ಮೊನ್ನೆ ಕಾಗೆ ತ್ರೀಕೋಣಾಕೃತಿಯ ತಂತಿಯೊಂದನ್ನು ಕಚ್ಚಿಕೊಂಡು ನಿಂತಿತ್ತು. ಅದನ್ನು ನೋಡಿ ನಂಗಾಶ್ಚರ್ಯ. ಅಯ್, ಕಾಗೇಯಾವಾಗಿಂದ ಇಂಜಿನೀಯರ್ ಆಯಿತು ಅಂತ. ಹಿಂದಿನ ದಿನ ಇನ್ನೊಂದು ತಂತಿ ಕಚ್ಚಿಕೂತಿತ್ತು. ಆ ತಂತಿಯ ಒಂದು ತುದಿ ಸುರುಳಿಯ ರೂಪದಲ್ಲಿತ್ತು. ಇವತ್ತು ಕಚ್ಚಿಹಿಡಿದ ತ್ರಿಕೋಣದ ಮೂರುಬದಿಯಲ್ಲೂ ಒಂದೊಂದು ಸುರುಳಿಯಿತ್ತು! ಹೋಗಲಿ ಗೂಡು ಎಲ್ಲಿ ಕಟ್ಟುತ್ತಿದೆ ಅಂತ ನೋಡೋಣ ಅಂತ ಸ್ವಲ್ಪ ಹೊತ್ತು ಕಾದೆ. ಆ ಕಾಗೆಯಮ್ಮ/ಪ್ಪ ಹಾರಿ ಹೋಗಿ ಎದುರಿಗಿನ ಎತ್ತರದ ಅಶೋಕಮರದ ಮೇಲೆ ಹೋಗಿ ಕುಂತಿತು. ಸ್ವಲ್ಪ ಆಕಡೆ ಈಕಡೆ ಕಣ್ಣಾಯಿಸಿ ಅಲ್ಲೇ ಎಲೆಗಳ ಮರೆಯಲ್ಲಿ ಒಂದಾಯಿತು. ಅದಕ್ಕೆ ಗೂಡು ಕಟ್ಟಲು ಆ ಮರವೇ ಬೇಕಿತ್ತಾ ಅಂತ ಬಯ್ದುಕೊಂಡೆ. ಏಕೆಂದರೆ ಪ್ರತಿ ಮಳೆಗಾಲದಲ್ಲಿ ಆ ಮರ ಗಾಳಿ-ಮಳೆಗೆ ಬಗ್ಗುತ್ತದೆ ಮತ್ತು ಅದರ ಮೇಲಿನ ಭಾಗವನ್ನು ಕಡಿದು ಹಾಕುತ್ತಾರೆ. ಹಿಂದಿನ ಸಲ ಹೀಗೆ ಗೂಡು ಕಟ್ಟಿಕೊಂಡ ಹಕ್ಕಿಗಳ ಗೂಡು ಮೊಟ್ಟೆ/ಮರಿಗಳ ಸಮೇತ ನೆಲಪಾಲಾಗಿತ್ತು. ಆದರೂ ಆ ಮರದ ಬುಡ(ಕಾಂಡ) ಉಳಿದ ಅಕ್ಕಪಕ್ಕದ ಮರಗಳಿಗಿಂತ ದಪ್ಪಗೆ ಬೆಳದಿದ್ದು ಕಂಡು ಸ್ವಲ್ಪ ಸಮಾಧಾನ ಮಾಡಿಕೊಂಡೆ.
ನಂಗೆ ಸಾಧ್ಯ ಆಗಿದ್ರೆ ಆ ಕಾಗೆಯ ಗೂಡು ನೋಡುತ್ತಿದ್ದೆ. ಆದು ಆ ತಂತಿಯನ್ನು ಹೇಗೆ ಉಪಯೋಗಿಸಿದೆ ಅಂತ. ಆದರೆ ನಂಗೆ ಮೇಲೆ ಹಾರಕೆ ಬರೊಲ್ವೆ 😦 ಹೋಗಲಿ ಟೆಲಿಸ್ಕೋಪ್ ಕ್ಯಾಮೆರಾ ಇದ್ದರಾದ್ರೂ ಒಂಚೂರಾದ್ರೂ ಕಾಣಿಸ್ತಿತ್ತೇನೋ, ಆದ್ರೆ ಅದೂ ಇಲ್ಲ. ಹೋಗಲಿ ಬಿಡಿ.
ಆದ್ರೆ ಈ ಕಾಗೆ ಗಂಡ-ಹೆಂಡತಿಯ ಕಾರಣ ನನ್ನ ನೀರುದಾನಿ ಕುಲಗೆಟ್ಟು ಹೋಗಿದೆ. ನೀರಲ್ಲಿ ನಾರು, ಕಡ್ಡಿ, ಅನ್ನ, ತಿಂಡಿ ತಂದು ಹಾಕಿ-ಹಾಕಿ ಬೇರೆ ಹಕ್ಕಿಗಳಿಗೆ ನೀರು ಕುಡಿಯಲು ಸಾಧ್ಯವಾಗದಂತೆ ಮಾಡಿವೆ. ಜೊತೆಗೆ ದಿನಾ ಒಂದು ಮೊಟ್ಟೆ ತಂದು ನಮ್ಮ ಮನೆಯೆದುರಿಗಿನ ಪಟ್ಟಿಯ ಮೇಲೆ ಕೂತು ತಿನ್ನುತ್ತವೆ. ಪಾಪ! ಅದು ಗುಬ್ಬಿದೊ, ಪಾರಿವಾಳದ್ದೊ ಇನ್ಯಾವ ಹಕ್ಕಿದೋ. ಮೊನ್ನೆ ನೀರುದಾನಿಯಲ್ಲಿ ಹಕ್ಕಿ ಮರಿಯದೊಂದರ ’ಹೆಣ’ ತೇಲುತ್ತಿತ್ತು. ಅದಕ್ಕೇ, ಈ ಮಳೆಗಾಲದಲ್ಲಿ ಮರಕಡಿದು ಬಿದ್ದಾಗ ಮರಿಗಳನ್ನು ಕಳೆದುಕೊಂಡ ಮೇಲೆ ಇವಕ್ಕೆ ತಕ್ಕ ಶಿಕ್ಷೆಯಾಗುತ್ತೆ ಅಂತ ನಾನು ಸುಮ್ಮನೆ ಅಂದುಕೊಳ್ಳುತ್ತೇನೆ.
ಯಾಕೊ ಈ ಕಾಗೆಗಳನ್ನು ಕಂಡಾಗ ಗುಬ್ಬಿ ಕಂಡಷ್ಟು ಖುಶಿಯಾಗುವುದಿಲ್ಲ. ಅವು ಕಪ್ಪಗಿದೆ ಅನ್ನುವುದಕ್ಕೆ ಅಲ್ಲ ಎಂದು ಅಂದುಕೊಳ್ಳುತ್ತೇನೆ. ಏಕೆಂದರೆ ಪಾರಿವಾಳಗಳು ಸ್ವಲ್ಪ ಕಪ್ಪನ್ನೇ ಹೋಲುವಂತಿರುತ್ತವೆ. ಇವು ಮಾಂಸಹಾರಿಗಳೆಂದಾ ಅಥವಾ ಮಾಟ, ಪ್ರೇತವನ್ನು ನೆನಪಿಸುತ್ತವೆಯೆಂದಾ (’ಫೂಂಕ್’ಅಲ್ಲಿ ತೋರಿಸಿದಂತೆ), ನಂಗೂ ಸರಿ ಗೊತ್ತಿಲ್ಲ. ಆದರೆ ಕಿಚನ್ ಕಿಟಕಿಯಲ್ಲಿ ಅನ್ನ ಖಾಲಿಯಾದಾಗ ಬಂದು ಕಾಂವ್ ಕಾಂವ್ ಅಂದರೆ ಪಾಪ ಕಾಣುತ್ತೆ. ಉಳಿದ ಇಡ್ಲಿಯೋ, ರೊಟ್ಟಿಯೊ ತಟ್ಟೆಗೆ ಹಾಕುತ್ತೇನೆ.
ಹಾಂಗೆ ನಂಗೆ ಒಂದು ಸಮಸ್ಯೆ ಬಂದಿದೆ. ಈ ಕಾಗೆಗಳಲ್ಲಿ ಯಾವುದು ಗಂಡು, ಮತ್ತ್ಯಾವುದು ಹೆಣ್ಣು ಎಂದು. ಎರಡು ಸುಮಾರು ಒಂದೇ ತರಹ ಕಾಣುತ್ತಿತ್ತು. ಗುಬ್ಬಿಗಳಲ್ಲಾದರೆ ಗಂಡು ಗುಬ್ಬಿಯ ತಲೆಮೇಲೆ ಕಪ್ಪಗಿನ ಗುರುತಿರುತ್ತದೆ. ಪಾರಿವಾಳದಲ್ಲೂ ಸಹ ಗುಬ್ಬಿಗಳ ತರಹ ಗಂಡು ಸ್ವಲ್ಪ ದಪ್ಪವಾಗಿರುತ್ತದೆ. ಹೆಣ್ಣು ಸ್ವಲ್ಪ ನಾಜೂಕು ಮತ್ತು ಗಂಡಿಗಿಂತ ಬಹು ಬೇಗ ಹೆದರಿ ಓಡಿ ಹೋಗುತ್ತದೆ. ಈಗ ಇದನ್ನು ಬರೆದಾದ ಮೇಲೆ ನೆಟನಲ್ಲಿ ಗೂಗ್ಲಿಸಬೇಕು.
ಮತ್ತೆ ಸಿಗ್ತೇನೆ.
ಏಪ್ರಿಲ್ 29, 2010 ರಲ್ಲಿ 1:19 ಫೂರ್ವಾಹ್ನ |
ಕಾಗೆ ನಾನ್ ವೆಜ್ಜು ಅಂತ ತಿಳಿದು ಬೇಸರಾಯ್ತು… 🙂
LikeLike
ಏಪ್ರಿಲ್ 29, 2010 ರಲ್ಲಿ 10:25 ಫೂರ್ವಾಹ್ನ |
ಹೆಹೆ.. ಈ ಕಾಕಲೋಕದ ಬಗ್ಗೆ ಎಸ್. ದಿವಾಕರ್ ಏನೋ ಬರ್ದಿದ್ರು ಒಂದ್ಸಲ.. ಸಖತ್ ಮಜಾ ಇತ್ತು.. ಅದ್ನ ಓದಿದ್ಮೇಲೆ, ಸಾಮಾನ್ಯವಾಗಿ ನಾನು ಇಗ್ನೋರ್ ಮಾಡ್ತಿದ್ದ ಕಾಗೆಗಳ ಮೇಲೂ ಒಂದು ಕಣ್ಣಿಡೋ ಹಾಗೆ ಆಗಿತ್ತು.. 🙂
LikeLike
ಏಪ್ರಿಲ್ 29, 2010 ರಲ್ಲಿ 10:31 ಫೂರ್ವಾಹ್ನ |
ಕಾಗೆ ಗಂಡು ಹೆಣ್ಣು ಅಂತ ಹೇಗೆ ತಿಳಿದುಕೊಳ್ಳೋದು ಅಂತ ಗೊತ್ತಾದ್ರೆ ನಮ್ಗೂ ತಿಳ್ಸಿ. ನಮ್ಮನೆ ಹತ್ರ ತಂತಿ ಮೇಲೆ ಒಂದು ಕಾಗೆ ಕೂತು ದಿನಾ ಗುರಾಯ್ಸ್ತಿರತ್ತೆ. ಅದು ಗಂಡೋ ಹೆಣ್ಣೋ ತಿಳ್ಕೋಬೇಕು ನಾನು 😉
LikeLike
ಏಪ್ರಿಲ್ 29, 2010 ರಲ್ಲಿ 10:57 ಫೂರ್ವಾಹ್ನ |
“ಕಾಗೆ ಬುದ್ದಿ ನಿಂದು…” ಎಂದು ಕೆಲವರು ಬೈಯ್ಯೋದನ್ನ ತುಂಬಾ ಸಲ ಕೇಳಿದ್ದೀನಿ. ಇದರಿಂದ ಒಂದಂತೂ ಸ್ಪಷ್ಟವಾಗಿತ್ತು… ಕಾಗೆಯ ಬುದ್ಧಿ ವಕ್ರ ಎಂದು 🙂 ಈಗ ನಿಮ್ಮ ಲೇಖನವನ್ನು ನೋಡಿದ ಮೇಲೆ ಮತ್ತಷ್ಟು ಸ್ಪಷ್ಟವಾಗಿದೆ 😀
LikeLike
ಏಪ್ರಿಲ್ 29, 2010 ರಲ್ಲಿ 11:38 ಅಪರಾಹ್ನ |
“ಈ ಕಾಗೆಗಳಲ್ಲಿ ಯಾವುದು ಗಂಡು, ಮತ್ತ್ಯಾವುದು ಹೆಣ್ಣು” ತುಂಬಾ ಇಂಟೆರೆಸ್ಟಿಂಗ್ ಆದ ಡೌಟು.
ಚಿಕ್ಕಂದಿನಲ್ಲಿ ಅಪ್ಪ ನಾಯಿಮರಿ ಎತ್ತಿ ಯಾವುದು ಗಂಡು ಯಾವುದು ಹೆಣ್ಣು ಅಂತ ಹೇಳ್ತಿದ್ರು.ನನಗೆ ಅದು ದೊಡ್ಡ ವಿಸ್ಮಯ ಆಗಿತ್ತು ಹೇಗೆ ಹೇಳ್ತಾರೆ ಅಂತ!(ಈಗ ಅಲ್ಲ!!)
LikeLike
ಏಪ್ರಿಲ್ 29, 2010 ರಲ್ಲಿ 11:55 ಅಪರಾಹ್ನ |
ರೀ ಸೌ ಉತ್ತರ ಸಿಕ್ತು!!
http://www.birds.cornell.edu/crows/crowfaq.htm
How can you tell a male crow from a female?
Ans: not easily
LikeLike
ಮೇ 4, 2010 ರಲ್ಲಿ 12:00 ಅಪರಾಹ್ನ |
jaggesh heLtaaralla kaage haarsodu andre idena 🙂
LikeLike
ಮೇ 6, 2010 ರಲ್ಲಿ 7:16 ಅಪರಾಹ್ನ |
ಹುಳ ಬಿಟ್ರಲ್ರೀ..ನಂಗು Curiousity ಬರ್ತಿದೆ ತಿಳಿದುಕೊಳ್ಳಲಿಕ್ಕೆ..
ಇನ್ನೊಂದು ನಂಗೆ ಆಶ್ಚರ್ಯದ ವಿಷಯ ಅಂದ್ರೆ, ಇಲ್ಲಿ ಸಾವಿರ ಸಾವಿರ ಸಂಖ್ಯೆ ಯಲ್ಲಿ ಬರೀ ಕಾಗೆಗಳಿದ್ದಾವೆ..ಅದು ಸಂಜೆ ಹೊತ್ತಲ್ಲಿ ಸಾಲಾಗಿ (that too same orientation) ಕೂತಿರುತ್ತವೆ..!
LikeLike