- “ಪ್ರತಿಭಟನೆ, ಆಂದೋಲನ, ಇವೆಲ್ಲವೂ ಬೇಕು. “ಇದಕ್ಕೆ ನನ್ನ ವಿರೋಧವಿದೆ” ಅಂತ ಬಹಿರಂಗವಾಗಿ ಬರಹ ಹೊತ್ತು ತಿರುಗುವುದೂ ಬೇಕು. ಆದರೆ ಯಾರ ವಿರುಧ್ಧ? ಭಯೋತ್ಪಾದಕರ ವಿರುದ್ಧವೇ? ಮೊದಲು ಪ್ರತಿಭಟನೆ, ಆಂದೋಲನ ಬೇಕಾಗಿರುವುದು ನಮ್ಮ ಕೆಟ್ಟು ಹೋಗಿರುವ ವ್ಯವಸ್ಥೆಯ ವಿರುದ್ಧ. ಸ್ವಾರ್ಥ ರಾಜಕಾರಣದ ವಿರುಧ್ಧ. ಓಬಿರಾಯನ ಕಾಲದ 0.303 rifleಗಳನ್ನು ಹಿಡಿದು ನಿಂತಿದ್ದ ಪೋಲೀಸರು a.k.47 ಹಿಡಿದು ಗುಂಡಿನ ಸುರಿಮಳೆಯನ್ನು ಹರಿಸಿದ ಉಗ್ರರನ್ನು ಹೇಗಾದರೂ ಎದುರಿಸಿ ಹಿಮ್ಮೆಟ್ಟುತ್ತಿದ್ದರು?. ಆಡಳಿತದ ನಿರ್ಲಕ್ಷ್ಯವಿಲ್ಲದಿದ್ದರೆ, ಇಂತಹ ಮಾರಣಹೋಮದ ಘಟನೆಗಳು ಈಗಾಗುವಷ್ಟು ಪ್ರಬಾವಶಾಲಿಗಳಾಗುತ್ತಿರಲಿಲ್ಲ. ಒಂದು ದೇಶವೆಂದರೆ ಅದಕ್ಕೆ ವೈರಿಗಳು ಯಾವತ್ತೂ ಇರುತ್ತಾರೆ. ಆದರೆ, ಆ ವೈರಿಗಳ ದಾಳಿಯನ್ನು ಹಿಮ್ಮೆಟ್ಟಲು, ಮೀರಿಸಲು, ಆ ದೇಶದ ವ್ಯವಸ್ಥೆ, ಆಡಳಿತ, ಆಂತರಿಕ ಭದ್ರತೆ ಶಕ್ತಿಶಾಲಿಯಾಗಿರಬೇಕು. ಹೇಗೆ ದೇಹವೊಂದು ಆಂತರಿಕವಾಗಿ ಶಕ್ತವಿಲ್ಲದಿದ್ದರೆ ಹೊರ ರೋಗಗಳ ದಾಳಿಗೆ ತುತ್ತಾಗುವ ಸಂಭಾವನೆ ಹೆಚ್ಚೋ, ಅಂತೆಯೇ ದೇಶ ಕೂಡ…ಈಗ ಹೇಳಿ, “ನನ್ನ ವಿರೋಧವಿದೆ” ಅಂತ ಯಾರ ವಿರುದ್ಧ ಕೂಗೋಣ? “
- “ನಿಮ್ಮ ಅನಿಸಿಕೆಗಳು ರಾಗ-ದ್ವೇಷಗಳ ಸೋಂಕಿಲ್ಲದ ಸದ್ಯದ ಸಂಕಟವನ್ನು ನಮ್ಮ ಮಿತಿಯಲ್ಲಿ ಎದುರಿಸುವ ಮತ್ತು ಸಾಧ್ಯವಾದಷ್ಟೂ ಮನುಷ್ಯ ಪ್ರೀತಿಯನ್ನು ಒಂದುಗೂಡಿಸುವ ಸೇತುವೆಯಾಗಿದೆ. ನಿಮ್ಮೆಲ್ಲ ಹಂಬಲವನ್ನು ಹಂಚಿಕೊಳ್ಳಲು ಅದಕ್ಕೆ ಸ್ಪಂದಿಸಲು ಸರತಿ ಸಾಲು ಸಿದ್ಧವಾಗುತ್ತಿದೆ. ಅಭಿನಂದನೆ.ನಿಮ್ಮ ಜೊತೆಗೆ ನಾವಿದ್ದೇವೆ. “
ಉಷಾ
- ನಾನು ನಿಮ್ಮಂತೆ ಬರೆಯುವವಳಲ್ಲ.. ಬರಿ ಓದುವವ್ಲು.. ITಕಂಪನೀಲಿ ಕೆಲಸ ಮಾಡ್ತಿದ್ದೇನೆ.. ನಿಮ್ಮ ಆಲೋಚನೆ ಇಷ್ಟವಾಯಿತು… ಅನುಭವಿ ಬ್ಲಾಗಿಗರ ಕಾಮೆಂಟ್ಸ್ ಕೂಡ… ನೀವು ಹೀಗೆ ಲೋಗೊ ಮತ್ತು ಸ್ಲೊಗನ್ ಗಳನ್ನು ಮಾಡಿದ್ದೆ ಆದರೆ ಪ್ರಿಂಟಬಲ್ ಫೊರ್ಮಾಟನ್ನು ನನಗೂ ಕಳಿಸಿ.. ನನ್ನ ಪರಿಚಯದವರಿಗೆಲ್ಲ ನಾನು ಕೂಡ ಹಂಚುತ್ತೇನೆ (ಆಫೀಸ್ ನವರಿಗೆ ಕೂಡ) . ಮೇಲೆ ತಿಳಿಸಿದಂತೆ ಅವರವರ ವಾಹನಗಳ ಮೇಲೆ ದೊಡ್ಡ ಸ್ಟಿಕರ್ ಅಂಟಿಸುವ ಹಾಗೆ ಹೇಳಿ ಕೊಡೋಣ ಎನ್ನುವುದು ನನ್ನ ಆಲೋಚನೆ.
- “ಇದರ ಮುಂದೆ, ನಮ್ಮ ಪೋಲಿಸ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಮುಂದುವರೆದ ಸಲಕರಣೆಗಳು ಮತ್ತು ವೆಪನ್ಸ್ ಗಳಿಂದ ಸಜ್ಜುಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕು.“
- “ನಿಮ್ಮ ಆಲೋಚನೆ ತುಂಬಾ ಇಷ್ಟಾಯಿತು. ನಿಜ ಇದು ಸಂಘಟನೆ ಮೂಲಕ ಆಗಬೇಕಾದ ಕಾರ್ಯ. ಇಲ್ಲಿ ಯಾರದ್ದು ಇಗೋ ಬರಬಾರದು. ಎಲ್ಲರೂ ನಿಮ್ಮ ಯೋಜನೆಗೆ ನಾಯಕರಾಗಿರಬೇಕು. ಈ ವರೆಗೆ ಸಾಕಷ್ಟು ಹೋರಾಟಗಳಾಗಿವೆ. ಸಾಕಷ್ಟು ಸಂಘಟನೆಗಳು ಹುಟ್ಟಿವೆ. ಅಂತಹ ಸಾಲಿಗೆ ಸೇರದ ವಿಭಿನ್ನ ಸಂಘನೆಗೆ ನೀವು ನನ್ನಿಂದ ಎಲ್ಲ ಬಗೆಯ ಕೆಲಸಗಳನ್ನು ನೀರಿಕ್ಷಿಸಬಹುದು. ನಿಮ್ಮ ಸಲಹೆಗಳು ಬೇಗ ಕಾರ್ಯರೂಪಕ್ಕೆ ಬರಲಿ. ಸಾಧ್ಯವಾದರೇ ಆಸಕ್ತರ ತಂಡ ಒಂದೆಡೆ ಸೇರಿ ಮುಂದಿನ ಯೋಜನೆಗಳ ಜವಾಬ್ದಾರಿ ಹಂಚಿಕೊಂಡರೆ ಒಳಿತು ಅಂತಾ ನನಗನ್ನಿಸುತ್ತದೆ.”
- “ಸಮಾಜಕ್ಕೆ ಒಂದು ಸಂದೇಶವನ್ನೀವ, ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸುವ ಲೋಗೋವನ್ನು ಹೊರತನ್ನಿ. ನನ್ನ ಬೆಂಬಲವೂ ಸಂಪೂರ್ಣವಿದೆ. “ಹನಿಕೂಡಿ ಹಳ್ಳ..ತೆನೆ ಕೂಡಿ ಕಣಜ” ಎಂಬ ಗಾದೆ ಮಾತಿದೆ. ಇಂದು ೪೦ ಜನ ಸೇರಿರಬಹುದು.. ನಾಳೆ ಹಲವಾರು ಜನ ಕೈಜೋಡಿಸದಿರರು. ಜೈಹಿಂದ್! “
- “ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಕ್ರೌರ್ಯವನ್ನು ದೂರದಿಂದಲೇ ನೋಡುತ್ತಾ, ಏನು ಮಾಡಲಾಗದೇ, ಸುಮ್ಮನೆಯೂ ಇರಲಾರದೇ ಇದ್ದಂತಹ ಸ್ಥಿತಿಯಲ್ಲಿದ್ದೆ. ಹೇಗಾದ್ರೂ ಇದನ್ನು ಕೊನೆಗಾಣಿಸಬೇಕು ಎಂಬ ಆಸೆ, ಆದರೆ ನನ್ನಿಂದ (ನನ್ನ ಕೌಟುಂಬಿಕಾ ಚೌಕಟ್ಟಿನೊಳಗಿದ್ದುಕೊಂಡು, ನನ್ನ ಕರ್ತವ್ಯಗಳನ್ನು ನಿಭಾಯಿಸಿಕೊಂಡು ) ಏನು ಮಾಡಲಾದೀತೆಂಬ ಯೋಚನೆ. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಭಯೋತ್ಪಾದನೆಯನ್ನು ವಿರೋಧಿಸುವತ್ತ ಇಟ್ಟ ಈ ಹೆಜ್ಜೆಗೆ ನಾನು ನನ್ನ ಸಹಕಾರವನ್ನು ಕೊಡಲು ಸದಾ ಸಿದ್ದ. ಹಿಂಸೆ, ಕ್ರೌರ್ಯಗಳಿಗೆ ಇತಿಶ್ರೀ ಹಾಡುವ ಇಂತಹ ಹೋರಾಟಾಗಳಿಗೆ ಯಾವತ್ತೂ ನನ್ನ ಬೆಂಬಲ ಇದೆ.”
- “ನಿಮ್ಮ ಯೋಚನೆಗಳು ಚೆನ್ನಾಗಿವೆ. ದೇಶೀಯವಾಗಿ ಮತ್ತೆ ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಮೌನ-ಸಂಘಟನೆ ಮಾಡಲು, ಅದಕ್ಕೊಂದು ರೂಪ, ಗುರುತು, ಧ್ಯೇಯ ಕೊಡುವುದು ಅಗತ್ಯ. ಅಂಥ ಲೋಗೋ ತಯಾರಾದಾಗ ನಾನೂ ಅದನ್ನು ಧರಿಸುತ್ತೇನೆ. ಅದರ ಸ್ಲೋಗನ್ ಮೂರೂ ಭಾಷೆಗಳಲ್ಲಿರಲಿ– ಕನ್ನಡ ಮೊದಲು, ಆಮೇಲೆ ಹಿಂದಿ; ಇಂಗ್ಲಿಷ್ ಕೂಡಾ ಇರಲಿ. ಜಾಗತಿಕವಾಗಬೇಕಾದರೆ ಇವು ಬೇಕಲ್ಲ!ನಿಮ್ಮ ಜೊತೆಗೆ ನಾನೂ ಸಾಗಿ ಬರುತ್ತೇನೆ.”
- “ಉತ್ತಮ ಸಲಹೆ. ಆದರೆ, ನಮ್ಮ ಸುತ್ತಲ ಬಹಳಷ್ಟು ವಿಚಾರಗಳು ನಮಗೆ ಸಂಬಂಧಿಸಿದವಲ್ಲ ಎಂಬ ಮನೋಭಾವ ನಮ್ಮಲ್ಲಿ ವರ್ಷಾನುಗಟ್ಟಲೆಯಿಂದ ಬೇರೂರಿದೆ. ಅದನ್ನು ನಮಗೆ ಬದಲಾಯಿಸಲು ಸಾಧ್ಯವಾದರೆ ಎಲ್ಲವೂ ಬದಲಾಗುತ್ತದೆ ಎಂಬ ನಂಬಿಕೆ ನನ್ನದು.
- ಇದಕ್ಕೋಸ್ಕರವೇ ನಾಗರಿಕ – http://naagarika.blogspot.com ಎಂಬ ಬ್ಲಾಗನ್ನು ಶುರುಮಾಡಿದ್ದೆವು ನಾವು, ಒಂದಷ್ಟು ಮಂದಿ ಸೇರಿಕೊಂಡು. ಬಹುಶ: ಅದರಲ್ಲಿ ಬರೆಯುವ ವಿಚಾರಗಳು ಮತ್ತು ಉದ್ದೇಶ relevant ಅಂತ ಅನಿಸಲಿಲ್ಲವೋ, ಅಥವಾ ಅದನ್ನು ಓದಲು ಮತ್ತು ಅನಿಸಿಕೆ ತಿಳಿಸಲು ವಿಚಾರವಂತರಿಗೆ ಸಮಯ ಸಿಗುವುದಿಲ್ಲವೋ, ಅಥವಾ ಹೀಗೊಂದು ಬ್ಲಾಗ್ ಇರುವುದು ಯಾರ ಗಮನಕ್ಕೂ ಬಂದಿಲ್ಲವೋ, ಕಾರಣವೇನೋ ಗೊತ್ತಿಲ್ಲ, ನನಗೆ ಕೂಡ 100 ಶೇಕಡಾ ಅದಕ್ಕೆ ಹಾಕಲು ಸಮಯವಿರಲಿಲ್ಲವಾದ ಕಾರಣ, ಯಾವಾಗ ಸಾಧ್ಯವೋ ಆವಾಗ ಮಾತ್ರ ಏನಾದರೂ ಬರೆಯುತ್ತಿದ್ದೆ. ಆದರೆ only I have been writing most of the times, it has been a miserable failure, with no reaction, no argument, nothing. The imagination in which I have started was not this.
- ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು ಎಂಬ ವಿಚಾರದ ಬಗ್ಗೆ ಆಧಾರ ಸಹಿತ ಬರೆದಿದ್ದೆ ನಾಗರಿಕದಲ್ಲಿ ನಾನು, ಆದರೆ ಇವತ್ತಿಗೂ ಮಾಧ್ಯಮಗಳಲ್ಲಿ ಬರುವ ವರದಿಗಳು ಹೊಗೇನಕಲ್ಲನ್ನು ಕರ್ನಟಕದಲ್ಲೇ ಇಟ್ಟುಕೊಂಡಿವೆ. ಹಾಗೆಂದು ಅವರಿಗೆ ಗೊತ್ತಿಲ್ಲದೆ ಖಂಡಿತಾ ಅಲ್ಲ, ಹೊಗೇನಕಲ್ಲನ್ನು ತಮಿಳುನಾಡಿಗೆ ಸೇರಿಸಿಬಿಟ್ಟರೆ ಕರ್ನಾಟಕದಲ್ಲಿ ಕಿಚ್ಚು ಹಚ್ಚಬಹುದಾದ ಅತಿ ದೊಡ್ಡ ಟಾಪಿಕ್ಕೇ ಸತ್ತುಹೋಗುತ್ತದೆಯಲ್ಲ, ಅದಕ್ಕೆ. ಯಾವುದೇ ವ್ಯವಸ್ಥೆಯಿರಲಿ, ಇಂತಹದ್ದು ಕಂಡರೆ ಪ್ರಶ್ನಿಸುವ ಮನೋಭಾವ ನಾವಿನ್ನೂ ಬೆಳೆಸಿಕೊಂಡಿಲ್ಲ, ಅದಕ್ಕೇ ನಮ್ಮ ವ್ಯವಸ್ಥೆಗಳು ಹೀಗಿವೆ. ಬಹುಶ: ತುಂಬಾ ಡೀಟೈಲ್ಡ್ ಆದ ಮಾಹಿತಿ ಪಡೆದುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಯಾರಿಗೂ ಬೇಕಿಲ್ಲ ಈಗ, ಸುಮ್ಮನೇ ಮೇಲಿಂದ ಮೇಲೆ ನೋಡಿ ಅವಸರದ ಮತ್ತು ಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಮಗೆಲ್ಲ ಅಭ್ಯಾಸವಾಗಿದೆ.
- ಹಾಗಾಗಿ ಒಂಥರಾ ಬೇಜಾರಾಗಿದೆ, ಸಂಘಟಿತವಾಗಿ ಏನಾದರೂ ಮಾಡುವ ಕಲ್ಪನೆ ತುಂಬಾ ಹಳೇದಾಗಿದೆಯೇನೋ ಅನಿಸಿದೆ ನನಗೆ. ಮುಂಬೈ ಘಟನೆಗೆ ಸ್ಪಂದಿಸಲೇಬೇಕಿದ್ದ ನಾಗರಿಕ ಇಲ್ಲಿವರೆಗೆ ಸುಮ್ಮನಿದೆ. ಯಾರೂ ಏನೋ ಒಂದು ಅರ್ಥಪೂರ್ಣವಾದ, ಪ್ರಾಯೋಗಿಕವಾಗಿ ಸಾಧ್ಯವಿರುವಂತಹುದನ್ನು ಮಾಡುವ ಯತ್ನ ಮಾಡಿಲ್ಲ, ನನ್ನನ್ನೂ ಸೇರಿಸಿ.
- ಅವರವರ ಬದುಕು ಅವರವರಿಗೆ, ಸಾಮಾಜಿಕ ಪ್ರಜ್ಞೆ, ನಾಗರಿಕ ಪ್ರಯತ್ನಗಳು, ವಿಚಾರಗಳು ಎಲ್ಲವೂ ಅರ್ಥಕಳೆದುಕೊಂಡಿವೆಯೇನೋ ಅಂತ ಕೆಲದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈಗ ನಿಮ್ಮ ಪ್ರಯತ್ನ ನಂಗೂ ಏನೋ hope ಹುಟ್ಟಿಸಿದೆ. ನನ್ನ ಸಹಕಾರ ನಿಮ್ಮ ಯತ್ನಕ್ಕೆ ಖಂಡಿತಾ ಇದೆ. ನಾಗರಿಕ ಬ್ಲಾಗ್ ನೋಡಿ, ನಿಮ್ಮ ಯೋಜನೆಗೆ ಅದರ ಮೂಲಕ ಏನಾದರೂ ಮಾಡಲು ಸಾಧ್ಯವೆನಿಸಿದರೆ ನಮಗೆ ತಿಳಿಸಿ, ಎಲ್ಲಾ ಸೇರಿ ಹೇಗೆ ಏನು ಅಂತ ಯೋಚನೆ ಮಾಡಿ ಮುಂದೆ ತಗೊಂಡು ಹೋಗೋಣ. ಅದಲ್ಲದೇ ನೀವೇ ಏನಾದರೂ ಮಾಡುವುದಿದ್ದರೂ ಸಹಕಾರ ಖಂಡಿತಾ ಇದೆ…”
ಈ ಅಭಿಪ್ರಾಯಗಳಿಗೆ ನೀವೇನು ಹೇಳುತ್ತೀರಾ?
ನಮ್ಮೆಲ್ಲರ ಜೊತೆ ನಿಮ್ಮ ಅಭಿಪ್ರಾಯವನ್ನು ಸೇರಿಸಬೇಕೆಂದು ಅನ್ನಿಸುತ್ತಿಲ್ಲವೇ ?
ನೀವು ಮಾತನಾಡಿ. ನಿಮ್ಮಲ್ಲಿನ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ.
ಮುಂದೆ ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ ? ಹೇಳಿ, ನಾವೆಲ್ಲ ಶಾಂತರಾಗಿ ಕೇಳುತ್ತೇವೆ.
ನಿಮ್ಮದೊಂದು ಉತ್ತರ