ಹೀಗೆ …..

ಸುಮಾರು ಸಲ ನನಗೆ ನಾನು ‘social handicapped’  ಎಂದು ಅನ್ನಿಸುವುದುಂಟು. ಹೆಣ್ ಮಕ್ಕಳು ತನಗೆ ಮದುವೆ ಆಗಲಿಲ್ಲ ಎಂದು ಕೊರಗುವುದು ಕೇಳಿದರೆ ಅದೊಂದು ದೊಡ್ಡ ತಮಾಷೆ ನನಗೆ. ಶೇ! ಇವರಿಗೆ ಏನಾಗಿದೆ ಅಂತ. ಮದುವೆಯೇ ಹೆಣ್ಣಿನ ಬಾಳಿನ ಪರಮೊದ್ದೇಶ, ಸಂತಾನವೇ ಸ್ತ್ರೀ ಅನ್ನುವ ಪದಕ್ಕೆ ಬೆಲೆ ತಂದುಕೊಡುವುದು ವಗೈರೆಗಳು ನನಗೇನಕೆ ಅರ್ಥವಾಗುವುದಿಲ್ಲ! ಈ ಗಂಡ-ಹೆಂಡತಿ-ಮಕ್ಕಳು, ತನ್ನ ಸಂಸಾರ ಇದೆಲ್ಲ ನನಗೆ ಒಗ್ಗದ ಪದಗಳು. ನನ್ನ ಅರ್ಥೈಸಿಕೊಳ್ಳುವ ಪರೀಧಿಗೆ ಮೀರಿದ್ದು.

ಈಗೀಗ ನನಗೆ ಸಮಯಕ್ಕೆ ಸರಿಯಾಗಿ ಮದುವೆ ಆಗಬೇಕು ಅಂತನಿಸಿದಿದ್ರೆ ಚೆನ್ನಾಗಿರುತ್ತಿತ್ತೇನೋ ಅನ್ನಿಸುವುದುಂಟು. ಆದರೆ ಪ್ರೀತಿಸುವುದು ಅಂದರೆ ಮದುವೆ, ಮಕ್ಕಳು, ಸಂಸಾರ ಎಂದು ನಾನು ಭಾವಿಸಿಯೇ ಇರಲಿಲ್ಲ. ಹಾಗಾಗಿದ್ದಲ್ಲಿ ಇಷ್ಟಪಟ್ಟವನಲ್ಲಿ ನಾನೇ ಪ್ರಪೋಸ್ ಮಾಡಬಹುದಿತ್ತು. ತುಂಬಾ ಒಳ್ಳೆಯದಾಗಿದ್ದೇನಂದರೆ ಇವನೇ ನನ್ನ ಕೇಳಿದ್ದು. ಇಲ್ಲದಿದ್ದರೆ ನನಗೆ ಅವನೆಂದರೆ ಇಷ್ಟ ಅಂತ ಸುಮ್ಮನಿದ್ದು ಬಿಡುತ್ತಿದ್ದೆ.  ಹುಟ್ಟುವ ಭಾವನೆಗಳನ್ನು ಇನ್ನೊಬ್ಬನಲ್ಲಿಯೂ ಹೇಳಿಕೊಳ್ಳಬೇಕು, ನಾವೆಷ್ಟು ಪ್ರೀತಿಸುತ್ತೇವೆ ಎಂದು ಮಾತಿನಲ್ಲಿ ಬಿಚ್ಚಿ ಹೇಳಬೇಕು ಎಂದೆಲ್ಲ ಕಲಿತದ್ದು ಬಹಳ ತಡವಾಗಿ.

ಒಬ್ಬನ ಜೊತೆ ಇರಬೇಕು ಎಂದಾದಲ್ಲಿ ಅದಕ್ಕೆ ಮದುವೆ ಅಗತ್ಯ ಅನ್ನೋದು ಈಗಲೂ ನನಗೆ ಸರಿ ಕಾಣುವುದಿಲ್ಲ  ಮದುವೆ ಅಂತಾದಲ್ಲಿ ಮಾತ್ರ ಸಂಭಂಧ ಪವಿತ್ರವಾದದ್ದು, ನೈತಿಕವಾದದ್ದು ಅನ್ನೋದು ನನಗೆ ಅರ್ಥವೇ ಆಗದ ವಿಚಾರಗಳು.  ಅಧಿಕಾರ, ಹಕ್ಕು ಇವನ್ನೆಲ್ಲ ಒಳಗೊಳ್ಳುವ ಈ ದೈಹಿಕ ಸುಖ ಮತ್ತು ಸಂತಾನೋತ್ಪತ್ತಿ ನಿಜಕ್ಕೂ ಮನುಷ್ಯನಿಗೆ ಅಗತ್ಯವೇ ?

ನಾನು ಕಂಡಿರುವ ಹಲವು ಪತಿ-ಪತ್ನಿಯರು ಒಬ್ಬರನೊಬ್ಬರು ನೋಯಿಸುತ್ತಾ, ಬಯ್ದುಕೊಳ್ಳುತ್ತಾ, ಏಷ್ಟೇ ಕಷ್ಟವಾದರೂ ಈ ಮದುವೆಯೆಂಬ ಚೌಕಟ್ಟನ್ನು ದಾಟುವುದಿಲ್ಲ. ಕೇವಲ ‘ಗಂಡ’ ಎಂಬ ಮಾತ್ರಕ್ಕೆ ದುರ್ಬಲ ಮನುಷ್ಯನನ್ನು ಆರಾಧಿಸುವುದು, ಆತನ ತಪ್ಪುಗಳನ್ನು ಸಹಿಸಿಕೊಳ್ಳುವುದು ನನಗೆ ಸರಿಕಾಣದು. ಅದೇ ರೀತಿ ‘ಹೆಂಡತಿ’ ಅನ್ನುವ ಒಂದೇ ಕಾರಣಕ್ಕೆ ಆಕೆ ತನ್ನ ಜವಾಬ್ದಾರಿ, ಮರ್ಯಾದೆ ಎಂದೆಲ್ಲ ಸಹಿಕೊಳ್ಳುವುದು ಸಹಿತ.

‘ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ’ ಇದು ನಾನು ಕೇಳಿದ ಕೆಟ್ಟ ಗಾದೆ.  ಕ್ಷಣಿಕ ದೈಹಿಕ ಸುಖ ಎಲ್ಲದನ್ನೂ ಮೀರಿಸುತ್ತದೆಯಾ? ಹೀನಾಯವಾಗಿ ಬಯ್ದ ಬಾಯಿಗೆ ಮುದ್ದು ಕೊಡುವುದಾ? ಮದುವೆ ಇಬ್ಬರು ಮನುಷ್ಯರನ್ನು ಇಷ್ಟು ನೀಚ ಸ್ಥಿತಿಗೆ ಇಳಿಸಬಾರದಷ್ಟೆ. ನಮ್ಮ ಮಾನಸಿಕ ದೌರ್ಬಲ್ಯಕ್ಕೆ ‘ ಸಮಾಜದ ಹೆದರಿಕೆ’ ಎಂಬ ತಲೆಪಟ್ಟಿ ಬರೆದು ಸುಮ್ಮನಿರುವುದಾ? ಅಥವಾ ಹೆಣ್ಣು ಹುಟಿದ್ದೇ ಸಹಿಸಿಕೊಳ್ಳಲು ಅನ್ನುವ ಪುರುಷ ಸಮಾಜದ ಮೌಲ್ಯವನ್ನು ಅಪ್ಪಿಕೊಳ್ಳಬೇಕಾ?

ಎರಡು ಮನುಷ್ಯರಲ್ಲಿಯ ಸಂಭಂಧ ಈ ಗಂಡ-ಹೆಂಡಿರು ಅನ್ನುವುದನ್ನು ಮೀರಿ ಇರಬಾರದಾ? ಏನಕೆ ಈ ಒಂದು ಪರಿಧಿಯಲ್ಲೇ ನಮ್ಮನ್ನು ನಾವು ಕೊನೆಗಾಣಿಸಿಕೊಳ್ಳಬೇಕು? ಈ ಮೋಹ, ಬಂಧನಗಳನ್ನು ಕಳಚಿ ಹೊರನಡೆಯಬಾರದೆ ಮನುಜ?

ಈ ಜೊತೆ ಜೊತೆ ನಡೆಯುವ ಜೊಡಿಗಳು ಮದುವೆ ಅಂತ ಆಗದಿರಲಿ, ಆಗಿರಲಿ ನನಗೆ ಅದು ಮುಖ್ಯವಾಗುವುದಿಲ್ಲ. ಒಬ್ಬರನ್ನೊಬ್ಬರ ಜೊತೆ ಹೇಗೆ ನಿಭಾಯಿಸುತ್ತಾರೆ ಅನ್ನುವುದು ಮುಖ್ಯವಾಗುತ್ತದೆ. ವರ್ಷಗಳು ಕಳೆದಂತೆ, ಭಿನ್ನವಾಗುವ ಪರಿಸ್ಥಿತಿ ಮತ್ತು ಮನೋಸ್ಥಿತಿಗಳು ಜೊತೆಯಲ್ಲಿ ನಡೆಯುವವರ ಸಾಮರ್ಥ್ಯವನ್ನು ಪ್ರಶ್ನಿಸುತ್ತದೆ. ಅದು ದಿನ ಕಳೆದಂತೆ ವೃದ್ಧಿಯಾಗಬೇಕೆ ವಿನಹ ಕೋಪ, ಅಸೂಯೆ, ಸೆಡವುಗಳಲ್ಲಿ ಶಿಥಿಲವಾಗಬಾರದು. ಇದು ಎಲ್ಲ ರೀತಿಯ ಮನುಷ್ಯ ಸಂಭಂಧಗಳಿಗೂ ಅನ್ವಯವಾಯಿಸುತ್ತದೆ ಅನ್ನುವುದು ನನ್ನ ನಂಬಿಕೆ. ಅದಕ್ಕಾಗಿ ಮನುಷ್ಯ ಅಂತರಂಗಿಕವಾಗಿಯೂ, ಬೌದ್ಧಿಕವಾಗಿಯೂ ಬೆಳೆಯುವುದು ಅವಶ್ಯವಾಗುತ್ತದೆ.

ಏನಕೊ, ಈ ತಂದೆ ದೇವರು, ತಾಯಿ ದೇವರು, ಗಂಡ ದೇವರು, ಮಗು ದೇವರು,……. ಅರ್ಥವೇ ಆಗದು. ಯಾರನ್ನಾದರೂ ‘ದೇವರು’ ಎಂದು ಕರೆಯಬೇಕಾದರೆ ಆತನಿಗೆ ಅದಕ್ಕೆ ತಕ್ಕ ದೈವೀ ಗುಣಗಳಿರಬೇಕಾಗುತ್ತದೆ. ಕೇವಲ ಹುಟ್ಟಿಸಿದ ಮಾತ್ರಕ್ಕೆ ಆ ಮಗುವಿಗೆ ನಾವು ದೇವರಾಗುತ್ತೇವೆಯೇ? ‘ತನ್ನದು’ ಎಂದು ಕಾಪಿಡುವ ಜತನಕ್ಕೆ, ಬೆಳೆಸುವ ಜವಾಬ್ದಾರಿಗೆ ‘ದೇವರು’ ತನ ಹೇಗೆ ಸರಿ? ಪ್ರಪಂಚದ ಪ್ರತಿಯೊಂದು ಜೀವಿಯು ಬದುಕುವ ಪರಿ ಇದು. ಅದೇ ರೀತಿ ನಾನು ನನ್ನ ಗಂಡ / ಹೆಂಡತಿ/ ಮಗು / ….. ಪ್ರೀತಿಸುತ್ತೇನೆ ಅನ್ನುವವರನ್ನು ಕಂಡಾಗಲೂ ಅಷ್ಟೆ. ನನಗೆ ನಗು ಬರುತ್ತದೆ. ಅದು ‘ನಿನ್ನದು’ ಅದಕ್ಕಾಗಿ ಪ್ರೀತಿಸುತ್ತೀಯಾ. ಈ ‘ನನ್ನದು’ ಎಂಬ ಹಂಗಿಲ್ಲದ, ಕೊಡು-ಕೊಳ್ಳುವಿಕೆಯ ಹೊರತಾದ, ಸಂಭಂಧಗಳ ಹೊರತಾದ ಜೀವಿಯನ್ನು ಇದೇ ರೀತಿ ಪ್ರೀತಿಸಬಲ್ಲೆಯಾ? ಹೊರಗೆ ಬೀದಿಯಲ್ಲಿ ಆಡುವ ಮಗುವನ್ನು ಅಷ್ಟೇ ಅಕ್ಕರೆಯಿಂದ ಸಂತೈಸ ಬಲ್ಲೆಯಾ? ದಾರಿಯಲ್ಲಿ ಸಿಕ್ಕ ಅಪರಿಚಿತ ವ್ಯಕ್ತಿಯ ಬಳಿ ಅಷ್ಟೇ ಪ್ರೀತಿಯಿಂದ ಎರಡು ಮಾತನಾಡ ಬಲ್ಲೆಯಾ? ಇದೆಲ್ಲ ಸಾಧ್ಯವಿಲ್ಲ ಎಂದಾದಲ್ಲಿ ನಾವು ಪ್ರೀತಿಸುವುದು ಏನನ್ನು? ಕೇವಲ ‘ನಮ್ಮದು’, ‘ನಮ್ಮತನ’ ವನ್ನು. ಅಷ್ಟೇ. ಪ್ರೀತಿ ಬೆಳೆಯಲು ಇಲ್ಲ, ಹರಡಲು ಇಲ್ಲ. ಇಂತಹ ಪ್ರೀತಿಗೆ ‘ದೈವಿಕತೆ’ ಹೇಗೆ ಪ್ರಾಪ್ತವಾದೀತು?

ನಾನು ನಿನ್ನನ್ನು ಪ್ರೀತಿಸುತ್ತೇನೆ. ಅದು ಅವನು / ಳು / ಅದು  ಆಗಿರಬಹುದು. ಹಾಗೆ ಕೆಂದ್ರೀಕೃತಗೊಳ್ಳುವ ಮನಸ್ಸು,  ಜೀವವನ್ನು ಆ ಭಾವದಲ್ಲಿ ಮಿಲನಗೊಳಿಸಿದಾಗ ನು / ಳು / ದು ಕರಗಿ ಹೋಗುತ್ತದೆ. ಆಗ ಉಳಿಯುವುದು ನಾನು ಪ್ರೀತಿಸುತ್ತೇನೆ; ನಿನ್ನನ್ನು, ಅವನನ್ನು, ಅದನ್ನು, ಎಲ್ಲವನ್ನೂ. ಅಷ್ಟೇ. ಇಲ್ಲಿ ನಾನು ಪ್ರೀತಿಸುವುದರಿಂದ ನೀನೂ ನನ್ನನ್ನು ಪ್ರೀತಿಸಬೇಕು, ಕೇವಲ ನನ್ನನ್ನು ಮಾತ್ರ ಪ್ರೀತಿಸಬೇಕು, ಆ ಸಂಭಂಧಕ್ಕೊಂದು ಹೆಸರು ಬೇಕು, ಸಂಸಾರ ಬೇಕು, ಅದು ಬೇಕು, ಇದು ಬೇಕು ಅನ್ನುವ ಮಾತುಗಳೇ ಇಲ್ಲ. ಈ ಎಲ್ಲವನ್ನೂ ಮೀರಿ ನಾನು ಪ್ರೀತಿಸುತ್ತೇನೆ. ಆಗ ಗಾಳಿಯೂ ಮಾತನಾಡುತ್ತದೆ, ಜೀವವು ಕುಣಿಯುತ್ತದೆ. ನಿಶ್ಚಲ ಆನಂದದಿಂದ. ಮನುಷ್ಯನಿಗೆ ಬೇಕಾದದ್ದು ಅದೇ ಅಲ್ಲವಾ?

3 Responses to “ಹೀಗೆ …..”

 1. ಶಿವಶಿವ Says:

  ಮದುವೆ ಆದವರು ಹಿಂಗೆಲ್ಲಾ ಬರೆಯುವುದು ಸುಲಭ ಮದುವೆ ಆಗದಿದ್ದವರು ಹಿಂಗೆ.. ಬರೆದರೆ ಮೆಚ್ಚಬಹುದು. ಚೆನ್ನಾಗಿ ದುಡ್ಡು ಸಿಕ್ಕಮೇಲೆ ದುಡ್ಡಿಲ್ಲದಿದ್ದಾಗಲೇ ಜೀವನ ನೆಮ್ಮದಿಯಾಗಿತ್ತು ಎಂದು ಹೇಳುವ ಹಾಗೆ ಇದು. ಆದರೆ ಬಡವನಾದವನು ಯಾವತ್ತೂ ದುಡ್ಡು ಬೇಡ ಎಂದು ಹೇಳುವುದಿಲ್ಲ..

  ಅದಿರಲಿ, ಈಗ ಮದುವೆ ವಿಷಯಕ್ಕೆ ಬಂದರೆ ನೀವು ಈಗಿನ ಕಾನೂನು ವ್ಯವಸ್ಥೆಗಳು, ಹಕ್ಕುಗಳು, ಬೆಳೆದ ‘ನಾಗರೀಕ’, ನಗರ ಸಮಾಜದಲ್ಲಿ ನಿಂತು ಯೋಚಿಸುತ್ತಿದ್ದೀರಿ ಅಷ್ಟೆ ಒಮ್ಮೆ ಮಾನವ ಜನಾಂಗ ಬೆಳವಣಿಗೆಯ , ನಮ್ಮ ದೇಶದ ನಾಗರೀಕತೆಯ ಬೆಳವಣಿಗೆಯ, ಆಳ್ವಿಕೆಗಳ, ಸಂಘರ್ಷಗಳ ಸಾಮಾಜಿಕ ಪರಿಸ್ಠಿತಿಯ ನೆಲೆಯಲ್ಲಿ ಯೋಚಿಸಿ. ಆಗ ಮದುವೆಯ, ಕುಟುಂಬ ಜೀವನದ, ಸಂಬಂಧಗಳ ಅರ್ಥ ಅಗತ್ಯತೆಗಳ ಬಗ್ಗೆ ತಿಳಿದೀತು..ಆದರೆ ಕಾಲಕ್ರಮೇಣ ಅದು ಬದಲಾಗುತ್ತಾ ಹೋಗುತ್ತದೆ ನಿಜ. ಆಗಬೇಕು ಎಂಬುದೂ ನಿಜ.

  Like

 2. ನೀಲಾಂಜಲ Says:

  ಅಲ್ಲಾ ಶಿವ ಶಿವ, ದುಡ್ಡಿಗೂ ನೆಮ್ಮದಿಗೂ ಎಲ್ಲಿಯ ಸಂಭಂಧ? ಬಡವನೂ ನೆಮ್ಮದಿಯಿಂದ ಇರಬಹುದು ಹಾಗೆ ಶ್ರೀಮಂತನೂ ಸಹ. ನಾನು ಎಲ್ಲಿ ಮದುವೆ ಆಗಬೇಡಿ ಅಂದೆ, ಅಗೊರು ಆಗಲಿ. ನನಗೆ ಏನು ಅನಿಸಿತು, ಅನ್ನಿಸುತ್ತದೆ ಅಷ್ಟೇ ಅಂದದ್ದು. 🙂
  ನಾನು ಅವನು ಸೇರಿಕೊಳ್ತಿವಿ, ಒಂದು ಪುಟ್ಟ ಗೂಡು ಮಾಡ್ತೀವಿ, ಪುಟ್ಟ ಮಗು ಮಾಡಿ ಕೊಳ್ತಿವಿ, ಅದನ್ನು ಬೇಳೆಸ್ತಿವಿ, …ಒಂದಿಂದ ಸತ್ತು ಹೋಗ್ತಿವಿ. ಈ ಪ್ರಕ್ರಿಯೆ ಬಗ್ಗೆ ಏಷ್ಟೋ ಜನ ಕನಸು ಕಾಣುತ್ತಾರಂತೆ. ನನಗೇನಕೆ ಈ ಕನಸಿಲ್ಲ ಅಂತ ಯೋಚಿಸ್ತಾ ಹುಟ್ಟಿದ ಬ್ಲಾಗ್ ಬರಹ ಇದು. ಜೊತೆಗೆ ಪ್ರೀತಿ ಅನ್ನೋದು ನಾನು ನನ್ನದು,ನನ್ನ ಕುಟುಂಬ ಅಂತ ಮಾತ್ರ ಏನಕೇ ಸೀಮಿತವಾಗಿರಬೇಕು ಅಂತಾನೂ ಯೋಚಿಸ್ತಾ ಇದ್ದೆ.

  Like

 3. Sunaath Says:

  ನಿಮ್ಮ ಆಲೋಚನೆಗಳು ಸ್ವಾರಸ್ಯಕರವಾಗಿವೆ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: