ಹೌದು, ನಾನು ಚಾಟರ್ ಬಾಕ್ಸ್. ನನ್ನ ಹಿಂದಿ ಮೇಷ್ಟ್ರು ಇಟ್ಟ ಹೆಸರು ಅದು. ಕ್ಲಾಸಲ್ಲಿ ಸುಮ್ಮನೆ ಕುಳಿತುಕೊಳ್ಳೋಕೆ ಆಗ್ತಾ ಇರಲಿಲ್ಲ ನನಗೆ. ಏನಾದ್ರೂ ಮಾಡ್ತಾ, ಯಾರನ್ನಾದರೂ ಗೋಳು ಹೊಯ್ಕೊಳ್ತಾ, ಡಿಸ್ಟರ್ಬ್ ಮಾಡ್ತಾ ಇರ್ತಿದ್ದೆ. ಹೆಚ್ಚಾಗಿ ಮೇಷ್ಟ್ರು ಗಲಾಟೇನೇ ಮಾಡು ಅಂದ್ರೆ ಸುಮ್ಮನೆ ಕೂತಿರ್ತಿದ್ನೆನೋ. ಆದ್ರೆ ಅವರು ಗಪಚುಪ್ ಅಂತಿದ್ರು. ಅದಕ್ಕೆ, ನನಗೆ ತಡೆಯಕೆ ಆಗ್ತಾ ಇರಲಿಲ್ಲ.
ಇನ್ನೂ ನೆನಪಿದೆ. ಕಾಲೇಜಿನ ದಿನಗಳಲ್ಲಿ ನಾನು ಮತ್ತು ಅಶ್ವಿನಿ ಬಸ್ಸಲ್ಲಿ ಕೂತು ಬಕ್ವಾಸ್ ಮಾತಾಡಿ ಹೊಟ್ಟೆತುಂಬಾ ನಗಾಡುತ್ತಿದ್ದದ್ದು. ಏನೇನೋ ಹೇಳೋದು, ನಗಾಡೊದು. ಯಾರಾದ್ರೂ ಕೇಳ್ತಾ ಇದ್ರೆ ಅವರಿಗೆ ತಲೆಬುಡ ಅರ್ಥಾ ಆಗ್ತಾ ಇರಲಿಲ್ಲ ಅನ್ನೋದಂತೂ ಗ್ಯಾರ್ಂಟಿ. ಒಂದಿನ ನಾನು ಮತ್ತು ನನ್ನ ಕಸಿನ್ ಗೀತಿ ರಾತ್ರಿ ಯಾವುದೋ ಫಂಕ್ಷನ್ ಅಟೆಂಡ್ ಮಾಡಿ ರಿಕ್ಷಾದಲ್ಲಿ ಮನೆಗೆ ವಾಪಸ್ಸು ಹೋಗ್ತಾ ಇದ್ವು. ಅಲ್ಲಿಂದ ನಮ್ಮ ಮನೆಗೆ ಒಂದು ತಾಸಿನ ದಾರಿ ಇದ್ದಿರಬಹುದು. ಮಾತು ಸ್ಟಾರ್ಟ್ ಆಯಿತು. ಏನೇನೋ ಹೇಳದು, ನಗದು. ಕೈಯಲ್ಲಿ ನೀರಿನ ಬಾಟಲ್ ಬೇರೆ ಇತ್ತು. ಮಧ್ಯ ಮಧ್ಯ ನೀರನ್ನು ಎತ್ತಿ ಕುಡಿದು ಗಂಟಲು ಸರಿ ಪಡಿಸಿಕೊಂಡು ಮತ್ತೆ ನಗದು. ಪಾಪ! ರಿಕ್ಷಾ ಡೈವರ್ ನಿಗೆ ಏಷ್ಟು ಕಷ್ಟ ಆಯಿತು ಅಂದ್ರೆ ಅವನು ಹೇಳೆ ಬಿಟ್ಟ, ನೀವೇನು ನೀರ್ ಕುಡಿತಿದ್ದಿರೋ ಅಥವಾ ಅದರಲ್ಲಿ ಏನಾದರೂ ಇದೆಯಾ ಅಂತ. ನನ್ನ ಲೈಫ್ನಲ್ಲಿ ಫಸ್ಟ್ ಟೈಂ ಈ ತರಹ ನೋಡಿದ್ದು. ಏನು ಮಾತಾಡ್ತಿರಪ್ಪಾ, ನಾವು ಏಷ್ಟು ಪೆಗ್ ಹಾಕಿದ್ರು ಈ ತರಹ ಏರಲ್ಲ ಅಂತ.
ಇಲ್ಲಿ ಆಫೀಸ್ ಬಸ್ಸಿನಲ್ಲಿ ನನ್ನ ಪಕ್ಕ ದೀಪಿಕಾ ಕುಳಿತುಕೊಳ್ತಾ ಇದ್ಲು. ತುಂಬಾ ಸೈಲೆಂಟ್ ಅವಳು. ಆದ್ರೆ ಪಕ್ಕ ಕೂತವಳು ನಾನಲ್ವೆ. ನಾನು ಅವಳನ್ನು ಕರೆದು ಕರೆದು ಮಾತಾಡೊದು, ಅದೇನು, ಇದು ಹೇಂಗೆ, ನಿಮ್ಮಲ್ಲಿ ಹೇಂಗೆ, . . ಅಂತೆಲ್ಲ ಕೇಳೋದು. ಆಕೆ ಒಂದಿನ ತಡೆದುಕೊಳ್ಳೋಕಾಗದೆ ಹೇಳೆ ಬಿಟ್ಲು, ಎಲ್ಲರಿಗೂ ಮಾತು ಇಷ್ಟವಾಗಲ್ಲ, ನಾನು ಸ್ವಲ್ಪ ಇನ್ಟರಾವರ್ಟ್. ನನಗೆ ತಣ್ಣಗೆ ಕೂತು ಕಿಟಕಿಯ ಹೊರಗೆ ಸುಮ್ಮನೆ ನೋಡುವುದೇ ಇಷ್ಟ ಅಂತ. ನಾನು ಅವಳು ಹೇಳಿದ್ದನ್ನು ತುಂಬಾ ಆಸ್ತೆಯಿಂದ ಕೇಳಿಸಿಕೊಂಡು ಒಂದು ಹತ್ತು ನಿಮಿಷ ಸುಮ್ಮನಿದ್ದೆ. ಅವಳು ಮುಖ ಹೊರಳಿಸಿ ಕಿಟಕಿಯ ಸರಳುಗಳಲ್ಲಿ ತೂರಿಸಿದ್ಲು. ಆಮೇಲೆ ಕೇಳಿದೆ, ನಿಮ್ಮನ್ನು ನೋಡಿದರೆ ಆ ತರಹ ಕಾಣೋಲ್ಲ, ತುಂಬಾ ಮಾತೋಡೋರ ತರಹ ಅನ್ನಿಸುತ್ತೆ, ಅವಳಿಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಹೌದು, ನಾನು ತುಂಬಾ ಕ್ಲೋಸ್ ಇದ್ದವರ ಹತ್ತಿರ ಮಾತ್ರ ಮಾತಾಡೋದು ಅಂದಳು. ಅದನ್ನು ಹೇಳಿಸಿಕೊಂಡು ನಾನು ಸುಮ್ಮನಾಗಲಿಲ್ಲ. ಅದು ನನ್ನ ಜಾಯಮಾನವೇ ಅಲ್ಲ. ಈ ಕಡೆ ಕಿವಿಯಿಂದ ಕೇಳಿ ಆ ಕಡೆ ಕಿವಿಯಿಂದ ಬಿಟ್ಟು ಬಿಡೋದು. ಅವಳತ್ತಿರ ಮಾತಾಡಿ ಮಾತಾಡಿ ಈಗ ಅವಳು ನನ್ನ ಕ್ಲೋಸ್ ಫ್ರೆಂಡ್. ಈಗ ಬಸ್ಸಲ್ಲಿ ಬರಲ್ಲ. ಮದುವೆಯಾಗಿದೆ. ಮೊನ್ನೆ ಒಮ್ಮೆ ಬಸ್ಸಲ್ಲಿ ಬಂದಾಗ ಹೇಳ್ತಾ ಇದ್ದಳು, ಆಕೆಯ ಗಂಡ ನನ್ನ ತರಹವೇ ಬಕ್ ಬಕ್. ಅದಕ್ಕೆ ಮುಂದೆ ಕಷ್ಟ ಆಗದೆ ಇರಲಿ ಅಂತ ಮದುವೆಗೆ ಮುಂಚೆನೇ ಆ ಭಗವಂತ ನನ್ನ ಭೇಟಿ ಮಾಡಿಸಿಬಿಟ್ಟಿದ್ದ ಅಂತ.
ಇವನ ಸ್ನೇಹಿತ ಒಬ್ಬ ಇದ್ದಾನೆ, ನಾವು ಹೊರಗೆ ತಿರುಗೋಕೆ ಹೋದಾಗೆಲ್ಲ ಅವನು ಬರ್ತಾ ಇದ್ದ. ಅವನಿಗೊಂದು ಚಟ. ನನ್ನ ಮಾತಿಗೆಳೆದು ಬಿಡೋದು. ಆಮೇಲೆ ನನ್ನ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿ ಸಾಕಾಗಿ, ಮೇಡಂ, ಸ್ವಲ್ಪ ಹೊತ್ತು ಸುಮ್ಮನಿರಿ. ಏಕೆ ಮೆದುಳಿಗೆ ಕೈಹಾಕಿ ತಿರುಗಿಸ್ತಿರಾ ಅಂತ. ಅವನು ನಾನು ಮಾತಾಡೊ ಮೂಡಲ್ಲಿ ಇದ್ರೆ ಕೈ ಮುಗಿದು ಹೇಳೋ ಖಾಯಂ ಡೈಲಾಗ್, ನೀವು ಸುಮ್ಮನಿದ್ರೆ ಚೆಂದ, ಮೆದುಳಿಗೆ ಕೈ ಹಾಕಾಕೆ ಮಾತ್ರ ಬರಬೇಡಿ, ನಮ್ಮ ಪಾಡಿಗೆ ನಮ್ಮ ಬಿಟ್ಟು ಬಿಡಿ. ಬದುಕೋತಿವೆ ಅಂತ.
ಮೊನ್ನೆ ಒಂದು ಜೋಕ್ ನಮ್ಮಲ್ಲಿ ಪಾಸ್ ಆಗ್ತಾ ಇತ್ತು, ಮಾವಿನ ಮರದ ಕೆಳಗೆ ಇಬ್ಬರು ಮಾತಾಡ್ತಾ ಕೂತಿರ್ತಾರೆ. ಮೇಲಿನಿಂದ ಮಾವಿನ ಹಣ್ಣು ಕೆಳಗೆ ಬೀಳುತ್ತೆ. ಅದನ್ನು ನೋಡಿ ಈ ಕಾಲದಲ್ಲಿ ಮಾವಿನ ಹಣ್ಣು ಅಂತ ಆಶ್ಚರ್ಯ ಪಡ್ತಾರೆ, ಆಗ ಮಾವು ಸಿಟ್ಟಲ್ಲಿ ಕೂಗುತ್ತೆ, ತೊಡಾ ಚುಪ್ ರಹೆನಾ, ಮೈ ಸುನಕೆ ಸುನಕೆ ಪಕ್ ಗಯಾ ಅಂತ. ಆವತ್ತಿನಿಂದ ನಮ್ಮ ಚೇತನ್ ನಾನು ಮಾತಾಡ್ತಾ ಇದ್ರೆ ಬಂದು ಅಭೆ ದೇಖ್ನಾ, ಕ್ಯಾಂಟೀನ್ ಮೇ ಅಭಿ ಪಪಾಯಾ ಪಕ್ ಗಯಾ ಹೋಗಾ ಅಂತಿರ್ತಾನೆ.
ಏನ್ ಮಾಡೋದು, ನನಗೆ ಮಾತಾಡಕೆ ಇಷ್ಟ. ಜನರು ಇಷ್ಟ. ಅವರು ಹೇಳೋ ಅವರ ಕತೆಗಳು ಇಷ್ಟ. ಏಷ್ಟು ಅಪರಿಚಿತರು ಪರಿಚಿತರಾಗಿ ಬಿಡ್ತಾರೆ. ಆದರೆ ಜಾಸ್ತಿ ಮಾತಾಡೊದ್ದಕ್ಕೇನೆ ಯಾರು ಅತಿ ಪರ್ಸನಲ್ ಮಾತ್ರ ಹೇಳಿಕೊಳ್ಳೊಲ್ಲ. ಬೇಜಾರಿಲ್ಲ. ಆ ಆ ಕ್ಷಣಕ್ಕೆ ಜೊತೆಗಿದ್ದವರ ಜೊತೆ ಖುಷಿಯಿಂದ ಒಂದು ನಗು, ಒಂಚೂರು ಹೃದಯದಿಂದ ಆಡೋ ಮಾತು ನಮ್ಮ ಸುತ್ತಮುತ್ತ ಪರಿಸರವನ್ನೇ ಜೀವಿಸೊ ತರಹ ಮಾಡಿ ಬಿಟ್ಟಿರುತ್ತೆ. ಎಲ್ಲ ನೋವು ಖಾಲಿ ಖಾಲಿಯಾಗಿ ಅರ್ಥವಿಲ್ಲದ್ದು ಆಗಿ ಹೋಗಿರುತ್ತೆ.
ಶುಭ ರಾತ್ರಿ.
ಜೂನ್ 13, 2013 ರಲ್ಲಿ 12:28 ಅಪರಾಹ್ನ |
ಮಾತಾಡಿ ಖಂಡಿತಾ ಮಾತಾಡಿ 🙂
ಮಾತು ಮರೆತವರಿಗೆ ನಿಮ್ಮಂಥವರು ಸಿಕ್ಕರೆ
ಅವರ ಮೌನಕ್ಕೊಂದು ಅರ್ಥ…ಬರೆಯುತ್ತಿರಿ
LikeLike
ಜೂನ್ 13, 2013 ರಲ್ಲಿ 9:55 ಅಪರಾಹ್ನ |
ಅಯ್ಯಪ್ಪಾ! ಎಷ್ಟೆಲ್ಲಾ ಸ್ವಾರಸ್ಯಕರವಾದ ಮಾತುಗಳನ್ನು ಹೇಳಿದ್ದೀರಿ!
LikeLike
ಜುಲೈ 7, 2013 ರಲ್ಲಿ 12:28 ಫೂರ್ವಾಹ್ನ |
@Swarna, 🙂 @ Sunaath, ಹೌದಾ!!ನಿಮ್ಮನ್ನು ಮತ್ತೆ ನೋಡಿ ಖುಷಿಯಾಯಿತು.
LikeLike