ಮಹಾ ಆತ್ಮ -೩

ನಾನು ಗಾಂಧಿ ಬಗ್ಗೆ ಬರೆಯುತ್ತಿದ್ದೇನೆ ಎಂದು ಹೇಳಿದ ತಕ್ಷಣದ ಪ್ರತಿಕ್ರಿಯೆ,ಅವರು ತಮ್ಮ ಸಂಯಮ ಪರೀಕ್ಷೀಸಲು ಹುಡುಗಿಯರೊಂದಿಗೆ ಮಲಗಿದ್ದು ಗೊತ್ತಾ ? ನನಗೆ ಮೊನ್ನೆ ಮೊನ್ನೆಯವರೆಗೆ ಗೊತ್ತಿರಲಿಲ್ಲ. ಏನೂಂದ್ರೆ ಗಾಂಧಿ ನಗ್ನರಾಗಿ ಅವರ ಜೊತೆ ಮಲಗಿದ್ದರು ಎಂದು. ನನಗೆ ತಲೆಗೆ ಹೊಡೆದ ಹಾಗೆ ಆಯಿತು. ಅಜ್ಜನ ವಿಚಾರಗಳ ಕುರಿತು ಹೇಳುತ್ತಿದ್ದಾಗ ಅವರ ಖಾಸಗಿ ಬದುಕನ್ನು ಯಾಕೆ ಎತ್ತಿ ಹಿಡಿಯುತ್ತಾರೆ ಅಂತ ನನಗೆ ಯಾವಾಗಲೂ ಗೊತ್ತಾಗುವುದಿಲ್ಲ. ಇದೊಂದೇ ಸಲ ಅಲ್ಲ. ನಾನು ಅಜ್ಜನ ಬಗ್ಗೆ ಮಾತನಾಡುತ್ತಿರುವಾಗ ತರಹದ ವಿಷಯಗಳು ಮಧ್ಯ ಇಣುಕುತ್ತವೆ. ಅಥವಾ ಇವು ನನ್ನ ಗಾಂಧಿ ಪ್ರೀತಿಯನ್ನು ಮುಗಿಸಲು ಮಾಡುವ ಪ್ರಹಾರವೇ ಎಂದೆಲ್ಲ ಯೋಚಿಸಿದ್ದೇನೆ. ನನಗೆ ಅವಳ ಬಗ್ಗೆ ಅನುಕಂಪವಾಯಿತು. ನೀನು ಗಾಂಧಿ ಓದಿದ್ದಿಯಾ ಎಂದು ಕೇಳಿದೆ. ಹಾಗಾದಲ್ಲಿ ಮೊದಲು ನೀನು ಓದು. ಆಮೇಲೆ ಮಾತಾಡೋಣ ಅಂದೇ. ಮರುದಿನ ನಾ ಬರೆದಿದ್ದ ಓದಿ ಮಾತಾಡಲೇ ಇಲ್ಲ. ಅವಳಿಗದು ಹೊಸ ವಿಷಯವಂತೆ. ಯಾವುದು ಸತ್ಯ ಎಂಬ ಗೊಂದಲ ನನಗೆ ಈಗ ಬೇಡ ಎಂದು log off ಅಂದಳು . ಖರೆ, ನಾನು ಅವಳು ಓದಿದ ಸಾವರ್ಕರ್/RSS ಓದಿಲ್ಲ. ಆದರೆ ಸಾವರ್ಕರ ಯಾಕೆ ಗಾಂಧಿಯನ್ನು ತೆಗಳ್ತಾರೆ ? ಕೇವಲ ವಿಚಾರ ಧರ್ಮದಲ್ಲಿ ಭಿನ್ನತೆ ಇದ್ದ ಮಾತ್ರಕ್ಕೆ ? ನಾನು ಒಪ್ಪುವುದಿಲ್ಲ ( ಓದುವ ತನಕ). ಉನ್ನತ ವಿಚಾರಗಳಿರುವ ಮಂದಿ ( ಬುದ್ಧಿ ಜೀವಿಗಳು) ತಮ್ಮ ತಮ್ಮಲ್ಲೇ ದೋಷಾರೋಪಣೆ ಮಾಡಬಹುದು. ಅಂದ ಮಾತ್ರಕ್ಕೆ ಅದು ದ್ವೇಷದಿಂದ ಅಂತಲ್ಲ. ಅವರಷ್ಟು ವಿಚಾರದಲ್ಲಿ ಪ್ರಭುದ್ದರಾದಾಗ ಅವರು ಯಾಕೆ ಹಾಗೆ ಹೇಳಿದ್ದು ಎಂದು ಅರ್ಥವಾಗಬಹುದು. ಬಹು ಸಮಯದಲ್ಲಿ ಅನರ್ಥಗಳಾದದ್ದೇ ಹೆಚ್ಚು.

ಆಕೆ ಕೇಳಿದ್ದು ಭಗತ್ ಸಿಂಗ್ ನನ್ನು ನೇಣಿಗೆ ಏರಿಸಬೇಕೆಂದಿದ್ದಾಗ ಗಾಂಧಿ ಯಾಕೆ ಅವನ ಪರವಾಗಿ ಸತ್ಯಾಗ್ರಹ ಮಾಡಲಿಲ್ಲ ಎಂದು. ನನಗೆ ತರ್ಕವೇ ಸಮಂಜಸವಾಗಿ ತೋರುವುದಿಲ್ಲ. ಗಾಂಧಿ ಅಜ್ಜನದು ಅಹಿಂಸಾವಾದ. ಅದನ್ನು ಸಾಧಿಸಲು ಇರುವ ಒಂದು ದಾರಿ ಸತ್ಯಾಗ್ರಹ. ಹಿಂಸೆಯನ್ನು ಅವರು ಯಾವ ಕಾರಣಕ್ಕಾಗಿ ಒಪ್ಪಬೇಕು ಹಾಗೂ ಬೆಂಬಲ ಕೊಡಬೆಕ್ಕೀತ್ತೆಂದು ಈಗೀನ ಜನ ಕೇಳುತ್ತಾರೋ ಗೊತ್ತಾಗುವುದಿಲ್ಲ. ಹಿಂಸೆಯಿಂದ ಕ್ರಾಂತಿ ಮಾಡಲು ಹೊರಟವರಿಗೆ ಬೆಂಬಲ ಕೊಟ್ಟಿದ್ದರೆ ಇಡೀ ಜೀವನದುದ್ದಕ್ಕೂ ಮಾಡುತ್ತಿದ್ದ ಹೋರಾಟಕ್ಕೆ ಅರ್ಥವಿರುತ್ತಿತ್ತೇ ? ಭಗತ್ ಸಿಂಗರ ಬೆಂಬಲಿಗರಿಗೆ ಗಾಂಧಿ ಮೇಲಿರುವಷ್ಟು ಕೋಪ, ದ್ವೇಷ ಸ್ವತಹ ಭಗತ್ ಸಿಂಗರಿಗೆ ಇರಲಿಲ್ಲವೇನೊ. ನನಗೆ ಗಾಂಧಿ ಅಜ್ಜನಷ್ಟೇ ಪ್ರೀತಿ ಭಗತ್ ಸಿಂಗರ ಮೇಲೂ ಇದೆ. ಅವರ ಬಂಡಾಯಕ್ಕೆ, ಶೌರ್ಯಕ್ಕೆ, ಸ್ವಾತಂತ್ರ್ಯ ಪ್ರೇಮಕ್ಕೆ ನನ್ನದೊಂದು ಸಲಾಂ ಇದ್ದೇ ಇರುತ್ತದೆ

7 Responses to “ಮಹಾ ಆತ್ಮ -೩”

 1. gurubaliga Says:

  ಗಾಂಧೀಜಿ ತಮ್ಮ ಎಂದಿನ ಪ್ರಾರ್ಥನಾ ಸಭೆಯಲ್ಲಿ ತಾವು ಲೈಂಗಿಕ ನಿಗ್ರಹ ಸಾಧಿಸಿದ್ದನ್ನು (ಹುಡುಗಿಯರ ನಡುವೆ ಬೆತ್ತಲೆ ಮಲಗಿ) ಹೇಳಿದಾಗ ಅಲ್ಲಿ ನೆರೆದ ಗಾಂಧಿವಾದಿಗಳು ಕೂಡ “ಅದೊಂದು” ಬೇಡ ಇತ್ತು ಅಂದರಂತೆ ಅವರವರಲ್ಲೇ. ಗಾಂಧೀ ಅದನ್ನೊಂದು ಖಾಸಗಿ ವಿಷಯ ಅಂತ ಮಾಡಲಿಲ್ಲ. ಅದು ಗಟ್ಸು!

  Like

 2. ಸಂದೀಪ್ ಕಾಮತ್ Says:

  ನೀವು ಯಾವತ್ತೂ ಸುಳ್ಳು ಹೇಳಿಲ್ವ?
  ಇನ್ನು ಮುಂದೆ ಯಾವತ್ತಾದ್ರೂ ಸುಳ್ಳು ಹೇಳುವ ಇರಾದೆ ಇಲ್ವ? ಇಲ್ಲ ಅಂದ್ರೆ ನಿಮ್ಮ ಗಾಂಧಿ ವಿಚಾರಧಾರ್ಗೆ ಶುಭವಾಗಲಿ.

  folloe ಮಾಡೋದಾದ್ರೆ ಪೂರ್ತಿಯಾಗಿ ಮಾಡ್ರಿ ,ಅದು ಬಿಟ್ಟು ಈ ಪುಸ್ತಕದ ಹದಿನೈದನೇ ಪುಟದಲ್ಲಿರೋದು ಮಾತ್ರ follow ಮಾಡ್ತೀನಿ,ಇಳಿದದ್ದು ಸ್ವಲ್ಪ ಕಷ್ಟ ಅನ್ನೋದಾದ್ರೆ ಯಾಕ್ರಿ ಬೇಕು ಇದೆಲ್ಲ??

  Like

 3. ಸಂದೀಪ್ ಕಾಮತ್ Says:

  ಅಯ್ಯೋ ಯಾಕೆ ಇಷ್ತೊಂದು spelling mistake ಆಗಿದೆ ನಾನು ಬರೆದಿರೋದ್ರಲ್ಲಿ Chinese keyboard ಏನಾದ್ರೂ ಉಪಯೋಗಿಸ್ತಿದ್ದೀನಾ ನಾನು:)

  Like

 4. Guru Baliga Says:

  ಹಾಗೆಂದರೆ ಹೇಗೆ ಸಂದೀಪ್.
  ಪ್ರತಿ ವ್ಯಕ್ತಿಯ ಬದುಕಿನಲ್ಲಿ ಹಲವು ರೋಲ್ ಮಾಡೆಲ್ ಗಳಿರಬಹುದು. ನಮಗೆ ಯಾವುದು ಮೆಚ್ಚಿಗೆಯಾಗುತ್ತೋ ಅದನ್ನು ಅಳವಡಿಸಿಕೊಳ್ಳುತ್ತಾ ಕೊಂಚ ನಮ್ಮ ಸ್ವಂತಿಕೆಯ ಸಿದ್ಧಾಂತಗಳ ಕೂಡ ಪೂರ್ಣ ವಿಕಸಿತವಾಗಬೇಕು ಅದು ಬದುಕು. ಪ್ಯಾಕೇಜ್ ಡೀಲ್ ಬದುಕಿನಲ್ಲಿ ಸಿಗಲ್ಲ.

  Like

 5. neelanjala Says:

  ಸಂದೀಪ್ ,
  ನನಗೆ ಸುಳ್ಳು ಹೇಳುವ ಪ್ರಮೇಯ ಜೀವನದಲ್ಲಿ ಬಂದೆ ಇಲ್ಲ ಸ್ವಾಮಿ. ನಿಮ್ಮ ಮಾತು ನೋಡಿದ್ರೆ ನೀವು ಗಾಂಧಿಯನ್ನು ಇನ್ನೂ ೪-೫ನೇ ಕ್ಲಾಸ್ ಪಾಠದಲ್ಲಿ ಇದ್ದ ಹಾಗೆ ಅರ್ಥ ಮಾಡಿಕೊಂಡಿದ್ದೀರಿ ಎಂದು ತೋಚುತ್ತದೆ. ಒಮ್ಮೆ ಗಾಂಧಿಯ ವಿಚಾರಗಳ ಬಗ್ಗೆ ಮುಕ್ತ ಮನಸ್ಸಿನಿಂದ ಕಣ್ಣಾಡಿಸಿ. ನಿಮಗೆ ಹೊಸ ಹೊಳಹು ದೊರೆಯಬಹುದು.

  “ಪುಸ್ತಕದ ಹದಿನೈದನೇ ಪುಟದಲ್ಲಿರೋದು ಮಾತ್ರ follow ಮಾಡ್ತೀನಿ,ಇಳಿದದ್ದು ಸ್ವಲ್ಪ ಕಷ್ಟ ಅನ್ನೋದಾದ್ರೆ ಯಾಕ್ರಿ ಬೇಕು ಇದೆಲ್ಲ??”- ನಾನೆಲ್ರಿ ಹಾಗಂದೆ ?
  ನಿಮ್ಮ ಪ್ರಕಾರ ಒಂದು ವಿಚಾರವನ್ನು ಮೆಚ್ಚಿ ಬರೆಯಲೇ ಬಾರದಾ? ನಾನೆಲ್ಲೂ ವಿಚಾರಗಳನ್ನು ಬೋಧಿಸುತ್ತಿಲ್ಲವಲ್ಲಾ? ನನಗೆ ಇದು ಇಷ್ಟ, ಇದು ಕಷ್ಟ ಅನ್ನುತ್ತಿದ್ದೇನೆ. ನೀವು ನನ್ನ ಯೋಚನೆಗಳನ್ನು ಖಂಡಿಸಲೇ ಬೇಕೆಂದು ತೀರ್ಮಾನ ಮಾಡಿರುವ ಹಾಗಿದೆ.

  Like

 6. ಸಂದೀಪ್ ಕಾಮತ್ Says:

  Sorry Sorry Sorry!

  ನೀವಿ ಹೇಳಿದ್ದು ಸರಿ ಗುರು .

  ಮನಸ್ಿಗೆ ನೋವಾದ್ರೆ ಕ್ಷಮಿಸಿ ಸೌಪರ್ಣಿಕ.

  ಹಾಗೇನಿಲ್ಲ ನೀವು ಬರೆದ ಹಲವು ವಿಷಯಗಳಿಗೆ ನನ್ನ ಸಮರ್ಥನೆ ಇದೆ .ಆದ್ರೆ human tendency ಅಲ್ವ ,ಮೆಚ್ಚುಗೆ ಮಾತು ಬರೋದು ಲೇಟ್ ಆದ್ರೆ ಕುಹಕದ ನುಡಿಗಳು ಥಟ್ ಅಂತ ಬಂದು ಬಿಡುತ್ತವೆ !

  ಇನ್ನು ಗಾಂಧಿ ವಿಚಾರಧಾರೆ ಬಗ್ಗೆ ಕಮೆಂಟ್ ಬೇಡ ,ನಾನಂತೂ ಅದನ್ನು ಯಾವತ್ತೂ ಮೆಚ್ಚಿಲ್ಲ ಮೆಚ್ಚೋದೂ ಇಲ್ಲ So leave it:)

  Like

 7. Shashanka G P Says:

  ಕೊನೆಯ ಪ್ಯಾರಾ ಸಂಪೂರ್ಣ ಸಮಂಜಸವಾಗಿದೆ. ಆದರೆ ಗಾಂಧೀಜಿ ಭಗತ್ ಸಿಂಗ್ ಪರ ಸತ್ಯಾಗ್ರಹ ಮಾಡಲಿಲ್ಲ ಏಕೆ, ಎನ್ನುವ ಪ್ರಶ್ನೆಯ ಹಿನ್ನೆಲೆಯಲ್ಲಿ ಇನ್ನೊಂದು ಪ್ರಶ್ನೆ ಇದೆ, ಅದನ್ನು “ಆಕೆ” ಹೇಳಿರಲಿಕ್ಕಿಲ್ಲ. ಸ್ವಾಮಿ ಶ್ರದ್ಧಾನಂದರ ಬಗ್ಗೆ ಕೇಳಿರಬೇಕು ನೀವು. ಸ್ವಾತಂತ್ರ್ಯಪೂರ್ವದಲ್ಲಿ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಪರಮತಗಳಿಗೆ ಮತಾಂತರವಾದ ಲಕ್ಷಾಂತರ ಹಿಂದುಗಳನ್ನು ಪರಾವರ್ತನಗೊಳಿಸಿದವರು, ಹಿಂಸೆಯಿಲ್ಲದೇ! ಅದನ್ನು ಸಹಿಸದ ಮತಾಂಧ ಮುಸ್ಲಿಂ ಯುವಕನೋರ್ವ ನಿದ್ರೆಯಲ್ಲಿದ್ದ ಶ್ರದ್ಧಾನಂದರನ್ನು ಕೊಲೆಗೈದ. ಅವನನ್ನು ಬ್ರಿಟಿಷ್ ಸರಕಾರ ಬಂಧಿಸಿತು (ಕನಿಷ್ಟ ಇಷ್ಟು ನ್ಯಾಯ ಪ್ರಜ್ಞೆ ಬ್ರಿಟಿಷರಲ್ಲಿತ್ತು). ಆದರೆ ಆತನನ್ನು ಸಮರ್ಥಿಸಿಕೊಂಡು, ಆತ ನಮ್ಮ ಬಂಧು ಎಂದು ಹೇಳಿಕೊಂಡು ಬಿಡಿಸಿಕೊಂಡು ಬಂದಿದ್ದು ನಮ್ಮ ಗಾಂಧೀಜಿ. ಹಾಗಾಗಿ ಭಗತ್ ರನ್ನು ಗಾಂಧಿ ಏಕೆ ಸಮರ್ಥಿಸಿಕೊಳ್ಳಲಿಲ್ಲ ಎನ್ನುವ ಪ್ರಶ್ನೆಗಿಂತ, ಈ ದ್ವಂದ್ವ ನೀತಿ ಏಕೆ, ಎನ್ನುವ ಪ್ರಶ್ನೆ ಹೆಚ್ಚಾಗಿ ಕಾಡುತ್ತದೆ.

  ಅಹಿಂಸೆ ಗಾಂಧೀಜಿ ತಾವು ತಮ್ಮ ಆತ್ಮೋನ್ನತಿಗೆ, ತಾವು ಪ್ರಪಂಚದೊಂದಿಗೆ ಸಂಬಂಧಿಸುವುದಕ್ಕೆ ಕಂಡುಕೊಂಡ ಮಾರ್ಗ. ಅದು ಅವರ ಸ್ವಂತ ಅನುಭವ. ವ್ಯಕ್ತಿ ಹೋಗುವಷ್ಟು ಎತ್ತರಕ್ಕೆ ಸಮೂಹ ತಲುಪಲಾರದು. ಆ ಅನುಭವವನ್ನು ಸಮೂಹಕ್ಕೆ ಅನ್ವಯಿಸುವುದು ಸಮೂಹದ ಉಳಿವಿಗೆ ಕಂಟಕಪ್ರಾಯ ಎನ್ನುವುದು ಸಹಜವೇ.

  ಅಹಿಂಸೆ ಮನುಷ್ಯ ಮನುಷ್ಯನ ಸಂಬಂಧದಲ್ಲಿ ಸರಿ, ಆದರೆ ಪಶು ಮತ್ತು ರಾಕ್ಷಸರ ಜೊತೆ ಅಲ್ಲ ಎನ್ನುವುದು ಸಾವರ್ಕರರ ಅಭಿಪ್ರಾಯ. ಈ ವಿಚಾರವನ್ನು ತೆಗೆದು ಹಾಕುವುದು ಸುಲಭ ಅಲ್ಲ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: