ನವರಾತ್ರಿ ರಜೆ

ಸಲ ಸಿಕ್ಕಿ ಬೀಳದಿರುವುದು ಹೇಗೆ ಅಂತ ಯೋಚನೆ ಮಾಡ್ತಾ ಇದ್ದೀನಿ. ಹಿಂದಿನ ಸಲ ಕೆಲಸದ ನೆವ ಹೇಳಿ ಕೊನೆಯ ಮೂರು ದಿವಸಗಳು ಮಾತ್ರ ಹಾಜರಿ ಹಾಕಿದ್ದೆ. ಆದರೆ ಸಲ ಆಫೀಸ್ ಬಿಟ್ಟು ಮನೇಲಿ ಮಾತ್ರ ಕೆಲಸ ಮಾಡ್ತಾ ಇರೋದರಿಂದ ಏನು ಹೇಳುವ ಹಾಗಿಲ್ಲ. ಹತ್ತೂ ದಿವಸಗಳು ಅಲ್ಲಿ ಹಾಜರಿರಲೇಬೇಕು. ಮನೆಯ ಚೌಕಾಟ್ಟಿನ ಒಳಗೆ ನನ್ನ ಬಂಡಾಯದ, ಸಮಾನತೆಯನಾಸ್ತಿಕವಾದದ ಯೋಚನೆಗಳಿಗೆ ಪ್ರವೇಶವಿಲ್ಲ. ಹಿಂದಿನ ಸಲ ಹೋದಾಗ ದೊಡ್ಡವರ ಜೊತೆ ಮಾತಾಡುವುದನ್ನೇ ತಪ್ಪಿಸಿಕೊಂಡು ಚಿಕ್ಕ ಮಕ್ಕಳ ಜೊತೆ ಆಟವಾಡುತ್ತಾ ಕಳೆದಿದ್ದೆ. ಆದರೆ ಸಲ ಜಾಸ್ತಿ ದಿನ ಅಲ್ಲಿರುತ್ತಿರುವುದರಿಂದ ನನಗೆ ದಿಗಿಲಾಗುತ್ತಿದೆ. ನನ್ನ ನಿಜ ಬಣ್ಣ ಬಯಲಾದರೆ ಏನು ಗತಿ ಅಂತ. ಅಲ್ಲಿ ಹೋದ ಕೂಡಲೇ ಹಣೆಗೆ ಟಿಕ್ಲಿ, ಬೈತಲೆಗೆ ಕುಂಕುಮ, ಮುಡಿ ತುಂಬಾ ಮಲ್ಲಿಗೆ, ಉದ್ದ ಜಡೆಕಾಲ್ಬೆರಳುಗಳಿಗೆ ಉಂಗುರಕಾಲ್ಗೇಜ್ಜೆಮೈ ತುಂಬಾ ಸೆರಗು ಹೊದ್ದು ಥೇಟ್ ಮಡಿವಂತರ ತರಹವೇ ಕಾಣುತ್ತೇನೆ. ಯಾರು ನಿಜ ಹೇಳಿದರು ನಂಬಲಾರರು. ನನ್ನ ಮುಖವೇ ಹಾಗಿದೆಯಂತೆ. ಗೌರಮ್ಮನ ತರಹ. ಎಲ್ಲರೂ ಮೋಸ ಹೋಗುವರೆ. ಪಾಪ, ನನ್ನ ಕಸೀನ್ ಬಾಬ್ಪಾಪ್, ಜೀನ್ಸ್ ಎಂದರೂ ಅವಳ ಬೈತಲೆಯಲ್ಲಿ ಉದ್ದನೆಯ ಕುಂಕುಮ ಎದ್ದು ಕಾಣುತ್ತೆ. ಅವಳು ಎಷ್ಟು ಸಂಪ್ರದಾಯವಾದಿಯಾದರೂ ಯಾರು ಅವಳ ಹೊರವೇಷವನ್ನು ನೋಡಿ ಹಾಗಂತ ನಂಬುವುದೇ ಇಲ್ಲ.

ಮನೆಯಲ್ಲಿ ಅಚ್ಚರಿ ಹುಟ್ಟಿಸಿದ ಚಿಂತನೆಗೆ ಹತ್ತಿಸಿದ ಹಲವಾರು ವಿಷಯಗಳಿವೆ. ಈಗ ಬರೆಯಲು ಕೂತರೆ ತಡವಾಗುತ್ತದೆ. ಬೆಳಿಗ್ಗೆ ಬೇಗನೆ ಹೊರಡಬೇಕು. ಇನ್ನೇನಿದ್ದರೂ ಅಲ್ಲಿಂದ ಬಂದ ಮೇಲೆ. ಅಲ್ಲಿಯ ತನಕ ಕೆಲ ಕಾಲ ಎಲ್ಲರ ಕಣ್ಣುಗಳಿಗೂ ಕಪ್ಪು ಬಣ್ಣದಿಂದ ಮತ್ತು ಸಣ್ಣ ಅಕ್ಷರಗಳಿಂದ ವಿಶ್ರಾಂತಿ. ಅಲ್ಲಿಯ ಫೋನ್ ಸರಿ ಇದ್ದರೆ ಇಲ್ಲಿ ಬಂದು ಇಣುಕಿ ಹೋಗಬಹುದು. ಅದೇನೊ ಆಗಿ ಹೋಗುವ ವಿಷಯವೆಂದು ಈಗ ತೋರುವುದಿಲ್ಲ. ಬರುವರೆಗೆ ನೀಲಾಂಜಲ ಕುಮಾರಧಾರೆ ಹಾಗೆ ಪಾತ್ರ ಬದಲಿಸದಿದ್ದರೆ ಮತ್ತೆ ಸೀಗೊಣ. ಬ್ಲಾಗಿಸೋ ಚಾಳಿ ಅಷ್ಟು ಬೇಗ ನನ್ನ ಬಿಡುವ ತರಹ ಇಲ್ಲನೋಡೊಣ.

ಎಲ್ಲರಿಗೂ ನವರಾತ್ರಿಯ ಹಾರ್ದಿಕ ಶುಭ ಕಾಮನೆಗಳು.

9 Responses to “ನವರಾತ್ರಿ ರಜೆ”

 1. ಸಂದೀಪ್ ಕಾಮತ್ Says:

  ಫೋಟೋ ಮೇಲೆ ಕನ್ನಡದಲ್ಲಿ ಹೇಗೆ ಬರೆಯೋದು ಹೇಳಿ ಕೊಡ್ರಿ ನಂಗೆ!

  Like

 2. gurubaliga Says:

  ಸೇತುವೆ ಕಟ್ಟಲು ಹೋಗ್ಬೇಡಿ. ಆ ಮನೆಯವರು ಅಲ್ಲೇ ಇರಲಿ ನೀವಿಲ್ಲೇ ಇರಿ. ಮತ್ತೆ ಕುಂಟಿನಿಯ ಕುಮಾರಧಾರೆಯಾಗುವುದು ಬೇಡ.

  Like

 3. ಸುಶ್ರುತ Says:

  🙂 ಹೋಗ್ಬಾ ಒಳ್ಳೇದಾಗ್ಲಿ. ವಾಪಸ್ ಬಂದು ಏನಾಥು ಹೇಳು. ಜಾಣೆ.

  Like

 4. vijayraj Says:

  paatra badalaavaNe sahajaavaagi tannintaane aadare tondre illa. Setuve kaTTalu hOgi paatra badalaagodaadre… paatra badalaagade irali

  Like

 5. ಸಂದೀಪ್ ಕಾಮತ್ Says:

  ಸೌಪರ್ಣಿಕಾ ಈದ್ ಮುಬಾರಕ್ 🙂

  Like

 6. ಜೋಮನ್ Says:

  ಬ್ಲಾಗಿಸೋ ಚಾಳಿ ಮುಂದುವರೆಯಲಿ… ಚೆಂದದ ಬರಹ

  Like

 7. neelanjala Says:

  ಸಂದೀಪ್ , ಫೋಟೋ ಮೇಲೆ ಕನ್ನಡದಲ್ಲಿ ಬರೆಯೋದು – photoshop or any photo editing software.

  guru, ಸುಶ್ರುತ, vijay, ಜೋಮನ್ ಎಲ್ಲರಿಗೂ ದೊಡ್ಡ ಸ್ಮಾಯಿಲ್ಲೂ 😀 , ರಜೆ ಮುಗಿದಿದೆ

  Like

 8. skhalana Says:

  ನಿಮ್ಮ ಬರಹ ತುಂಬಾ ಚೆನ್ನಾಗಿದೆ, ಮುಂದುವರೆಸಿ

  Like

 9. Parisarapremi Says:

  ಎಲ್ಲರೊಳಗೊಂದಾಗು ಮಂಕುತಿಮ್ಮ ಅನ್ನೋ ಥರ… 🙂

  ಚೆನ್ನಾಗಿದೆ ಬರಹ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: