ಪ್ರವಾದಿ

ನನಗೆ ಯಾವಾಗಲೂ ಕುರಾನ್ ನಲ್ಲಿ ಅಲ್ಲಾಹುವನ್ನು ನಂಬದಿರುವ ಜನರನ್ನು ಕೊಲ್ಲಬೇಕು ಅನ್ನುವುದಿದೆ ಅಂದರೆ ನಂಬಲಿಕ್ಕಾಗುವುದಿಲ್ಲ. ಅನ್ಯಧರ್ಮಿಯರನ್ನು ಕಂಡರೇ ನನ್ನ ಸ್ನೇಹಿತರ ತರಹ ಮೈ ಉರಿಯುವುದಿಲ್ಲ. ಅವರ ಬಗೆಗಿನ ಕುತೂಹಲ ಹೆಚ್ಚುತ್ತದೆ. ಎಷ್ಟೋ ಸಲ ಸ್ನೇಹಿತರು ನೀನು ಅವರ ಪರ ವಾದ ಮಾಡುವ ಬದಲು ಮುಸ್ಲಿಮ್ / ಕ್ರಿಶ್ಚಿಯನ್ ಆಗಿ ಬಿಡು ಎಂದು ಸಿಟ್ಟಲ್ಲಿ ಬಯ್ಯುತ್ತಿರುತ್ತಾರೆ. ಯಾಕೋ , ನಾನು ಹುಟ್ಟಿನಿಂದ ಬ್ರಾಹ್ಮಣನಾಗಿದ್ದಕ್ಕೋ ಇಲ್ಲಾ ವೇದ, ವಿಜ್ಞಾನ, ದೇವರು, ಅದ್ಯಾತ್ಮ ಇವೆಲ್ಲರೆಡೆಗಿನ ಜಿಜ್ಞಾಸೆಯನ್ನು ಕೇಳುತ್ತ ಬೆಳೆದಿದ್ದಕ್ಕೋ ನನ್ನಲ್ಲಿ ಸಾವಿರ ಪ್ರಶ್ನೆಗಳು. ನನ್ನ ಬಂಡಾಯ ನೋಡಿ ಹೆದರಿ (ಉತ್ತರಿಸಕ್ಕಾಗದೆ ) ನನ್ನಮ್ಮ ನನ್ನ ಮೇಲಿನ ಆಸೆಯನ್ನೇ ಬಿಟ್ಟಿದ್ದರು ! ಕಾಲದಲ್ಲೇ ನಾನು ಮೂರು ಕಿರು ಪುಸ್ತಕಗಳನ್ನು ಓದಿದ್ದು. ಅದಾದ ಮೇಲೆ ಎಲ್ಲ ಧರ್ಮಗಳು ಹೇಳುವುದು ಒಂದೇ ಎನ್ನುವುದು ಏಷ್ಟು ಸತ್ಯ ಅನಿಸಿತು. ಮುಂದೆ sociology ಲಿ ಹಿಂದೂ ಧರ್ಮದ ಮೇಲೆ ಅಧ್ಯಯನ ಮಾಡಿದಾಗ ನಾನೊಬ್ಬ ಹಿಂದೂ ಎನ್ನುವುದರ ಬಗ್ಗೆ ಅದೆಷ್ಟು ಹೆಮ್ಮೆ ಪಟ್ಟೆ. ತನಕ ಯಾರೂ ಅಷ್ಟು ಸರಳಿಕೃತವಾಗಿ ಸನಾತನ ಧರ್ಮದ ಬಗ್ಗೆ ತಿಳಿಸಿ ಹೇಳಿರಲಿಲ್ಲ. ಗಾಂಧಿ ಬಗ್ಗೆ (ಸರ್ವೋದಯ) ಅಚ್ಚರಿ ಹುಟ್ಟಿದ್ದು ಹೊತ್ತಲ್ಲೇ. ನಾನು ಅಲ್ಲೂ ಇದ್ದೇನೆ. ಇಲ್ಲೂ ಇದ್ದೇನೆ. ಎಲ್ಲೆಲ್ಲಿಯೂ ಇದ್ದೇನೆ. ಹೀಗೆ ಇದ್ದು ಇಲ್ಲವಾಗಿದ್ದೇನೆ. ಇಲ್ಲವಾಗಿಯೂ ಇದ್ದೇನೆ ಎಂದೆಲ್ಲ ಅನ್ನಿಸಿದ್ದು ಆಗಲೇ. ಪುಟ್ಟ ಪುಸ್ತಕ( Thus Spake, Prophet Muhammad)ವನ್ನು ಸಂಗ್ರಹಿಸಿದ್ದು ಡಾ. ಎಂ. ಹಫೀಜ್ ಸೈಯದ್. ಪ್ರಕಟನೆ ರಾಮಕೃಷ್ಣ ಮಠ, ಮೈಸೂರು. ಸಂಗ್ರಹಕಾರರು ಅಲ್ಲಹಾಬಾದ್ ಯೂನಿವರ್ಸಿಟಿಯವರು. ಪರ್ಶಿಯನ್ ಮತ್ತು ಅರೇಬೀಕ್ ಭಾಷೆಗಳಲ್ಲಿ ಇದ್ದದ್ದನ್ನು ಭಾಷಾಂತರ ಮಾಡಿದ್ದಾರೆ.

ಅದರ ಕೆಲ ವಾಕ್ಯಗಳು ಇಲ್ಲಿವೆ ;

-A perfect Muslim is he from whose tongue and hands mankind is safe, and a Muhajir is he who flees from what god has forbidden

-The most excellent jihad is that for the conquest of self

-Keep yourselves far from envy; because it eats up and takes away good actions as fire eats up and burns wood

– I found this inscribed on the hilt of the Prophet’s sword; ‘ Forgive him who wrongs you; join him who cuts you off; do good to him who does evil to you, and speak the truth although it be against yourself’

-It is unworthy of a Mu’min to injure people’s reputations; and it is unworthy to abuse any one; and it is unworthy of a Mu’min to talk vainly

(ಇನ್ನೂ ಇದೆ. ಯಾರಿಗಾದರೂ ಆಸಕ್ತಿ ಇದ್ದರೆ ಪುಸ್ತಕ ಕೊನ್ಡು ಓದಿ. ಕೇವಲ ಮೂರು ರೂಪಾಯಿ )

ಶಾಲೆಗಳಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಬರೆಸುವ ಬದಲು ಎಲ್ಲ ಧರ್ಮದ ಪ್ರವಾದಿಗಳ, ಸಂತರ ಹಿತವಚನಗಳನ್ನು ಬರೆಸಿದ್ದರೆ ಎಷ್ಟು ಚೆನ್ನಾಗಿತ್ತು. ರಾಮಕೃಷ್ಣ, ವಿವೇಕಾನಂದ, ಮೊಹಮದ್, ಕ್ರಿಸ್ತ, ಗುರುನಾನಕ್ ಹೀಗೆ. ಸರ್ವ ಧರ್ಮೀಯ ಪಾಠಗಳು ಇದ್ದಿದ್ದರೆ ?

3 Responses to “ಪ್ರವಾದಿ”

 1. ಸಂದೀಪ್ ಕಾಮತ್ Says:

  ಸರ್ವ ಧರ್ಮೀಯ ಪಾಠಗಳು ನಾವಷ್ಟೇ ಓದ್ಬೇಕು!ಅವರು as usual Jesus is only solution ಅಂತಾರೆ.ಇನ್ನೊಬ್ರು ಸಿಕ್ಕ ಸಿಕ್ಕಲ್ಲೆಲ್ಲಾ ಬಾಂಬ್ ಹಾಕಿ ನಮ್ಮನ್ನು ಖಾಲಿ ಮಾಡ್ತಾರೆ.

  ಬದುಕಿಗೆ ಹತ್ತಿರವಾಗಿರೋದನು ಓದಿ ನೀಲ.
  ನಮ್ಮ ಅಪ್ಪ ಅಮ್ಮ ಹೇಳಿದ ಸಿದ್ಧಾಂತಗಳನ್ನು corporate ಜಗತ್ತಿನಲ್ಲಿ implement ಮಾಡೋಕೆ ಹೊರಟ್ರೆ ನಿಮ್ಮ ಪ್ರಾಡಕ್ಟ್ ನಿಮ್ಮ ಕಂಪೆನಿ ಬಿಟ್ಟು ಯಾವತ್ತೂ ಹೊರ ಬೀಳಲು ಸಾಧ್ಯ ಇಲ್ಲ!
  Money can only buy a bed not sleep ಅಂತ power point ನಲ್ಲಿ ಓದಿ ಅಲ್ಲೇ ಮರೆತು ಬಿಡಬೇಕು,ಅದನ್ನೇ ಗಟ್ಟಿಯಾಗಿ ಹಿಡ್ಕೊಂಡು ಆಮೇಲೆ appraisal time ನಲ್ಲಿ ’ಅಯ್ಯೋ ನಂಗೆ ಬರೀ 5% hike ಕೊಟ್ಟಿದ್ದಾರಪ್ಪ ’ ಅಂತ ಅಳಬಾರದು.

  Like

 2. neelanjala Says:

  ಸರ್ವ ಧರ್ಮೀಯ ಪಾಠಗಳು ಇದ್ದಿದ್ದರೆ ಎಲ್ಲ ಧರ್ಮೀಯರ ಮನಸ್ಸಿನಲ್ಲಿ ಅಡಗಿ ಕೊಂಡಿರುವ ದ್ವೇಷ, ತಿರಸ್ಕಾರ ಕಡಿಮೆಯಾಗಿ ಪರಸ್ಪರ ಗೌರವ ಹುಟ್ಟುತಿತ್ತೇನೊ ಎನ್ನುವ ಕನಸು ನನ್ನದು.

  ಸಂದೀಪ್ , ಬದುಕಿಗೆ ಮೇಲಿನದ್ದು ಹತ್ತಿರವಾಗಿಲ್ಲವೇ ?
  ಮುಸ್ಲಿಮ್ ಎಂದಿದ್ದಲ್ಲಿ ಮಾನವ ಎಂದು ಓದಿ ಕೊಳ್ಳಿ. ಜಿಹಾದ್ ಬದಲು ಜೀವನ ಎಂದು ಕೊಳ್ಳಿ. ಅರ್ಥವೇನೂ ಬದಲಾಗುವುದಿಲ್ಲ.

  ಅಪ್ಪ ಅಮ್ಮ ಹೇಳಿದ ಸಿದ್ಧಾಂತ ಅಂದರೇನು ?

  Money can only buy a bed not sleep – ಸರಿಯಾಗೇ ಇದೆಯಲ್ಲಾ, ಯಾಕೆ ಮರೆತು ಬಿಡಬೇಕು?
  ದುಡ್ಡು ಬೇಕೆನ್ದಲ್ಲಿ ನಿದ್ದೆ ಬಿಟ್ಟು ಜಾಸ್ತಿ ಕೆಲಸ ಮಾಡಬೇಕು ಅಥವಾ ದುಡ್ಡಿನ ಹಿಂದೆ ಹೋದರೆ ಮನಸ್ಸಿನ ನೆಮ್ಮದಿ ಕಳೆದು ಹೋದೀತು. ಹೀಗೆಂದು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ??

  ನೀವು ಎಷ್ಟು ದಿನ ಅಂತ ಹೀಗೆ ತಲೆ ಕೆಳಗಾಗಿ ನಿಂತಿರುತ್ತೀರಾ? 😉

  Like

 3. ಸಂದೀಪ್ ಕಾಮತ್ Says:

  Once again ನನ್ನ ವಿಚಾರಧಾರೆಗಳು ಬೇರೆ ,ಬಹುಶ: ಅದನ್ನು ನಿಮ್ಮ ಮೇೆ ಹೇರೋದಕ್ಕೆ ಟ್ರೈ ಮಾಡಿದೆ !
  Sorry !

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: