ಸೂರ್ಯ ನೆತ್ತಿಗೇರುತ್ತಿದ್ದಂತೆಯೇ ಅಭಿಸಾರಿಕೆ ಮಂಚದ ಕಂಭಕ್ಕೆ ಜೋತು ಬಿದ್ದು ಗುನುಗುತ್ತಾಳೆ, ಗೊಣಗುತ್ತಾಳೆ. ರಾತ್ರಿಯಾಗುತ್ತಿದ್ದಂತೆಯೇ ಆಗಷ್ಟೇ ಬಿರಿದ ಪಾರಿಜಾತದ ಕಂಪಿನಲ್ಲಿ ತಂಪಾಗುತ್ತಾಳೆ. ನವಿಲುಗರಿಗಳನ್ನು ವೀಣೆಯಂತೆ ತನ್ನ ಕಿರುಬೆರಳಲ್ಲಿ ನುಡಿಸುತ್ತಾ ತನ್ಮಯಳಾಗುತ್ತಾಳೆ. ಚಂದಿರ ಮೂಡಿಸುವ ಸೊಗೆಯ ನೆರಳು ಆಕೆಯ ಮುಖದ ಮೇಲೆ ಸುಳಿಯತೊಡಗುತ್ತದೆ. ಚೆಂದುಟಿಯ ಅಂಚಿನಲ್ಲಿ ತಾರೆಗಳು ಮೂಡುತ್ತವೆ. ಅಲ್ಲೊಂದು ಹೊಸ ಕತೆ ಹುಟ್ಟುತ್ತದೆ.
ಅಲ್ಲೊಂದು ಊರಿನಲ್ಲಿ ಲವ್ ಗುರು ಇದ್ದ. ಅವನ ಖ್ಯಾತಿ ದೂರದೂರಿಗೆ ಹಬ್ಬಿತ್ತು. ಪ್ರೇಮಿಗಳು ತಮ್ಮ ಸಮಸ್ಯೆ ನೀಗಿಸಲು ಇವನಲ್ಲಿ ಪತ್ರಿಸುತ್ತಿದ್ದರು. ಯಾವುದೇ ಗಂಭೀರ ಸಮಸ್ಯೆ ಇದ್ದರೂ ಥಟ್ ಎಂದು ಪರಿಹರಿಸುತ್ತಿದ್ದ.
ಹೀಗಿರಲು ಒಂದು ದಿನ ಪ್ರಿಯಾಳ ಪತ್ರ ಬಂತು. ಅದರಲ್ಲಿ ತಾನು ರಮೇಶನನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಆತನ ಮನೆಯವರು ಆತನಿಗೆ ಬೇರೆ ಹೆಣ್ಣೊಂದನ್ನು ಗೊತ್ತು ಪಡಿಸಿ ತನ್ನನ್ನು ದೂರ ಮಾಡಲು ಯತ್ನಿಸುತ್ತಿದಾರೆಂದು, ಆ ಕಾರಣ ಸಮಸ್ಯೆ ಬಗೆಹರಿಸಿಕೊಡಲು ಉಪಾಯ ತಿಳಿಸಲು ಕೋರಿ ಬರೆದಿದ್ದಳು. ಆ ಪತ್ರದ ಕೆಳಗೆ ರಮೇಶನ ಪತ್ರವಿತ್ತು. ತಾನು ಪ್ರಿಯಾ ಎಂಬ ಹುಡುಗಿಯನ್ನು ಪ್ರೇಮಿಸುತ್ತಿದ್ದಾಗಿ, ತನ್ನ ತಂದೆ-ತಾಯಿ ಬೇರೆ ಹುಡುಗಿಯನ್ನು ತನಗೆ ಗಂಟು ಹಾಕಲು ಯೋಚಿಸುತ್ತಿರುವುದಾಗಿ, ಇದರಿಂದ ಹೊರ ಬರಲು ದಾರಿ ತೋರಿಸಲು ಕೋರಿ ಬರೆದಿತ್ತು. ಲವ್ ಗುರು ಥಟ್ ಎಂದು ಉತ್ತರಿಸಿದ. ಪ್ಯಾರ್ ಕಿಯಾ ತೋ ಡರನಾ ಕ್ಯಾ ಎಂದು ಮುಗಲ್-ಎ-ಆಜಮ್ ಚಿತ್ರದ ಜೊತೆ ವಿವರಿಸಿ, ಪ್ರೇಮ ಅಮರವೆಂದು, ಆ ಕಾರಣ ಯಾವ ತ್ಯಾಗಕ್ಕೂ ಸಿದ್ಧವಿರಬೇಕೆಂದು, ತಂದೆ-ತಾಯಿಗಳನ್ನು ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡು ಸುಖವಾಗಿರಲು ಸೂಚಿಸಿ ಇಬ್ಬರಿಗೂ ಬರೆದ.
ಇನ್ನೊಂದು ದಿನ ಸ್ವಾತಿ ಅನ್ನುವಳ ಪತ್ರ ಬಂತು. ಅದರಲ್ಲಿ ತಾನು ರವಿಯನ್ನು ಗಾಢವಾಗಿ ಪ್ರೀತಿಸುತ್ತಿದ್ದು, ಆತನ ಮನೆಯವರು ಆತನಿಗೆ ಬೇರೆ ಹೆಣ್ಣೊಂದನ್ನು ಗೊತ್ತು ಪಡಿಸಿ ತನ್ನನ್ನು ದೂರ ಮಾಡಲು ಯತ್ನಿಸುತ್ತಿದಾರೆಂದು, ಆ ಕಾರಣ ಸಮಸ್ಯೆ ಬಗೆಹರಿಸಿಕೊಡಲು ಉಪಾಯ ತಿಳಿಸಲು ಕೋರಿ ಬರೆದಿದ್ದಳು. ಆ ಪತ್ರದ ಕೆಳಗೆ ರವಿಯ ಪತ್ರವಿತ್ತು. ಲವ್ ಗುರು ಥಟ್ ಎಂದು ಉತ್ತರಿಸಿದ. ಪ್ಯಾರ್ ಕಿಯಾ ತೋ ಡರನಾ ಕ್ಯಾ ಎಂದು ಮುಗಲ್-ಎ-ಆಜಮ್ ಚಿತ್ರದ ಜೊತೆ ವಿವರಿಸಿ, ಆ ಕಾರಣ ತಂದೆ-ತಾಯಿಗಳ ವಿರುದ್ಧ ಪ್ರೇಮದ ಸಲುವಾಗಿ ನಿಲ್ಲದ ನಾಮರ್ಧ ಗಂಡನ್ನು ಬಿಟ್ಟು ಬಿಡಲು, ಪ್ರೇಮ ಅಮರ ಎಂದು ಸಾಯುವುದು ಹೇಗೆ ಮೂರ್ಖತನವೆಂದು, ಆ ಕಾರಣ ತಮ್ಮ ಬದುಕನ್ನೇ ಮುಡುಪಿಟ್ಟು ತ್ಯಾಗ ಮಾಡಿದ ತಂದೆ-ತಾಯಿಗಳನ್ನು ಬಿಟ್ಟು ಓಡಿ ಹೋಗಬಾರದೆಂದು, ಆಗುವುದೆಲ್ಲ ಒಳ್ಳೆಯದಕ್ಕೆ ಆಗುತ್ತದೆಯೆಂದು, ಪರಿವರ್ತನೆಯೇ ಜಗದ ನಿಯಮವೆಂದು, ಬೇರೆ ಮದುವೆ ಮಾಡಿಕೊಂಡು ಸುಖವಾಗಿರಲು ಸೂಚಿಸಿ ಅಕೆಗೆ ಬರೆದ.
ಸ್ವಲ್ಪ ದಿನಗಳ ನಂತರ ಲವ್ ಗುರು ಖುಷಿಯಿಂದ ಊರೆಲ್ಲ ತನ್ನ ಮಗ ರವಿ ಮತ್ತು ಚಿತ್ರಾಳ ಮದುವೆ ಕರೆಯೋಲೆ ಹಂಚುತ್ತಿದ್ದ.
ಫೆಬ್ರವರಿ 9, 2009 ರಲ್ಲಿ 6:38 ಅಪರಾಹ್ನ |
ಅನುವಾದದಂತಿದೆ.
LikeLike
ಫೆಬ್ರವರಿ 10, 2009 ರಲ್ಲಿ 7:36 ಅಪರಾಹ್ನ |
Wonderful, humorous!
LikeLike
ಫೆಬ್ರವರಿ 10, 2009 ರಲ್ಲಿ 10:39 ಅಪರಾಹ್ನ |
ಗುರು ಬಾಳಿಗ, ??!!
ಸುನಾಥ್, ಅಭಿಸಾರಿಕೆಗೆ ತಿಳಿಸುತ್ತೇನೆ 😀 (ಆಕೆ ಕೇಳಿಸಿಕೊಂಡರೆ!)
LikeLike
ಫೆಬ್ರವರಿ 11, 2009 ರಲ್ಲಿ 12:41 ಅಪರಾಹ್ನ |
ಹಿಂದಿ ಚಿತ್ರದ ಕನ್ನಡ ರೀಮೇಕನಂತಿದೆ, ಅದ್ರೂ ಒಂಥರಾ ಚೆನ್ನಾಗಿದೆ.
-ಮೌನಿ
LikeLike
ಸೆಪ್ಟೆಂಬರ್ 12, 2009 ರಲ್ಲಿ 11:36 ಫೂರ್ವಾಹ್ನ |
ಮಜವಾಗಿದೆ… 😛 ಬೆಂಗಳೂರಿನಲ್ಲಿ FM 91.1 radioದಲ್ಲಿ, ರಾತ್ರಿ ೧೧ ಘಂಟೆಗೆ ಬರುವ “ಲವ್ ಗುರು”
ಕಾರ್ಯಕ್ರಮದ ನೆನಪು ಮೂಡಿಸಿತು.. ವೇದಾಂತ ಎನಿದ್ರು ಪಕ್ಕದ್ ಮನೆ ವೇಧಾಳಿಗೊಂದೇ ಸೀಮಿತ
ಅನ್ನಿಸ್ತಾ ಇದೆ.. [;)]
LikeLike