ಮಣ್ಣ ರಕ್ತದಾಹ -೧

click

ನನ್ನ ಕಲೀಗ್ ಒಬ್ಬನಿಗೆ ಮುಸ್ಲಿಂ ಎಂದರೆ ಆಗುವುದಿಲ್ಲ. ಚಿಕ್ಕಂದಿನಲ್ಲಿ ಶಾಲೆಗೆ ಹೋಗುವ ದಾರಿಯಲ್ಲಿ ಕಿಡಿಗೇಡಿ ಮುಸ್ಲಿಂ ಮಕ್ಕಳು ಅವನ ಜುಟ್ಟು ಹಿಡಿದು ಚುಡಾಯಿಸುತ್ತಿದ್ದರಂತೆ. ಒಂದು ದಿನ ಕಲ್ಲೂ ಹೊಡೆದರಂತೆ. ಘಟನೆ ಅವನ ಮನಸ್ಸಲ್ಲಿ ಅಚ್ಚೊತ್ತು ಆಗಿನ ಅಸಾಹಯತೆ ಅಸಹನೆಯಾಗಿ, ತೀರಸ್ಕಾರವಾಗಿ, ದ್ವೇಷವಾಗಿ ಮಾರ್ಪಟ್ಟಿದೆ.

ಇನ್ನೊಬ್ಬ ಹಾಸ್ಟೇಲ್ ಮೇಟ್ ಸಹ ಮುಸ್ಲಿಂ ಎಂದರೆ ಉರಿದು ಬೀಳುತ್ತಾಳೆ. ಕಾರಣ ಈಕೆಯ ಹಳೆಯ ರೂಮ್ ಮೇಟ್. ಅವಳಿಗೆ ಬರುತ್ತಿದ್ದ ಸರಬರಾಜು ಆಗುತ್ತಿದ್ದ ಉರ್ದು ನಿಯತಕಾಲಿಕಗಳು ಮತ್ತು ಇತರ ಧರ್ಮದ ಮೇಲಿನ ಅಸಡ್ಡೆ .

ಆದರೆ ನನಗೆ ರೀತಿಯ ಯಾವುದೇ ಕಹಿ ಅನುಭವಗಳಿಲ್ಲ. ಸ್ಕೂಲಿಂದ ಹಿಡಿದು ಕಾಲೇಜಿನವರೆಗೆ ಮುಸ್ಲಿಂ ಸಹಪಾಠಿಗಳಿದ್ದರು. ಮೊದಲು ಕಲಿತದ್ದು ಕಾನ್ವೆನ್ಟಿನಲ್ಲಿ, ಆಮೇಲೆ ನವೋದಯದಲ್ಲಿ. ನವೋದಯದಲ್ಲಿ ನನ್ನ ಹಚ್ಚಿಕೊಂಡಿದ್ದ ರೂಮ್ ಮೇಟ್ , ತುಂಬಾ ಅಕ್ಕರೆ ತೋರಿಸುತ್ತಿದ್ದ ಸೀನಿಯರ್ ಅಕ್ಕ ಎಂದೂ ನನಗೆ ಮುಸ್ಲಿಂ ಅನಿಸಿರಲಿಲ್ಲ. ಅವರು ಸಹ ನನ್ನ ಹಿಂದೂ ಎಂದು ನೋಡಿರಲಿಕ್ಕಿಲ್ಲ. ಅವರಿಗೆ ನಾನು ಕೇವಲ ಸೌಪಿ, ನನಗೂ ಸಹ ಅವರು ಹಾಗೆ. ದಿನಾ ರಿಬ್ಬನ್ ಕಟ್ಟಿ ಕೊಡುತ್ತಿದ್ದದ್ದು , ರಜಾ ದಿನಗಳಲ್ಲಿ ವಿವಿಧ ಕೇಶ ವಿನ್ಯಾಸ ಮಾಡಿ ಕೊಡುತ್ತಿದ್ದದ್ದು ಒಬ್ಬ ಕ್ರಿಶ್ಚಿಯನ್ . ಈಗ ನೋಡಿದರೆ ಅಲ್ಲಿ ನೀರಿಲ್ಲದಾಗ, ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರಲ್ಲಿ ಹೆಚ್ಚಿನವರು ಮುಸ್ಲಿಂ, ಕ್ರಿಶ್ಚಿಯನ್ ಅಥವಾ ದಲಿತರೆ ಆಗಿದ್ದರು. ಹಾಗಂತ ಹಿಂದೂ ಸ್ನೇಹಿತರು ಇದ್ದರು.

ಪ್ರೊಫೇಷನಲ್ ಕೋರ್ಸ್ ಮಾಡೊ ಹೊತ್ತಲ್ಲಿ, ಯಾರು ಹೇಳಿದರು ಕೇಳದೆ ಬಾಂಗ್ಲಾದೇಶಿಯ ಕ್ಲಾಸ್ ಮೇಟಗೆ ಪರಿಚಯವಿದ್ದ ಮುಸ್ಲಿಂ ಹತ್ತಿರವೇ pc ತೆಗೆದುಕೊನ್ಡಿದ್ದುಅವರು ಉಳಿದವರಿಗಿಂತ competative rate ಕೊಟ್ಟಿದ್ದಕ್ಕೆಅವರ ಅಂಗಡಿಗೆ ಹೋದಾಗಲೆಲ್ಲ ನಾವೆಂದು ನಮ್ಮ ಜಾತಿಗಳ ಬಗ್ಗೆ ಕೇಳಿಕೊಂಡೆ ಇಲ್ಲ. ಅದು ಅಗತ್ಯವೂ ಇರಲಿಲ್ಲ. ಗ್ಯಾರಂಟಿ ಮುಗಿದ ಮೇಲೂ ಸರ್ವೀಸ್ ಕಡಿಮೆ ಬೆಲೆಗೆ ಚೆನ್ನಾಗೇ ಮಾಡಿ ಕೊಟ್ಟರು.

ಇಲ್ಲಿ ಮೊನ್ನೆ ಚೋರ್ ಬಜಾರಿಗೆ ಹೋದಾಗಲೂ ಅಷ್ಟೇ. ಆತ ಏಷ್ಟು ಪ್ರೀತಿಯಿಂದ , ಕಳಕಳಿಯಿಂದ ವಿಚಾರಿಸಿದ. ಅವನ ನಡತೆಯಿಂದ ಮುಸ್ಲಿಂ ಕಂಡರೆ ದೂರವೇ ಇರುವ ನನ್ನ ಹುಡುಗ ಬದಲಾಗಿ ಬಿಟ್ಟ. ಕೆಲಕ್ಷಣಗಳ ನಂತರ ಇವರಿಬ್ಬರೂ ಪರಿಚಯದವರಾಗಿ ಹೋದರು. ಮಧ್ಯೆ ಜಾತಿಯ ಗೋಡೆ ಏಳಲೇ ಇಲ್ಲ.

————

ಮೊನ್ನೆ ಯಾರೋ ಹೇಳುತ್ತಿದ್ದರು, ಇವರನ್ನೆಲ್ಲಾ ಆವಾಗಲೇ ಒದ್ದೊಡಿಸಬೇಕಾಗಿತ್ತು ಎಂದು ! ಇತಿಹಾಸದ ಪರಿಚಯವಿಲ್ಲದೇ ದೊಡ್ಡ ದೊಡ್ಡ ಡೈಲೋಗ್ ಹೊಡೆಯುವವರು. ರಾಜಕೀಯ ಸ್ಥಿತ್ಯನ್ತರಗಳು, ಒಳಸುಳಿಗಳು, ಪವರ್ ಗೇಮ್ ಅಷ್ಟು ಬೇಗ ಎಲ್ಲರಿಗೂ ಅರ್ಥವಾಗುವುದಿಲ್ಲ. ಇಂಥವರೇ ಹತ್ತು ಮಂದಿ ಸೇರಿ ಕೈ ಮಿಲಾಯಿಸಿದರೆ ಅಲ್ಲೊಂದು ಧಂಗೆ ಆರಂಭವಾಗುತ್ತದೆ. ಸಿಟ್ಟು ಹಾಗೂ ರೋಷ ಒಳಗಿನ ಕಣ್ಣನ್ನು ಹೊಸಕಿ ಹಾಕುತ್ತದೆ.

ನಾನು ಕೆಲವೊಮ್ಮೆ ಯೋಚಿಸುತ್ತೇನೆಕೇವಲ ಅನ್ಯ ಧರ್ಮೀಯರು ಎಂದು ಚಿಕ್ಕ ಎಳಸು ಮಕ್ಕಳ ಮೇಲೆ ಮಾತಾಂಧತೆಯಲ್ಲಿ ಅತ್ಯಾಚಾರ ಎಸಗುತ್ತಾರಲ್ಲಕೊಯ್ದು ಹಾಕುತ್ತಾರಲ್ಲ, ಸುಟ್ಟು ಹಾಕುತ್ತಾರಲ್ಲಸಾಮಾನ್ಯ ಮನುಷ್ಯನಲ್ಲೂ ಅದೆಷ್ಟು ಕೌರ್ಯಅಥವಾ ಅವರೆಲ್ಲ ದುಡ್ಡಿಗಾಗಿ ಹೆತ್ತವರ ಕತ್ತು ಹಿಚುಕಲೂ ಹೇಸದ ಗೂನ್ಡಾಗಳೇ ?

ಮೈ ನಡುಗುತ್ತಿದೆ. ನಾನು ನಿಂತ ನೆಲ ಭದ್ರವಾಗಿಲ್ಲ. ಇದು ಯಾವತ್ತೋ ಕುಸಿಯಬಹುದು. ನನ್ನ ಮನೆಯ ಒಳಗೂ ಕೈ ಬಾಂಬ್ ಸಿಡಿಯಬಹುದು. ನಾನು ದಾರಿಯಲ್ಲಿ ಹೋಗುವಾಗ ಇಂತಹ ದೊಂಬಿಗಳಿಗೆ ಆಹಾರವಾಗಬಹುದು. ಎಷ್ಟು ಭಯಾನಕ ! ನನ್ನ ಆಕ್ರಂದನ, ಚೀರಾಟ ಕೆಪ್ಪರನ್ನು ತಲುಪಲಾಗದು. ಅವರು ಧರ್ಮದ ಹೆಸರಲ್ಲಿ ಕೇಕೆ ಹಾಕುತ್ತಾ ತಮ್ಮ ಅಟ್ಟಹಾಸ ಮುಂದುವರೆಸುತ್ತಾರೆ. ರೀತಿ ನಾನು ಮತೀಯ ಗಲಭೆಗಳಿಗೆ ಸಂಭದಿಸಿದ ಚಿತ್ರಗಳನ್ನು ನೋಡಿದಾಗಲೆಲ್ಲ ವಿಹ್ವಲಗೊಂಡಿದ್ದೇನೆ, ಎದೆ ಸುಟ್ಟು ಕೊಂಡಿದ್ದೇನೆ. ಪೀಡಿತರು ಯಾವ ಧರ್ಮದವರೇ ಆಗಿರಲಿ. ಅವರು ನಮ್ಮಂತೆಯೇ ಮನುಷ್ಯರು ತಾನೇ.

ನಾನು ಮೊದಲು ಕಿಟಕಿ ಹೊರಗಿನ ಖಾಲಿ ಗದ್ದೆಗಳನ್ನು ನೋಡಿ ಅಂದುಕೊಳ್ಳುತ್ತಿದ್ದೆ. ಇಲ್ಲಿ ಮೊದಾಲೊಂದು ದಿನ ಕಾಡಿತ್ತೇನೋ. ಇದೆ ದಾರಿಯಲ್ಲಿ ಸೈನಿಕರು, ರಾಜರು, ಅವರ ಕುದುರೆಗಳು ಕ್ರಮಿಸುತ್ತಿದ್ದವೇನೋ. ಇಲ್ಲೇ ಷ್ಟು ಯುದ್ದಗಳಾಗಿವೆಯೋಅಧಿಕಾರಶೌರ್ಯಸಂಪತ್ತು ಇವುಗಳ ಹೆಸರಲ್ಲಿ ಷ್ಟು ಅತಿಕ್ರಮಣ, ಅತ್ಯಾಚಾರಗಳು ನಡೆದಿದೆಯೊ. ಆಗೆಲ್ಲ ಪದೇ ಪದೇ ಭೂಮಿಯ ಮೇಲೆ ರಕ್ತ ಚೆಲ್ಲುತ್ತಿತ್ತು. ಈಗ ಹೆಚ್ಚಿನೆಡೆ ಜನರ ರಾಜ್ಯ. ಪ್ರಜಾಪ್ರಭುತ್ವ, ಅಹಿಂಸೆ. ಕೇವಲ ಸರಹದ್ದುಗಳಲ್ಲಿ ಮಾತ್ರ physical ಯುದ್ಧಬೇರೆಡೇ virtual ಯುದ್ಧಅಚ್ಚರಿಯಾಗುತ್ತಿತ್ತು ಭೂಮಿಯ ಹಸಿವು ಅಷ್ಟು ಬೇಗ ಆರಿ ಹೋಯಿತೆ ಎಂದು. ಈಗ ಉತ್ತರ ಸಿಕ್ಕಿದೆ. ಇಲ್ಲ, ಅದರ ರಕ್ತದ ಹಸಿವು ಇನ್ನೂ ಜೀವಂತವಾಗೇ ಇದೆ. ನಮ್ಮ ಅಜ್ಞಾನದಲ್ಲಿ, ಮೌಡ್ಯದಲ್ಲಿ, ಹುಂನದಲ್ಲಿ, ರಾಗದ್ವೇಷಗಳಲ್ಲಿ, ಮಾತಾಂಧತೆಯಲ್ಲಿ.

(ಮುಂದುವರೆಯುವುದು………..)

ಮಣ್ಣ ರಕ್ತದಾಹ

(ನೀಲಾಂಜಲ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ವಿನಾಕಾರಣ ಮಾಡುವ ಧರ್ಮ ನಿಂದನೆ, ಆರೋಪಗಳು ಇಲ್ಲಿ ಪ್ರಕಟವಾಗುವುದಿಲ್ಲ. ಉತ್ತರಗಳೂ ಕನ್ನಡದಲ್ಲಿ ಕಡ್ಡಾಯ. ಕೆಲ ಒಬ್ಬರು ಬಾಂಬ್ ಸ್ಪೋಟದ ಬಗ್ಗೆ ಬರೆಯುವಾಗ englishನಲ್ಲಿ ಬರೆದಿದ್ದು ಗಮನಿಸಿದ್ದೇನೆನಮ್ಮಲ್ಲೂ terrorist(?) ಇದ್ದಾರಂತಲ್ಲಾ; ಹುಬ್ಬಳ್ಳಿ, ಬೆಂಗಳೂರು…  )

7 Responses to “ಮಣ್ಣ ರಕ್ತದಾಹ -೧”

 1. Gururaj Says:

  ನೀವು ತುಂಬಾ ಜಾಣತನದಿಂದ ಕನ್ನಡ ದಲ್ಲಿ ಬರಿದು ಬರಿ ಕನ್ನಡ ದಲ್ಲಿ ಉತ್ತರಿಸಿ ಅಂತ ಪ್ರಖಟಿಸಿದಿರ, ಇದರ ಅಂತರ್ಯವೇನು (hidden truth)?

  ನೀವು Convent n Navodaya ಅಂತ ಬರಿದಿದರ, ಇವಗಳು ನಮ್ಮ ಊರಿನಲ್ಲೂ ಇವೆ. ನೀವು ರಾಯಚೂರ್ ನವರ?

  Like

 2. ವೈಶಾಲಿ Says:

  ಏನೂ ಹೇಳಲಾಗುತ್ತಿಲ್ಲ. ಬರಹ ಮನಸ್ಸು ತಟ್ಟಿದೆ.
  ನನಗೂ ಮುಸ್ಲಿಂ ಗೆಳೆಯ, ಗೆಳತಿಯರಿದ್ದಾರೆ. ಮುಸ್ಲಿಂ ಅಂದಾಗಲೆಲ್ಲ ನನಗೆ ಟೆರರಿಸ್ಟ್ ಗಳೇ ನೆನಪಾಗುತ್ತಾರೆ. ಮರುಕ್ಷಣ, ” ಕಷ್ಟಪಟ್ಟು ಬೆಳಿಗ್ಗೆ ಬೆಳಿಗ್ಗೆ ಅಡುಗೆ ಮಾಡ್ತಾ ಕುತ್ಕೊಬೇಡ ಕಣೆ ” ಅಂತಂದು ನಂಗೆ ಅಂತಾನೇ ಮನೆಯಿಂದ ಬೇರೆಯದೇ ತಿಂಡಿ ಕಟ್ಟಿಕೊಂಡು ಬಂದು ಕೊಡುತ್ತಿದ್ದ, ನನ್ನೆಲ್ಲ ಖುಷಿ, ಬೇಸರಗಳಿಗೆ ಜೋತೆಯಾಗುತ್ತಿದ್ದ ಅದೇ ‘ಮುಸ್ಲಿಂ’ ಗೆಳತಿ ನೆನಪಾಗುತ್ತಾಳೆ. ಹಾಗೂ ನೆನಪಾಗುತ್ತಲೇ ಇರುತ್ತಾಳೆ……

  Like

 3. ಮಣ್ಣ ರಕ್ತದಾಹ-೨ « ನೀಲಾಂಜಲ Says:

  […] ಮಣ್ಣ ರಕ್ತದಾಹ-೧ (……………….ಮುಂದುವರೆದಿದ್ದು) […]

  Like

 4. neelanjala Says:

  Gururaj,
  -ನೀವು ಕೇಳಿದ ಮೇಲೆ ಪ್ರಶ್ನೆಗೆ ಉತ್ತರಿಸಿದ್ದೇನೆ.
  -ನವೋದಯ ಶಾಲೆಗಳು ಜಿಲ್ಲೆಗೆ ಒಂದರಂತೆ ಇಡೀ ದೇಶದಲ್ಲಿವೆ.
  ವೈಶಾಲಿ,
  ನಂಗೂ ‘ಆಕೆ’ ನೆನಪಿದ್ದಾಳೆ

  Like

 5. Gururaj Says:

  -ನೀವು ಕೇಳಿದ ಮೇಲೆ ಪ್ರಶ್ನೆಗೆ ಉತ್ತರಿಸಿದ್ದೇನೆ. -> I didn’t follow what you meant here.
  -ನವೋದಯ ಶಾಲೆಗಳು ಜಿಲ್ಲೆಗೆ ಒಂದರಂತೆ ಇಡೀ ದೇಶದಲ್ಲಿವೆ. -> Got it.

  Like

 6. neelanjala Says:

  gururaj,
  “ನೀವು ಕೇಳಿದ ಮೇಲೆ ಪ್ರಶ್ನೆಗೆ ಉತ್ತರಿಸಿದ್ದೇನೆ”
  (ನೀಲಾಂಜಲ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ವಿನಾಕಾರಣ ಮಾಡುವ ಧರ್ಮ ನಿಂದನೆ, ಆರೋಪಗಳು ಇಲ್ಲಿ ಪ್ರಕಟವಾಗುವುದಿಲ್ಲ. ಉತ್ತರಗಳೂ ಕನ್ನಡದಲ್ಲಿ ಕಡ್ಡಾಯ. ಕೆಲ ಒಬ್ಬರು ಬಾಂಬ್ ಸ್ಪೋಟದ ಬಗ್ಗೆ ಬರೆಯುವಾಗ englishನಲ್ಲಿ ಬರೆದಿದ್ದು ಗಮನಿಸಿದ್ದೇನೆ. ನಮ್ಮಲ್ಲೂ terrorist(?) ಇದ್ದಾರಂತಲ್ಲಾ; ಹುಬ್ಬಳ್ಳಿ, ಬೆಂಗಳೂರು… )

  Like

 7. Gururaj Says:

  adu nanna prashnege sariyada uttaravalla… iralibidi yako e prashanavali hali tapputide…

  Anyways, It was a good writing and I admire it.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: