ಈ ಹೆಂಡ್ತಿಗೂ ಬಂಗಾರದ ಮೀನಿಗೂ ಏಷ್ಟೆಲ್ಲಾ ಹೋಲಿಕೆ!
ತಿನ್ನಲು ಹೊತ್ತಿಗೆ ಸರಿಯಾಗಿ ಆಹಾರ
ಸದಾ ಹೊಳೆಯಿತ್ತಿರಲೆಂದೇ ಬೇಕಾಗುವಷ್ಟು ಬೆಳಕು ಮತ್ತು ಶಾಖ
ಜೀವಂತಿಕೆಗಾಗಿ ಅಲಂಕರಿಸಿದ ಮನೆ
ಬೇಸರಕ್ಕಾಗಿ ಸುತ್ತಲು ವಿವಿಧ ಸಾಮಾನುಗಳು
ಸಮಯಕ್ಕೆ ಸರಿಯಾಗಿ ಸ್ವಚ್ಛ ಹೊಸ ನೀರು
ಎಲ್ಲಕ್ಕಿಂತ ಜಾಸ್ತಿ ತುಂಬಾ ಪ್ರೀತಿ
ಆದರೆ ಇರಬೇಕಾಗಿದ್ದು ಮಾತ್ರ ನಾಲ್ಕು ಗೋಡೆ ಮಧ್ಯ
ಬಾಲ್ಯದಿಂದಲೂ ಬೆಳೆದದ್ದೂ ನಾಲ್ಕು ಗಾಜಿನ ನಡುವೆ
ನದಿಗೆ ಬಿಟ್ಟರೆ ತರಭೇತಿ ಇಲ್ಲದೇ ಸಾವ ಭಯ
ಅದಕ್ಕೆಂದೇ ದೊಡ್ಡ ಕೊಳ ಕಟ್ಟಿಸುವ ಆಸೆ
ಸುತ್ತ ಗೋಡೆ ಇದೆಯೆಂದು ಗೊತ್ತಾಗದಷ್ಟು !
ಸುಮ್ಮನೇ ಅನಿಸಿದ್ದು. ಬಯ್ಕೊಬೇಡಿ.
ನವೆಂಬರ್ 28, 2014 ರಲ್ಲಿ 3:47 ಅಪರಾಹ್ನ |
ಅಬ್ಬಾ, ಎಷ್ಟು ಚೆನ್ನಾಗಿ ಹೋಲಿಕೆಯನ್ನು ಕವನಿಸಿದ್ದೀರಿ!
LikeLike
ಡಿಸೆಂಬರ್ 4, 2014 ರಲ್ಲಿ 2:56 ಅಪರಾಹ್ನ |
🙂
LikeLike