ಕಾಪಿ ಕ್ಯಾಟು

ಸಖಿಗೆ,

ಯಾರಿಂದಾಗಿ ನನ್ನಲ್ಲಿ ಸುಖದ ಅಲೆಗಳೆಳುತ್ತವೆಯೊ
ಜೊತೆಯಾಗಿ ನಡೆವಾಗ ಅವು ವರ್ಧಿಸುತ್ತವೆಯೊ
ಸುಖನಿದ್ದೆಯಲ್ಲೂ ಉಸಿರ ಲಯಗಳು ಸಮಬದ್ಧತೆಗೊಳ್ಳುತ್ತದೆಯೊ
ಅಂತಹ ಪ್ರೇಮಿಗಳ ದೇಹ ಗಂಧವು ಪರಸ್ಪರ ಮಿಲಿತಗೊಂಡಿದ್ದು
ಅಂತವರ ಸಮಭಾವಗಳು ಮಾತಿಲ್ಲದೆ ಒಂದಾಗುವವು
ಮಾತಿನವು ಹೊರಬಂದು ಲಹರಿಗಳಾಗಿ ತೇಲಿಹೋಗುವವು

ಹೀಗೇಂದ ಮಾತ್ರಕೆ ನಮ್ಮೀ ತೋಟದ ಗುಲಾಬಿಗಳನ್ನು
ಯಾವ ಕುರ್ಗಾಳಿಯೂ ಉದುರಿಸದು
ಯಾವ ಬಿರಿ ಬಿಸಿಲು ಬಾಡಿಸದು
ಈ ಗುಲಾಬಿಗಳು ಯಾವತ್ತಿಗೂ ನಮ್ಮವೇ, ನಮ್ಮದೇ ಆಗಿದೆ

ಹಾಗಾಗಿ ಈ ಅರ್ಪಣೆ ಉಳಿದವರಿಗೆ, ಓದಲೆಂದು
ನಿಜವೆಂದರೆ, ಇದು
ಅಂತರಂಗಿಕವಾಗಿ ಸ್ವತಃ ನಾನೇ ನಿನ್ನಲ್ಲಿ ಬಹಿರಂಗವಾಗಿ ಭಿನ್ನವಿಸಿದ್ದು

——————————————————

ಹ್ಞೂಂ, ಕಳೆದ ಶನಿವಾರವೇ ಇದನ್ನು ಬರೆದದ್ದು. ಅದೂ ನಡುರಾತ್ರಿ ಕಳೆದಾದ ಮೇಲೆ. ನಿಜವಾಗಿಯೂ ಕಾಪಿ ಮಾಡೋದು ಇಷ್ಟು ಖುಷಿ ಕೊಡುತ್ತೆ ಅಂತ ಗೊತ್ತೇ ಇರ್ಲಿಲ್ಲ. ಬೇರೆ ಬ್ಲಾಗುಗಳಲ್ಲಿ ಬರೊ ಅನುವಾದಗಳನ್ನು ನಾನು ಓದಿದ್ದೇ ಇಲ್ಲ. ಜೊತೆಗೆ ಸಹ ಬ್ಲಾಗುಗಳಲ್ಲಿ ಇರೊ ಕವನ/ಕವಿತೆ/ಪದ್ಯಗಳನ್ನು ಓದದಿದ್ದದ್ದೇ ಹೆಚ್ಚಿದೆ. ಅಂತದರಲ್ಲಿ ಈ ಕೆಂಡಸಂಪಿಗೆಯ ಘಮಲು ಹೇಗೆ ಹಚ್ಚಿಕೊಂಡೆನೊ ಗೊತ್ತಿಲ್ಲ.

ಆವತ್ತು ಅಲ್ಲಿ ಇ(ಎ)ಲಿಯಟ್ಟನ ಪದ್ಯವೊಂದನ್ನು ಓದುಗರಿಂದ ಕನ್ನಡಕ್ಕೆ ಕಾಪಿ ಮಾಡಿಸುವ ಐಡಿಯಾ ನೋಡಿ ಸುಮ್ಮನೆ ಇನ್ನೊಂದು ಲಿಂಕ್ ಕ್ಲಿಕ್ಕಿಸಿದ್ದೆ. ಆದ್ರೆ ಮತ್ತೊಂದು ದಿನ ಅದಕ್ಕೆ ಬಂದ ಅನುವಾದಗಳತ್ತ ಕಣ್ಣಾಯಿಸಿದಾಗ ಯಾಕೋ ಏನೋ ನಂಗೂ ಮಾಡಬೇಕು ಅಂತ ಅನ್ನಿಸಿಬಿಟ್ಟಿತು. ಅಲ್ಲಿ ಬಂದ ಅನುವಾದಗಳು ನಂಗೆ ಹಿಡಿಸಲಿಲ್ಲ ಅನ್ನೊದಕ್ಕಿಂತ  ಆ ಪದ್ಯ ನನ್ನ ಜೊತೆ ಸ್ವಲ್ಪ ಬೇರೆ ರೀತಿಯಲ್ಲಿ ಮಾತಾಡುತ್ತಿದೆ ಅನ್ನಿಸ್ತು. ಹಾಗಾಗಿ ಕೂತು ಇಂಗ್ಲೀಷ್ ಪದ್ಯವನ್ನು ಪೇಪರಿಗಿಳಿಸಿದೆ.

ನನ್ನ ಪದಕೋಶ ಸಾಕಷ್ಟು ಕಡಿಮೆ ಇರುವುದರಿಂದ ವರ್ಡನಲ್ಲೂ ಪದ್ಯವನ್ನು ಕಾಪಿ ಮಾಡಿದೆ. ವರ್ಡು ಅರ್ಥವಾಗದ ಶಬ್ದಕ್ಕೆ ಸಾಕಷ್ಟು ಸಮಾನಾರ್ಥ ಪದಗಳನ್ನು ತೋರಿಸುತ್ತಲ್ಲ! ಹೀಗೆ ಮಾಡಿಕೊಂಡು ಹಲವು ಬಾರಿ ಓದುತ್ತ ಇದ್ದ ಹಾಗೆ ಆ ಪದ್ಯದ ಗುಂಗು ನಿಧಾನವಾಗಿ ತಲೆಗೆ ಏರತೊಡಗಿತು. ಸಂಗಾತಿ ಜೊತೆಗಿನ ಅನುಬಂಧದಲ್ಲಿ ಎಲ್ಲವನ್ನೂ ಹೇಳಲಿಕ್ಕೆ ತೊಡಗಿ, ಜಾಸ್ತಿ ಹೇಳದೆ ಮತ್ತೆ ಎಲ್ಲದನ್ನೂ ಹೇಳಿದ್ದೇನೆ ಎಂದಂತೆ. ದಿನ ನಿತ್ಯದ ಸಂಗತಿಯೊಂದಿಗೆ ಶುರುವಾಗಿ ತೀರಾ ಖಾಸಗಿಯಾಗಿ, ಅದನ್ನು ಹಾಗೇ ಅಲ್ಲೇ ನಿಲ್ಲಿಸಿ, ಮತ್ತದನ್ನು ಜನರಲೈಸ್ ಮಾಡಿದಂತೆ. ನಿಧಾನವಾಗಿ ಪ್ರಾರಂಭವಾಗಿ ಗಮ್ಯದತ್ತ ಬಗ್ಗಿ, ಎದ್ದು, ಸರಕ್ಕನೇ ಗತಿ ತೀವ್ರವಾಗಿ ಅಷ್ಟೇ ಸಡನ್ ಆಗಿ ಕೆಳಗಿಳಿಸಿ ಅಲ್ಲಿಯೇ ಐಕ್ಯವಾದಂತೆ. ಹೀಗೆ ಏನೇನೊ ಅನ್ನಿಸತೊಡಗಿ ಪದಗಳು ಕೂಡಿ ಶಬ್ದಗಳಾಗಿ, ವಾಕ್ಯಗಳಾಗಿ ನಾನೂ ಬರೆಯಲು ತೊಡಗಿದೆ. ಏನು ಅನ್ನಿಸುತ್ತೆ ಅದಕ್ಕೆ ಶಬ್ದಕೊಡುವುದು ಮತ್ತು ಶಬ್ದಕ್ಕೆ ಅನುಭಾವವನ್ನು ಬಂಧಿಸುವುದು. ಹೀಗೆ ಒಳಗೂ-ಹೊರಗು ಒಂದಾಗಿ ನಿಜಕ್ಕೂ ಆನಂದವಾಗತೊಡಗಿತು.

ಈ ಕನ್ನಡಕ್ಕೆ ಕಾಪಿ ಮಾಡುವುದು ಇಂಥ ಸೊಗಸಾದ ಅನುಭವ ಕೊಡುತ್ತೆ ಎಂದು ಗೊತ್ತೇ ಇರಲಿಲ್ಲ. ಪ್ರತಿ ಸಾಲನ್ನು ತಿದ್ದಿ, ಹೀಗಲ್ಲ ಹೀಗೆ ಬರಲಿ ಎಂದು ಮೂಲ ಕಾವ್ಯ ನನ್ನಲ್ಲಿ ಹುಟ್ಟಿಸಿದ ಭಾವಗಳನ್ನು ಭಟ್ಟಿಗಿಳಿಸೊದು, ತುಂಬಾ ಚೆನ್ನಾಗನಿಸಿತು. ಅನುವಾದ ಮಾಡಿ ಮುಗಿದಾದ ಮೇಲೂ ಏಷ್ಟೊ ಬಾರಿ ದೊಡ್ಡದಾಗಿ ನನ್ನ ತರ್ಜುಮೆಯನ್ನು ಓದಿಕೊಂಡಿದ್ದೇನೆ. ಪ್ರತಿ ಸಲ ಓದಿದಾಗಲೂ ಮುಖದಲ್ಲಿ ಕಿರುನಗೆಯೊಂದು ಮೂಡುತ್ತೆ. ಹ್ಹ ಹ್ಹಾ, ನಾನೂ ಕಾಪಿ ಮಾಡಿದೆ.

ಕೊನೆಯಲ್ಲಿ ನನ್ನ ಅನುವಾದ ಚೆನ್ನಾಗಿದೆಯೋ ಇಲ್ವೊ ಅನ್ನೊದು ನಂಗೆ ಬೇಕಿಲ್ಲ. ಅನುವಾದಕ್ಕಿರೊ ರೂಲ್ಸುಗಳನ್ನು ಫಾಲೊ ಮಾಡುತ್ತೋ ಇಲ್ವೊ ಅದೂ ಗೊತ್ತಿಲ್ಲ. ಪ್ರಖ್ಯಾತ ಕವಿಯಿತ್ರಿಯರಿಗೆ ಇರಬಹುದಾದ ಉತ್ತಮವಾದದನ್ನೇ ಯಾವಾಗಲೂ ಕೊಡುತ್ತೇನೆ ಎಂಬ ಅಲಿಖಿತ ಜವಾಬ್ದಾರಿಯೂ ನನಗಿಲ್ಲ. ಸಾಹಿತ್ಯಿಕ ವಲಯಕ್ಕೂ ಸೇರಿದವಳಲ್ಲ. ನಾನು ಸಾದಾ ಸೀದಾ ಬ್ಲಾಗಿ. ಈ ಅನುವಾದವೂ ನನ್ನ ಲೆಕ್ಕದಲ್ಲಿ ಬ್ಲಾಗಿಂಗ್ ತರಹ. ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಳ್ಳೊದು. ಕಾಪಿ ಮಾಡುತ್ತಿರುವಾಗ ಆಗಿದ್ದ ಸಂತೋಷವನ್ನು ನಿಮ್ಮಲ್ಲಿ ಹೇಳಿಕೊಳ್ಳೊದು. ಅಷ್ಟೇ.

————————-

A DEDICATION TO MY WIFE

To whom I owe the leaping delight
That quickens my senses in our walking time
And the rhythm that governs the repose of our sleeping time,
the breathing in unison.
Of lovers whose bodies smell of each other
Who think the same thoughts without need of speech,
And babble the same speech without need of meaning…

No peevish winter wind shall chill
No sullen tropic sun shall wither
The roses in the rose-garden which is ours and ours only

But this dedication is for others to read:
These are private words addressed to you in public

-T S Eliot

2 Responses to “ಕಾಪಿ ಕ್ಯಾಟು”

  1. ಸುನಾಥ Says:

    ಕೇವಲ ಆಂಗ್ಲ ಕವನವನ್ನು ಓದಿದಾಗ ಸಿಗುವ ಸುಖಕ್ಕಿಂತ ಅನುವಾದ ಸಹಿತ ಓದುವ ಸುಖ ಹೆಚ್ಚಿನದು.

    Like

  2. kaviswara shikaripura Says:

    thanmayaraagi thrjume maadiddeeri… Aadare kelavu padagalu roopanthara-gondiveye thiliyadu… kulirgaali illi kurgaali-yagide, biru-bisilu illi biri-bisilaagide.. idu roopanthara-vo keeli-mane doshavo gotthagutthilla… ottare bhaavanuvaada-dalli jeevanthike-yide…

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: