ನನ್ನೆಸ್ರು

ನೀಲಾಂಜಲ;
ನನಗೆ ಇದೇ ಹೆಸರು ಪರ್ಮನೆಂಟಾಗಿ ಇಟ್ಕೊಬೇಕು ಅನ್ನಿಸ್ತಿದೆ. ನನ್ನದೇ ಹೆಸರು, ನಾನೇ ಇಟ್ಕೊಂಡಿದ್ದು. ಈ ಹೆಸರಿಗೆ ಯಾರ ಹಂಗೂ ಇಲ್ಲ, ಊರು ಇಲ್ಲ, ಜಾತಿನೂ ಇಲ್ಲ. ಬರೀ ಹೆಸ್ರು 🙂

ಸಿ. ಎಂ. ಸೌಪರ್ಣಿಕಾ- ಚಿನಿತೋಟ (ಊರಿನ) ಮಹಾಬಲೇಶ್ವರ(ನ ಸುಪುತ್ರಿ) ಸೌಪರ್ಣಿಕಾ;
ಸಣ್ಣವಳಿದ್ದಾಗ ಅಪ್ಪನತ್ತಿರ ಕೇಳಿದ್ದೆ. ನಾವ್ಯಾಕೆ ದೊಡ್ಡಪ್ಪನವರ ತರಹ “ರಾವ್” ಸೇರಿಸಿಲ್ಲವೆಂದು. ಆಗ ಅಪ್ಪ ವಿವರಿಸಿದ್ದರು. ನಾನು ದೊಡ್ಡಾದಾಗ ಹೆಸರಿನ ಜೊತೆ ಜಾತಿ ಸೇರಿಸಿದಾಗ ಆಗಬಹುದಾದ ಕಿರಿಕಿರಿ, ಹಿಂಸೆ ಹೇಳಿದರು. ಅವರಿಗೆ ಅವರ ಕಾಲದಲ್ಲಿ ಡಿಗ್ರಿ ಮುಗಿಸಿದ ಮೇಲೆ ಸರಕಾರಿ ಕೆಲಸ (ವೈಟ್ ಕಾಲರ್ ಜಾಬ್!) ಸಿಗೊದು ತಪ್ಪಿ ಹೋದ ಅನುಭವಗಳ ಮೇಲೆ. ಬಿಡಿ. ’ಬ್ರಾಹ್ಮಣ’ ಎಂದು ಹೇಳಿಕೊಳ್ಳುವುದು ತೊಂದರೆ ಉಂಟು ಮಾಡುತ್ತೆ ಅನ್ನೊದನ್ನು ಹೇಳಿದರೂ ಏಷ್ಟೊ ಜನ  ನಂಬಲ್ಲ. ಹಾಗಾಗಿ ಹೆಸರಿನ ಹಿಂದೆ ಸಿ ಮತ್ತು ಎಂ ಸೇರಿಸಿದ್ದರು. ಆಗೆಲ್ಲ ಶಾಲೆ-ಕಾಲೇಜುಗಳಲ್ಲಿ ಓಹೋ ಚೀಫ್ ಮಿನಿಸ್ಟರ್ ಎಂದು ಕಿಚಾಯಿಸಿದವರು ಇದ್ದಾರೆ.

ಸೌಪರ್ಣಿಕಾ ಹೊಳ್ಳ;
ಮೊನ್ನೆ ಮೊನ್ನೆ ಹೆಸರನ್ನು ಹೊಳ್ಳಕ್ಕೆ ಬದಲಾಯಿಸಿಕೊಂಡೆ. ಅದೂ ಮದುವೆಯಾಗಿ ಎರಡು ವರ್ಷದ ನಂತರ. ಆ ನ್ಯೂಮರಾಲಾಜಿಯವ ನನ್ನ ಓರಿಜಿನಲ್ ಹೆಸ್ರು ತುಂಬಾ ಕೆಟ್ಟದಿದೆಯೆಂದೆಲ್ಲಾ ಹೇಳಿ ಹೆದರಿಸಿಬಿಟ್ಟಿದ್ದಕ್ಕೆ. ಆದ್ರೆ ಬದಲಾಯಿಸಿದ ಮೇಲೆ ಆದದ್ದು ಜಾಸ್ತಿ ಕಿರಿಕಿರಿಯೆ. ಸೊಶಿಯಲ್ ನೆಟ್ವರ್ಕಿನಲ್ಲಿ ಓಹೋ ಮಂಗಳೂರಿನವರಾ, ಯಾವ ಊರು? ಕೋಟಾದವರಾ? ನಿಮ್ಮೂರು ನಂಗೆ ಗೊತ್ತುರಿ ಅಂತೆಲ್ಲಾ ಕೇಳಿ ಕೇಳಿ , ಅದಕ್ಕೆಲ್ಲಾ ಇಲ್ಲಾ ನಾನು ಶಿರಸಿಯವಳು ಅಂತ ಹೇಳಿ ಹೇಳಿ, ಅವರ ಹೌದಾ ಅನ್ನೊ ರಾಗ ಕೇಳಿ ಕೇಳಿ ಸಾಕಾಯ್ತು.

ಈಗ ಮತ್ತ್ಯಾಕೊ ಸಾಧ್ಯವಿದ್ರೆ ’ನೀಲಾಂಜಲ’ ಅನ್ನೊದನ್ನ ನನ್ನ ಆಫಿಶಿಯಲ್ ಹೆಸ್ರು ಮಾಡ್ಕೊಳ್ಳೊಣ ಅಂತ ಅನ್ನಿಸ್ತಿದೆ. ಯಾಕೊ “ನೇಮ್ ಸೇಕ್” ಸಿನಿಮಾ ನೆನಪಿಗೆ ಬರ್ತಿದೆ. ಅದೂ ಒಂದು ಹೆಸರಿನ ಕತೆ. ಒಂದು ಅಪ್ಪ ತನ್ನ ಮಗುವಿಗೆ ಯಾಕೆ ಆ ಹೆಸ್ರು ಇಟ್ಟ, ಆ ಮಗು ದೊಡ್ಡದಾಗ್ತಾ ತನ್ನ ಹೆಸರು ಯಾಕೆ ಬದಲಾಯಿಸಿಕೊಂಡ್ತು ಮತ್ತು ಯಾಕೆ ತನ್ನ ಹೆಸರಿಗೆ ವಾಪಾಸ್ಸಾಯಿತು ಅನ್ನೊ ಸೂತ್ರದ ಮೇಲೆ ನಿಂತ ಕತೆ. ಜೊತೆಗೆ ಬದಲಾಗೊ ಮೌಲ್ಯಗಳು ಮತ್ತು ಸಂಸ್ಕೃತಿ, ಹೊರ ದೇಶಗಳಲ್ಲಿ ನೆಲ ಊರಿರುವರ ಕಾಡುವ ಒಂಟಿತನ,… ಇನ್ನೂ ಬೇಕಾದಷ್ಟು ವಿಷಯಗಳೂ ಇವೆ. ಮೀರಾ ನಾಯರ್ ಸಿನೆಮಾ. ಸಿಕ್ಕಿದ್ರೆ ನೋಡಿ. ಇಂಟರೆಸ್ಟಿಂಗ್.

ಮತ್ತೆ ಸಿಗುವ.

6 Responses to “ನನ್ನೆಸ್ರು”

 1. vikas Says:

  sari hoytu 🙂

  Like

 2. ಆಸು ಹೆಗ್ಡೆ Says:

  ಹೆಸರಿನಲ್ಲೇನಿದೆ?

  Like

 3. Sunaath Says:

  ನೀಲಾಂಜಲ ಹೆಸರು ಸಕತ್ ಚೆನ್ನಾಗಿದೆ. ಈ ಹೆಸರನ್ನೇ ಇಟ್ಟುಕೊಳ್ಳಿ!

  Like

 4. ಡಾ.ಆಜಾದ್ (ಮೀನಿನ ಡಾಕ್ಟರು) Says:

  ನೀಲಾಂಜಲ…ಸೌಪರ್ಣಿಕಾ…ಏನೆಂದು ಕರೆಯುವುದು…ಬ್ಲಾಗ್ಗೆಳ್ತಿ ಅಂದ್ರೆ ಓಕೆ…ಯಾವ್ದಾದ್ರೂ ನಿರ್ಧಾರ ಆಗೋವರೆಗೆ….ಹಹಹ ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ ಚೇತನಾ ತೀರ್ಥಹಳ್ಳಿಯವರ ವಯಾ…..

  Like

 5. ನೀಲಾಂಜಲ Says:

  🙂

  Like

 6. ವಿಜಯರಾಜ್ ಕನ್ನಂತ Says:

  ಅಂದ ಹಾಗೆ ಪುನರ್ನಾಮಕರಣ ಆಯ್ತಾ 🙂

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: