ಕಪ್ಪು ಹಣೆ ಪಟ್ಟಿ ಪ್ರದರ್ಶನ – ಮುಂದೇನು ?

ಸಮಯವಿದ್ದರೆ ನನ್ನ ಬೇಡಿಕೆ ಪರಿಶೀಲಿಸ್ತೀರಾ? ಎಂದು ಕದ ತಟ್ಟಿ ಕೇಳಿದ ತತ್ ಕ್ಷಣ ಸ್ಪಂದಿಸಿ ಒಂದು ದಿನ ಬ್ಲಾಗ ಬಂದ್ ಮಾಡಿ, ಇಟ್ಟ ಹೆಜ್ಜೆ ಸರಿ ಇದೆ ಎಂದು ಪರೋಕ್ಷವಾಗಿ ಧೈರ್ಯ ತುಂಬಿ ಮುಂದಿನ ಮನೆಯ ಕದ ತಟ್ಟಲು ಪ್ರೇರೇಪಿಸಿದ ಅವಧಿಗೆ
ಮತ್ತು
ಕೋರಿಕೆಯನ್ನು ಕಡೆಗಾಣಿಸದೆ ತಲೆ ಪಟ್ಟಿಯನ್ನು ಕಪ್ಪಾಗಿಸಿಕೊಂಡು ಬೆಂಬಲಿಸಿದ ಎಲ್ಲರಿಗೂ ತುಂಬಾನೆ ಥ್ಯಾಂಕ್ಸ್.
ಹಾಗೇನೆ ತಮ್ಮ ತಮ್ಮ ಬ್ಲಾಗಿನಲ್ಲಿ ವಿಷಯವನ್ನು ಬರೆದು ಅದಕ್ಕೆ ಲಿಂಕ್ ಕೊಟ್ಟು ಸಹಕರಿಸಿದ ಬ್ಲಾಗಿಗರಿಗೂ ತುಂಬಾನೆ ಥ್ಯಾಂಕ್ಸ್ .

ಈಗ ನನ್ನ ಮುಂದಿರುವ ಕೆಲ ವಿಷಯಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಯಸುತ್ತೇನೆ.
ನಾನು
ನಾಲ್ಕು ಗೋಡೆ ಮಧ್ಯ ಕೂತು ಕಿಟಕಿ ಮತ್ತು ನೆಟ್ ಮೂಲಕ ಹೊರ ಜಗತ್ತನ್ನು ನೋಡುತ್ತಿರುವ ಗೃಹಿಣಿ. ಮೊನ್ನೆ ಮುಂಬಯಿಯಲ್ಲಿ ಆದ ಘಟನೆ ನಂಗೆ ಭಯೋತ್ಪಾದನೆಯ ಇನ್ನೊಂದು ಮಗ್ಗುಲನ್ನು ಪರಿಚಯಿಸಿತು. ಇನ್ನೂ ಹೀಗೆ ಕೈ ಕಟ್ಟಿಕೊಂಡು ಕುಳಿತರೆ ಮುಂದೊಂದು ದಿನ ನಾವೆಲ್ಲ ಇದಕ್ಕೆ ಬಲಿಯಾಗುತ್ತೇವೆ ಎಂದೆನಿಸಿತು. ಏನಾದರೂ ಮಾಡಲೇಬೇಕು ಎಂದು ಮನಸ್ಸು ತುಡಿಯುತ್ತಿತ್ತು. ಹಾಗಂತ ಹೊರಹೋಗಿ ಭಯೋತ್ಪಾದಕರನ್ನು ಮತ್ತು ಅವರಿಗೆ ಸಹಕಾರವನ್ನು ನೀಡುತ್ತಿರುವವರ ವಿರುದ್ಧ ಬಹಿರಂಗವಾಗಿ ಕಾದಾಡಲು ನನ್ನ ಕೈಯಲ್ಲಿ ಸಾಧ್ಯವಿಲ್ಲ. ನನ್ನ ಸುತ್ತ ಸಂಸಾರದ ಹೊದಿಕೆಗಳಿವೆ. ಇಲ್ಲಿನ ಕರ್ತವ್ಯಗಳನ್ನು ನಿಭಾಯಿಸುತ್ತಾ ಹೊರಜಗತ್ತಿನ ಅದೂ ನನ್ನದೇ ದೇಶದ ಸಮಸ್ಯೆಗೆ ಸ್ಪಂದಿಸಬೇಕು. ಆಗ ಹೊಳೆದದ್ದು I PROTEST ಅನ್ನೋ ಐಡಿಯಾ. ಅಂದರೆ ಒಂದು ಚಿಹ್ನೆಯ ಮುಖಾಂತರ ಭಯೋತ್ಪಾದನೆಯನ್ನು ವಿರೋಧಿಸುವುದು. ಮುಖವಿಲ್ಲದ ವೈರಿಯನ್ನು ಮುಖವಿಲ್ಲದ ಅಸ್ತ್ರದಿಂದ ಸೆಣೆಸುವುದು. ಇದಕ್ಕೆ ಸಂಬಂಧಿಸಿದ ಒಂದು ವೆಬ್ ಸೈಟ್ ನ್ನು ಮಾಡಿ ಪ್ರಚಾರಮಾಡುವುದುಜನರನ್ನು ಸೇರಿಸಿ ಒಂದು ಸಂಘಟನೆಯನ್ನು ಮಾಡುವುದು. ನಮ್ಮ ಉಸ್ತುವಾರಿಯನ್ನು, ರಕ್ಷಣೆಯನ್ನು ನಾವೇ ನೋಡಿಕೊಳ್ಳೋದು…………….. ಹೀಗೆ ಇದರ ರೂಪು ರೇಷೆಗಳನ್ನು ಹೆಣೆಯುತ್ತಾ ನನ್ನಷ್ಟಕ್ಕೆ ಕೂತಿದ್ದೆ. ಹೊತ್ತಲ್ಲಿ ವೈಶಾಲಿಯವರು ಮಾತನಾಡಿಸಿದರುನಾವು ಏನಾದರೂ ಮಾಡೋಣ ಅಂತ ಹೇಳುತ್ತಿದ್ದರು. ಹಾಗೇನೇ ಮಾತನಾಡುತ್ತಾ ಕಪ್ಪು ತಲೆ ಪಟ್ಟಿ ವಿಷಯ ತಲೆಗೆ ಹೊಳೆಯಿತು. ಎಲ್ಲ ತಪ್ಪನ್ನು ಎತ್ತಿ ತೋರಿಸುತ್ತಾ ಬರೆಯುವ ಲೇಖನಕ್ಕಿಂತಲೂ ಏನಾದರೂ ಕೃತಿಯಲ್ಲಿ ಮಾಡೋಣ ಅನ್ನಿಸಿತು. ಹೌದು, ನಾನು ಇನ್ನೊಂದು ಬ್ಲಾಗ್ ತೆಗೆದು ಅದನ್ನು ಪೋಪ್ಯುಲರ್ ಮಾಡುತ್ತಾ ಹೆಣಗುವುದರ ಬದಲು ನನ್ನ ಬ್ಲಾಗಿನ ಓದುಗರ ಸಹಕಾರದಿಂದಲೇ ಹೀಗೊಂದು ಆಂದೋಲನ ಏಕೆ ಪ್ರಾರಂಭಿಸಬಾರದೆಂದು ಅನ್ನಿಸಿತು. ನಾನಾಗಲೇ ಹೋದ ಗುರುವಾರದಿಂದ ಧಾಳಿಗೆ ಪ್ರತಿರೋಧವಾಗಿ ಹಣೆಪಟ್ಟಿಯನ್ನು ಕಪ್ಪಾಗಿ ಮಾಡಿ ಗುಮ್ಮನೆ ಕೂತಿದ್ದೆ. ಅದನ್ನೇ ಉಪಯೋಗಿಸಿಕೊಂಡು ಜಾಸ್ತಿ ಜನರ ಕಣ್ಣು ಕೆಂಪಾಗಿಸುವ ಒಂದು ಲೇಖನ ಬರೆದು ಇನ್ನೊಂದರಲ್ಲಿ ಹೀಗೆ ಮಾಡೋಣವೇ ಎಂದು ಕೇಳಿದ್ದು.

ಬದುಕ್ಕಿದ್ದೀನಿಲಿ ನಾನು ಏನು ಹೇಳ್ತಾ ಇದ್ದೀನಿ ಎಂದು ಗಮನಿಸದೇ ನಾನು ಕೊಟ್ಟ ಸ್ವಂತ ಉದಾಹರಣೆಯನ್ನು ಮನಸ್ಸಿಗೆ ತಾಗಿಸಿಕೊಂಡವರೇ ಜಾಸ್ತಿ. ವಾಕ್ಯವನ್ನು ಪ್ರತ್ಯೇಕಿಸಿ ನೋಡುವ ಬದಲು ಇಡೀ ಪ್ಯಾರಾದ, ಲೇಖನದ ಅರ್ಥವನ್ನು ಹೆಚ್ಚಿನ ಜನ ಮಾಡಿಕೊಳ್ಳಲಿಲ್ಲ. ಅಪಾರ್ಥಕ್ಕೆ ಕಾರಣವಾಯಿತು. ನನ್ನ ಓದುಗರೇ, ನಿಮ್ಮ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆಯಿರಲಿ.

ಈಗ ನೀವೆಲ್ಲರೂಹೀಗ್ಯಾಕೆ ಮಾಡಬಾರದುಎಂಬ ಮಾತನ್ನು ಕೇಳಿ ಕಪ್ಪು ಹಣೆ ಪಟ್ಟಿ ಅಂಟಿಸಿಕೊಂಡು ಚಿಕ್ಕ ಸಂಘಟನೆಯನ್ನು ಹುಟ್ಟುಹಾಕಿದ್ದೀರಿ. ನಾನಿದ್ದೀನಿ, ನಾನಿದ್ದೀನಿ ಎನ್ನುತ್ತಾನಾನುಹೋಗಿನಾವುಆಗಿದ್ದೇವೆ. ಸುಮಾರು ೪೦ಕ್ಕೂ ಹೆಚ್ಚು ಜನ ಒಟ್ಟಾಗಿದ್ದೇವೆ. ನಿಜಕ್ಕೂ ಸಂತಸದ ವಿಷಯ.

ಒಗ್ಗಟ್ಟನ್ನೂ ಇಲ್ಲಿಗೆ ಕೈ ಬಿಡುವುದೇ ? ಅಥವಾ ಇನ್ನೂ ಒಂದಿಷ್ಟು ಜನರನ್ನು ಸೇರಿಸಿ ಪ್ರಬಲ ಸಂಘಟನೆಯನ್ನು ಮಾಡುವುದೇ? ಇದು ನಮ್ಮೆಲ್ಲರ ನಡುವಿನ ಚಿಕ್ಕ ಪ್ರಶ್ನೆ. ಹಾಗೇನೆ ಏಷ್ಟು ದಿನ ಅಂತ ಕಪ್ಪು ಹಣೆ ಪಟ್ಟಿ ಹಾಕಿ ಕೊಳ್ಳೊದು ? ಒಂದು ತಿಂಗಳೇ? ಒಂದು ವರ್ಷವೇ ? ………. ಕ್ರಮೇಣ ಕಪ್ಪು ಹಣೆ ಪಟ್ಟಿ ಬ್ಲಾಗಿನ ಡಿಸೈನ್ ನಲ್ಲಿ ಒಂದಾಗಲು ಬಿಡುವುದೇ? ಅಥವಾ ಚಿಹ್ನೆಯ ಮುಖಾಂತರ ನಮ್ಮ ಆಂದೋಲನವನ್ನು ಮುಂದುವರಿಸುವುದೆ?

ನಾನು ಈಗಾಗಲೇ ನನ್ನ ಕಲೀಗ್ ಹತ್ರ (ಗ್ರಾಫಿಕ್ ಆರ್ಟಿಸ್ಟ್) ಲೋಗೊ ಮಾಡಿಕೊಡಕೆ ಹೇಳಿದ್ದೇನೆ. ಅವರು ಎರಡು ಮೂರು ದಿನ ಬೇಕು ಅಂದಿದ್ದಾರೆ. ಹಾಗೇನೆ ನಮ್ಮಲ್ಲೇ ಯಾರಾದರೂ ಲೋಗೊ ಮಾಡಿಕೊಡುವುದಿದ್ದರೆ ಮುಂದೆ ಬನ್ನಿ. ಹಾಗೇನೆ ಸ್ಲೋಗನ್ ಕೂಡ. ಆದರೆ ಇದರ ಮೇಲೆ ನಿಮಗೆ ಹಕ್ಕಿರುವುದಿಲ್ಲ. ನೆನಪಿರಲಿ, ಇದು ಪಬ್ಲಿಕ್ ಪ್ರಾಪರ್ಟಿಯಾಗುತ್ತದೆ. ಹಾಗೇನೆ ಲೋಗೊ ಪ್ರಿಂಟೆಬಲ್ ಕೂಡ ಆಗಿರಬೇಕು. ಹೀಗೊಂದು ಲೋಗೊ ಅಂತ ಆದ ನಂತರ ನಾವೆಲ್ಲರೂ ಅದನ್ನು ನಮ್ಮ ಬ್ಲಾಗಿನಲ್ಲೂ ಧರಿಸಬಹುದುನಮಗೆ ಬೇಕಾದ ಹಾಗೆ ಚಿಹ್ನೆಯನ್ನು, ಸ್ಲೋಗನ್ ಗಳನ್ನು ಟಿ ಶರ್ಟ್ ಮೇಲೆ ಪ್ರಿನ್ಟ್ ಹಾಕಿಸಿಕೊಳ್ಳಬಹುದು. ಬೈಕ್ಕಾರ್ ಮೇಲೆ ಅಂಟಿಸಬಹುದು. ಕೀ ಬಂಚ್, ಪೆಂಡೆಂಟ್ ಮಾಡಿಕೊಳ್ಳಬಹುದು……… ಹೇಯ್, ಮುಖವಿಲ್ಲದ ಭಯೋತ್ಪಾದನೆಯೇ! ನಾನು ನಿನ್ನ ವಿರೋಧಿ ಎಂದು ಎದೆ ತಟ್ಟಿ ಹೇಳಬಹುದು. ಇದು ಯಾವ ಧರ್ಮವನ್ನು ವಿರೋಧಿಸುವುದಿಲ್ಲದ್ದರಿಂದ ಎಲ್ಲರೂ ನೆಮ್ಮದಿಯಿಂದ ಬಳಸಬಹುದು. ಚಿಹ್ನೆಯನ್ನು ನೋಡಿದ ತಕ್ಷಣ ನಮ್ಮ ಮೂಲಭೂತ ಕರ್ತವ್ಯಗಳನ್ನು ನೆನಪಿಸಬೇಕು. ರಾಷ್ಟ್ರ ವಿರೋಧಿ ಕೆಲಸದಲ್ಲಿ ಭಾಗಿಯಾಗದಂತೆ ತಡೆಯಬೇಕು. ಅಕ್ಕ ಪಕ್ಕ ಏನಾಗುತ್ತಿದೆ ಎಂದು ತಿಳಿಯದೇ ಗಡದ್ದಾಗಿ ನಿದ್ದೆ ಹೋಗದಂತೆ ಎಚ್ಚರಗೊಳಿಸಬೇಕುಸಮಾಜ ಘಾತುಕರನ್ನು ವಿರೋಧಿಸುವಂತೆ ಪ್ರಚೋದಿಸಬೇಕು. ಕನ್ನಡ ಬ್ಲಾಗಿಗರಿಂದ ಶುರುವಾದ ರಣ ಕಹಳೆ ಸಹ ಭಾಷೆಯ ಬ್ಲಾಗಿಗರನ್ನು ಮುಟ್ಟಬೇಕು. ಹಾಗೇನೆ ಇಡೀ ಬ್ಲಾಗ್/ಬ್ಲಾಗೇತರ ಪ್ರಪಂಚಕ್ಕೆ ಪಸರಿಸಬೇಕು.

ಆದರೆ ಹೀಗಾಗಲಿಕ್ಕೆ ನಮ್ಮಲ್ಲಿನ ಪ್ರತಿಯೊಬ್ಬನ ಸಹಕಾರವು ಅಗತ್ಯ. ಎಲ್ಲರಿಗೂ ನಾವು ಮಾಡುತ್ತಿರುವ ಕಾರ್ಯದ ಮೇಲಿನ ನಂಬಿಕೆಯೂ ಅಷ್ಟೇ ಅಗತ್ಯಮತ್ತೊಂದು ನಾವೆಲ್ಲರೂ ನೆನಪಿಡಬೇಕಾದ ಬಹು ಮುಖ್ಯ ಅಂಶ ಅಂದರೆ ಚಿಹ್ನೆಯ ಹಿಂದೆ ಯಾರೇ ಒಬ್ಬನ ಹೆಸರಿರುವುದಿಲ್ಲ. ಪ್ರತಿಯೊಬ್ಬನೂ ತನ್ನ ಹೆಸರನ್ನು ಇದರಲ್ಲಿ ಕೆತ್ತುತ್ತಾನೆ. ಜನರಿಂದ, ಜನರಿಗಾಗಿ, ಜನರಿಂದಲೇ ಆಗುತ್ತಿರುವ ಹೋರಾಟ.

ಈಗ ಹೇಳಿ, ಭಯೋತ್ಪಾದನೆಯನ್ನು ಮೂಲಕ ವಿರೋಧಿಸುವ ಕೆಚ್ಚು ಮ್ಮಲ್ಲಿ ಇನ್ನೂ ಉಳಿದಿದೆಯೇ ? ನಮ್ಮ ಕೊಂಡಿಗಳು ಕಾಲ ಕ್ರಮೇಣ ಕಳಚಿ ಹೋಗದಂತೆ ತಡೆಯಬಲ್ಲಿವೇ ? ಒಗ್ಗಟ್ಟು ಯಾರದ್ದೋಇಗೋದಿಂದ ಮರೀಚಿಕೆ ಆಗದಂತೆ ಕಾಪಾಡಬಲ್ಲೆವೇ ? ಕೇವಲ ಒಂದೆರಡು ದಿನ ಮಾತ್ರ ಕಪ್ಪು ಪಟ್ಟಿ ಪ್ರದರ್ಶಿಸಿದ್ದ ನಮ್ಮೊಳಗಿನ ಜನರನ್ನು ಮತ್ತೆ ವಾಪಸ್ಸು ಕರೆತರಬಲ್ಲಿವೇ ? ನಮ್ಮ ಮುಂದೆ ಸವಾಲು ಹಲವುಗಳಿವೆ. ಮೊದಲ ಹಂತದ ಪರೀಕ್ಷೆ ಸುಲಭವಿತ್ತು. ಎಲ್ಲ ಒಟ್ಟಿಗೆ ಪಾಸಾಗಿದ್ದೇವು. ಇನ್ನೂ ಮುಂದೆ ನೋಡಬೇಕು.

ಅರೆನಾನು ಆವಾಗಿನಿಂದ ಮಾತನಾಡುತ್ತಿದ್ದೇನೆ. ಇನ್ನಿಗ ನೀವು ಮಾತನಾಡಿ. ನಿಮ್ಮಲ್ಲಿನ ವಿಚಾರಗಳನ್ನು ಎಲ್ಲರ ಮುಂದೆ ಹಂಚಿಕೊಳ್ಳಿ. ಹಿಂಜರಿಕೆ ಸಲ್ಲದು. ಮನೆ ಮನ್ದಿಯೆದುರೇಕೆ ಮಜುಗುರ ? ಮುಂದೆ ಏನು ಮಾಡಬೇಕು ಎಂದು ನಿಮಗನ್ನಿಸುತ್ತದೆ ? ಹೇಳಿ, ನಾವೆಲ್ಲ ಶಾಂತರಾಗಿ ಕೇಳುತ್ತೇವೆ.

13 Responses to “ಕಪ್ಪು ಹಣೆ ಪಟ್ಟಿ ಪ್ರದರ್ಶನ – ಮುಂದೇನು ?”

 1. ಶೆಟ್ಟರು (Shettaru) Says:

  ನೀಲಾಂಜಲ,

  ನಾವು ಭಾರತಿಯರಲ್ಲಿ ಅರ್ಜೆಂಟಿಗೆ ತುಸು ಜಾಸ್ತಿನೆ ಬೇಕಾಗಿರುವುದು “ಎಕತೆ” ಮತ್ತು “ಜವಾಬ್ದಾರಿ”.

  “ಎಕತೆ” ಎಷ್ಟೊಂದು ಮುಖ್ಯ ಎಂಬುದನ್ನು ನಮ್ಮನ್ನು ೨೦೦ಕ್ಕೂ ಹೆಚ್ಚು ವರ್ಷಗಳ ಕಾಲ ಬ್ರೀಟಿಷರು ಆಳಿದರೂ ನಮಗಾರಿಗೂ ಅರಿವಾಗೆಯಿಲ್ಲ. ನಮ್ಮಲ್ಲಿ “ಎಕತೆ” ಹಿಂದೂ ಇರಲಿಲ್ಲ, ಇವತ್ತು ಇಲ್ಲ ಆದರೆ ನಾಳೆ ಅದನ್ನು ಇರಗೊಡಿಸುವುದು ನಮ್ಮೆಲ್ಲರ ಕೈಯಲ್ಲಿದೆ, ಇವತ್ತು ನಮ್ಮನ್ನಾಳುವವರು, ಆಳಿದವರು, ಮುಂದೆ ಆಳುವವರು ನಮ್ಮನ್ನು ಜಾತಿ, ಧರ್ಮ, ಜನಾಂಗ, ಭಾಷೆ, ಪ್ರದೇಶಗಳ ಮೇಲೆ ಒಡೆಯುತ್ತಾ, ನಮ್ಮ ಜಗಳ-ಗಲಭೆಗಳ ಬೆಂಕಿಯಲ್ಲಿ ಮೈಕಾಸಿಕೊಂಡು ನಮ್ಮನ್ನು ತುಳಿದುಕೊಂಡೆ ಈ ರಾಷ್ಟ್ರದ ಸಿಂಹಾಸನವೆರಿದ್ದಾರೆ, ಅವರಿಂದ ನಾವು ಅಗತ್ಯಕ್ಕಿಂತ ಹೆಚ್ಚಿಗೆ ಬಯಸುತ್ತಿದ್ದೆವೆನೋ? ಅವರಿಗಿಂತ ನಮ್ಮ ಎಕತೆ ಮತ್ತು ಅಖಂಡತೆ ಈ ಸಮಸ್ಯೆಗೆ ಬಹು ದೊಡ್ಡ ಪರಿಹಾರವಾದಿತು (?).

  “ಜವಾಬ್ದಾರಿ” ಇವತ್ತು ನಾವು ನಮ್ಮ ನಾಯಕರನ್ನು ಮತ್ತು ಆಡಳಿತಶಾಹಿಗಳನ್ನು ಕೇಳುತ್ತಿರುವ ಪ್ರಶ್ನೆಗಳನ್ನು ನಮ್ಮನ್ನು ನಾವೇ ಕೇಳಿಕೊಳ್ಳುವ, ಪ್ರತಿ ಸಲ ಇಂತಹ ಕೃತ್ಯ ನೆಡೆದ ೨-೩ ದಿನಗಳ ಕಾಲ ಅದನ್ನು ಇದೇ ರೀತಿ ಚರ್ಚಿಸಿ, ಸರ್ಕಾರವನ್ನು ಮತ್ತು ನಮ್ಮನ್ನು ಆಳುವವರನ್ನು ಬೈದಾಡಿ ಸುಮ್ಮನಾಗಿಬಿಡುತ್ತೆವೆ, ನಾವು ಸುಮ್ಮನಾದ ಮರುದಿನವೇ ನಮ್ಮ ನಾಯಕರುಗಳೂ ಕೂಡ (ಯಾಕೆಂದರೆ ಅವರು ನಮ್ಮಂಥವರೆ, ನಮ್ಮ ನಡುವಿನಿಂದ, ನಾವೇ ಆರಿಸಿ ಕಳುಹಿಸಿದವರು). ಯಾಕೇ ನಾವು ಈ ಸಾಮೂಹಿಕ ಜವಬ್ದಾರಿಯಿಂದ ಹಿಂಜರಿದು ಎಲ್ಲವನ್ನು ನಮ್ಮ ನಾಯಕರ ಕೊರಳಿಗೆ ಸುತ್ತುತ್ತೆವೆ, ಇವತ್ತು ನಾವು ಟ್ರಾಫ್ಹಿಕ್ಕಿನಲ್ಲಿ ಸಿಕ್ಕಿ ಬಿದ್ದಾಗಲೂ ನಮ್ಮ ಬೈಗುಳಗಳೆಲ್ಲ ನಮ್ಮ ನಾಯಕರಿಗೆನೆ, ನಾವೇ ಅಥವಾ ನಮ್ಮ ಮುಂದೆಯೇ ನಮ್ಮ ನಡುವಿನ ‘ಜನಸಾಮಾನ್ಯ’ ಟ್ರಾಫಿಕ ಸಿಗ್ನಲ ಮುರಿದಿದ್ದು, ಬೈಕ ಸವಾರ ಫುಟಪಾಥ ಮೇಲೆ ಸವಾರಿ ಮಾಡಿಕೊಂಡು ಹೋಗಿದ್ದು ಕಂಡು ನಮಗೇನೂ ಅನ್ನಿಸುವುದೆಯಿಲ್ಲ, ಅವರನ್ನು ಹಿಡಿದು ಹೀಗ್ಯಾಕೆ ಎಂದು ಕೇಳುವ ಸ್ಥೈರ್ಯ ಮತ್ತು ನೈತಿಕತೆ ನಮ್ಮಲ್ಲಿ ಉಳಿದಿಲ್ಲ, ಹಾಗೆಯೇ ಈಗ ಬೈದಿರುವ, ಬೈಯುತ್ತಿರುವ ಎಲ್ಲ ಬ್ಲಾಗರಗಳನ್ನು, ಮಾಧ್ಯಮದವರನ್ನು ಅದೇ ನಾಯಕರ ಬಳಿ ನಿಲ್ಲಿಸಿದರೇ ತೋದಲಿಯಾರು, ಯಾಕೆಂದರೇ ನಮ್ಮಲ್ಲಿ ಆ ನೈತಿಕತೆ ಉಳಿದಿಲ್ಲ, ನಾಕೆಂದರೆ ಮೂಲಭೂತವಾಗಿ ಹಲವಾರು “ಜವಾಬ್ದಾರಿಗಳಿಂದ” ಹಿಂಜರಿದವರು, ಮತ್ತು ದೂರ ಸರಿದವರು ನಾವು, ಮತ್ತೊಬ್ಬರ ಜವಾಬ್ದಾರಿ ಕೇಳಲು ನಾವು ಜವಾಬ್ದಾರರಾಗಿರಬೇಕು. ನಮ್ಮಲ್ಲಿ ಎಷ್ಟು ಜನ ಜವಾಬ್ದಾರಿಯುತವಾಗಿ ವೋಟ ಮಾಡುತ್ತೆವೆ? ನಮ್ಮಲ್ಲಿ ಎಷ್ಟು ಜನ ನಮ್ಮ ಸುತ್ತಮುತ್ತಲ ಪ್ರದೇಶ, ಆಫೀಸು, ಬಸ್ಸು ಮತ್ತು ರೈಲು ನಿಲ್ದಾನಗಳಲ್ಲಿ ಜವಾಬ್ದಾರಿಯುತ ನಾಗರೀಕರಂತೆ ಸುತ್ತಲಿನ ಪರಿಸರವನ್ನು ಗಮನಿಸುತ್ತೆವೆ ಮತ್ತು ಅಪಾಯಕಾರಿ ವಸ್ತುಗಳಂತೆ ಗೋಚರಿಸುವ ವಸ್ತುಗಳ ಬಗ್ಗೆ ಪೋಲಿಸರಿಗೆ ತಿಳಿಸಿ, ಪೋಲಿಸರು ಬರುವವರೆಗೂ ಜನರು ಅದರ ಬಳಿಗೆ ಸುಳಿಯದಂತೆ ಕಾಯುತ್ತೆವೆ, ನಮ್ಮ ಎಷ್ಟು ಜನ ಯಾರೋ ಒಬ್ಬರನ್ನು ನೋಡಿ ಸಂದೇಹ ಬಂದಾಗ ಕೇಳಿದ್ದಿದೆ, “ನೋಡಿ ಇದು ನನ್ನ ಐ.ಡಿ. ಕಾರ್ಡ, ನಾನು ಇಂತಹ ಕಂಪನಿಯಲ್ಲಿ ಹೀಗಿಗೆ ಕೆಲಸ ಮಾದುತ್ತಿರುವೆ, ದಯವಿಟ್ಟು ನಿಮ್ಮ ಐ.ಡಿ. ಪ್ರೂಫ ತೋರಿಸುತ್ತಿರಾ” ಎಂದು ಕೇಳಿದ್ದಿರಾ? ಕೆಲವು ಸಲ ಎದುರಿನವರಿಗೆ ಬೇಜಾರಾಗಬಹುದು, ಆದರೆ ಅವನ ಉದ್ದೇಶ ಕೆಟ್ಟದ್ದೆ ಆಗಿದ್ದರೆ ಅದನ್ನು ಕಾರ್ಯರೂಪಕ್ಕಿಳಿಸಲು ಹಿಂಜರಿಯುತ್ತಾನಲ್ಲವೇ? ಎಕೆಂದರೆ ನಮ್ಮ ಜೀವದ ರಕ್ಷಣೆಯ ಭಾರ ಪೂರ್ತಿಯಾಗಿ ಸರ್ಕಾರದ್ದಲ್ಲ, ಜೀವವನ್ನು ಬಳಿಯಿರಿಸಿಕೊಂಡು ಓಡಾಡುವ ನಮ್ಮ ಜವಾಬ್ದಾರಿ ಕೂಡ.

  ಮೊನ್ನೆ ಮುಂಬಯಿಯಲ್ಲಿ ನೆಡೆದ ಶಾಂತಿ ಯಾತ್ರೆಯ ಕೆಲವು ಭಿತ್ತಿಗಳು ನನಗಿಲ್ಲಿ ನೆನಪಾಗುತ್ತಿವೆ:

  “We want to feel Safe again”

  “We dont need Resignations, we need Responsibility and Result”

  ಎಲ್ಲರೂ ಕೂಡಿಯೇ ಹೋರಾಡೋಣ. ಇದು ಕೇವಲ ನನ್ನ-ನಿನ್ನ ಹೋರಾಟವಲ್ಲ, ಇದು ನಮ್ಮ ಹೋರಾಟ. ನಮ್ಮ ಮನೆಯ ಹೋರಾಟ, ಉಗ್ರವಾದದ ಎದುರು ಕೋನೆಯ ಹೋರಾಟ.

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

  Like

 2. Lakshmi Shashidhar Says:

  ನೀಲಾಂಜಲ,

  ಕಪ್ಪು ಪಟ್ಟಿಯನ್ನು ನಾವು ಎಷ್ಟು ದಿನ ಹಾಕಿಕೊಳ್ಳಬೇಕೆನ್ನುವುದು ಪ್ರಶ್ನೆ ಅಲ್ಲ, ರಾಷ್ಟ್ರಕ್ಕಾಗಿರುವ ಆಘಾತವನ್ನು ಮರೆಯುವುದು ಸಾಧ್ಯವಾ ಅನ್ನೋದು ಪ್ರಶ್ನೆ. ಅದು ನಮ್ಮ ಬ್ಲಾಗಿನಲ್ಲಿ ಇದ್ದಷ್ಟು ಕಾಲ ನಮಗೆ ನಮ್ಮ ಹೊಣೆ, ಜವಾಬ್ದಾರಿಗಳ ನೆನಪಾಗುತ್ತಿರುತ್ತದೆ.ಆದ್ದರಿಂದ ಕಪ್ಪು ಪಟ್ಟಿ/ಕಪ್ಪು ಚಿಹ್ನೆ ತೆಗೆಯುವ ಅಗತ್ಯ ಇಲ್ಲ ಅಂತ ನನ್ನ ಅನಿಸಿಕೆ. ಸದ್ಯ ಈಗ ನಲವತ್ತು ಜನ ಕಪ್ಪು ಪಟ್ಟಿ ಪ್ರದರ್ಶಿಸಿರುವುದು ಸಂತೋಷ. ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸುತ್ತೇನೆ.

  ಮುಂದಿನ ನಿರ್ಧಾರ ಏನೇ ಇರಲಿ, ಅದಕ್ಕೆ ನನ್ನ ಸಹಮತವಿದೆ.

  Like

 3. ವಿಜಯರಾಜ್ ಕನ್ನಂತ Says:

  ಕಪ್ಪು ಪಟ್ಟಿ ಹಾಕುವುದು ಕೇವಲ ಸಾಂಕೇತಿಕವೇ ಇರಬಹುದು… ಆದರೆ ಈಗ ನಲವತ್ತು ಜನ ನಿಮ್ಮ ಆಲೋಚನೆಗೆ ಬೆಂಬಲ ಕೊಡುವವರು ಸಿಕ್ಕಿದ್ದಾರಲ್ವೇ. ನಿಮ್ಮ ಮುಂದಿನ ಯೊಚನೆಗಳು ಕೂಡಾ ತುಂಬಾ ಚೆನ್ನಾಗಿವೆ. ನನ್ನ ಒಂದು ಸಲಹೆ ಅಂದ್ರೆ ಈ ಕಾರ್ಯ ಮಾಡೋಕೆ ಇನ್ನಷ್ಟು ಜನ ಬೇಂಬಲ ಬೇಕೇ ಬೇಕು… ಈ ಮೂಲಕ ಮಾಧ್ಯಮಗಳಲ್ಲಿರುವ (ಟಿ.ವಿ. ಯಾ ಪತ್ರಿಕೆ) ನಮ್ಮ ಸಹ-ಬ್ಲಾಗಿಗರು ಇದಕ್ಕೆ ಸ್ಪಂದಿಸಿ ಈ ಆಂದೋಲನಕ್ಕೆ ಇನ್ನಷ್ಟು ಜನರನ್ನು ಒಟ್ಟುಗೂಡಿಸಲು ತಮ್ಮ ಮಾಧ್ಯಮದ ಮುಖಾಂತರ ಏನಾದರೂ ಮಾಡಲು ಸಾಧ್ಯವೇ….? ಜೊತೆಗೆ ನಿಮಗೆ ಗೊತ್ತಿರುವ ಅನ್ಯ ಭಾಷೆಯ ಬ್ಲಾಗಿಗರು ಯಾರದರು ಇದ್ದರೆ ಅವರನ್ನೂ ಸೇರಿಸಿಕೊಂಡರೆ ಉದ್ಧೇಶಕ್ಕೆ ಇನ್ನಷ್ಟು ಬಲ ಬಂದೀತೆಂದು ಆಶಿಸುವೆ.
  ನಿಮ್ಮ ಪ್ರಯತ್ನಕ್ಕೆ ನನ್ನ ಪೂರ್ಣ ಸಹಕಾರ, ಬೆಂಬಲ ಇದೆ…
  ಇದೆಲ್ಲಾ ಮಾಡುವುದರಿಂದ ಏನಾಗುತ್ತೆ ಅಂತ ಅನುಮಾನ ಪಡುವವರಿಗೆ ಒಂದು ಮಾತು… ಏನು ಆಗುತ್ತೊ ಇಲ್ಲವೋ ಅದು ಆಮೇಲಿನ ಮಾತು… ಆದರೆ ನಮ್ಮಿಂದಾಗುವುದನ್ನು ಮಾಡಿದ್ರೆ… ಆ ಮೂಲಕ ಒಂದು ಸಣ್ಣ ಜಾಗೃತಿ ಉಂಟು ಮಾಡಿದ್ರೆ ಅದು ಇನ್ನಷ್ಟು ಒಳ್ಳೆಯ ಬೆಳವಣಿಗೆಗೆ ದಾರಿ ಮಾಡಿಕೊಡಬಹುದು ಅಂತ ನಾನಂತೂ ನಂಬಿದ್ದೀನಿ

  Like

 4. Sandeep Kamath Says:

  Pakistanavannu prapanchada bhoopatadinda tegeyodonde daari!

  nimmantha sadhu svabhaavadavarige idu sahya alla anta nange gottu ,but still thats the only way!!!.

  nanna sahakara yaavagoo irutte.
  Jai Hind.

  Like

 5. ಶ್ರೀ Says:

  ಉತ್ತಮ ಸಲಹೆ. ಆದರೆ, ನಮ್ಮ ಸುತ್ತಲ ಬಹಳಷ್ಟು ವಿಚಾರಗಳು ನಮಗೆ ಸಂಬಂಧಿಸಿದವಲ್ಲ ಎಂಬ ಮನೋಭಾವ ನಮ್ಮಲ್ಲಿ ವರ್ಷಾನುಗಟ್ಟಲೆಯಿಂದ ಬೇರೂರಿದೆ. ಅದನ್ನು ನಮಗೆ ಬದಲಾಯಿಸಲು ಸಾಧ್ಯವಾದರೆ ಎಲ್ಲವೂ ಬದಲಾಗುತ್ತದೆ ಎಂಬ ನಂಬಿಕೆ ನನ್ನದು.

  ಇದಕ್ಕೋಸ್ಕರವೇ ನಾಗರಿಕ – http://naagarika.blogspot.com ಎಂಬ ಬ್ಲಾಗನ್ನು ಶುರುಮಾಡಿದ್ದೆವು ನಾವು, ಒಂದಷ್ಟು ಮಂದಿ ಸೇರಿಕೊಂಡು. ಬಹುಶ: ಅದರಲ್ಲಿ ಬರೆಯುವ ವಿಚಾರಗಳು ಮತ್ತು ಉದ್ದೇಶ relevant ಅಂತ ಅನಿಸಲಿಲ್ಲವೋ, ಅಥವಾ ಅದನ್ನು ಓದಲು ಮತ್ತು ಅನಿಸಿಕೆ ತಿಳಿಸಲು ವಿಚಾರವಂತರಿಗೆ ಸಮಯ ಸಿಗುವುದಿಲ್ಲವೋ, ಅಥವಾ ಹೀಗೊಂದು ಬ್ಲಾಗ್ ಇರುವುದು ಯಾರ ಗಮನಕ್ಕೂ ಬಂದಿಲ್ಲವೋ, ಕಾರಣವೇನೋ ಗೊತ್ತಿಲ್ಲ, ನನಗೆ ಕೂಡ 100 ಶೇಕಡಾ ಅದಕ್ಕೆ ಹಾಕಲು ಸಮಯವಿರಲಿಲ್ಲವಾದ ಕಾರಣ, ಯಾವಾಗ ಸಾಧ್ಯವೋ ಆವಾಗ ಮಾತ್ರ ಏನಾದರೂ ಬರೆಯುತ್ತಿದ್ದೆ. ಆದರೆ only I have been writing most of the times, it has been a miserable failure, with no reaction, no argument, nothing. The imagination in which I have started was not this.

  ಹೊಗೇನಕಲ್ ತಮಿಳುನಾಡಿಗೆ ಸೇರಿದ್ದು ಎಂಬ ವಿಚಾರದ ಬಗ್ಗೆ ಆಧಾರ ಸಹಿತ ಬರೆದಿದ್ದೆ ನಾಗರಿಕದಲ್ಲಿ ನಾನು, ಆದರೆ ಇವತ್ತಿಗೂ ಮಾಧ್ಯಮಗಳಲ್ಲಿ ಬರುವ ವರದಿಗಳು ಹೊಗೇನಕಲ್ಲನ್ನು ಕರ್ನಟಕದಲ್ಲೇ ಇಟ್ಟುಕೊಂಡಿವೆ. ಹಾಗೆಂದು ಅವರಿಗೆ ಗೊತ್ತಿಲ್ಲದೆ ಖಂಡಿತಾ ಅಲ್ಲ, ಹೊಗೇನಕಲ್ಲನ್ನು ತಮಿಳುನಾಡಿಗೆ ಸೇರಿಸಿಬಿಟ್ಟರೆ ಕರ್ನಾಟಕದಲ್ಲಿ ಕಿಚ್ಚು ಹಚ್ಚಬಹುದಾದ ಅತಿ ದೊಡ್ಡ ಟಾಪಿಕ್ಕೇ ಸತ್ತುಹೋಗುತ್ತದೆಯಲ್ಲ, ಅದಕ್ಕೆ. ಯಾವುದೇ ವ್ಯವಸ್ಥೆಯಿರಲಿ, ಇಂತಹದ್ದು ಕಂಡರೆ ಪ್ರಶ್ನಿಸುವ ಮನೋಭಾವ ನಾವಿನ್ನೂ ಬೆಳೆಸಿಕೊಂಡಿಲ್ಲ, ಅದಕ್ಕೇ ನಮ್ಮ ವ್ಯವಸ್ಥೆಗಳು ಹೀಗಿವೆ. ಬಹುಶ: ತುಂಬಾ ಡೀಟೈಲ್ಡ್ ಆದ ಮಾಹಿತಿ ಪಡೆದುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಯಾರಿಗೂ ಬೇಕಿಲ್ಲ ಈಗ, ಸುಮ್ಮನೇ ಮೇಲಿಂದ ಮೇಲೆ ನೋಡಿ ಅವಸರದ ಮತ್ತು ಕ್ಷಣಿಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಮಗೆಲ್ಲ ಅಭ್ಯಾಸವಾಗಿದೆ.

  ಹಾಗಾಗಿ ಒಂಥರಾ ಬೇಜಾರಾಗಿದೆ, ಸಂಘಟಿತವಾಗಿ ಏನಾದರೂ ಮಾಡುವ ಕಲ್ಪನೆ ತುಂಬಾ ಹಳೇದಾಗಿದೆಯೇನೋ ಅನಿಸಿದೆ ನನಗೆ. ಮುಂಬೈ ಘಟನೆಗೆ ಸ್ಪಂದಿಸಲೇಬೇಕಿದ್ದ ನಾಗರಿಕ ಇಲ್ಲಿವರೆಗೆ ಸುಮ್ಮನಿದೆ. ಯಾರೂ ಏನೋ ಒಂದು ಅರ್ಥಪೂರ್ಣವಾದ, ಪ್ರಾಯೋಗಿಕವಾಗಿ ಸಾಧ್ಯವಿರುವಂತಹುದನ್ನು ಮಾಡುವ ಯತ್ನ ಮಾಡಿಲ್ಲ, ನನ್ನನ್ನೂ ಸೇರಿಸಿ.

  ಅವರವರ ಬದುಕು ಅವರವರಿಗೆ, ಸಾಮಾಜಿಕ ಪ್ರಜ್ಞೆ, ನಾಗರಿಕ ಪ್ರಯತ್ನಗಳು, ವಿಚಾರಗಳು ಎಲ್ಲವೂ ಅರ್ಥಕಳೆದುಕೊಂಡಿವೆಯೇನೋ ಅಂತ ಕೆಲದಿನಗಳಿಂದ ಅಂದುಕೊಳ್ಳುತ್ತಿದ್ದೆ. ಈಗ ನಿಮ್ಮ ಪ್ರಯತ್ನ ನಂಗೂ ಏನೋ hope ಹುಟ್ಟಿಸಿದೆ. ನನ್ನ ಸಹಕಾರ ನಿಮ್ಮ ಯತ್ನಕ್ಕೆ ಖಂಡಿತಾ ಇದೆ. ನಾಗರಿಕ ಬ್ಲಾಗ್ ನೋಡಿ, ನಿಮ್ಮ ಯೋಜನೆಗೆ ಅದರ ಮೂಲಕ ಏನಾದರೂ ಮಾಡಲು ಸಾಧ್ಯವೆನಿಸಿದರೆ ನಮಗೆ ತಿಳಿಸಿ, ಎಲ್ಲಾ ಸೇರಿ ಹೇಗೆ ಏನು ಅಂತ ಯೋಚನೆ ಮಾಡಿ ಮುಂದೆ ತಗೊಂಡು ಹೋಗೋಣ. ಅದಲ್ಲದೇ ನೀವೇ ಏನಾದರೂ ಮಾಡುವುದಿದ್ದರೂ ಸಹಕಾರ ಖಂಡಿತಾ ಇದೆ…

  – ಶ್ರೀ

  Like

 6. ಸುಪ್ತದೀಪ್ತಿ Says:

  ನೀಲಾಂಜಲ, ನಿಮ್ಮ ಯೋಚನೆಗಳು ಚೆನ್ನಾಗಿವೆ.
  ದೇಶೀಯವಾಗಿ ಮತ್ತೆ ಜಾಗತಿಕವಾಗಿ ಭಯೋತ್ಪಾದನೆಯ ವಿರುದ್ಧ ಮೌನ-ಸಂಘಟನೆ ಮಾಡಲು, ಅದಕ್ಕೊಂದು ರೂಪ, ಗುರುತು, ಧ್ಯೇಯ ಕೊಡುವುದು ಅಗತ್ಯ. ಅಂಥ ಲೋಗೋ ತಯಾರಾದಾಗ ನಾನೂ ಅದನ್ನು ಧರಿಸುತ್ತೇನೆ. ಅದರ ಸ್ಲೋಗನ್ ಮೂರೂ ಭಾಷೆಗಳಲ್ಲಿರಲಿ- ಕನ್ನಡ ಮೊದಲು, ಆಮೇಲೆ ಹಿಂದಿ; ಇಂಗ್ಲಿಷ್ ಕೂಡಾ ಇರಲಿ. ಜಾಗತಿಕವಾಗಬೇಕಾದರೆ ಇವು ಬೇಕಲ್ಲ!

  ನಿಮ್ಮ ಜೊತೆಗೆ ನಾನೂ ಸಾಗಿ ಬರುತ್ತೇನೆ.

  Like

 7. ranjanahegde Says:

  souparnika,

  ನಮ್ಮ ದೇಶದಲ್ಲಿ ನಡೆಯುತ್ತಿರುವ ಈ ಕ್ರೌರ್ಯವನ್ನು ದೂರದಿಂದಲೇ ನೋಡುತ್ತಾ, ಏನು ಮಾಡಲಾಗದೇ, ಸುಮ್ಮನೆಯೂ ಇರಲಾರದೇ ಇದ್ದಂತಹ ಸ್ಥಿತಿಯಲ್ಲಿದ್ದೆ. ಹೇಗಾದ್ರೂ ಇದನ್ನು ಕೊನೆಗಾಣಿಸಬೇಕು ಎಂಬ ಆಸೆ, ಆದರೆ ನನ್ನಿಂದ (ನನ್ನ ಕೌಟುಂಬಿಕಾ ಚೌಕಟ್ಟಿನೊಳಗಿದ್ದುಕೊಂಡು, ನನ್ನ ಕರ್ತವ್ಯಗಳನ್ನು ನಿಭಾಯಿಸಿಕೊಂಡು ) ಏನು ಮಾಡಲಾದೀತೆಂಬ ಯೋಚನೆ. ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಭಯೋತ್ಪಾದನೆಯನ್ನು ವಿರೋಧಿಸುವತ್ತ ಇಟ್ಟ ಈ ಹೆಜ್ಜೆಗೆ ನಾನು ನನ್ನ ಸಹಕಾರವನ್ನು ಕೊಡಲು ಸದಾ ಸಿದ್ದ. ಹಿಂಸೆ, ಕ್ರೌರ್ಯಗಳಿಗೆ ಇತಿಶ್ರೀ ಹಾಡುವ ಇಂತಹ ಹೋರಾಟಾಗಳಿಗೆ ಯಾವತ್ತೂ ನನ್ನ ಬೆಂಬಲ ಇದೆ.

  Like

 8. Tejaswini Says:

  ನೀಲಾಂಜಲ,

  ಸಮಾಜಕ್ಕೆ ಒಂದು ಸಂದೇಶವನ್ನೀವ, ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸುವ ಲೋಗೋವನ್ನು ಹೊರತನ್ನಿ. ನನ್ನ ಬೆಂಬಲವೂ ಸಂಪೂರ್ಣವಿದೆ. “ಹನಿಕೂಡಿ ಹಳ್ಳ..ತೆನೆ ಕೂಡಿ ಕಣಜ” ಎಂಬ ಗಾದೆ ಮಾತಿದೆ. ಇಂದು ೪೦ ಜನ ಸೇರಿರಬಹುದು.. ನಾಳೆ ಹಲವಾರು ಜನ ಕೈಜೋಡಿಸದಿರರು.

  ಜೈಹಿಂದ್!

  Like

 9. aksharavihaara Says:

  ನೀಲಾಂಜಲರೇ,
  ನಿಮ್ಮ ಆಲೋಚನೆ ತುಂಬಾ ಇಷ್ಟಾಯಿತು. ನಿಜ ಇದು ಸಂಘಟನೆ ಮೂಲಕ ಆಗಬೇಕಾದ ಕಾರ್ಯ. ಇಲ್ಲಿ ಯಾರದ್ದು ಇಗೋ ಬರಬಾರದು. ಎಲ್ಲರೂ ನಿಮ್ಮ ಯೋಜನೆಗೆ ನಾಯಕರಾಗಿರಬೇಕು. ಈ ವರೆಗೆ ಸಾಕಷ್ಟು ಹೋರಾಟಗಳಾಗಿವೆ. ಸಾಕಷ್ಟು ಸಂಘಟನೆಗಳು ಹುಟ್ಟಿವೆ. ಅಂತಹ ಸಾಲಿಗೆ ಸೇರದ ವಿಭಿನ್ನ ಸಂಘನೆಗೆ ನೀವು ನನ್ನಿಂದ ಎಲ್ಲ ಬಗೆಯ ಕೆಲಸಗಳನ್ನು ನೀರಿಕ್ಷಿಸಬಹುದು. ನಿಮ್ಮ ಸಲಹೆಗಳು ಬೇಗ ಕಾರ್ಯರೂಪಕ್ಕೆ ಬರಲಿ. ಸಾಧ್ಯವಾದರೇ ಆಸಕ್ತರ ತಂಡ ಒಂದೆಡೆ ಸೇರಿ ಮುಂದಿನ ಯೋಜನೆಗಳ ಜವಾಬ್ದಾರಿ ಹಂಚಿಕೊಂಡರೆ ಒಳಿತು ಅಂತಾ ನನಗನ್ನಿಸುತ್ತದೆ.
  ಇಂತಿ
  ವಿನಾಯಕ ಕೋಡ್ಸರ

  Like

 10. ರಮೇಶ್ Says:

  ಇದರ ಮುಂದೆ, ನಮ್ಮ ಪೋಲಿಸ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಮುಂದುವರೆದ ಸಲಕರಣೆಗಳು ಮತ್ತು ವೆಪನ್ಸ್ ಗಳಿಂದ ಸಜ್ಜುಗೊಳಿಸಲು ಸರ್ಕಾರವನ್ನು ಒತ್ತಾಯಿಸಬೇಕು.

  Like

 11. Usha Says:

  Nilanjala,

  Nanu nimmante bareyuvavalalla.. bari oduvavlu.. IT company li kelasa madtiddeddene.. nimma alochane ishtavayitu… Anubhavi blogigara comments kooda… neevu heege logo mattu slogan galannu madidde adare printable formatannu nanagu kalisi.. nanna parichayadavarigella naanu kooda hanchuttene(office navarige kooda) mele tilisidante avaravara vahanagala mele dodda sticke antisuva hage heli kodona ennuvudu nanna alochane….

  Sri,

  nimma http://naagarika.blogspot.com/ ide endu khanditavagi nanange gottiralilla.. abhiprayagalannu hanchikondilla anta bejaru madikollabedi.. heegondu blog ide emba prachara kooda mukhya allave??

  Like

 12. ಡಿ.ಎಸ್.ರಾಮಸ್ವಾಮಿ Says:

  ನಿಮ್ಮ ಅನಿಸಿಕೆಗಳು ರಾಗ-ದ್ವೇಷಗಳ ಸೋಂಕಿಲ್ಲದ ಸದ್ಯದ ಸಂಕಟವನ್ನು ನಮ್ಮ ಮಿತಿಯಲ್ಲಿ ಎದುರಿಸುವ ಮತ್ತು ಸಾಧ್ಯವಾದಷ್ಟೂ ಮನುಷ್ಯ ಪ್ರೀತಿಯನ್ನು ಒಂದುಗೂಡಿಸುವ ಸೇತುವೆಯಾಗಿದೆ. ನಿಮ್ಮೆಲ್ಲ ಹಂಬಲವನ್ನು ಹಂಚಿಕೊಳ್ಳಲು ಅದಕ್ಕೆ ಸ್ಪಂದಿಸಲು ಸರತಿ ಸಾಲು ಸಿದ್ಧವಾಗುತ್ತಿದೆ. ಅಭಿನಂದನೆ.ನಿಮ್ಮ ಜೊತೆಗೆ ನಾವಿದ್ದೇವೆ-ಡೀಎಸ್ಸಾರ್

  Like

 13. ಪ್ರದೀಪ್ Says:

  ನೀಲಾಂಜಲ ಅವರೇ, ಪ್ರತಿಭಟನೆ, ಆಂದೋಲನ, ಇವೆಲ್ಲವೂ ಬೇಕು. “ಇದಕ್ಕೆ ನನ್ನ ವಿರೋಧವಿದೆ” ಅಂತ ಬಹಿರಂಗವಾಗಿ ಬರಹ ಹೊತ್ತು ತಿರುಗುವುದೂ ಬೇಕು. ಆದರೆ ಯಾರ ವಿರುಧ್ಧ? ಭಯೋತ್ಪಾದಕರ ವಿರುಧ್ಧವೇ? ಮೊದಲು ಪ್ರತಿಭಟನೆ, ಆಂದೋಲನ ಬೇಕಾಗಿರುವುದು ನಮ್ಮ ಕೆಟ್ಟು ಹೋಗಿರುವ ವ್ಯವಸ್ಥೆಯ ವಿರುದ್ಧ. ಸ್ವಾರ್ಥ ರಾಜಕಾರಣದ ವಿರುಧ್ಧ. ಓಬಿರಾಯನ ಕಾಲದ 0.303 rifleಗಳನ್ನು ಹಿಡಿದು ನಿಂತಿದ್ದ ಪೋಲೀಸರು a.k.47 ಹಿಡಿದು ಗುಂಡಿನ ಸುರಿಮಳೆಯನ್ನು ಹರಿಸಿದ ಉಗ್ರರನ್ನು ಹೇಗಾದರೂ ಎದುರಿಸಿ ಹಿಮ್ಮೆಟ್ಟುತ್ತಿದ್ದರು?. ಆಡಳಿತದ ನಿರ್ಲಕ್ಷ್ಯವಿಲ್ಲದಿದ್ದರೆ, ಇಂತಹ ಮಾರಣಹೋಮದ ಘಟನೆಗಳು ಈಗಾಗುವಷ್ಟು ಪ್ರಬಾವಶಾಲಿಗಳಾಗುತ್ತಿರಲಿಲ್ಲ. ಒಂದು ದೇಶವೆಂದರೆ ಅದಕ್ಕೆ ವೈರಿಗಳು ಯಾವತ್ತೂ ಇರುತ್ತಾರೆ. ಆದರೆ, ಆ ವೈರಿಗಳ ದಾಳಿಯನ್ನು ಹಿಮ್ಮೆಟ್ಟಲು, ಮೀರಿಸಲು, ಆ ದೇಶದ ವ್ಯವಸ್ಥೆ, ಆಡಳಿತ, ಆಂತರಿಕ ಭದ್ರತೆ ಶಕ್ತಿಶಾಲಿಯಾಗಿರಬೇಕು. ಹೇಗೆ ದೇಹವೊಂದು ಆಂತರಿಕವಾಗಿ ಶಕ್ತವಿಲ್ಲದಿದ್ದರೆ ಹೊರ ರೋಗಗಳ ದಾಳಿಗೆ ತುತ್ತಾಗುವ ಸಂಭಾವನೆ ಹೆಚ್ಚೋ, ಅಂತೆಯೇ ದೇಶ ಕೂಡ…
  ಈಗ ಹೇಳಿ, “ನನ್ನ ವಿರೋಧವಿದೆ” ಅಂತ ಯಾರ ವಿರುಧ್ದ ಕೂಗೋಣ?

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: