ಮಂತ್ರ ಕೇಳುತ್ತಿದ್ದಂತೆ ನಿಜವಾಗಿಯೂ ನನ್ನ ಬ್ರಾಹ್ಮಣತ್ವದ ಬಗ್ಗೆ ಎಲ್ಲಿಲ್ಲದ ಹೆಮ್ಮೆ ಬಂದು ಬಿಡುತ್ತದೆ.
ಎಲ್ಲೇ ಪೂಜೆಗೆ ಹೋದರೂ ಅಲ್ಲಿನ ಕ್ರಮ ನೋಡಿ ಮತ್ತೆ ನಮ್ಮಲ್ಲಿಯ ಪೂಜೆ ನೆನಪಿಗೆ ಬರುತ್ತದೆ.
ಹಬ್ಬಕ್ಕೆಂದು ಎದುರಿಗಿನ ಮನೆಯವರು ಬಾಟಲ್ ಎತ್ತುವಾಗ ಪಾಪ–ಪುಣ್ಯ ನೆನಪಾಗುತ್ತದೆ.
ದೇವಸ್ಥಾನದಲ್ಲಿ ಸಹ ಭೋಜನದಲ್ಲಿ ಕುಂತಾಗ ಅಕ್ಕಪಕ್ಕದವರು ಊಟಮಾಡುವ
ರೀತಿ ನೋಡಿದಾಗ ಸಂಸ್ಕಾರದ ಬಗ್ಗೆ ಇನ್ನಿಲ್ಲದ ಮಹತ್ವ ಬಂದು ಬಿಡುತ್ತದೆ.
………………. ಯಾಕೆ ಹೀಗೆ ?
‘ಬಾಂಬ್ರು‘ ಎಂದು ಓನರ್ ಅಜ್ಜಿ ವಯಸ್ಸಲ್ಲಿ ಸಣ್ಣವಳಾದ ನಂಗೆ ನಮಸ್ಕರಿಸಿದ್ದು ಮಜುಗುರ ತರಿಸುತ್ತದೆ.
ಊರಲ್ಲಿ ಕೆಲಸದವರು ನಾನು ಅವರತ್ತಿರ ಸುಳಿದಂತೆಲ್ಲ ಮಾರು ದೂರ ಸರಿಯುವುದು ಜೀರ್ಣವೇ ಆಗುವುದಿಲ್ಲ.
ಅಕ್ಟೋಬರ್ 29, 2008 ರಲ್ಲಿ 9:31 ಅಪರಾಹ್ನ |
ಬರೀ ಹೆಡ್ಡಿಂಗು ಬರೆದು ಹಾಗೇ ಜಾರ್ಕೊಂಡು ಬಿಟ್ಟಿದ್ದೀರಲ್ಲ ಮೇಡಂ. ಕಂಟಿನ್ಯೂ ಮಾಡಿ
LikeLike
ಅಕ್ಟೋಬರ್ 30, 2008 ರಲ್ಲಿ 3:34 ಅಪರಾಹ್ನ |
ಹುಷಾರ್! ಹಾಗೆಲ್ಲ ಹೇಳಿಕೊಂಡರೆ ನಿಮ್ಮನ್ನು ‘ಕಪ್ಪು ಪಟ್ಟಿ’ಗೆ ಸೇರಿಸಿಬಿಡುತ್ತಾರೆ!!
LikeLike
ಅಕ್ಟೋಬರ್ 30, 2008 ರಲ್ಲಿ 6:29 ಅಪರಾಹ್ನ |
ಹಬ್ಬಕ್ಕೆಂದು ಎದುರಿಗಿನ ಮನೆಯವರು ಬಾಟಲ್ ಎತ್ತುವಾಗ —
ಇದರ ಅರ್ಥ ಆಗಲಿಲ್ಲ 😦
ಜಾತಿ ಮತ ಭೇದಗಳನ್ನು ನಾವು ಮಾಡಿಕೊಂಡಿರುವುದಷ್ಟೇ!
ವೇದೋಪನಿಷತ್ತುಗಳ ಉಗಮಕ್ಕೆ ಕಾರಣ ಆದವರೆಲ್ಲರೂ ಬ್ರಾಹ್ಮಣರು ಎನ್ನುವಿರಾ? ಹಾಗೆ ನೋಡಿದರೆ, ಬ್ರಾಹ್ಮಣ ಎಂಬುದೊಂದು ಜಾತಿಯಾ? ನಡವಳಿಕೆಯ ಹಾದಿಯಾ?
LikeLike
ಅಕ್ಟೋಬರ್ 30, 2008 ರಲ್ಲಿ 7:02 ಅಪರಾಹ್ನ |
ಹಬ್ಬದ ದಿನ ಬಾಟಲ್ ಎತ್ತೋದಾ ಛಿ ಛಿ !!!
.
.
.
.
.
ಗ್ಲಾಸ್ ಉಪಯೋಗಿಸ್ಬೇಕಲ್ವ:(
LikeLike
ಅಕ್ಟೋಬರ್ 30, 2008 ರಲ್ಲಿ 7:12 ಅಪರಾಹ್ನ |
ತವಿಶ್ರೀ ,
MSc ,Phd ಲೆಕ್ಚರರ್ ಆಗಿರೋ ದಲಿತನೂ ಬ್ರಾಹ್ಮಣ.
BSc ಓದಿ ಕಿಂಗ್ ಫಿಶರ್ ಏರ್ಲೈನ್ಸ್ ನಲ್ಲಿ ಬೇರೆಯವರ ಎಂಜಲು ಎತ್ತುತ್ತಿರೋ ಬ್ರಾಹ್ಮಣನೂ ಶೂದ್ರ!
ಎಂಜಲು ಎತ್ತೋದು ತಪ್ಪು ಅಂತ ನಾನು ಹೇಳ್ತಾ ಇಲ್ಲ! profession ಅಂತ ಒಂದಿರುತ್ತಲ್ಲ ಅದಿಕ್ಕೆ ಹೆಸ್ರು ಅಷ್ಟೆ.
ನೀವು ಮನೆಯಲ್ಲಿ ಅಡಿಗೆ ಮಾಡ್ತೀರಾ ಹಾಗಂತ ನೀವು ಅಡಿಗೆ ಭಟ್ಟ ಅಲ್ಲ.
ನೀವು ಮನೆಯಲ್ಲಿ ಬಟ್ಟೆ ಒಗೀತೀರಾ ಅದ್ರೂ ನೀವು ಅಗಸ ಅನ್ನಿಸಿಕೊಳ್ಳಲ್ಲ!
ಹಾಗೆ ಆನುವಂಶೀಯವಾಗಿ ಎರಡೆಳೆ ಜನಿವಾರ ಬಂದುಬಿಟ್ರೆ ನಾವು ಖಂಡಿತವಾಗೂ ಬ್ರಾಹ್ಮಣರಲ್ಲ.
ಸೌಪರ್ಣಿಕ ಸಾರಿ ನಿಮಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ಯಾಕೋ ಉತ್ತರಿಸದೇ ಇರೋಕಾಗಿಲ್ಲ:(
LikeLike
ಅಕ್ಟೋಬರ್ 31, 2008 ರಲ್ಲಿ 5:01 ಅಪರಾಹ್ನ |
ಕಾಮತರೇ, ಜನಿವಾರ ಎರಡೆಳೆಯಲ್ಲ ಮೂರೆಳೆ 😀
ಮುಂದೆ ಅದು ಆರೆಳೆಯೂ ಆಗುವುದು, ಒಂಭತ್ತೆಳೆಯೂ ಆಗುವುದು 🙂
ನನ್ನ ಅನಿಸಿಕೆಯನ್ನು ನೀವು ಸರಿಯಾಗಿ ಅರ್ಥೈಸಲಿಲ್ಲ ಎಂದೆನಿಸುತ್ತಿದೆ – ಶರೀಫರಲ್ಲಿ ಬ್ರಾಹ್ಮಣಿಕೆ ಕಾಣುವುದಿಲ್ಲವೇ – ಕನಕದಾಸರಲ್ಲಿ ಬ್ರಾಹ್ಮಣಿಕೆ ಕಾಣುವುದಿಲ್ಲವೇ – ಬ್ರಾಹ್ಮಣಿಕೆ ಜಾತಿಯಾಗಬಾರದು, ನಡವಳಿಕೆಯಾಗಬೇಕು
ಇದರ ಬಗ್ಗೆ ನಾನೊಂದು ಅಂಚೆಯನ್ನು ನಿಮಗೆ ಕಳುಹಿಸಿ – ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೆ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
LikeLike
ನವೆಂಬರ್ 1, 2008 ರಲ್ಲಿ 3:47 ಅಪರಾಹ್ನ |
ಜಾತಿಯೆಂಬುದು ಅಲುಗಿನಂತೆ. ಮಾತನಾಡಿದರೂ ಕೊಯ್ಯುವುದು ಮಾತನಾಡದಿದ್ದರೂ ಕೊಯ್ಯುವುದು. ಜಾತಿಯ ಬಗ್ಗೆ ಮಾತನಾಡುವಾಗ ಅದು ಹೆಮ್ಮೆಯನ್ನು ಉಂಟು ಮಾಡದೆ, ನಮ್ಮ ಅಹಂಕಾರವನ್ನು ಹೆಚ್ಚಿಸದೇ ಎಚ್ಚರವನ್ನು (awareness) ಉಂಟುಮಾಡಬೇಕು.
LikeLike
ನವೆಂಬರ್ 3, 2008 ರಲ್ಲಿ 9:22 ಫೂರ್ವಾಹ್ನ |
ತವಿಶ್ರೀ ,
ಜನಿವಾರ ಹಾಕೋದೇ ಮರೆತದ್ದರಿಂದ ಅದು ಎಷ್ಟೆಳೆ ಅನ್ನೋದೆ ಮರೆತು ಹೋಯ್ತು:).
ಬಾಳಿಗರು ಹೇಳಿದ್ದು ಖಂಡಿತಾ ಸರಿ.
LikeLike
ನವೆಂಬರ್ 5, 2008 ರಲ್ಲಿ 11:49 ಫೂರ್ವಾಹ್ನ |
ಜನ್ಮನಾ ಜಾಯತೇ ಶೂದ್ರಃ ಸಂಸ್ಕಾರಾತ್ ದ್ವಿಜ ಉಚ್ಯತೇ | ಎಂದು ಶ್ರುತಿ ವಾಕ್ಯವಿದೆ. ಹುಟ್ಟಿನಿಂದ ಎಲ್ಲರೂ ಹೀನರೇ ಕಾಮತ ರು ಹೇಳಿದಂತೆ ಓದಿ ಬ್ರಾಹ್ಮಣನಾಗು ಎಂದು ಹಿರಿಯರು ಹೇಳಿದ್ದಾರೆ. ಜಾತಿಯೆಂಬುದು ವ್ಯವಹಾರದ ನೀತಿಯ ದ್ಯೋತಕ. ಜಾತಿಯೇ ಇಲ್ಲ ಎಂಬ ಸರ್ಕಾರವೇ ಅರ್ಜಿ ಫಾರಂ ನಲ್ಲಿ ಖಂಡಿತ ಮೂರು ಕಾಲಂಗಳನ್ನು ಭರ್ತಿಮಾಡದಿದ್ದರೆ ಸ್ವೀಕರಿಸುವುದಿಲ್ಲ. ಅದರದರ/ಅವರವರ ಕಾರ್ಯಶೈಲಿಗನುಗುಣವಾಗಿ ವ್ಯತ್ಯಾಸ ಇದ್ದೇ ಇದೆ.
LikeLike
ನವೆಂಬರ್ 5, 2008 ರಲ್ಲಿ 12:46 ಅಪರಾಹ್ನ |
ಶ್ರೀಕಾಂತ ಹೆಗಡೆ n ಸಂದೀಪ್ ,
ಕ್ಷಮಿಸಿ. ನಿಮ್ಮ ಕಾಮೆಂಟ್ ಗಳಿಗೆ ಕತ್ತರಿಯಾಡಿಸಿದ್ದೇನೆ. ನೀವುಗಳು ನೀಡಿದ ಉದಾಹರಣೆ ನೀಲಾಂಜಲದ ವ್ಯಾಪ್ತಿಯನ್ನು ಮೀರಿವೆ.
ಮೇಲಿನದು ಸಹಜವಾದ ಪ್ರಶ್ನೆ. ಯಾರನ್ನು ಮೇಲೆಂದು/ಕೆಳಗೆಂದು ವಿಂಗಡಿಸಿ ನೋಯಿಸಲೆನ್ದು ಬರೆದದ್ದಲ್ಲ.
LikeLike