ಪಂಜರ

chinchi_in_his_hand

chinchi_in_his_hand

ಹೇಯ್ ನನಗೂ ಇಣಚಿ ಸಾಕಬೇಕು ಅಂತ ಒಬ್ಬಳು ಅಂದರೆ ಇನ್ನೊಬ್ಬ ನಾನು ಹೇಳಿಟ್ಟಿದ್ದೇನೆ, ಮೂರು ತಿಂಗಳೊಳಗೆ ಸಿಗುತ್ತದೆ, ಕೊಂಡುಕೊಳ್ಳುತ್ತೀನಿ ಅಂದ ! ಇವರಿಗೆಲ್ಲ ಏನು ಹೇಳುವುದೆಂದು ತಿಳಿಯುವುದಿಲ್ಲ. ಹೇಳಿದರು ಅರ್ಥವಾದಿತೆಂಬ ಭರವಸೆ ನನಗಿಲ್ಲ. ನನ್ನ ಮತ್ತು ಇಣಚಿಯ ಕತೆ ಕೇಳಿದವರೆಲ್ಲ ಪೇಪರ್ ಗೆ ಕೊಡು ಅಂದಿದ್ದರು. ಆದರೆ ನನಗೆ ಹೆದರಿಕೆ. ನಾ ಬರೆದದ್ದು ಓದಿ, ಇಣಚಿಯನ್ನು ಸಾಕುವ ಹಂಬಲ ಜನರಲ್ಲಿ ಹುಟ್ಟಿ, ಇಣಚಿಗಳು ಪಂಜರ ಸೇರಿದರೆಅಯ್ಯೋ……..!!

ನನಗೊ ಇಣಚಿ ದೊರೆತದ್ದು ಆಕಸ್ಮಿಕವಾಗಿಹೊರಗೆ ಒಗೆದು ಸಾಯಿಸಲು ಮನಸ್ಸಾಗದೇ ಇಂಟರ್ ನೆಟ್ ಓದಿ ಅದರ ಬಗ್ಗೆ ತಿಳಿದುಕೊಂಡು ಬೆಳೆಸಿದ್ದುಇಣಚಿಯ ಸಲುವಾಗೇ ಮನೆಯಲ್ಲಿ ಮಹಾಭಾರತವೇ ನಡೆದು ಹೋಗಿದ್ದು ಇನ್ನೊಂದು ದೊಡ್ಡ ಕತೆ. ಅದೀಗ ಇಲ್ಲಿ ಬೇಡ.

ಇಲ್ಲಿ ಆವಾಗಾವಾಗ ಹಕ್ಕಿಯೊಂದು ಕಿರುಚುವುದು ಕೇಳುತ್ತದೆ. ಏನೂಂತ ನೋಡಿದರೆ ಎದುರು ಮನೆಯ ಭೂಪರು ಇಷ್ಟು ಚಿಕ್ಕ ಗೂಡಿನಲ್ಲಿ ಅಷ್ಟು ದೊಡ್ಡ ಹಕ್ಕಿಯೊಂದನ್ನು ಕೂಡಿ ಹಾಕಿದ್ದಾರೆ. ಆಗಾಗೊಮ್ಮೆ ಬಂದು ಮಾತಾಡಿಸಲೆಂದು ಗೂಡನ್ನು ಅಲುಗಾಡಿಸುತ್ತಾರೆ. ಅದು ಭಯದಿಂದ ಕೂಗುತ್ತದೆ. ಇವರಿಗೆ ಹಕ್ಕಿ ತನ್ನ ಜೊಡಿ ಮಾತಾಡುತ್ತಿದೆಯೆಂಬ ಖುಷಿ. ಇನ್ನಷ್ಟು ಮಾತನಾಡಿಸುತ್ತಾರೆ. ಮತ್ತೆ ಅದು…….. ಏನು ಜನರೋ! ನನಗಂತೂ ಎಲಿಯನ್ ಬಂದು ಇವರ ಕುತ್ತಿಗೆಗೊಂದು ಸರಪಳಿ ಹಾಕಿ, ಬಾಯಿಯಲ್ಲಿ ಮೊಗುದಾರ ಹಾಕಿ ಎಳಕೊಂಡು ಹೋಗಲಿ ಅನ್ನಿಸುತ್ತಿದೆ.

ನಾನು ಚಿಂಚಿಯನ್ನು ಸಾಕಲು ಕಾರಣವಾಗಿದ್ದು ನನ್ನ ಕಸೀನ್ ಕಲೀಗ್ ಒತ್ತಾಸೆಯಿಂದಚಿಂಚಿ ಸಿಕ್ಕಾಗ ಅದಕ್ಕೆ ಏಳು ವಾರಗಳಷ್ಟೇ ಆಗಿದ್ದರಿಂದ ನಾಲ್ಕು ತಾಸಿಗೊಮ್ಮೆ ಇಂಜೇಕ್ಷನ್ ಟ್ಯೂಬಿನಿಂದ ಫೀಡ್ ಮಾಡಬೇಕಿತ್ತು. ಆತ ಆಫೀಸಿಗೆ ಹೋಗುತ್ತಿದ್ದರಿಂದ ಚಿಂಚಿಯನ್ನು ಸಾಕಲು ಆಸಕ್ತಿಯಿದ್ದರು ಪುರಸೊತ್ತು ಇರಲಿಲ್ಲ . ನಾನಾಗ ಈಗೀನ ತರಹವೇ ಕೆಲಸ ಬಿಟ್ಟು ಮನೆಯಲ್ಲಿದ್ದೆ. ಆದರೆ ನನಗೆ ಇದರಲ್ಲಿ ಅಂತಹ ಆಸಕ್ತಿಯಿರಲಿಲ್ಲ. PETA ಗೆ ಕೊಟ್ಟು ಬಿಡೋಣ, ಅವರು ನೋಡಿಕೊಳ್ಳುತ್ತಾರೆ ಎಂದಿದ್ದೆ. ಆತ PETAದಲ್ಲಿ ನಮ್ಮಷ್ಟು ಮುತುವರ್ಜಿಯಿಂದ ನೋಡಿಕೊಳ್ಳೊಲ್ಲ. ನಾನೊಂದು ಗಾಯವಾದ ಗೂಬೆಯನ್ನು ತೆಗೆದು ಕೊಂಡು ಹೋಗಿದ್ದೆ. ನನಗೆ ಅಲ್ಲಿ ಹೇಗೆ ಎಂದು ಗೊತ್ತು ಎಂದೆಲ್ಲ ಹೇಳಿ ಇಣಚಿ ಮೇಲೆ ಕನಿಕರ ಹುಟ್ಟುವ ಹಾಗೆ ಮಾಡಿಬಿಟ್ಟಿದ್ದ. ಚಿಂಚಿಗೆ ಬೇಕಾಗುವ ಇಂಜೇಕ್ಷನ್ ಟ್ಯೂಬ್ , ಸಿರಿಲಾಕ್ , ವಿಟಮಿನ್ ಸಿರೆಪ್ ಎಲ್ಲ ತಂದು ಕೊಟ್ಟು ನೀವಿಗ ಮನೆಯಲ್ಲಿರುವುದರಿಂದ ಸಧ್ಯ ನೋಡಿಕೊಳ್ಳಿ, ಆಮೇಲೆ ನಾನು ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿದ್ದ.

ಆದರೆ ಚಿಂಚಿ ದೊಡ್ಡದಾದ ಮೇಲೆ ನಾನೇ ಅವನಿಗೆ ಕೊಡಲಿಲ್ಲ.   ವಿಷಯ ಬಂದ ಕೂಡಲೇ ಮಾತನ್ನು ಬೇರೆ ಕಡೆ ತಿರುಗಿಸುತ್ತಿದ್ದೆ. ಯಾಕೆಂದರೆ ಆತ ಬಂದು ತಾನೊಂದು ದೊಡ್ಡ ಗೂಡು ಕಟ್ಟಿಸುತ್ತೇನೆ, ದಿನಕ್ಕೊಮ್ಮೆ ಹೊರಗೆ ಬಿಡ್ತೆನೆ, ಗೂಡು ಇಷ್ಟು ದೊಡ್ಡದಿರಲೋ ಅಥವಾ ಅಷ್ಟು ದೊಡ್ಡದಿರಲೋ ಎಂದೆಲ್ಲಾ ಕೇಳುತ್ತಿದ್ದ. ಆಗೆಲ್ಲ ನನಗೆ ವಿಚಿತ್ರ ಸಂಕಟವಾಗುತಿತ್ತುಆತ ಚಿಂಚಿಗೆ ಹೊಟ್ಟೆ ತುಂಬಾ ಕೊಡುತ್ತಾನೆ. ಪ್ರೀತಿಯಿಂದಲೂ ನೋಡಿಕೊಳ್ಳುತ್ತಾನೆ. ಆದರೆ…………ಇಷ್ಟು ದಿನ ಇಡೀ ಮನೆಯಲೆಲ್ಲ ಓಡಾಡಿಕೊಂಡಿದ್ದ ಚಿಂಚಿಯನ್ನು ಹೇಗೆ ಮೂರಡಿ ಆರಡಿ ಒಳಗೆ ತಳ್ಳುವುದು ಎಂದು ಚಿಂತೆಯಾಗುತಿತ್ತು. ಹಾಗಂತ ಇದನ್ನು ಆರೈಕೆ ಮಾಡುತ್ತಾ ಕೂತರೆ ನನ್ನ ಕೆಲಸದ ಗತಿಯೇನುಆಗಾಗಲೇ ಚಿಂಚಿ ಮನೆಯಲ್ಲಿದ್ದರೆ ತಾನು ಇರುವುದಿಲ್ಲವೆಂದು ನನ್ನ ಮನೆಮೇಟ್ ಹೊಸ ಮನೆಗೆ ಹಾರಿದ್ದಳು. ಒಂದೇ ಸಲ ಇಡೀ ಬಾಡಿಗೆ ನನ್ನ ತಲೆ ಮೇಲೆ ಬಿದ್ದಿತ್ತು. ಇಟ್ಟ ಹಣ ಆಗಾಗಲೇ ಕರಗುತ್ತ ಬಂದಿತ್ತುಮತ್ತೊಮ್ಮೆ ಕೆಲಸ ಸೇರುವ ಜರೂರತ್ತಿತ್ತು. ಮನೆಯಿಂದ, ಪಕ್ಕದ ಮನೆಯಿಂದ ಒಂದೇ ಸಮನೆ ಕಿರಿಕಿರಿ, ಫಸ್ಟ್ ಅದನ್ನು ತೆಗೆದು ಹೊರಗೆ ಬೀಸಾಡು ಎಂದು…………….. ಕೊನೆಗೆ ಏನಾದರಾಗಲಿ ನಾನೇ ಇದನ್ನು ಳಿಸಿಕೊಳ್ಳುವುದು ಎಂದು ನಿರ್ಧಾರ ಮಾಡಿಬಿಟ್ಟೆ.

ಚಿಂಚಿ, ಉಳಿದವ ಕಣ್ಣಿನಲ್ಲಿ ಒಂದು ಕ್ಷುಲ್ಲಕ ಜೀವಿ. ನನಗೆ ಅದು ಸ್ವಾತಂತ್ರದ ನೈಸರ್ಗಿಕ ಪ್ರತೀಕ. ನಾನು ಎಲ್ಲ ರೀತಿಯ ಬಂಧನಗಳನ್ನು ಧಿಕ್ಕರಿಸುವುದರಿಂದ, ಇದನ್ನು ಹೇಗೆ ಪಂಜರಕ್ಕೆ ಒಪ್ಪಿಸುತ್ತಿದ್ದೆ ?

6 Responses to “ಪಂಜರ”

 1. ವೈಶಾಲಿ Says:

  WAh! header ನ ಫೋಟೋ ಸೂಪರ್!

  Like

 2. Tina Says:

  ನೀಲಾಂಜಲ,
  ಮುದ್ದಾಗಿದೆ ನಿಮ್ಮ ಚಿಂಚಿ. ನನ್ಕಡೇಯಿಂದ ಒಂದು ಪುಟ್ಟ ಕಿಸ್ಸಿ ಕೊಟ್ಟುಬಿಡಿ ಅದಕ್ಕೆ. ನಿಮ್ಮ ಮಾತುಗಳು ಓದಲಿಕ್ಕೆ ಹಿತ ಕೊಡುತ್ತವೆ, ನೇರ ಅನ್ನಿಸ್ತವೆ.
  -ಟೀನಾ.

  Like

 3. ನೀಲಾಂಜಲ Says:

  ವೈಶಾಲಿ n Tina, thanx 🙂

  Tina, ಚಿಂಚಿಗೆ ನಿಮ್ಮ ಕಿಸ್ಸಿಯನ್ನು ಅಷ್ಟೇ ಪ್ರೀತಿಯಿನ್ದ ಗಾಳಿಯಲ್ಲಿ ಹಾರಿ ಬಿಟ್ಟಿದ್ದೇನೆ. ಅದಿನ್ನೂ ಬದುಕಿದ್ದರೆ ಅದಕ್ಕೆ ಹೋಗಿ ತಲುಪಬಹುದು! ಹೌದು, ಇದೆಲ್ಲ ಎರಡು ವರ್ಷದ ಹಿಂದಿನ ಕತೆ. ಚಿಂಚಿ ನನಗೆ ನೆನಪಾದಗಳೆಲ್ಲ ಇವತ್ತಿನ ದಿನಕ್ಕೆ ಹೊಂದಿಸಿ ಬರೆತಾ ಇದ್ದೀನಿ.ಇಬ್ಬರು ಆರು ತಿಂಗಳು ಒಟ್ಟಿಗೆ ಕಳೆದ್ದಿದ್ವಿ. ಹೊರಗಿನ ಪರಿಸರಕ್ಕೆ ಹೊಂದಿಕೊಂಡಾದ ಮೇಲೆ ಒಂದು ದಿನ ಅದು ಹಾಗೆ ಹೊರಟು ಹೋಯಿತು ಅಥವಾ ಹೋಗಲೇಬೇಕಿತ್ತು. ಪ್ರಕೃತಿಯ ಕರೆ ! ಈಗ ಬರೀ ಅದರ ಫೋಟೋ ಮಾತ್ರ ಇದೆ 🙂
  “ಆ ದಿನಗಳು, ಪ್ರತಿ, ಕ್ಷಣ, ಹೃದಯದೊಳಗೆ……….”

  Like

 4. skhalana Says:

  ಮರದ ಮೇಲೆ ಕಾಗೆ -ಕಾ ಕಾ
  ನೆಲದ ಮೇಲೆ “ಚಿಂಚಿ” -ಚೀ ಚೀ

  matte as usual ಇಂಟರ್ ನೆಟ್ ನಲ್ಲಿ ಸೌಪಿ – ಪೀ ಪೀ

  ಹ್ಹ..ಹ್ಹಾ 🙂

  Like

 5. ಪ್ರದೀಪ್ Says:

  ಒಳ್ಳೆಯದೇ ಆಯ್ತು ಬಿಡಿ.. ಇಣಚಿಗೊಂದು ಮನೆ ಸಿಕ್ತು! ನನ್ನ ಸಹೋದರನ (couzin) ಮನೆಯಲ್ಲೂ ಒಂದು ಇಣಚಿ ಮರಿ ಇತ್ತು. ಚಿಕ್ಕಪ್ಪನಿಗೆ ಹೇಗೋ ತೋಟದಲ್ಲಿ ಸಿಕ್ಕಿತ್ತು. ಆದ್ರೆ ದೊಡ್ಡದಾದ ಮೇಲೆ ಅದು ಮನೆ ಬಿಟ್ಟು ಹೋಯ್ತು. ನಮ್ಮ ಮನೆಯಲ್ಲಿ ಬೆಕ್ಕು ಮರಿ ಹಾಕಿ, ಈಗ ಆ ಬೆಕ್ಕು, ಅದರ ಮರಿಗಳು, ಮರಿಗಳ ಮರಿಗಳು ಬಂದು ಬೆಕ್ಕಿನ ಸಂತೆಯಾಗಿದೆ! 😀 ಆದರೆ ಅವುಗಳನ್ನು ಓಡಿಸಲು ಮನಸ್ಸು ಒಪ್ಪುವುದಿಲ್ಲ…..

  Like

 6. M G Harish Says:

  ಇಣಚಿ ಮುದ್ದಾಗಿದೆ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: