ಮಣ್ಣ ರಕ್ತದಾಹ-೨

click

(……………….ಮುಂದುವರೆದಿದ್ದು)

ನೀನು ಹೀಗೆ ಮತ್ತೆ ಮತ್ತೆ ಅಮಾಯಕರ ರಕ್ತ ಹರಿಸಿದರೆ ದಾರಿಯಲ್ಲಿ ಹೋಗುವ ಬೂರ್ಖ ಹೆಂಗಸು ರಕ್ತ ಪೀಪಾಸು ತರಹ  ತೋರಿ ನಾನೇ ಕೈಯಲ್ಲಿ ಕಲ್ಲೆತ್ತಿ ಕೊಳ್ಳುತ್ತೇನೆ. ಅದೇ ನಿನಗೆ ಬೇಕೊ ಏನೋ. ನಾವು ನಮ್ಮ ನಮ್ಮ ಒಳಗೆ ಜಗಳವಾಡುವುದು, ಹೊಡೆದಾಡುವುದು, ಒಬ್ಬರನ್ನೊಬ್ಬರು ಬಡಿದು ಸಾಯುವುದು. ಅಮೇಲೆ ಸತ್ತವರ ರಾಜ್ಯಕ್ಕೆ ನೀನೇ ಅರಸ. ಪ್ರಪಂಚ ಗೆಲ್ಲುವ ಅತಿಆಸೆಯನ್ನು ಯಾವತ್ತೂ ಪೂರೈಸೋಲ್ಲ ಎಂದು ಇತಿಹಾಸ ಕೂಗಿ ಕೂಗಿ ಹೇಳಿದೆ.

ಪ್ರತಿ ಬಾರಿ ಬಾಂಬ್ ಸ್ಪೋಟವಾದಾಗಲೆಲ್ಲ ಆಕೆ ಪಾಪ ಪ್ರಜ್ಞೆಯಲ್ಲಿ ನರಳುತ್ತಾಳೆ. ಇವರು ಮಾಡುವ ಕರ್ಮಕ್ಕೆ ನಾವೆಲ್ಲ ಯಾಕೆ ಜನರ ಕ್ರೂರ ದೃಷ್ಟಿ ಎದುರಿಸಬೇಕು ಎಂದು. ಒಂದು ಇರುವೆಯನ್ನು ಕೊಲ್ಲಲಿಕ್ಕಾಗದ ಅವಳು ಕೇವಲ ಕುರಾನ್ ಓದುವುದಕ್ಕಾಗಿ ಅನ್ಯ ಜನರಿಂದ ತಿಸ್ಕಾರಕ್ಕೆ ಒಳಗಾಗಬೇಕಾ ? ನೀ ಮಾಡುವ ಕೃತ್ಯದಿಂದ ನಿನ್ನ ಜನಾಂಗಕ್ಕೆ ಸೇರಿದವನೆಂದು ಕೆಲಸದ ಅಗತ್ಯವಿರುವ ಆತನಿಗೆ ಕೆಲಸದಿಂದಲೆ ಮುಕ್ತಿ ದೊರೆಯುತ್ತದೆಯಲ್ಲ. ನಿನ್ನ ಪ್ರತಿಕಾರದ ಮನೋಭಾವದಿಂದ ಉಂಟಾಗಿರುವ ಅಡ್ಡ ಪರಿಣಾಮಗಳನ್ನು ಎಂದಾದರು ಯೋಚಿಸಿದ್ದಿಯಾ ? ನೀನೇನೋ ಧರ್ಮದ ಹಿಂದೆ ಹೋಗಿ ಹುತಾತ್ಮ ಪಟ್ಟಕ್ಕೆ ಸೇರಿ ಸ್ವರ್ಗ ಸೇರುತ್ತಿಯಾ. ಆದರೆ ನಿನ್ನಿಂದಾಗಿ ಜನ ಬದುಕ್ಕಿದ್ದಾಗಲೇ ನರಕ ಅನುಭವಿಸುವಂತಾಗುತ್ತದೆಯಲ್ಲ. ದ್ವೇಷದ ಬೀಜದಿಂದ ಎಂದೂ ಪ್ರೀತಿ ಹುಟ್ಟಲ್ಲ ಕಣೊ !

ಇಲಾ ನಿಂಗೆ ಅಷ್ಟು ಸಿಟ್ಟಿದ್ರೆ ಎದುರು ಬದುರು ನಿಲ್ಲುವ. ನಾ ನಿಂಗೆ ಹಾಗೆ ಅನ್ಯಾಯ ಮಾಡಿದೆ ಎಂದು ನೀ ನನ್ನ ಕಾಲು ಕಡಿ. ಅದರ ಸಿಟ್ಟಿಗೆ ಪ್ರತೀಕಾರವಾಗಿ ನಾ ನಿನ್ನ ಒಂದು ಕೈ ಕಡಿಯುವೆ. ನೀ ಮತ್ತೆ ಸಿಟ್ಟಲ್ಲಿ ನನ್ನ ಒಂದು ಕಿವಿ, ಕಣ್ಣು…. ಇದೆಲ್ಲ ಬೇಡ ಬಿಡು. ಇಬ್ಬರು ಆವೇಶದಲ್ಲಿ ಒಬ್ಬರೊಬ್ಬರ ರುಂಡಗಳನ್ನು ಒಂದೇ ಹೊಡೆತಕ್ಕೆ ಕತ್ತರಿಸಿಕೊಂಡು ಬಿಡೋಣ. ಆಗ ನೀನು ಇಲ್ಲ. ನಾನು ಇಲ್ಲಅಮೇಲೆ ಸ್ವರ್ಗಕ್ಕೋ ನರಕಕ್ಕೋ ಹೋದರೂ ಚಿಂತೆಯಿಲ್ಲ. ಆಗಲಾದರೂ ಭೂಮಿ ಶಾಂತವಾದೀತು.

ನಾನು ಮಾರಾಯ ಉರ್ದು ಕಲಿಯಬೇಕೆಂದಿದ್ದೆ. ಸಲವಾದ್ರೂ ಕುರಾನ್ ಕನ್ನಡ ಆವೃತ್ತಿ ಹುಡುಕಿ ಖರೀದಿಸಬೇಕೆಂದು ಮಾಡಿದ್ದೆ. ನೀ ಹೀಗೆ ಮುಂದುವರೆಸಿದರೆ ನನ್ನಿಚ್ಛೆ ಎಂದೂ ಪೂರೈಸುವುದಿಲ್ಲ . ನನ್ನನ್ನೇ ಮನೆಯಿಂದ ಹೊರ ಹಾಕಿ ಬಿಡುತ್ತಾರೆ. ನಾನೆಂದೂ ನಿಮ್ಮ ಆಚಾರವಿಚಾರಗಳನ್ನು ಸರಿಯಾಗಿ ಅರಿಯುವುದಕ್ಕೆ ಆಗುವುದಿಲ್ಲ. ನನಗೇಕೆ ನಿಮ್ಮ ಬಗ್ಗೆ ಜಿಜ್ಞಾಸೆ ಎಂದು ನೀನು ಕೇಳಬಹುದು. ಏಕೆಂದರೆ ನಾನೋರ್ವ ಹಿಂದೂ. ಒಳ್ಳೆಯದು ಎಲ್ಲ ಕಡೆಯಿಂದ ಹರಿದು ಬರಲಿ ಎನ್ನುವವ. ಆದರೆ ನಿನಗೆಂದೂ ಇದು ಅರ್ಥವಾಗುವಂತೆ ನನಗೆ ಅನ್ನಿಸುವುದಿಲ್ಲ. Hindu belongs to all cast and community (Universe) . But all cast and community (universe) does not belongs to  Hindu.

ನನಗೆ ಅನ್ನಿಸಿದ್ದು, ನೀನು ಯುದ್ಧ ಸಾಮಗ್ರಿಗಳನ್ನು ಖರೀದಿಸುವ ಬದಲು ನಿನ್ನ ಜನರ ಜೀವನ ಸ್ಥಿತಿಯನ್ನು ಬದಲಾಯಿಸಬಹುದಿತ್ತೇನೊ ಅಂತ. ಭಾರತದಲ್ಲಿನ ಏಷ್ಟೋ ಮುಸ್ಲಿಂ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರಕುತ್ತಿಲ್ಲ, ಸ್ವಚ್ಛತೆಯ ಅರಿವಿಲ್ಲ. ಕಾಲಾಂಶ ಹೋಗಲಿ ಒಂದಾಂಶ ಹಣವಾದರೂ ನಿಮ್ಮ ಸಮಾಜದ ಏಳ್ಗೆಗೆ ಉಪಯೋಗಿಸಿದ್ದರೆ ಹೇಗಿರುತ್ತಿತ್ತುನಿಮ್ಮ ಮಕ್ಕಳ ಜೊತೆ ಅನ್ಯರು ಕಲಿಯುವಂತಹ ಶಾಲೆಗಳಿದ್ದಿದ್ದರೆಭಾರತ ಸರಕಾರವನ್ನು ವಿರೋಧಿಸುವ ನೀನು ಇದೆಲ್ಲ ಸರಕಾರದ ಕೆಲಸ ಎಂದು ನುಣುಚಿಕೊಳ್ಳುವ ಹಾಗಿಲ್ಲ. ನಾವು ಹೇಗೆ ಕಾನ್ವೆಂಟಿನಲ್ಲಿ ಸೀಟ್ ಗಿಟ್ಟಿಸಿಕೊಳ್ಳಲು ಒದ್ದಾಡುತ್ತೇವೆಯೋ ಅದೇ ರೀತಿ ನೀನು ತೆರೆವ ಶಿಕ್ಷಣ ಸಂಸ್ಥೆಗಳಿಗೂ ಜನ ಕ್ಯೂ ನಿಲ್ಲುವಂತಾದರೆ. ಇಂತಹ ಶಾಲೆಗಳಲ್ಲಿ ಕಲಿಸುವವರಿಗೆ ಎಲ್ಲ ಮಕ್ಕಳೂ ತಲೆ ಬಾಗುತ್ತಾರೆ, ಗೌರವದಿಂದ.

ನೀನೀಗ terrorನಿಂದ ಎಲ್ಲರನ್ನೂ ಅನುನಾಯಿಗಳನ್ನಾಗಿ ಮಾಡಬೇಕೆಂದು ಹೊರಟಿದ್ದೀಯಾ. ನಿನ್ನ terrorಗೆ ಹೆದರಿ ಹೇಡಿಯಂತೆ ನಿನ್ನ ಹಿಂದೆ ತಿರುಗುವರು ನಿನಗೆ ಖುಷೀ ಕೊಡುತ್ತಾರೆಯೇ ? ಅದರ ಬದಲು ಎಲ್ಲರೂ ಸ್ವ ಇಚ್ಛೆಯಿಂದ ನಿನ್ನಲ್ಲಿ ಬಂದರೆಪ್ರತಿಯೊಬ್ಬನು ನಿನ್ನನ್ನು ನೋಡಿ ಗೌರವದಿಂದ ತಲೆಬಾಗುವಂತಾದರೆಹಾಗಾಗಲು ನೀನು ನಮ್ಮೊಟ್ಟಿಗೆ ಬೇರೆಯಬೇಕು. ನಮ್ಮ ಜೊತೆ ಪ್ರಗತಿ ಹೊಂದಬೇಕು. ಮುಚ್ಚಿಟ್ಟಿರುವ ಕೆಟಕಿ ಬಾಗಿಲನ್ನು ತೆರೆಯಬೇಕು. ಹೊಸ ಗಾಳಿಗೆ ಮೈಯೊಡ್ಡಬೇಕು.

ಕೊಲ್ಲುವುದು ಬದುಕಿಸುವಿಕೆಗಿಂತ ಸುಲಭವಾದದ್ದುಕೊಂದವರನ್ನು ಮತ್ತೆ ಹುಟ್ಟಿಸಲಾಗುವುದಿಲ್ಲ. Distructive ideaಗಳಿಂದ constructive ideaಗಳಿಗೆ ಬಂದರೆ ಏಷ್ಟು ಒಳ್ಳೆಯದಿತ್ತು. ನಿಮಗೇನೂ ದುಡ್ಡಿನ ತೊಂದರೆಯೇ ? ಕೇಳಿದರೆ ಹಣದ ಹೊಳೆಯೆ ಹರಿಬಲ್ಲರುನನ್ನ ಜೊತೆಗೆ ಕಾಲೇಜಿನಲ್ಲಿ 120 ಮಂದಿಗೆ ಇದ್ದಿದ್ದು ಎರಡು ಮುಸ್ಲಿಮ್ಸ್. ಆಮೇಲೆ 20 ಜನರ ಪ್ರೊಫೇಷನಲ್ ಕೋರ್ಸ್ ನಲ್ಲಿ ಒಬ್ಬಳೇ ಮುಸ್ಲಿಂ. ನನ್ನ ಪ್ರೊಫೆಷನಲ್ಲಿ ಯಾರು ಇಲ್ಲ. ಅದರ ಬದಲು ನನ್ನ ಪಕ್ಕ ಹತ್ತು ಯೋಗ್ಯ ಮುಸ್ಲಿಂ ಯುವತಿಯರನ್ನು ತಂದು ಕೂಡ್ರಿಸು ನೋಡುವ. ಒಬ್ಬ ಹಿಂದೂ ಮಗುವಿನ ಬದಲು ಹತ್ತು ಮಕ್ಕಳನ್ನು ಹೇರಿ ಅನ್ನುತ್ತಿಲ್ಲಹಾಗೆನಾದರೂ ಆದಲ್ಲಿ ಮೈನಾರಿಟಿ ಹಕ್ಕೂ ನಿಮ್ಮಿಂದ ತಪ್ಪಿ ಹೋಗುತ್ತೆ. Quantityಗಿಂತ quality ಮುಖ್ಯ.

ಭಾರತದ ಪ್ರಗತಿಯಲ್ಲಿ ನಿನ್ನದೆಷ್ಟು ಪಾಲಿದೆ ನೋಡಿಕೊ. ಯಾವ ಕ್ಷೇತ್ರದಲ್ಲಿ ನೀನು ಹಿಂದೆ ಬಿದ್ದಿದ್ದಿಯಾ ಎಂದು ಗುರುತಿಸಿಕೊ. ಎಲ್ಲ ಕಡೆ ನಿನ್ನ ಛಾಪಿರಲಿ. ನಿನ್ನ ಶಕ್ತಿ ಸರಿಯಾದ ಹಾದಿಗೆ ಹರಿದಲ್ಲಿ ಇಡೀ ಮಾಜಕ್ಕೆ ಹೆಮ್ಮೆಯನ್ನು ತರುವಂತಹ ಸಂಘಟನೆ ನಿನ್ನಿಂದ ಸಾಧ್ಯವಿದೆ. ಕಾಲ ಮಿಂಚುವ ಮೊದಲು ನಿನಗಿದು ತಿಳಿದಿದ್ದರೆ ಚೆನ್ನಾಗಿತ್ತುಶಾರುಖ್ ಖಾನ ಜೊತೆ ಹೆಚ್ಚಿನವರು ಗುರುತಿಸಿ ಕೊಳ್ಳುತ್ತಾರೆ. ಅವನು ಒಬ್ಬ ಮುಸ್ಲಿಂ ಎಂದು ಎಂದೋ ಮರೆತಿದ್ದಾರೆ. ಅದೇ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಏಷ್ಟು ಮಹನೀಯರಿಲ್ಲ. ಅವರಿಗೆ ಸಾಧ್ಯವಾದದ್ದು ನಿನ್ನ ಕೈನಲ್ಲಿ ಯಾಕೆ ಆಗುವುದಿಲ್ಲ. ಎಲ್ಲಿ ಇಲ್ಲವೋ ಅಸಮಾನತೆ, ಭ್ರಷ್ಟತೆ, ಅನ್ಯಾಯ, ಅಕ್ರಮ. ಮುಸ್ಲಿಂಗಳ ಒಳಗೆ ಇಲ್ಲವಾ? ಮುಸ್ಲಿಂ ದೇಶವಾದ ಕೂಡಲೇ ಎಲ್ಲ ಕಡೆ ಬಂಗಾರದ ಮಳೆ ಬೀಳುತ್ತಾ. ಅಲ್ಲೂ ಮನುಷ್ಯನ ಮೃಗೀ ಭಾವನೆಗಳು ಹೊರ ಚೆಲ್ಲುತ್ತಿರುತ್ತವೆ.

ನಿನಗೆ ನೆನಪಿದೆಯಾ. ಎಲ್ಲರೂ ಸೇರಿ ಸ್ವಾತಂತ್ರದ ಸಲುವಾಗಿ ಹೋರಾಟ ನಡೆಸಿದ್ದೆವು. ಎಲ್ಲರೂ ಒಂದೇ, ದೇಶವೂ ಒಂದೇ ಎಂದು ಎಲ್ಲೆಡೆ ಮೊಳಗುತ್ತಿದ್ದ ಸಮಯವದು. ಇದ್ದಕ್ಕಿದ್ದ ಹಾಗೆ ನಮ್ಮಿಬ್ಬರ ಮಧ್ಯೆ ದಾಟಕ್ಕಾಗದಂತಹ ಮುಳ್ಳಿನ ಬೇಲಿ ಸೃಷ್ಟಿಯಾಯಿತು. ಹಿಂದೂ ಬೇರೆ, ಮುಸ್ಲಿಂ ಬೇರೆ ಎಂದು. ಪಾಕಿಸ್ತಾನವನ್ನೇನೊ ಮುಸ್ಲಿಂ ದೇಶವನ್ನಾಗಿ ಮಾಡಿ ಅಲ್ಲಿದ್ದ ಹಿಂದೂಗಳನ್ನು ಹೊರ ಹಾಕಿದಿದರು. ಆದರೆ ನಾವೆಂದು ಮುಸ್ಲಿಮರನ್ನು ಹೊರಹಾಕಲಿಲ್ಲ. ಬದಲು ಇದು ಎಲ್ಲ ಧರ್ಮಗಳ ರಾಷ್ಟ್ರ ಎಂದು ಘೋಷಿಸೆದೆವು. ಸ್ವಾತಂತ್ರ ಎಲ್ಲರೂ ಕೂಡಿ ಸೇರಿ ನಡೆಸಿದ್ದ ಹೋರಾಟಕ್ಕೆ ಸಂದ ವಿಜಯವೆಂದು ಭಾವಿಸಿದೆವು. ಆದರೆ ನಿಮ್ಮಂತವರು ನಮ್ಮ ಜೊತೆ ಯಾವಾಗಲೂ ಬೇರೆಯಲೇ ಇಲ್ಲ. ನಮಗೂ ನಿಮ್ಮ ಜೊತೆ ಬೆರೆಯುವ ಅವಕಾಶ ಒದಗಿಸಲೇ ಇಲ್ಲ. ಮಸುಕಾಗುವ ಗೆರೆಯನ್ನು ಮತ್ತೆ ಮತ್ತೆ ತೀಡಿ ಎದ್ದು ಕಾಣುವ ಹಾಗೆ ಮಾಡಿದಿರಿ. ‘The battle has now begun and the dust will never settle down’ ಎನ್ನುತ್ತೀಯಲ್ಲ, ನಿನ್ನ ಬಗ್ಗೆ ನನಗೆ ಮತ್ತು ಇತಿಹಾಸಕ್ಕೆ ಯಾವಾಗಲೂ ವಿಷಾದವಿರುತ್ತದೆ.

ಇದನ್ನೆಲ್ಲ ಬರೆದಿದ್ದಕ್ಕೆ ನಾನು ಕಾಫಿರನಾಗಿ ಕಂಡು ನನ್ನ ಮೇಲೆ ಫತ್ವ ಹೋರಡಿಸುತ್ತಿಯ. ಇನ್ನಿಲ್ಲದ ದೈಹಿಕ/ಮಾನಸಿಕ ಬಾಧೆ ಕೊಡುತ್ತಿಯಾ. ನೀನು ಧರ್ಮದ ಅನುನಾಯಿಯಾಗಿದ್ದರಿಂದ ನನ್ನ ಮಾತಿಗೆ ಮುನ್ನಣೆ ಕೊಡುತ್ತಿಯ ಅಂದು ಕೊಂಡಿದ್ದೀನಿ. ಸರ್ವಶಕ್ತನಾದ ಅಲ್ಲಾಹು ಇದ್ದಾನೆ. ಎಲ್ಲವೂ ಅವನಿಗೆ ಸೇರಿದ್ದು. ಅನ್ಯ ಧರ್ಮೀಯ ಹಿರಿಯರೊಬ್ಬರು ಹೇಳಿದ್ದು, ಕ್ರಾಸ್ಸ್ವಸ್ತಿಕ್ಅಲ್ಲಾಹು ಎಲ್ಲದರ ಅರ್ಥ ಒಂದೇ ಎಂದು. ನಾನು ಇಲ್ಲ ಎಂದು. ನಾನು ಇದ್ದು ಇಲ್ಲದಂತಿರುವೆ, ಇಲ್ಲದೆಯೋ ಇದ್ದಿರುವೆ ಎಂದುಮನು ಧರ್ಮದ ಪ್ರಕಾರ ಒಬ್ಬ ಬ್ರಾಹ್ಮಣನಾಗಿ ಸಮಾಜಕ್ಕೆ ತಿಳಿ ಹೇಳುವ ಕರ್ತವ್ಯವನ್ನು ನಾನು ಮಾಡಿದ್ದೆನೆ. ಇಲ್ಲವೆಂದರೆ ಉಳಿದವರಿಗಿಂತ ನೂರು ಚಡಿಯೇಟುಗಳು ನನಗೆ ಜಾಸ್ತಿ ಬೀಳುತ್ತವೆ.

ಬರೆದು ನಿಲ್ಲಿಸಿದ ಮೇಲೆ ನನಗೀಗ ಎದೆಯಲ್ಲಿ ಉರಿ ಹತ್ತಿದೆ. ಜೋರಾಗಿ ಚೀರಬೇಕೆನ್ನಿಸುತ್ತಿದೆ. ಬಿಕ್ಕಳಿಸಿ ಅಳಬೇಕೆನಿಸುತ್ತಿದೆ. ಯಾರಿಗೆ ಏನು ಹೇಳಿದ್ರು ಉಪಯೋಗವಿಲ್ಲ. …………….ನನ್ನಂಥ ಬಿಳಿ ಪಾರಿವಾಳಗಳನ್ನು ಹಾರಿ ಬಿಡುತ್ತಿರ. ಆಮೇಲೆ ಹಿಡಿದು ರೆಕ್ಕೆ ಕತ್ತರಿಸಿ ಪಂಜರದಲ್ಲಿ ಕೂಡಿ ಹಾಕುತ್ತೀರ. ಇಲ್ಲಾ ಗುಂಡಿಕ್ಕಿ ಕೊಲ್ತೀರ. ಬದುಕ್ಕಂತೂ ಬಿಡುವುದಿಲ್ಲ…………….. ನನ್ನ ಕೈಗೆ ರಕ್ತ ತಾಕುತ್ತಿದೆ. ಸುತ್ತ ನರ ರಾಕ್ಷಸರು ನರ್ತಿಸುತ್ತಿದ್ದಾರೆ. ಎಲ್ಲ ಕಡೆ ಬೆಂಕಿ, ರಕ್ತ, ಚೀರಾಟ…………..

ಹೇಳಿ, ಭೂಮಿಯ ರಕ್ತದ ಹಸಿವು ಎಂದು ಇಂಗೀತು ??

ಮಣ್ಣ ರಕ್ತದಾಹ

-ಮತ್ತೆಂದೂ ಇಷ್ಟು ಉದ್ದ ನಾನು ಬರೆಯುವುದಿಲ್ಲ ! ಅಬ್ಬಾ!!

(ನೀಲಾಂಜಲ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ವಿನಾಕಾರಣ ಮಾಡುವ ಧರ್ಮ ನಿಂದನೆ, ಆರೋಪಗಳು ಇಲ್ಲಿ ಪ್ರಕಟವಾಗುವುದಿಲ್ಲ. ಉತ್ತರಗಳೂ ಕನ್ನಡದಲ್ಲಿ ಕಡ್ಡಾಯ. ನಾನು ಮೊದಲುಮಣ್ಣ ರಕ್ತದಾಹಎಂದು ಬರೆಯುವ ಬದಲುಹೇ ಮುಜಾಹೀದ್ದಿನ್ಎಂದು ಬರೆಯುವ ಅಂತಿದ್ದೆ. ಕೊನೆ ಗಳಿಗೆಯಲ್ಲಿ ರಕ್ತದಾಹವೇ ಹಿಡಿಸಿತು ! )

8 Responses to “ಮಣ್ಣ ರಕ್ತದಾಹ-೨”

 1. ಮಣ್ಣ ರಕ್ತದಾಹ -೧ « ನೀಲಾಂಜಲ Says:

  […] ಮಣ್ಣ ರಕ್ತದಾಹ-೨ […]

  Like

 2. Poornima Says:

  ಸೌ,
  ಚೆನಾಗ್ ಬರದ್ದೆ..
  ಇಷ್ಟ ಆತು.
  ಒಂದು ಪುಟಾಣಿ ಸಜೇಶನ್… ನಿನ್ ಬ್ಲಾಗ್‍ನ ಕಪ್ಪು ಬ್ಯಾಕ್‌ಗ್ರೌಂಡ್ & ಬಿಳಿ ಅಕ್ಷರಗಳು ಕಣ್ಣಿಗೆ ಸ್ವಲ್ಪ ಕಷ್ಟ ಕೊಡ್ತಲಾ ಓದಕಾದ್ರೆ!!!

  -ಪೂರ್ಣಿಮಾ

  Like

 3. vijayraj Says:

  ನಿಮ್ಮ ಚಿಂತನೆ ನೂರಕ್ಕೆ ನೂರು ಸರಿ.
  ನನ್ನ ವಿಚಾರವೂ ಅಷ್ಟೆ…ನಾವೆಲ್ಲರು ಆಯಾಯ ಧರ್ಮಗಳ ಉಧ್ಧಾರಕ್ಕೆ ಭಗವಂತನಿಂದ ನಿಯುಕ್ತರಾದ ಪ್ರತಿನಿಧಿಗಳು ನಾವೇ ಏನೋ ಅನ್ನುವ ರೀತಿ ಯೋಚಿಸುವ ಬದಲು ಸಾಮಾನ್ಯ ಮನುಷ್ಯರ ಹಾಗೆ ಯೋಚಿಸೋಕೆ ಶುರು ಮಾಡಿದ್ರೆ ಇದ್ಯಾವ ರಗಳೇನೂ ಇರಲ್ಲ.

  ನನ್ನ ಒಂದೇ ಒಂದು ಹಾರೈಕೆ – ಹಿಟ್ಲರನ ಜನಾಂಗೀಯ ದ್ವೇಷದ ಯುಗ ಮತ್ತೆ ಬಾರದಿರಲಿ… ಇಂದಿಗೂ ಎಂದೆಂದಿಗೂ…

  ನಿಮ್ಮ ಬ್ಲಾಗಿನ ಬ್ಯಾಕ್ ಗ್ರೌಂಡ್ ಬಣ್ಣದ ಬಗ್ಗೆ ನಂದೂ ತಕರಾರಿದೆ… ಬೇಗ ಬಣ್ಣ ಬದಲಾಯಿಸದಿದ್ರೆ ನನ್ನ ಕಣ್ಣಿನ ಡಾಕ್ಟರ್ ಕೊಡುವ ಬಿಲ್ ನಿಮಗೇ ಕಳಿಸಬೇಕಾಗುತ್ತೆ ಹುಷಾರ್ 🙂

  Like

 4. ಸಂದೀಪ್ ಕಾಮತ್ Says:

  ತುಂಬಾ ಒಳ್ಳೆಯ ಚಿಂತನೆಗಳು ಆದ್ರೆ ನೀವು ಇದನ್ನು ತುಂಬಾ ಸೀರಿಯಸ್ ಆಗಿ ಬರೆದಿದ್ರೆ Take It easy ನೀಲಾಂಜಲ. ಕೆಲವೊಂದು ವಿಷಯಗಳು ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
  ಮತಾಂಧ ಮುಸ್ಲಿಮರಿಗೆ ಕಿವಿಮಾತಿದೆ ಆದ್ರೆ ಅದನು ಯಾವ ಮಾತಾಂಧನೂ ಈ ಜನ್ಮದಲ್ಲಿ ಓದಲ್ಲ.
  ನವು ಭಾರತೀಯರು ಅವರಿಗೇನು ಅನ್ಯಾಯ ಮಾಡಿದ್ದೇವೆ ಅಂತ ಅವ್ರು ಈ ರೀತಿ ಮಾಡ್ತಾ ಇದ್ದಾರೋ ಇನ್ನೂ ಅರ್ಥ ಆಗಿಲ್ಲ.

  ಭೂಮಿಯ ರಕ್ತದಾಹ ಮನುಷ್ಯ ಸಂಕುಲ ಬದುಕಿರುವವರೆಗೆ ಇದ್ದೇ ಇರುತ್ತೆ .

  Like

 5. neelanjala Says:

  Poornima- ಥ್ಯಾಂಕ್ಸ್ ಕಣಮ್ಮೊ.
  vijayaraj-ನೀವು ಹೇಳಿದ್ದು ಸರಿ ಇದೆ. ನಿಮ್ಮ ಹಾರೈಕೆ ನನ್ನದು ಕೂಡ. ನಿಮ್ಮ ಬಿಲ್ ನ್ನು ನಾನು ಬರೆದು ಬರೆದು ತೀರಿಸ್ತಿನಿ, ನೀವು ನಿಮ್ಮ ಹೆಸರಲ್ಲಿ ಮಾಡಿಕೊಂಡು ತಿಂದ ಪಾಯಸದ ಬಿಲ್ ಕೊಟ್ಟಹಾಗೆ 😉
  -ದಯವಿಟ್ಟು ನೀವಿಬ್ಬರೂ ಸಮಯವಿದ್ದರೆ ಕಪ್ಪು ಕಲರ್ ವಿಷಯದಲ್ಲಿ ನನಗೂ ಮತ್ತು ಭಾಗ್ವತರಿಗೂ ನಡೆದ ಮಾತುಕತೆ ಗಮನಿಸಿ. ಈ ಪೋಸ್ಟ್‌ನ last ಕಾಮೆನ್ಟುಗಳು.
  https://neelanjala.wordpress.com/2008/08/07/%E0%B2%87%E0%B2%82%E0%B2%A6%E0%B2%BF%E0%B2%A8-%E0%B2%9A%E0%B2%B9%E0%B2%BE-%E0%B2%8E%E0%B2%82%E0%B2%A6%E0%B2%BF%E0%B2%A8%E0%B2%82%E0%B2%A4%E0%B2%BF%E0%B2%B2%E0%B3%8D%E0%B2%B2/

  ಸಂದೀಪ್ – ನಾನು ಇದಕ್ಕೆ ಸಂದೀಪ್ ಉತ್ತರವೇ ಕೊಟ್ಟಿಲ್ಲವಲ್ಲ ! ಅಂದು ಕೊಳ್ಳುತ್ತಿದ್ದೆ. ನನ್ನ ಪುಣ್ಯಕ್ಕೆ ನಾನು ಹೀಗೆ ಬರೆದಿದ್ದಕ್ಕೆ ನಿಮ್ಮಿಂದ ದೊಡ್ಡ ಲೆಕ್ಚರ್ ಸಿಗಲಿಲ್ಲ 😉 thanx for replying 😀 ನಿಮ್ಮ ಕಾಮೆಂಟಿನ ದಾಟಿ ಚೆನ್ನಾಗಿರುತ್ತದೆ. ನಾನು ಯೋಚಿಸದೇ ಇದ್ದ ದಾರಿ ತೋರಿಸುತ್ತದೆ. ವಾದ ಹುಟ್ಟು ಹಾಕುತ್ತದೆ. (ನನಗಿನ್ನೂ ಯಾವ ಮರದ ಕೆಳಗೆ ಕೂತರೂ ಜ್ಞಾನೋದಯವಾಗಿಲ್ಲ).

  Like

 6. hemashree Says:

  – ” ರಕ್ತದ ಹಸಿವು ಇನ್ನೂ ಜೀವಂತವಾಗೇ ಇದೆ. ನಮ್ಮ ಅಜ್ಞಾನದಲ್ಲಿ, ಮೌಡ್ಯದಲ್ಲಿ, ಹುಂಬತನದಲ್ಲಿ, ರಾಗ-ದ್ವೇಷಗಳಲ್ಲಿ, ಮಾತಾಂಧತೆಯಲ್ಲಿ. ”

  ತುಂಬಾ ಸರಿಯಾದ ಮಾತು ನೀಲಾಂಜಲಾ. ನಿಮ್ಮ ಮಾತಿಗೆ ನನ್ನ್ಸಸಹಮತ ಇದೆ.

  ನನಗೆ ಅನ್ನಿಸುವುದು :
  ೧. ಯಾಕೆ ನಾವು ಧರ್ಮ ಮತ ಜಾತಿ ಕುಲ ಎನ್ನುವ ಗೋಡೆಗಳ ಮೇಲೆಯೇ ನಡೆಯುತ್ತೇವೆ .
  ನಾನು ಹುಟ್ಟಿದ ಧರ್ಮದ ಮೇಲಂಗಿಯನ್ನು ಯಾವತ್ತೋ ನಾನು ಬಿಸಾಡಿಬಿಟ್ಟಿದ್ದೇನೆ. ನಾನೀಗ ಕೇವಲ ಒಬ್ಬ ಹೆಣ್ಣು ಜಾತಿಗೆ ಸೇರಿದ ಮನುಷ್ಯಳು.

  ೨. ಅವರವರ ಧರ್ಮ ಪಾಲಿಸುವುದಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಮತಾಂತರಗೊಂಡ ಮಾತ್ರಕ್ಕೆ ಜೀವನ ಸುಗಮವಾಗುತ್ತದೆ ಅಂದುಕೊಳ್ಳುವುದೂ ಮೂರ್ಖತನ.

  ೩.ಈ ಹೊತ್ತಿನಲ್ಲಿ ಆತ್ಮಾವಲೋಕನ ಅಗತ್ಯವಾಗಿ ಮಾಡಬೇಕಾದವರು ಧರ್ಮರಕ್ಷಣೆಯ ಗುತ್ತಿಗೆ ತೆಗೆದುಕೊಂಡವರು ಮತ್ತು ಜನಹಿತವನ್ನು ಕಾಲಕಸವಾಗಿಸಿದ ರಾಷ್ಟ್ರದ ನಾಯಕರು.

  ೪.ವಿಚಾರ ಮನಸ್ಸಿಗೆ ಹತ್ತುವುದು ಶಿಕ್ಷಣದಿಂದ. ಅರಿವು , ತಿಳುವಳಿಕೆಯಿಂದ.

  ೫. ಮುಂದಿನ ಪೀಳಿಗೆಯ ಜವಾಬ್ದಾರಿ ನಮ್ಮ ಮೇಲಿದೆ . ಅಲ್ವಾ . ಹಾಗಾದಲ್ಲಿ … ನಮ್ಮ ಮಕ್ಕಳಿಗೆ ಸಂಯಮ , ಸಹನೆ ಹೆಚ್ಚು ಹೆಚ್ಚು ಕಲಿಸಿಕೊಡೋಣ.

  ೬. ನಾವು ಬದುಕಿ ಬಾಳಲು, ಮಠಾಧಿಪತಿಗಳು, ಪಾದ್ರಿಗಳು, ಮೌಲ್ವಿಗಳು ಬೋಧಿಸುವ ಧರ್ಮ ಅಗತ್ಯವೂ ಅಲ್ಲ. ಅನಿವಾರ್ಯವೂ ಅಲ್ಲ.

  ……….. ಇದು ನಮ್ಮ ಜನರಿಗೆ ಅರ್ಥವಾಗಬೇಕಲ್ಲಾ. ಬರೆದು … ಮಾತನಾಡಿ … ವಾದ-ವಿವಾದ ಮಾಡಿ ಸಾಕಾಗಿ ಹೋಗಿದೆ. ನೋಡಿ, ಏನಾಯ್ತು justice nanavati ನೀಡಿದ report.

  ಇಸ್ರೇಲ್, ಆಫ್ರಿಕದ ಹಲವು ರಾಷ್ಟ್ರಗಳೂ, ಪಾಕಿಸ್ತಾನ … ಯಾಕೆ… ನಮ್ಮದೇ ಗುಜರಾತ್, ಕಾಶ್ಮೀರ, U P , ಮಹಾರಾಷ್ಟ್ರ, ಪೂರ್ವೋತ್ತರ ರಾಜ್ಯಗಳು ….. ನಾವು ಎಷ್ಟು ತಪ್ಪು ಮಾಡಿಯೂ ತಿದ್ದಿಕೊಳ್ಳುವುದಿಲ್ಲವಲ್ಲಾ… ಇತಿಹಾಸದಿಂದ ಪಾಠ ಕಲಿಯುವುದಿಲ್ಲವಲ್ಲಾ … ಅನ್ನುವ ವಿಷಾದ ಮನಸಲ್ಲಿ.

  Like

 7. hemashree Says:

  ಕಪ್ಪು ಬಣ್ಣದ ಬಗ್ಗೆ ನನ್ನದೇನೂ ಅಭ್ಯಂತರ ಇಲ್ಲ. ಆದ್ರೆ, ಕೊಂಚ font size ದೊಡ್ಡದು ಮಾಡಿದ್ರೆ ಒಳ್ಳೆಯದೇನೋ ಅನ್ನಿಸುತ್ತೆ.

  Like

 8. sunaath Says:

  ನೀವು ಹೇಳಿದ ಅಂಶಗಳನ್ನು ಶಿಕ್ಷಣ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಬೋಧಿಸಬೇಕು. ಅಂದರೆ, ಮುಸ್ಲಿಮ ಯೋಚನಾಕ್ರಮ ಬದಲಾಗಬಹುದೇನೊ?

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


%d bloggers like this: