ಕಾಮಾಲೆ ಕಣ್ಣು

ಕೆಲ ದಿನಗಳಿಂದ ಮತಾಂಧತೆ, ಮುಸ್ಲಿಮರು, ಕ್ರೈಸ್ತರು, ವೈದಿಕ ಧರ್ಮ, ಹಿಂದೂ ಧರ್ಮ, ಅಸ್ಪ್ರಶ್ಯತೆ..ಹೀಗೆ ಮುಂತಾದ ಲೇಖನಗಳನ್ನು ದುತ್ತಿದ್ದೇನೆ. ನನಗೊಂದು ಸಮಸ್ಯೆ ಬಂದು ಬಿಟ್ಟಿದೆ. sc/stನ ದೊಡ್ಡ ಆಫೀಸರ್ / ಶ್ರೀಮಂತನ ಮನೆಯಲ್ಲಿ ಅವನು ಪರಿಚಾರಕರ ಜೊತೆಗೆನೆ ಊಟ ಮಾಡ್ತಾನ ? ಅವರ ಮನೆಯಲ್ಲಿ ಕೆಲಸದವರು ಅಂತ ಕೀಳಾಗಿ ವರ್ತಿಸುವುದೇ ಇಲ್ಲವೇ ? ಅವರಿಗೆಂದು ಬೇರೆ ಲೋಟ, ತಟ್ಟೆ, ಬಟ್ಟೆಇರುವುದಿಲ್ಲವೇ ? ಅವರನ್ನು ಮನೆಯ ದೇವರ ಕೊಣೆಯೊಳಗೆ ಪೂಜೆ ಮಾಡಲು / ಒಳಗೆ ಕೂರಲು ಬಿಡುತ್ತಾರೆಯೆ ? ಅದೇ ಕೆಲಸವನ್ನು ಹುಟ್ಟಿನಿಂದ ಬ್ರಾಹ್ಮಣ ಅಂತಾದವನು (ಕೆಲಸದವರು sc/stಗಳಾಗಿದ್ದರೆ) ಮಾಡಿದರೆ ? ಹಾಗೆಯೇ ಬಾಸ್ ಒಬ್ಬ ತನ್ನ ಕೈ ಕೆಳಗಿನವನ ಜೊತೆ ಚೆನ್ನಾಗಿ ವರ್ತಿಸುವುದಿಲ್ಲ, ಕಿರುಕುಳ ಕೊಡುತ್ತಾನೆ ಅಂತಿಟ್ಟುಕೊಳ್ಳೊಣ. ಬಾಸ್ ಬ್ರಾಹ್ಮಣ/ಹಿಂದೂ ಗಿ, ಕೆಳಗಿನವನು sc/st/ಮುಸ್ಲಿಂ ಆಗಿದ್ದರೆ ? ಅಥವಾ ಬಾಸ್ sc/st/ಮುಸ್ಲಿಂ ಆಗಿ ಕೆಳಗಿನವನು ಬ್ರಾಹ್ಮಣ/ಹಿಂದೂ ಆಗಿದ್ದರೆ ?

ಮನುಷ್ಯನ ಕೀಳು ಭಾವನೆಗಳಿಗೆ, ಅಸೂಯೆ, ಮತ್ಸರ, ದ್ವೇಷಗಳಿಗೆ ನಾವ್ಯಾಕೆ ಜಾತಿ / ಧರ್ಮದ ಬಣ್ಣ ಬಳಿಯುತ್ತೇವೆ ?

4 Responses to “ಕಾಮಾಲೆ ಕಣ್ಣು”

 1. ತವಿಶ್ರೀ Says:

  ಸಮಯಕ್ಕೆ ಸರಿಯಾದ ಪ್ರಶ್ನೆಯನ್ನೇ ಎತ್ತಿದ್ದೀರಿ.

  ಜಾತಿ ಮತ ಧರ್ಮ ಇತ್ಯಾದಿ ಎಲ್ಲವೂ ನಾವುಗಳು ನಮ್ಮ ಮೂಗಿನ ನೇರಕ್ಕೆ ಮಾಡಿಕೊಂಡಿರುವುದು
  ಹುಟ್ಟಿನಿಂದ ಯಾವ ಜಾತಿ ಧರ್ಮವೂ ಬರುವುದಿಲ್ಲ. ಇಂತಹದ್ದೇ ಜಾತಿಯಲ್ಲಿ ಹುಟ್ಟಲು ಆಗುವುದೂ ಇಲ್ಲ
  ಇರುವುದೆರಡೇ ಜಾತಿ – ಹೆಣ್ಣು – ಗಂಡು. ಇಷ್ಟೆಲ್ಲಾ ಬುದ್ಧಿವಂತಿಕೆ ತೋರಿಸುವ ನಮ್ಮಲ್ಲೇ ನಮ್ಮ ಮೇಲೆ ಹತೋಟಿ ಇರುವುದಿಲ್ಲ
  ತನ್ನಿಂದ ಬೇರೆಯಾಗಿ ಇನ್ಯಾವುದೇ ಜೀವಕ್ಕೆ ತೊಂದರೆ ಕೊಡದವನೇ ಉತ್ತಮ
  ಇಂದು ಹೀಗಿದ್ದವನು (ಳು) ಇನ್ನೊಂದು ಕ್ಷಣದಲ್ಲಿ ಹಾಗಿರುವುದಿಲ್ಲ, ಹಾಗಿರಲಾಗುವುದಿಲ್ಲ – ಅಲ್ವೇ? ಅದೇನೋ ನನ್ನ ಮನ ಹೀಗೆ ಬರೆಸುತ್ತಿದೆ
  ಅದೆಷ್ಟರ ಮಟ್ಟಿಗೆ ನನ್ನ ಹುಚ್ಚು ಕಲ್ಪನೆಯನ್ನು ಒಪ್ಪುವಿರೋ ಏನೋ!

  ಗುರುದೇವ ದಯಾ ಕರೊ ದೀನ ಜನೆ

  Like

 2. ಸಂದೀಪ್ ಕಾಮತ್ Says:

  ಸರಿಯಾಗಿ ಹೇಳಿದ್ರಿ ನೀಲಾಂಜಲ.

  Like

 3. chetana chaitanya Says:

  ಇದೊಂದು ರೀತಿ ಖಾಯಿಲೆ. ಬಿಡಿ.
  ಎಲ್ಲೀವರ್ಗೂ ರಾಜಕೀಯ ಇರುತ್ತೋ, ಅಲ್ಲೀವರ್ಗೂ ಜಾತಿಗಳು ಇದ್ದೇ ಇರುತ್ತೆ!

  Like

 4. gurubaliga Says:

  ಎಸ್ ಸಿ ಎಸ್ ಟಿ ಶ್ರೀಮಂತನ ಮನೆಗೆ ಸತ್ಯನಾರಾಯಣ ಮಾಡಿಸಕ್ಕೆ ಬ್ರಾಹ್ಮಣ ಬರ್ತಾನೆ. ಊಟ ಮಾಡಲ್ಲ. ಅವನಿಗೋಸ್ಕರ ಎಳನೀರು ಮತ್ತು ಬಾಳೆ ಹಣ್ಣು ರೆಡಿ ಇಟ್ಟಿರ್ತಾರೆ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: