ಪ್ರಿಯ ಓದುಗರೇ ಮತ್ತು ಸಹ ಬ್ಲಾಗಿಗರೇ,
ಮೊನ್ನೆ ಡಿಸೆಂಬರ್ 1 ರಿಂದ ಪ್ರಾರಂಭವಾದ ನಮ್ಮ ಕಪ್ಪು ಪಟ್ಟಿ ಆಂದೋಲನ ಕೇವಲ 11 ದಿನಗಳಲ್ಲಿ 50ಕ್ಕೂ ಹೆಚ್ಚು ಬ್ಲಾಗಿಗರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಇದನ್ನು ಬೆಂಬಲಿಸಿ ಮೊದಲ ಹೆಜ್ಜೆಯ ಯಶಸ್ಸಿಗೆ ಕಾರಣರಾದ ನಾವೆಲ್ಲರೂ ಅಭಿನಂದನೆಗೆ ಅರ್ಹರು. Yes, WE did it. ಸಂತಸದ ಸಂಗತಿಯೆಂದರೆ ಪ್ರತಿದಿನವೂ ಹೊಸ ಬೆಂಬಲಿಗರನ್ನು ಪಡೆಯುತ್ತಿದ್ದೇವೆ. ಮಾತಿನಿಂದ ಮಾತಿಗೆ, ಬ್ಲಾಗಿನಿಂದ ಬ್ಲಾಗಿಗೆ ಹೀಗೆ ನಿಧಾನವಾಗಿ ಹರಡುತ್ತಿದೆ. ನಿಜಕ್ಕೂ , ಎಲ್ಲ ತಕರಾರುಗಳ ನಡುವೆಯೂ “ಹೀಗೇಯೂ ಮಾಡಬಹುದು” ಎಂದು ತೋರಿಸಿಕೊಟ್ಟಿದ್ದೇವೆ. ಅಭಿನಂದನೆಗಳು.
ಇನ್ನೂ ಮುಂದಿನ ದಾರಿಯ ಕುರಿತು;
ಮೊದಲೇ ಹೇಳಿದಂತೆ ಇದಕ್ಕೆ ಸಂಭಂದಿಸಿದಂತೆ ಒಂದು ವೆಬ್ ಸೈಟ್ ನ್ನು ಮಾಡುವ ಉದ್ದೇಶವಿತ್ತು. ಆದರೆ ಇದನ್ನು ಸಧ್ಯಕ್ಕೆ ಕೈ ಬಿಡಲಾಗಿದೆ. domain name, web space, web management ಹೇಳಿ ಆಗುವ ಖರ್ಚು ಬಹಳ. ಈ ಸನ್ಘಟಿತ ಕಾರ್ಯ ಪ್ರಾರಂಭವಾಗುವ ಮೊದಲೇ ದೇಣಿಗೆ ಪೆಟ್ಟಿಗೆ, ಖಚಾಂಚಿಯ ನಿಯೋಜನೆ ಸರಿಯಾದದ್ದು ಅಲ್ಲ. ಮೊದಲ ಹಂತದಲ್ಲೇ ಇಷ್ಟು ಹಣ ಖರ್ಚು ಮಾಡುವುದು ಅನವಶ್ಯಕ . ಆ ಕಾರಣ ಈ ವಿಷಯಕ್ಕೆ ಸಂಭದಿಸಿದಂತೆ ಹೊಸ ಬ್ಲಾಗ್ ತೆರೆಯಲಾಗಿದೆ. (ಆಫೀಶಿಯಲ್ ಉದ್ಘಾಟನೆ ಸಧ್ಯದಲ್ಲೇ ಆಗಲಿದೆ 😉 ) ಹಾಗೇನೆ ನೀಲಾನ್ಜಲ ಖಾಸಗಿ ಬ್ಲಾಗ್ ಆದ್ದರಿಂದ ಈ ವಿಷಯವನ್ನು ಚರ್ಚಿಸಲು ಒಂದು ಸಾಂಘಿಕ ಬ್ಲಾಗ್ ಬೇಕೆನಿಸಿತು. ಮುಂದೊಂದು ದಿನ ನಾವೆಲ್ಲ ಸೇರಿ ಅಗತ್ಯವಿದ್ದರೆ ವೆಬ್ ಸೈಟ್ ಪ್ರಾರಂಭಿಸಬಹುದು.
ಇನ್ನೂ ಲಾಂಛನದ ಕುರಿತು. ನಮ್ಮಲ್ಲೇ ಯಾರದರೂ ಮಾಡಿಕೊಡುವರಿದ್ದರೆ ಮುಂದೆ ಬನ್ನಿ ಎಂದು ಕೇಳಿದ್ದಕ್ಕೆ ಉತ್ತರ ಬಂದಿಲ್ಲದ ಕಾರಣ, ಇದಕ್ಕೆ ಸಂಭಂದಿ ಒಂದು ಚಿಕ್ಕ ಸ್ಪರ್ಧೆಯನ್ನು ಆಯೋಜಿಸುವುದು. ಆಗ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು.
ಇದೆಲ್ಲಕ್ಕಿಂತ ಮುಖ್ಯವಾದದ್ದು ಭಯೋತ್ಪಾದನೆ ಈ ವಿಷಯದ ಹೊರಗು–ಒಳಗು ಬಗ್ಗೆ ತಿಳುವಳಿಕೆ ಬೆಳೆಸಿಕೊಳ್ಳುವುದು. ಭಯೋತ್ಪಾದನೆ ಎಂಬುದು ಸಾಮಾಜಿಕ ಪಿಡುಗು. ನಿಮಗೆ ಶಾಲೆಯಲ್ಲಿ ನಕ್ಸಲ್ ವಾದ , ಮಾವೋ ವಾದ ಇವುಗಳ ಜೊತೆ ಭಯೋತ್ಪಾದನೆಯ ಕುರಿತು ಓದಿದ್ದು ನೆನಪಿದೆಯಾ? ಬಡತನ , ಅನಕ್ಷರತೆ, ನಿರುದ್ಯೋಗ……. ಮುಂತಾದವುಗಳ ಜೊತೆಗೆ ಇದನ್ನು ಓದಿದ್ದ ನೆನಪು ನನಗಿದೆ. ಭಯೋತ್ಪಾದನೆಯ ಮೂಲ ಅರಸುತ್ತಾ ಹೋದರೆ ೧ನೇ ಶತಮಾನದಷ್ಟು ಹಿಂದೆ ಹೋಗಬೇಕಾಗುತ್ತದೆ. ಇದರ ಬಗ್ಗೆ ನಾನಿನ್ನೂ ಓದುತ್ತಿದ್ದೇನೆ. ಒಂದಾದ ಮೇಲೊಂದು ಹೊಸ ಸಂಗತಿಗಳು ತೆರೆದು ಕೊಳ್ಳುತ್ತ ನಾನಂದು ಕೊಂಡಿದ್ದನ್ನೆಲ್ಲ ಸುಳ್ಳಾಗಿಸಿದೆ. ನಾನು ಭಯೋತ್ಪಾದನೆ ಮುಸ್ಲಿಮರಿಂದಲೇ ಹುಟ್ಟಿದ್ದು , ಪಾಕಿಸ್ತಾನ–ಭಾರತ ಎಂದು ಇಭ್ಬಾಗವಾದಾಗ ಉಂಟಾದ ಕಾಶ್ಮೀರ ಸಮಸ್ಯೆಯಿಂದ ಭಯೋತ್ಪಾದಕರು ಹುಟ್ಟಿದ್ದಾರೆ ಎಂದೆಲ್ಲಾ ಭಾವಿಸಿದ್ದೆ. ನಮ್ಮೊಳಗಿನ ಕೆಟ್ಟ ರಾಜಕಾರಣ, ಭ್ರಷ್ಟ ವ್ಯವಸ್ಥೆ ಇದಕ್ಕೆ ಕಾರಣ ಎಂದು ಅಂದುಕೊಂಡಿದ್ದೆ. ಜಾಸ್ತಿ ಓದುತ್ತಾ ಇದ್ದ ಹಾಗೆ ವಿಪರೀತ ಗೊಂದಲಗಳು ಏಳುತ್ತಿವೆ. ನಾವೆಲ್ಲ ಬಾಯಿಗೆ ಬಂದ ಹಾಗೆ, ಮನಸ್ಸಿಗೆ ತೋಚಿದ ಹಾಗೆ ಬರೆಯುವಷ್ಟು ಮಾಮೂಲಾಗಿಲ್ಲ ಈ ವಿಷಯ. ನಿಜಕ್ಕೂ ಭಯೋತ್ಪಾದನೆಯನ್ನು ನಾಶಗೊಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಕೈಯಲ್ಲಿ ಕೋವಿ ಹಿಡಿದು ಸಾಯಿಸಲು ಹೊರಟರೆ ಏಷ್ಟು ಜನ ಅಂತ ಕೊಲ್ಲುವುದು ? ಬಡತನ ಸಮಸ್ಯೆಯನ್ನು ನೀಗಲು ಜಗತ್ತಿನ ಎಲ್ಲಾ ಬಡವರನ್ನು ಸಾಯಿಸಬೇಕು ಎಂಬ ತೀರ್ಪಿನಷ್ಟೇ ಇದು ಅಸಂಬದ್ಧವಾಗುತ್ತದೆ.
ಮಾವೊವಾದಿಗಳು, ನಕ್ಸಲರು, ಭಯೋತ್ಪಾದಕರು ಎಲ್ಲರೂ ಒಂದಲ್ಲ ಒಂದು ಧ್ಯೇಯಕ್ಕಾಗಿ ಸನ್ಘಟಿತರಾಗಿ , ಯೋಜಿತರಾಗಿ, ಕಾರ್ಯಸೂಚಿಯನ್ನು ರೂಪಿಸಿಕೊಂಡು ಹೊರಾಡುತ್ತಿರುವವರು. ಒಂದಲ್ಲ ಒಂದು ರೀತಿಯಿಂದ ಸ್ವಸ್ಥ ಸಮಾಜದ ಮೂಲ ಕಲ್ಪನೆಯನ್ನು ನಾಶಮಾಡಲು ಹೊರಟಿರುವವರು. ಭಯೋತ್ಪಾದಕನಿಗೆ ಮತ್ತು ಕೊಲೆಗಡುಕನಿಗೆ/ದರೋಡೆಕೋರನಿಗೆ ಮೂಲ ಉದ್ದೇಶದಲ್ಲಿ ವ್ಯತ್ಯಾಸವಿದೆ. ಹಾಗೇನೆ ಭಾರತದ ಏಜೆಂಟ ಶತ್ರು ದೇಶದಲ್ಲಿ ದೇಶದ್ರೋಹಿ ಎನ್ನಿಸಿಕೊಂಡರೆ, ನಮ್ಮ ಕಣ್ಣಲ್ಲಿ ದೇಶಭಕ್ತ ಅನ್ನಿಸಿಕೊಳ್ಳುತ್ತಾನೆ. ಈ ತರಹ ಅನೇಕ ಭಿನ್ನತೆಗಳನ್ನು ಗಮನದಲ್ಲಿಟ್ಟುಕೊಂಡು ಭಯೋತ್ಪಾದನೆಯ ಕುರಿತು ಮಾತನಾಡಬೇಕಾಗುತ್ತದೆ.
ಇದೆಲ್ಲದರ ಬಗ್ಗೆ ಯೋಚಿಸಿ, ಭಯೋತ್ಪಾದನೆಯನ್ನು ದಮನ ಮಾಡಲು ಅದರ ಉಗಮ, ಬೆಳೆದು ಬಂದ ಹಾದಿ, ಚರಿತ್ರೆ, ಸಾಮಾಜಿಕ ಕಾರಣಗಳು, ಭಯೋತ್ಪಾದಕ ಸಂಘಟನೆಗಳ ವಿವರ, ಅವುಗಳ ಧ್ಯೇಯ, ಕಾರ್ಯ ಪದ್ಧತಿ ಮುಂತಾದವುಗಳ ಬಗ್ಗೆ ತಿಳಿಯುವುದು ಬಹು ಮುಖ್ಯವಾಗುತ್ತದೆ. ಆ ಕಾರಣ ಈ ವಿಷಯದ ಬಗ್ಗೆನೂ ಪ್ರಭನ್ಧ ಸ್ಪರ್ಧೆಯನ್ನು ಏರ್ಪಡಿಸುವುದು. ಮತ್ತು ಸದ್ಯ ಕೇವಲ ರಾಜಕಾರಣಿಗಳನ್ನು, ನಮ್ಮ ಭ್ರಷ್ಟ ವ್ಯವಸ್ಥೆಯನ್ನು ಬಯ್ಯುತ್ತಿರುವ ಎಲ್ಲರನ್ನೂ ಇದರ ಬಗ್ಗೆ ಸ್ವಲ್ಪ ಮಟ್ಟಿಗಾದರೂ ಅಧ್ಯಯನ ಮಾಡಲು ಹೇಳುವುದು. ಇದಕ್ಕೆ ಸಂಭದಿಸಿದ ಕಾನೂನುಗಳನ್ನು, ಸರ್ಕಾರ/ಸರ್ಕಾರೇತರ ಸಂಘಗಳನ್ನು ಪರಿಚಯಿಸಿಕೊಳ್ಳುವುದು. ಈಗಾಗಲೇ ಹೊಸ ಬ್ಲಾಗಿನಲ್ಲಿ ಈ ವಿಷಯದ ಬಗ್ಗೆ ಮಾಹಿತಿ ಕೊಡುವ ಕೆಲ ಲಿಂಕ್ ಗಳನ್ನು ಕಾಣಬಹುದು. ನಿಮಗೂ ಗೊತ್ತಿದ್ದರೆ ಹೇಳಿ. ಸೇರಿಸಲಾಗುವುದು.
ನನ್ನ ಪ್ರಕಾರ ಭಯೋತ್ಪಾದನೆ ಈಗೀನ ಪ್ರಮುಖ ಸಾಮಾಜಿಕ ಸಮಸ್ಯೆ. ಭ್ರಷ್ಟ ವ್ಯವಸ್ಥೆ, ಕೆಟ್ಟ ರಾಜಕಾರಣಿಗಳು, ಸ್ವಾರ್ಥಿ ಪ್ರಜೆಗಳು ಇದಕ್ಕೆ ಸಹಕಾರ ನೀಡುತ್ತಿರುವವರು. ನಮ್ಮ ವ್ಯವಸ್ಥೆಯನ್ನು ಸರಿ ಮಾಡಲು ಪ್ರಯತ್ನ ಪಡುವುದು ಇದರ ಬಲ ಕುನ್ದಿಸಬಹುದೇ ಹೊರತು ಮೂಲ ಸಮಸ್ಯೆಯ ನಿವಾರಣೆಯಾಗಲಾರದು. ಬದಲು ಇನ್ನೊಂದು ರೂಪದಲ್ಲಿ ಎದ್ದು ಬರಬಹುದು. ಸುವ್ಯವಸ್ಥೆಯ ರಚನೆಯಿಂದ ಆಗುವ ಸಾವು ನೋವುಗಳನ್ನು ಸ್ವಲ್ಪ ಕಡಿಮೆ ಮಾಡಬಹುದು. ಸಮಾಜ ಅನ್ನುವುದು ಇರುವ ತನಕ ಸಮಾಜ ಘಾತುಕ ಶಕ್ತಿಗಳು ಇದ್ದೇ ಇರುತ್ತವೆ. ಹಾಗಂತ ಸುಮ್ಮನಿದ್ದರೂ ಆಗುವುದಿಲ್ಲವಲ್ಲ.
ಎರಡನೆಯ ಹೆಜ್ಜೆಯಾಗಿ ; ಲೋಗೋ ಸ್ಪರ್ಧೆ ಮತ್ತು ಪ್ರಭನ್ದ ಸ್ಪರ್ಧೆ. ಇನ್ನೊಂದು ದಿನದೊಳಗೆ ಪೂರ್ಣ ವಿವರಗಳನ್ನು ಎರಡು ಬ್ಲಾಗಿನಲ್ಲೂ ಹಾಕಲಾಗುವುದು. ನಂತರದಲ್ಲಿ ರೆಡಿಯಾಗುತ್ತಿರುವ ಮುಂದಿನ ಕಾರ್ಯಸೂಚಿಯ ಪೋಸ್ಟ. ( ತರ್ಕಿಸಿ, ಯೋಚಿಸಿ ಮಾಡದಿದ್ದರೆ ನಾನು ATS ಅಥವಾ ನಮ್ಮೊಳಗಿನ terrorist supporter ಕೈಯಿಂದ ತೊಂದರೆಗೊಳಗಾಗುವ ಸಾಧ್ಯತೆಗಳು ಇವೆ 😀 ) . ಆಗ ನಮ್ಮ ನಿರ್ಧಾರಗಳನ್ನು, ಸಲಹೆಗಳನ್ನು ಅದಕ್ಕೆ ಅಳವಡಿಸಿಕೊಳ್ಳಬಹುದು. ಬ್ಲಾಗಿನಿಂದ ಶುರುವಾದ ಈ ಹರಿವು ಬ್ಲಾಗಿನ ಮೂಲಕವೇ ಸಾಗಲಿ. ಸಹಸ್ರ ಓದುಗರನ್ನು ತಲುಪಲಿ.
ಡಿಸೆಂಬರ್ 15, 2008 ರಲ್ಲಿ 11:07 ಫೂರ್ವಾಹ್ನ |
ಉತ್ತಮ ಯೋಚನೆ. ಹೊಸ ಬ್ಲಾಗ್ ಉದ್ಘಾಟನೆ ಯಾವಾಗ? ಲೋಗೋ ಸ್ಪರ್ಧೆಗೆ ಎಷ್ಟು ಜನ ಈವರೆಗೆ ನೋಂದಾಯಿಸಿದ್ದಾರೆ? ನಾನಂತೂ ಇದ್ದೇನೆ 🙂
LikeLike
ಡಿಸೆಂಬರ್ 15, 2008 ರಲ್ಲಿ 2:37 ಅಪರಾಹ್ನ |
yes… good step. website bagge eegle yochane maadodu beda.
ide response enthusiasm yellarallu kone tanaka idre… khandita we can do something better
LikeLike
ಡಿಸೆಂಬರ್ 16, 2008 ರಲ್ಲಿ 8:10 ಅಪರಾಹ್ನ |
ನಿಜ, ಮೊದಲ ಪೋಸ್ಟಿಗೆ ಮತ್ತು ಈಗಿನ ಪೋಸ್ಟಿಗೆ ಇರುವ ಕಮೆಂಟುಗಳ ಸಂಖ್ಯೆಯಲ್ಲಿನ ವ್ಯತ್ಯಾಸ ನೋಡಿದರೆ ನನಗೂ ಅದು ನಿಜ ಎನಿಸುತ್ತದೆ..! 🙂
LikeLike
ಡಿಸೆಂಬರ್ 19, 2008 ರಲ್ಲಿ 10:12 ಫೂರ್ವಾಹ್ನ |
ಸೌಪಿ ಅಕ್ಕಾ,
ನಾನು ನಿನ್ನ ನವೋದಯದ ತ೦ಗಿ, ಗೀತಾ ಹೆಗಡೆ. ರ್ಅಶ್ಮಿ ಹೆಗಡೆಯಿ೦ದ ನೀನೆ ನೀಲಾ೦ಜಲದ ಒಡತಿ ಎ೦ದು ಗೊತ್ತಾಯ್ತು.
ನಾನು ಸಹ ಕಪ್ಪು ಪಟ್ಟಿ ಅ೦ದೋಲನ ದಲ್ಲಿ ನಿಮ್ಮೆಲ್ಲರ ಜೊತೆಗಿದ್ದೇನೆ.
LikeLike
ಡಿಸೆಂಬರ್ 19, 2008 ರಲ್ಲಿ 10:43 ಫೂರ್ವಾಹ್ನ |
Geeta,
nice to c u. ninna blog nodidru adu nindu anta gottiralilla !
thanx for supporting.
-love
LikeLike
ಡಿಸೆಂಬರ್ 19, 2008 ರಲ್ಲಿ 11:05 ಫೂರ್ವಾಹ್ನ |
Tejaswini,
ಸ್ಪರ್ಧೆಗೆ ಇನ್ನೂ ಯಾರು ಬಂದಿಲ್ಲ. ಸಧ್ಯ ನೀವು ಮತ್ತು ನಾನು, ಇಬ್ಬರೇ.
ವಿಜಯರಾಜ್,
ok, ಸಧ್ಯ wait ಮಾಡೋದು.
ಶ್ರೀ,
😀
LikeLike