this is Sparta

(close up) ಲಿಯೊನಿಡಸ್ ‘This is Sparta’ ಎಂದವನೆ (slow zoom out) ಪರ್ಶಿಯನ್ ರಾಯಭಾರಿಯ ಎದೆಗೆ ಒದ್ದು ಆತನನ್ನು ಹಿಂದೆ ಇದ್ದ ತೆರೆದ ಬಾವಿಗೆ ತಳ್ಳುತ್ತಾನೆ. ಈ ಸೀನ್ ಅನ್ನು ಏಷ್ಟು ಸಲ ನೋಡಿದ್ದೇನೊ ಗೊತ್ತಿಲ್ಲ. ಭರ್ಜಿ ಫ್ರೇಮಿನ ಎಡ ಮೂಲೆಯಿಂದ ಮಧ್ಯಕ್ಕೆ, ಬಲದಿಂದ ಮಧ್ಯಕ್ಕೆ, ಮೇಲಿನಿಂದ ಮಧ್ಯಕ್ಕೆ ಒಂದಾದ ಮೇಲೊಂದರಂತೆ ತೂರುತ್ತದೆ. ಅದಕ್ಕೆ ಅಂಟಿದ ಬಿಸಿ ರಕ್ತ ತೊಟ್ಟಿಕ್ಕುತ್ತದೆ.  wow! ನಿಜ, ನೀವು ಹಾಗೆ ಅನ್ನುತ್ತೀರಿ. ಅಷ್ಟು beautify ಮಾಡಲಾಗಿದೆ. ಲಿಯೊನಿಡಸ್ ರಿದಮಿಕ್ ಆಗಿ ಮುನ್ನುಗ್ಗುತ್ತ ಒಂದು ಏಟಿಗೆ ಒಬ್ಬನನ್ನು ಭರ್ಜಿಯಲ್ಲಿ ತಿವಿದು, ಇನ್ನೊಬ್ಬನನ್ನು ಗುರಾಣಿಯಿಂದ ಕೆಡಗಿ, ಎದುರಿಗಿಂದ ಬರುತ್ತಿರುವನಿಗೆ ಕೈಲಿದ್ದ ಭರ್ಜಿ ತೂರಿ, ಮತ್ತೆ ಗುರಾಣಿಯಿಂದ ಮೇಲೆ ಬಿದ್ದವನನ್ನು ಕೆಡಗಿ, ಕ್ಷಣಾರ್ಧದಲ್ಲಿ ಕತ್ತಿ ತೆಗೆದು ಬಲಕ್ಕೆ ಎರಗಿದವನ ಕಾಲನ್ನು ತುಂಡರಿಸಿ ಇನ್ನೊಂದು ಏಟಿಗೆ ಎದುರಿಗೆ ಬಂದವನನ್ನು ತಿವಿಯುತ್ತಾನೆ. ‘Tonight we dwell in hell’ .ರಕ್ತ ಸ್ಕ್ರೀನ್ ನಲ್ಲಿ ಹೇಗೆ ಹಾರುತ್ತೆ ಗೊತ್ತಾ ? ಕಚಾ ಕಚಾ ಕಚ್ …….. ತಿವಿಯುತ್ತ, ಕಡಿಯುತ್ತ, ಕೆಡಗುತ್ತ. ಸ್ಪಾರ್ಟನ್ನರ ಗ್ರೇ ಬಣ್ಣದ ಗುರಾಣಿ, ಶಿರಸ್ತ್ರಾಣ, ಭರ್ಜಿ-ಅವರ ಕೆಂಪು ಹಿಂಬದಿಯ ಹೊದಿಕೆ- ಯೆಲ್ಲೊ ಟೋನು, ಹಿಂದಿನ ಕಪ್ಪು ಕಲ್ಲು.. ಉಫ್! ನೀವು ಚಿತ್ರದಲ್ಲಿ ಕಳೆದು ಹೋಗುತ್ತಿರಾ. ಶೌರ್ಯ, ಪರಾಕ್ರಮ, ಭುಜಬಲ ಅಕ್ಷರದಿಂದ ಎದ್ದು ಕಣ್ಣೆದುರಿಗಿನ ಚಿತ್ರಣವಾಗುತ್ತದೆ. ಪ್ರತಿಯೊಂದು ನಟರ ಬಾಡಿ( ದೇಹರ್ದಾಡ್ಯತೆ) ನೋಡಬೇಕು. ಹೇಂಗಿದೆ ಗೊತ್ತಾ! ಸ್ಟೆಲಿಯೊಸ್ ನೆಲದಿಂದ ಎದುರಿಗಿನ ಬಂಡೆಯ ಮೇಲೆ ನೆಗೆದು ಅಲ್ಲಿಂದ ಮೇಲೆ ಅಕಾಶಕ್ಕೆ ಚಿಮ್ಮಿ ಹೊಡೆಯಲು ಚಾವಟಿ ಎತ್ತಿದ್ದ ದೂತನ ಕೈಯನ್ನೆ ಕತ್ತರಿಸುತ್ತಾನೆ. ಆತನ ಕಾಲು, ತೊಡೆ, ಭುಜದ ಮಸಲ್ಸ್ ಮೂವ್ ಆಗೊದು ನೋಡಬೇಕು. ಇಷ್ಟು ಚೆಂದವಾಗಿ ಚಿತ್ರ ತೆಗೆಯಲು ಸಾಧ್ಯವೇ ಅನ್ನಿಸಿಬಿಡುತ್ತದೆ.

ಹಾಗೇನೆ ಕ್ಲಿಫ್ ನಿಂದ ಕೆಳಗೆ ಬೀಳುತ್ತಿರುವ ಚಿತ್ರ ಸಹ ಸೂಪರ್ ಆಗಿದೆ. ಫ್ರೇಮಿನ ಎಡ ಭಾಗದಲ್ಲಿ ಪ್ರಪಾತ ಮತ್ತು ಮೇಲೆ ಹಳದಿ ಮೋಡ ಮುಸುಕಿದ ಆಕಾಶ ಎಲ್ ಶೇಪಿನಲ್ಲಿದೆ. ಫ್ರೇಮಿನ ಅರ್ಧಭಾಗದಷ್ಟು ಎತ್ತರದ ಜಾಗವನ್ನು ಬಲಗಡೆಯಿಂದ ಎಡಕ್ಕೆ ಚಾಚಿರುವ ಶಿಖರ ನುಂಗಿದೆ. ಅದರ ಮೇಲೆ ಹಿಂಬದಿಯ ಪ್ರಪಾತ ಮತ್ತು ಮುಂಬದಿಯ ಸ್ಪಾರ್ಟನ್ನರ ನಡುವೆ ಸಿಕ್ಕಿ ಹಾಕಿಕೊಂಡಿರುವ ಕಪ್ಪು ಛಾಯೆಯ ಪರ್ಶಿಯನ್ನರು. ಬಲಗಡೆಯಿಂದ ಫ್ರೇಮಿನ ಮಧ್ಯದವರೆಗೆ ಕೊಲ್ಲುತ್ತ ಬರುತ್ತಿರುವ ಕೆಂಪು ಬಟ್ಟೆಯ ಸ್ಪಾರ್ಟನ್ನರು. ಎಡಗಡೆಯ ಪ್ರಪಾತಕ್ಕೆ ಸಾಲಗಿ ಬುಡ ಬುಡನೇ ಮುಮ್ಮುಖವಾಗಿ ಜಾರುತ್ತಿರುವ ಪರ್ಶಿಯನ್ನರು. ಅದ್ಭುತವಾಗಿದೆ. ಫಿಲ್ಮ್ ನೋಡಿ, ಈ ಚಿತ್ರ ಅನುಭವಿಸಿ. ಈ ಸಿನೆಮದಲ್ಲಿ ಇದೇ ಫ್ರೇಮು ಚೆಂದ ಅಂತ ಹೇಳಕೆ ಆಗೊಲ್ಲ. ಓರಾಕಲ್ ನ ಇಫೊರ್ಸ್, ಫಾಲಾಂಕ್ಸ್, ಕ್ಸೆರಕ್ಸಿ, ಇಮ್ಮೊರ್ಟಲ್ ಜೊತೆಗಿನ ಕಾದಾಟ, ಶವಗಳ ಗೋಡೆ, ಖೇಂಡಾಮ್ರಗವನ್ನು ಸಾಯಿಸುವುದು,….ಹೀಗೆ ಎಲ್ಲ ಪ್ರತಿಮೆಗಳೂ ಚೆನ್ನಾಗಿವೆ. ನಂಗೆ ಯುದ್ಧದ ಪ್ರತಿ ಫ್ರೇಮು ತುಂಬಾನೇ ಇಷ್ಟವಾಯಿತು. ಪ್ರಾರಂಭದಲ್ಲಿನ ಕರಿ ತೊಳವನ್ನು ಮಂಜಿನ ತಣ್ಣನೆಯ ರಾತ್ರಿಯಲ್ಲಿ ಸಾಯಿಸುವುದರಿಂದ ಹಿಡಿದು ಕೊನೆಯಲ್ಲಿ ಲಿಯೊನಿಡಸ್ ಮತ್ತು ಸಹಚರರು ಸತ್ತ ಚಿತ್ರಣದವರೆಗೂ. ಪ್ರತಿ ಫ್ರೇಮು ಒಂದು ಸುಂದರ ಚಿತ್ರವೇ ಆಗಿದೆ.

300 ಇದು ಫುಲ್ ಟೆಕ್ನಿಕಲ್ ಚಿತ್ರ. ಹೆಚ್ಚಿನ ಭಾಗವನ್ನು ಗ್ರೀನ್ ಸ್ಕ್ರೀನ್ ಬಳಸಿ ಚಿತ್ರಿಸಲಾಗಿದೆ. ಬಾಕ್ ಡ್ರಾಪ್ ಗಳೆಲ್ಲ ಕಂಪ್ಯೂಟರ ಗ್ರಾಫಿಕ್ಸ್. ಇಡೀ ಸಿನೆಮಾವನ್ನು ಫಿಲ್ಟರ್ ಹಾಕಿ ಕಲರ್ ಕರೆಕ್ಷನ್….. ಪ್ರೊಸೆಸ್  ಮಾಡಲಾಗಿದೆ. ಫ್ರಾನ್ಕ್ ಮಿಲ್ಲರನ ಗ್ರಾಫಿಕ್ ನೊವೆಲ್ ಅನ್ನು ಯಥಾವತ್ ಅನುಕರಣೆ ಮಾಡಲಾಗಿದೆ. ಆತನ ಚಿತ್ರಗಳಿಗೆಲ್ಲ ಈ ಸಿನೆಮಾದಲ್ಲಿ ಜೀವ ಬಂದಿದೆ. ಆತನ ಇನ್ನೊಂದು ಗ್ರಾಫಿಕ್ ನೊವೆಲ್ ಸಿನ್ ಸಿಟಿ ಸಹ ಇದೇ ರೀತಿ ಸಿನೆಮಾ ಆಗಿತ್ತು.

ಹಾಗಂತ ಎಲ್ಲರಿಗೂ ಈ ಸಿನೆಮಾ ಇಷ್ಟವಾಗುತ್ತೊ ಇಲ್ವೊ ಗೊತ್ತಿಲ್ಲ. ಇಲ್ಲಿ ರಕ್ತ ಹಾರುತ್ತೆ, ಕಾಲು-ಕೈ-ರುಂಡವೆಲ್ಲ ಎತ್ತರೆತ್ತರ ಹಾರಿ ಬೀಳುತ್ತೆ. ಎಲ್ಲೂ ಹಾರರ್ ಸಿನೆಮಾ ತರಹವೇನೂ ಅನ್ನಿಸುವುದಿಲ್ಲ. ಹಿಲ್ಸ್ ಹ್ಯಾವ್ ಆಯ್ಸ್ ತರಹ ಖಂಡಿತ್ ಸೈಕಿಕ್ ಆಗಿಲ್ಲ. ರುದ್ರ ರಮಣೀಯ ಅಂತಾರಲ್ಲ, ಹಾಗಿದೆ. ಇಲ್ಲಿ ಸತ್ತವರ ಬಗ್ಗೆ ಕನಿಕರವೂ ಬರುವುದಿಲ್ಲ. ‘No prisoners, No mercy.’ ಇಲ್ಲಿ ನೀವು ಒಬ್ಬ ಲಿಯೊನಿಡಸ್ ಆಗಿರುತ್ತೀರಿ. ಸ್ಪಾರ್ಟನ್ ಸೈನಿಕರಾಗಿರುತ್ತೀರಿ. ‘We do what we are trained to do, we do what we are breed to do, we do what we are born to do’. ಆದರೆ ನೀವು ಪರ್ಷಿಯನರ ತರಹ ಇದನ್ನೆಲ್ಲ “this is madness” ಅನ್ನುವರಾದಲ್ಲಿ ಈ ಸಿನೆಮಾ ನೋಡಬೇಡಿ. ಇದು ಖಂಡಿತ ನಿಮ್ಮಂತವರಿಗಲ್ಲ.

ಇನ್ನು ಈ ಸಿನೆಮಾ ಚರಿತ್ರೆಯ ಅಂಶಗಳನ್ನು ಒಳಗೊಂಡಿದ್ದರೂ ಸಹ ಇಲ್ಲಿ ತೋರಿಸಿದ್ದೆಲ್ಲ ಸತ್ಯವಲ್ಲ.  dramatize ಆಗಿದೆ. ಪರ್ಷಿಯನ್ ಕಿಂಗ್  ಕ್ಸೆರಕ್ಸಿಯನ್ನು ಬೇರೆ ರೀತಿಯಲ್ಲಿ ಚಿತ್ರಿಸಲಾಗಿದೆ. ಆತ ಈ ಕತೆಯಲ್ಲಿ ವಿಲನ್ ಆಗಿದ್ದಕ್ಕೆ ಕ್ಸೆರಕ್ಸಿಯ  characterization ಬಗ್ಗೆ ನಂಗೆ ತಕರಾರಿಲ್ಲ. Thermopylaeದಲ್ಲಿ ನಡೆದ ಯುದ್ಧದಲ್ಲಿ ಸ್ಪಾರ್ಟನ ರಾಜನಾಗಿದ್ದ ಲಿಯೊನಿಡಸ್ ಕೇವಲ ೩೦೦ ಜನ ಸೈನಿಕರ ಜೊತೆ ಸಹಸ್ರ ಸಂಖ್ಯೆಯಲ್ಲಿದ್ದ ಪರ್ಷಿಯನ್ನರನ್ನು ಎದುರಿಸಿ ದಂತ ಕಥೆಯಾದದ್ದು, ಆದಾದ ಒಂದು ವರ್ಷದಲ್ಲಿ battle of Plataeaದಲ್ಲಿ (479 BC) ಗ್ರೀಕರೆಲ್ಲ ಸೇರಿ ಪರ್ಶಿಯನ್ನರನ್ನು ಹಿಮ್ಮೆಟಿಸಿದ್ದು ಎಲ್ಲ ಚಾರಿತ್ರಿಕ ಸತ್ಯಗಳೇ. ಜೊತೆಗೆ ಚಿತ್ರದ ಪ್ರಾರಂಭದಲ್ಲಿ ತೊರಿಸಿದಂತೆ ಹುಟ್ಟಿದ ಸ್ಪಾರ್ಟನ್ ಶಿಶುಗಳು ದುರ್ಬಲರಾಗಿದ್ದರೆ ಅವುಗಳನ್ನು ಕೊಲ್ಲಲಾಗುತ್ತಿತ್ತು. “From the time he could stand, he was baptized in the fire of combat, Tought never to retreat, never to surrender, Tought the death on the battlefield to the service of Sparta was the greatest glory he could achieve in his life ” ಹುಡುಗರಿಗೆ ಏಳು ವರ್ಷ ತುಂಬುತ್ತಿದ್ದಂತೆ ಅಗೊಗೆ ಎಂದು ಕರೆಯಲ್ಪಡುತ್ತಿದ್ದ ಸೈನಿಕ ತರಭೇತಿಗೆ ಕಲಿಸಲಾಗುತ್ತಿತ್ತು. “to create the finest soldier world ever known”.  ಸ್ಪಾರ್ಟಾದ ನಾಗರೀಕರೆಲ್ಲರೂ ಸೈನಿಕರೇ ಆಗಿದ್ದರು. ” Spartans, what is your profession? ….aahu! aahu!! ” .  ಅಲ್ಲಿನ ಸ್ತ್ರೀಯರಿಗೆ ಮುಕ್ತ ಅವಕಾಶಗಳು ಲಭ್ಯವಾಗಿದ್ದವು. ” what can make this woman thinks she can speaks among men? Because only Spartans women give birth to real man ” .  ಸಿನೆಮಾದಲ್ಲಿ ಇದ್ದಂತೆ ರಾಣಿ ಗೊರ್ಗೊ ನಿಜಕ್ಕೂ ಪ್ರಭಾವಶಾಲಿ ವ್ಯಕ್ತಿಯಾಗಿದ್ದಳು. …….. ಹೀಗೆ ಅನೇಕ ಇತಿಹಾಸದ ಪುಟಗಳು ನಮ್ಮೆದುರು ತೆರೆದುಕೊಂಡಿವೆ.

ನಂಗೆ ಬೇಜಾರಾಗಿದ್ದೇನು ಅಂದರೆ ನಾನು ಮೊದಲು ನೋಡಿದ ಒನ್ ಲೈನ್  ಆವೄತ್ತಿಯಲ್ಲಿ ಇದ್ದ ಆಪ್ತ ದೄಶ್ಯಗಳು ಈ DVDನಲ್ಲಿ ಕಾಣೆಯಾಗಿವೆ.  ನಮ್ಮ ದೇಶದಲ್ಲಿ ಬಿಡುಗಡೆ ಮಾಡುವ ಮೊದಲು ಕತ್ತರಿಯಾಡಿಸಿರಬೇಕು. ಮೊನ್ನೆ ಇಲ್ಲಿ ಒಬ್ಬ ಆರ್ಟಿಸ್ಟ್ ಶಿವನನ್ನು ನಗ್ನವಾಗಿ ಚಿತ್ರಿಸಿದ್ದಾನೆ ಎಂದು ಗಲಾಟೆಯಾಗಿ ಆತ ಆ ಚಿತ್ರವನ್ನು ಪ್ರದರ್ಶನದಿಂದ ಹೊರಗಿಡಬೇಕಾಗಿ ಬಂತು. ಲಲಿತ ಕಲೆಯನ್ನು ಕೇವಲ ಕಲೆಯಾಗಿ ನೋಡಲು ನಮ್ಮಿಂದ ಏಕೆ ಸಾಧ್ಯವಿಲ್ಲವೋ! human anatomy ಕಲಿಬೇಕಾದರೆ ಅದನ್ನೆಲ್ಲ ಕಾಮುಕ ದೄಷ್ಟಿಯಲ್ಲಿ ನೋಡಕಾಗುತ್ತಾ! ಹಣೆಬರಹ. ನಮ್ಮನೆಯಲ್ಲಿ ನೋಟೀಸ್ ಬೊರ್ಡ್ ನಲ್ಲಿರುವ anatomy drawings ಹಾಗೂ inspirations ಚಿತ್ರಗಳನ್ನು ನೋಡಿ ಕೆಲಸದವಳು ಮುಸಿ ಮುಸಿ ನಗುತ್ತಿರುತ್ತಾಳೆ. ಅವಳೇನೊ ಓದು-ಬರಹ ಬಾರದವಳು ಎಂದು ಕ್ಷಮಿಸಬಹುದು. ಆದರೆ………

ಈ ವಿಷಯದ ಬಗ್ಗೆ ಚರ್ಚೆ ಇಲ್ಲಿ ಅನಾವಶ್ಯಕ. ಆದ್ರೆ ನಾನು ನಾಳೆ ರಾಮಾಯಣದ ಮೇಲೆ ಸಿನೆಮಾ ಮಾಡಿದ್ರೆ, ಆಗೀನ ತರಹವೇ ವಸ್ತ್ರಾಲಂಕಾರ ಇರಬೇಕು ಅಂದುಕೊಂಡಿದ್ದೇನೆ. ಅದು ಭಾರತದಲ್ಲಿ ಬಿಡುಗಡೆನೆ ಕಾಣಲಿಕ್ಕಿಲ್ಲ ಬಿಡಿ. ಹೋಗ್ಲಿ. ನಿಮ್ಮಲ್ಲಿ ಯಾರದರೂ 300 ನೋಡಿದ್ರೆ, ನೋಡಾದ ಮೇಲೆ ನಿಮ್ಮ ಅಭಿಪ್ರಾಯ ನನಗೆ ಖಂಡಿತ ತಿಳಿಸಿ.

also check this-  300 comic to screen comparison

14 Responses to “this is Sparta”

 1. ಸುನಾಥ Says:

  ಒಂದು ಉತ್ತಮ ಚಿತ್ರದ ಬಗೆಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

  Like

 2. ವಿಕಾಸ್ ಹೆಗಡೆ Says:

  300!
  ಬರೀ ಕೊಲೆ, ಯುದ್ಧ , ಹೊಡೆದಾಟಗಳಿಂದ ಕೂಡಿದ ಒಂದು ರಕ್ತ ಸಿಕ್ತ ಸಿನೆಮಾವನ್ನು ನೀವು ಈ ರೀತಿ ಬಣ್ಣ ಬಣ್ಣ ಕಟ್ಟಿ ಮಜಾ ಎಂಬಂತೆ ವಿವರಿಸಿದ್ದನ್ನು ನೋಡಿ ಬೇಸರವಾಯಿತು. ಕೆಲವು ವಿಚಿತ್ರ ಕ್ಯಾರಕ್ಟರ್ ಗಳು , ಕಾರ್ಟೂನಿನಂತಹ ಕ್ಯಾರಕ್ಟರ್ ಗಳು ಇದ್ದರೂ ಕೂಡ ಚರಿತ್ರೆಯ ಬಗ್ಗೆ ಆಸಕ್ತಿ ಕೆರಳಿಸುವಂತಿದೆ. ತಾಂತ್ರಿಕತೆಯ ದೃಷ್ಟಿಯಿಂದ, ಇನ್ನಿತರ ಸಿನೆಮಾ ನಿರ್ಮಾಣ ವಿಷಯಗಳ ದೃಷ್ಟಿಯಿಂದ ಇದು ಚೆನ್ನಾಗಿಯೇ ಇದೆ ಎಂದು ಒಪ್ಪಿಕೊಳ್ಲಬಹುದಾದರೂ ನೀವು ವೈಭವೀಕರಿಸಿದಷ್ಟಂತೂ ಅಲ್ಲ ಎಂದು ನನ್ನ ವೈಯಕ್ತಿಕ ಅಭಿಪ್ರಾಯ.

  ಶಿವನನ್ನು ನಗ್ನವಾಗಿ ಚಿತ್ರಿಸಿದ್ದನ್ನು ಕಲೆಯೆಂದು ಒಪ್ಪಿಕೊಳ್ಳುವುದಕ್ಕೆ ಬಹುಜನರ ಗೌರವ ಭಾವನೆ ಎಂಬುದು ಹೇಗೆ ಅಡ್ಡ ಬರುತ್ತದೋ ಹಾಗೇ ಅದೇ ಕಲೆ ಹೆಸರಿನಲ್ಲಿ ನಮ್ಮನ್ನೋ ನಮ್ಮ ಮನೆಯವನ್ನೋ ನಗ್ನವಾಗಿ ಚಿತ್ರಿಸಿ ಪ್ರದರ್ಶನಕ್ಕಿಡುವುದು ಸಾಧ್ಯವಾದರೆ ಇಲ್ಲಿ ಅದರ ಚರ್ಚೆ ನಿಜಕ್ಕೂ ಅನವಶ್ಯಕ. 🙂

  Like

 3. neelanjala Says:

  ವಿಕಾಸ್,
  ಹ್ಹ ಹ್ಹ ಹ್ಹ, ನಂಗೊತ್ತು, ಸುಮಾರು ಜನ 300ನ್ನು violent movie ಅನ್ತನೇ consider ಮಾಡೊದು. ಅದಕ್ಕೆ ಬರೆದದ್ದು “ಆದರೆ ನೀವು ಪರ್ಷಿಯನರ ತರಹ ಇದನ್ನೆಲ್ಲ “this is madness” ಅನ್ನುವರಾದಲ್ಲಿ ಈ ಸಿನೆಮಾ ನೋಡಬೇಡಿ. ಇದು ಖಂಡಿತ ನಿಮ್ಮಂತವರಿಗಲ್ಲ.” ನನ್ನ ಪ್ರಕಾರ ನಾನು ಇಲ್ಲಿ ವೈಭವೀಕರಿಸ್ತಾ ಇಲ್ಲ. ಸಿನೆಮಾವನ್ನು ಹೀಗೂ ನೋಡಬಹುದು ಅಂತ ಹೇಳ್ತಾ ಇದ್ದೇನೆ. “ಶೌರ್ಯ, ಪರಾಕ್ರಮ, ಭುಜಬಲ ಅಕ್ಷರದಿಂದ ಎದ್ದು ಕಣ್ಣೆದುರಿಗಿನ ಚಿತ್ರಣವಾಗುತ್ತದೆ.”

  ನಾನು ಬಣ್ಣ ಕಟ್ತಾ ಇಲ್ಲ. ಈ ತರಹ output ಕೊಡೊದು ಎಷ್ಟು ಕಷ್ಟ ಗೊತ್ತಾ? ಆ ಟೋನು, ಆ ಕಲರ್ ಸ್ಕೀಮು, ಟೋಟಲ್ ಕಾನ್ಸೆಪ್ಟು. ಪ್ರತಿ ಫ್ರೇಮಿನ ಹಿಂದೆ ಎಷ್ಟು ಕೆಲಸ ಆಗಿದೆ ಗೊತ್ತಾ ? ಮತ್ತು ಎಷ್ಟು ಚೆಂದ ಮಾಡೀದ್ದಾರೆ ನೋಡಿ. ಚಿತ್ರದಲ್ಲಿ ಬಿಡಿಸಿದ್ದನ್ನೆಲ್ಲ, ಆರ್ಟಿಸ್ಟ ಕಂಡಿದ್ದನ್ನೆಲ್ಲ ಸಿನಿಮಾಕರಿಸುವುದು ಸುಲಭದ ಮಾತಲ್ಲ. ಮೇಲೆ ಹೇಳಿದ ಭರ್ಜಿ ಸೀನ್ ನ್ನು ಇನ್ನೊಮ್ಮೆ ನೋಡಿ. ಅದು ಒಬ್ಬನ ಮೇಲೆ ಎಲ್ಲ ಕಡೆಯಿಂದ ಅಟ್ಯಾಕ್ ಆಗ್ತಿದೆ ಮತ್ತು ನಾಲ್ಕು ಕಡೆ ಒಬ್ಬನೇ ನಿಂತು ಹೊಡೆದಾಡ್ತಿದ್ದಾನೆ ಎಂದು ತೋರಿಸುತ್ತದೆ. ಭರ್ಜಿಗೆ ಅಂಟಿದ ರಕ್ತ ತೊಟ್ಟಿಕ್ಕುವುದು ಸ್ಪಾರ್ಟನ್ನರು ಪರ್ಶಿಯನ್ನರ ಮೇಲೆ ಮೇಲುಗೈ ಸಾಧಿಸುತ್ತಾ ಇರುವುದನ್ನು ತೋರಿಸುತ್ತದೆ. really great film making n amazing work

  ಎಲ್ಲರಿಗೂ,
  ಈ ಸಿನೆಮಾ ಇರೋದು ಸಿನೆಮಾವನ್ನು ಪ್ರೀತಿಸುವರಿಗೆ (passionate). ಸಿನೆಮಾ ಬಗ್ಗೆ ಹುಚ್ಚುತನ ಇರುವವರಿಗೆ. ಕೇವಲ ಕಲಾತ್ಮಕ ಮತ್ತು story oriented ಅಂತೆಲ್ಲಾ categorize ಮಾಡಿ ಸಿನೆಮಾ ನೋಡೋವರಿಗೆ ಖಂಡಿತ ಅಲ್ಲ. vfx/dfx/sfx n film making ಇಷ್ಟಪಡುವರಿಗೆ. CG, comics ಮತ್ತು computer games ಕ್ರೇಜ್ ಇರುವರಿಗೆ. ಸಿನೆಮಾವನ್ನು ಒಂದು ಕಲಾಕೃತಿ ಎಂದು ನೋಡೊರಿಗೆ. lighting, camera angles, composition, story telling, narration,………lots more.

  ವಿಕಾಸ್,
  ನಗ್ನ ಅಂದ ಕೂಡಲೇ ಗೌರವ ಯಾಕೆ ಕಡಿಮೆ ಆಗುತ್ತೆ ? ನಾವು ಹುಟ್ಟೊದು ಮತ್ತು ಸಾಯೋದು ನಗ್ನವಾಗೇ ಅಲ್ಲವೇ? ಶಿವ ಯೋಗಿಯಾಗಿದ್ದಕ್ಕೇ ಆತನನ್ನು ಈ ರೀತಿ ಚಿತ್ರಿಸುವುದರಲ್ಲಿ ತಪ್ಪಿಲ್ಲ ಅನ್ನೋದು ನನ್ನ ಅಭಿಮತ. ಹಾಗೂ beauty ಅನ್ನೋದು ನೋಡುವವರ ಕಣ್ಣಿನಲ್ಲಿ ಇರುತ್ತದೆ. ನಂಗೆ ಗ್ರೀಕ್ ಪ್ರತಿಮೆಗಳು ಯಾವತ್ತೂ ultimate ಅನ್ನಿಸುತ್ತವೆ. ಶಿಲಾಬಾಲಿಕೆಗಳು ಕೂಡ. ಅಕ್ಕ ಮಾಹಾದೇವಿ, ರಮಣ ಮಹರ್ಷಿಗಳು….ಎಲ್ಲರನ್ನೂ ನಾವು ಗೌರವಿಸುತ್ತೇವೆ ಅಲ್ಲವೇ. ಆದರೆ ಒಂದು ಮಾತು. ನಗ್ನ ಚಿತ್ರಗಳು ಪ್ರಚೋದನಾಕಾರಿಯಾಗಬಾರದು. ಅದನ್ನು present ಮಾಡೋ ರೀತಿಯಲ್ಲಿ ಖಂಡಿತ ಎಚ್ಚರವಿರಬೇಕು. ಇಲ್ಲದಿದ್ದಲ್ಲಿ ಸಮಾಜದ ಸ್ವಾಸ್ತ್ಯ ಕೆಡುತ್ತದೆ ಎಂಬ ಕಳಕಳಿ ನನಗೂ ಇದೆ. ಹೆಚ್ಚಿನ ಆರ್ಟಿಸ್ಟ ಫೋಲೋ ಮಾಡೋ anatomy n drawing by Victor Perardನಲ್ಲಿ ತನ್ನ ಹೆಂಡತಿಯನ್ನು model ಆಗಿ ಇಟ್ಟುಕೊನ್ಡಿದ್ದಾನೆ ಎಂದು ಓದಿದ ನೆನಪಿದೆ. ಕಲೆಯನ್ನು ಕೇವಲ ಕಲೆಯಾಗಿ ನೋಡಬೇಕು. ಹೋಗ್ಲಿ ಬಿಡಿ, ನಾನು ಹೇಳ್ತಾ ಇರೋದು ನೀವು ಆರ್ಟಿಸ್ಟ ಆದ್ರೆ ಮಾತ್ರ ಅರ್ಥ ಆಗೋಕೆ ಸಾಧ್ಯ ಅಂತ ನಂಗೆ ಅನ್ನಿಸುತ್ತೆ 😀

  Like

 4. Pramod Says:

  ನಾನು ನೋಡಿದ್ದಿನಿ.
  ಸಿನೆಮಾ ರಿಲೀಸ್ ಆದ ಮರುದಿನ(ಶನಿವಾರ) ಓಡಿ ಹೋಗಿ ಫಸ್ಟ್ ಶೋನಲ್ಲಿ( 9:30 AM) ಟಿಕೇಟ್ ತೆಗೊ೦ಡು ನೋಡಿದ್ದೆ.
  ಯುದ್ಧ, ರಕ್ತ, ಕೊಲೆ ದೃಶ್ಯಗಳನ್ನು ನೋಡಲು ಸಹ್ಯವಾಗುವ೦ತೆ ತೆಗೆದಿದ್ದಾರೆ.
  ತು೦ಬಾ ಚೆನ್ನಾಗಿದೆ, ಮೂವೀ ಹುಚ್ಚರೆಲ್ಲ ನೋಡಲೇಬೇಕಾದ ಸಿನೆಮಾ.

  Like

 5. ಗುರು ಬಾಳಿಗ Says:

  >>> ಇಲ್ಲಿ ರಕ್ತ ಹಾರುತ್ತೆ, ಕಾಲು-ಕೈ-ರುಂಡವೆಲ್ಲ ಎತ್ತರೆತ್ತರ ಹಾರಿ ಬೀಳುತ್ತೆ. ರುದ್ರ ರಮಣೀಯ ಅಂತಾರಲ್ಲ, ಹಾಗಿದೆ. ಇಲ್ಲಿ ಸತ್ತವರ ಬಗ್ಗೆ ಕನಿಕರವೂ ಬರುವುದಿಲ್ಲ.‘We do what we are trained to do, we do what we are breed to do, we do what we are born to do’.

  ಬಹುಶ ನಿಮಗೆ ಈ ಬರಹ ಬರೆಯುತ್ತಿದ್ದಾಗ ನೀವೇ ಶುರು ಹಚ್ಚಿದ ಭಯೋತ್ಪಾದನೆಯ ವಿರುದ್ಧದ ಹೋರಾಟ ಮರೆತೆ ಹೋಗಿರಬೇಕು. ನಿಮ್ಮ ಬರಹ ಓದಿ ನಾವೂ ಕಪ್ಪು ಸಂಕೇತ ನಮ್ಮ ಬ್ಲಾಗಿನಲ್ಲಿ ಹಚ್ಹ್ಚಿಕೊಂಡಿದ್ದೆಲ್ಲ ನಾನಿನ್ನೂ ಮರೆತಿಲ್ಲ.

  >>>> ಆದರೆ ನೀವು ಪರ್ಷಿಯನರ ತರಹ ಇದನ್ನೆಲ್ಲ “this is madness” ಅನ್ನುವರಾದಲ್ಲಿ ಈ ಸಿನೆಮಾ ನೋಡಬೇಡಿ. ಇದು ಖಂಡಿತ ನಿಮ್ಮಂತವರಿಗಲ್ಲ.

  ಅಂತ ಹೇಳುವ ಮೂಲಕ ನಿಮ್ಮನ್ನು ನೀವೇ ಕೆಳಗಿಳಿಸಿಕೊಂಡಿದ್ದಿರಿ.

  ಹೀಗೆ ಹಿಂಸೆಯ ರಂಜಕತೆಯನ್ನು ನೀವು ಸಮರ್ಥಿಸುತ್ತಿರುವಾಗ ನಿಮ್ಮೆಲ್ಲ ಹಳೆಯ ಬ್ಲಾಗುಗಳನ್ನು ಓದಿಕೊಂಡೆ. ಈಗ ನನಗೆ ಆ ಬರಹಗಳ ಹಿಂದೆ ಒಂದು ತೀವ್ರ ತುಡಿತದ ಕೊರತೆ ಕಾಣಿಸುತ್ತಿದೆ. ಅಲ್ಲಿದ್ದದ್ದು ಏನನ್ನೋ ಹೊಸತು, ಯಾರೂ ಮಾಡದ್ದನ್ನು, ಮಾಡುವಂತಹ ಉತ್ಸಾಹವಲ್ಲದೆ ಬೇರೇನೂ ಅಲ್ಲ.

  ವಿಕಾಸ್ ಗೆ ಉತ್ತರಿಸುತ್ತ ನೀವು ಹೀಗನ್ನುತ್ತಿರಿ.
  >>>ನಾನು ಬಣ್ಣ ಕಟ್ತಾ ಇಲ್ಲ. ಈ ತರಹ output ಕೊಡೊದು ಎಷ್ಟು ಕಷ್ಟ ಗೊತ್ತಾ? ಆ ಟೋನು, ಆ ಕಲರ್ ಸ್ಕೀಮು, ಟೋಟಲ್ ಕಾನ್ಸೆಪ್ಟು. ಪ್ರತಿ ಫ್ರೇಮಿನ ಹಿಂದೆ ಎಷ್ಟು ಕೆಲಸ ಆಗಿದೆ ಗೊತ್ತಾ ?

  ಕಾರ್ಗೋ ಪ್ಯಾಂಟ್ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಧೀರೋದಾತ್ತ ಹೆಜ್ಜೆ ಹಾಕುತ್ತಿರುವ ಕಸಬ್ ನ ಫೋಟೋ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾದಾಗ “ಛೆ ಎಂಥ ಫೋಟೋಗ್ರಫಿ” ಅಂತ ಅಂದು ಕೊಂಡಿರಾ?

  ಛೆ! ನೀಲಾಂಜನ!

  Like

 6. ಗುರು ಬಾಳಿಗ Says:

  ನೀಲಾಂಜನ ಅಂದರೆ ಮಂಗಳಾರತಿ ಅಂತ.
  ಛೆ! ನೀಲಾಂಜನ ಅಂತ ತಪ್ಪಿ ಬರೆದಿದ್ದೆ. ಛೆ! ನೀಲಾಂಜಲ ಅಂತ ಓದಿಕೊಳ್ಳಿ.

  Like

 7. neelanjala Says:

  ಗುರು,
  -ನೀವಲ್ಲದೇ ಬೇರೆ ಯಾರದರೂ ಈ ಉತ್ತರ ಬರೆದಿದ್ದರೆ ದೊಡ್ಡದಾಗಿ ನಕ್ಕು ಸುಮ್ಮನಾಗುತ್ತಿದ್ದೆ. ನೀವು ನನ್ನ ಖಾಯಂ ಓದುಗರಾಗಿದ್ದಕ್ಕೆ ಉತ್ತರಿಸುತ್ತಿದ್ದೇನೆ.

  – ನೀವು ಫಿಲ್ಮ್ ನೋಡಿದ್ದಿರಾ? ಹಾಗಂತ ನನಗೆ ನಿಮ್ಮ ಮಾತುಗಳಿಂದ ಗೋಚರಿಸುತ್ತಿಲ್ಲ.

  -“ಅಂತ ಹೇಳುವ ಮೂಲಕ ನಿಮ್ಮನ್ನು ನೀವೇ ಕೆಳಗಿಳಿಸಿಕೊಂಡಿದ್ದಿರಿ” ನನಗೆ ಹಾಗೇನು ಅನ್ನಿಸುತ್ತಿಲ್ಲ. ನೀವು ಆ ಫಿಲ್ಮ್ ನ್ನು ಖಂಡಿತ ನೋಡಿಲ್ಲ ಅಂತ ಖಾತರಿಯಗುತ್ತಿದೆ. “this is madness”ಅನ್ನೋದು ಆ ಫಿಲ್ಮಿನ ಡೈಲೋಗು. ನನ್ನ ಬರಹದಲ್ಲಿ ಮಧ್ಯ ಮಧ್ಯ ಫಿಲ್ಮಿನ ಡೈಲಾಗುಗಳಿವೆ. ಅವುಗಳ ಅರ್ಥವಾಗಬೇಕಾದಲ್ಲಿ ಆ ಫಿಲ್ಮ್ ನೋಡಬೇಕು. . ಈ ರಾಯಭಾರಿ ಮಾತನಾಡುವುದಕ್ಕಿನ್ತ ಮೊದಲೇ ಅವನಾಡುವ ಮಾತನ್ನು ಎಚ್ಚರಿಕೆಯಿಂದ ಆಡಲು ಲಿಯೊನಿಡಸ್ ಸೂಚಿಸಿರುತ್ತಾನೆ. ಇಲ್ಲದಿದ್ದಲ್ಲಿ ಮುಂದೆ ಆಗುವ ಪರಿಣಾಮಕ್ಕೂ ಆತನೇ ಹೊಣೆ ಎಂದು ಹೇಳಿರುತ್ತಾನೆ. ಪರ್ಶಿಯನ್ ರಾಯಭಾರಿ ಸ್ಪಾರ್ಟನ್ನರನ್ನು ಗುಲಾಮಾನಾಗಿಸಲು (ಕಪ್ಪ ಕೊಡಲು) ಕೇಳಿಕೊಂಡು ಬಂದಿರುತ್ತಾನೆ. ಅದಕ್ಕೆ ಲಿಯೊನಾಡಸ್ ಒಪ್ಪುವುದಿಲ್ಲ. ಆತನನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಪರ್ಶಿಯನ್ ರಾಯಭಾರಿ ಸ್ಪಾರ್ಟನ್ ಕಿಂಗಗೆ ಹೇಳುವಂತದ್ದು; “this is madness” . ನಾನು ಆ ಸೀನ್ ನ್ನು ಮೇಲಿನ್ದ ಮೇಲೆ ವಿವರಿಸಿದ್ದೇನೆ. ನೀವು ಒಮ್ಮೆ ನೋಡಿ. ಆಮೇಲೆ ಆದರೂ ಅರ್ಥ ಅದೀತು 🙂

  – “ಬರಹಗಳ ಹಿಂದೆ ಒಂದು ತೀವ್ರ ತುಡಿತದ ಕೊರತೆ ಕಾಣಿಸುತ್ತಿದೆ. ಅಲ್ಲಿದ್ದದ್ದು ಏನನ್ನೋ ಹೊಸತು, ಯಾರೂ ಮಾಡದ್ದನ್ನು, ಮಾಡುವಂತಹ ಉತ್ಸಾಹವಲ್ಲದೆ ಬೇರೇನೂ ಅಲ್ಲ. ” ಇದರ ಬಗ್ಗೆ ಯೋಚಿಸುತ್ತೇನೆ. ನಾನು ಏನೂ ಮಾಡೀದರೂ ಅದು ಉಳಿದಕ್ಕಿಂತ ಭಿನ್ನವಾಗಿರುತ್ತದೆ ಎಂದು ನನ್ನ ಬಗ್ಗೆ ತಿಳಿದವರು ಹೇಳುತ್ತಾರೆ. ನಾನೇನು ಭಿನ್ನವಾಗಿರಬೇಕು ಎಂದು ಯೋಚಿಸಿ ಮಾಡುವುದಿಲ್ಲ. ಅಥವಾ ನನ್ನ ಯೋಚನೆಯೇ ಭಿನ್ನವೆ ಗೊತ್ತಿಲ್ಲ. ತೀವ್ರ ತುಡಿತ ಇಲ್ಲದಿರಬಹುದು. ನಾನು head ruling, heart ruling ಅಲ್ಲ 🙂

  -ಭಯೋತ್ಪಾದನೆ ಮತ್ತು ಈ ಫಿಲ್ಮೀಗೆ ಎಲ್ಲಿಂದ ಎಲ್ಲಿಗೆ ತಳುಕು ಹಾಕುತ್ತಿದ್ದೀರಾ? ಇಲ್ಲಿ ತೋರಿಸ್ತಾ ಇದ್ದಿದ್ದು ಹಿಂಸೆ ಅಲ್ಲ. ಅದು ಶೌರ್ಯ, ಪರಾಕ್ರಮ, ಭುಜಬಲ. ಆಗೀನ ಕಾಲದ ಯುದ್ಧದ ಸೀನು. ಅಲ್ಲಿ ಸಾಯುತ್ತಿದ್ದವರು ಸ್ಪಾರ್ಟನ್ ವೈರಿಗಳು . ಮನುಷ್ಯರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ ಸಾಮ್ರಾಜ್ಯಕ್ಕೆ ಸೇರಿದವರು. ಆ ಸಿನೆಮಾದಲ್ಲಿ ಪರ್ಶಿಯನ್ನರು ವಿಲನ್ ಗಳಾಗಿದ್ದಕ್ಕೆ ಅವರನ್ನು ತುಂಬಾ ಕ್ರೂರಿಗಳಂತೆ ಚಿತ್ರಿಸಲಾಗಿದೆ. ಅದಕ್ಕೆ ಅವರು ಸಾಯುವಾಗ ನಿಮಗೆ ಕನಿಕರ ಬರುವುದಿಲ್ಲ. ಇನ್ನೊಂದೆರಡು ಹಾಕು ಅಂತೀರಾ . ಅವರು ರಾಜ್ಯವನ್ನು ವಸಪಡಿಸಿಕೊಂಡಾದ ಮೇಲೆ ಎಲ್ಲ ಹೆಂಗಸರನ್ನು………… ಮಕ್ಕಳನ್ನು………….. ಅಂತವರು ಸತ್ತಾಗ ಯಾರೂ ಕನಿಕರ ಪಡುವುದಿಲ್ಲ. ಅದಕ್ಕೆ ನಾನು ಬರೆದದ್ದು ಅರ್ಥ ವಾಗಬೇಕಾದರೆ ಆ ಸಿನೆಮಾ ನೋಡಬೇಕು. ಎಲ್ಲ ಡೈಲಾಗುಗಳನ್ನು ಅರ್ಥಮಾಡಿಕೊಬೇಕು.We do what we are trained to do, we do what we are breed to do, we do what we are born to do’. ಅನ್ನೋದು ಅರ್ಥವಾಗುತ್ತೆ.

  – ಹಿಂಸೆ ಅಂದರೆ ಏನು ಅಂತ ಯಾರದರೂ ಹೇಳುತ್ತೀರಾ? ಬರುತ್ತಿರುವ reply ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ನಮ್ಮ ಭಾರತೀಯ ಸೈನಿಕರು ಗಡಿಯಲ್ಲಿ ನಿಂತು ಹೊರಡುತ್ತಾ ಶತ್ರುಗಳನ್ನು ಕೊಲ್ಲುತ್ತಾರಲ್ಲ, ಅದು ಹಿಂಸೆಯೆ! ನಂಗೆ ಈ ವಿಷಯ ಇಷ್ಟು ದಿನ ಗೊತ್ತಿರಲಿಲ್ಲ. ಹಾಗಾದಾರೇ ಶೌರ್ಯ, ಪರಾಕ್ರಮ, ಭುಜಬಲ…… ಮುಂತಾದವುಕ್ಕೆಲ್ಲ ಅರ್ಥವೇ ಇಲ್ಲ ಎಂದಾಯಿತು. ನಾನೇನೊ ಹಿಂಸೆಯೆಂದರೆ ಅಸಾಯಕನೊಬ್ಬನ ಮೇಲೆ ಮಾಡುವ ಮಾನಸಿಕ/ದೈಹಿಕ ದೌರ್ಜನ್ಯ ಅಂದುಕೊಂಡಿದ್ದೆ.

  Like

 8. ನೀಲಾಂಜಲ Says:

  -“ನೀಲಾಂಜನ ಅಂದರೆ ಮಂಗಳಾರತಿ ಅಂತ”
  ನಾನು ನಿಮ್ಮ “ಮಂಗಳಾರತಿ”ಯನ್ನು ಮುಗುಳುನಗುತ್ತ ಸ್ವೀಕರಿಸಿದ್ದೇನೆ.

  -“ವಿಕಾಸ್ ಗೆ ಉತ್ತರಿಸುತ್ತ ನೀವು ಹೀಗನ್ನುತ್ತಿರಿ.>>>ನಾನು ಬಣ್ಣ ಕಟ್ತಾ ಇಲ್ಲ. ಈ ತರಹ output ಕೊಡೊದು ಎಷ್ಟು ಕಷ್ಟ ಗೊತ್ತಾ? ಆ ಟೋನು, ಆ ಕಲರ್ ಸ್ಕೀಮು, ಟೋಟಲ್ ಕಾನ್ಸೆಪ್ಟು. ಪ್ರತಿ ಫ್ರೇಮಿನ ಹಿಂದೆ ಎಷ್ಟು ಕೆಲಸ ಆಗಿದೆ ಗೊತ್ತಾ ?”
  ನೀವು ಆರ್ಟಿಸ್ಟ ಆದ್ರೆ ಮಾತ್ರ ಅರ್ಥ ಆಗೋಕೆ ಸಾಧ್ಯ ಅಂತ ನಂಗೆ ಅನ್ನಿಸುತ್ತೆ

  -“ಕಾರ್ಗೋ ಪ್ಯಾಂಟ್ ಧರಿಸಿ ಕೈಯಲ್ಲಿ ಬಂದೂಕು ಹಿಡಿದು ಧೀರೋದಾತ್ತ ಹೆಜ್ಜೆ ಹಾಕುತ್ತಿರುವ ಕಸಬ್ ನ ಫೋಟೋ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾದಾಗ “ಛೆ ಎಂಥ ಫೋಟೋಗ್ರಫಿ” ಅಂತ ಅಂದು ಕೊಂಡಿರಾ? ”
  ಹ್ಹ ಹ್ಹಾ ವಾದ ಚೆನ್ನಾಗಿದೆ. ನಾನು ಫೋಟೊ ನೋಡಿದಾಗ ಫೋಟೊ ತೆಗೆದವನಿಗೆ ಬಯ್ಯುತ್ತಿದ್ದೆ. ಈ ಫೋಟೋ ತೆಗೆಯೋ ಬದಲು ಆ ಕ್ಯಾಮೆರಾನ ಆತನ ಮೇಲೆ ಬೀಸಿ ಒಗೆಬೇಕಾಗಿತ್ತು ಅಂತ. ಆದ್ರೆ ಫೋಟೋಗ್ರಾಫೆರ್ ಆದ್ರೂ ಏನು ಮಾಡ್ತಾನೆ. ಅದು ಆತನ ಹೊಟ್ಟೆಪಾಡು. ಇನ್ನೊಂದು ಕ್ಯಾಮೆರಾ ಯಾರು ತೆಗೆಸಿಕೊಡ್ತಾರೆ? ಆ ಫೊಟೊಗ್ರಾಫರ್ ಬಚಾವ್ ಮಾಡಲು ಹೋಗಿ ಒಬ್ಬ ಪೋಲಿಸ್ ಆತನ ಹಿಂದೆ ಸತ್ತು ಬಿದ್ದಿದ್ದ. ಹಾಗೇನೆ ಕಸಬ್ ನ ಮುಖದಲ್ಲಿ ಇರದಿದ್ದ ಭಾವನೆಗಳನ್ನು ನೋಡಿ ಈತ ಪಾಕೀಸ್ತಾನಿ ಸೈನಿಕನೇ ಅಂತ ತೀರ್ಮಾನಿಸಿಬಿಟ್ಟಿದ್ದೆ. ಅಷ್ಟು ನಿರ್ಭಾವದಿಂದ ಜನರನ್ನು ಸಾಯಿಸುವುದು ಮತ್ತು ಅಷ್ಟು ಆರಾಮವಾಗಿ ಓಡಾಡುವುದು ಒಬ್ಬ ಸೈನಿಕನಿಗೆ ಮಾತ್ರ ಸಾಧ್ಯ.

  Like

 9. ಗುರು ಬಾಳಿಗ Says:

  ಹೌದು ನೀಲಾಂಜಲಾ ನಾನು ಈ ಚಿತ್ರ ನೋಡಿಲ್ಲ. ನೋಡೋದೇ ಇಲ್ಲ ಅಂತಲ್ಲ. ಅವಕಾಶ ಸಿಕ್ಕಿದರೆ ಖಂಡಿತ ನೋಡ್ತೀನಿ.

  ಆದರೆ ನನ್ನ ತಕರಾರಿರೋದು, ಈ ಚಿತ್ರದೊಳಗಲ್ಲ. ಅದನ್ನು ನೀವು ಗ್ರಹಿಸಿ ಬರೆದ ರೀತಿಗೆ. ಅಷ್ಟಲ್ಲದೆ ನೀವು ಮಾಡಿರೋದು ಸರಿ ಅಂತ ಸಮರ್ಥಿಸ್ತಾ ಇದ್ದೀರಲ್ಲ. ಅದಕ್ಕೆ ಕೆಡುಕೆನಿಸ್ತಾ ಇದೆ.

  ನೀವು ಬರೆದ ಈ ಕೆಳಗಿನ ವಾಕ್ಯಗಳನ್ನು ಗಮನಿಸಿ. ಇವು ಆ ಚಿತ್ರದ ಸಂಭಾಷಣೆಗಳಲ್ಲ ಅಂತ ನಾನು ಅಂದುಕೊತಾ ಇದೀನಿ.

  >>> ಅದಕ್ಕೆ ಅಂಟಿದ ಬಿಸಿ ರಕ್ತ ತೊಟ್ಟಿಕ್ಕುತ್ತದೆ. wow! ನಿಜ, ನೀವು ಹಾಗೆ ಅನ್ನುತ್ತೀರಿ. ಅಷ್ಟು beautify ಮಾಡಲಾಗಿದೆ
  >>> ರಕ್ತ ಸ್ಕ್ರೀನ್ ನಲ್ಲಿ ಹೇಗೆ ಹಾರುತ್ತೆ ಗೊತ್ತಾ ? ಕಚಾ ಕಚಾ ಕಚ್ …….. ತಿವಿಯುತ್ತ, ಕಡಿಯುತ್ತ, ಕೆಡಗುತ್ತ. ಸ್ಪಾರ್ಟನ್ನರ ಗ್ರೇ ಬಣ್ಣದ ಗುರಾಣಿ, ಶಿರಸ್ತ್ರಾಣ, ಭರ್ಜಿ-ಅವರ ಕೆಂಪು ಹಿಂಬದಿಯ ಹೊದಿಕೆ- ಯೆಲ್ಲೊ ಟೋನು, ಹಿಂದಿನ ಕಪ್ಪು ಕಲ್ಲು.. ಉಫ್! ನೀವು ಚಿತ್ರದಲ್ಲಿ ಕಳೆದು ಹೋಗುತ್ತಿರಾ.
  >>> ಶವಗಳ ಗೋಡೆ, ಖೇಂಡಾಮ್ರಗವನ್ನು ಸಾಯಿಸುವುದು,….ಹೀಗೆ ಎಲ್ಲವೂ ಚೆನ್ನಾಗಿವೆ. ನಂಗೆ ಯುದ್ಧದ ಪ್ರತಿ ಫ್ರೇಮು ತುಂಬಾನೇ ಇಷ್ಟವಾಯಿತು. ಪ್ರಾರಂಭದಲ್ಲಿನ ಕರಿ ತೊಳವನ್ನು ಮಂಜಿನ ತಣ್ಣನೆಯ ರಾತ್ರಿಯಲ್ಲಿ ಸಾಯಿಸುವುದರಿಂದ ಹಿಡಿದು ಕೊನೆಯಲ್ಲಿ ಲಿಯೊನಿಡಸ್ ಮತ್ತು ಸಹಚರರು ಸತ್ತ ಚಿತ್ರಣದವರೆಗೂ. ಪ್ರತಿ ಫ್ರೇಮು ಒಂದು ಸುಂದರ ಚಿತ್ರವೇ ಆಗಿದೆ.
  >>>ಇಲ್ಲಿ ರಕ್ತ ಹಾರುತ್ತೆ, ಕಾಲು-ಕೈ-ರುಂಡವೆಲ್ಲ ಎತ್ತರೆತ್ತರ ಹಾರಿ ಬೀಳುತ್ತೆ. ಎಲ್ಲೂ ಹಾರರ್ ಸಿನೆಮಾ ತರಹವೇನೂ ಅನ್ನಿಸುವುದಿಲ್ಲ. ಹಿಲ್ಸ್ ಹ್ಯಾವ್ ಆಯ್ಸ್ ತರಹ ಖಂಡಿತ್ ಸೈಕಿಕ್ ಆಗಿಲ್ಲ. ರುದ್ರ ರಮಣೀಯ ಅಂತಾರಲ್ಲ, ಹಾಗಿದೆ. ಇಲ್ಲಿ ಸತ್ತವರ ಬಗ್ಗೆ ಕನಿಕರವೂ ಬರುವುದಿಲ್ಲ.

  ನಿಮ್ಮ ಬರಹದಲ್ಲೇ ಇಂದು ಹಿಂಸೆಯ ರಂಜಕತೆಯನ್ನು ಸಮರ್ಥಿಸುವ ಕೆಲಸ ಆಗಿದೆ. ನಾನು ಬರೆದ ಈ ವಾಕ್ಯವನ್ನು ಮತ್ತೊಮ್ಮೆ ಓದಿ. ಹಿಂಸೆಯ ರಂಜಕತೆಯನ್ನು ಸಮರ್ಥಿಸೋದು ಹಿಂಸೆಯನ್ನು ಸಮರ್ಥಿಸಿದ ಹಾಗೆ.

  ಇನ್ನು ಹಿಂಸೆಗೆ ವ್ಯಾಖ್ಯಾನ ನಾವು ಮತ್ತೆ ಮಾಡಬೇಕಿಲ್ಲ. ನಮ್ಮ ನಿಮ್ಮೊಳಗೆ ಅಡಗಿರುವ ಆ ಒಂದಿನಿತು ಅಂತಕರಣ ಅಂತ ಇರತ್ತಲ್ಲ, ಅದಕ್ಕೆ ಗೊತ್ತು. ಹಿಂಸೆ ಅಂದರೇನು ಅಂತ.

  Like

 10. prakash hegde Says:

  ನೀಲಾಂಜಲ…

  ಒಳ್ಳೆಯ ಫಿಲ್ಮ್ ಬಗೆಗೆ ತಿಳಿಸಿದ್ದಕ್ಕೆ ..
  ಧನ್ಯವಾದಗಳು…
  ನಿಮ್ಮ ಬ್ಲೋಗ ವೈವಿದ್ಯಪೂರ್ಣವಾಗಿದೆ…
  ಪೂರ್ತಿಯಾಗಿ ಇನ್ನೂ ಓದಿಲ್ಲ..
  ಓದುವೆ…

  ಧನ್ಯವಾದಗಳು…

  Like

 11. ನೀಲಾಂಜಲ Says:

  ಗುರು,
  no comments,
  ನಮ್ಮಿಬ್ಬರ ದೃಷ್ಟಿಕೋನಗಳು ಬೇರೆಯದ್ದಾಗಿದ್ದಕ್ಕೆ ವಾದ ಮಾಡಿಯೂ ಪ್ರಯೋಜನವಿಲ್ಲ.

  ಸುನಾಥ n Prakash Hegde,
  thanx for reading

  Like

 12. raviraj Says:

  lekhana chennagide sakastu mahiti doreyitu, dhanyavada

  Like

 13. vikas hegde Says:

  ಉತ್ತರ ಕೊಡುವಾಗ ಹೀಗೆ ನಿಮಗೆ ಆಸಕ್ತಿ ಇಲ್ಲ, ನಿಮಗೆ ನೋಡುವ ಅಭಿರುಚಿ ಇಲ್ಲ, ನೀವು ಕಲಾವಿದ ಅಲ್ಲ, ನೀವು ಸಿನೆಮಾ ಫ್ರೀಕ್ ಅಲ್ಲ , ಅದಕ್ಕೇ ನಿಮಗೆ ಅರ್ಥಾಗಲ್ಲ, ಚೆನ್ನಾಗಿ ಅನ್ನಿಸಲ್ಲ ಅಂತ ತಳ್ಳಿಹಾಕುವುದಾದರೆ ಒಂದು disclaimer ಹಾಕಿಬಿಡಿ This post is only for so n so… ಅಂತ 🙂

  ಒಂದು ಸಿನೆಮಾ ಬರೀ ಮಾಡುವವರಿಗೆ ಮಾತ್ರ ಅಲ್ಲ, ನೋಡುಗರನ್ನು ಗಣನೆಗೆ ತೆಗೆದುಕೊಳ್ಳುವುದೂ ಅಶ್ಟೇ ಮುಖ್ಯ, ಹಾಗೇ ಕಲೆಯೂ ಕೂಡ. ಇಲ್ಲಾಂದ್ರೆ ಸಿನೆಮಾ ಮಾಡಿ, ಚಿತ್ರ ಬರೆದು ಮನೆ ಒಳಗೆ ಇಟ್ಟುಕೊಳ್ಳಬಹುದು, ಯಾರೂ ವಿರೋಧಿಸಲ್ಲ ಆಗ .

  ಈಗ್ಲೂ ನಿಮಗೆ ನಂಗೆ ಅಭಿರುಚಿಗಳೇ ಇಲ್ಲ ಅನಿಸಿರಬಹುದಲ್ವಾ. ! 🙂

  Like

 14. neelanjala Says:

  ವಿಕಾಸ್,
  ನಿಮಗೆ ಅಭಿರುಚಿ ಇಲ್ಲಾ ಅಂತ ಅನ್ನಿಸ್ತಾ ಇಲ್ಲ. ನಮ್ಮಿಬ್ಬರ ಅಭಿರುಚಿಗಳು ಬೇರೆ ಬೇರೆ ಅನ್ನಿಸ್ತಿದೆ.
  ನಿಮಗೆ ಈ ಸಿನೆಮಾ ಹಿಂಸಾತ್ಮಕ ಅನ್ನಿಸಿದರೆ ನನಗೆ ಅದು ಶೌರ್ಯ, ಪರಾಕ್ರಮ, ಭುಜಾಬಲ ಅನ್ನೋದರ definition ಅನ್ನಿಸುತ್ತೆ. ನಮ್ಮ ಮಹಾಭಾರತವನ್ನು ಹೀಗೆ ಯಾರೂ ಯಾಕೆ ಚಿತ್ರಿಸಿಲ್ಲ ಅಂತ ಅನ್ನಿಸುತ್ತೆ. ಭೀಮ ದುಶ್ಶಾಸನನ ರಕ್ತ ಕುಡಿಯೋದು ನೋಡ್ತಾ ಇದ್ರೆ ನೋಡುಗನಿಗೆ ದ್ರೌಪದಿಗೆ ಆದ ಅನ್ಯಾಯದ ವಿರುದ್ಧದ ಸೇಡು ಅನ್ನಿಸಬೇಕು. (poetic judgment) ಅದನ್ನು ಹಿಂಸೆ ಅನ್ದುಕೊನ್ಡ್ರೆ i am helpless.
  ಈ ಸಿನೆಮಾಕ್ಕೆ ಮತ್ತು hills have eyesಗೆ ತುಂಬಾ ವ್ಯತ್ಯಾಸ ಇದೆ. ನನಗೆ ಹಿಂಸೆಯೆಂದರೆ ಅಸಾಯಕನೊಬ್ಬನ ಮೇಲೆ ಮಾಡುವ ಮಾನಸಿಕ/ದೈಹಿಕ ದೌರ್ಜನ್ಯ. ಇಲ್ಲಿ ಎರಡು ದೇಶಗಳ ಮೇಲಿನ ಯುದ್ಧ. ಹೊರಾಡಲೇ ಬೇಕು. ಕೇವಲ 300 ಜನ ಹೇಗೆ ಅಷ್ಟು ಜನರ ಜೊತೆ ಹೊರಾಡಿ ದಂತ ಕತೆಯಾದರೂ ಅನ್ನೋದನ್ನು ತೋರಿಸಲೇಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇದು ಒಂದು ಗ್ರಾಫಿಕ್ ನಾವೇಲ್ ನ್ನಾ ಸಿನೆಮಾಕರೀಸ್ತಾ ಇರೋದು. ಕೈಯಲ್ಲಿ ಬಿಡಿಸಿದ ಚಿತ್ರವನ್ನು ಸಿನೆಮಾದಲ್ಲಿ ditto ಕಟ್ಟಿ ಕೊಡೊದು ಅಷ್ಟು ಸುಲಭದ ಮಾತಲ್ಲ. ಬರಹದ ಕೆಳಗೆ ಕೊಟ್ಟ ಲಿಂಕನ್ನು ಒಮ್ಮೆ ಚೆಕ್ ಮಾಡಿ. ಪ್ರತಿ ಫ್ರೇಮು ಒಂದು ಸುಂದರ ಚಿತ್ರ. ಬರೀ ಹೂವು, ಹಣ್ಣು, ನೇಚರ್ರು…. ಇತ್ಯಾದಿಗಳು ಇದ್ದ ಚಿತ್ರವು ಕೆಟ್ಟ ಚಿತ್ರವಾಗಿರಬಹುದು. ಅದಕ್ಕೆ ಆ ರೀತಿಯಲ್ಲಿ ನೋಡಲು ನೋಡುಗ ಕಲಾವಿದನಾಗಬೇಕು. ……………..

  ಒಂದು ಸಿನೆಮಾ ಬರೀ ಮಾಡುವವರಿಗೆ ಮಾತ್ರ ಅಲ್ಲ, ನೋಡುಗರನ್ನು ಗಣನೆಗೆ ತೆಗೆದುಕೊಳ್ಳುವುದೂ ಅಶ್ಟೇ ಮುಖ್ಯ. ನಿಜ. ಸಿನೆಮಾನೂ ಒಂದು ಕಲೆ. ಹಾಗೇನೆ ಪ್ರತಿ ಸಿನೆಮಾವನ್ನು ಒಂದು ವರ್ಗದ ವೀಕ್ಷಕರಿಗೆ ಅಂತ ಮಾಡಿರುತ್ತಾರೆ. ಅದು ಎಲ್ಲಾ ವರ್ಗದ ಪ್ರೇಕ್ಷಕರನ್ನು ಮುಟ್ಟಿದರೆ hit ಆಗುತ್ತೆ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: