Archive for the ‘ಆನೆ’ Category

आराधना

ಡಿಸೆಂಬರ್ 31, 2013

हमने उनको जिंदगी बनादीया
लेकिन उनकी जिंदगी कुछ अलग ही थी
हम कभी शबरी बने,
कभी मीरा, कभी राधा
रुक्मिणी बनने की चाह कभी न था
जिंदगी गुजरती गई, दिन पीगलते
रात भिगता, शिशिर ताड़पता

सोचा, खिड़की खोल दूं,
दिवार तोड़ दूं, दरवाजा नया बना लू
नई हवा की साथ चलदी
नये रास्ते देखीं, चट्टाणे छड़ी
लेकिन क्या, हर मंज़िल की पार ओ !
हम न अंदर उनको तोड़पाए,
न पूरी पीगाल पाए

उनसे पूछके भी करते क्या
मानना यही था की
हर जिंदगी साथ जीने के लिए नही
अलग रह कर भी एक दूसरे के लिए जीना
मन ज़ोर से चिल्लाता,
तो यहाँ लेखे आते क्यू
संगम होता ही नही

ओ हसकर बोलते
कौन सा मिलना, कौन सा जीना,
सिर्फ़ पात्र निभाओ,
कर्म करो
तुम मैं ही हूँ
मैं तुम भी हूँ
सब कुछ मैं ही तो हूँ

ಕಾಣಿಕೆ

ಡಿಸೆಂಬರ್ 1, 2013

ಹುಡುಗನೇ,
ಬೇಜಾರಿನ ದಾರಿಲೆಲ್ಲೋ ಸಿಕ್ಕಿ
ಬೆರಗಿನಿಂದ ಕೈ ಕೈ ಹಿಡಿದು ನಡೆದು
ಖುಷಿ ಖುಷಿಲಿ ಮುದ್ದಿಸಿಕೊಂಡು
ಕೋಪ, ಕಿರಿಕ್ ನಲ್ಲಿ ಗುದ್ದಿಸಿಕೊಂಡು
ಗೆದ್ದಾಗ, ಬಿದ್ದಾಗ ಎತ್ತಿಕೊಂಡು
ಇಷ್ಟ-ನಿಷ್ಟಗಳನ್ನು ಬೇರ್ಪಡಿಸಿ
ನಿನಗಿದು, ನನಗಿದು ಎಂದೆಲ್ಲ ಕುಣಿದುಕೊಂಡು
ಮಧ್ಯದಲ್ಲಿ ಇದಿಬ್ಬರಿಗೂ ಅಂತನೂ ನಕ್ಕುಕೊಂಡು
ಧ್ಯಾನದಲ್ಲಿ ಜೊತೆ ಜೊತೆಗೆ ಚಹಾ ಕುಡಿದುಕೊಂಡು
ಕಂಡಕಂಡೆಡೆ ಹೊತ್ತು ಗೊತ್ತಿಲ್ಲದೆ ಅಲೆದುಕೊಂಡು
ಹೇಗೇಗೋ, ಹಾಗಾಗೇ ಇಬ್ಬರೂ ಬದುಕಿಕೊಂಡು
ಆದ್ರೂನೂ ಇಬ್ಬರ ಮಧ್ಯ ಏನೂ ಹುಟ್ಟೇ ಇಲ್ಲ
ಎಂಬ ಸತ್ಯ-ಅಸತ್ಯದಲ್ಲಿ ತಲೆಕೆಡಿಸಿಕೊಂಡು
ಅನುರಾಗವಿಲ್ಲದೆ ಜೀವದ ತಂತಿ ಮೀಟುವುದಿಲ್ಲ
ಎಂದೆಲ್ಲ ತರ್ಕ-ವಿತರ್ಕದಲ್ಲಿ ಕುಗ್ಗಿಕೊಂಡು
ಹೀಗೊಂದು ಹೊಸದಾರಿ ಸೃಷ್ಟಿಸುವಲ್ಲಿ ಜಾಗೃತಗೊಂಡು
ಗುರಿಕಾಣದೆಡೆ ಎದ್ದು ನಿಂತಿರುವ ನಿನ್ನ ಖಾಲಿಪಿಲಿ ಹುಡುಗಿಯಿಂದ
ನಿನಗಿದೊ, ನನ್ನ ಶ್ವೇತ ಪ್ರೀತಿ

ಪ್ರೇಮಿ

ಜುಲೈ 7, 2013

ಪ್ರೀತಿಯಲ್ಲ ಇದು, ನಶೆ.
ಮದ್ಯವೇ ಬೇಕೆಂದಿಲ್ಲ ಅಮಲೇರಲು

ಇದರಿಂದ ದೂರವೇ ಇರಿ
ನಿಮಗೆ ಬೇಡ ಈ ಉಸಾಬರಿ
ಸುಮ್ಮನೆ ಹೋಗಿ ಬದುಕಿಕೊಳ್ಳಿ
ಕ್ಷಣ ಕ್ಷಣಕ್ಕೂ ಸಾಯುವವನಿಗೆ ಗೊತ್ತು
ಬದುಕು ಏಷ್ಟು ಅಮೂಲ್ಯ ಎಂದು

ಇದೊಂದು ಬೆಂಕಿ
ಒಮ್ಮೆಲೆ ಸುಡುವುದಿಲ್ಲ
ಇಂಚಿಂಚೂ ಬಗೆದು ಕೊಲ್ಲುತ್ತೆ
ಏನಕೆ ಬೇಕು ಇದು?
ಒಮ್ಮೇಲೆ ಸಾಯಿಸುವುದೂ ಇಲ್ಲ
ಇನ್ನೊಂದೆಡೆ ಬತ್ತುವುದೂ ಇಲ್ಲ

ಹರಿಯುತ್ತಿರುತ್ತೆ, ಸೆಳೆಯುತ್ತಿರುತ್ತೆ
ತನ್ನ ಕಬಂಧ ಬಾಹುಗಳ ಚಾಚಿ
ಜನ್ಮ ಜನ್ಮಾಂತರಕ್ಕೂ

ಕೇಳಿದ್ದು ಸತ್ಯವೇ,
ಒಬ್ಬನನ್ನು ಪ್ರೀತಿಸಬೇಡ
ಸಕಲ ಜೀವಿಗಳನ್ನು ಪ್ರೀತಿಸು ಎಂದು
ಆದರೇಕೆ, ಇಲ್ಲಿ, ಎದೆಯಲ್ಲಿ, ತಿವಿದ ನೋವು?
ಹೆಚ್ಚಾಗಿ ಇನ್ನೂ ಕಣ್ಣು ಬಿಡಬೇಕಷ್ಟೇ.

ಸಂಜೆ ಏಳು

ಏಪ್ರಿಲ್ 27, 2011

ನಿರ್ಧರಿಸಿದ ಕೆಲಸ ಮುಗಿಸಿ, ನಾಳಿನ ಕೆಲಸದ ರೂಪುರೇಷೆ ರಚಿಸಿ,
ತೃಪ್ತಿಯಿಂದ ಲಾಗೌಟ್ ಆಗುವ ಹೊತ್ತು
ಕ್ಲಯಂಟ್ ಅಪ್‌ಲೌಡ್ ಇದ್ದಲ್ಲಿ ತಡರಾತ್ರಿಯ ಗಾಡಿಗೆ
ಫೆಸಿಲಿಟಿ ವಿಭಾಗಕ್ಕೆ ಮೇಲ್ ಅರ್ಜಿಸುವ ಹೊತ್ತು
ಇಲ್ಲದಿದ್ದಲ್ಲಿ ಮೂರು ನಿಮಿಷದ ಒಳಗೆ ನಿರ್ಧರಿತ ಸಮಯಕ್ಕೆ ತಪ್ಪದೇ ಚಾಲೂ ಆಗುವ
ಬಸ್ಸಿನ ಒಳಗೆ ಗಡಿಬಿಡಿಯಿಂದ ನುಗ್ಗಿ ಸೀಟಿನಲ್ಲಿ ನಿರಾಳವಾಗುವ ಹೊತ್ತು
ಮುಗಿಲ ಬಂಗಾರ ಕರಗಿ ನೀರಾಗಿ
ರೋಡು, ಫ್ಲೈಓವರು, ಮಾಲು, ಬಜಾರುಗಳ ಮೇಲೆ ಹರಡಿಕೊಳ್ಳುವ ಹೊತ್ತು
ಕೆಂಪು-ಹಸಿರು-ಹಳದಿ ಲೈಟುಗಳ ಮಧ್ಯೆ
ಹಾರ್ನು ಪೊಂಪೊಗಳ, ಗಾಡಿ ಚಕ್ರಗಳ ಸದ್ದಿನ ಹೊತ್ತು
ಮರಳಿ ಮನೆಗೆ ವಿಶ್ರಮಿಸಿ ಹಗುರಾಗಿ
ನಾಳೆ ಹೊಸ ಹುಮ್ಮಸ್ಸಿನಿಂದ ಬರುವ ಆಯಾಮದ ಹೊತ್ತು

ಏಕಾಂತ ಸಂಜೆಗಳಲ್ಲಿ,
ಬಾಲ್ಕನಿಯಿಂದ ಬೀಸುವ ತಣ್ಣಗಿನ ಗಾಳಿ
ಅನುಭವಿಸುತ್ತ ಕಳೆಯುವ ಹೊತ್ತು
ಬೆಳ್ಳಿ ಬೆಳಕು ಕಂದಿ ನಿಯಾನ್ ಬೆಳಕು
ಹೊತ್ತಿಕೊಳ್ಳುವ ಹೊತ್ತು
ಇರುವ ಚಿಕ್ಕ ಚಿಕ್ಕ ಏಲೆಗಳ ನಡುವಿನಿಂದ ಇಣುಕುವ ದೊಡ್ಡ ದೊಡ್ಡ ಏಲೆಗಳ ಪಾರ್ಕು
ತುಂಬಿ ತುಳುಕಾಡುವ ಹೊತ್ತು
ಚಂದ್ರನಿಲ್ಲದ ಬಾನಿಗಾಗಿ ಪಾರ್ಕಿನ ಸಾಲು ಸಾಲು ಬಿಳಿ ಗೋಲ ಬಲ್ಬುಗಳು
ಹೊತ್ತಿ ಚೆಲ್ಲುವ ಹೊತ್ತು
ಹಾಗೇನೆ ಇನ್ನೊಂದು ದಿನ ಮುಗಿಯಿತಲ್ಲ ಎಂದು ಹಪಹಪಿಸುತ್ತ
ಮತ್ತೆ ಬರೆಯದ ಪೆನ್ನೆತ್ತಿಕೊಂಡ ಹೊತ್ತು

ಮಣ್ಣ-ಕಂಪು

ಆಗಷ್ಟ್ 4, 2008

ಹೊಯ್ …..ರು,
ಅಕ್ಕೇ…….
……..ಇಲ್ಯೆ………………
……….ಹೌದೇ ?……………
………..ಮಳ್ಳೆಯಾ…….
…………….ಹಾಂಗಾರೆ…………………………ಹೇಳಿ
……………..ಅದ್ದೆಯಾ…………….
…………ಇಲ್ಯಪಾ…………..
ಹಾಂಗನೆ ? …………
…………….ಮಳ್ಳನೆ ?
…………..ಇಶ್ಶಿ ……………….ಇಶ್ಶಿಶ್ಶಿ……..
………..ಆಗಿಕ್ಕೆ……………………..
………..ಅಕ್ಕು…………
ಬತ್ತಿ ಅಕಾ

(ಸೂ.: ಇದನ್ನು ಸವಿಯಲು ಬಿಟ್ಟ(ಇಷ್ಟ) ಪದ ತುಂಬಿ ರಾಗವಾಗಿ ಒದಿಕೊಳ್ಳಬೇಕು)

ರಿಲಾಕ್ಸ್ ಹೇಗಿರುತ್ತೆ ಅಂದರೆ…

ಜುಲೈ 29, 2008

ಬದುಕಿನ ಜಂಜಾಟಗಳಲ್ಲಿ ಸಿಕ್ಕಿ
ಹೊರಗೆ ಬರುತ್ತಿರುವುದನ್ನು ಒಳಕ್ಕೆ ದಬ್ಬುತ್ತಾ
ಗುದ್ದಾಡುತ್ತಿರುವಾಗ…
ಸಿಕ್ಕ ಅವಕಾಶದಲ್ಲಿ ನೆಪ ಹೇಳಿ
ಮೆಲ್ಲನೆ ಅಲ್ಲಿಂದ ಜಾರಿಕೊಂಡು
ಅವಸರವಾಗಿ ಗುಡ್ಡಿಗೆ ಹೋಗಿ
ಲ್ಲಾ ಕಷ್ ಮಲಗಳನ್ನು
ಒಂದೇ ಉಸಿರಿಗೆ ಹೊರ ಹಾಕಿ
ಹೊಟ್ಟೆ ಖಾಲಿಯಾದಾಗ
ಆಗುವ ತಕ್ಷಣದ ಅನುಭವ!
ಉಫ್ !!

ಬಯಕೆ

ಫೆಬ್ರವರಿ 28, 2008

! ಮೋಡಗಳೇ,
ಕರೆದೊಯ್ಯೂವಿರಾ ನನ್ನ ನಿಮ್ಮ
ಬೆಳ್ಳಿಯ ಮೃದು ಮಧುರ ತೆಕ್ಕೆಯಲ್ಲಿಟ್ಟು
ಕೇಳುವಿರಾ ನನ್ನದೊಂದು ಪುಟ್ಟ ಬಯಕೆಯ
ಬೇರೆಯಬೇಕು ನಾನೂ ನಿಮ್ಮ ಹಾಗೆ ಗಾಳಿಯಲ್ಲಿ
ಬೆರೆತು ಸ್ವಚ್ಚಂದವಾಗಿ ತೇಲಬೇಕು ನೀಲಾಗಸದಲ್ಲಿ
ತೇಲುತ್ತ ಕರಗಬೇಕು ಇಳೆಯ ದಾಹದಲ್ಲಿ
ಕರಗಿ ಮತ್ತೆ ಘನಿಕೃತಳಾಗಬೇಕು ಮುತ್ತ ಹನಿಯಲ್ಲಿ
ಧೋ ಎಂದು ಮುಗಿ ಬಿಳಬೇಕು ಹಸಿದ ಭುವಿಯಲ್ಲಿ
ಬೀಳುತ್ತ ಒಂದಾಗಬೇಕು ಸತ್ವವುಳ್ಳ ಮಣ್ಣಿನಲ್ಲಿ
ಒಂದಾಗಿ ಅಲ್ಲಿಂದ ಚಿಗಿದೇಳಬೇಕು ಹಸಿರ ಕುಡಿಯಲ್ಲಿ
ಸತ್ತು ಮತ್ತೆ ಹುಟ್ಟಬೇಕು ನಾನು
ಕರೆದೊಯ್ಯೂವಿರಾ ನನ್ನ ನಿಮ್ಮ ಜೊತೆ ?

– written on Feb. 2002