ಗೌತಮಿ(ಅಭಿಸಾರಿಕೆಯ ಕತೆಗಳು-೪)

ಮಧ್ಯರಾತ್ರಿ ಮನೆಗೆ ಮರಳಿದ ಮೇಲೆ ಅಭಿಸಾರಿಕೆ ಎಲ್ಲೆಂದು ಹುಡುಕುತ್ತೇನೆ. ಎಲ್ಲೂ ಕಾಣಿಸುವುದಿಲ್ಲ. ಎಲ್ಲಿ ಹೋದಳಿವಳು ಎಂದು ಅಂಕಣದ ಮಧ್ಯ ಇಣುಕಿದರೆ ಅದೋ ಅಲ್ಲಿ ಚಂದ್ರನ ಕೆಳಗೆ ಕೌಪಿನ ತೊಟ್ಟು ಪದ್ಮಾಸನದಲ್ಲಿ ಕುಳಿತಿದ್ದಾಳೆ. ಎದುರಿಗೆ ಹೊಚ್ಚ ಹೊಸ ಕುಂಡದಲ್ಲಿ ನೆಟ್ಟ ಆಲದ ಮರದ ಸಸಿ ! ನನಗೆ ನಗು ತಡೆಯಲಾಗಲಿಲ್ಲ.

ಇದೇ ಸಂಜೆ ನಾವಿಬ್ಬರೂ ದೀಪಾಲಂಕೃತ ಊರನ್ನು ನೋಡಲೆಂದು ಆಕಾಶಯಾನ ಕೈಗೊಂಡಿದ್ದೆವು. ಮೇಲಿನಿಂದ ಇಡೀ ಊರಿಗೆ ಊರೇ ಹೊಳೆಯುತಿತ್ತು. ಹಣತೆಯ ದೀಪಗಳು ನಕ್ಷತ್ರದಂತೆ ಮಿಣುಗುತ್ತಿದ್ದವು. ಹೀಗೆ ಸೊಗಸಾದ ಮನೆ-ಮಠಗಳನ್ನು ನೋಡಿ ತಣಿಯುತ್ತ ಊರ ಹಿಂದಿನ ಬೀದಿಯಲ್ಲಿ ಇಳಿದೆವು.

ನಾವು ನಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದಾಗ ಹಿಂದಿನಿಂದ ಬಿದ್ದ ಧಪ್ ಎಂಬ ಶಬ್ದಕ್ಕೆ ಅತ್ತ ತಿರುಗಿದೆವು. ಕರಚ ದುಮುಗುಡುತ್ತ ಬಿದ್ದ ಬಾಗಿಲಿಗೆ ಇನ್ನೆರಡು ಸಲ ಒದ್ದು ನಮ್ಮ ಮುಂದಿನಿಂದ ಸರಿದುಹೋದ. ಕಟ್ಟೆಯ ಬದಿಯಲ್ಲಿ ನಾಗಿ ಗೋಳೊ ಎಂದು ಅಳುತ್ತಿದ್ದ ಕೆಂಚಿಯನ್ನು ಸಮಾಧಾನಿಸುತ್ತಿದ್ದಳು. ಒಳಗೆ ಕೆಂಚ ತನ್ನರ್ಧ ವಯಸ್ಸಿನ ಮಾವನ ಮಗಳು ರತಿಯೆದುರು ಮನ್ಮಥನಾಗ ಹೊರಟಿದ್ದ. ಸ್ವಲ್ಪ ಹೊತ್ತಿನ ಮುಂಚೆ ಗಂಜಿಗೆಂದು ಹಚ್ಚಿದ್ದ ಒಲೆಯಲ್ಲಿ ಈಗ ಕೆಂಡ ನಿಗಿನಿಗಿಸುತ್ತಿತು.

ನಾಗಿಯೂ ಏನಂತ ಸಮಾಧಾನ ಹೇಳಿಯಾಳು? ಅವಳ ಗಂಡ ಅಕ್ಕನ ಮಾತಿಗೆ ಕಟ್ಟು ಬಿದ್ದು ಈಕೆಯನ್ನು ಕಟ್ಟಿಕೊಂಡಿದ್ದ. ಇದ್ದೊಬ್ಬ ಮಗನಿಗೂ ತಲೆಮಂದ. ಸ್ವಲ್ಪ ವರುಷದ ಕೆಳಗೆ ಮದುವೆಗೆ ಮುನ್ನ ಇಟ್ಟುಕೊಂಡವಳನ್ನು ಇವಳಿಗೆ ಸವತಿಯಾಗಿ ಮನೆಗೆ ತಂದಿದ್ದ. ಇತ್ತೀಚಿಗೆ ಹೊಸದೊಂದು ಹುಡುಗಿಯ ಮನೆಯಲ್ಲಿ ರಾತ್ರಿ ಮನೆ ಮಾಡಿಕೊಂಡಿರುತ್ತಾನೆ.

ಎಲ್ಲಿಂದಲೊ ಓಡಿ ಬಂದ ಭಾಗಿ ಇವರಿಬ್ಬರಲ್ಲಿ ಏನೋ ಹೇಳಿದಳು. ಮೂರು ಜನ ಒಂದೇ ಉಸಿರಿಗೆ ಮತ್ತೆಲ್ಲೋ ಓಡಿದರು. ಈಗ ಬಂದಿದ್ದ ಭಾಗಿಯದು ಇನ್ನೊಂದು ಕತೆ. ಮದುವೆಯಾಗಿ ಕೈಗೊಂದು ಮಗು ನೀಡಿ ಭಾಗ ದೇಶಾಂತರ ಹೋಗಿದ್ದ. ಬದುಕಿದ್ದಾನೋ ಇಲ್ಲವೋ ಯಾರಿಗೂ ತಿಳಿದಿಲ್ಲ. ಈಕೆ ತವರಲ್ಲಿ ಕಸ-ಮುಸುರೆ ಮಾಡಿಕೊಂಡು ಮಗುವನ್ನು ಸಾಕಿಕೊಂಡು ಇದ್ದಾಳೆ.

ಅಷ್ಟರಲ್ಲಿ ರಾಮ ನಾಮ ಸತ್ಯ ಹೈ ಕೇಳಿ ಬಂತು. ಹಿಂತಿರುಗಿ ನೋಡಿದರೆ ಮುನಿಯನ ಹೆಣದ ಮೆರವಣಿಗೆ. ಅಲ್ಲೆ ದೂರದಲ್ಲಿ ಕೆಲಸಕ್ಕೆ ಬಾರದ ಗಂಡನನ್ನು ಕಳೆದುಕೊಂಡಿದ್ದಕ್ಕೆ ಮುನಿಯಮ್ಮ ಎದೆ ಬಡಿದುಕೊಳ್ಳುತ್ತ ರೋಧಿಸುತ್ತಿದ್ದಾಳೆ. ನಾಗಿ, ಕೆಂಚಿ, ಭಾಗಿ…. ಆಕೆಯ ಜೊತೆ ಕೂತು ತಾವು ಅಳುತ್ತಿದ್ದಾರೆ. ನಾನು ಪಾಪ ಅಂದುಕೊಳ್ಳುತ್ತಿರುವಾಗ ಈಕೆ ಕೇಳಿದಳು ’ಏನಾಯಿತು?’ ನಾನಂದೆ ’ಅವನು ಮೇಲೆ ಹೋಗಿದ್ದಾನೆ’. ’ಮೇಲೆ ಎಂದರೆ ಎಲ್ಲಿ?’ ’ಅಯ್ಯೋ, ಮೇಲೆ ಎಂದರೆ ಸತ್ತು ಹೋಗಿದ್ದಾನೆ’. ’ಓಹೊ ಸತ್ತು ಹೋಗುವುದಾ, …..’ ನಾನು ದುರುಗುಟ್ಟಿ ನೋಡಿದೆ. ಸುಮ್ಮನಾದಳು. ಸೀದಾ ಮನೆಗೆ ಬಂದಿಳಿದೆವು. ಬಾಗಿಲ ಒಳಗೆ ಹೆಜ್ಜೆಯಿಡುತ್ತಿದ್ದಂತೆ ಮತ್ತೆ ಕೇಳಿದಳು ’ಅವನೆಲ್ಲಿ ಹೋದ?’ ನನಗೆ ತಡೆಯಲಾಗಲಿಲ್ಲ. ಅವಳಿಗೊಂದು ಉದ್ದಂಡ ನಮಸ್ಕರಿಸಿ ನಾನು ಹೊರ ಹೊರಟೆ.

Advertisements

3 Responses to “ಗೌತಮಿ(ಅಭಿಸಾರಿಕೆಯ ಕತೆಗಳು-೪)”

 1. Tejaswini Hegde Says:

  ಅಭಿಸಾರಿಕೆಯ ಕಥೆಗಳು ತುಂಬಾ ಇಷ್ಟವಾದವು. ಮುಂದಿನ ಭಾಗಕ್ಕಾಗಿ ಕಾತುರಳಾಗಿರುವೆ.. ಅಭಿಸಾರಿಕೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.. ಅವಳನ್ನು ಹೊತ್ತೊಯ್ದು ಬರುವ ನವಿಲುಗರಿ ಅಂದರೆ ನನಗೂ ಪಂಚಪ್ರಾಣ 🙂

  ಲವ್ ಗುರು(ಭಾಗ-೨) ಹಾಗೂ ಮಾಣಿಕ್ಯದ ಕಥೆಗಳು(ಭಾಗ-೧) ಮತ್ತೂ ಇಷ್ಟವಾದವು.

  Like

 2. sunaath Says:

  Very interesting.

  Like

 3. ನೀಲಾಂಜಲ Says:

  ತೇಜಸ್ವಿನಿ ಹೆಗಡೆ, ಅಭಿಸಾರಿಕೆಗೆ ಹೇಳುವೆ,ಧನ್ಯವಾದ
  ಸುನಾಥ, ಧನ್ಯವಾದ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: