ಪಿಂಕ್ ಚೆಡ್ಡಿ

ಹ್ಹ ಹ್ಹ ಹ್ಹಾ , ಏಷ್ಟು ಚೆನ್ನಾಗಿರೊ concept ಅಲ್ವಾ ?
ನಂಗೆ ಈ ವಿಷಯ ಗೊತ್ತದಾಗಿನಿಂದ ಮತ್ತು ಆ ಪೋಸ್ಟರ್ ನೋಡಿ ನಗ್ಯಾಡ್ತಾ ಇದ್ದೇನೆ. ಫಸ್ಟ್ ಟೈಮ್ ಪಬ್ಲಿಕ್ ಆಗಿ ಚಡ್ಡಿ ಅದೂ ಹುಡುಗಿಯರ ಚೆಡ್ಡಿ ಬಗ್ಗೆ ಮಾತಾಡೊ ಹಾಗಾಯ್ತು. ಸಮಾಜದಲ್ಲಿ ಚೆಡ್ಡಿಗೂ ಒಂದು ಗೌರವದ ಸ್ಥಾನಮಾನ ಬಂತು. ನಂಗೆ ಗೊತ್ತಿರೊ ಹುಡುಗಿಯರಿಗೆಲ್ಲಾ ನಿನ್ನ ಪಿಂಕ್ ಚೆಡ್ಡಿ ಕಳಿಸಿದ್ಯಾ ಅಂತ ಕಿಚಾಯಿಸ್ತಾ ಇದ್ದೇನೆ. ಇಲ್ಲಾ ಅಂದ್ರೆ ಯಾರ ಹತ್ರನೂ ಡೈರೆಕ್ಟ್ ಆಗಿ ಚೆಡ್ಡಿ ವಿಷಯ ಎತ್ತೊ ಹಾಗಿರಲಿಲ್ಲ. ಶಾಂತಂ ಪಾಪಂ.
ಈಗ ಯಾರದ್ರೂ ಚೆಡ್ಡಿವಾಲಾಗಳು ಅಂದ್ರೆ ಯಾವ ಚೆಡ್ಡಿವಾಲಾಗಳು ಅಂತ ಕೇಳಬೇಕಾಯ್ತು. ಕೇಸರಿನೊ, ಪಿಂಕೊ, ಕೆಂಪೊ, ನೀಲಿನೊ………. ಅಂತೆಲ್ಲಾ.
ಈಗ ನೋಡಿ ಪಿಂಕ್ ಚೆಡ್ಡಿ ಅನ್ನೊದು ಸ್ತ್ರೀ ಶಕ್ತಿಯ ಸಂಕೇತ !
ಪಬ್ ಗೆ ಹೋಗಿ ಕುಡಿದು ಬರೊದು ಸ್ತ್ರೀ ಸಮಾನತೆಯ ಪ್ರತೀಕ !!
ಹೋಗ್ಲಿ ಬಿಡಿ. ಆದ್ರೆ ಈ ತರಹದ ಹೋರಾಟಗಳು ಚೆಲ್ಲಾಪಿಲ್ಲಿಯಾಗಿರೊ ಜನರನ್ನು ಒಂದು ಸೂತ್ರದಲ್ಲಿ ಬಂಧಿಸಿ ಒಂದೇ ಸೂರಿನಡಿ ಏಳೆದು ತರುತ್ತದೆ. ಅದು ಖುಷಿಯ ವಿಷಯ. ಹಾಗೇನೆ ಸಮೂಹ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ನೆಟ್ (social networking sites, blogs,..) ಪ್ರಾಬಲ್ಯವನ್ನು ತೋರಿಸುತ್ತದೆ.

ಪಿಂಕ್ ಚೆಡ್ಡಿಯ ಬ್ಲಾಗ್

15 Responses to “ಪಿಂಕ್ ಚೆಡ್ಡಿ”

 1. ಮೌನಿ Says:

  “ಪಿಂಕ್ ಚೆಡ್ಡಿ ಅನ್ನೊದು ಸ್ತ್ರೀ ಶಕ್ತಿಯ ಸಂಕೇತ”

  ಭರ್ಜರಿ ಹೋಡೆತ…!!!

  ಈಗ “ಪಬ್ ಭರೋ” ಮುಂದೆ… “ಗಂಡಸಿನ ಮೇಲೆ ಗ್ಯಾಂಗ್ ರೇಪ”…!!!!

  ಹೀಗೆ ಬಿಳುತ್ತಿರಲಿ ಹೊಡೆತ ಗಂಡಸಿನ ಪುರುಷಾಹಂಕಾರಕ್ಕೆ…

  – ಮೌನಿ

  Like

 2. nagaraj0009 Says:

  THis is good for them

  Like

 3. ಮಾಯ್ಸ Says:

  ಪಿಂಕ್ ಚಡ್ಡಿ ಆಂದೋಳನದಂತವು ಬೇಕು. ನಮ್ಮ ಹೆಂಗಸರು ಇಷ್ಟು ಧೈರ್ಯ ತೋರಿಸಿದ್ದು ಮೆಚ್ಚಬೇಕು.

  Like

 4. Santhosh Chidambar Says:

  ಚಡ್ಡಿ ಪ್ರಸಂಗ ಅಸಹ್ಯ , ಅದು ಮನುಷ್ಯನ ಹುಚ್ಚಾಟದ ಅತಿರೇಖತನ. They have sick mentality

  Like

 5. ಗುರು ಬಾಳಿಗ Says:

  As ‘Choli ke peeche kya hai’ circulated in the form of audio cassettes, R. P Chugh, an advocate and a Bhartiya Janata Party (BJP) supporter,was among the many who heard the song. He filed a legal petition in Delhi alleging the song

  “is obscene, defamatory to women community and is likely to incite the commission of offence. The song is grossly indecent and is being sung through cassettes at public places, annoying the people at large, the undersigned specially. (R. P. Chugh 1993)”

  “On the one hand number of steps have been taken for the welfare and security of women, on the other hand persons like Subhash Ghai have been giving song to the anti-social elements like “choli ke peeche kya hai” and it has become very difficult for girls and women to go out. In case the above song is going to continue, the next song would be: kachi ke peeche [behind the underwear] and peti cot ke peeche [behind the petticoat] etc. (S. Chugh 1993)”

  ಮೇಲಿನ ಹಳೆಯ ಗಲಾಟೆಯೊಂದು ರೋಮಾಂಚನ ಹುಟ್ಟಿಸುತ್ತದೆ. ಭಾರತೀಯ “ಸಂಸ್ಕೃತಿ” ಉಳಿಸಿಕೊಳ್ಳಲು ಎಷ್ಟೊಂದು ವೀರಾವೇಶದಿಂದ ಹೋರಾಡಿ ಹುತಾತ್ಮರಾಗಿದ್ದರೋ ಏನೋ.

  ಪಿಂಕ್ ಚಡ್ಡಿಗೂ ಇದಕ್ಕೂ ಸಂಬಂಧವಿದೆಯೇ?

  ಇದರಲ್ಲೊಂದು ಆಧ್ಯಾತ್ಮ ನನಗೆ ಕಾಣುತ್ತಿದೆ. ಗೋಮಟ ಬೆತ್ತಲೆಯಾದಾಗ ನಿರ್ವಾಣ ಸಾಧ್ಯವಾಯಿತು. ಪಿಂಕ್ ಚಡ್ಡಿಯೂ ಒಂದು ಸಾಮಾಜಿಕ ನಿರ್ವಾಣದತ್ತ ಒಂದು ಹೆಜ್ಜೆ.

  ಮೇಲಿನ ಪ್ರಬಂಧಕ್ಕೆ ಕೊಂಡಿ:
  http://social.chass.ncsu.edu/jouvert/v5i3/mehta.htm

  Like

 6. ಮುತ್ತುಮಣಿ Says:

  ನಮಸ್ತೆ,

  ಮೊದಲ ಭೇಟಿ ನಿಮ್ಮ ಬ್ಲಾಗಿಗೆ. ನಿಮ್ಮ ಹೆಸರೆಲ್ಲೂ ಕಾಣಿಸಲಿಲ್ಲ (ಅಥವಾ ನೋಡಲಿಲ್ಲವೋ!), ನಿಮ್ಮ ’ವಾರೆನೋಟ’ ಹಿಡಿಸಿತು.

  Like

 7. ಮೌನಿ Says:

  ಬಾಳಿಗರೇ,

  ಗೊಮ್ಮಟ ಬೆತ್ತಲೆಯಾಗಿ “ಆಸೆ”ಗಳನ್ನು ಮೆಟ್ಟಿ ನಿಂತಾಗ “ನಿರ್ವಾಣ” ಸಾಧ್ಯವಾಯಿತು, ಆದ್ರೆ ಈ ಪಿಂಕ ಚಡ್ಡಿ ಕಳಚಿಟ್ಟು ಪಬ್ಬು-ಬಾರಿಗೆ ಹೋದರೆ ಕೇವಲ “ನಿರ್ಮಾಣ”(?) ಸಾಧ್ಯವಾಗುತ್ತದೆ.

  ಒಂದು ವಿಚಾರಧಾರೆಯನ್ನು ವಿರೋಧಿಸಲು ಒಂದು ಸಾಮಾಜಿಕ ಚಳುವಳಿ ನೆಡೆಯಬೇಕಾದರೆ ಒಂದು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ, ಮನೆಯಲ್ಲಿಯೇ ನಾವು ಬರಿ ಚಡ್ಡಿಯಲ್ಲಿ ಅಡ್ಡಾಡುವುದಿಲ್ಲ ಅಂತಹದ್ದರಲ್ಲಿ ನಿಮ್ಮ ಒಳಉಡುಪಿನಿಂದ ಯಾವ ಸಾಮಾಜಿಕ ಚಳುವಳಿ ನೆಡೆಸಬೇಕಂತಿರಿ, ನಾಳೆ ಇದೇ ರೀತಿಯ ಚಳುವಳಿಗಳು ಪ್ರಾರಂಭವಾದರೆ ಹೇಗೆ? ಅದು ಶಾಲಾ-ಕಾಲೇಜುಮಟ್ಟದಲ್ಲಿ. ನಾಳೆ ಶಾಲಾ-ಕಾಲೇಜುಗಳಲ್ಲಿ “ಅಸಭ್ಯ” ಬಟ್ಟೆ ಧರಿಸಿ ಬರಬೇಡಿ ಎಂದು ಹೇಳಲು ಯಾವ ಶಿಕ್ಷರಿಗೆ ತಾನೇ ಧೈರ್ಯ ಬಂದಿತು?

  ಇನ್ನು ಕೇಲವೇ ದಿನಗಳಲ್ಲಿ “ಚೈಲ್ಡ ಮದರ್” ಸಂಸ್ಕೃತಿ ಭಾರತಕ್ಕೂ ಬಂದಿತು…ಆಗ ನಮ್ಮ ಮಕ್ಕಳ ವಿರುದ್ಧ “ಕಾಡೊಮ್ ಬಳಸಿ” ಎಂದೆಲ್ಲಾ ಚಳುವಳಿ ನೆಡೆಸಬೇಕಾದಿತು…ಅಷ್ಟೆ…

  -ಮೌನಿ

  Like

 8. XX Says:

  ’ಚೈಲ್ಡ್ ಮದರ್’ ಸಂಸ್ಕೃತಿ ಭಾರತಕ್ಕೆ ಬರಬೇಕಾಗಿಲ್ಲ. ಈಗಾಗಲೇ ಇದೆ. ಇಲ್ಲಿ ನೋಡಿ:

  http://www.ndtv.com/convergence/ndtv/story.aspx?id=NEWEN20090080219&ch=1/16/2009%209:52:00%20AM

  ತಮ್ಮ ರಕ್ಷಣೆಗಾಗಿ, ತಮ್ಮ ಹಕ್ಕುಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಭಾರತೀಯ ಹೆಂಗಸರು ಗಂಡಸರನ್ನು/ಸರ್ಕಾರವನ್ನು ನಂಬಿಕೊಂಡು ಕುಳಿತಿರಲು ಸಾಧ್ಯವಿಲ್ಲ ಎಂದು ಪಿಂಕ್ ಚಡ್ಡಿ ಯಂಥ ಚಳುವಳಿಗಳನ್ನು ಹುಟ್ಟುಹಾಕುತ್ತಾರೆ.

  ಪಿಂಕ್ ಬಣ್ಣದ ಇನ್ನೊಂದು ಉದಾಹರಣೆಯನ್ನು ಇಲ್ಲಿ ನೋಡಿ:

  http://news.bbc.co.uk/2/hi/south_asia/7068875.stm

  >ಈಗ “ಪಬ್ ಭರೋ” ಮುಂದೆ… “ಗಂಡಸಿನ ಮೇಲೆ ಗ್ಯಾಂಗ್ ರೇಪ”…!!!!

  ಓಹೋ! ಇದೋ ನಿಮ್ಮ ಭಯ? ನಿಮ್ಮ ಗ್ಯಾಂಗ್ ರೇಪ್ ಆಗಿಬಿಡುತ್ತದೆ ಎಂದು ಹೆದರಿಕೊಂಡು ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡುತ್ತೀರ?

  >ಚಡ್ಡಿ ಪ್ರಸಂಗ ಅಸಹ್ಯ , ಅದು ಮನುಷ್ಯನ ಹುಚ್ಚಾಟದ ಅತಿರೇಖತನ. They have sick mentality

  ಅವರ ಪಾಡಿಗೆ ಅವರು ಪಬ್ಬಿನಲ್ಲಿ ಕೂತಿದ್ದಾಗ ಆ ಹೆಣ್ಣು ಮಕ್ಕಳನ್ನು ಹಿಡಿದುಕೊಂಡು ಹೊಡೆದರಲ್ಲ, ಅದು ಸಹ್ಯ ಪ್ರಸಂಗನಾ? ಹುಚ್ಚಾಟದ ಅತಿರೇಕ ಅಲ್ವಾ? ಆ ಗಂಡಸರದ್ದು ಹಾಗೂ ಅವರ ಕೃತ್ಯವನ್ನು ಮೆಚ್ಚಿಕೊಂಡವರದ್ದು sick mentality ಅಲ್ವಾ?

  ಪಿಂಕ್ ಚಡ್ಡಿ ಆಂದೋಳನದಲ್ಲಿ ಪಾಲ್ಗೊಂಡವರು ಸಂಸ್ಕೃತಿ ಹೆಸರಿನಲ್ಲಿ ಅಸಹ್ಯವಾಗಿ, ಹುಚ್ಚುಚ್ಚಾಗಿ, sickಆಗಿ ನಡೆದುಕೊಂಡವರಿಗೆ ದಿಟ್ಟತನದಿಂದ ಉತ್ತರ ಕೊಟ್ಟಿದ್ದಾರೆ.

  ಇಂಥ ಆಂದೋಳನಗಳು ಹೆಚ್ಚಾಗಲಿ, ಮಹಿಳೆಯರ ಪ್ರಾಬಲ್ಯ ಹೆಚ್ಚಲಿ!

  Like

 9. ಗುರು ಬಾಳಿಗ Says:

  ಮೌನಿ.
  ಇಂದು ಬದುಕದೆ ನಾಳೆಗಳ ಲೋಕದಲ್ಲಿ ಬದುಕುವವರಿಗೆ ನನ್ನ ಬಳಿ ಉತ್ತರವಿಲ್ಲ.
  ಅದರ ಚರ್ಚೆಗೆ ಇದು ವೇದಿಕೆಯೂ ಅಲ್ಲ. ನನ್ನ ಕಮೆಂಟು ನೀಲಾಂಜಲ ಬರಹಕ್ಕೊಂದು ಪ್ರತಿಕ್ರಿಯೆ. ನಿಮಗೆ ಚರ್ಚೆಗೆ ಆಹ್ವಾನವಲ್ಲ. ದಯವಿಟ್ಟು ಕ್ಷಮಿಸಿ.

  Like

 10. ಮೌನಿ Says:

  ಬಾಳಿಗರೇ,

  ನಿಮ್ಮ ಅಭಿಪ್ರಾಯದ ಬಗ್ಗೆ ಗೌರವವಿದೆ, ನಿಮಗೆ ಚರ್ಚೆಗೆ ಮನಸ್ಸಿಲ್ಲ ನಾನದನ್ನು ಗೌರವಿಸುತ್ತೆನೆ.

  XX,

  ಚೈಲ್ಡ ಮದರ ಮತ್ತು ಚೈಲ್ಡ ಮ್ಯಾರೇಜ್ ಎರಡೂ ಬೇರೆ ಬೇರೆ, ಎರಡಕ್ಕೂ ನನ್ನ ವಿರೋಧವಿದೆ, ಆದರೆ ನಿಮ್ಮ ಮಾತುಗಳಿಂದ ನೀವದನ್ನು ವಿರೋಧಿಸುವ ಬದಲು, ಈಗಾಗಲೇ ಇದೆ ಅದನ್ನೆ ಬೆಳೆಸುವೆ ಅನ್ನುವಂತಿದೆ. ಅದಕ್ಕೂ ನನ್ನ ವಿರೋಧ.

  ಬಣ್ಣದ ಬಗ್ಗೆ ನಮ್ಮ ವಿರೋಧವಿಲ್ಲ, ಬಳಸಿದ ಮಸ್ತುವಿನ ಬಗ್ಗೆ ನಮ್ಮ ವಿರೋಧ.

  ನಿಜಕ್ಕೂ ನನ್ನ ಭಯ ಅದೇ,

  ಒಂದು ಅಸಹ್ಯವನ್ನು ಇನ್ನೊಂದು ಅಸಹ್ಯದಿಂದ ವಿರೋಧಿಸದರೆ “ಸಹ್ಯ”ವಾಗುತ್ತದೆ ಎಂಬುದು ನಿಮ್ಮ ನಂಬಿಕೆಯಾದಲ್ಲಿ, ನಿಮ್ಮದೂ sick mentality ಅಲ್ವಾ?

  ರಾಮಸೇನೆಯವರು ಮಾಡುವ ಕುಕೃತ್ಯಗಳನ್ನು ಪ್ರತಿಭಟಿಸವು ಸಲುವಾಗಿ ನಾನು ಪಬ್ಬ-ಕುಡಿತ-ರೇವ್ ಪಾರ್ಟಿ ಸಂಸ್ಕೃತಿಯಂತ ಮತ್ತೊಂದು ಕುಕೃತ್ಯಗಳನ್ನು ಬೆಂಬಲಿಸಲು ಸಾಧ್ಯವಿಲ್ಲ, ನಾನಿನ್ನೂ ಪಾಶ್ಚ್ಯಾತ್ಯನಾಗಿಲ್ಲ ನನ್ನ ಸಂಸ್ಕೃತಿಯ ಜಾಡಿನಲ್ಲಿ ನನಗೆ ವಿರೋಧಿಸುವುದು ಸಾಧ್ಯ.

  ನನ್ನ ಸಾಮಾಜಿಕ ಜವಾಬ್ದಾರಿ “ಶ್ರೀ ರಾಮಸೇನೆಯೊಂದಿಗೆ, ನಿಮ್ಮ ಅಸುಂಸ್ಕೃತ ಕಂಪ್ಯಾನನ್ನು ವಿರೋಧಿಸುತ್ತದೆ”.

  -ಮೌನಿ

  Like

 11. ವಿಜಯರಾಜ್ ಕನ್ನಂತ Says:

  yenoppa…. adu sarino….idu sarino…atavaa ibroo tappO… ondoo gottagtaa illa…

  Like

 12. ಶಿವಾನಂದ Says:

  @maaysa

  ……………………………………………………………………………. …………. …………………………..

  moderated:
  ಶಿವಾನಂದ,
  ನಿಮ್ಮ ಅಭಿಪ್ರಾಯ ನೀಲಾಂಜಲದ ವ್ಯಾಪ್ತಿಯನ್ನು ಮೀರಿದ್ದಕ್ಕೆ ಕತ್ತರಿ ಆಡಿಸಲಾಗಿದೆ. ಕ್ಷಮಿಸಿ
  (ತೀರಾ ವ್ಯಕ್ತಿಗತವಾದ್ದರಿಂದ)

  Like

 13. ನೀಲಾಂಜಲ Says:

  ಮೌನಿ, Nagaraj0009, ಮಾಯ್ಸ, Santosh Chidambar, ಗುರು ಬಾಳಿಗ, ಮುತ್ತುಮಣಿ, XX, ವಿಜಯರಾಜ್ ಕನ್ನಂತ, ಶಿವಾನಂದ,

  ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

  Like

 14. balasubramanya bhat Says:

  ಭಾರತದ ಎದುರಿರುವ ಇತರ ಸಮಸ್ಯೆಗಳಿಗೆ “ಸ್ತ್ರೀ ಶಕ್ತಿ ” ಇದೇ ತೆರನಾಗಿ ಸ್ಪಂದಿಸಿದ್ದರೆ ಎಂದೋ ನಾವು ಎತ್ತರಕ್ಕೇರುತ್ತಿದ್ದೆವು.
  ಬಾಲು ಮಂದರ್ತಿ.

  Like

 15. Hindi Blogosphere’s Reactions to the Pink Chaddi Campaign Show the Divide Between Bharat and India | Gauravonomics Blog Says:

  […] are a few other posts on the Pink Chaddi Campaign in other Indian regional languages: Mathavaraj, Neelanjala, ePathram, and Govikannan. I’ll be grateful if the writers, or someone who knows the […]

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: