ಹೀಗೊಂದು ತಪ್ಪು-ಸರಿ

ಎದುರುಗಡೆ ಮನೆ ಅಜ್ಜಿಯದು ಯಾವತ್ತೂ ಒಂದೇ ತಕರಾರು. ನೂಂದ್ರೆ ನಾನು ಅವರ ಮನೆಗೆ ಹೋಗಲ್ಲ ಅಂತ. ದಿನಕ್ಕೆ ಒಂದೈದೇ ನಿಮಿಷ ಆದ್ರೂ ಅವರ ಮನೆಗೆ ಹೋಗಿ ಮಾತನಾಡಿಸಿಕೊಂಡು ಬರಬೇಕಂತೆ. ನಂಗ್ಯಾಕೋ ………….. ಗೊತ್ತಿಲ್ಲ. ಅವರು ತಮಿಳು ಅಂತನಾ? ಎಂಬ ಗುಮಾನಿ ನನ್ನ ಬಗ್ಗೆನೇ ಇದೆ.

ಇವತ್ತು ಕೆಲಸದ ಭಾಯಿ ಹೇಳ್ತಾ ಇದ್ಲು, ಭಯ್ಯಾ ಲೋಗ್ ಖಾಲಿ ಲೋಟ ತಗೊಂಡು ಬರ್ತಾರೆ, ತುಂಬಿದ ಲೋಟ ತಗೊಂಡು ಹೋಗ್ತಾರೆ ಅಂತ. ಅವಳದ್ದು ಠಾಕರೆ ಪರ ವಕಾಲತ್ತು ನಡೆತಾ ಇತ್ತುಮುಂಬಯಿಯಲ್ಲಿ ಈಗ ಎಲ್ಲೊದ್ರೂ ಭಯ್ಯಾ ಲೋಗ್ ; ದೂದ್, ವಡಾಪಾವ್, ಪಾನಿ ಪುರಿ, ಬರ್ಫಿ, ರಿಕ್ಷಾ, ಟಾಕ್ಸಿ, ಕೂಲಿ,…….. ನಾವು (ಮರಾಠಿಗಳು) ದಿನಕ್ಕೆ ಎಂಟು ಗಂಟಾ ಕೆಲಸ ಮಾಡ್ತಿವಿ ಅಂದ್ರೆ ಇವರು ೧೨ ಗಂಟಾ ಮಾಡಿಕೊಡ್ತಿವಿ ಅಂತಾರೆ. ನಮಗಿಂತ ಪಚಾಸ್ ರೂಪೈ ಕಡಿಮೆಗೆ ಕೆಲಸ ಮಾಡಿಕೊಡ್ತಾರೆ. ನಮ್ಮ ಹೊಟ್ಟೆಗೆ ಹೊಡಿತಾರೆ…..

ನಂಗೆ ಅವಳ ಅಸಹನೆ ಅರ್ಥ ಆಗುತ್ತೆ. ಯಾಕಂದ್ರೆ ಬೆಂಗಳೂರಿನಲ್ಲಿ ಇರಬೇಕಾದರೆ ನಂಗೂ ಹೀಗೆ ಆಗ್ತಿತ್ತು. ಅಲ್ಲಿ ರಸ್ತೆಲಿ ಎದುರು ಹೋದರೆ ಒಬ್ಬ ತಮಿಳು, ಬಲಕ್ಕೆ ತೆಲುಗು, ಎಡಕ್ಕೆ ಚಿಂಕಿಸ್, ಹಿಂದೆ ಮಳೆಯಾಳಿಗಳು. ಹಳೆ ಆಫೀಸಿನಲ್ಲಿ ತಮಿಳು ಹಾಡು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿತ್ತು. ಇನ್ನೊಂದು ಹೊಸ ಆಫೀಸಿನಲ್ಲಿ ತಮಿಳು ಆಫೀಶೀಯಲ್ ಲಾಂಗ್ವೇಜುಟಿಎಲ್ಲೂಪಿಎಮ್ಮುಎಚ್ಚಾರ್ರೂ ಎಲ್ಲ ಜಯಲಲಿತಾಗಳೇ.

ಆಯಾಂ ಮಳೆಯಾಳಿ,….. ಹಾಡು ನಂಗೆ ತುಂಬಾ ಇಷ್ಟವಾಗಿತ್ತುಕ್ಯೂಬಿಕಲ್ ನಲ್ಲಿ ನನ್ನ ಹಿಂದೆ ಕೂತಿರುತ್ತಿದ್ದ ಮಳೆಯಾಳಿಗೆ ಹಾಡನ್ನು ಫಾರ್ ವರ್ಡ್ ಮಾಡಿ ವಿಚಿತ್ರ ಖುಷಿ ಪಟ್ಟಿದ್ದೆ. ಕ್ಯಾಬಿನಲ್ಲಿ ಜೊತೆಗೆ ಬರುತ್ತಿದ್ದ ಹೈದರಾಬಾದಿ ಜೊತೆ ಮಾಮೂಲು ವಾದ ನಡೆತಾನೆ ಇರುತ್ತಿತ್ತು. ಆತ ನಮ್ಮೂರ ಮುಂದೆ ನಿಮ್ಮೂರು ಏನೂ ಇಲ್ಲ ಅಂದಾಗಲೆಲ್ಲ ರೇಗಿ ಹೋಗುತ್ತಿತ್ತು. ನಿಮ್ಮ ಊರು ಅಷ್ಟು ಚೆಂದ ಇದ್ರೆ ನಿಮ್ಮ ಊರಿಗೆ ವಾಪಸ್ಸಾಗಿ, ನಿಮ್ಮಿಂಲೇ ಬೆಂಗಳೂರು ಹಾಳಾಗಿದ್ದು ಅಂತ ನಾನು, ನಮ್ಮಿಂಲೇ ಇದುಬ್ಯಾಂಗಲೂರ್ಆಗಿದ್ದು ಅಂತ ಅವನು.

ಹಾಗಂತ ಅವರ ಮೇಲೆ ನಂಗೆ ನಿಜವಾಗಿ ತಿರಸ್ಕಾರ ಇದೆ ಅಂತ ಅಲ್ಲ. ಅನ್ನ ಕೊಡೊ ಮಣ್ಣಿನ ಬಗ್ಗೆ ಅವರಿಗಿರೊ ಅಸಡ್ಡೆ ನಂಗೆ ಸಿಟ್ಟು ತರಿಸುತ್ತದೆ. ಬೆಂಗಳೂರೇ ಕರ್ನಾಟಕ ಅಂದುಕೊಂಡು ನಮ್ಮ ಬಗ್ಗೆ ಹಗುರವಾಗಿ ಮಾತನಾಡುವವರನ್ನ, ಕನ್ನಕ್ಕಿಂತ ತಮ್ಮ ಭಾಷೆನೆ ಮೇಲು ಎಂದು ಸಾಧಿಸೋರನ್ನೆಲ್ಲಾ ಕಟ್ಟಿ ಹಾಕಿ ಕಾವೇರಿ ಮಡೀಲಲ್ಲಿ ಎಸಿಬೇಕು ಅನ್ನಿಸ್ತಿತ್ತು.

ಅದಕ್ಕೆ ಏನೋ, ಇಲ್ಲಿ ಎಂಎನ್ಎಸ್ ರಾಜ್ ಠಾಕ್ರೆ ಮಾಡಿದ್ದು ತಪ್ಪು ಎಂದು ಬುದ್ಧಿ ಒಪ್ಪಿಕೊಂಡರೂ ಮನಸ್ಸು ಒಪ್ಪಿಕೊಳ್ಳುವುದಿಲ್ಲ.

8 Responses to “ಹೀಗೊಂದು ತಪ್ಪು-ಸರಿ”

 1. ತವಿ ಶ್ರೀನಿವಾಸ Says:

  ಚಿಂಕೀಸ್ ಎಂದರೇನು? ಯಾರವರು?

  ಹುಂ! ೧೯೭೦ರ ಸಮಯದಲ್ಲಿ, ಈಗಿನ ಭೈಯ್ಯಾಗಳ ಸ್ಥಿತಿ ಕನ್ನಡಿಗರದಾಗಿತ್ತು. ಮರಾಠಿಗರು ಹೀಯಾಳಿಸುತ್ತಿದ್ದರು. ಆದರೇನು, ಕನ್ನಡಿಗರು ಎಲ್ಲೇ ಹೋಗಲಿ, ಆ ಜಾಗದವರಾಗಿಬಿಡುವರು. ಅವರ ಸಂಸ್ಕೃತಿಯೊಂದಿಗೆ ಹಾಸು ಹೊಕ್ಕಾಗುವರು. 🙂

  Like

 2. skhalana Says:

  ನಾವು ಯಾವತ್ತಾದ್ರೂ ಒಂದ್ಸಲ ಕನ್ನಡ ಹಾಡು ಹಾಕ್ಕೊಂಡಿದ್ರೆ,

  “could you please reduce the volume, or use earphones”

  ಅಂತ ಹೇಳೊ ಜನ, ಅದೇ ತಮಿಳು, ತೆಲುಗು, ಹಿಂದಿ ಹಾಡುಗಳನ್ನು ಜೋರಾಗಿ ಹಾಕಿಕೊಂಡು,

  “ಪುದು songs download ಪಣ್ಣಿರಿಕ್ಕೆ. ವೇಣುಮಾ ?”,
  “ಹೇಮಿ ಪಾಟಲು, ಅಬ್ಬೋಯ್”,
  “ಕ್ಯಾ ಮಸ್ತ್ ಗಾನಾ ಹೈ ಯಾರ್”

  ಎಂದು ಹಾಡಿಗಿಂತ ಜೋರಾಗಿ ಕೂಗಾಡಿಕೊಂಡು ನಮ್ಮನ್ನೆ ನಮ್ಮ ಮನೆಯಲ್ಲಿ ಪರಕೀಯರನ್ನಾಗಿ ಮಾಡ್ತಾರೆ !

  ಈ ಸೀನ್ ಚೇಂಜ್ ಮಾಡೋಕೆ ನಮ್ಮ ಮಣ್ಣಿನಲ್ಲಿ ಯಾವ ಠಾಕ್ರೆ ಹುಟ್ಟಬೇಕೋ ಗೊತ್ತಿಲ್ಲ !

  Like

 3. ಶಿವು.ಕೆ Says:

  ನಮ್ಮ ನಾಡಿನ ಬಗ್ಗೆ ಭಾಷೆಯ ಬಗ್ಗೆ ನಿಮ್ಮ ಸ್ವಾಬಿಮಾನ ಮೆಚ್ಚುವಂತದ್ದು. ಹೀಗೆ ಬರೆಯುತ್ತಿರಿ. ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನ ಮತ್ತು ಫೋಟೊಗಳಿಗೆ ಕಾಮೆಂಟ್ ಮಾಡಿದ್ದಕ್ಕೆ thanks. ಮತ್ತೆ ಮತ್ತೆ ನನ್ನ ಬ್ಲಾಗಿಗೆ ಬರುತ್ತಿರಿ. ಹಾಗೂ ಉಳಿದ ಲೇಖನಗಳನ್ನು ಓದಿ..
  ಆಹಾಂ! ನನ್ನ ಹೊಸ ಲೇಖನ “ಸಂತೆ”ಯನ್ನು ಹಾಕಿದ್ದೇನೆ. ಬನ್ನಿ.

  ಮತ್ತು ನನ್ನ ಮತ್ತೊಂದು ವಿಭಿನ್ನ ಬರಹಗಳಿಗಾಗಿ ಬೇಟಿ ಕೊಡಿ;

  http://camerahindhe.blogspot.com

  Like

 4. ಪ್ರದೀಪ್ Says:

  ಹ್ಹ್ ಮ್…. ನೀವ್ ಹೇಳೋದೂ ನಿಜಾನೇ. ಆದರೆ, ಹಾಗಂತ ಪರಭಾಷಿಗರಿಲ್ಲಿ ಬರಬಾರದೆಂದರೆ, ಅದು ನಮ್ಮ ದೇಶದ ಐಕ್ಯತೆಗೆ ಹಾನಿಕಾರಕವಾಗಿ, ಮುಂದೆ ದೇಶ ಒಡೆಯಲೂ ಕಾರಣವಾಗಬಹುದು. ಇದರ ಬಗ್ಗೆ ಗಾಢವಾದ ಶೋಧನೆ, ಹಾಗೂ ಚಿಂತನೆಯ ಅಗತ್ಯವಿದೆ….. 😐 ಇದಕ್ಕಿಂತ ಬೇಜಾರಿನ ಸಂಗತಿಯೇನೆಂದರೆ, ನಮ್ಮ ಕನ್ನಡಿಗರಿಗೇ ಕನ್ನಡದ ಮೇಲಿರುವ ನಿರ್ಲಕ್ಷ್ಯ….

  Like

 5. prakash hegde Says:

  ಎಲ್ಲೊ ಒಂದುಕಡೆ ಸಮನ್ವಯ ಅಗಬೇಕು. ನಾವು ಬೆಂಗಳೂರಲ್ಲಿ ಮೊದಲು ಕನ್ನಡ ಮಾತನಾಡ ಬೇಕು. ನಮಾ ಭಾಷೆಯನ್ನು ಮಾತನಾಡುವದನ್ನು ರೂಢಿ ಮಾಡಿಕೊಳ್ಳಬೇಕು. ಎಮ್. ಜಿ.ರೋಡಿಗೆ ಹೋದಕೂಡಲೆ ಇಂಗ್ಲೀಷಿನಲ್ಲಿ ಮಾತು ಶುರುವಾಗಬಾರದು.. ಲೆಖನ ಸಮಯೋಚಿತವಾಗಿದೆ. ಧನ್ಯವಾದಗಳು.

  Like

 6. M G Harish Says:

  ನನಗೊಬ್ಬ ಟಿ.ಎಲ್. ನೀವ್ಯಾಕೆ ತೆಲುಗು ಕಲೀಬಾರ್ದು ಎಂದಿದ್ದಕ್ಕೆ ನನಗೆ ನಖಶಿಖಾಂತ ಉರಿದು ಹೋಗಿ, ತೆಲುಗು ಕಲಿತು ನನಗೇನೂ ಉಪಯೋಗವಿಲ್ಲ. ನಾನ್ಯಾಕೆ ಕಲೀಬೇಕು? ನೀವು ಕನ್ನಡ ಕಲಿಯಿರಿ, ಉಪಯೋಗಕ್ಕೆ ಬರುತ್ತೆ ಎಂದು ಮುಖಕ್ಕೆ ಹೊಡೆದ ಹಾಗೆ ಹೇಳಿದ್ದೆ

  Like

 7. Ganesh Says:

  ಭಾಷಾ ಸಾಮರಸ್ಯದ ಬಗೆಗೆ ಬೆಳಕು ಚೆಲ್ಲುವ, ಮೂಲ ನಿವಾಸಿ ಸಮಸ್ಯೆಗಳನ್ನ ಪ್ರತಿಬಿಂಬಿಸುವ ಲೇಖನ. ಸ್ವಾನುಭವ ನಿರೂಪಣೆ ಚೆನ್ನಾಗಿದೆ.

  ಗಣೇಶ್.ಕೆ

  Like

 8. ಸಂದೀಪ್ ಕಾಮತ್ Says:

  aaha ಈ ಹೆಡರ್ ಫೋಟೋನೂ ಚೆನ್ನಾಗಿದೆ!

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: