ಹೇಳು, ನಾ ಸತ್ತ ಮೇಲೂ ನನ್ನ ಓದ್ಕೊತಿಯಾ? ದಿಲ್ ಸೆ!

ಹೇಯ್,

ನನ್ನ ಹತ್ರ ಜಾಸ್ತಿ ಸಮಯ ಉಳಿದಿಲ್ಲ.

ನಾ ಸತ್ತು ಹೋದ ಮೇಲೂ ನನ್ನ ಹೀಗೆ ಓದ್ಕೊತಿಯಾ?
ದಿನಾ ಇದೆ ರೀತಿ ನನ್ನ ಹುಡುಕ್ತಿಯಾ ?
ಹೊಸದಿಲ್ಲ ಅಂತ ಚಡಪಡಿಸ್ತಿಯಾ?
ಇಲಾ, ಇನ್ನೊಂದು ಕ್ಲಿಕ್ ಗೆ ಹೊಸದರ ಬೆನ್ನು ಬೀಳ್ತಿಯಾ?
ಆಂ ?

ನೀ ನನ್ನ ಮರೆತು ಬಿಡ್ತಿಯ ಅಲಾ,
ನಾನಿದ್ದೆ ಅನ್ನೊದೇ !
ಲೈಬ್ರರೀಲಿ ವರ್ಷಗಟ್ಟಳೇ ಧೂಳು ಹಿಡಿದ ಪುಸ್ತಕದಂತೆ !!
ಮತ್ತೆಲ್ಲೋ ಓದಿದಾಗ ತರಹವೇ ಮೊದಲು ನೋಡಿದ್ದೆ ಅನ್ಕೊತಿಯಾ ?
ಇಲಾ, ಅಲ್ಲಿ ನಿನ್ನ ಕಣ್ ತುಂಬಿ ಬಂದು ನನ್ನೇ ಹುಡುಕುತ್ತಿಯಾ ?
ಹೇಳು………… ಆಂ ?

ಗುಮ್ಮನೇ ಕೂತು ನಿನ್ನನ್ನೇ ಕೇಳುತ್ತಿರೊದು, ರಗಳೆ ಮಾಡ್ಬೇಡ ,
ಒತ್ತಿ ಬಿಡ್ತಿನಿ ಅಂತಿಯಾ ?
ಓಹೋ ! ಮಾಡ್ಬೇಕಾಗಿದ್ದ ಕೆಲಸ ಈಗ ನೆನಪಿಗೆ ಬಂತಾ ?

ಇಲಾ, ನೀ ಏನ್ ನನ್ನ ಜೊತೆ ಅಂತೂ ಬರಲ್ಲ,
ನನ್ನೇ ನಿನ್ನ ಜೊತೆ ಕರ್ಕೊಂಡು ಹೋಗು ಅಂತಿಯಾ ?
ದಿಲ್ ಸೆ ?
ಒಂದೇ ಒಂದು ಕ್ಷಣ ………………….
ಡಮಾರ್ !

ದಿಲ್ ಸೆ ರೇ ……

( ಈಗಷ್ಟೇದಿಲ್ ಸೆಪಿಕ್ಚರ್ ನೋಡ್ದೆ 😀   )

Advertisements

9 Responses to “ಹೇಳು, ನಾ ಸತ್ತ ಮೇಲೂ ನನ್ನ ಓದ್ಕೊತಿಯಾ? ದಿಲ್ ಸೆ!”

 1. neelihoovu Says:

  ಅಬ್ಬಾ…ಎಷ್ಟು ಚಂದವಿತ್ತು ಎಲ್ಲಾ ಸಾಲುಗಳು…
  ಅದ್ಭುತ ಕವನವಾಗುತ್ತಿತ್ತಲ್ಲಾ…
  ಕೊನೆಯ ಪ್ಯಾರಾದಲ್ಲಿ ಯಾಕೆ ಹಾಗೆ ಮಾಡಿದಿರಿ…

  ಕೊನೆಯ ಪ್ಯಾರಾ ಬಿಟ್ಟು ಕವನವನ್ನು ಸುಮ್ಮನೆ ಹತ್ತತ್ತು ಸಲ ಓದಿಕೊಂಡೆ..:)

  Like

 2. neelanjala Says:

  neelihoovu,
  -ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಯಿತು.
  -ಇದು ಕವನವಾಗಿ ಬಿಟ್ಟಿದೆಯಾ !!! ಅಯ್ಯೋ ರಾಮಾ,
  -ಕೊನೆಯ ಪ್ಯಾರಾದಲ್ಲಿ ಯಾಕೆ ಹಾಗೆ ಮಾಡಿದಿರಿ…
  ‘ನನ್ನ ಹತ್ರ ಜಾಸ್ತಿ ಸಮಯ ಉಳಿದಿಲ್ಲ’ ಮೊನಿಷಾ ಕೋಯಿರಾಲಾ(human bomber) ಶಾರುಖ್ ನಿಗೆ(RJ) ಹೀಗೆ ಹೇಳುತ್ತ ನಿಜ ಹೇಳದೆ ಅವನ ಪ್ರೀತಿಯನ್ನು ನಿರಾಕರಿಸುತ್ತಾ ಇರುತ್ತಾಳೆ.
  ‘ನೀ ಏನ್ ನನ್ನ ಜೊತೆ ಅಂತೂ ಬರಲ್ಲ, ನನ್ನೇ ನಿನ್ನ ಜೊತೆ ಕರ್ಕೊಂಡು ಹೋಗು’ ಹೀಗೆ ಶಾರುಖ್ ಹೇಳುತ್ತಾನೆ. ಫಸ್ಟ್ ಟೈಮ್ ಆಕೆ ನೆವ ಹೇಳದೇ ಮೌನವಾಗಿ ಅವನ ಪ್ರೀತಿಯನ್ನು ಒಪ್ಪಿ ಕೊಳ್ಳುತ್ತಾಳೆ, ದಿಲ್ ಸೆ. ಆತ ಆಕೆಯನ್ನು ದಿಲ್ ಸೆ ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ. ಆಕೆ ಕಟ್ಟಿಕೊಂಡ ಬಾಂಬ್ ಸ್ಪೋಟವಾಗುತ್ತೆ. ಡಮಾರ್! ನಿನ್ನ ದೇಹದಲ್ಲಿ( ಆತ್ಮ) ನನ್ನ ಸೇರಿಸಿಕೊ, ದಿಲ್ ಸೆ ರೇ ಅನ್ನೋ ಹಾಡು ಬರುತ್ತೆ . ಆಗ ನನಗೆ ಮೇಲಿನ ಹಾಗೆ ತಲೆಗೆ ಬರುತ್ತೆ. ನಾ ಅದನ್ನು ಪೇಪರ್ ನಲ್ಲಿ ಗೀಚ್ತೆನೆ. ಆಮೇಲೆ ಸಮಯ ಸಿಕ್ಕಾಗ ಟೈಪಿಸ್ತೆನೆ ………..

  Like

 3. neelihoovu Says:

  🙂

  Like

 4. ತವಿಶ್ರೀ Says:

  ಆತ್ಮಕ್ಕೆ ಸಾವಿಲ್ಲ ಅಂತಾರೆ ಈ ದೇಹ ಬಿಟ್ಟು ಹೋದರೇನಂತೆ

  ಇರುವೆಯಾಗೋ ಆನೆಯಾಗೋ ಇದೇ ಬ್ಲಾಗಿನ ಲೋಕದಲ್ಲಿ ಓಡಾಡಿಕೊಂಡಿರಬಹುದು 🙂

  ಸುಂದರವಾದ ಬ್ಲಾಗೆಂಬ ತೋಟದಲ್ಲಿ ಸುವಾಸಿತ ಹೂಗಳು ಮತ್ತು ರಸಭರಿತವಾದ ಹಣ್ಣುಗಳು ಬಿಡುತ್ತಿವೆ. ನೀಲಾಂಜನ ದೇದೀಪ್ಯಮಾನವಾಗಿ ಲೋಕಕ್ಕೆ ದಾರಿ ತೋರುವ ದೀಪವಾಗಲಿ

  ಗುರುದೇವ ದಯಾ ಕರೊ ದೀನ ಜನೆ

  Like

 5. neelanjala Says:

  ಶ್ರೀನಿವಾಸ,
  ನಾನು ಮತ್ತೆ ಹುಟ್ಟುವ ಅಂತ ಮಾಡಿದ್ದೆ. ನೀವು ನೋಡಿದ್ರೆ ನನ್ನ ಇರುವೆ/ಆನೆ ಮಾಡಿ ಇಲ್ಲೇ ಕಟ್ಟಿ ಹಾಕೊಂಗೆ ಇದೆ ;D
  ನಾನು ನೀಲಾಂಜ’ಲ’, ನೀಲಾಂಜ’ನ’ ಅಲ್ಲ,
  ಯಾಕಾರೂ unique ಹೊಸ ಹೆಸರು ಇಟ್ಟುಕೊಳ್ಳೋ ಐಡಿಯಾ ನನಗೆ ಬನ್ತೊ !! ನನ್ನ ಒರಿಜಿನಲ ಹೆಸ್ರೆ ಚೆನ್ನಾಗಿತ್ತು ಅನ್ನಿಸ್ತಿದೆ. 😦
  ಇರಲಿ ಬಿಡಿ, ನಿಮ್ಮ ಹಾರೈಕೆಗೆ ಧನ್ಯವಾದಗಳು 🙂

  Like

 6. ಶ್ರೀ Says:

  ವೂಹೂ! ಸಖತ್ತಾಗಿದೆ, ಕವನನೇ ಇರ್ಬೇಕು:)
  (ಫಾಂಟ್ ಸೈಜಿಗೆ ಏನಾದ್ರೂ ಮಾಡಿ ತಾಯಿ, ಕಣ್ಣು ಕಿತ್ಥೋಗ್ತಿದೆ:p)

  Like

 7. ನವಿಲುಗರಿ Says:

  ದಿಲ್ಸೆ ಗಿಲ್ಸೆ ಇಂದಾ ಅಚೆ ಬಂದೂ ಓದಿದೆ ಯಾಕಂದ್ರೆ ನಾನು ದಿಲ್ಸೆ ನೋಡಿಲ್ಲ

  …ತುಂಬಾ ಕ್ಯೂಟ್ ಆಗಿದೆ..:)

  ನೀ ನನ್ನ ಮರೆತು ಬಿಡ್ತಿಯ ಅಲಾ,
  ನಾನಿದ್ದೆ ಅನ್ನೊದೇ !
  ಲೈಬ್ರರೀಲಿ ವರ್ಷಗಟ್ಟಳೇ ಧೂಳು ಹಿಡಿದ ಪುಸ್ತಕದಂತೆ !!
  ಮತ್ತೆಲ್ಲೋ ಓದಿದಾಗ ಈ ತರಹವೇ ಮೊದಲು ನೋಡಿದ್ದೆ ಅನ್ಕೊತಿಯಾ ?
  ಇಲಾ, ಅಲ್ಲಿ ನಿನ್ನ ಕಣ್ ತುಂಬಿ ಬಂದು ನನ್ನೇ ಹುಡುಕುತ್ತಿಯಾ ?
  ಹೇಳು………… ಆಂ ?

  ಇಲ್ಲಿ ನನಗೆ ದಿಲ್ಸೆ ಗಿಲ್ಸೆ ಯಾವುದು ಕಾಣೊಲ್ಲ..ಒಂದು ಅದ್ಭುತ ಪ್ರೀತಿಯ ಪ್ಯಾರ ಪ್ರೀತಿಯಿಂದ ಕಾಣಿಸುತ್ತೆ..:)

  ನೀವ್ ತುಂಬಾ ಮುದ್ದಾಗಿ ಬರಿತೀರಿ ಗೊತ್ತ?
  ನಿಮ್ಮ ಪ್ಯಾನು ನಾನು..;)

  Like

 8. neelanjala Says:

  ಶ್ರೀ,
  ಇದನ್ನು ಕವನವಾಗಿಸಿದ್ದಕ್ಕೆ ( ಸುಲಭವಾಗಿ) ಧನ್ಯವಾದಗಳು

  ನವಿಲುಗರಿ,
  ಕ್ಯೂಟ್.., ಅದ್ಭುತ ಪ್ರೀತಿ…, ಮುದ್ದಾಗಿ…, ಪ್ಯಾನು…. ಅಂದಿದಕ್ಕೆಲ್ಲ ಪ್ರೀತಿಯಿಂದ ಥ್ಯಾಂಕ್ಸ್ ಕಣಪ್ಪೋ

  Like

 9. skhalana Says:

  chennagide

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: