ಹೀಗ್ಯಾಕೆ ಮಾಡಬಾರದು ?

ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು?
ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿಯನ್ನು (ಕಪ್ಪು ಹಣೆಪಟ್ಟಿಗೆ) ಬದಲಾಯಿಸುವುದು. ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿ ಪ್ರದರ್ಶಿಸುವುದು.
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ? ಹೇಗೆ ಹನುಮಾನ್ ಕೀ ಬಂಚಗಳು, ವಾಚುಗಳು ಬಂದವೋ ಹಾಗೆ.

ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ ?
ಹಾಗೆನೇ
ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (“ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿ. ನನ್ನದು ಬಾಲಿ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.

ನನ್ನ ಓದುಗರೇ , ಹೀಗೆ ಮಾಡೋಣವೇ? ಏನಂತೀರಿ ??

60 Responses to “ಹೀಗ್ಯಾಕೆ ಮಾಡಬಾರದು ?”

  1. ವೈಶಾಲಿ Says:

    ನೀಲಾಂಜಲಾ,
    ನಾನು ನಿಮ್ಮೊಂದಿಗೆ. ನನ್ನ ಬ್ಲಾಗ್ ಬಣ್ಣ ಬದಲಾಗುತ್ತಿದೆ. ಸ್ವಲ್ಪ ಮಟ್ಟಿಗೆ ಜಡಗಟ್ಟಿರುವ ಮನಸು ಕೂಡ. ನಿಮ್ಮ ಮೊದಲ ಹೆಜ್ಜೆಗೆ ಅಭಿಮಾನದ ಸಲಾಂ!

    Like

  2. M G Harish Says:
  3. ಚಕೋರ Says:

    ನೀಲಾಂಜಲ:
    ಭಯೋತ್ಪಾದನೆಯ ವಿರುದ್ಧ ನಮ್ಮ ಕೈಲಾದುದನ್ನು ಮಾಡಬೇಕೆನ್ನುವ ನಿಮ್ಮ ವಿಚಾರಕ್ಕೆ ನನ್ನ ಬೆಂಬಲವಿದೆ. ಸಾಂಕೇತಿಕವಾಗಿ ಹಾಗೂ ಸಾಮಾಜಿಕವಾಗಿ. ಚಿಹ್ನೆಗಳಿಂದ ಏನೂ ಉಪಯೋಗವಿಲ್ಲ, ನಿಜವಾದ action ಬೇಕು ಎಂದು ಕಿರುಚುತ್ತಾರೆ ನಮ್ಮ ಮಾಧ್ಯಮದವರು. ಆದರೆ, ’ಓ, ನಮ್ಮ ಭವಿತವ್ಯದ ಚಿಹ್ನೆಗಳ ಮೇಲೆ ಆದ ಆಕ್ರಮಣ ಇದು!’ ಎಂದೂ ಭೋರಿಡುವ ಅದೇ ಮಾಧ್ಯಮದವರಿಗೆ ತಮ್ಮದೇ ದ್ವಂದ್ವ ತಿಳಿಯುವುದಿಲ್ಲ. ಅದಿರಲಿ.

    ಸಂಘಟನೆಗಳ ಮೂಲಕ ಸಮಾಜದ ಅರಿವು ಹೆಚ್ಚಿಸಲು ನನ್ನ ಬೆಂಬಲವಿದೆ. ಜನರಲ್ಲಿ ಭದ್ರತೆಯ ಅರಿವನ್ನು ಹೆಚ್ಚಿಸಬೇಕು. ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ತಿಳಿಯಬೇಕು, ತಿಳಿಸಬೇಕು. ಹಾಗೆಯೇ paranoia ಕಡಿಮೆ ಮಾಡಬೇಕು. ನಮ್ಮ ನಮ್ಮ ಮನೆಗಳಲ್ಲೂ ಇದನ್ನು ಮಾಡಬೇಕು. ಆದರೆ, ಈ ಸಂಘಟನೆಗಳ ಉದ್ದೇಶ ಸರ್ವೇಲೆನ್ಸ್ ಹಾಗೂ ಜನರ ತಪಾಸಣೆ ನಡೆಸುವುದು ಆದಲ್ಲಿ, ಅದಕ್ಕೆ ನನ್ನ ತಕರಾರಿದೆ. ನಾನು ನನ್ನನ್ನು ಕೇಳಿಕೊಳ್ಳುವ ಪ್ರಶ್ನೆ ಇದು: ಯಾರದೋ ಮನೆಗೆ ಹೋದಾಗ ಅಥವಾ ಬೇರೆ ಊರಿಗೆ ಹೋದಾಗ, ನನಗೆ ಸಂಬಂಧವಿಲ್ಲದ ಜನ ಬಂದು ನನ್ನನ್ನು ತಡವುವುದಕ್ಕೆ, ನನ್ನ ಖಾಸಗಿ ಬದುಕಿನಲ್ಲಿ ನುಸುಳುವುದಕ್ಕೆ ನನ್ನ ಅನುಮತಿಯಿದೆಯೇ? ಸ್ಪಷ್ಟವಾಗಿ ಇಲ್ಲ. ಅದೇ ರೀತಿಯಲ್ಲಿ ನಾನೂ ಬೇರೆಯವರ ಸ್ವಾತಂತ್ರ್ಯಕ್ಕೆ ಚ್ಯುತಿ ಮಾಡಲಾರೆ.

    Like

  4. Harish Mambady Says:

    ಜಾಗೋ.. ಅನ್ನುತ್ತಾ ಎಚ್ಹರಿಕೆ ಮೂಡಿಸುತ್ತ ನಮ್ಮ ನಮ್ಮ ಅಕ್ಕಪಕ್ಕದವರಿಗೆ ಹೇಳುವುದೊಂದೇ ದಾರಿ…
    ಒಳ್ಳೆಯ ಕೆಲಸಕ್ಕೆ ರೆಡಿ..

    Like

  5. neelanjana Says:

    ನಿಮ್ಮ ಮಾತು ನನಗೆ ಒಪ್ಪಿತು.

    ಅಂತೇ ನನ್ನ ಹಣೆಪಟ್ಟಿಯೂ ಬದಲಾಗಿದೆ.

    http://neelanjana.wordpress.com/

    Like

  6. Mumbai Attacks « ಅಲ್ಲಿದೆ ನಮ್ಮ ಮನೆ Says:

    […] I changed the image at the top today after reading another  blog post. […]

    Like

  7. ಶೆಟ್ಟರು (Shettaru) Says:

    ನೀಲಾಂಜಲ,

    ನಿಮ್ಮ ಕೆಲವು ವಿಚಾರಗಳು ಚಿಂತನರ್ಹ, ಚಿನ್ಹೆಗಳ ವಿಚಾರ ಬಂದಾಗ ಹೌದು ಅದರ ಅಗತ್ಯತೆ ನಮಗಿಗ ಅನಿವಾರ್ಯ, ಯಾಕೆಂದರೆ ಇನ್ನು ಮೂರೆ ದಿನಗಳಲ್ಲಿ ಈ ಮುಂಬಯಿ ದಾಳಿ ಮರೆತು ಬಿಡುವ ನಮಗೆ ನೆನಪಿಸಲಾದರು ಅದು ಚಿನ್ಹೆ ಬೇಕಾಗಿದೆ, ನಮ್ಮನ್ನು ನಾವು ಎಚ್ಚರಿಸಿಟ್ಟುಕೊಳ್ಳಲು, ನಮಗಿಗ ಭಯೊತ್ಪಾದನೆಯ ವಿರುದ್ಧ ಹೋರಾಟ ನೆಡೆಸಲು ಅದನ್ನು ಎಲ್ಲರಲ್ಲೂ ಹರಡಿಸಲು, ನಾವು ಎಚ್ಚರದಿಂದಿದ್ದು, ನಮ್ಮ ನೆರೆ-ಹೊರೆಯವರನ್ನು ಎಚ್ಚರಿಸಲು ದಿನಾ ಎದೆಯ ಮೇಲೆ ಧರಿಸಲು, ನಮ್ಮನ್ನು ಬಡಿದೆಬ್ಬಿಸಲು ಒಂದು ಚಿನ್ಹೆ ಬೇಕೆ ಬೇಕು.

    ಇನ್ನು ಹಲವು ಪ್ರಶ್ನೆಗಳು ಹಾಗೆ ಊಳಿಯುತ್ತವೆ, ಅವುಗಳಿಗೆ ಉತ್ತರ ಹುಡುಕೋಣ, ಎಲ್ಲರೂ ಒಂದಾಗಿ..

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

    Like

  8. ವಿಜಯರಾಜ್ ಕನ್ನಂತ Says:

    ನಾನು ಹಣೆಪಟ್ಟಿ ಬದಲಾಯಿಸಿದ್ದೆನೆ.. ನಿಮ್ಮ ವಿಚಾರಗಳಿಗೆ ನನ್ನ ಸಂಪೂರ್ಣ ಸಹಮತ ಬೆಂಬಲ ಇದೆ.

    Like

  9. ರಂಜಿತ್ Says:

    ನಿಮ್ಮ ಈ ವಿಚಾರಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ…. ಈ ರೀತಿಯಿಂದಾದರೂ ಪ್ರತಿಭಟಿಸಬೇಕಿದೆ.

    ಧನ್ಯವಾದಗಳು ಈ ನಿಟ್ಟಿನಲ್ಲಿ ನೀವು ಎಲ್ಲರನ್ನೂ ಒಟ್ಟಾಗಿಸುತಿರುವುದಕ್ಕೆ.

    Like

  10. ಕಪ್ಪು ಪಟ್ಟಿ- ಪ್ರತಿರೋಧ « ಓ ನನ್ನ ಚೇತನಾ… Says:

    […] December 2, 2008 at 4:46 am | In Uncategorized | ಬ್ಲಾಗ್ಗೆಳತಿ ನೀಲಾಂಜಲದ ಸೌಪರ್ಣಿಕಾ ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ. […]

    Like

  11. ಗುರು ಬಾಳಿಗ Says:

    ’ನೀಲಾಂಜಲ’ ಕರೆಗೆ ಪ್ರತಿಕ್ರಿಯೆ – ನನ್ನದೂ ಬ್ಲಾಗ್ಬಂದ್
    http://zhanki.blogspot.com/

    Like

  12. Tina Says:

    ಚಕೋರ,
    ನಮ್ಮನಮ್ಮ ವ್ಯಕ್ತಿಗತ ಸ್ವಾತಂತ್ರ್ಯಗಳ ಬಗೆಗೆ ಗೌರವ ಇಟ್ಟುಕೊಂಡೇನಾನು ’ನೆಲದಮಾತು’ ಬ್ಲಾಗಿನಲ್ಲಿ ಸಲಹೆ ನೀಡಿದೆ. ಎಲ್ಲರ ಪ್ರೈವೆಸಿಗೆ ಗೌರವ ಕೊಡುವಾ ಆದರೆ ಈ ಪ್ರೈವೆಸಿ ತಾಜ್ನೊಳಗೆ ಸ್ಫೋಟಕ ಸಾಮಗ್ರಿಗಳನ್ನು ಆರಾಮವಾಗಿ ತಂದಿಡುವುದರ ಮಟ್ಟಿಗೆ ಹೋಗುವುದಾದರೆ, ನರಿಮನ್ ಹೌಸಿನಲ್ಲಿ ಎರಡು ತಿಂಗಳು ಆರಾಮವಾಗಿ ಇದ್ದುಕೊಂಡು ಮುಂಬಯಿ ಟೆರರ್ ಅಟ್ಯಾಕುಗಳನ್ನು ಯೋಜಿಸುವಷ್ಟು ಮುಂದಕ್ಕೆ ಹೋಗುವದಾದರೆ, ನಾನು ಅಂಥ ಪ್ರೈವೆಸಿಯನ್ನು ಕೊಂಚ ಕಳೆದುಕೊಳ್ಳಲು ತಯಾರಿದೇನೆ ಎಂದು ಅರ್ಥ ಬರುವಂತೆ ನಾನು ಹೇಳಿರುವುದು. ಈಗ ನಾವು ಹೀಗೆಲ್ಲ ನನ್ನ ಮನೆ ನನ್ನ ಪ್ರೈವೆಸಿ ಅಂತೆಲ್ಲ ಯೋಚನೆ ಮಾಡಿದರೆ ನಾಳೆ ನನ್ನ ಭವಿಷ್ಯದ ಬಗ್ಗೆ ಪಾಸಿಟಿವ್ ಆಗಿ ಯೋಚನೆ ಮಾಡಲು ಸಾಧ್ಯವಾಗುವುದಿಲ್ಲ. ನನ್ನ ಮಗಳನ್ನು ಹೇಗೆ ನಿರಾಳವಾಗಿ ಆಚೆಗೆ ಕಳಿಸಲಿ? ಈಗ ನಾವು ಕಟ್ಟುನಿಟ್ಟು ಮಾಡದಿದ್ದರೆ ಇದು ನಡೀತಲೇ ಇರತ್ತೆ. ನಾವು ಬಲೀ ಕಾ ಬಕ್ರಾ ಆಗ್ತಲೇ ಇರ್ತೀವಿ. This enemy does not have a face. ನಾವು ಎಚ್ಚರದಲ್ಲಿದೇವೆ , ಮನೆ ಭದ್ರ ಮಾಡಿದೇವೆ ಅಂತ ಗೊತ್ತಾದರೆ ನಮ್ಮ ಮನೆಗೆ ಕಳ್ಳರು ನುಗ್ತಾರೆಯೆ? ಚೆನ್ನಾಗಿ ಮೈಮರೆತು ಗೊರಕೆ ಹೊಡೀವಾಗಲೆ ಮನೆಗೆ ಕನ್ನ ಹಾಕೋದು.

    Like

  13. ಶ್ರೀ Says:

    ಖಂಡಿತ ಉತ್ತಮ ಐಡಿಯಾ. ನನ್ನ ಬ್ಲಾಗ್ ಬಣ್ಣ ಸದ್ಯದಲ್ಲೇ ಬದಲಾಯಿಸುವೆ.
    ನೀವು ಮುಂಬೈಯಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ, ಮತ್ತು, ನಿಮ್ಮ ಬ್ಲಾಗ್ ಕಡೆಗೆ ಹೆಚ್ಚು ಬಂದಿಲ್ಲ ನಾನು, ಹಾಗಾಗಿ ಗೊತ್ತಿರಲಿಲ್ಲ… ಕ್ಷಮೆಯಿರಲಿ. ಯಾವುದೋ ಪಟ್ಟಿಯಲ್ಲಿ ನಿಮ್ಮ ಹೆಸರು ಬಂದ ಮಾತ್ರಕ್ಕೆ ನೀವು ಭಯೋತ್ಪಾದನೆ ಪ್ರತಿಭಟಿಸುತ್ತೀರಿ ಎಂದು ಸಾಧಿತವಾಗುತ್ತದೆ ಅಂದುಕೊಳ್ಳಬೇಡಿ, ಬಹಳಷ್ಟು ಸಮಯ ಮೌನಕ್ಕೆ ಮಾತಿಗಿಲ್ಲದ ಶಕ್ತಿಯಿರುತ್ತದೆ, ಬೇಸರಿಸದಿರಿ.

    Like

  14. Rajesh Manjunath Says:

    Dear Neelanjal

    I have changed my blog title color, I am also with you to protest against this.

    Regards

    Rajesh Manjunath

    Like

  15. ಪ್ರದೀಪ್ Says:

    ಬರೀ ಬ್ಲಾಗಲ್ಲಿ ಮಾಡಿದರೆ ಸಾಲದು ಕಣ್ರೀ… ರಸ್ತೆಗಿಳಿದು ಉಗಿಯಬೇಕು.. ನಮ್ಮ ಸರಕಾರಗಳ ಸೋಮಾರಿತನಕ್ಕೆ. ಅಂತದ್ದೇನಾದ್ರೂ ವಿಚಾರವಿದ್ದ್ರೆ ಹೇಳಿ…

    Like

  16. ಸಂದೀಪ್ ಕಾಮತ್ Says:

    ಪಟ್ಟೊಯೇನು ಇಡೀ ಬ್ಲಾಗನ್ನೇ ಕಪ್ಪು ಮಾಡಿದೆ ಬಿಡಿ.

    Like

  17. ಅನಿವಾಸಿ Says:

    ನನ್ನ ಬ್ಲಾಗುಪಟ್ಟಿ ಕಪ್ಪು ಮಾಡಿದ್ದೇನೆ

    Like

  18. shreedevi kalasad Says:

    ……….. 😦

    Like

  19. vinayaka Says:

    ನೀಲಾಂಜಲರೇ,
    ನಿಮ್ಮ ಸಲಹೆಗೆ ನನ್ನ ಬೆಂಬಲ ಖಂಡಿತಾ ಇದೆ.
    ವಿನಾಯಕ ಕೋಡ್ಸರ

    Like

  20. vikas hegde Says:

    Done 😦

    Like

  21. ರಾಘವೇಂದ್ರ ಕೆಸವಿನಮನೆ Says:

    ನೀಲಾಂಜಲ ಅವರೆ,
    ನಿಮ್ಮ ಸಲಹೆಗೆ ನನ್ನ ಬೆಂಬಲವಿದೆ. ನಿಮ್ಮ ಸಲಹೆಯಂತೆ ಯಾರಿಂದಾದರೂ ಒಂದು ಪ್ರತ್ಯೇಕ ಲಾಂಛನವನ್ನೇ ಮಾಡಿಸಿ ಬ್ಲಾಗಿಗರೆಲ್ಲರೂ ಹಾಕಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಎಂದು ನನ್ನ ಅಭಿಪ್ರಾಯ.
    – ರಾಘವೇಂದ್ರ ಕೆಸವಿನಮನೆ.

    Like

  22. ಶ್ರೀನಿಧಿ.ಡಿ.ಎಸ್ Says:

    ನಾನೂ ಜತೆಗಿದ್ದೇನೆ.

    Like

  23. ಪ್ರದೀಪ್ Says:

    ನಿಮ್ಮ ಸಲಹೆಯಂತೆ, ಬ್ಲಾಗ್ನಲ್ಲಿ ಕಪ್ಪು ಪಟ್ಟಿಯಿದೆ ನೋಡಿ. ಆದರೆ ನಾವು ನಾಗರೀಕರು ಅಷ್ಟು ಮಾತ್ರ ಮಾಡಿದರೆ ಸಾಲದು…

    Like

  24. ವಿಕಾಸ್ ಹೆಗಡೆ Says:

    😦

    Done

    Like

  25. Poornima Says:

    ನೀಲಾ೦ಜಲ, ನನ್ನದು ಒಂದು ಹೆಜ್ಜೆ – ನಿಮ್ಮೆಲ್ಲರ ಜೊತೆಗೆ…

    Like

  26. Tejaswini Says:

    ಇಂತಹ ಅಮಾನವೀಯ ಕೃತ್ಯದ ದಮನಕ್ಕೆ ಮಾನಸದ ಸಂಪೂರ್ಣ ಬೆಂಬಲವಿದೆ..

    Like

  27. tavishree Says:

    naanoo nimmondigiruve

    Like

  28. ಅಂತರ್ವಾಣಿ Says:

    ನಾನೂ ಇದ್ದೀನಿ

    Like

  29. shivu. Says:

    ನಿಮ್ಮ ಪ್ರಯತ್ನಕ್ಕೆ ನನ್ನ ಸಂಫೂರ್ಣ ಬೆಂಬಲವಿದೆ. ನಿಮ್ಮ ಜೊತೆ ನನ್ನದು ಹೆಜ್ಜೆ.

    ಕೇವಲ ಪಟ್ಟಿ ಮಾತ್ರವೇನು ನನ್ನ ಎರಡು ಬ್ಲಾಗ್‌ಗಳನ್ನು ಕಪ್ಪು ಮಾಡಿದ್ದೇನೆ ಬಿಡಿ.

    Like

  30. Chitra karkera Says:

    ನನ್ನದೂ ಬೆಂಬಲವಿದೆ..
    -ಚಿತ್ರಾ

    Like

  31. ಸುಶ್ರುತ Says:

    done!

    Like

  32. sunaath Says:

    ನೀಲಾಂಜಲಾ,
    ನಾನು ಹಣೆಪಟ್ಟಿ ಬದಲಾಯಿಸಲು ಎರಡು ದಿನಗಳವರೆಗೆ ಶ್ರಮಿಸಿದೆ. ಆದರೆ, ಈ ಮಂದಮತಿಯ ಎಲ್ಲ ಪ್ರಯತ್ನಗಳು ಅಯಶಸ್ವಿ ಆದವು. Layoutದಲ್ಲಿ editಗೆ ಹೋಗಿ, ನನ್ನ computerದಲ್ಲಿ ಸಿದ್ಧಪಡಿಸಿ ಇಟ್ಟುಕೊಂಡ ಕಪ್ಪು ಹಣೆಪಟ್ಟಿಯನ್ನು open ಮಾಡಿ save ಮಾಡಿದೆ. ಆದರೆ ಏನೂ ಆಗಲಿಲ್ಲ. ದಯವಿಟ್ಟು ಇದಕ್ಕೆ ಬೇಕಾದ steps ಹೇಳಲು ವಿನಂತಿಸುತ್ತೇನೆ.

    Like

  33. ನೀಲಾಂಜಲ Says:

    Sunaath,

    ನಾನು ನೀವು ಊಪಯಯೋಗಿಸ್ತಾ ಇರೋ “tic tac ” ಟ್ರೈ ಮಾಡಿದೆ. ಸರಿಯಾಗಿ ಬರುತ್ತ ಇಲ್ಲ. ಬ್ಲಾಕ್ ಇಮೇಜ್ ಹೇಡ್ಡರಿನ ಮುಕ್ಕಾಲು ಭಾಗ ಮಾತ್ರ ಕುಳಿತುಕೊಳ್ಳುತ್ತಿದೆ. shrink to fit ಮಾಡಿದ್ರೂ ಕೆಲಸ ಆಗ್ತಾ ಇಲ್ಲ. ಬೆಸ್ಟ್ ಅಂದ್ರೆ template ಬದಲಾಯಿಸೋದು. ” minima ” ದಲ್ಲಿ work ಆಗ್ತಾ ಇದೆ. (http://allsoupis.blogspot.com/) . word press ನಲ್ಲಿ ಸಹ custom header ಇಲ್ದೇ ಇರೋ ಜನ template ಬದಲಾಯಿಸ್ತಾ ಇದ್ದಾರೆ. 😦

    (for blogspot;
    layout-edit-header(edit)-placement(set the settings according to your choice)-mark on Shrink to fit – image-from your computer-save)

    Like

  34. Pramod Says:

    ನಾನೂ ನಿಮ್ಮ ಜತೆ…

    Like

  35. navada Says:

    ನಮಸ್ಕಾರ,
    ನೀಲಾಂಜಲವರೇ, ನಿಮ್ಮ ಕರೆಗೆ ನಮ್ಮ ಬೆಂಬಲವಿದೆ. ನಾನೂ ಬದಲಾಯಿಸಿದ್ದೇನೆ.
    ನಾವಡ

    Like

  36. Aharnishi Says:

    namaskaara,

    We support you.

    Like

  37. Sandeepa Nadahalli Says:

    ನಾನೂ ಸಹ!

    Like

  38. ಸುಪ್ತದೀಪ್ತಿ Says:

    ನನ್ನ ಎರಡೂ ಬ್ಲಾಗ್’ಗಳಲ್ಲಿ ಬರೀ ಹಣೆಪಟ್ಟಿಯನ್ನು ಮಾತ್ರ ಕಪ್ಪಾಗಿಸಲು ಬಾರದ್ದರಿಂದ ಇಡೀ ಬ್ಲಾಗಿನ ಬಣ್ಣವನ್ನೇ ಕಪ್ಪಿನತ್ತ ವಾಲಿಸಿ (ದಟ್ಟ ಗ್ರೇ) ಇಟ್ಟಿದ್ದೇನೆ. ಹಣೆಪಟ್ತಿಯನ್ನಷ್ಟೇ ಕಪ್ಪಾಗಿಸುವ ಟ್ರಿಕ್ ನನಗೂ ಒಲಿಯಲಿಲ್ಲ. ಕ್ಷಮಿಸಿ….

    Like

  39. ಶಾಂತಲಾ ಭಂಡಿ Says:

    ಮೊನ್ನೆ ಇಡೀ ಬ್ಲಾಗಿಗೂ ಕಪ್ಪು ಮಾಡಿದ್ದೆ. ಯಾಕೋ ಅದು ಒಂದು ಚಿಹ್ನೆಯಾಗಿ ಕಾಣಿಸದೇ ಇವತ್ತು ಬ್ಲಾಗ್’ನ ಹಣೆಪಟ್ಟಿಯನ್ನು ಮಾತ್ರ ಕಪ್ಪಗಾಗಿಸಿದ್ದೇನೆ. ತಣ್ಣಗಿದ್ದಿದ್ದಕ್ಕಿಂತ ಇಷ್ಟಾದರೂ ಮಾಡಿದ್ದೇನೆಂಬ ಸಮಾಧಾನ. ಎಲ್ಲವೂ ಒಳಿತಾದಂತೆ ದೂರದಲ್ಲೊಂದು ಆಸೆ….

    Like

  40. ಅಹರ್ನಿಶಿ Says:

    ನೀಲಾ೦ಜಲ ಅವರೇ,

    ನಾವಡರಿ೦ದ ಎರವಲು ಪಡೆದು ನಾನೂ ಹಾಕಿದ್ದೇನೆ .ಜೊತೆಗೆ ತೋಚಿದ್ದನ್ನ ಗೀಚಿದ್ದೇನೆ.

    Like

  41. ಶಾಂತಲಾ ಭಂಡಿ Says:

    ನೀಲಾಂಜಲ…
    ಈಗೀಗ ಹುಟ್ಟಿಕೊಳ್ಳುತ್ತಿರುವ ಕೆಲವು ಬ್ಲಾಗ್’ಗಳನ್ನು ನೋಡಿ ಏನನ್ನಿಸಿದೆ ಗೊತ್ತಾ? ಭಯೋತ್ಪಾದನೆಯ ವಿರುದ್ಧದ ಆಂದೋಲನದ ನಂತರ ಕೆಲವು ಬ್ಲಾಗ್’ಗಳ ವಿರುದ್ಧ ಬ್ಲಾಗಿಗರೇ ಇನ್ನೊಂದು ಆಂದೋಲನ ಆರಂಬಿಸಬೇಕಾಗಿದೆ. ಇದಕ್ಕೆ ನಿನ್ನ ಅನಿಸಿಕೆ ಏನು? ನಮ್ಮೆಲ್ಲರ ಬ್ಲಾಗ್’ಗಳು ಚಿತ್ರಾನ್ನವಾದರೂ ಸರಿ. ಕೆಟ್ಟ ಅಲಂಕಾರದ ನಡುವೆ ಕಳೆದುಹೋಗುವುದು ಬೇಡ.

    Like

  42. XYZ Says:

    You need to remove that comment from Shrungara. It has explicit pictures and you are responsible for the comments in your blog. You need not approve this message.

    Like

  43. ಅನ್ವೇಷಿ Says:

    ನನ್ನದ್ದೂ ಒಂದು ಹಿಡಿ ಪೂರ್ತಿ ಧಿಕ್ಕಾರ

    Like

  44. chakora Says:

    Tina:
    While I agree that we should be much more alert, let us not forget that safety to life has always been and will always remain a matter of probability. It may sound odd, but the chances of I and you dying in a road accident are much higher than those in a terrorist attack! That does not imply that we should be happy with the status quo. We should guard our airports and coasts much more rigorously. There should be a much greater amount of vigilance in railway stations, bus stands and other major public places. But the point is, having ordinary citizens to do surveillance creates more problems than it solves. For the sake of argument, let’s even forget privacy. A huge number of questions still remain. Who appoints such teams? What powers do such teams have? What kind of accountability can you expect? Power is a hot thing to handle. How do we prevent such teams or members thereof causing nuisance just because they can? Even if we assume all such teams shall be responsible, the question of their own safety comes up. Who is responsible for their safety if they happen to come across dangerous people during their job? I can go on. But the thing is — this is a multi-edges sword, and not really feasible.

    Like

  45. Amar Tumballi Says:

    /me too

    Like

  46. NilGiri Says:

    ನಾನೂ ನಿಮ್ಮೊಂದಿಗಿದ್ದೇನೆ.

    Like

  47. ಚಿತ್ರಾ ಹೆಗಡೆ Says:

    ನಿಮ್ಮ ಜೊತೆಗಿದ್ದೇನೆ.

    Like

  48. ಶ್ರೀ Says:

    ಪೂರ್ತಿ ಬ್ಲಾಗೇ ಕಪ್ಪು ಮೆತ್ತಿಟ್ಟಿದೀನಿ ಯಾವತ್ತೋ…ಹಾಗಾಗಿ ಇಲ್ಲಿ ಹೇಳೋ ಮೂಲಕ ನನ್ನ ಬೆಂಬಲ ತಿಳಿಸ್ತಿದೀನಿ

    Like

  49. Govind Says:

    ನಾನೂ ನಿಮ್ಮ ಜತೆ…

    Like

  50. sri Says:

    nanna blog na haNe paTTiyannu badalisiruve – sari ideyE omme nODi

    kelasadalli muLugi hOgi – ee kelasa maaDalu taDavaayitu

    Like

  51. sp Says:

    I did like the following opinion…. (Just my two cents)

    Naseeruddin Shah: The trouble with these symbolic gestures is you feel you’ve done your bit. We should hold on to this feeling of dissastisfaction and helplessness so that we are galvanised into action.

    Like

  52. skhalana Says:

    ನನ್ನ ಬ್ಲಾಗಿನಲ್ಲೂ ಕಪ್ಪು ಹಣೆಪಟ್ಟಿ – ಧಿಕ್ಕಾರವಿರಲಿ ಭಯೋತ್ಪಾದನೆಗೆ

    Like

  53. Annapoorna Daithota Says:

    ಖಜಾನೆಯೂ ಕಪ್ಪಾಗಿದೆ…

    Like

  54. ವೇಣು Says:

    ಹೀಗೆ ಬ್ಲಾಗ್ ಚಿಹ್ನೆ ಬದಲಾಯಿಸೋದ್ರಿಂದ ಎನು ಉಪಯೋಗ ಇಲ್ಲರೀ.
    ನಿಮ್ಮ ಕ್ಯೂಬಿಕ್ಲ್ ಕುರ್ಚಿಯಿಂದ ಹೊರ ಬನ್ನಿ, ಪ್ರಪಂಚವನ್ನು ತೆರೆದ ಕಣ್ಣಿನಿದ, ತೆರೆದ ಮನಸಿನಿಂದ ನೋಡಿ.
    ನೀವೇನು ಹೊಸದಾಗಿ ಸಂಘ ಕಟ್ಟೋದೇನು ಬೇಡ, ಇವಾಗಲೆ ದೇಶದ ಒಳಿತಿಗೆ ಕೆಲಸ ಮಾಡ್ತಿರೋ ಯಾವುದಾದ್ರು ೧ ಸಂಘಕ್ಕೆ ಸೇರ್ಕೊಳ್ಳಿ. ಅಂದ್ರೆ ಅವರ ಬ್ಲಾಗ್/ವೆಬ್ ಸೈಟ್ ಬೇಟಿ ಮಡೋದಲ್ಲ,
    ನಿಮ್ಮ ಭಾವನೆಗಳ ಸರಿ ಹೊಂದೊ ಸಂಘವನ್ನು ಪರಿಶೀಲಿಸಿ ಅದರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ.

    ಮಾತಡೊದ್ರಿಂದ/ಬ್ಲಾಗ್ ಬರೆಯೊದ್ರಿಂದ ನಿಮ್ಮ ಹತಾಶೆಯನ್ನು ಹೊರಗೆ ಹಾಕ್ಬೊದೆ ಹೊರ್ತು ದೇಶಕ್ಕೆ/ಜನಕ್ಕೆ ಎನು ಉಪಯೋಗವಿಲ್ಲ.
    ನಿಮ್ಮ ಬ್ಲಾಗ್ ಅನ್ನು ಒಂದು ೧೦೦ ಜನ ಓದಿ, ಕಾಮೆಂಟ್ಸ್ ಬಿಟ್ಟು ತಮ್ಮ ಹತಾಶೆಯನ್ನು ಸಹ ಹೊರಗೆ ಹಾಕ್ತಾರೆ ಅಸ್ಟೆ.

    ಇವಾಗ ಬೇಕಾಗಿರೊದು ಆಕ್ಷನ್ ಮಾತ್ರ.

    ಎಲ್ಲರು ನಿಮ್ಮ ನಿಮ್ಮ ಬ್ಲಾಗ್ ಅಲ್ಲಿ ಪ್ರತಿವಾರ ನೀವು ಇದರ ಬಗ್ಗೆ ಎನು ಮಾಡಿದೆ ಅಂತ ಬರೆಯಿರಿ.
    ಉದಾಹರಣೆ:
    ೧. ನಾನು ೧೨/೧೦/೦೮ ರಂದು ಈ ಸಂಘ್ಹದ ಪದಾದಿಕಾರಿಯನ್ನು ಬೇಟಿ ಮಾಡಿದೆ,
    ೨. ನಾನು ಭಾನುವಾರ ‘ದೇಶದ ಉನ್ನತಿ’ ಚರ್ಚಾ ಕರ್ಯಕ್ರಮದಲ್ಲಿ ಭಾಗವಹಿಸಿದೆ.
    ೩. ನಾನು ಮುಂದಿನ ಬುಧವಾರ ೧ ಕರ್ಯಕ್ರಮ ಆಯೋಜಿಸಿದ್ದೇನೆ.

    ಬರೆಯೋದು ಸುಲಬ ಅಂತಿರಾ, ಎನಿಲ್ಲ ಇವಗಲೇ ನಿಮ್ಮ ಕುರ್ಚಿಯಿಂದ ಎದ್ದು ಒಬ್ಬರ ಜೊತೆ ಈ ಕಾಮೆಂಟ್ಸ್ ಬಗ್ಗೆ ಚರ್ಚಿಸಿ,

    ಧನ್ಯವಾದಗಳು

    Like

  55. ನೀಲಾಂಜಲ Says:

    ಪ್ರಿಯ ವೇಣು,
    ಬಹಳ ಚೆನ್ನಾಗಿ ಬರೆದಿದ್ದೀರಾ. ಇಷ್ಟವಾಯಿತು. ಈ ತರಹ ಹೇಳುವರಿದ್ದರೇನೆ ಮಾಡೋ ಕೆಲಸಕ್ಕೆ ಥ್ರಿಲ್ ಬರೋದು. ಮತ್ತೆ, ಮಾಡುತ್ತಿರುವ ಕೆಲಸವನ್ನು ಇನ್ನಷ್ಟು ಯೋಜಿತವಾಗಿ ರೂಪಿಸೋಕೆ ಕಾರಣವಾಗುವುದು.

    ನಿಜ, ಚಿಹ್ನೆಯಿಂದ ಏನು ಉಪಯೋಗವಿಲ್ಲ.
    ಮೊನ್ನೆ ಬಕ್ರೀದ್ ದಿನ ಹೆಚ್ಚಿನ ಮುಸ್ಲಿಮರು ಕಪ್ಪು ಪಟ್ಟಿ ಕಟ್ಟಿಕೊಂಡು ಮೊನ್ನೆ ನಡೆದ ಧಾಳಿಯನ್ನು ಖಂಡಿಸಿದರಲ್ಲ, ಅದರಿಂದ ಸಹ ಏನು ಉಪಯೋಗವಿಲ್ಲ, ಅಲ್ಲಾ ??!! ಬ್ಲಾಗ್ ಬರೆದು ಒಂದಿಷ್ಟು ಜನರನ್ನು ಒಳ್ಳೆಯ ಉದ್ದೇಶಕ್ಕಾಗಿ ಒಂದು ಮಾಡುವುದು ನಿಮ್ಮ ದೃಷ್ಟಿಯಲ್ಲಿ “ಆಕ್ಷನ್” ಆಗಿ ಕಂಡಿರಲಿಕ್ಕಿಲ್ಲ. ಇರಲಿ ಬಿಡಿ. ಹೆಚ್ಚಿನ ಜನರಿಗೆ ಕಣ್ಣಿಗೆ ರಾಚುವಂತಹ “ಆಕ್ಷನ್” ಬೇಕು. ನಮ್ಮ ಮೈಲ್ಡ್ ಡೋಸ್ ನಿಮಗೆ ಅರ್ಥವಾಗಿರಲಿಕ್ಕಿಲ್ಲ.

    ಇನ್ನೂ ನಿಮ್ಮ ತರಹವೇ ಯೋಚಿಸಿದರೆ, ತಮ್ಮ ಒಳಗಿನ ಹತಾಶೆಯನ್ನು ಹೊರಹಾಕುವುದಕ್ಕೆ ಈ ಬ್ಲಾಗ್ ದಾರಿ ಮಾಡಿಕೊಟ್ಟಿದ್ದರೆ ಅದಕ್ಕಿಂತ ಸಂತೋಷ ಬೇರೆ ಒಂದಿಲ್ಲ. ಇದು ಸಹ ಒಂದು “ಆಕ್ಷನ್”.
    ತಮ್ಮ ಹತಾಶೆಗಳನ್ನು ಹೊರ ಹಾಕಿ, ಈ ಆಂದೋಲನವನ್ನು ಬೆಂಬಲಿಸಿ ಅವರು ಪಡೆದು ಕೊಂಡಿರುವ ಉತ್ಸಾಹ, ಹುರುಪು ಇವುಗಳಿಗೆ ಏನನ್ನುವುದು ?

    ಈಗ ನಡೆಯುತ್ತಿರುವ ಸಮಾಜ ಘಾತುಕ ಕೆಲಸಗಳಿಗೆ ಇವರೇ ಕಾರಣ ಎಂದು ಎಲ್ಲರತ್ತ ಬೆಟ್ಟು ತೋರಿಸುತ್ತಾ ತಮ್ಮಷ್ಟಕ್ಕೆ ಜೀವಿಸದೆ, ನಮ್ಮ ನಮ್ಮ ಮಟ್ಟದಲ್ಲಿ ನಾವು ನಡೆಸಿರುವ ಈ ಚಿಕ್ಕ ಆಂದೋಲನವೂ ನಿಮ್ಮ ಕಣ್ಣಿಗೆ “ಆಕ್ಷನ್ ” ಆಗಿ ಕಾಣಲಿ ಎಂದು ಹಾರೈಸುತ್ತೇನೆ. ಹಾಗಾಗಲೂ ಎಲ್ಲರೂ ಇದನ್ನು ಹೊಸ ಕಣ್ಣುಗಳಿಂದ, ತೆರೆದ ಮನಸ್ಸಿನಿಂದ ನೋಡಲಿ ಎಂದು ಆಶಿಸುತ್ತೇನೆ. ಹಾಗೂ ಮುಂದೊಂದು ದಿನ ನೀವು ನಮ್ಮೊಟ್ಟಿಗೆ ಸೇರುತ್ತಿರಾ ಎಂದು ನಂಬುತ್ತೆನೆ.

    ಧನ್ಯವಾದಗಳು

    Like

  56. ನೀಲಾಂಜಲ Says:

    ವೇಣು, ಇನ್ನು ಕ್ಯೂಬಿಕ್ ಖುರ್ಚಿ!
    ಹ್ಹ ಹ್ಹ ಹ್ಹ, ಹೇಳೊ ಮೊದಲು ಸ್ವಲ್ಪ ನನ್ನ ಬಗ್ಗೆ ತಿಳಿದುಕೊಂಡಿದ್ದರೆ ಚೆನ್ನಾಗಿತ್ತು.
    ನಾನು ಗೃಹಿಣಿ. ನಾನು ಆಫೀಸಿನ ನೆಟ್ ಸೌಲಭ್ಯವನ್ನು ಸ್ವಂತಕ್ಕೆ ಉಪಯೋಗಿಸಿಕೊಳ್ಳುತ್ತಿಲ್ಲ.
    ನಾನು ಬ್ಲಾಗ್ ಮತ್ತು ನೆಟ್ ಅಡಿಕ್ಟ್. ಅದಕ್ಕಾಗೇ ಮನೆಯಲ್ಲಿ ಆನ್ ಲಿಮೆಟೆಡ್ ಇನ್ಟರ್ ನೆಟ್ ಹಾಕಿಕೊಂಡಿದ್ದೇನೆ.
    ಮತ್ತು ಬ್ಲಾಗ್ ಬರವಣಿಗೆ ನನ್ನ ” ಟೈಮ್ ಪಾಸ್ ” ಕೆಲಸ ಖಂಡಿತ ಅಲ್ಲ.
    ನಾನ್ಯಾಕೆ ಬರೆಯುತ್ತೇನೆ ಎನ್ನುವುದು ಬೇರೆ ವಿಷಯ. ಅದಿಲ್ಲಿ ಸಧ್ಯ ಬೇಡ. ಇನ್ನೊಮ್ಮೆ ಬರೆಯುತ್ತೇನೆ.

    ಹಾಗೂ ಬೇರೆ ಸಂಘಟನೆಗಳ ಬಗ್ಗೆ. ನನಗೆ ಇದರಲ್ಲಿ ತಿಳುವಳಿಕೆ ಕಮ್ಮಿ. ನಿಮ್ಮಿಂದ ಈ ವಿಷಯದಲ್ಲಿ ಸಹಾಯ ಆಗಬೇಕು. ನಿಮಗೆ ನಾನು ಮನೆಯಲ್ಲೇ ಕುಳಿತು ಕೆಲಸ ಮಾಡೋ ಯಾವುದಾದರೂ ಸಂಘಟನೆ ಗೊತ್ತಿದೆಯಾ? ನನ್ನ ಪರ್ಸ್‌ನಾಲ್ ಕೆಲಸಗಳನ್ನು ಮಾಡಿಕೊಂಡು, ಸಂಸಾರದ ಜವಾಬ್ದಾರಿ ನಿರ್ವಹಿಸಿಕೊಂಡು ಕೆಲಸ ಮಾಡುವ ಸಂಘಟನೆ. ಮತ್ತು ಅದು “ಯಾವುದೇ ಪಕ್ಷವನ್ನು, ಧರ್ಮವನ್ನು ವಿರೋಧಿಸಬಾರದು”. ಹಾಗೆನೆ ನಾನು ನಾಳೆ ಕೆಲಸಕ್ಕೆ ಸೇರಿದ ಮೇಲೆ ಕೆಲಸ ಮಾಡುವ ಕಂಪನಿಗೆ ಕರ್ತವ್ಯ ಲೋಪ ವಾಗದಂತೆಯೂ ಇರಬೇಕು. ನನ್ನದು ಅನಿಮೇಶನ್ ಫೀಲ್ಡ. ಇಲ್ಲಿ ದಿನಕ್ಕೆ ೨೪ ಘಂಟೆ ಅದರಲ್ಲಿ ಮುಳುಗಿಕೊಂಡಿದ್ದರೂ ಕಡಿಮೆನೆ. ಅಂತೂ -ಇಂತೂ ದಿನಕ್ಕೆ ಉಳಿಸುವ ೧೦ ನಿಮಿಷದಲ್ಲಿ ಈ ಸಂಘಟನೆಯ ಕೆಲಸ ಮಾಡಬಹುದಾ? ಇಡೀ ವಾರ ಕೆಲಸ ಮಾಡಿ ಮಾಡಿ ಸಾಕಾಗಿರುವ ನನಗೆ ಈ ಸಂಘಟನೆಯ ಮೀಟಿಂಗ್‌ನಲ್ಲಿ ಭಾಗವಹಿಸದೆಯೂ ಅದರಲ್ಲಿ ಕೆಲಸ ಮಾಡುವ ಅವಕಾಶ ಇದೆಯಾ? ಮತ್ತು ನಾನು ಭಾಗವಹಿಸುವ ಸಂಘಟನೆಯ ಕಾರ್ಯಕ್ರಮದಲ್ಲಿ ಭಾಷಣ ಗೀಷಣ ಇರಬಾರದು. ಎಲ್ಲರೂ ಖುಷಿಯಿನ್ದ ಪಾರ್ಟಿ ಮಾಡೋ ತರಹ ಇರಬೇಕು. ………………………………………………….ಇನ್ನೂ ಡಿಮಾನ್ಡ ಇದೆ. 😀

    ಉತ್ತರ ಇಲ್ಲ ಅಂದರೆ ನನ್ನಲ್ಲಿ ಬನ್ನಿ. ನಾನು ಅಂತ ಸಂಘಟನೆ ನಿಮಗೆ ತೋರಿಸುತ್ತೇನೆ.

    Like

  57. ನೀಲಾಂಜಲ Says:

    SP,
    ನಿಮ್ಮ ಮಾತನ್ನು ಖಂಡಿತ ಗಮನದಲ್ಲಿಟ್ಟುಕೊಳ್ಳುತ್ತೇನೆ.

    Like

  58. ನೀಲಾಂಜಲ Says:

    ಪ್ರತಿಸ್ಪಂದಿಸುತ್ತಿರುವ ಎಲ್ಲ ಬ್ಲಾಗಿಗರೇ,
    ನಿಮ್ಮ ಬೆಂಬಲಕ್ಕೆ ನೀಲಾಂಜಲ ಆಭಾರಿಯಾಗಿದೆ.
    thanx a lot

    Like

  59. sindhu Says:

    ನೀಲಾಂಜಲ,

    ನಿಮ್ಮ ಪ್ರಯತ್ನಕ್ಕೆ ನನ್ನ ಸಹಕಾರವಿದೆ. ಸಧ್ಯ ರಜೆಯಲ್ಲಿದ್ದೀನಿ ಹೆಚ್ಚಿನ ಓಡಾಟವಿಲ್ಲ. ನನ್ನ ದೈನಂದಿನ ಕೆಲಸಕಾರ್ಯಗಳಿಗೆ ಮರಳಿದ ಬಳಿಕ ನಿಮ್ಮ ಪ್ರಯತ್ನಗಳಲ್ಲಿ ಕೈಗೂಡಿಸಬಲ್ಲೆ. ನನ್ನ ಬ್ಲಾಗ್ ನ ಹಣೆಪಟ್ಟಿ ಬದಲಾಯಿಸಿದ್ದೇನೆ.

    ಪ್ರೀತಿಯ ನೇವರಿಕೆಯೊಂದೇ ಎಲ್ಲ ಸಂಕಟಗಳನ್ನ, ದ್ವೇಷಪೂರಿತ ಮನಸ್ಸನ್ನ, ಹಿಂಸೆಯನ್ನ ಸಮಾಧಾನಿಸಿ ಬದುಕನ್ನ ನಡೆಸುವುದು.

    ಪ್ರೀತಿಯಿಂದ
    ಸಿಂಧು

    Like

  60. irshad u t Says:

    wonderful yaro madodhu yarigo hesaru sayodhu mathra JANA SAMNYARU. Parihara navee horathu bere yaaru allla adhakke nanninda enagabeku heli namma sanghavu nimmodhige yawatthu edhe
    mail madi irsahdut@hotmail.com jai bharath

    Like

ನಿಮ್ಮ ಟಿಪ್ಪಣಿ ಬರೆಯಿರಿ