ಮಿರರ್ ಚಾ ಮತ್ತು ಬೂಸ್ಟು

ಇವತ್ತಿನ ಸ್ಪೇಷಲ್ಲು ಮುಂಬೈ ಮಿರರ್ ಚಾ ಮತ್ತು ಬೂಸ್ಟು !! ಹಾಗಾಂದ್ರೆ ಏನು ಅಂತೀರಾ? ಹ್ಹ ಹ್ಹ ಹ್ಹ. ಏನಾಯ್ತು ಅಂದ್ರೆ ಇವತ್ತು ಬೆಳಿಗ್ಗೆ ಚಾ ಕುದಿತಾ ಇರುವಾಗಲೇ ಅಡಿಗೆ ಗ್ಯಾಸ್ ಖಾಲಿ ಆಗಿ ಹೋಯ್ತುಬೇರೆ ಉಪಾಯ ಇಲ್ಲದೇ ಇರೋದರಿಂದ ನಾನು ಮತ್ತು ಸುನೀತಾ (ಭಾಯಿ) ಪ್ಪೆ ಮುಖದಿಂದ ಅದನ್ನೇ ಕುಡಿದ್ವಿ. ‘ ಭಾರತ್ಗೆ ಫೋನ್ ಮಾಡಿದ್ರೆ ಸಂಜೆ/ ನಾಳೆ ಬೆಳಿಗ್ಗೆ ಕಳಿಸ್ತೇನೆ ಎಂದು ನಾನು ಸ್ವಲ್ಪ ಅರ್ಜೆನ್ಟ ಅನ್ನೋದರ ಒಳಗೆ ಭೂಪ ಕಟ್ ಮಾಡಿ ಬಿಟ್ಟ. ಮನೆಗೆ ಮನೆಓನರ್ ಪೈಪ್ ಲೈನ್ ಗ್ಯಾಸ ಕನೆಕ್ಷನ್ ತಗೊಂಡಿಲ್ಲಜೊತೆಗೆ ಆಗ ಇಲ್ಲಿ ಹೊಸ ಸಿಲೆನ್ಡರ್ ಗ್ಯಾಸ್‌ಗೆ ಅಪ್ಲೈ ಮಾಡಿದಾಗ ಎರಡು ಸಿಲೆನ್ಡರ್ ಸಹ ಕೊಡ್ತಾ ಇರಲಿಲ್ಲ. 😦

ಮಧ್ಯಾಹ್ನ ಆಗೋ ಹೊತ್ತಿಗೆ ನನ್ನ ನಾಲಿಗೆ ಚಾ ಕುಡಿಲೇ ಬೇಕು ಅಂತ ಶುರು ಮಾಡಿತುಅದಕ್ಕೆ ಯಾವತ್ತೂ ಇಲ್ದೇ ಇರೋ ಅಷ್ಟು ಆಸೆ ಇವತ್ತಾಗಿತ್ತು. ಹೊರಗೆ ಉರಿಬಿಸಿಲಲ್ಲಿ ಹೋಗಿ ಪಾನಕದ ಟೇಸ್ಟಿನ ಚಾ ಕುಡಿಯೊಕೆ ಮನಸ್ಸಾಗಲಿಲ್ಲ. ಕರೆಂಟ್ ಬೇರೆ ಇರಲಿಲ್ಲ. ಇಲ್ಲಿ ರ್ ತಾಸು ಲೋಡ್ ಶೆಡ್ಡಿನ್ಗುಹಾಗಾಗಿ ಮಾಡಕೆ ಬೇರೆ ಏನು ಕೆಲಸ ಕಾಣ್ತಾ ಇರಲಿಲ್ಲ. ಅದಕ್ಕೆ ನಾನ್ಯಾಕೆ ಲೆ ಉರಿಸಬಾರದು ಅನ್ನೋ ಹೊಸ ಐಡಿಯಾ ತಲೆಗೆ ಹೊಳಿತು.

ಸೀದಾ ಎದ್ದು ಅಡಿಗೆ ಮನೆಗೆ ಹೋದೆ. ದೀಪಾವಳಿ ಆದ ಮೇಲೆ ತೆಗೆದಿಟ್ಟಿದ್ದ ಹಣತೆಗಳನ್ನೆಲ್ಲ ಹೊರಗೆ ತೆಗೆದೆ. ಕಿಟಕಿ ಹೊರಗಡೆ ಇಟ್ಟಿದ್ದ ಟೈಲ್ಸ್ ಪೀಸ್ ಎತ್ತುಕೊನ್ಡು ನೆಲದ ಮೇಲೆ ಇಟ್ಟೆ. ಅದರ ಮೇಲೆ ನಾಲ್ಕುನಾಲ್ಕು ಹಣತೆಗಳನ್ನ ಬೋರಲು ಮಲಗಿಸಿ ಸುಮಾರು ಮೂರು ಇಂಚು ಎತ್ತರದ ಮೂರು ಗುಪ್ಪೆ ಮಾಡಿದೆ. ಅದರ ಮೇಲೆ ಸಕ್ಕರೆ, ಚಾ ಪುಡಿ ಬೆರೆಸಿದ ಹಾಲು ಹಾಕಿದ ಚಿಕ್ಕ ಪಾತ್ರೆ ಇಟ್ಟೆ. ನನ್ನ ಮಿನಿ ಲೆ ತಯಾರಾಗಿತ್ತು. ಇನ್ನೂ ಲೆ ಉರಿಸಲು ರಟ್ಟಾಗಲಿ, ಮರದ ಚೂರಾಗಲಿ ಇಲ್ಲದ್ದರಿಂದ ಮುಂಬಯಿ ಮಿರರ್ರೇ ಗತಿ ಆಯಿತು. ಅದಕ್ಕೆ ಬೇರೆ ಸೀಮೆ ಎಣ್ಣೆ ವಾಸನೆ ಇದೆ ! ಪ್ರಿಂಟಿಂಗ್ ಇಂಕ್ ಗೆ ಏನು ಸೇರಿಸ್ತಾರೊ ಏನೋ. ಆದರೆ ಟೈಮ್ಸ್ ಅಲ್ವಾವ್ರು ಹಾಗೆಲ್ಲಾ ಕಡಿಮೆ ಬೆಲೆ ಇಂಕ್ ಉಪಯೋಗಿಸೋದು ಸುಳ್ಳು ಅನ್ನಿಸ್ತು. ಅವರತ್ತಿರ ಬೇರೆ ಕೋಸ್ಟಲಿ ಮೆಷೆನರೀಸ್ ಇರುತ್ತೆ. ಪ್ರಿಂಟಿಂಗ್ ಡ್ರಮ್ ಹೋಗುತ್ತಲ್ವಾ…….. ಆದ್ರೆ ನಾನ್ಯಾಕೆ ಚಿಂತೆ ಮಾಡಲಿ ನಂಗೆ ಚಾ ರೆಡಿ ಆದ್ರೆ ಸಾಕಾಗಿತ್ತು.

ಹಾಗಾಗಿ ಮಿರರ್ ನ್ನು ಪೀಸ್ ಪೀಸ್ ಮಾಡಿ ಒಂದೊಂದೇ ಚೂರನ್ನು ಲೆಯ ಒಳಗೆ ನೂಕಿ ಬೆಂಕಿಯಲ್ಲಿ ಅದ್ದುತ್ತಾ ಕುಳಿತುಕೊಂಡೆ. ಸಖತ್ ಆಗಿತ್ತುತುಂಬಾ ಮಜಾ ಬಂತು. ಒಂದತ್ತು ನಿಮಿಷದಲ್ಲಿ ಚಾ ಕುದಿಯೊಕೆ ಶುರುವಾಯ್ತು. ಆಹಾ!   ನಿನ್ನೆ ಅಷ್ಟೇ ಫ್ರೆಂಡ್ ಹತ್ತಿರ MSEZ ವಿರುದ್ದ ಮಾತಾಡಿದ್ದು ನೆನಪಿಗೆ ಬಂತು. ಬದುಕೋಕೆ ನಿಜವಾಗಿಯೂ economic development ಬೇಕೇ ಬೇಕಾಗಿಲ್ಲ. ನಾವು ನೆಲ ಕಾಣದೆ ಇರೋ ಹಾಗೆ ಬೆಳೆತಿದ್ದೀವಿ ಅನ್ನಿಸ್ತು. ಇಕೊ ಫ್ರೆಂಡ್ಲಿ ಮನೆಗಳು, ಯೊ ಡೀಸೆಲ್ಲುಕಾಡು ಮನುಷ್ಯರು ಎಲ್ಲ ನೆನಪಾಗ್ತಾ ಇತ್ತು. ಹೋಗಲಿ ಬಿಡಿ. ಮಿರರ್ ಚಾ ಹೈ ಕ್ಲಾಸ್ ಆಗಿತ್ತು. ಏನೋ ಹೊಸದು ಮಾಡಿದ ಥ್ರಿಲ್ ಇತ್ತು. ಕೆಂಡದಲ್ಲಿ ಸುಟ್ಟ ರೊಟ್ಟಿ ತುಂಬಾ ರುಚಿಯಂತೆ. ಹೌದಾ?

ಇನ್ನೂ ಗ್ಯಾಸ್ ಬಂದಿಲ್ಲ. ಅದಕ್ಕೆ ಮತ್ತೆ ಲೆ ಒಟ್ಟಿ ಮಿರರ್ ಸುಟ್ಟು ಹಾಲು ಕಾಯಿಸಿ ಬೂಸ್ಟ್ ಮಾಡಿ ಕುಡಿದು ಬರೀತಾ ಇದ್ದೀನಿ. ಫೋಟೋ ತೆಗೆಯೋಣ ಅಂದುಕೊಂಡೆ. ಲ್ಲಾದ್ರೂ ಇದು ಮನೆ ಓನರ್ ಕೈಗೆ ಸಿಕ್ಕಿದರೆ ! ಏನೋ educated ಅಂತ ಕೊಟ್ಟರೆ ಒಳ್ಳೇ uneducated ತರಹ ಮನೆ ಗೋಡೆ ಕಪ್ಪಗೆ ಮಾಡ್ತಿದ್ದೀರೇನ್ರಿ ಅಂತ ರೇಗಿದರೆ ? ಬೇಡಪ್ಪ ಬೇಡ. ಏನೋ ಒಂದ್ಸಲ ತರಲೆ ಐಡಿಯಾ ಬಂದು ಹಿಂಗೆ ಮಾಡಿದ್ದಕ್ಕೆ ಪರಮನೆಂಟ್ ಹಣೆ ಪಟ್ಟಿ ಪಡೆಯೊದಾ, ಅದಕ್ಕೆ ಹಾಗ್ತಿಲ್ಲ. ಜೊತೆಗೆ ಸಂಪ್ರದಾಯಸ್ಥರು ಚಿತ್ರ ನೋಡಿ, ದೀಪ ಹಚ್ಚೋ ಹಣತೆ ಉಪಯೋಗಿಸಿ ಯಾರಾದ್ರೂ ಬೆಂಕಿ ಹಚ್ಚತಾರಾ ಅಂತ ಹೀಗೆಳೆದರೆ? ರೇಜಿಗೆನೆ ಬೇಡರಿ. ಹಾಗೆನೆ ನೀವು ಸಹ ಇದನ್ನು ಯಾರಿಗೂ ಹೇಳಕೆ ಹೋಗ್ಬೇಡಿ. ಇದು ನಮ್ಮಿಬ್ಬರ ನಡುವಿನ ಗುಟ್ಟು, ಆಯ್ತಾ ?

11 Responses to “ಮಿರರ್ ಚಾ ಮತ್ತು ಬೂಸ್ಟು”

 1. ತವಿ ಶ್ರೀನಿವಾಸ Says:

  ಪವರ್ ಕಟ್ಟಾ? 😮 ಓಹ್! ಥಾಣೆಯಲ್ಲಿ ವಿದ್ಯುತ್ ಖೋತಾ ಇದೆಯಾ? ನನಗೆ ತಿಳಿದಿರಲೇ ಇಲ್ಲ

  ಕೆಂಡದಲ್ಲಿ ಸುಟ್ಟ ಹಪ್ಪಳ ಮತ್ತು ರೊಟ್ಟಿ ಬಹಳ ರುಚಿಯಾಗಿರುತ್ತದೆ. ಫುಲ್ಕಾ ರೋಟಿ ಅಂದ್ರೆ ನನಗೆ ಬಹಳ ಇಷ್ಟ

  Like

 2. skhalana Says:

  ಚೆನ್ನಾಗಿದೆ, ಚೆನ್ನಾಗಿದೆ 😀 ನನಗೆ ಒಂದು ಬೈಟು ಚಾ ಪ್ಲೀಸ್ 🙂 ಹಾ, ಮಿರರ್ ಇಲ್ಲದೇ ಹೋದ್ರೆ, ಬೇರೆ ಯಾವ ಪತ್ರಿಕೆದಾದ್ರೂ ನೆಡಿಯತ್ತೆ :p

  Like

 3. Avi Says:

  ಇದನ್ನು ಓದಿದ ಬಳಿಕ… ನಂಗೂ ಇಕೋ ಫ್ರೆಂಡ್ಲೀ ಮನೆಗಳು, ಬಯೋ ಡೀಸೆಲ್ಲು, ಕಾಡು ಮನುಷ್ಯರು ಜೊತೆ ಜೊತೆಗೇ… ನಾಡು ಮನುಷ್ಯರೂ ನೆನಪಾದ್ರು ಕಣ್ರೀ… 🙂

  ದಿನಾ ಬೆಳಗಾತ ಎದ್ರೆ ಭಯೋತ್ಪಾದನೆ, ಹಿಂಸೆ, ಅವ್ಯವಹಾರ ಮುಂತಾದವು ಪತ್ರಿಕೆಗಳಲ್ಲಿ ಕಾಣ್ತವೆ. ಹೀಗಾಗಿ “ಕೆಟ್ಟದ್ದನ್ನು ಸುಟ್ಟು ಬಿಡಿ” ಎಂಬ ಮಾತಿನಂತೆ ನೀವು ಕೂಡ ಮಿರರನ್ನು ಸುಟ್ಟು ಬಿಟ್ರೀ… 🙂

  Like

 4. ವಿಜಯರಾಜ್ ಕನ್ನಂತ Says:

  ondu mirror kadak chai please 🙂

  Like

 5. Tina Says:

  ನೀಲಾಂಜಲ,
  ಟೈಲ್ಸ್ , ಹಣತೆ & ಮಿರರ್ ಚಹಾ ಪುರಾಣ ನಗು ಬರಿಸಿತು. ನಾನೊಮ್ಮೆ ಹೀಗೆಯೆ ಕ್ಯಾಂಡಲ್ ಕಾಫಿ ಕುಡಿದದ್ದಿದೆ.
  ಬೆಂಗಳೂರಿಗೆ ಬನ್ನಿ, ಇಬ್ಬರೂ ಒಂದೊಂದ್ ಕಪ್ ಕುಡಿಯೋಣಂತೆ!!
  -ಟೀನಾ

  Like

 6. ಸುಶ್ರುತ Says:

  ನಂಗೂ ಒಂದು ಕಪ್ ಮಿರರ್ ಚಾಯ್ ಕುಡಿಸ್ತೀರಾ ಅಂತಾದ್ರೆ ಮಾತ್ರ ಯಾರಿಗೂ ಹೇಳಲ್ಲ..

  Like

 7. ಶೆಟ್ಟರು (Shettaru) Says:

  ಅಂತೂ ಟೈಮ್ಸ್ ಜೋತೆ ಬರುವ ಮೀರರನ ಒಳ್ಳೆಯ ಊಪಯೋಗ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು,

  ಪ್ರೀತಿಯಿರಲಿ

  ಶೆಟ್ಟರು

  Like

 8. RISHY Says:

  dear neela,
  Nice write up. I liked it very much. Keep writing.
  the concept of mirror tea itself is very interesting.

  Like

 9. ಗುರು ಬಾಳಿಗ Says:

  ಬೂಸ್ಟು ಅಂದಾಗ ಫಂಗಸ್ ಅಂದುಕೊಂಡೆ. ಹಾಗೆ ತಿಳಿದಾಗಲೂ ಅದೆಷ್ಟು ಫಂಗಸ್ ಹಿಡಿದಿದೆ ನಮ್ಮ ಬದುಕಿಗೆ. ಗ್ಯಾಸ್ ಮುಗಿಯಿತು ಅಂದರೆ ಪ್ಯಾನಿಕ್ ಆಗಿ ಉಸಿರು ನಿಂತಂತೆ ಚಡಪಡಿಸುವುದು ನಮ್ಮ ಅರಿವಿಗೆ ಹಿಡಿದ ಫಂಗಸ್ ಅಲ್ಲದೆ ಮತ್ತೇನು.
  ನಿಮ್ಮ ಬರಹ ಕತ್ತಿನ ಪಟ್ಟಿ ಹಿಡಿದು ಎಳೆದು ತಂದು ಸೀದಾ ಅರಿವಿನ ಧಾರೆಗೊಮ್ಮೆ ಒಡ್ಡಿ ಬಿಡುತ್ತದೆ.

  Like

 10. M G Harish Says:

  ನಾನು ಶಾಲೆಯಲ್ಲಿ scout ನಲ್ಲಿದ್ದಾಗ ಒಂದು ಬಾರಿ ಹೀಗೆ ಪೇಪರ್ ಉಪಯೋಗಿಸಿ ಪೇಪರ್ ಪಾತ್ರೆಯಲ್ಲಿ ಚಹಾ ತಯಾರಿಸಿದ್ವಿ..

  Like

 11. Shree Says:

  ಹಹ್ಹಹ್ಹಾ… necessity is the mother of invention! 😛

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: