ಹಲ್ಲಾಬೋಲ್

ಈಗಷ್ಟೆ ಈ ಸಿನೆಮಾ ನೋಡಿ ಮುಗಿಸಿದೆ. ಸುಮಾರು ತಿಂಗಳುಗಳಿಂದ ಇದ್ದ ಗೊಂದಲಗಳಿಗೆ ಅಕ್ಷರಗಳು ಸಿಕ್ಕಿತು. ನಿಜ, “ಎಂಟಿ ಟೆರರಿಸ್ಟ್” ಎಲ್ಲಿ ಹೋಯಿತು? ಅದನ್ನು ಇಲ್ಲೇ ಮುಂದುವರಿಸದೇ ಇನ್ನೊಂದು ಬ್ಲಾಗಿಗೆ ಏಕೆ ಸ್ಥಳಾಂತರಿಸಲಾಯಿತು? ಆಮೇಲೆ ಆ ಬ್ಲಾಗಿನಲ್ಲಿ ಒಂದೇ ಒಂದು ಬರಹ ಏಕೆ ಬರೆಯಲಾಗಲಿಲ್ಲ?…….ಅಸಂಖ್ಯ ಪ್ರಶ್ನೆಗಳು ನನ್ನೊಳಗೆ.

ಅದನ್ನು ಪ್ರಾರಂಭಿಸಿದಾಗ, ಇನ್ನೊಂದು ವರ್ಷದಲ್ಲಿ ಹೀಗೆ ಮಾಡಬೇಕು, ಹಾಗೆ ಮಾಡಬೇಕು ಎಂದು ಪಟ್ಟಿ ತಯಾರಿಸಿದ್ದೇ ಬಂತು ಹೊರತು ಏನನ್ನೂ ಕಾರ್ಯರೂಪಕ್ಕಿಳಿಸಲಾಗಲಿಲ್ಲ. ಏಕೆಂದರೆ ಹೆದರಿಕೆ. ಬಾಗಿಲು ತೆರೆದಾಗ ಪಿಸ್ತೂಲ್ ಹಿಡಿದ ಮುಸುಕುದಾರಿಗಳ ಕನಸು ಅಥವಾ ಅಂತರಜಾಲದ ಮೂಲಕ ನನ್ನ ಪಿಸಿಯನ್ನು ಜೊಂಬಿಯನ್ನಾಗಿ ಮಾಡಿ ನನ್ನೇ ಟಾರ್ಗೇಟ್ ಮಾಡಬಲ್ಲ ಅತಿರೇಕದ ಯೋಚನೆ,……

ಬೆಂಕಿ ಹತ್ತೊಕೆ ಕಿಡಿ ಸಾಕು. ಆದರೆ ಕಿಡಿ ಬೆಂಕಿ ಆಗೋಕೆ ಪೂರಕ ವಾತಾವರಣವೂ ಇರಬೇಕೆ! ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವುದು ಅದೂ ಸಮಂಜಸವಾದ ನೆಲಗಟ್ಟಿನಲ್ಲಿ, ಇದು ಕಷ್ಟಸಾಧ್ಯ. ಈ ಸಂಘಟಿಸೊ ಕ್ರಿಯೆ ಇದೆಯಲ್ಲ, ಅದೂ ಇನ್ನೂ ದೊಡ್ಡದು. ನಮ್ಮದೆಲ್ಲವನ್ನೂ ದಾವೆ ಹೂಡಿ ಮುಂದುವರೆಯಬೇಕು. ಕೊನೆಗೆ ಏನೂ ಉಳಿಯತ್ತೋ ಅದನ್ನು ದಕ್ಕಿಸಿಕೊಂಡೂ ಕಳೆದದ್ದನ್ನು ’ಆಹುತಿ’ ಎಂದು ಪರಿಭಾವಿಸಿಕೊಳ್ಳಬೇಕು.

ಅದನ್ನು ಮುಂದುವರೆಸುವ ಬಗ್ಗೆ ಕೆಲವರ ಬರಿ ಮಾತನಾಡುತ್ತಿದ್ದಾಗ ಅರಿವಾಗಿದ್ದು, ನಾವೀರೊದು ಕಾರ್ಪೊರೇಟ್ ಜಗತ್ತಿನಲ್ಲಿ ಎಂದು. ಇಲ್ಲಿ ಯಾರೂ ಸುಮ್ಮನೇ ತಮ್ಮ ಜೊತೆ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿ ಫಾಯಿದೆ ಇದ್ದರೆ ಮಾತ್ರ. ಬಾಯಲ್ಲಿ ಬಣ್ಣದ ಮಾತುಗಳನ್ನು ಉಲಿಯಬಲ್ಲರು. ಏಕೆಂದರೆ ಅದು ಅವರ ಮತ್ತು ನಮ್ಮೆಲ್ಲರ ಹೊಟ್ಟೆಪಾಡು ಅಥವಾ ಪ್ರಾಕ್ಟಿಕಲ್ ರಿಯಾಲಿಟಿ.

ನಾ ಇದರ ಬಗ್ಗೆ ಬರೆಯಬಾರದು ಅಂದುಕೊಂಡಿದ್ದೆ, ಇದಕ್ಕೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಊಹಿಸಿ. ಕೆಲವೊಬ್ಬರು ಹ್ಹ ಹ್ಹಾ ನಾ ಮೊದಲೇ ಹೇಳಿದ್ದೆ ಎನ್ನುವವರು, ಇನ್ನೂ ಕೆಲವರು ಇದರಿಂದೆಲ್ಲಾ ಏನೂ ಪ್ರಯೋಜನವಿಲ್ಲ, ಬೇರೆ ಕೆಲಸ ಮಾಡಿ ಅನ್ನುವವರು,……ಅಥವಾ ಉಢಾಫೆ ಮಾಡಬಹುದು ಎಂದು.

ಮತ್ತ್ಯಾಕೆ ಬರೆದೆ. ಗೊತ್ತಿಲ್ಲ. ಅನ್ನಿಸಿದ್ದನ್ನು ಅಕ್ಷರಗಳನ್ನಾಗಿ ಹೆಣೆದು ಮನಸ್ಸಿನ ಕೂಪದಿಂದ ಮೇಲೇರಿ ಬರಲೆಂದೆ? ನಿಧಾನವಾದರೂ ಸರಿಯೇ ಸಾಧಿಸಬಲ್ಲೆವು ಎಂದ ಆ ಆಮೆಯ ಮೇಲಿನ ಪ್ರೀತಿಗೆ? ಹ್ಹ್!!

Advertisements

6 Responses to “ಹಲ್ಲಾಬೋಲ್”

 1. sunaath Says:

  ನಿಮ್ಮ ಪ್ರಶ್ನೆಗಳೇ ನಮ್ಮವೂ ಆಗಿವೆ.
  ಉತ್ತರವನ್ನು ನೀವೇ ನೀಡಬೇಕು.

  Like

 2. ನೀಲಾಂಜಲ Says:

  😀

  Like

 3. ವೈಶಾಲಿ Says:

  😦

  Like

 4. ವಿ.ರಾ.ಹೆ. Says:

  ಹ್ಮ್….ಎಲ್ಲಾ ನೀವೇ ಹೇಳಿಬಿಟ್ಟಿದ್ದೀರಿ.

  Like

 5. Dr. Azad Says:

  ಹೌದು, ಹಲ್ಲಾಬೋಲ್ ಯಾಕೆ ಶೀರ್ಷಿಕೆ ? ಅರ್ಥವಾಗಲಿಲ್ಲ…ನಿಜ ..ಆತಂಕವಾದಕ್ಕೆ ಇದನ್ನ ಅನ್ವಯಿಸೋಹಾಗೆ ಅಂದ್ರೆ…ಹೌದು…ಆದ್ರೆ…ಯಾಕೋ ನಿಮ್ಮ ಮಾತಿನ ಸಾರಾಂಶ ಗೊತ್ತಾಗಲಿಲ್ಲ…??

  Like

 6. Ismail Mk Shivamogga Says:

  ಉತ್ತರವನ್ನು ನೀವೇ ನೀಡಬೇಕು.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: