ಹಬ್ಬದ ದಿಗಿಲಿನ ಸದ್ದು

when_I_got_him

when_I_got_him_7weeks

ಪಾಪದ ಮೈನಾ, ಕೆಳಗಡೆ ಏನು ನಡೆಯುತ್ತಿದೆ ಎಂದು ತಿಳಿಯದೇ ಗಲಿಬಿಲಿಗೊಂಡಂತಿದೆ. ಮೊನ್ನೆಯಷ್ಟೇ ಅದರ ಮರಿಗಳು ಎಂದೋ ಒಡೆದು ಹೋಗಿರುವ ಮರ್ಕ್ಯುರಿ ಬಲ್ಬಿನ ಒಳಗಿನಿಂದ ಚಿಂವ್ ಚಿಂವ್ ಗುಟ್ಟುತ್ತಿತ್ತು. ಇಷ್ಟು ದಿನ ಸುಖವಾಗಿದ್ದ ಇವು ನಾಳೆಯಿಂದ ಬೆಚ್ಚಿ ಬೀಳಳಿವೆ.

ಇದು ಇದೊಂದರ ಕತೆಯಲ್ಲ. ಇವುಗಳ ತರಹ ಎಷ್ಟೊಂದು ಜೀವಿಗಳು ನಮ್ಮ ಆರ್ಭಟಕ್ಕೆ ನಲುಗಳಿವೆ.
ನಾನು ಸಹ ನಮ್ಮ ಸದ್ದು ಇವುಗಳ ಮೇಲೆ ಮಾಡುವ ಪರಿಣಾಮವನ್ನು ಎಂದೂ ಪರಿಗಣಿಸಿರಲಿಲ್ಲ, ಇಣಚಿ ಸಿಗುವವರೆಗೂ.

ಆವತ್ತು ಪಕ್ಕದ ಹೊಸ ಮನೆಯವರಿಗೆ ಬೋರ್ ವೆಲ್ ಕೊರೆಯುವ ಶುಭದಿನವಾಗಿತ್ತು. ಅವರೆಲ್ಲ ಅಂತರಗಂಗೆಗಾಗಿ ಪೂಜೆ ಸಲ್ಲಿಸಿ, ಡ್ರಿಲ್ಲಿಂಗ್ ಶುರು ಹತ್ತಿಸಿದರು. ಅದರ ಕರ್ಕಶ ಸದ್ದು ಮಾತ್ರ ಮುಚ್ಚಿದ್ದ ಕಿಟಕಿ ಬಾಗಿಲನ್ನು ತೂರಿಕೊಂಡು ಒಳ ಬರುತ್ತಿತ್ತು. ಯಾವತ್ತೂ ಕಿಟಕಿ ಸರಳಿನ ಮೇಲೆ ಕೂತು ಹೊರ ಜಗತ್ತನ್ನು ಕುತೂಹಲದಿಂದ ನೋಡುತ್ತಿದ್ದ ಚಿಂಚಿ ಓಡೋಡಿ ಬಂದು ನನ್ನ ಹೆಗಲೇರಿತ್ತು. ಅದಕ್ಕೆ ಏನಾಗುತ್ತಿದೆ ಎಂದು ಗೊತ್ತಾಗುತ್ತಿರಲಿಲ್ಲ. ನನ್ನ ಗಟ್ಟಿಯಾಗಿ ಹಿಡಿದುಕೊಂಡಿತ್ತು. ಸಾಮಾನ್ಯವಾಗಿ ಇಣಚಿಗಳು ಜೋರಾಗಿ ಶಬ್ದ ಬಂದರೆ ಬಾಲವನ್ನು ನಿಮಿರಿಸಿ ನಿಶ್ಚಲವಾಗಿ ನಿಲ್ಲುತ್ತವೆ. ಇದು ಸಹ ತನಗೆ ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಲಿದೆ ಎಂದು ಭಾವಿಸಿದಂತೆ ಇತ್ತು. ಅದು ಪಡುತ್ತಿರುವ ದಿಗಿಲು ನೋಡಲಾಗದೆ ಬಾತ್ ರೂಮಿನಲ್ಲಿ ಸದ್ದು ಜಾಸ್ತಿ ಕೇಳದ್ದರಿಂದ ಅದರ ಪೆಟ್ಟಿಗೆ (ಗೂಡು) ತಂದಿಟ್ಟು, ಅದನ್ನು ಬಟ್ಟೆಯಲ್ಲಿ ಸುತ್ತಿ ಒಳಗೆ ಬಚ್ಚಿಟ್ಟೆ. ಆದರೂ ಅದರ ಎದೆಬಡಿತ ಕಮ್ಮಿಯಾಗಿರಲಿಲ್ಲ.

ಮತ್ತೆ ದೀಪಾವಳಿಯಲ್ಲೂ ಚಿಂಚಿ ಇದೆ ರೀತಿ ಆಡಿತು. ಸಮಯದಲ್ಲಿ ಅದು ಹೊರಗೆಲ್ಲ ಸುತ್ತಾಡುವುದನ್ನು ಕಲಿಯುತ್ತಿತ್ತು. ಏಕ್‌ದಂ ಹೊರ ಚಟುವಟಿಕೆಗಳನ್ನು ನಿಲ್ಲಿಸಿ ಬಿಟ್ಟಿತು. ರಾತ್ರಿಯಾಗುತ್ತಿದ್ದಂತೆ ಗೂಡಿನಲ್ಲಿ ಮುದುರಿ ಹಾಯಾಗಿ ಮಲಗುತ್ತಿದ್ದ ಅದು ಇಡೀ ರಾತ್ರಿ ಪೆಟ್ಟಿಗೆಯ ಹೊರಗಡೆ ಕಳೆಯುತ್ತಿತ್ತು. ಪ್ರತಿ ಪಟಾಕಿಯ ಸದ್ದಿಗೂ ಬೆಚ್ಚಿ ಬೀಳುತ್ತಿತ್ತು.

ಇತ್ತೀಚಿಗೆ ನನಗಂತೂ ಅವು ಸ್ವಚ್ಚಂಧವಾಗಿ ಇರಬೇಕಾಗಿದ್ದ ಜಾಗವನ್ನು ನಾವು ಮನುಷ್ಯರು “survival for the fittest ” ಅಡಿಯಲ್ಲಿ ರಾಜಾರೋಷದಿಂದ ಅತಿಕ್ರಮಿಸಿಕೊಂಡು ಬಿಟ್ಟಿದ್ದೆವೆನೊ ಎಂದು ಅನಿಸುತ್ತಿದೆ. ಆದರೂ ಸಹ ಅವು ಮುರುಕಲಿನ, ಬಿರುಕಿನ ಸಂಧಿಗಳಲ್ಲಿ ನಮ್ಮೊಡನೆ ಬಾಳಲು ಕಲಿತಿವೆ.

ಈಗಂತೂ ಹಬ್ಬದ ಸರಣಿ. ನಮ್ಮ ಮನೆ ಎದುರಿನ ಪ್ರತಿ ಅಶೋಕ ಮರದಲ್ಲೊಂದು ಪುಟ್ಟ ಮನೆಯಿದೆ.
ಅವರನ್ನೆಲ್ಲ ಗಣಪತಿ, ದುರ್ಗಾ, ಲಕ್ಷ್ಮೀಯರು ಹೇಗೆ ಕಾಪಾಡಿಯಾರು ?? !!

9 Responses to “ಹಬ್ಬದ ದಿಗಿಲಿನ ಸದ್ದು”

 1. Anant Says:

  Tumba Chennagi baradde..

  Like

 2. kavita hargi Says:

  Lekhana chennagide.
  namma jeevanada sambhramagalu adestu putta jeevagala jeeva hinduttado….
  adakke ega maneya maadinalliruttidda gubbacchi galuu janara sahavasa bittive.

  Like

 3. vijayraj Says:

  nice one…
  nimma blaagu kannadaprabhadalli bandide nOdidraa?

  http://www.kannadaprabha.com/News.asp?Topic=114&Title=%86%DB%C7V%DB%BE%DA%DFy&ID=KPO20080910154106&nDate=

  Like

 4. neelihoovu Says:

  ತುಂಬಾ ಚೆನ್ನಾಗಿದೆ ಲೇಖನ.
  ನಮ್ಮ ಸಂಭ್ರಮಗಳು ಮಾತ್ರ ನಮ್ಮ ಕಣ್ಣಿಗೆ, ಬೇರೆ ಜೀವಿಗಳ ಸೂಕ್ಷ್ಮ ಜೀವನಕ್ಕೆ ಆಗುವ ತೊಂದರೆಗಳ ಅರಿವೇ ಇರುವುದಿಲ್ಲ.
  “ಮನುಷ್ಯನಿದ್ದಾನೆ ಎಚ್ಚರಿಕೆ” ಅಂತ ಮನಸ್ಸಿನಲ್ಲೇ ಹೇಳುತ್ತಿರುತ್ತವೇನೋ ಅವುಗಳು ಪಾಪ…

  Like

 5. neelanjala Says:

  Anant, Kavita, Vijay, neelihoovu – ಎಲ್ಲರಿಗೂ ಥ್ಯಾಂಕ್ಸ್ 🙂
  Vijay-ಹಾ, ನೋಡಿದ್ದೇನೆ. thanx for sending the link

  ನಾನು ಬರೆದದ್ದು ‘ಲೇಖನ ಚೆನ್ನಾಗಿದೆ’ ಅನ್ನೋ ಫೀಲಿನ್ಗ್ ಹುಟ್ಟಿಸೊ ಬದಲು , ಇವತ್ತಿನಿನ್ದ ನನ್ನ ಕೈಲಾದಷ್ಟು ಇವುಗಳಿಗೆ ತೊಂದರೆ ಕೊಡೊಲ್ಲ ಅನ್ನಿಸಿದರೆ ಏಷ್ಟು ಚೆನ್ನಾಗಿತ್ತು ಅಂತ ಅನ್ನಿಸ್ತಿದೆ. at least ಒಂದು ಪಟಾಕಿ ಕಮ್ಮಿ ಸುಟ್ಟಿದ್ರೆ …..

  Like

 6. neelihoovu Says:

  ನಾ ಪಟಾಕಿ ಹೊಡೆವುದ ಬಿಟ್ಟು ೧೦ ವರ್ಷವಾಯ್ತು ಮೇಡಂ..( ಆಗ ಪಟಾಕಿ ಸುಡುವುದು ಬಿಟ್ಟಿದ್ದು ಅದರ ಸದ್ದು ನನಗೇ ಆಗದ್ದರಿಂದ…)
  ಈಗ ಗುಬ್ಬಚ್ಚಿ ಬರಲೆಂದು ಮನೆ ಮುಂದೆ ಹಾಕಿಟ್ಟ ಅಕ್ಕಿ ಕಾಳು ಹಾಗೆಯೇ ಉಳಿದಿರುತ್ತದೆ. ನನ್ನ ಮೊಬೈಲ್ ನ ಮೇಲಿನ ಸಿಟ್ಟೇನೊ ಅದಕ್ಕೆ…
  ಅದೇನೇ ಇರಲಿ.. ನಿಮ್ಮ ಲೇಖನ ನಮ್ಮ ಗೆಳೆಯರಿಗೆ ಪಟಾಕಿ ಸುಡಬೇಡಿ ಅಂತ ಹೇಳುವಂತೆ ನೆನಪಿಸಿದೆ… ಅಷ್ಟು ಸಾಕಲ್ಲವೇ?

  Like

 7. neelanjala Says:

  neelihoovu,
  -ಅಷ್ಟಾದಲ್ಲಿ ಸಾಕು 🙂
  -ಗುಬ್ಬಿಗೆ ನಿಮ್ಮ ಮೊಬೈಲ್ ಮೇಲೆ ಖಂಡಿತ ಸಿಟ್ಟಿಲ್ಲ . ನಾನು ಮೊದಲು ನಿಮ್ಮ ಹಾಗೆ ತಪ್ಪು ತಿಳಿದು ಕೊಂಡಿದ್ದೆ.
  ಏಕೆಂದರೆ ಮುಂಬಯಿಯಲ್ಲಿ ರಾಶಿ ರಾಶಿ ಗುಬ್ಬಿಗಳಿವೆ. ದಿನಾ ನಾನು ಮನೆ ಮುಂದೆ ಹಾಕುವ ಅಕ್ಕಿ (ಬೇರೆ ಕಾಳು ಹಾಕಿದ್ರೆ ಮುಸೂ ನೋಡೊಲ್ಲ ) ತಿನ್ನಲು ಬರುತ್ತವೆ. ಹಾಗಂತ ಇಲ್ಲಿ ದೊಡ್ಡ ಮರಗಳಿಲ್ಲ. ಮುಂಬಯಿ ಒಳಗೆ sanjay gandhi national park/reserved forest ಇರುವುದು ಕಾರಣವೊ ಗೊತ್ತಿಲ್ಲ.
  ಊರಲ್ಲಿ ಗುಬ್ಬಿ ಇಲ್ಲದ್ದಕ್ಕೆ ಬೇರೆ ಕಾರಣವಿರಬೇಕು. ನಾವು ಮೊದಲಿನ ತರಹ ಮನೆ ಮುಂದೆ ಕಾಳು-ಕಡಿ ಬಿಸಿಲಿಗೆ ಒಣಗಿಸುವುದಿಲ್ಲವೆನ್ದೊ/ ಭತ್ತದ ಗದ್ದೆ ಕಡಿಮೆ ಮಾಡಿದ್ದಕ್ಕೊ/ ………..
  ನಿಮಗೆ ಗೊತ್ತಾ, ಭಾರತದಲ್ಲಿ ರಣಹದ್ದು ಖಾಲಿಯಾಗಿದೆಯಂತೆ. ಕಾರಣ ನಾವು ದನಕ್ಕೆ ಹಾಲು ಹೆಚ್ಚಿಸುವ ಸಲುವಾಗಿ ಕೊಡುವ ಇನ್ಜೆಕ್ಷ್ ನ್. ಆ ದನದ ಮಾಂಸ ತಿಂದು ಕೆಲವೇ ಗಂಟೆಗಳಲ್ಲಿ ಈ ಹದ್ದುಗಳು ಸತ್ತು ಹೋಗಿವೆಯಂತೆ !

  Like

 8. neelihoovu Says:

  ಈಗಷ್ಟೇ ಅಮ್ಮಂಗೆ ಫೋನ್ ಮಾಡಿದ್ದೆ.. ಮನೇಲಿ ಯಾವುದೋ ಹಕ್ಕಿ ಅಂತೆ… “ಅಕ್ಕಿ ಕಾಳು ಹಾಕಿದ್ರೂ ಮುಟ್ಟೋಲ್ಲ ನೋಡೋ ರಂಜಿತ್, ಆದ್ರೆ ಪದೇ ಪದೇ ಹಾಲಿನಲ್ಲಿರುವ ಕನ್ನಡಿ ನೋಡ್ಕೊಂಡು ಹೋಗುತ್ತದೆ” ಅಂತ ಹೇಳ್ತಾ ಇದ್ರು. ಯಾವುದೋ ಹೆಣ್ಣು ಹಕ್ಕಿ ಇರ್ಬೇಕು ಅಂತ ತಮಾಷೆ ಮಾಡಿದೆ.

  “ನಿಮಗೆ ಗೊತ್ತಾ, ಭಾರತದಲ್ಲಿ ರಣಹದ್ದು ಖಾಲಿಯಾಗಿದೆಯಂತೆ. ಕಾರಣ ನಾವು ದನಕ್ಕೆ ಹಾಲು ಹೆಚ್ಚಿಸುವ ಸಲುವಾಗಿ ಕೊಡುವ ಇನ್ಜೆಕ್ಷ್ ನ್. ಆ ದನದ ಮಾಂಸ ತಿಂದು ಕೆಲವೇ ಗಂಟೆಗಳಲ್ಲಿ ಈ ಹದ್ದುಗಳು ಸತ್ತು ಹೋಗಿವೆಯಂತೆ !”

  ಛೇ…!
  ನಾವು ನ್ಯಾಚುರಲ್ ಆಗಿ ಬದುಕುವುದು ಯಾವಾಗ ? ದುಡ್ಡಿನ ದಾಹ ಎಲ್ಲಿಂದ ಎಲ್ಲಿಗೆ ಪರಿಣಾಮ ಬೀರುತ್ತದೋ ನೋಡಿ..ಹೆಚ್ಚು ಹಾಲಿನ ಹುಚ್ಚು, ನಮ್ಮ ಮಕ್ಕಳಿಗೆ ಹದ್ದನ್ನೂ ಪುಸ್ತಕದಲ್ಲಿ ತೋರಿಸುವಂತೆ ಮಾಡುತ್ತಿದೆ.

  Like

 9. Kiran Kumar K hassan Says:

  Reall wonder madam, samanya padagalalli nimma asamaanya prakruti prema na pratiyond frame nallu …..nijavaglu nimma baraha odtiddaga nange gottildage kannal niru bantu..naanna manassu ballya jeevanakke odtu,4th std irbodansatte namma totadalli gidagallna kilbekadre 7-8 hakki motte(egg) sikkidvu,nange anstu v cmtn mistake anta,bec aa hakkigalu 1sala manushyaru tamma gudannu akramana madidre matte aa kade barolla,adru eno aseyinda alle bittu 2_3days wait madidvi bt.. hakki barlilla,konege nangondu idea bantu nammanenalli koli mari madlikke kudsidvi,so ashtu mottegaln tandu adrolge itte(intadkella namappaji mast encourage madtidru),asht motte mari advu nan kushige mitine illa,hero tara elrigu helkond bartidde,prati dina school inda banda takshana avgal jote ata adode nan full time duty..adre nan happy bahala dina irlilla..aa marigalu swalpa rekke balittidhage swbhavikavagi tappiskond belivolge hogtidvu bt avugala rakshane?..kage haddugalella dali idtidvu adru nanu bidde kasta pattu hiddu tandu bidtidde atleast swlpa dooddav agovargadru irlinta,adre nan shalege hodag daily 1adru miss agtittu,avag alta amman mele joru madtidde(papa avren madtare),konegond dina 1 marin nankaili ulskolokaglilla..adre ega atleast birds nodonandre..?adhunikatey sinikatege sikku..chili pili adta maneyangaladalli kalarav madtidda gubbachhiyinda hiddu eshto muddu muddada prani pakshi sankulagalella namgiinnu sigodu nenapugalalli-chitragalalli ansutte..ishtella adru namge bejan sigo hakki-kage(crow) prani_nayi(dog)..ekandre nammant manushruge suit agodu averde..kage tara berevrna hurt madtirtivi..nayigaltara elranna kachhoke nodtirtivi….!am rt?

  any way 1st time nim blog open madidini,tumba chennagide…(really nim blog adress kotte nan friend ge tumba thanks helbeku)1st time lengthy reply.!wt my old memory..

  Kiran kumar k
  3rd B.A.M.S
  A.M.V-Hubli

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s


<span>%d</span> bloggers like this: