ನಿಮ್ಮೊಂದಿಗೆ

ಹೌದು, ನಾನು ಬ್ಲಾಗ್ ಪ್ರಾರಂಭಿಸಿ ಮೊನ್ನೆಗೆ ಒಂದು ವರ್ಷ ತುಂಬಿತು. ಹಾಗಂತ ನಂಗೆ ಏನೂ ಖುಷಿ ಆಗ್ತಾ ಇಲ್ಲ. ಬದಲಿಗೆ ಬೇಜಾರಾಗ್ತಾ ಇದೆ. ಒಂದು ವರ್ಷ! ಅಬ್ಬಾ, ನಾನು ಮನೇಲಿ ಕೂತು ಒಂದು ವರ್ಷ ಆಗೊಯ್ತಾ? ಏನೂ ಮಾಡಲಿಲ್ಲ.

ಆವತ್ತು ಸಹ ಕಂಪ್ಯೂಟರ್ ಮುಂದೆ ಬೇಜಾರಾಗಿ ಕೂತಿದ್ದೆ. ನಂಗೆ ಆಫೀಸಿಗೆ ಹೋಗಿ ಹೋಗಿ ಬೊರ್ ಬಂದಿತ್ತು. ಇವತ್ತು ಮನೇಲಿ ಇದ್ದು ಇದ್ದು ಬೇಜಾರು ಬಂದಿದೆ. ಆಗಲೂ ನಂಗೆ ಲೈಫಲ್ಲಿ ಚೇಂಜ್ ಬೇಕಿತ್ತು. ಈಗ್ಲೂ ಚೇಂಜ್ ಬೇಕು. ಮತ್ತೆ ಕೆಲಸಕ್ಕೆ ಹೋಗಬೇಕು. ಆದರೆ ನಾನು ಕೆಲಸಕ್ಕೆ ಹೋದ್ರೆ, ವಾಪಸ್ಸು ಮನೆಗೆ ಬಂದಾಗ ಯಾರೂ ಟೀ ಮಾಡಿ ಕೊಡಲ್ಲ, ಊಟ ರೆಡಿ ಮಾಡಿ ಟೇಬಲಲ್ಲಿ ಸಿಂಗರಿಸಿ ಇಡಲ್ಲ. ಮತ್ತೆ ನಾನೇ ಮಾಡ್ಕೋಬೇಕು. ನಿಜ, ನಾನು ’ಗಂಡ’ ನಲ್ಲವಲ್ಲ!
————
ನೀಲಾಂಜಲ ನನ್ನ ಹೊಸ ಐಡೆಂಟಿಟಿ. ಇದು ನಂಗೆ ಬೇಕಾಗಿತ್ತು. ಆಗ ನಂಗೆ ಮಾತಾಡ್ತಾ ಇರಬೇಕಾದರೆ ಶಬ್ದಗಳೇ ಮರೆತು ಹೋಗ್ತಾ ಇತ್ತು. ನಂಗೆ ಏನು ಅನ್ನಿಸ್ತಿದೆ ಅನ್ನೊದನ್ನು ಕ್ರೂಡೀಕರಿಸಿ ಹೇಳೊಕೆ ಕಷ್ಟ ಆಗ್ತಾ ಇತ್ತು. ಇಲ್ಲಿ ಬರೀತಾ ಬರೀತಾ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಅಭಿಪ್ರಾಯ ಮಂಡನೆ ನಿಧಾನವಾಗಿ ಕರಗತವಾಗ್ತಿದೆ.
————-
ಮೊದಲು ಬರಿಯೋಕೆ ಪೆನ್ನು ಎತ್ತಿದ್ರೆ ಯಾತನೆಯಾಗ್ತಾ ಇತ್ತು. ನಾನು ಮೊದಲು ಬರೀತಾ ಇದ್ದ ಪತ್ರಗಳು ನೆನಪಿಗೆ ಬಂದು ಬಿಡ್ತಿತ್ತು. ಒಂದೂ ಅಕ್ಷರ ಮೂಡ್ತಿರಲಿಲ್ಲ. ಈಗ ಹಳೆಯ ನೆನಪುಗಳು ಖಾಲಿಯಾಗಿದೆ. ಆರಾಂ ಆಗಿ ಪೆನ್ನು ಓಡುತ್ತೆ. ಒಂದು ಮಾತನ್ನು ಹೇಗೆ ಹೇಳಿದರೆ ಜಾಸ್ತಿ ಇಫೆಕ್ಟ್ ಆಗಬಹುದು ಎಂದೆಲ್ಲಾ ಮನಸ್ಸು ತರ್ಕಿಸುತ್ತದೆ. ತಡೆದು ಹಿಡಿದಿದ್ದ ಮಾತೆಲ್ಲ ಸರಾಗವಾಗಿ ಹರಿಯುತ್ತಿದೆ.
————-
ನಾನು ಮೊದಲು ೧,೦೦೦ ಕ್ಲಿಕಗಳಾದಾಗ ಸೆಲೆಬ್ರೇಟ್ ಮಾಡಬೇಕು ಅಂದು ಕೊಂಡಿದ್ದೆ. ಅದು ಯಾವಾಗ ಆಯ್ತೋ, ಆಮೇಲೆ ೫,೦೦೦ ಅಂದು ಕೊಂಡೆ. ಅದು ಸಹ ಗಮನಕ್ಕೆ ಬರಲಿಲ್ಲ. ಕೊನೆಗೆ ಹೋಗ್ಲಿ ೧೦,೦೦೦ ಅಂದುಕೊಂಡೆ. ಬ್ಲಾಗಿಗೆ ಒಂದು ವರ್ಷ ತುಂಬಿದ ದಿನದಂದು ಆಗಲಿ ಅಂದು ಕೊಂಡ್ರೆ ಒಂದು ವಾರ ಮೊದಲೇ ಆಗಿ ಹೋಯ್ತು. 😦

ಹಾಗೇನೆ ಬ್ಲಾಗ್ ಆರಂಭಿಸಿದ ಪ್ರಾರಂಭದಲ್ಲಿ ನನ್ನ ಬ್ಲಾಗೂ ಕೆಂಡಸಂಪಿಗೇಲಿ ಬರಲಿ ಅಂತಾ ಆಶಿಸ್ತಾ ಇದ್ದೆ. ಬರ್ತಾನೆ ಇರಲಿಲ್ಲ. ಕೊನೆಗೊಂದು ದಿನ ಅಲ್ಲಿ ಬಂದು ಬಿಡ್ತು. ಆಹಾ, ಏಷ್ಟು ಖುಷಿ ಆಯ್ತು ಗೊತ್ತಾ, ಆಮೇಲೆ ಅವಧಿ ಮೇಲೆ ಸಿಟ್ಟು ತಿರುಗಿತು. ನನ್ನ ಬ್ಲಾಗು ಇವರ ಕಣ್ಣಿಗೆ ಬೀಳೊದೇ ಇಲ್ವಲ್ಲಾ ಅಂತ. ಕಡೆಗೊಂದು ದಿನ ಅಲ್ಲೂ ಬಂತು:)

ಆಗೆಲ್ಲ ನಾನು ನನ್ನ ಬ್ಲಾಗ್ ಹೆಸರು ವರ್ಡ್ ಪ್ರೆಸ್ಸಿನ ಟಾಪ್ ಲಿಸ್ಟನಲ್ಲಿ ಬಂದರೆ ವಿಪರೀತ ಖುಷಿ ಪಡ್ತಾ ಇದ್ದೆ. ಅದರ ಸ್ಕ್ರೀನ್ ಶಾಟ್ ತೆಗೆದು ಸೆವ್ ಮಾಡಿ ಇಟ್ಟು ಕೊಳ್ತಾ ಇದ್ದೆ. ದಿನ ಕಳೆದಂತೆ ಎಲ್ಲವೂ ರೂಢಿ ಆಗ್ತಾ ಬಂತು. ಕನ್ನಡ ಪ್ರಭಾದಲ್ಲಿ ಬಂದಾಗ ಒಂಚೂರು ಖುಷಿನೇ ಆಗಲಿಲ್ಲ. ಓಹೊ ಅನ್ನಿಸ್ತು. ಕ್ಲಿಕಿಂಗ್ ಜಾಸ್ತಿ ಆಗಿದ್ದಕ್ಕೆ ಖುಷಿ ಆಯ್ತು.

ಪ್ರಾರಂಭದಲ್ಲಿ ದಿನಕ್ಕೆ ಹನ್ನೆರಡು ಸಲ ನನ್ನ ಬ್ಲಾಗೇ ನಾನು ತೆಗೆದು ನೋಡ್ತಿದ್ದೆ. ನನ್ನ ಕ್ಲಿಕ್ ನಿಂದಾದರೂ ಟಾಪ್ ಲಿಸ್ಟನಲ್ಲಿ ಬರಲಿ ಅಂತ;) ಈಗ ಲೊಗಿನ್ ಆಗೇ ಬ್ಲಾಗ್ ನೋಡುವುದು. ಟಾಪ್ ಲಿಸ್ಟನಲ್ಲಿ ಆಗಾಗ ಬಂದಾಗ ನಿಜಕ್ಕೂ ಜನ ಓದುತ್ತಿದ್ದಾರೆ ಅಂತ ಸಮಾಧಾನವಾಗುತ್ತೆ.
——————
ನನಗೆ ನನ್ನ ಯೋಚನೆಗಳನ್ನು ಹಂಚಿಕೊಳ್ಳಲು ಒಂದು ಜೊತೆ ಬೇಕಿತ್ತು. ಕಾಲೇಜಿನ ದಿನಗಳಲ್ಲಿ ಪ್ರಜ್ಞಾ ಇದ್ದಳು, ಕೆಲ ಒಳ್ಳೆಯ ಉಪನ್ಯಾಸಕರಿದ್ದರು. ಇನ್ನೂ ಕೆಲವು ವಾದಗಳಿಗೆ ಮನೆಗೆ/ಪ್ರೆಸ್ಸಿಗೆ ಬರುತ್ತಿದ್ದ ಅನೇಕ ಪರಿಚಯದವರಿದ್ದರು. ಎಲ್ಲಕ್ಕೂ ಜಾಸ್ತಿ ಅಮ್ಮನಿದ್ದಳಲ್ಲ. ಬೆಂಗಳೂರಿಗೆ ಬಂದಾಗಿನಿಂದ ಆಪ್ತ ವಲಯ ಕಡಿಮೆಯಾಗತೊಡಗಿತು ಅಥವಾ ನಾನು “ಪ್ರೊಫೆಷನಲ್” ಆಗಲು ಹೊರಟಿದ್ದೆ. ಮಾತು-ಕತೆ ಕೇವಲ ಕೆಲಸಕ್ಕೆ ಸೀಮಿತವಾಯಿತು. ಹಾಗೇಯೇ ಪರಿಚಯವಾದ ನನ್ನ ಹುಡುಗನಿಗೂ ಈ ಚರ್ಚೆಗಳಲ್ಲಿ ಅಂತಹ ಆಸಕ್ತಿಗಳಿಲ್ಲ. ಅವನಿಗೆ ತನ್ನ ಕೆಲಸ ಮತ್ತು ಅವನ ಗುರಿ ಬಿಟ್ರೆ ಬೇರೆ ವಿಷಯಗಳೆಡೆ ಗಮನವಿಲ್ಲ. ಆದ್ದರಿಂದ ಮಾತೆಲ್ಲ ಹೊಸ ಟೆಕ್ನಿಕ್, ಎನಿಮೇಷನ್ ಮೂವಿ, ವೆಬ್ ಸೈಟ್, … ಇವುಗಳ ಸುತ್ತ ಮಾತ್ರ ಸುತ್ತುತಿತ್ತು. ಹೊಸದು ಓದಿದರೂ ಹೇಳಿಕೊಳ್ಳಕೆ ಜನ ಬೇಕಲ್ವಾ? ತಲೆಯಲ್ಲಿ ಮೂಡುತ್ತಿರುವ ವಿಚಾರಗಳನ್ನು ಚರ್ಚಿಸಲು ಒಂದು ಜೊತೆ ಬೇಕಲ್ವಾ? ನನ್ನ ಸುತ್ತ ಮುತ್ತಲಿನ ಜನರಿಗೆಲ್ಲ ಅವರವರದ್ದೇ ಚಿಂತೆ ಜಾಸ್ತಿ. ಹಾಗಾಗಿ ಮನಸ್ಸು ಮಾತಾಡುವುದನ್ನೇ ನಿಲ್ಲಿಸ್ತಾ ಬಂತು.
—————–
ಮೊದಲು ನಾನು ಫ್ಲಿಕ್ಕರ್ ನಲ್ಲೇ ಜಾಸ್ತಿ ಕಾಲ ಕಳೆತಿದ್ದೆ. ಅಲ್ಲಿನ ಅರ್ಚನಾಳ ಫೋಟೋಗಳು ನಂಗೆ ತುಂಬಾ ಇಷ್ಟ. ಅವಳ ಬ್ಲಾಗಿನಿಂದಲೇ ನನಗೆ ಮೊತ್ತ ಮೊದಲ ಬಾರಿಗೆ ಬ್ಲಾಗ್ ಲೋಕದ ಸಾಮರ್ಥ್ಯ ಅರ್ಥವಾಗಿದ್ದು. ಅದಕ್ಕೂ ಮೊದಲು ರೆಡಿಫ್ ನ ಲಾಗಿನ್ ಪೇಜಿನಲ್ಲಿದ್ದ ಅನೇಕ ಬ್ಲಾಗ್ ಗಳನ್ನು ಕಣ್ಣಾಯಿಸಿದ್ದೆ. ಅರ್ಚನಾಳಿಂದ ಎಷ್ಟೆಲ್ಲಾ ಒಳ್ಳೆಯ ಕ್ರಿಯೇಟಿವ್ ಬ್ಲಾಗ್ ಗಳ ಪರಿಚಯ ನನಗಾಯ್ತು. ಆಮೇಲೆ ನೆನಪಿದ್ದಂತೆ ಪರಿಚಯವಾಗಿದ್ದು ಅವಧಿ. ಅದರಲ್ಲೂ ಅದರಲ್ಲಿ ಬರುತ್ತಿದ್ದ ಭಾಮಿನಿ ಷಟ್ಪದಿ. ದಿನಾ ಅವಧಿ ತೆಗೆದು ಇವತ್ತು ಚೇತನಾಳ ಹೊಸ ಬರಹ ಬಂದಿದೆಯಾ ಅಂತ ನೋಡುತ್ತಿದ್ದೆ. ಬ್ಲಾಗ್ ಲೋಕ ಪರಿಚಯವಾದ ಮೇಲೆನೇ ಅವರು ದಿನಾ ಬರೆಯುವುದಿಲ್ಲ ಅಂತ ಗೊತ್ತಾಗಿದ್ದು. ಹಾಗೆನೆ ಅಬ್ದುಲ್ ರಷೀದರ ಮೈಸೂರು ಪೋಸ್ಟ್. ಈ ಎರಡು ದಿನಾ ಆಫೀಸಿಗೆ ಬಂದ ಕೂಡಲೇ ಫಸ್ಟ್ ಓಪನ್ ಮಾಡೊದಾಗಿತ್ತು. ಕೆಂಡಸಂಪಿಗೆ ಬರೊ ಹೊತ್ತಿಗೆ ಬ್ಲಾಗ್ ಬಗ್ಗೆ ನನ್ನ ಇಂಟರೆಸ್ಟ್ ಕಡಿಮೆಯಾಗಿತ್ತು.
————-
ನಮ್ಮನೆಗೆ ನೆಟ್ ತಗೊಂಡಾದ ಹೊತ್ತಿಗೆ ಸರಿಯಾಗಿ ಹೊಸ ಕ್ಯಾಮೆರಾವು ಬಂದಿತ್ತು. ಹೀಗೆ ಮತ್ತೆ ನೆಟ್ನಲ್ಲಿ ಅಪ್ ಲೋಡ್ ಮಾಡೊ ಹುಚ್ಚು ಹತ್ತಿತು. ಕೊನೆಗೊಂದು ದಿನ ನಂದು ಒಂದು ಬ್ಲಾಗ್ ಅಂತ ಬೇಕು ಅಂತಾ ನೀಲಾಂಜಲ ತೆಗೆದೆ. ಹೆಸರು ಇಡಕೆ ಏಷ್ಟು ಕಷ್ಟ ಆಗಿತ್ತು ಗೊತ್ತಾ? ನಾನು ಏನು ಹಾಕಿದರೂ ಮೊದಲೇ ಇದೆ ಅಂತ ಬರ್ತಾ ಇತ್ತು. ಆಗ ನನಗೆ ನೀಲಾಂಜನ ಅಂತ ಫೇಮಸ್ ಬ್ಲಾಗಿದೆ ಅಂತ  ಗೊತ್ತಿದ್ರೆ ಈ ಹೆಸರೇ ಇಡ್ತಾ ಇರಲಿಲ್ಲ. ಈ ಹೆಸರಿಂದ ಎಲ್ಲರಿಗೂ ಏಷ್ಟೆಲ್ಲಾ ಕನ್ ಫ್ಯೂಸ್ ಆಯ್ತು. ಈಗ್ಲೂ ಮಾಡ್ಕೊಳ್ಳೊರಿದ್ದಾರೆ. ಲ ಮತ್ತು ನ ಗೆ ವ್ಯತ್ಯಾಸ ಇಷ್ಟು ಕಡಿಮೆ ಇದೆ ಅಂತ ಗೊತ್ತಾಗಿದ್ದೆ ಈಗ ನಂಗೆ 😀
————
ಇಲ್ಲಿ ಅಂದರೆ ಮುಂಬಯಿಗೆ ಬಂದ ಮೇಲೆ ನಾನು ಸೀರಿಯಸ್ ಆಗಿ ಬ್ಲಾಗಿಸೊಕೆ ಪ್ರಾರಂಭಿಸಿದ್ದು. ಇಡೀ ದಿನ ಮನೆಲಿ ಒಬ್ಬಳೇ ಇರೊದ್ರಿಂದ ಮಾತಾಡೊಕೆ ಯಾರಾದ್ರೂ ಬೇಕಾಯಿತಲ್ವ. ನಾನು ಟಿವಿ ನೋಡೊಲ್ಲ. ನೋಡೊಕೆ ಕೂತ್ರೆ ಅದರ ಮುಂದಿನಿಂದ ಏಳೊದಿಲ್ಲ. ದಿನಕ್ಕೆ ೩-೪ ಸಿನೆಮಾ ಆರಾಮಾಗಿ ನೋಡಬಲ್ಲೆ. ಸೀರಿಯಲ್ ಯಾವುದು ಬರುತ್ತೆ ಅಂತ ಮಾತ್ರ ಗೊತ್ತಿರೊಲ್ಲ.  ಬ.ಡೇಗೆ ನನ್ನ ಹುಡುಗನಿಂದ ಆನ್ ಲಿಮಿಟೆಡ್ ನೆಟ್ ಪ್ರಸೆಂಟ್ ಸಿಕ್ಕಿದ ಮೇಲಾಗಿನಿಂದ ನನ್ನ ಪ್ರತಿ ದಿನ ನೆಟ್ಟಿನಲ್ಲೇ ಮುಳುಗಿ ಹೋಗಿರುತ್ತೆ. ತರಾವಾರಿ ಜನರು, ವಿವಿಧ ವಿಚಾರಗಳು, ಹೊಸ ಡಿಸೈನ್ ಗಳು, ಐಡಿಯಾಗಳು……… ಹೀಗೆ ರಾತ್ರಿಯಾಗಿಬಿಡುತ್ತೆ.
———–
ಈ ಒಂದು ವರ್ಷದಲ್ಲಿ ಅನೇಕ ಹೊಸ ಜನರ ಪರಿಚಯ ನನಗಾಗಿದೆ. ನನಗೆ ನೆಟ್ ನಿಂದ ಯಾವುದೇ ಇನ್ ಕಂ ಬರದೇ ಇದ್ದರೂ ಅದೂ ನನ್ನ ಒಂಟಿತನವನ್ನು ಹೊಗಲಾಡಿಸಿದೆ. ನನ್ನ ಭಾವನೆಗಳನ್ನು ಕೇಳಿಕೊಳ್ಳಲು ಒಬ್ಬ ಅಸದೃಶ್ಯ ಓದುಗ ನನಗೆ ದೊರಕಿದ್ದಾನೆ. ಕೆಲವೊಬ್ಬರು ನಿಶಬ್ಧವಾಗಿ ನನ್ನ ಮಾತು ಕೇಳಿಸಿಕೊಂಡರೆ ಇನ್ನುಳಿದವರು ಸಶಬ್ಧವಾಗಿ. ಎಲ್ಲರ ಒಳಗೆ ಈ ಬರಹಗಳು ಮೂಡಿಸಿದ ಸ್ವಲ್ಪ ಸ್ವಲ್ಪ ಸಂವೇದನೆಗಳು ಸೇರಿ ನನ್ನ ಕಲ್ಪನೆಯ ಸಹೃದಯನ ನಿರ್ಮಾಣವಾಗಿದೆ. ಹೀಗೆ ನನಗೊಂದು ಆತ್ಮೀಯನನ್ನು ನೀವೆಲ್ಲ ಸೇರಿ ಒದಗಿಸಿಕೊಟ್ಟಿದ್ದಕ್ಕೆ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು*.

ಪ್ರೀತಿಯಿಂದ,
ನೀಲಾಂಜಲ
ಫೆಬ್ರವರಿ ೨೮, ೨೦೦೯

*ಜೊತೆಗೆ ಈ ಬ್ಲಾಗಿನ ಪ್ರಾಯೋಜತ್ವ(ಇಂಟರ್ನೆಟ್ ಬಿಲ್) ಹೊದ್ದುಕೊಂಡಿರುವ ನನ್ನ ಹುಡುಗನಿಗೂ ಧನ್ಯವಾದಗಳು 😉

25 Responses to “ನಿಮ್ಮೊಂದಿಗೆ”

 1. Sushrutha Dodderi Says:

  ಶುಭಾಶಯಗಳು ಎಲ್ಲಕ್ಕೂ. 🙂

  ಜೀರ್ಣಿಸಿಕೊಳ್ಳಲು ಸಾಧ್ಯವಾಗದ್ದು ಎಂದರೆ: “ಈಗ ಹಳೆಯ ನೆನಪುಗಳು ಖಾಲಿಯಾಗಿದೆ” ಎಂಬ ಸೆಂಟೆನ್ಸು! ಅದು ಹ್ಯಾಗೆ ಅಕ್ಕಾ? ಅಂಥದ್ದೊಂದು ಸ್ಥಿತಿಯೂ ಇರುತ್ತಾ?!

  Like

 2. Vikas Hegde Says:

  ಶುಭಾಶಯಗಳು 🙂 Happy blogging….

  Like

 3. ನೀಲಾಂಜಲ Says:

  ಸುಶ್ರುತ,
  thanks n
  ಅದು ಒಂದು ಸ್ಥಿತಿ ಅಲ್ಲ, ಅದೊಂದು ವಾಕ್ಯ. ಅಂದರೆ,
  ಭಾವ ಜೀವಿಯಿಂದ ಪ್ರಾಕ್ಟಿಕಲ್ ಮನುಷ್ಯ ಆದಾಗ ಸಾಧ್ಯ.

  ವಿಕಾಸ್,
  ಥ್ಯಾಂಕ್ಸ್ 🙂

  Like

 4. ಸುನಾಥ Says:

  ಹಾರ್ದಿಕ ಶುಭಾಶಯಗಳು.

  Like

 5. Sandeep Kamath Says:

  oh ‘Atmakathe’ chennaagide:)
  All the best!

  -asadrushya oduga

  Like

 6. ಜಿತೇಂದ್ರ.ಸಿ.ರಾ.ಹುಂಡಿ Says:

  ವರುಷ ಮುಗಿಸಿದ್ದಕ್ಕೆ ಶುಭಾಶಯ. ಬರೆಯೋ ಉತ್ಸಾಹ ಹೀಗೆ ಇರಲಿ…

  Like

 7. Poornima Bhat, Sannakeri Says:

  Baraha chennagide!
  Shubha HaraikegaLondige,

  Nalmeyinda,
  Poorni

  Like

 8. ಮನೋಜ್ Says:

  ನಿಮ್ಮ ಬ್ಲಾಗ್ ಪರಿಚಯವಾಗಿದ್ದು ಸುಮಾರು ತಡವಾಗಿ. ಚೆನ್ನಾಗಿದೆ
  ಹೀಗೆ ವರ್ಷದ ಮೇಲೆ ವರ್ಷ ಆಗ್ಲಿ 😉

  Like

 9. ರಂಜಿತ್ Says:

  ಕಾಫಿಕ್ಲಬ್ ಬ್ಲಾಗಿನಲ್ಲಿ “ಯಾಕೆ ಬ್ಲಾಗ್ ಬರೀಬೇಕು?” ಪ್ರಶ್ನೆ ಗೆ ನಿಮ್ಮುತ್ತರ ಇಲ್ಲಿ..:)
  ನಿಜ. ಹಿಟ್ ಗಳು ಬ್ಲಾಗಿನ ಗುಣಾತ್ಮಕತೆಯನ್ನು ಅಳೆಯುವ ಮಾನ ಅಲ್ಲ ಎಷ್ಟು ಅಂದ್ಕೊಂಡ್ರೂ ಹಿಟ್ ಗಳು ಮನ್ಸಿಗೆ ಖುಷಿಕೊಡ್ತಾವೆ
  ನಲ್ಲನಂತಹ ಗಂಡನಿರುವಾಗ “ನಾನು ಗಂಡನಲ್ಲವಲ್ಲ” ಎಂಬ ಮಾತೇಕೆ?

  ಕೊನೇದಾಗಿ ನಂದೂ ಕಂಗ್ರಾಟ್ಸು…:) ಬರೀತಿರಿ.

  Like

 10. ನೀಲಾಂಜಲ Says:

  -ಸುನಾಥ್, ಧನ್ಯವಾದಗಳು.
  -ಸಂದೀಪ್, ಇದು ಆತ್ಮ ಕತೆಯಾ!!! ಹ್ಹ ಹ್ಹ ಹ್ಹ ಇರಲಿ, ಥ್ಯಾಂಕ್ಸ್ “asadrushya oduga”
  -ಜಿತೇಂದ್ರ, ಧನ್ಯವಾದಗಳು. ಉತ್ಸಾಹ…… hope so 🙂
  – ಥ್ಯಾಂಕ್ಸ್ ಪೂರ್ಣಿ
  – ಮನೋಜ್, ಥ್ಯಾಂಕ್ಸ್ .
  – ರಂಜೀತ್, ಥ್ಯಾಂಕ್ಸ್ . ನಂಗೂ ಬರೀತಿರಬೇಕಾದರೆ ಕಾಫಿ ಬ್ಲಾಗಿನ ಪ್ರಶ್ನೆ ನೆನಪಿಗೆ ಬಂದಿತ್ತು.
  ‘ಗಂಡ’ನಲ್ಲವಲ್ಲಎಂಬುದು ಆಫೀಸಿಗೆ ಹೋಗುವ ಹೆಣ್ ಮನಸ್ಸಿನ ಮಾತು. ಎಲ್ಲರೂ ನಮ್ಮನ್ನು “ಸೂಪರ್ ವುಮೆನ್” ಆಗಿ ನೋಡಲೇ ಬಯಸುತ್ತಾರೆ. ಆದರೆ ಹಾಗಾಗುವುದು ಅಷ್ಟು ಸುಲಭವಲ್ಲ. ಅಡುಗೆ ಮನೆ ಹೆಣ್ಣಿಗೆ ಮಾತ್ರ ಸೇರಿದ್ದು ಎಂಬ ಮೆಂಟಾಲಿಟಿಯ ಬಗ್ಗೆ ಹೇಳಿದ್ದು. ಕೇವಲ ಆಫೀಸಲ್ಲಿ ದುಡಿದು ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳೊ ಸ್ವಾತಂತ್ರ್ಯ ಇರುವುದು ಗಂಡಸರಿಗೆ ಮಾತ್ರ. ( ಹೆಚ್ಚಿನ ಮನೆಗಳಲ್ಲಿ)

  Like

 11. vinayaka kodsra Says:

  blogina huutuhabbakke shubhayagalu…heege bareetaa iri…

  Like

 12. ವಿಜಯರಾಜ್ ಕನ್ನಂತ Says:

  nimma blog ge huTTu habada shubhaashayagaLu….
  tOchiddannu geechuva nannanthavanu geechuva munna yochisuva nimma barahagaLa prabuddhate noDi khushi patTiddeeni….
  aa khushi nirantaravaaguvante heege bareethaa iri

  Like

 13. ಹರೀಶ ಮಾಂಬಾಡಿ Says:

  ಆರ್ಥಿಕ ಆದಾಯ, ಲಾಭ ಇಲ್ಲದಿದ್ದರೂ ಮಾನಸಿಕ ನೆಮ್ಮದಿ ಕೊಡುವ ಬ್ಲಾಗ್(ಇದು ನನ್ನ ವೈಯಕ್ತಿಕ ವಿಶ್ಲೇಶಣೆ), ಅದರ ವಾರ್ಷಿಕೋತ್ಸವ ನಮ್ಮನ್ನು ಮತ್ತಷ್ಟು ಗಟತಿಯಾಗಿಸುತ್ತೆ. ನಿಮಗೆ ಅಭಿನಂದನೆ.

  Like

 14. ರೇಖಾ ಹೆಗಡೆ ಬಾಳೇಸರ Says:

  ಪ್ರಿಯ ಸೌಪರ್ಣಿಕಾ,
  ನಿನಗೆ, ನಿನ್ನ ಬರವಣಿಗೆಗೆ, ‘ನೀಲಾಂಜಲ’ಕ್ಕೆ ಶುಭಾಶಯಗಳು. ಸುತ್ತಲ ಜಗದ ಆಗುಹೋಗುಗಳಿಗೆ ಮಿಡಿಯುವ ನಿನ್ನ ಮನಸ್ಸು ಹೀಗೆ ಸಶಕ್ತವಾಗಿರಲಿ. Good Luck.

  Like

 15. ಶ್ರೀ Says:

  ತುಂಬಾ ದಿನದ ಮೇಲೆ ಇಲ್ಲಿ ಬಂದೆ, ಕಂಗ್ರಾಜುಲೇಶನ್ಸ್! 🙂 anti-terrorist blogನ ಬಾಯಿ ಮುಚ್ಚಿಸಿಬಿಟ್ರಾ?

  Like

 16. ಶೆಟ್ಟರು (Shettaru) Says:

  ಹಾರ್ದಿಕ ಶುಭಾಶಯಗಳು

  -ಶೆಟ್ಟರು

  Like

 17. Sree Says:

  mELirO shree tharaa naanU late entry!
  have been enjoying reading neelanjala… congrats n all the bestu:) (kanglish commentige kshame plz – chrome upayogstideeni, kannada saryaag type aagtilla!)

  Like

 18. ನೀಲಾಂಜಲ Says:

  -ವಿನಾಯಕ, ಥ್ಯಾಂಕ್ಸ್ n hope so 🙂
  -ವಿಜಯರಾಜ್, ಧನ್ಯವಾದಗಳು. ಪ್ರಭುದ್ಧತೆ !! ಇರಲಿ 😀
  -ಹರೀಶ, ಥ್ಯಾಂಕ್ಸ್ n ನೀವು ಹೇಳಿದ್ದು ನಿಜ
  -ರೇಖಕ್ಕಾ, ಥ್ಯಾಂಕ್ಸ್ 😀
  -ಶ್ರೀ,ಥ್ಯಾಂಕ್ಸ್ . ನೀವು ಕೇಳಿದ ಪ್ರಶ್ನೆ ಅರ್ಥವಾಗಲಿಲ್ಲ
  anti terrorist ಬ್ಲಾಗ್ ಅದರ ಪಾಡಿಗೆ ಅದು ಇದೆ. ಅಲ್ಲಿ ಜಾಸ್ತಿ activities ನಡೆಯಬೇಕು ಅಂದರೆ ಎಲ್ಲರೂ ಸಕ್ರೀಯವಾಗಿ ಭಾಗವಹಿಸಬೇಕು
  – ಶೆಟ್ಟರು,ಧನ್ಯವಾದಗಳು
  – ಶ್ರೀಮಾತಾ, thanx for ur wishes n reading me

  Like

 19. gurubaliga Says:

  ನಿಮ್ಮ ಕನವರಿಕೆಗಳಿಗೆ ವರ್ಷ ತುಂಬಿದ್ದು ತಿಳಿದು ನಲಿವಾಯಿತು. ನನ್ನ ಒಂದು ಪ್ರಶ್ನೆಗೆ ಉತ್ತರ ಬಾಕಿ ಇದೆ. ಉತ್ತರಕ್ಕಾಗಿ ಕಾಯುತ್ತಿದ್ದೇನೆ.
  ಡಿಕೆ ಕಂಡರೆ ಅಷ್ಟಕ್ಕಷ್ಟೇ ಎನ್ನುವುದು ಎಲ್ಲ ನಾರ್ತ್ ಕೆನರಾದವರ ಅಲವತ್ತು. ಇದುವರೆಗೂ ಯಾರೂ ಅಕ್ಷರಕ್ಕೆ ಇಳಿಸಲಿಲ್ಲ. ನಿಮ್ಮಿಂದ ಒಂದು ಸ್ಫೋಟಕ ಬ್ಲಾಗ್ ಬಂದರೆ ಮಜಾ ಇರತ್ತೆ.

  Like

 20. kallare Says:

  ಹಾರ್ದಿಕ ಶುಭಾಶಯಗಳು….

  Like

 21. vishwa sunkasal Says:

  ಶುಭಾಶಯಗಳು

  Like

 22. ವೈಶಾಲಿ Says:

  ಹ್ಮ್ಮ್……….. ಕಂಗ್ರಾಟ್ಸು ! ಯಾವಾಗ ಪಾರ್ಟಿ?
  ಇದನ್ನೆಲ್ಲಾ ನಾನು ಹೇಳಬೇಕು ಅಂದ್ಕೋತಾ ಇದ್ದೆ… ಆಯ್ತು ಬಿಡು. ಇನ್ಯಾರು ಓದ್ತಾರೆ ಅದನ್ನ? 😦 ನಂಗೂ ಹಿಂಗೇ ಅನಿಸ್ತಿದೆ. ನನ್ನ ಒಂಟಿತನವನ್ನ ಈ ಬ್ಲಾಗು ಹಂಚಿಕೊಂಡಷ್ಟು ಮತ್ಯಾರೂ ಹಂಚಿಕೊಂಡಿಲ್ಲ ಅಂತ. ಚೂರು ಪಾರು ಕಂಪ್ಯೂಟರು ಕಲಿತಿದ್ದಕ್ಕೂ ಸಾರ್ಥಕ ಆಯ್ತು! ಬ್ಲಾಗಿನ ವಿಚಾರ ಬಂದ್ರೆ ನಾನು ನಿಂಗೆ ಥ್ಯಾಂಕ್ಸ್ ಹೇಳ್ದೆ ಮುಂದೆ ಹೋಗೋ ಹಾಗಿಲ್ಲ 🙂

  ಆವತ್ತು ಸಹ ಕಂಪ್ಯೂಟರ್ ಮುಂದೆ ಬೇಜಾರಾಗಿ ಕೂತಿದ್ದೆ. ನಂಗೆ ಆಫೀಸಿಗೆ ಹೋಗಿ ಹೋಗಿ ಬೊರ್ ಬಂದಿತ್ತು. ಇವತ್ತು ಮನೇಲಿ ಇದ್ದು ಇದ್ದು ಬೇಜಾರು ಬಂದಿದೆ. ಆಗಲೂ ನಂಗೆ ಲೈಫಲ್ಲಿ ಚೇಂಜ್ ಬೇಕಿತ್ತು. ಈಗ್ಲೂ ಚೇಂಜ್ ಬೇಕು. ಮತ್ತೆ ಕೆಲಸಕ್ಕೆ ಹೋಗಬೇಕು. ಆದರೆ ನಾನು ಕೆಲಸಕ್ಕೆ ಹೋದ್ರೆ, ವಾಪಸ್ಸು ಮನೆಗೆ ಬಂದಾಗ ಯಾರೂ ಟೀ ಮಾಡಿ ಕೊಡಲ್ಲ, ಊಟ ರೆಡಿ ಮಾಡಿ ಟೇಬಲಲ್ಲಿ ಸಿಂಗರಿಸಿ ಇಡಲ್ಲ. ಮತ್ತೆ ನಾನೇ ಮಾಡ್ಕೋಬೇಕು. ನಿಜ, ನಾನು ’ಗಂಡ’ ನಲ್ಲವಲ್ಲ!
  – ೧೦೦% ಕರೆಕ್ಟು! 😦

  Like

 23. minchulli Says:

  shubhaashayagalu ..

  Like

 24. ಸುದರ್ಶನ್ Says:

  ಸೌಪರ್ಣಿಕಾ ಅವರೇ..

  ನಿಮ್ಮ ಈ ಬರವಣಿಗೆ ನೋಡಿ ಬಹಳ ಖುಷಿಯಾಯಿತು.. ಯಾಕೆ ಅಂತ ಕೇಳ್ತೀರಾ?
  ಬಹಳವೇ ಸಹಜವಾಗಿ ಹಾಗು ವಾಸ್ತವಕ್ಕೆ ಹತ್ತಿರ ಎನ್ನುವಂತೆ ನಿಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದೀರಾ…
  ನನ್ನ ಪರವಾಗಿ ಅಭಿನಂದನೆಗಳು..

  In fact, ನೀವು ಹೇಳಿರುವ ಹಾಗೆ ಈ internet ಮಾಧ್ಯಮದಿಂದ ಸಹಸ್ರಾರು ಜನ ತಮ್ಮ ಒಂಟಿತನಕ್ಕೆ
  ಮುಕ್ತಿ ಹೇಳಿ, ಅತ್ಯಂತ ಕ್ರಿಯಾಶೀಲರಾಗಿದ್ದಾರೆ, ಹಾಗು online ಜಗತ್ತಿನ ಅದೃಶ್ಯ ಜನರ ಜೊತೆ ಒಂದೇ
  ಅಲ್ಲದೆ ಸಾವಿರಾರು ದೂರವಿರುವ ತಮ್ಮ ಪ್ರಿಯರಾದವರೊಡನೆಯೂ ಸಂಪರ್ಕ ಮಾಡಲು ಸಾಧ್ಯವಾಗಿದೆ..

  ನನಗೆ ಸಹ ರೇಖಾ ಅನ್ನೊ ಒಂದು ಅಕ್ಕ ಇದ್ದಾಳೆ. ಆಕೆಯೂ ಸಹ ಹೀಗೆ ಮನೆಯಲ್ಲಿ time pass ಹೇಗೆ
  ಮಾಡೊದು ಅಂತ ಚಿಂತಿಸ್ತಾ ಇದ್ಲು. ನಾನು ಆಕೆಗೆ ಒಂದು orkut ಹಾಗು gmail account ಮಾಡಿ
  ಕೊಟ್ಟೆ. ಜೊತೆಗೆ ಅದರಲ್ಲಿ chat ಮಾಡೋದು ಹೇಗೆ ಅನ್ನೋದನ್ನ ಸಹ ಕಲಿಸಿಕೊಟ್ಟೆ.. ಈಗ ಆಕೆಗೆ ಅದರ
  ರುಚಿ ಹತ್ತಿದೆ, ಹಾಗು ನಮ್ಮೆಲ್ಲರ ಜೊತೆ ಮಾತನಾಡಲು ಅವಕಾಶ ಆಗಿದೆ.. ಆಕೆ ಕೂಡ ಮೊದಲು, ಅಯ್ಯೊ
  ಯೆಂಗ್ ಇದೆಲ್ಲ ತಿಳಿತಿಲ್ಯ ತಮಾ, ಅಂತ ಹೇಳಿದ್ಲು.. ಸದ್ಯ ನೀವಿರುವ ಜಾಗದಲ್ಲೇ (amchi mumbai)
  ನಲ್ಲಿ ನೆಲೆಸಿರುತ್ತಾಳೆ.. ಇನ್ನು bloggingನ ರುಚಿ ತೋರಿಸೋದು ಬಾಕಿ ಇದೆ.. 🙂

  ಈ ನಿಮ್ಮ “ನಿಮ್ಮೊಂದಿಗೆ” ಲೇಖನವನ್ನ ನಾ ನಿಮ್ಮ blog ನಲ್ಲಿ ಪ್ರಥಮವಾಗಿ ಓದಿದ್ದು. ನಿಮ್ಮ blog visit
  ಮಾಡಲು ಪ್ರೇರಿತಗೊಳಿಸಿದ್ದವರು ಮತ್ತೆ ಯಾರೂ ಅಲ್ಲ, ನೀವೇ ನಿಮ್ಮ ಗೆಳತಿಯೊಬ್ಬರಿಗೆ blog ಶುರು ಮಾಡಲು
  ಪ್ರೇರಿತಗೊಳಿಸಿದ್ದೀರಲ್ಲಾ, ಅವರೇ! ಹೆಸರನ್ನ ತಗೊಳೋ ಅವಶ್ಯಕತೆ ಇಲ್ಲ ಅಂದುಕೊಳ್ಳುತ್ತೇನೆ..

  ಬೇರೆ ಲೇಖನಗಳನ್ನ ಸಮಯ ಸಿಕ್ಕಾಗ ಓದಿ, ಸಾಧ್ಯವಾದಲ್ಲಿ ನನ್ನ ಅನಿಸಿಕೆಗಳನ್ನ ವ್ಯಕ್ತಪಡಿಸುತ್ತೇನೆ..
  ಒಂದು ವರ್ಷ ತಮ್ಮ bloggingನ ಸಾಹಸವನ್ನ ಆಸಕ್ತಿ ಕಳೆದುಕೊಳ್ಳದೆ ಮುನ್ನಡೆಸಿದ್ದಕ್ಕೆ ಮತ್ತೊಮ್ಮೆ
  ಅಭಿನಂದನೆಗಳು ತಮಗೆ..

  cheers,

  –ಸುದರ್ಶನ್

  Like

 25. neelanjana Says:

  ನಿಮ್ಮ ಬ್ಲಾಗಿಗೆ ಆದ ವರ್ಷದ ಸಂಭ್ರಮವನ್ನ ಎಷ್ಟೋ ತಿಂಗಳು ಕಳೆದು ನೋಡುತ್ತಿರುವೆ – ಇರಲಿ. ಶುಭಾಶಯಗಳು 🙂

  >>ನನಗೆ ನೀಲಾಂಜನ ಅಂತ ಫೇಮಸ್ ಬ್ಲಾಗಿದೆ ಅಂತ ಗೊತ್ತಿದ್ರೆ ಈ ಹೆಸರೇ ಇಡ್ತಾ ಇರಲಿಲ್ಲ. ಈ ಹೆಸರಿಂದ
  >>ಎಲ್ಲರಿಗೂ ಏಷ್ಟೆಲ್ಲಾ ಕನ್ ಫ್ಯೂಸ್ ಆಯ್ತು. ಈಗ್ಲೂ ಮಾಡ್ಕೊಳ್ಳೊರಿದ್ದಾರೆ. ಲ ಮತ್ತು ನ ಗೆ ವ್ಯತ್ಯಾಸ ಇಷ್ಟು
  >>ಕಡಿಮೆ ಇದೆ ಅಂತ ಗೊತ್ತಾಗಿದ್ದೆ ಈಗ ನಂಗೆ 😀

  ಅಂದಹಾಗೆ ’ನೀಲಾಂಜನ’ ಅನ್ನೋದು ಒಂದು ’ಫೇಮಸ್’ ಬ್ಲಾಗ್ ಅಂತ ಅನ್ನೋ ಸುದ್ದಿ ಕೇಳಿ ಸಿಕ್ಕಾಪಟ್ಟೆ ಖುಷಿಯೂ ಆಯ್ತು 😉

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: