ಮಲ್ಲಿಕಾವಲ್ಲಭ (ಅಭಿಸಾರಿಕೆಯ ಕತೆಗಳು-೫)

ಅಭಿಸಾರಿಕೆ ಕಾಲ್ಬೆರಳಿನಿಂದ ಜೀಕುತ್ತ ಮಲ್ಲಿಗೆಯ ಬಳ್ಳಿಯಲ್ಲಿ ಜೋಕಾಲಿಯಾಡುತ್ತಿದ್ದಳು. ಜಾಜಿ ಮಲ್ಲಿಗೆಯು ಪಾರಿಜಾತದ ಕಂಪಿನಲ್ಲಿ ಮಿಳಿತಗೊಂಡು ಇಡೀ ವಾತವರಣ ಮತ್ತೇರಿದಂತಿತ್ತು. ನನ್ನ ನೋಡಿದವಳೇ ನಾಚಿಕೊಂಡು ಅಲ್ಲಿಂದೆದ್ದು ಓಡಿ ನೈದಿಲೆಯ ಕೊಳದಲ್ಲಿ ಧುಮುಕಿ ಅಲೆಗಳನ್ನೆಬ್ಬಿಸಿದಳು. ಅಲ್ಲಿಂದ ಎದ್ದು ಬಂದವಳ ಮೈಬಿಸಿಗೆ ನೀರೆಲ್ಲ ಆರಿತ್ತು. ಕಣ್ಗಳಲ್ಲಿ ವಿಚಿತ್ರ ಮಿಂಚಿತ್ತು.

ಪ್ರಭಾವತಿಯ ರಾಜ ಜಕ್ಕಣ್ಣನ ಮಗಳು ಮಲ್ಲಿಕೆ ಇನ್ನೂ ಕನ್ಯೆಯೇ. ಆಕೆಯ ಕನ್ಯಾಸೆರೆ ಕಳೆಯುವವರಿಗೆ ರಾಜ ಇಡೀ ರಾಜ್ಯ ಘೋಷಿಸಿದ್ದ. ಸುದ್ದಿ ತಿಳಿದವರಾರು ಅತ್ತ ಸುಳಿದಿರಲಿಲ್ಲ. ಅತೀ ಬುದ್ಧಿವಂತರಿಬ್ಬರು ಬಂದವರು ಮಾರನೇಯ ದಿನ ಹೆಣವಾಗಿ ಮರಳಿದ್ದರು. ರಾತ್ರಿ ಏನಾಯಿತೆಂದು ಯಾರಿಗೂ ತಿಳಿದಿರಲಿಲ್ಲ.

ಆಕೆಗಿದ್ದಷ್ಟು ಲಾವಣ್ಯ, ಸೌಂದರ್ಯ ಯಾರೂ ನೋಡಿರಲಿಕ್ಕಿಲ್ಲ, ಮುಂದೆಯೂ ಹುಟ್ಟಲಿಕ್ಕಿಲ್ಲ. ಹೀಗಿರಲು ದಂಡೆತ್ತಿ ಬಂದ ಮಾಯಾಪುರಿಯ ರಾಜ ಪ್ರಭೇಂದ್ರ ಪ್ರಭಾವತಿಯನ್ನು ಗೆದ್ದು ಮಲ್ಲಿಕೆಯನ್ನು ಕೊಲ್ಲಲಾಗದೇ ತನ್ನೊಂದಿಗೆ ಕರೆದೊಯ್ದ. ಆಕೆ ಆತನ ಪಾಲಿಗೆ ಭಾಗ್ಯ ದೇವತೆಯಾದಳು. ನೆರೆಹೊರೆಯ ರಾಜರನ್ನೆಲ್ಲ ಮಣಿಸುತ್ತ ಮಹಾರಾಜನಾದ. ಈಗ ಆತನ ಮಗ ಯುವರಾಜ ಕಾಂತರಾಜನಿಗೆ ಮಲ್ಲಿಕೆಯ ಮೇಲೆ ಪ್ರೇಮ. ಆದರೆ ಪ್ರಭೇಂದ್ರ ಬಿಡಬೇಕಲ್ಲ. ಆಕೆಯನ್ನು ಮುಗಿಸಲು ಕತ್ತಿ ಎತ್ತಿದ. ಆದರೆ ಅದೇ ಕತ್ತಿಯನ್ನು ಮಗ ಅಪ್ಪನ ಕುತ್ತಿಗೆಗೆ ಇಟ್ಟು ಮಗದೊಂದನ್ನು ತನ್ನ ಕುತ್ತಿಗೆಗೆ ಇಟ್ಟುಕೊಂಡು ಆಕೆಯನ್ನು ತನ್ನವಳಾಗಿಸಿಕೊಂಡ.

ಆ ರಾತ್ರಿ ಕಾಂತ ತನ್ನ ಕಾಂತೆಯ ಬಳಿ ತೆರಳಿದರೆ ಪ್ರಭೇಂದ್ರ ತನ್ನನ್ನು ಸ್ವರ್ಗಕ್ಕೆ ಏರಿಸಲು ಇನ್ನೊಂದು ಮಗನಿಲ್ಲದಿದ್ದುದ್ದಕ್ಕೆ ದುಃಖಿಸುತ್ತಾ ರಾಜ್ಯಕ್ಕೆ ವಾರಸುದಾರ ಬೇಕೆಂದು ಕಿರಿರಾಣಿಯ ಅಂತಃಪುರಕ್ಕೆ ತೆರಳಿದ.

ಇತ್ತ ತಾರಸಿಯ ಮೇಲೆ ಕಾಂತರಾಜ ಹುಣ್ಣಿಮೆಯ ಬೆಳಕನ್ನು ಉಟ್ಟು ದಿಗಂತವಾಗಿ ನಿಂತಿದ್ದ. ಮಲ್ಲಿಕೆ ಬಳ್ಳಿಯಾಗಿ ಆತನ ಮೈತುಂಬ ಹಬ್ಬುತ್ತಿದ್ದಳು. ಬೇರುಗಳು ಮೇಲ್ಪದರ ಸೀಳಿ ಅವನಾಳಕ್ಕೆ ಇಳಿಯುತ್ತಿದ್ದವು. ಇನ್ನೇನು ಹಿಡಿತ ಬಿಗಿಯಾಗಬೇಕು, ಜೀವ ಹೀರಬೇಕು ಅನ್ನುವಷ್ಟರಲ್ಲಿ ಏನಾಯಿತೋ ಕಾಣೆ ಬಂಧ ಕಳಚಿ ಸುರುಳಿ ಸುರುಳಿಯಾಗಿ ಕೆಳಗೆ ಉರುಳಿದಳು. ಚೆಲ್ಲಿದ ಶರೀರರದ ತುಂಬೆಲ್ಲ ಹೂವು ಬಿರಿಯತೊಡಗಿತು. ಅರಳಿದ ಹೂವುಗಳು ನಾಚಿ ಕೆಂಪಾಗತೊಡಗಿದವು. ಕಾಂತ ಮೆಲ್ಲಗೆ ಬಾಗಿ ಒಂದೊಂದೆ ಹೂವನ್ನು ಆರಿಸಿ ತನ್ನ ಮುಡಿಗೇರಿಸಿಕೊಳ್ಳತೊಡಗಿದ.

ಆ ರಾತ್ರಿ ಚಂದಿರ ನಿದ್ದೆ ಮಾಡಲಿಲ್ಲ. ರೋಹಿಣಿಯ ನೆನಪಲ್ಲಿ ಕುದ್ದುಹೋದ.

6 Responses to “ಮಲ್ಲಿಕಾವಲ್ಲಭ (ಅಭಿಸಾರಿಕೆಯ ಕತೆಗಳು-೫)”

 1. sunaath Says:

  ಕತೆಗೆ ತಕ್ಕ ಭಾಷೆ. ಸೊಗಸಾಗಿದೆ.

  Like

 2. ನೀಲಾಂಜಲ Says:

  ಸುನಾಥ, ನೀವು ಇದನ್ನು ಅಷ್ಟು ಇಷ್ಟಪಡುವುದಿಲ್ಲವೇನೊ ಅಂದುಕೊಂಡಿದ್ದೆ. ಥ್ಯಾಂಕ್ಸ್ 🙂

  Like

 3. Vasant Says:

  Thanks a lot yaar. You saved me from children! I was really worried where to find stories to tell! You made it! Now I can confidently encounter the attack of my kids for stories. Good writing.

  Like

 4. ನೀಲಾಂಜಲ Says:

  @Vasant- ಹಾಂಗಾದ್ರೆ ನೀವು ಇನ್ನು ಹೊಸ ಕತೆಗಳನ್ನು ಕಟ್ಟಿ ಹೇಳಬಹುದು ಅಂತಾಯಿತು. ಆದ್ರೆ ಈ ಕತೆಗಳು ಮಾತ್ರ ಮಕ್ಕಳಿಗಲ್ಲ. ಇನ್ಮುಂದೆ ‘ವಯಸ್ಕರಿಗೆ ಮಾತ್ರ’ ಅಂತ ಬೋರ್ಡ್ ಹಾಕಬೇಕು ಅಂತ ಮಾಡಿದ್ದಿನಿ;) ಪಾಪದ ಅವು ಚಂದಿರ ಏಕೆ ಕುದ್ದು ಹೋದ/ಹಾಂಗಂದ್ರೆ ಏನು ಅಂದರೆ ಏನಂತ ವಿವರಣೆ ಕೊಡಕೆ ಸಾಧ್ಯ!

  Like

 5. pradeep Says:

  neela if u r intrested pls mail me my id is nandithaputta@gmail.com

  Like

 6. ನೀಲಾಂಜಲ Says:

  Mr Pradeep, What does it mean?!!! Is it something kind of abuse?

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: