ್ನಕ್ಕೆ ನನ್ನ ಪೂರ್ಣ ಸಹಕಾರ, ಬೆಂಬಲ ಇದೆ…
    ಇದೆಲ್ಲಾ ಮಾಡುವುದರಿಂದ ಏನಾಗುತ್ತೆ ಅಂತ ಅನುಮಾನ ಪಡುವವರಿಗೆ ಒಂದು ಮಾತು… ಏನು ಆಗುತ್ತೊ ಇಲ್ಲವೋ ಅದು ಆಮೇಲಿನ ಮಾತು… ಆದರೆ ನಮ್ಮಿಂದಾಗುವುದನ್ನು ಮಾಡಿದ್ರೆ… ಆ ಮೂಲಕ ಒಂದು ಸಣ್ಣ ಜಾಗೃತಿ ಉಂಟು ಮಾಡಿದ್ರೆ ಅದು ಇನ್ನಷ್ಟು ಒಳ್ಳೆಯ ಬೆಳವಣಿಗೆಗೆ ದಾರಿ ಮಾಡಿಕೊಡಬಹುದು ಅಂತ ನಾನಂತೂ ನಂಬಿದ್ದೀನಿ.” 

ಲಕ್ಷ್ಮೀ ಶ್ರೀಧರ

  • ಕಪ್ಪು ಪಟ್ಟಿಯನ್ನು ನಾವು ಎಷ್ಟು ದಿನ ಹಾಕಿಕೊಳ್ಳಬೇಕೆನ್ನುವುದು ಪ್ರಶ್ನೆ ಅಲ್ಲ, ರಾಷ್ಟ್ರಕ್ಕಾಗಿರುವ ಆಘಾತವನ್ನು ಮರೆಯುವುದು ಸಾಧ್ಯವಾ ಅನ್ನೋದು ಪ್ರಶ್ನೆ. ಅದು ನಮ್ಮ ಬ್ಲಾಗಿನಲ್ಲಿ ಇದ್ದಷ್ಟು ಕಾಲ ನಮಗೆ ನಮ್ಮ ಹೊಣೆ, ಜವಾಬ್ದಾರಿಗಳ ನೆನಪಾಗುತ್ತಿರುತ್ತದೆ.ಆದ್ದರಿಂದ ಕಪ್ಪು ಪಟ್ಟಿ/ಕಪ್ಪು ಚಿಹ್ನೆ ತೆಗೆಯುವ ಅಗತ್ಯ ಇಲ್ಲ ಅಂತ ನನ್ನ ಅನಿಸಿಕೆ. ಸದ್ಯ ಈಗ ನಲವತ್ತು ಜನ ಕಪ್ಪು ಪಟ್ಟಿ ಪ್ರದರ್ಶಿಸಿರುವುದು ಸಂತೋಷ. ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುತ್ತೇನೆ. ಮುಂದಿನ ನಿರ್ಧಾರ ಏನೇ ಇರಲಿ, ಅದಕ್ಕೆ ನನ್ನ ಸಹಮತವಿದೆ. “

ಶೆಟ್ಟರು

  • ನಾವು ಭಾರತಿಯರಲ್ಲಿ ಅರ್ಜೆಂಟಿಗೆ ತುಸು ಜಾಸ್ತಿನೆ ಬೇಕಾಗಿರುವುದು “ಎಕತೆ” ಮತ್ತು “ಜವಾಬ್ದಾರಿ”. “ಎಕತೆ” ಎಷ್ಟೊಂದು ಮುಖ್ಯ ಎಂಬುದನ್ನು ನಮ್ಮನ್ನು ೨೦೦ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರೀಟಿಷರು ಆಳಿದರೂ ನಮಗಾರಿಗೂ ಅರಿವಾಗೆಯಿಲ್ಲ. ನಮ್ಮಲ್ಲಿ “ಎಕತೆ” ಹಿಂದೂ ಇರಲಿಲ್ಲ, ಇವತ್ತು ಇಲ್ಲ ಆದರೆ ನಾಳೆ ಅದನ್ನು ಇರಗೊಡಿಸುವುದು ನಮ್ಮೆಲ್ಲರ ಕೈಯಲ್ಲಿದೆ, ಇವತ್ತು ನಮ್ಮನ್ನಾಳುವವರು, ಆಳಿದವರು, ಮುಂದೆ ಆಳುವವರು ನಮ್ಮನ್ನು ಜಾತಿ, ಧರ್ಮ, ಜನಾಂಗ, ಭಾಷೆ, ಪ್ರದೇಶಗಳ ಮೇಲೆ ಒಡೆಯುತ್ತಾ, ನಮ್ಮ ಜಗಳ-ಗಲಭೆಗಳ ಬೆಂಕಿಯಲ್ಲಿ ಮೈಕಾಸಿಕೊಂಡು ನಮ್ಮನ್ನು ತುಳಿದುಕೊಂಡೆ ಈ ರಾಷ್ಟ್ರದ ಸಿಂಹಾಸನವೆರಿದ್ದಾರೆ, ಅವರಿಂದ ನಾವು ಅಗತ್ಯಕ್ಕಿಂತ ಹೆಚ್ಚಿಗೆ ಬಯಸುತ್ತಿದ್ದೆವೆನೋ? ಅವರಿಗಿಂತ ನಮ್ಮ ಎಕತೆ ಮತ್ತು ಅಖಂಡತೆ ಈ ಸಮಸ್ಯೆಗೆ ಬಹು ದೊಡ್ಡ ಪರಿಹಾರವಾದಿತು (?).
  • “ಜವಾಬ್ದಾರಿ” ಇವತ್ತು ನಾವು ನಮ್ಮ ನಾಯಕರನ್ನು ಮತ್ತು ಆಡಳಿತಶಾಹಿಗಳನ್ನು ಕೇಳುತ್ತಿರುವ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಳ್ಳುವ, ಪ್ರತಿ ಸಲ ಇಂತಹ ಕೃತ್ಯ ನೆಡೆದ ೨-೩ ದಿನಗಳ ಕಾಲ ಅದನ್ನು ಇದೇ ರೀತಿ ಚರ್ಚಿಸಿ, ಸರ್ಕಾರವನ್ನು ಮತ್ತು ನಮ್ಮನ್ನು ಆಳುವವರನ್ನು ಬೈದಾಡಿ ಸುಮ್ಮನಾಗಿಬಿಡುತ್ತೆವೆ, ನಾವು ಸುಮ್ಮನಾದ ಮರುದಿನವೇ ನಮ್ಮ ನಾಯಕರುಗಳೂ ಕೂಡ (ಯಾಕೆಂದರೆ ಅವರು ನಮ್ಮಂಥವರೆ, ನಮ್ಮ ನಡುವಿನಿಂದ, ನಾವೇ ಆರಿಸಿ ಕಳುಹಿಸಿದವರು). ಯಾಕೇ ನಾವು ಈ ಸಾಮೂಹಿಕ ಜವಬ್ದಾರಿಯಿಂದ ಹಿಂಜರಿದು ಎಲ್ಲವನ್ನು ನಮ್ಮ ನಾಯಕರ ಕೊರಳಿಗೆ ಸುತ್ತುತ್ತೆವೆ, ಇವತ್ತು ನಾವು ಟ್ರಾಫ್ಹಿಕ್ಕಿನಲ್ಲಿ ಸಿಕ್ಕಿ ಬಿದ್ದಾಗಲೂ ನಮ್ಮ ಬೈಗುಳಗಳೆಲ್ಲ ನಮ್ಮ ನಾಯಕರಿಗೆನೆ, ನಾವೇ ಅಥವಾ ನಮ್ಮ ಮುಂದೆಯೇ ನಮ್ಮ ನಡುವಿನ ‘ಜನಸಾಮಾನ್ಯ’ ಟ್ರಾಫಿಕ ಸಿಗ್ನಲ ಮುರಿದಿದ್ದು, ಬೈಕ ಸವಾರ ಫುಟಪಾಥ ಮೇಲೆ ಸವಾರಿ ಮಾಡಿಕೊಂಡು ಹೋಗಿದ್ದು ಕಂಡು ನಮಗೇನೂ ಅನ್ನಿಸುವುದೆಯಿಲ್ಲ, ಅವರನ್ನು ಹಿಡಿದು ಹೀಗ್ಯಾಕೆ ಎಂದು ಕೇಳುವ ಸ್ಥೈರ್ಯ ಮತ್ತು ನೈತಿಕತೆ ನಮ್ಮಲ್ಲಿ ಉಳಿದಿಲ್ಲ, ಹಾಗೆಯೇ ಈಗ ಬೈದಿರುವ, ಬೈಯುತ್ತಿರುವ ಎಲ್ಲ ಬ್ಲಾಗರಗಳನ್ನು, ಮಾಧ್ಯಮದವರನ್ನು ಅದೇ ನಾಯಕರ ಬಳಿ ನಿಲ್ಲಿಸಿದರೇ ತೋದಲಿಯಾರು, ಯಾಕೆಂದರೇ ನಮ್ಮಲ್ಲಿ ಆ ನೈತಿಕತೆ ಉಳಿದಿಲ್ಲ, ನಾಕೆಂದರೆ ಮೂಲಭೂತವಾಗಿ ಹಲವಾರು “ಜವಾಬ್ದಾರಿಗಳಿಂದ” ಹಿಂಜರಿದವರು, ಮತ್ತು ದೂರ ಸರಿದವರು ನಾವು, ಮತ್ತೊಬ್ಬರ ಜವಾಬ್ದಾರಿ ಕೇಳಲು ನಾವು ಜವಾಬ್ದಾರರಾಗಿರಬೇಕು. ನಮ್ಮಲ್ಲಿ ಎಷ್ಟು ಜನ ಜವಾಬ್ದಾರಿಯುತವಾಗಿ ವೋಟ ಮಾಡುತ್ತೆವೆ? ನಮ್ಮಲ್ಲಿ ಎಷ್ಟು ಜನ ನಮ್ಮ ಸುತ್ತಮುತ್ತಲ ಪ್ರದೇಶ, ಆಫೀಸು, ಬಸ್ಸು ಮತ್ತು ರೈಲು ನಿಲ್ದಾನಗಳಲ್ಲಿ ಜವಾಬ್ದಾರಿಯುತ ನಾಗರೀಕರಂತೆ ಸುತ್ತಲಿನ ಪರಿಸರವನ್ನು ಗಮನಿಸುತ್ತೆವೆ ಮತ್ತು ಅಪಾಯಕಾರಿ ವಸ್ತುಗಳಂತೆ ಗೋಚರಿಸುವ ವಸ್ತುಗಳ ಬಗ್ಗೆ ಪೋಲಿಸರಿಗೆ ತಿಳಿಸಿ, ಪೋಲಿಸರು ಬರುವವರೆಗೂ ಜನರು ಅದರ ಬಳಿಗೆ ಸುಳಿಯದಂತೆ ಕಾಯುತ್ತೆವೆ, ನಮ್ಮ ಎಷ್ಟು ಜನ ಯಾರೋ ಒಬ್ಬರನ್ನು ನೋಡಿ ಸಂದೇಹ ಬಂದಾಗ ಕೇಳಿದ್ದಿದೆ, “ನೋಡಿ ಇದು ನನ್ನ ಐ.ಡಿ. ಕಾರ್ಡ, ನಾನು ಇಂತಹ ಕಂಪನಿಯಲ್ಲಿ ಹೀಗಿಗೆ ಕೆಲಸ ಮಾದುತ್ತಿರುವೆ, ದಯವಿಟ್ಟು ನಿಮ್ಮ ಐ.ಡಿ. ಪ್ರೂಫ ತೋರಿಸುತ್ತಿರಾ” ಎಂದು ಕೇಳಿದ್ದಿರಾ? ಕೆಲವು ಸಲ ಎದುರಿನವರಿಗೆ ಬೇಜಾರಾಗಬಹುದು, ಆದರೆ ಅವನ ಉದ್ದೇಶ ಕೆಟ್ಟದ್ದೆ ಆಗಿದ್ದರೆ ಅದನ್ನು ಕಾರ್ಯರೂಪಕ್ಕಿಳಿಸಲು ಹಿಂಜರಿಯುತ್ತಾನಲ್ಲವೇ? ಎಕೆಂದರೆ ನಮ್ಮ ಜೀವದ ರಕ್ಷಣೆಯ ಭಾರ ಪೂರ್ತಿಯಾಗಿ ಸರ್ಕಾರದ್ದಲ್ಲ, ಜೀವವನ್ನು ಬಳಿಯಿರಿಸಿಕೊಂಡು ಓಡಾಡುವ ನಮ್ಮ ಜವಾಬ್ದಾರಿ ಕೂಡ. ಮೊನ್ನೆ ಮುಂಬಯಿಯಲ್ಲಿ ನೆಡೆದ ಶಾಂತಿ ಯಾತ್ರೆಯ ಕೆಲವು ಭಿತ್ತಿಗಳು ನನಗಿಲ್ಲಿ ನೆನಪಾಗುತ್ತಿವೆ: “We want to feel Safe again”, “We dont need Resignations, we need Responsibility and Result”
  • ಎಲ್ಲರೂ ಕೂಡಿಯೇ ಹೋರಾಡೋಣ. ಇದು ಕೇವಲ ನನ್ನ-ನಿನ್ನ ಹೋರಾಟವಲ್ಲ, ಇದು ನಮ್ಮ ಹೋರಾಟ. ನಮ್ಮ ಮನೆಯ ಹೋರಾಟ, ಉಗ್ರವಾದದ ಎದುರು ಕೋನೆಯ ಹೋರಾಟ.”

ಅಭಿಪ್ರಾಯಗಳಿಗೆ ನೀವೇನು ಹೇಳುತ್ತೀರಾ?
ನಮ್ಮೆಲ್ಲರ ಜೊತೆ ನಿಮ್ಮ ಅಭಿಪ್ರಾಯವನ್ನು ಸೇರಿಸಬೇಕೆಂದು ಅನ್ನಿಸುತ್ತಿಲ್ಲವೇ ?
ನೀವು ಮಾತನಾಡಿ. ನಿಮ್ಮಲ್ಲಿನ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ.
ಮುಂದೆ ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ ? ಹೇಳಿ, ನಾವೆಲ್ಲ ಶಾಂತರಾಗಿ ಕೇಳುತ್ತೇವೆ.

ಕಪ್ಪು ಹಣೆ ಪಟ್ಟಿ ಪ್ರದರ್ಶನ-ಮುಂದೆ………(ಭಾಗ ೧)

ಡಿಸೆಂಬರ್ 10, 2008

ಪ್ರದೀಪ

  • “ಪ್ರತಿಭಟನೆ, ಆಂದೋಲನ, ಇವೆಲ್ಲವೂ ಬೇಕು. “ಇದಕ್ಕೆ ನನ್ನ ವಿರೋಧವಿದೆ” ಅಂತ ಬಹಿರಂಗವಾಗಿ ಬರಹ ಹೊತ್ತು ತಿರುಗುವುದೂ ಬೇಕು. ಆದರೆ ಯಾರ ವಿರುಧ್ಧ? ಭಯೋತ್ಪಾದಕರ ವಿರುದ್ಧವೇ? ಮೊದಲು ಪ್ರತಿಭಟನೆ, ಆಂದೋಲನ ಬೇಕಾಗಿರುವುದು ನಮ್ಮ ಕೆಟ್ಟು ಹೋಗಿರುವ ವ್ಯವಸ್ಥೆಯ ವಿರುದ್ಧ. ಸ್ವಾರ್ಥ ರಾಜಕಾರಣದ ವಿರುಧ್ಧ. ಓಬಿರಾಯನ ಕಾಲದ 0.303 rifleಗಳನ್ನು ಹಿಡಿದು ನಿಂತಿದ್ದ ಪೋಲೀಸರು a.k.47 ಹಿಡಿದು ಗುಂಡಿನ ಸುರಿಮಳೆಯನ್ನು ಹರಿಸಿದ ಉಗ್ರರನ್ನು ಹೇಗಾದರೂ ಎದುರಿಸಿ ಹಿಮ್ಮೆಟ್ಟುತ್ತಿದ್ದರು?. ಆಡಳಿತದ ನಿರ್ಲಕ್ಷ್ಯವಿಲ್ಲದಿದ್ದರೆ, ಇಂತಹ ಮಾರಣಹೋಮದ ಘಟನೆಗಳು ಈಗಾಗುವಷ್ಟು ಪ್ರಬಾವಶಾಲಿಗಳಾಗುತ್ತಿರಲಿಲ್ಲ. ಒಂದು ದೇಶವೆಂದರೆ ಅದಕ್ಕೆ ವೈರಿಗಳು ಯಾವತ್ತೂ ಇರುತ್ತಾರೆ. ಆದರೆ, ಆ ವೈರಿಗಳ ದಾಳಿಯನ್ನು ಹಿಮ್ಮೆಟ್ಟಲು, ಮೀರಿಸಲು, ಆ ದೇಶದ ವ್ಯವಸ್ಥೆ, ಆಡಳಿತ, ಆಂತರಿಕ ಭದ್ರತೆ ಶಕ್ತಿಶಾಲಿಯಾಗಿರಬೇಕು. ಹೇಗೆ ದೇಹವೊಂದು ಆಂತರಿಕವಾಗಿ ಶಕ್ತವಿಲ್ಲದಿದ್ದರೆ ಹೊರ ರೋಗಗಳ ದಾಳಿಗೆ ತುತ್ತಾಗುವ ಸಂಭಾವನೆ ಹೆಚ್ಚೋ, ಅಂತೆಯೇ ದೇಶ ಕೂಡ…ಈಗ ಹೇಳಿ, “ನನ್ನ ವಿರೋಧವಿದೆ” ಅಂತ ಯಾರ ವಿರುದ್ಧ ಕೂಗೋಣ?

ಡೀಎಸ್ಸಾರ್

  • “ನಿಮ್ಮ ಅನಿಸಿಕೆಗಳು ರಾಗ-ದ್ವೇಷಗಳ ಸೋಂಕಿಲ್ಲದ ಸದ್ಯದ ಸಂಕಟವನ್ನು ನಮ್ಮ ಮಿತಿಯಲ್ಲಿ ಎದುರಿಸುವ ಮತ್ತು ಸಾಧ್ಯವಾದಷ್ಟೂ ಮನುಷ್ಯ ಪ್ರೀತಿಯನ್ನು ಒಂದುಗೂಡಿಸುವ ಸೇತುವೆಯಾಗಿದೆ. ನಿಮ್ಮೆಲ್ಲ ಹಂಬಲವನ್ನು ಹಂಚಿಕೊಳ್ಳಲು ಅದಕ್ಕೆ ಸ್ಪಂದಿಸಲು ಸರತಿ ಸಾಲು ಸಿದ್ಧವಾಗುತ್ತಿದೆ. ಅಭಿನಂದನೆ.ನಿಮ್ಮ ಜೊತೆಗೆ ನಾವಿದ್ದೇವೆ. “

ಉಷಾ

  • ನಾನು ನಿಮ್ಮಂತೆ ಬರೆಯುವವಳಲ್ಲ.. ಬರಿ ಓದುವವ್ಲು.. ITಕಂಪನೀಲಿ ಕೆಲಸ ಮಾಡ್ತಿದ್ದೇನೆ.. ನಿಮ್ಮ ಆಲೋಚನೆ ಇಷ್ಟವಾಯಿತುಅನುಭವಿ ಬ್ಲಾಗಿಗರ ಕಾಮೆಂಟ್ಸ್ ಕೂಡನೀವು ಹೀಗೆ ಲೋಗೊ ಮತ್ತು ಸ್ಲೊಗನ್ ಗಳನ್ನು ಮಾಡಿದ್ದೆ ಆದರೆ ಪ್ರಿಂಟಬಲ್ ಫೊರ್ಮಾಟನ್ನು ನನಗೂ ಕಳಿಸಿ.. ನನ್ನ ಪರಿಚಯದವರಿಗೆಲ್ಲ ನಾನು ಕೂಡ ಹಂಚುತ್ತೇನೆ (ಆಫೀಸ್ ನವರಿಗೆ ಕೂಡ) . ಮೇಲೆ ತಿಳಿಸಿದಂತೆ ಅವರವರ ವಾಹನಗಳ ಮೇಲೆ ದೊಡ್ಡ ಸ್ಟಿಕರ್ ಅಂಟಿಸುವ ಹಾಗೆ ಹೇಳಿ ಕೊಡೋಣ ಎನ್ನುವುದು ನನ್ನ ಆಲೋಚನೆ.

ರಮೇಶ

  • “ಇದರ ಮುಂದೆ, ನಮ್ಮ ಪೋಲಿಸ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಮುಂದುವರೆದ ಸಲಕರಣೆಗಳು ಮತ್ತು ವೆಪನ್ಸ್ ಗಳಿಂದ ಸಜ್ಜುಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕು.

ವಿನಾಯಕ ಕೋಡ್ಸರ

  • “ನಿಮ್ಮ ಆಲೋಚನೆ ತುಂಬಾ ಇಷ್ಟಾಯಿತು. ನಿಜ ಇದು ಸಂಘಟನೆ ಮೂಲಕ ಆಗಬೇಕಾದ ಕಾರ್ಯ. ಇಲ್ಲಿ ಯಾರದ್ದು ಇಗೋ ಬರಬಾರದು. ಎಲ್ಲರೂ ನಿಮ್ಮ ಯೋಜನೆಗೆ ನಾಯಕರಾಗಿರಬೇಕು. ಈ ವರೆಗೆ ಸಾಕಷ್ಟು ಹೋರಾಟಗಳಾಗಿವೆ. ಸಾಕಷ್ಟು ಸಂಘಟನೆಗಳು ಹುಟ್ಟಿವೆ. ಅಂತಹ ಸಾಲಿಗೆ ಸೇರದ ವಿಭಿನ್ನ ಸಂಘನೆಗೆ ನೀವು ನನ್ನಿಂದ ಎಲ್ಲ ಬಗೆಯ ಕೆಲಸಗಳನ್ನು ನೀರಿಕ್ಷಿಸಬಹುದು. ನಿಮ್ಮ ಸಲಹೆಗಳು ಬೇಗ ಕಾರ್ಯರೂಪಕ್ಕೆ ಬರಲಿ. ಸಾಧ್ಯವಾದರೇ ಆಸಕ್ತರ ತಂಡ ಒಂದೆಡೆ ಸೇರಿ ಮುಂದಿನ ಯೋಜನೆಗಳ ಜವಾಬ್ದಾರಿ ಹಂಚಿಕೊಂಡರೆ ಒಳಿತು ಅಂತಾ ನನಗನ್ನಿಸುತ್ತದೆ.”

ತೇಜಸ್ವಿನಿ ಹೆಗಡೆ

  • ಸಮಾಜಕ್ಕೆ ಒಂದು ಸಂದೇಶವನ್ನೀವ, ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸುವ ಲೋಗೋವನ್ನು ಹೊರತನ್ನಿ. ನನ್ನ ಬೆಂಬಲವೂ ಸಂಪೂರ್ಣವಿದೆ. “ಹನಿಕೂಡಿ ಹಳ್ಳ..ತೆನೆ ಕೂಡಿ ಕಣಜ” ಎಂಬ ಗಾದೆ ಮಾತಿದೆ. ಇಂದು ೪೦ ಜನ ಸೇರಿರಬಹುದು.. ನಾಳೆ ಹಲವಾರು ಜನ ಕೈಜೋಡಿಸದಿರರು. ಜೈಹಿಂದ್! “

ರಂಜನಾ ಹೆಗಡೆ

  • “ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಕ್ರೌರ್ಯವನ್ನು ದೂರದಿಂದಲೇ ನೋಡುತ್ತಾ, ಏನು ಮಾಡಲಾಗದೇ, ಸುಮ್ಮನೆಯೂ ಇರಲಾರದೇ ಇದ್ದಂತಹ ಸ್ಥಿತಿಯಲ್ಲಿದ್ದೆ. ಹೇಗಾದ್ರೂ ಇದನ್ನು ಕೊನೆಗಾಣಿಸಬೇಕು ಎಂಬ ಆಸೆ, ಆದರೆ ನನ್ನಿಂದ (ನನ್ನ ಕೌಟುಂಬಿಕಾ ಚೌಕಟ್ಟಿನೊಳಗಿದ್ದುಕೊಂಡು, ನನ್ನ ಕರ್ತವ್ಯಗಳನ್ನು ನಿಭಾಯಿಸಿಕೊಂಡು ) ಏನು ಮಾಡಲಾದೀತೆಂಬ ಯೋಚನೆ. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಭಯೋತ್ಪಾದನೆಯನ್ನು ವಿರೋಧಿಸುವತ್ತ ಇಟ್ಟ ಈ ಹೆಜ್ಜೆಗೆ ನಾನು ನನ್ನ ಸಹಕಾರವನ್ನು ಕೊಡಲು ಸದಾ ಸಿದ್ದ. ಹಿಂಸೆ, ಕ್ರೌರ್ಯಗಳಿಗೆ ಇತಿಶ್ರೀ ಹಾಡುವ ಇಂತಹ ಹೋರಾಟಾಗಳಿಗೆ ಯಾವತ್ತೂ ನನ್ನ ಬೆಂಬಲ ಇದೆ.”

ಸುಪ್ತದೀಪ್ತಿ

  • “ನಿಮ್ಮ ಯೋಚನೆಗಳು ಚೆನ್ನಾಗಿವೆ. ದೇಶೀಯವಾಗಿ ಮತ್ತೆ ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಮೌನ-ಸಂಘಟನೆ ಮಾಡಲು, ಅದಕ್ಕೊಂದು ರೂಪ, ಗುರುತು, ಧ್ಯೇಯ ಕೊಡುವುದು ಅಗತ್ಯ. ಅಂಥ ಲೋಗೋ ತಯಾರಾದಾಗ ನಾನೂ ಅದನ್ನು ಧರಿಸುತ್ತೇನೆ. ಅದರ ಸ್ಲೋಗನ್ ಮೂರೂ ಭಾಷೆಗಳಲ್ಲಿರಲಿ– ಕನ್ನಡ ಮೊದಲು, ಆಮೇಲೆ ಹಿಂದಿ; ಇಂಗ್ಲಿಷ್ ಕೂಡಾ ಇರಲಿ. ಜಾಗತಿಕವಾಗಬೇಕಾದರೆ ಇವು ಬೇಕಲ್ಲ!ನಿಮ್ಮ ಜೊತೆಗೆ ನಾನೂ ಸಾಗಿ ಬರುತ್ತೇನೆ.” 

ಶ್ರೀ

  • “ಉತ್ತಮ ಸಲಹೆ. ಆದರೆ, ನಮ್ಮ ಸುತ್ತಲ ಬಹಳಷ್ಟು ವಿಚಾರಗಳು ನಮಗೆ ಸಂಬಂಧಿಸಿದವಲ್ಲ ಎಂಬ ಮನೋಭಾವ ನಮ್ಮಲ್ಲಿ ವರ್ಷಾನುಗಟ್ಟಲೆಯಿಂದ ಬೇರೂರಿದೆ. ಅದನ್ನು ನಮಗೆ ಬದಲಾಯಿಸಲು ಸಾಧ್ಯವಾದರೆ ಎಲ್ಲವೂ ಬದಲಾಗುತ್ತದೆ ಎಂಬ ನಂಬಿಕೆ ನನ್ನದು.
  • ಇದಕ್ಕೋಸ್ಕರವೇ ನಾಗರಿಕ – http://naagarika.blogspot.com ಎಂಬ ಬ್ಲಾಗನ್ನು ಶುರುಮಾಡಿದ್ದೆವು ನಾವು, ಒಂದಷ್ಟು ಮಂದಿ ಸೇರಿಕೊಂಡು. ಬಹುಶ: ಅದರಲ್ಲಿ ಬರೆಯುವ ವಿಚಾರಗಳು ಮತ್ತು ಉದ್ದೇಶ relevant ಅಂತ ಅನಿಸಲಿಲ್ಲವೋ, ಅಥವಾ ಅದನ್ನು ಓದಲು ಮತ್ತು ಅನಿಸಿಕೆ ತಿಳಿಸಲು ವಿಚಾರವಂತರಿಗೆ ಸಮಯ ಸಿಗುವುದಿಲ್ಲವೋ, ಅಥವಾ ಹೀಗೊಂದು ಬ್ಲಾಗ್ ಇರುವುದು ಯಾರ ಗಮನಕ್ಕೂ ಬಂದಿಲ್ಲವೋ, ಕಾರಣವೇನೋ ಗೊತ್ತಿಲ್ಲ, ನನಗೆ ಕೂಡ 100 ಶೇಕಡಾ ಅದಕ್ಕೆ ಹಾಕಲು ಸಮಯವಿರಲಿಲ್ಲವಾದ ಕಾರಣ, ಯಾವಾಗ ಸಾಧ್ಯವೋ ಆವಾಗ ಮಾತ್ರ ಏನಾದರೂ ಬರೆಯುತ್ತಿದ್ದೆ. ಆದರೆ only I have been writing most of the times, it has been a miserable failure, with no reaction, no argument, nothing. The imagination in which I have started was not this.
  • ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು ಎಂಬ ವಿಚಾರದ ಬಗ್ಗೆ ಆಧಾರ ಸಹಿತ ಬರೆದಿದ್ದೆ ನಾಗರಿಕದಲ್ಲಿ ನಾನು, ಆದರೆ ಇವತ್ತಿಗೂ ಮಾಧ್ಯಮಗಳಲ್ಲಿ ಬರುವ ವರದಿಗಳು ಹೊಗೇನಕಲ್ಲನ್ನು ಕರ್ನಟಕದಲ್ಲೇ ಇಟ್ಟುಕೊಂಡಿವೆ. ಹಾಗೆಂದು ಅವರಿಗೆ ಗೊತ್ತಿಲ್ಲದೆ ಖಂಡಿತಾ ಅಲ್ಲ, ಹೊಗೇನಕಲ್ಲನ್ನು ತಮಿಳುನಾಡಿಗೆ ಸೇರಿಸಿಬಿಟ್ಟರೆ ಕರ್ನಾಟಕದಲ್ಲಿ ಕಿಚ್ಚು ಹಚ್ಚಬಹುದಾದ ಅತಿ ದೊಡ್ಡ ಟಾಪಿಕ್ಕೇ ಸತ್ತುಹೋಗುತ್ತದೆಯಲ್ಲ, ಅದಕ್ಕೆ. ಯಾವುದೇ ವ್ಯವಸ್ಥೆಯಿರಲಿ, ಇಂತಹದ್ದು ಕಂಡರೆ ಪ್ರಶ್ನಿಸುವ ಮನೋಭಾವ ನಾವಿನ್ನೂ ಬೆಳೆಸಿಕೊಂಡಿಲ್ಲ, ಅದಕ್ಕೇ ನಮ್ಮ ವ್ಯವಸ್ಥೆಗಳು ಹೀಗಿವೆ. ಬಹುಶ: ತುಂಬಾ ಡೀಟೈಲ್ಡ್ ಆದ ಮಾಹಿತಿ ಪಡೆದುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಯಾರಿಗೂ ಬೇಕಿಲ್ಲ ಈಗ, ಸುಮ್ಮನೇ ಮೇಲಿಂದ ಮೇಲೆ ನೋಡಿ ಅವಸರದ ಮತ್ತು ಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಮಗೆಲ್ಲ ಅಭ್ಯಾಸವಾಗಿದೆ.
  • ಹಾಗಾಗಿ ಒಂಥರಾ ಬೇಜಾರಾಗಿದೆ, ಸಂಘಟಿತವಾಗಿ ಏನಾದರೂ ಮಾಡುವ ಕಲ್ಪನೆ ತುಂಬಾ ಹಳೇದಾಗಿದೆಯೇನೋ ಅನಿಸಿದೆ ನನಗೆ. ಮುಂಬೈ ಘಟನೆಗೆ ಸ್ಪಂದಿಸಲೇಬೇಕಿದ್ದ ನಾಗರಿಕ ಇಲ್ಲಿವರೆಗೆ ಸುಮ್ಮನಿದೆ. ಯಾರೂ ಏನೋ ಒಂದು ಅರ್ಥಪೂರ್ಣವಾದ, ಪ್ರಾಯೋಗಿಕವಾಗಿ ಸಾಧ್ಯವಿರುವಂತಹುದನ್ನು ಮಾಡುವ ಯತ್ನ ಮಾಡಿಲ್ಲ, ನನ್ನನ್ನೂ ಸೇರಿಸಿ.
  • ಅವರವರ ಬದುಕು ಅವರವರಿಗೆ, ಸಾಮಾಜಿಕ ಪ್ರಜ್ಞೆ, ನಾಗರಿಕ ಪ್ರಯತ್ನಗಳು, ವಿಚಾರಗಳು ಎಲ್ಲವೂ ಅರ್ಥಕಳೆದುಕೊಂಡಿವೆಯೇನೋ ಅಂತ ಕೆಲದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈಗ ನಿಮ್ಮ ಪ್ರಯತ್ನ ನಂಗೂ ಏನೋ hope ಹುಟ್ಟಿಸಿದೆ. ನನ್ನ ಸಹಕಾರ ನಿಮ್ಮ ಯತ್ನಕ್ಕೆ ಖಂಡಿತಾ ಇದೆ. ನಾಗರಿಕ ಬ್ಲಾಗ್ ನೋಡಿ, ನಿಮ್ಮ ಯೋಜನೆಗೆ ಅದರ ಮೂಲಕ ಏನಾದರೂ ಮಾಡಲು ಸಾಧ್ಯವೆನಿಸಿದರೆ ನಮಗೆ ತಿಳಿಸಿ, ಎಲ್ಲಾ ಸೇರಿ ಹೇಗೆ ಏನು ಅಂತ ಯೋಚನೆ ಮಾಡಿ ಮುಂದೆ ತಗೊಂಡು ಹೋಗೋಣ. ಅದಲ್ಲದೇ ನೀವೇ ಏನಾದರೂ ಮಾಡುವುದಿದ್ದರೂ ಸಹಕಾರ ಖಂಡಿತಾ ಇದೆ…”

ಅಭಿಪ್ರಾಯಗಳಿಗೆ ನೀವೇನು ಹೇಳುತ್ತೀರಾ?
ನಮ್ಮೆಲ್ಲರ ಜೊತೆ ನಿಮ್ಮ ಅಭಿಪ್ರಾಯವನ್ನು ಸೇರಿಸಬೇಕೆಂದು ಅನ್ನಿಸುತ್ತಿಲ್ಲವೇ ?
ನೀವು ಮಾತನಾಡಿ. ನಿಮ್ಮಲ್ಲಿನ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ.
ಮುಂದೆ ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ ? ಹೇಳಿ, ನಾವೆಲ್ಲ ಶಾಂತರಾಗಿ ಕೇಳುತ್ತೇವೆ.

ಕಪ್ಪು ಹಣೆ ಪಟ್ಟಿ ಪ್ರದರ್ಶನ – ಮುಂದೇನು ?

ಡಿಸೆಂಬರ್ 4, 2008

ಸಮಯವಿದ್ದರೆ ನನ್ನ ಬೇಡಿಕೆ ಪರಿಶೀಲಿಸ್ತೀರಾ? ಎಂದು ಕದ ತಟ್ಟಿ ಕೇಳಿದ ತತ್ ಕ್ಷಣ ಸ್ಪಂದಿಸಿ ಒಂದು ದಿನ ಬ್ಲಾಗ ಬಂದ್ ಮಾಡಿ, ಇಟ್ಟ ಹೆಜ್ಜೆ ಸರಿ ಇದೆ ಎಂದು ಪರೋಕ್ಷವಾಗಿ ಧೈರ್ಯ ತುಂಬಿ ಮುಂದಿನ ಮನೆಯ ಕದ ತಟ್ಟಲು ಪ್ರೇರೇಪಿಸಿದ ಅವಧಿಗೆ
ಮತ್ತು
ಕೋರಿಕೆಯನ್ನು ಕಡೆಗಾಣಿಸದೆ ತಲೆ ಪಟ್ಟಿಯನ್ನು ಕಪ್ಪಾಗಿಸಿಕೊಂಡು ಬೆಂಬಲಿಸಿದ ಎಲ್ಲರಿಗೂ ತುಂಬಾನೆ ಥ್ಯಾಂಕ್ಸ್.
ಹಾಗೇನೆ ತಮ್ಮ ತಮ್ಮ ಬ್ಲಾಗಿನಲ್ಲಿ ವಿಷಯವನ್ನು ಬರೆದು ಅದಕ್ಕೆ ಲಿಂಕ್ ಕೊಟ್ಟು ಸಹಕರಿಸಿದ ಬ್ಲಾಗಿಗರಿಗೂ ತುಂಬಾನೆ ಥ್ಯಾಂಕ್ಸ್ .

ಈಗ ನನ್ನ ಮುಂದಿರುವ ಕೆಲ ವಿಷಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.
ನಾನು
ನಾಲ್ಕು ಗೋಡೆ ಮಧ್ಯ ಕೂತು ಕಿಟಕಿ ಮತ್ತು ನೆಟ್ ಮೂಲಕ ಹೊರ ಜಗತ್ತನ್ನು ನೋಡುತ್ತಿರುವ ಗೃಹಿಣಿ. ಮೊನ್ನೆ ಮುಂಬಯಿಯಲ್ಲಿ ಆದ ಘಟನೆ ನಂಗೆ ಭಯೋತ್ಪಾದನೆಯ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು. ಇನ್ನೂ ಹೀಗೆ ಕೈ ಕಟ್ಟಿಕೊಂಡು ಕುಳಿತರೆ ಮುಂದೊಂದು ದಿನ ನಾವೆಲ್ಲ ಇದಕ್ಕೆ ಬಲಿಯಾಗುತ್ತೇವೆ ಎಂದೆನಿಸಿತು. ಏನಾದರೂ ಮಾಡಲೇಬೇಕು ಎಂದು ಮನಸ್ಸು ತುಡಿಯುತ್ತಿತ್ತು. ಹಾಗಂತ ಹೊರಹೋಗಿ ಭಯೋತ್ಪಾದಕರನ್ನು ಮತ್ತು ಅವರಿಗೆ ಸಹಕಾರವನ್ನು ನೀಡುತ್ತಿರುವವರ ವಿರುದ್ಧ ಬಹಿರಂಗವಾಗಿ ಕಾದಾಡಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನ ಸುತ್ತ ಸಂಸಾರದ ಹೊದಿಕೆಗಳಿವೆ. ಇಲ್ಲಿನ ಕರ್ತವ್ಯಗಳನ್ನು ನಿಭಾಯಿಸುತ್ತಾ ಹೊರಜಗತ್ತಿನ ಅದೂ ನನ್ನದೇ ದೇಶದ ಸಮಸ್ಯೆಗೆ ಸ್ಪಂದಿಸಬೇಕು. ಆಗ ಹೊಳೆದದ್ದು I PROTEST ಅನ್ನೋ ಐಡಿಯಾ. ಅಂದರೆ ಒಂದು ಚಿಹ್ನೆಯ ಮುಖಾಂತರ ಭಯೋತ್ಪಾದನೆಯನ್ನು ವಿರೋಧಿಸುವುದು. ಮುಖವಿಲ್ಲದ ವೈರಿಯನ್ನು ಮುಖವಿಲ್ಲದ ಅಸ್ತ್ರದಿಂದ ಸೆಣೆಸುವುದು. ಇದಕ್ಕೆ ಸಂಬಂಧಿಸಿದ ಒಂದು ವೆಬ್ ಸೈಟ್ ನ್ನು ಮಾಡಿ ಪ್ರಚಾರಮಾಡುವುದುಜನರನ್ನು ಸೇರಿಸಿ ಒಂದು ಸಂಘಟನೆಯನ್ನು ಮಾಡುವುದು. ನಮ್ಮ ಉಸ್ತುವಾರಿಯನ್ನು, ರಕ್ಷಣೆಯನ್ನು ನಾವೇ ನೋಡಿಕೊಳ್ಳೋದು…………….. ಹೀಗೆ ಇದರ ರೂಪು ರೇಷೆಗಳನ್ನು ಹೆಣೆಯುತ್ತಾ ನನ್ನಷ್ಟಕ್ಕೆ ಕೂತಿದ್ದೆ. ಹೊತ್ತಲ್ಲಿ ವೈಶಾಲಿಯವರು ಮಾತನಾಡಿಸಿದರುನಾವು ಏನಾದರೂ ಮಾಡೋಣ ಅಂತ ಹೇಳುತ್ತಿದ್ದರು. ಹಾಗೇನೇ ಮಾತನಾಡುತ್ತಾ ಕಪ್ಪು ತಲೆ ಪಟ್ಟಿ ವಿಷಯ ತಲೆಗೆ ಹೊಳೆಯಿತು. ಎಲ್ಲ ತಪ್ಪನ್ನು ಎತ್ತಿ ತೋರಿಸುತ್ತಾ ಬರೆಯುವ ಲೇಖನಕ್ಕಿಂತಲೂ ಏನಾದರೂ ಕೃತಿಯಲ್ಲಿ ಮಾಡೋಣ ಅನ್ನಿಸಿತು. ಹೌದು, ನಾನು ಇನ್ನೊಂದು ಬ್ಲಾಗ್ ತೆಗೆದು ಅದನ್ನು ಪೋಪ್ಯುಲರ್ ಮಾಡುತ್ತಾ ಹೆಣಗುವುದರ ಬದಲು ನನ್ನ ಬ್ಲಾಗಿನ ಓದುಗರ ಸಹಕಾರದಿಂದಲೇ ಹೀಗೊಂದು ಆಂದೋಲನ ಏಕೆ ಪ್ರಾರಂಭಿಸಬಾರದೆಂದು ಅನ್ನಿಸಿತು. ನಾನಾಗಲೇ ಹೋದ ಗುರುವಾರದಿಂದ ಧಾಳಿಗೆ ಪ್ರತಿರೋಧವಾಗಿ ಹಣೆಪಟ್ಟಿಯನ್ನು ಕಪ್ಪಾಗಿ ಮಾಡಿ ಗುಮ್ಮನೆ ಕೂತಿದ್ದೆ. ಅದನ್ನೇ ಉಪಯೋಗಿಸಿಕೊಂಡು ಜಾಸ್ತಿ ಜನರ ಕಣ್ಣು ಕೆಂಪಾಗಿಸುವ ಒಂದು ಲೇಖನ ಬರೆದು ಇನ್ನೊಂದರಲ್ಲಿ ಹೀಗೆ ಮಾಡೋಣವೇ ಎಂದು ಕೇಳಿದ್ದು.

ಬದುಕ್ಕಿದ್ದೀನಿಲಿ ನಾನು ಏನು ಹೇಳ್ತಾ ಇದ್ದೀನಿ ಎಂದು ಗಮನಿಸದೇ ನಾನು ಕೊಟ್ಟ ಸ್ವಂತ ಉದಾಹರಣೆಯನ್ನು ಮನಸ್ಸಿಗೆ ತಾಗಿಸಿಕೊಂಡವರೇ ಜಾಸ್ತಿ. ವಾಕ್ಯವನ್ನು ಪ್ರತ್ಯೇಕಿಸಿ ನೋಡುವ ಬದಲು ಇಡೀ ಪ್ಯಾರಾದ, ಲೇಖನದ ಅರ್ಥವನ್ನು ಹೆಚ್ಚಿನ ಜನ ಮಾಡಿಕೊಳ್ಳಲಿಲ್ಲ. ಅಪಾರ್ಥಕ್ಕೆ ಕಾರಣವಾಯಿತು. ನನ್ನ ಓದುಗರೇ, ನಿಮ್ಮ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆಯಿರಲಿ.

ಈಗ ನೀವೆಲ್ಲರೂಹೀಗ್ಯಾಕೆ ಮಾಡಬಾರದುಎಂಬ ಮಾತನ್ನು ಕೇಳಿ ಕಪ್ಪು ಹಣೆ ಪಟ್ಟಿ ಅಂಟಿಸಿಕೊಂಡು ಚಿಕ್ಕ ಸಂಘಟನೆಯನ್ನು ಹುಟ್ಟುಹಾಕಿದ್ದೀರಿ. ನಾನಿದ್ದೀನಿ, ನಾನಿದ್ದೀನಿ ಎನ್ನುತ್ತಾನಾನುಹೋಗಿನಾವುಆಗಿದ್ದೇವೆ. ಸುಮಾರು ೪೦ಕ್ಕೂ ಹೆಚ್ಚು ಜನ ಒಟ್ಟಾಗಿದ್ದೇವೆ. ನಿಜಕ್ಕೂ ಸಂತಸದ ವಿಷಯ.

ಒಗ್ಗಟ್ಟನ್ನೂ ಇಲ್ಲಿಗೆ ಕೈ ಬಿಡುವುದೇ ? ಅಥವಾ ಇನ್ನೂ ಒಂದಿಷ್ಟು ಜನರನ್ನು ಸೇರಿಸಿ ಪ್ರಬಲ ಸಂಘಟನೆಯನ್ನು ಮಾಡುವುದೇ? ಇದು ನಮ್ಮೆಲ್ಲರ ನಡುವಿನ ಚಿಕ್ಕ ಪ್ರಶ್ನೆ. ಹಾಗೇನೆ ಏಷ್ಟು ದಿನ ಅಂತ ಕಪ್ಪು ಹಣೆ ಪಟ್ಟಿ ಹಾಕಿ ಕೊಳ್ಳೊದು ? ಒಂದು ತಿಂಗಳೇ? ಒಂದು ವರ್ಷವೇ ? ………. ಕ್ರಮೇಣ ಕಪ್ಪು ಹಣೆ ಪಟ್ಟಿ ಬ್ಲಾಗಿನ ಡಿಸೈನ್ ನಲ್ಲಿ ಒಂದಾಗಲು ಬಿಡುವುದೇ? ಅಥವಾ ಚಿಹ್ನೆಯ ಮುಖಾಂತರ ನಮ್ಮ ಆಂದೋಲನವನ್ನು ಮುಂದುವರಿಸುವುದೆ?

ನಾನು ಈಗಾಗಲೇ ನನ್ನ ಕಲೀಗ್ ಹತ್ರ (ಗ್ರಾಫಿಕ್ ಆರ್ಟಿಸ್ಟ್) ಲೋಗೊ ಮಾಡಿಕೊಡಕೆ ಹೇಳಿದ್ದೇನೆ. ಅವರು ಎರಡು ಮೂರು ದಿನ ಬೇಕು ಅಂದಿದ್ದಾರೆ. ಹಾಗೇನೆ ನಮ್ಮಲ್ಲೇ ಯಾರಾದರೂ ಲೋಗೊ ಮಾಡಿಕೊಡುವುದಿದ್ದರೆ ಮುಂದೆ ಬನ್ನಿ. ಹಾಗೇನೆ ಸ್ಲೋಗನ್ ಕೂಡ. ಆದರೆ ಇದರ ಮೇಲೆ ನಿಮಗೆ ಹಕ್ಕಿರುವುದಿಲ್ಲ. ನೆನಪಿರಲಿ, ಇದು ಪಬ್ಲಿಕ್ ಪ್ರಾಪರ್ಟಿಯಾಗುತ್ತದೆ. ಹಾಗೇನೆ ಲೋಗೊ ಪ್ರಿಂಟೆಬಲ್ ಕೂಡ ಆಗಿರಬೇಕು. ಹೀಗೊಂದು ಲೋಗೊ ಅಂತ ಆದ ನಂತರ ನಾವೆಲ್ಲರೂ ಅದನ್ನು ನಮ್ಮ ಬ್ಲಾಗಿನಲ್ಲೂ ಧರಿಸಬಹುದುನಮಗೆ ಬೇಕಾದ ಹಾಗೆ ಚಿಹ್ನೆಯನ್ನು, ಸ್ಲೋಗನ್ ಗಳನ್ನು ಟಿ ಶರ್ಟ್ ಮೇಲೆ ಪ್ರಿನ್ಟ್ ಹಾಕಿಸಿಕೊಳ್ಳಬಹುದು. ಬೈಕ್ಕಾರ್ ಮೇಲೆ ಅಂಟಿಸಬಹುದು. ಕೀ ಬಂಚ್, ಪೆಂಡೆಂಟ್ ಮಾಡಿಕೊಳ್ಳಬಹುದು……… ಹೇಯ್, ಮುಖವಿಲ್ಲದ ಭಯೋತ್ಪಾದನೆಯೇ! ನಾನು ನಿನ್ನ ವಿರೋಧಿ ಎಂದು ಎದೆ ತಟ್ಟಿ ಹೇಳಬಹುದು. ಇದು ಯಾವ ಧರ್ಮವನ್ನು ವಿರೋಧಿಸುವುದಿಲ್ಲದ್ದರಿಂದ ಎಲ್ಲರೂ ನೆಮ್ಮದಿಯಿಂದ ಬಳಸಬಹುದು. ಚಿಹ್ನೆಯನ್ನು ನೋಡಿದ ತಕ್ಷಣ ನಮ್ಮ ಮೂಲಭೂತ ಕರ್ತವ್ಯಗಳನ್ನು ನೆನಪಿಸಬೇಕು. ರಾಷ್ಟ್ರ ವಿರೋಧಿ ಕೆಲಸದಲ್ಲಿ ಭಾಗಿಯಾಗದಂತೆ ತಡೆಯಬೇಕು. ಅಕ್ಕ ಪಕ್ಕ ಏನಾಗುತ್ತಿದೆ ಎಂದು ತಿಳಿಯದೇ ಗಡದ್ದಾಗಿ ನಿದ್ದೆ ಹೋಗದಂತೆ ಎಚ್ಚರಗೊಳಿಸಬೇಕುಸಮಾಜ ಘಾತುಕರನ್ನು ವಿರೋಧಿಸುವಂತೆ ಪ್ರಚೋದಿಸಬೇಕು. ಕನ್ನಡ ಬ್ಲಾಗಿಗರಿಂದ ಶುರುವಾದ ರಣ ಕಹಳೆ ಸಹ ಭಾಷೆಯ ಬ್ಲಾಗಿಗರನ್ನು ಮುಟ್ಟಬೇಕು. ಹಾಗೇನೆ ಇಡೀ ಬ್ಲಾಗ್/ಬ್ಲಾಗೇತರ ಪ್ರಪಂಚಕ್ಕೆ ಪಸರಿಸಬೇಕು.

ಆದರೆ ಹೀಗಾಗಲಿಕ್ಕೆ ನಮ್ಮಲ್ಲಿನ ಪ್ರತಿಯೊಬ್ಬನ ಸಹಕಾರವು ಅಗತ್ಯ. ಎಲ್ಲರಿಗೂ ನಾವು ಮಾಡುತ್ತಿರುವ ಕಾರ್ಯದ ಮೇಲಿನ ನಂಬಿಕೆಯೂ ಅಷ್ಟೇ ಅಗತ್ಯಮತ್ತೊಂದು ನಾವೆಲ್ಲರೂ ನೆನಪಿಡಬೇಕಾದ ಬಹು ಮುಖ್ಯ ಅಂಶ ಅಂದರೆ ಚಿಹ್ನೆಯ ಹಿಂದೆ ಯಾರೇ ಒಬ್ಬನ ಹೆಸರಿರುವುದಿಲ್ಲ. ಪ್ರತಿಯೊಬ್ಬನೂ ತನ್ನ ಹೆಸರನ್ನು ಇದರಲ್ಲಿ ಕೆತ್ತುತ್ತಾನೆ. ಜನರಿಂದ, ಜನರಿಗಾಗಿ, ಜನರಿಂದಲೇ ಆಗುತ್ತಿರುವ ಹೋರಾಟ.

ಈಗ ಹೇಳಿ, ಭಯೋತ್ಪಾದನೆಯನ್ನು ಮೂಲಕ ವಿರೋಧಿಸುವ ಕೆಚ್ಚು ಮ್ಮಲ್ಲಿ ಇನ್ನೂ ಉಳಿದಿದೆಯೇ ? ನಮ್ಮ ಕೊಂಡಿಗಳು ಕಾಲ ಕ್ರಮೇಣ ಕಳಚಿ ಹೋಗದಂತೆ ತಡೆಯಬಲ್ಲಿವೇ ? ಒಗ್ಗಟ್ಟು ಯಾರದ್ದೋಇಗೋದಿಂದ ಮರೀಚಿಕೆ ಆಗದಂತೆ ಕಾಪಾಡಬಲ್ಲೆವೇ ? ಕೇವಲ ಒಂದೆರಡು ದಿನ ಮಾತ್ರ ಕಪ್ಪು ಪಟ್ಟಿ ಪ್ರದರ್ಶಿಸಿದ್ದ ನಮ್ಮೊಳಗಿನ ಜನರನ್ನು ಮತ್ತೆ ವಾಪಸ್ಸು ಕರೆತರಬಲ್ಲಿವೇ ? ನಮ್ಮ ಮುಂದೆ ಸವಾಲು ಹಲವುಗಳಿವೆ. ಮೊದಲ ಹಂತದ ಪರೀಕ್ಷೆ ಸುಲಭವಿತ್ತು. ಎಲ್ಲ ಒಟ್ಟಿಗೆ ಪಾಸಾಗಿದ್ದೇವು. ಇನ್ನೂ ಮುಂದೆ ನೋಡಬೇಕು.

ಅರೆನಾನು ಆವಾಗಿನಿಂದ ಮಾತನಾಡುತ್ತಿದ್ದೇನೆ. ಇನ್ನಿಗ ನೀವು ಮಾತನಾಡಿ. ನಿಮ್ಮಲ್ಲಿನ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ. ಹಿಂಜರಿಕೆ ಸಲ್ಲದು. ಮನೆ ಮನ್ದಿಯೆದುರೇಕೆ ಮಜುಗುರ ? ಮುಂದೆ ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ ? ಹೇಳಿ, ನಾವೆಲ್ಲ ಶಾಂತರಾಗಿ ಕೇಳುತ್ತೇವೆ.

ಹೀಗ್ಯಾಕೆ ಮಾಡಬಾರದು ?

ಡಿಸೆಂಬರ್ 1, 2008

ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು?
ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿಯನ್ನು (ಕಪ್ಪು ಹಣೆಪಟ್ಟಿಗೆ) ಬದಲಾಯಿಸುವುದು. ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿ ಪ್ರದರ್ಶಿಸುವುದು.
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ? ಹೇಗೆ ಹನುಮಾನ್ ಕೀ ಬಂಚಗಳು, ವಾಚುಗಳು ಬಂದವೋ ಹಾಗೆ.

ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ ?
ಹಾಗೆನೇ
ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (“ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿ. ನನ್ನದು ಬಾಲಿ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.

ನನ್ನ ಓದುಗರೇ , ಹೀಗೆ ಮಾಡೋಣವೇ? ಏನಂತೀರಿ ??