ನಾನು ಮತ್ತು ಔರಂಗಜೇಬ

ಮನೆಯಲ್ಲಿ ಎಲ್ಲರೂ ನನ್ನ ಔರಂಗಜೇಬ* ಎಂದು ತೀರ್ಮಾನಿಸಿ ಆಗಿದೆ. ಅದೂ ಈಗೀಗ ಅಲ್ಲ, ತುಂಬಾ ಮೊದಲಿನಿಂದ.

ನನ್ನ ಅಮ್ಮ ಸೀತಾರವಾದಕಿ ಹಾಗೂ ಅಪ್ಪ ಮೃದಂಗ ಮತ್ತು ಮೋರ್ಚಿಂಗ್ ಕಲಿತವರು. ಆದರಿಂದ ಸಹಜವಾಗಿ ನನ್ನನ್ನೂ ಸಂಗೀತ ಕಲಿಯಲು ಚಿಕ್ಕ ವಯಸ್ಸಿನಿಂದಲೇ ತಯಾರು ಮಾಡಲಾಯಿತು. ಅಮ್ಮನ ಗುರುಗಳ ಬಳಿಯಿಂದಲೇ ಪಾಠ ಪ್ರಾರಂಭವಾಯಿತು. ಆದರೆ ’ಸ’ ಇಂದ ಆರಂಭವಾಗಿದ್ದು ಸಪ್ತಮ ’ಸ’ ಗೆ ಏರಲೇ ಇಲ್ಲ. ನನಗೆ ಕಿಂಚಿತ್ತೂ ಸ್ವರಜ್ಞಾನವಿಲ್ಲವೆಂದು ಅವರು ಮುಂದಿನ ಪಾಠ ನಿರಾಕರಿಸಿದರು. ಆದರೆ ಆಶಾವಾದಿಯಾದ ನನ್ನ ಅಮ್ಮ ಬಿಡಬೇಕಲ್ಲ. ಸ್ವಲ್ಪ ವರ್ಷದ ಬಳಿಕ ಇನ್ನೊಬ್ಬರಲ್ಲಿ ಪಾಠಕ್ಕೆ ಸೇರಿಸಿದರು. ನಾನು ವಿಧೇಯ ವಿದ್ಯಾರ್ಥಿಯಂತೆ ಅವರ ಬಳಿ ಹಲವು ವಾರಗಳ ಕಾಲ ಅಭ್ಯಸಿಸಿದೆ. ಒಮ್ಮೆ ಅಮ್ಮ ನನ್ನ ಜೊತೆ ಕ್ಲಾಸಿಗೆ ಬಂದಾಗ ನನ್ನ ತಾಲೀಮು ಕೇಳಿ ಅವತ್ತಿನಿಂದ ಯಾವತ್ತೂ ನಾನು ಸಂಗೀತ ಶಾಲೆಯತ್ತ ಸುಳಿಯಲಿಲ್ಲ.

ನಿಜವಾಗಿಯೂ ನನಗೆ ಸ ಮತ್ತು ಸಾ ದ ವ್ಯತ್ಯಾಸ ತಿಳಿಯುವುದಿಲ್ಲ. ಗ ವನ್ನು ಪ ದಂತೆ ಯಾಕೆ ಹಾಡಬಾರದು ಎಂದು ಗೊತ್ತಾಗುವುದಿಲ್ಲ. ಏರಿಸುವುದಂತೆ ಆಮೇಲೆ ಇಳಿಸುವುದಂತೆ. ಏನೋಪಾ, ನನ್ನ ಮಿದುಳಿಗೆ ತಲೆಬಿಸಿಯಾಗುತ್ತದೆ. ಯಾಕೆ ಹೀಗೇ ಹೇಳಬೇಕು ಅಂತ.

ಹೋಗಲಿ ನೃತ್ಯ ಕಲಿಸುವ ಅಂತ ಅದಕ್ಕೆ ಸೇರಿಸಿದರು. ಕುಚಿಪುಡಿಯೂ ಮುಗಿಯಿತು, ಭರತನಾಟ್ಯವೂ ಆಯಿತು. ಏನೂ ಪ್ರಯೋಜನವಾಗಲಿಲ್ಲ. ಅಮ್ಮ ಸಪ್ಪೆ ಮುಖದಿಂದ ನಾನು ನಗುಮುಖದಿಂದ ಮನೆಗೆ ತೆರಳಿದೆವು.

ಥಾ ಥೈ, ಥಕ ಥೈ….. ಒಂದು ಕಾಲು ಹೀಗೆ, ಇನ್ನೊಂದು ಕಾಲು ಹಾಗೆ. ಸೊಂಟ ಈ ಕಡೆ ಸ್ವಲ್ಪ ವಾರೆ, ತಲೆ ಆ ಕಡೆ ವಾರೆ. ಎರಡು ಹೆಜ್ಜೆ ಬಲಗಾಲಿಂದಕ್ಕೆ, ಒಂದು ಹೆಜ್ಜೆ ಎಡಗಾಲಿಂದು. ಒಂದು ಬೆರಳನ್ನು ಮಡಚಿ ಇನ್ನೊಂದಕ್ಕೆ ತಾಗಿಸಿದರೆ ಅದೊಂದು ಮುದ್ರೆ………. ಉಫ್! ನನಗೆ ಇವೆಲ್ಲಾ ಯಾಕೆ ಏನೆಂದು ಯಾವಾಗಲೂ ತಿಳಿಯಲೇ ಇಲ್ಲ. ದೊಡ್ಡವಳಾದ ಮೇಲೆನೆ ಈ ತಾಳ, ಲಯ, ಅಭಿನಯ ಅಂತೆಲ್ಲಾ ಗೊತ್ತಾಗಿದ್ದು. ಆಗ ಒಂದೇ ಹುಬ್ಬನ್ನು ಕುಣಿಸುವುದಿರಲಿ, ತಲೆಯನ್ನು ಚೆನ್ನಪಟ್ಟಣದ ಸ್ಪ್ರಿಂಗ್ ಗೊಂಬೆಯಂತೆ ಕುಣಿಸುವುದೂ ನನ್ನ ಕೈಯಲ್ಲಿ ಆಗಲಿಲ್ಲ.

ನಾನು ಸಂಗೀತ ಸಭೆಗಳಿಗೆ ಹೋದಾಗಲೆಲ್ಲ ಅಕ್ಕ-ಪಕ್ಕದವರು ವಾಹ್, ವ್ಹಾ ಅಂದರೆ ಬೆಚ್ಚಿ ಬೀಳುತ್ತೇನೆ. ನನಗೆ ಅರ್ಥವಾಗದ್ದು ಇವರಿಗೆಲ್ಲ ಏಷ್ಟು ಸುಲಭವಾಗಿ ಅರ್ಥವಾಗುತ್ತೆ ಎಂದು ಪೆಚ್ಚು ನಗು ಸೂಸುತ್ತೇನೆ. ಟಿವಿಯಲ್ಲಿ ರಾತ್ರಿ ಊಟವಾದ ಮೇಲೆ ಅದೆಂಥೊ ಸಂಗೀತ, ನಾಟ್ಯ ಕಾರ್ಯಕ್ರಮಗಳು ಬರುತ್ತವೆ. ಅದನ್ನು ಅಪ್ಪ-ಅಮ್ಮ ಇಬ್ಬರೂ ಕೂತು ವೀಕ್ಷಿಸುತ್ತಿರುತ್ತಾರೆ. ಹೊಗಳುತ್ತ, ತೆಗಳುತ್ತ. ನಾನು ಅವರತ್ತಿರ ಏಷ್ಟೊ ಸಲ ಈ ಸಂಗೀತಕ್ಕೆ ವಾಹ್ ಹೇಗೆ ಹೇಳುವುದು ಎಂದು ತಿಳಿಯಲು ಪ್ರಯತ್ನಿಸಿದ್ದಿದೆ. ಆದರೆ ಅಮ್ಮ ಹೇಳುವ ಮಾತ್ರೆಗಳ ಲೆಕ್ಕಾಚಾರ ನನ್ನ ತಲೆಗೆ ಇಂದಿನವರೆಗೂ ಹೋಗಲಿಲ್ಲ.

ಈ ಮಾತ್ರೆ ಅಂದಕೂಡಲೇ ನೆನಪಾಗುವುದು ಹಳಗನ್ನಡ. ಸ್ಕೂಲಿನಿಂದ ಪ್ರಾರಂಭವಾದ ಮಾತ್ರೆಗಳ ಲೆಕ್ಕಾಚಾರ ಡಿಗ್ರಿಯವರೆಗೂ ನನ್ನ ಕಾಡಿಬಿಟ್ಟಿತು. ಡಿಗ್ರಿಯ ಕೊನೆಯ ವರ್ಷದಲ್ಲಿ ಐಚ್ಛಿಕ ಕನ್ನಡದಲ್ಲಿ ಹಳಗನ್ನಡದ ಒಂದು ಪೇಪರ್ರು ಇತ್ತು. ಅದಕ್ಕೆ ಕವಿರಾಜಮಾರ್ಗ ಕಲಿಯಬೇಕಿತ್ತು. ಮಾತ್ರೆಗಳನ್ನು ಲೆಕ್ಕ ಹಾಕಿ ಅವು ಯಾವ ಛಂಧಕ್ಕೆ ಸೇರಿದವು ಎಂದು ಹೇಳಬೇಕಿತ್ತು. ಜೊತೆಗೆ ಹಳಗನ್ನಡದ ವ್ಯಾಕರಣ ಸೂಕ್ತಿಗಳನ್ನು ಬೇರೆ ಬಾಯಿಪಾಠ ಮಾಡಿ ನಮೂದಿಸಬೇಕಿತ್ತು. ಅಗ ಯಾಕೆ ಹೊಸಗನ್ನಡ ಬದಲಾಗಿ ಹೋಗಿದೆ ಎಂದು ಕೊರಗುತ್ತಿದ್ದೆ. ಏಕಂದ್ರೆ ನನಗೆ ಹಳಗನ್ನಡ ಬಿಡಿಸಿ ಓದಲು ಬರುವುದಿಲ್ಲ, ಅರ್ಥವೂ ಆಗುವುದಿಲ್ಲ.

ಹೊಸಗನ್ನಡದ ಇನ್ನೊಂದು ಪೇಪರಿನಲ್ಲಿ ಎಲ್ಲ ಕವಿಗಳ ಬಗ್ಗೆ ಇತ್ತು. ನೆನಪಿದ್ದಂತೆ ಬೆಂದ್ರೆಯವರ ಸಖಿಗೀತವೂ ಇತ್ತು. ಅಬ್ಬಾ! ಅದೂ ನನಗೆ ಯಾವತ್ತೂ ಜೀರ್ಣವಾಗಲಿಲ್ಲ. ಓದುವಾಗ ಕಷ್ಟವಾಗುತ್ತಿದ್ದ ಸಾಲುಗಳನ್ನು ಲೆಕ್ಚರ್ ಹೇಗೆ ಹೊಸ ಅರ್ಥ ಅದಕ್ಕೆ ಹೊಂದಿಸುತ್ತಾರೆ ಅನ್ನುವುದೇ ಅಚ್ಚರಿಯಾಗಿತ್ತು. ಬೇಂದ್ರೆ ಕ್ಲಾಸಿನಲ್ಲಿ ಇಷ್ಟವಾಗುತ್ತಿದ್ದದೆಂದರೆ ನಮ್ಮ ಲೆಕ್ಚರ್ ಅದನ್ನು ಅವರ ಜೀವನ ಕತೆಯೊಂದಿಗೆ ತಾಳೆಹಾಕುತಿದ್ದದ್ದು.

ಅಂತಾಕ್ಷರಿ ಸಾಧಾರಣವಾಗಿ ಎಲ್ಲರಿಗೂ ಇಷ್ಟದ ಆಟ. ನಾನು ಮಾತ್ರ ಇದರಿಂದ ದೂರ ಸರಿಯುತ್ತೇನೆ. ಹಾಡು ಗೊತ್ತಿಲ್ಲ ಅನ್ನುವುದಕ್ಕಿಂತ ಹಾಡಬೇಕಲ್ಲ ಅನ್ನುವುದಕ್ಕೆ. ಇನ್ನೂ ನೆನಪಿದೆ ನನಗೆ. ನವೋದಯದಲ್ಲಿ ಸಂಗೀತವೂ ಪಠ್ಯದ ವಿಷಯವಾಗಿತ್ತು. ಅದರಲ್ಲಿ ಅರ್ಧ ಅಂಕಗಳಿಗೆ ಪ್ರಾಕ್ಟಿಕಲ್ ಬೇರೆ ಇರುತ್ತಿತ್ತು. ಆ ಒಂದು ಸಲ ಪ್ರಾಕ್ಟಿಕಲ್ ಪರೀಕ್ಷೆಗೆ ಕ್ಲಾಸಿನ ಎಲ್ಲರೆದುರು ನಿಂತು ಹಾಡಬೇಕಾಗಿತ್ತು. ನಾನು ಎದ್ದು ನಿಂತ ಕೂಡಲೇ ಸುಮ್ಮನಿದ್ದ ಕ್ಲಾಸ್ ನಾನು ಹಾಡಲು ಶುರುವಿಟ್ಟುಕೊಂಡ ಕೂಡಲೇ ಗೋವಿಂದವಾಯಿತು. ನಮ್ಮ ಮ್ಯೂಸಿಕ್ ಟೀಚರ್ರಿಗೆ ಎಲ್ಲಿಲ್ಲದ ಕೋಪ ಬಂತು. ಅವರು ಸೈಲೆನ್ಸ್ ಅಂದರೆ ಕೇಳುವರಾರು. ನಾನು ರಾಗ(!) ಪ್ರಾರಂಭಿಸುವುದಕ್ಕೂ ಒಬ್ಬರಾದ ಮೇಲೆ ಒಬ್ಬರು ಹ್ಹಿ ಹ್ಹಿ ಎಂದು ನಗುವುದಕ್ಕೂ ಸರಿ ಹೋಯಿತು. ಸರ್ರು ಇನ್ನೊಮ್ಮೆ ಯಾರಾರು ನಕ್ಕರೆ ಕ್ಲಾಸಿನಿಂದ ಹೊರ ಹಾಕುತ್ತೇನೆ ಎಂದು ಬೆದರಿಸಿದರು. ಒಬ್ಬರಾದ ಮೇಲೆ ಒಬ್ಬರು ಹೊರಗೆ ಹೋಗಲಾರಂಭಿಸಿದರು. ಕೊನೆಗೆ ಸೋತು ನಾನು “ಸಿರಿಯಸ್” ಇಲ್ಲದ್ದಕ್ಕೆ ನನ್ನೇ ಹೊರಹಾಕಿದರು. ನಾನೇನು ಮಾಡುವುದು? ನನಗೆ ಹಾಡನ್ನು ಎಲ್ಲಿ ಏರಿಸಿ ಎಲ್ಲಿ ಇಳಿಸಬೇಕೆಂದು ತಿಳಿಯುವುದಿಲ್ಲ. ಎಲ್ಲ ಹಾಡುಗಳು ಒಂದೇ ಲಯ, ತಾಳದಲ್ಲಿರುತ್ತವೆ. ಹಾಗಂತ ಇದರ ಬಗ್ಗೆ ನನಗೆ ನಾಚಿಕೆಯಂತೂ ಖಂಡಿತ ಇಲ್ಲ.

ಬ್ಲಾಗುಗಳಲ್ಲಿ ಉಳಿದವರು ಘಜಲ್ ಕೋಟ್ ಮಾಡಿ ಏನೇನೊ ಬರೆಯುವಾಗ ನಾನೂ ನನಗೂ ಆ ರಸಾನುಭವ ಆಗಲಿ ಎಂದು ಅಪೇಕ್ಷಿಸಿ ಸಿಡಿ ಹಾಕಿಕೊಳ್ಳುತ್ತೇನೆ. ಅದರ ಜೊತೆ ಈ ಸಲ ಪೂರ್ತಿಯಾಗಿ ಘಜಲ್ ಕೇಳುತ್ತೇನೆ ಎಂದು ಪ್ರಮಾಣ ಮಾಡಿಕೊಳ್ಳುತ್ತೇನೆ. ಒಂದತ್ತು ನಿಮಿಷ. ಗುಲ್ಜಾರ್ರು, ಜಗಜೀತು ಎಲ್ಲರೂ ಮಿಕ್ಸ್ ಆಗಿ ಭೂತಾಕಾರವಾಗಿ ಹೆದರಿ ಸಿಡಿ ಇಜೆಕ್ಟ್ ಮಾಡುತ್ತೇನೆ.

ಹಾಗಂತ ಅಪರೂಪಕ್ಕೆ ಕೇಳುತ್ತೇನೆ. ಅದೂ ಒಂಧರ್ಧ ಗಂಟೆ ಫುಲ್ ವಾಲ್ಯೂಮ್ ಜೊತೆ. ಸೊಂಟದ ವಿಸ್ಯ ಮಸ್ತ ಆಗಿ ಕೇಳಿದ ಹಾಗೆ ಒಂದೊಂದೆ ಬಚ್ಚಿಟ್ಟ ಮಾತು ನೂ ಕೇಳುತ್ತೇನೆ. ಒಂದು ಸ್ಪೀಕರಿನಿಂದ ಇನ್ನೊಂದು ಸ್ಪೀಕರಿಗೆ ಹೋಗುವುದು, ಒಂದು ಸಲ ಲೆಫ್ಟ್, ಇನ್ನೊಂದು ಸಲ ರೈಟ್, ಇದೆಲ್ಲ ಚೆನ್ನಗಾಗುತ್ತೆ. ಆದರೆ ರಾಕ್,ಸ್ಟಾರ್ರು, ಸಿಲ್ವರ್ರು ಇದೆಲ್ಲ ಆಗುವುದಿಲ್ಲ. ತಲೆ ನೋಯುತ್ತೆ.

ಸಂತೆಯಲ್ಲಿನ ಗದ್ದಲಕ್ಕೂ ಬೇಜಾರಾಗದ ನನಗೆ ಈ ಮೈಕು, ಸಿಡಿ, ಟಿವಿ ಕೇಳಿದ್ರೆ ಸ್ವಲ್ಪ ಹೊತ್ತಿಗೆ ಓಡಿ ಹೋಗೊಣ ಅನ್ನಿಸುತ್ತೆ. ಯಾಕೆ ಅಂತ ನನ್ನಾಣೆಗೂ ತಿಳಿದಿಲ್ಲ.

——————————

(*ಹೆಚ್ಚಿನ ಮೊಗಲ್ ರಾಜರುಗಳು ಕಲಾಪ್ರಿಯರಾಗಿದ್ದರೂ, ಈ ಔರಂಗಜೇಬನಿಗೆ ಮಾತ್ರ ಸಂಗೀತ-ನೃತ್ಯದ ಗಂಧ ಗಾಳಿಯೂ ಗೊತ್ತಿರಲಿಲ್ಲವಂತೆ. ಆತನ ಆಸ್ಥಾನದಲ್ಲಿ ಇವೆರಡನ್ನು ನಿಷೇಧಿಸಲಾಗಿತ್ತಂತೆ)

9 Responses to “ನಾನು ಮತ್ತು ಔರಂಗಜೇಬ”

 1. ವಿಜಯರಾಜ್ ಕನ್ನಂತ Says:

  ಔರಂಗಜೇಬ anta yaake antaare…anta gottaglilla…

  Like

 2. ನೀಲಾಂಜಲ Says:

  ವಿಜಯರಾಜ್ ,
  ಹೌದಲ್ವ, ಎಲ್ಲರಿಗೂ ಈ ವಿಷಯ ಗೊತ್ತಿರಬೇಕೆಂದಿಲ್ಲ. ಎರಡು ವ್ಯಾಕ್ಯ ಜಾಸ್ತಿ ಸೇರಿಸಿದೆ. ನೋಡಿ.
  ಚರಿತ್ರೆಯ ಪ್ರಕಾರ ಔರಂಗಜೇಬ ತನ್ನ ಧರ್ಮದ ಕಾರಣದಿಂದ ಇವೆರಡನ್ನೂ ನಿಷೇಧಿಸಿದರೂ ನಮ್ಮ ಮನೆಯಲ್ಲಿ ಆತನ ಹೆಸರು ಉದಾಹರಣೆಗೆ ಕೊಡುವುದು ಬೇರೆ ರೀತಿಯಲ್ಲಿ. ಆತ ಸಂಗೀತ, ನೃತ್ಯ ಎಂದರೆ ಮಾರು ದೂರ ಸರಿಯುತ್ತಿದ್ದ ಅಂತ. ಹೇಗೆ ತುಘಲಕ್, ಹಿಟ್ಲರ್ ಹೇಳುತ್ತಾರೊ ಅದೇ ರೀತಿಯಲ್ಲಿ. ಚರಿತ್ರೆಯ ನಿಜ ಬೇರೆ ಇರಬಹುದು.

  Like

 3. ವಿಜಯರಾಜ್ ಕನ್ನಂತ Says:

  thanks for the info

  Like

 4. ವೈಶಾಲಿ Says:

  ha ha haa 😀

  Like

 5. M G Harish Says:

  ಹಹ್ಹಾ!‌ ಔರಂಗಜೇಬ!! ನಿಮಗೆ ಮನೆಯಲ್ಲಿಟ್ಟಿರುವ ಹೆಸರು ಚೆನ್ನಾಗಿದೆ 🙂

  Like

 6. dinesh Says:

  inthaha information iddre webge load maadi

  Like

 7. shweta Says:

  hi, enjoyed reading this article!!very funny and it reminded me of our old days at jnv…

  Like

 8. anoohya Says:

  post madi varshagale aadamele odtidini..adre enjoy madide 🙂
  tumba chennagi bardidiri… i believe it takes litl courage to admit what u hav said .. naave arasikaro athava ee kale annode haago annodu bahala dodda jijnyase… looking forward to more posts..:)

  Like

 9. ನೀಲಾಂಜಲ Says:

  Thanx to all 🙂

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: