copyright ಕದ್ದವರು

Hi everybody,

Today I went through the trauma faced by my favorite flicker members. This is not fare. I feel every body should know and respect copyright.Please don’t publish others stuff/photos/articles/artwork in your publishing without getting prior permission. If you still want to add others work, please give credit n link to their respective page.

ಕ್ಲಿಕ್ 1 ಕ್ಲಿಕ್ 2

ಈಗಷ್ಟೇ ಇವುಗಳನ್ನು ನೋಡಿ, ಪೇಪರ್ರಿನ ಬೇಜಾಬ್ದಾರಿತನಕ್ಕೆ ತುಂಬಾ ಬೇಜಾರಾಯಿತು.
ತುಂಬಾ ಮಂದಿ ನೆಟ್ ನಲ್ಲಿ ಸಿಗೋ ಇಮೇಜ್ ಗಳೆಲ್ಲಾ “ಫ್ರೀ” ಅಂದುಕೊಂಡುಬಿಟ್ಟಿರುತ್ತಾರೆ.
ಆಷ್ಟು ದೊಡ್ಡ ಪೇಪರ್ರಿನವರು ಹೀಗೆ ಮಾಡಬಾರದಿತ್ತು.

ಮೊನ್ನೆ ನನ್ನ ಕಾಲೇಜಿನ ಸಹಪಾಠಿಯೊಬ್ಬ ನನ್ನ ಕೇಳದೇ,
ನಾನು ತೆಗೆದ ಫೋಟೊಗಳನ್ನು (orkut) ಎತ್ತಿ ತನ್ನ orkut ಪೇಜ್ನಲ್ಲಿ ಹಾಕಿದ್ದ.
ಅವನು ಬೇರೆ ಖ್ಯಾತ ಪ್ರೋಡಕ್ಷನ್ ಹೌಸ್‌ನ ಲೀಗಲ್ ಅಡ್ವೈಸರ್ !
ನಾನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ತನ್ನ ಫ್ರೆಂಡ್ ಲಿಸ್ಟ್ ದಿಂದ ನನ್ನ ಡಿಲೀಟ್ ಮಾಡಿಬಿಟ್ಟ!!

ನಾನು ಮೊದಲು ಪೇಪರ್ರಿಗೆ ಕೊಡುತ್ತಿದ್ದ ಪಜಲ್ ಗಳದ್ದೆಲ್ಲ ಇನ್ನೊಂದು ಕತೆ.
ನಾನು ಮಾಡಿದ ಚಿತ್ರದ ತಲೆ-ಬುಡಗಳನ್ನು ಕೆತ್ತಿ
ತಮ್ಮ ಹೆಸರಲ್ಲಿ ಹಾಕಿ ಕೊಂಡ ಎಷ್ಟೋ ಮೇಜ್ ಗಳು ನನಗೆ ಸಿಕ್ಕಿವೆ.
ಆಗೆಲ್ಲ ಏಷ್ಟು ಸಿಟ್ಟು ಬರುತ್ತದೆ ಎಂದರೆ……..
ತಮ್ಮ ತಲೆ ಉಪಯೋಗಿಸಲು ಇಷ್ಟೊಂದು ಆಲಸ್ಯವೇ! !

ನಿಮ್ಮ ಬಳಿ ಇದಕ್ಕೇನಾದರೂ ಮದ್ದು ಇದೆಯಾ?
ನಿಮಗೂ ಹೀಗೆನಾದರೂ ಆಗಿದೆಯಾ?
ಇಲ್ಲಿ ಹಂಚಿಕೊಳ್ಳಿ.

(if interested to know more, pls read copyright )

13 Responses to “copyright ಕದ್ದವರು”

  1. sunaath Says:

    plagiarism ಅನ್ನೋದು ಬಹಳ ಹಳೆಯ ರೋಗ. Readers Digestನಲ್ಲಿ ಬಂದಂತಹ ಒಂದು First Person Account Storyಅನ್ನು ಕನ್ನಡದ magazine ಒಂದರಲ್ಲಿ ಒಬ್ಬ ಡಾಕ್ಟರರು ತಮ್ಮದೇ ಕತೆ ಅನ್ನೋ ತರಹ ಬರೆದಿದ್ದರು.
    ನಮ್ಮ ಕರ್ಮ ಅಂತ ಸುಮ್ಮನಾಗಬೇಕೇನೊ?

    Like

  2. Sandeep Kamath Says:

    ಹೆ ಹೆ ನಾನೂ ಕದೀತೀನಿ .
    ನೋಡೋಣ ಟ್ರೈ ಮಾಡ್ತೀನಿ ಸರಿ ಆಗೋದಿಕ್ಕೆ .ಆದ್ರೆ ತೀರಾ ಪರ್ಸನಲ್ ಆಗಿರೋದನ್ನು ಕದಿಯಲ್ಲ.

    ಒಂದು ವಿಚಾರ ಹೇಳ್ತೀನಿ ಆದ್ರೆ ನಿಂಗೆ ಬೇಜಾರಾಗುತ್ತೆ:(

    ಈ ಫೋಟೋಗ್ರಾಫರ್ ಗಳು ಈ ರೀತಿ ಬೇಜಾರಾಗೋದು ಸಹಜ.ಆದ್ರೆ ಅವ್ರು ಫೋಟೊ ತೆಗೆಯೋವಾಗ ಅನುತಿ ಕೇಳ್ತಾರಾ?? ಯಾವುದೋ ಚಿಕ್ಕ ಹುಡುಗ ಚಡ್ಡಿ ಹಾಕದೆ ಅವನ ಪಾಡಿಗೆ ಕೆರೆಗೆ ಹಾರ್ತಾ ಇರ್ತಾನೆ ,ಇವರು ಅದನ್ನು ಸೆರೆ ಹಿಡಿದು ನೆರಳು ಬೆಳಕಿನ ಸಂಯೋಜನೆ ಅಂತ ಪತ್ರಿಕೆಗೆ ಕಳಿಸಿ ಹೆಸರು ಗಿಟ್ಟಿಸ್ಕೋತಾರೆ .ಆ ಚದ್ದಿ ಹಾಕದ ಹುಡುಗನಿಗೆ ಕೊನೆ ಪಕ್ಷ ಚಾಕ್ ಲೇಟ್ ಆದ್ರೂ ಕೊಡ್ತಾರಾ ಇಲ್ಲ !!!

    ಹೀಗೆ ಬರೆದೆ ಬೇಜಾರು ಮಾಡ್ಕೋಬೇಡಿ.:)

    Like

  3. ಸಂಗನ Says:

    ಹೊ ಹೊ ಹೊ!!! ಸಂದೀಪ್ ಕಾಮತ್, ಒಳ್ಳೆ observation. ಆದರು ಇಲ್ಲಿ, ಪೇಪರಿನವರದು photographerಗಿಂತ ತೀರ ನೇರ ತಪ್ಪು ಅನಿಸುತ್ತಲ್ಲವ? ಅವರಿಲ್ಲಿ ಕೇಳುತ್ತಿರುವದು ಹೆಚ್ಚೇನು ಅಲ್ಲವಲ್ಲ, ಕ್ರೆಡಿಟ್ಟಾದರೂ atleast ಕೊಡಲೇಬೇಕು, ಹಾಗೆ ಯಾರಾರದೋ ಫೋಟೋಗಳನ್ನ ನೆಟ್‍ನಿಂದ ರಾಜಾರೋಶವಾಗಿ ಕದಿಯೋದು, ಸರಿ ಅಲ್ಲ.

    Like

  4. Sushrutha Says:

    a similar issue:
    http://www.desipundit.com/2008/09/03/times-of-india-steals-from-blogger/

    Like

  5. neelanjala Says:

    sunaath,
    “ನಮ್ಮ ಕರ್ಮ ಅಂತ ಸುಮ್ಮನಾಗಬೇಕೇನೊ?”-ನಾವಷ್ಟು ಕೈಲಾಗದವರಾ? ನಮ್ಮಿಂದ ಏನೂ ಸಾಧ್ಯವೇ ಇಲ್ಲವೇ ?
    sandeep,
    “ಹೆ ಹೆ ನಾನೂ ಕದೀತೀನಿ “- ಶುದ್ಧ ಭಂಡ ಧೈರ್ಯ !!
    ತಿಳುವಳಿಕೆ ಇರುವ ಫೋಟೋಗ್ರಾಫರ್ ಗಳು ಈ ರೀತಿ ಮಾಡುವುದಿಲ್ಲ. ಮಾಡೆಲ್ ನ ಪರ್ಮಿಶನ್ ಇಲ್ಲದೇ ಫೋಟೋ (ಅವರ ಮುಖ ಗುರುತಿಸುವಂತಿದ್ದರೆ ) ಪಬ್ಲೀಷ್ ಮಾಡುವಂತಿಲ್ಲ.
    sangana n sushrutha,
    thanx for supporting 🙂

    Like

  6. Gururaj Says:

    Neelanjala – ನೀವು ನಿಮ್ಮ Photographs ಮೇಲೆ watermarking ಮೂಲಕ copyright ವ್ಯಕ್ಥಪಡಿಸಭಹುದಲ್ಲ?

    Like

  7. ಸಂದೀಪ್ ಕಾಮತ್ Says:

    “ಹೆ ಹೆ ನಾನೂ ಕದೀತೀನಿ “- ಅನ್ನೋದು ಭಂಡ ಧೈರ್ಯ ಅಲ್ಲ

    ನನ್ನ ಪ್ರಕಾರ ನನ್ನದು ಪ್ರಾಮಾಣಿಕತೆ!!

    ಅದಿರ್ಲಿ ನಿಮ್ಮ ಕಾಪಿರೈಟ್ ಬಗೆಗಿನ ಕಾಳಜಿ ಮೆಚ್ಚಬೇಕಾದದ್ದೇ.
    ಆದ್ರೆ ಒಂದು ಹೇಳಿ …..

    ನೀವು ಯಾವತ್ತೂ ಮೈಕ್ರೋಸೊಫ್ಟ್ ನ ಪೈರೇಟೆಡ್ ವಿಂಡೋಸ್ ಕಾಪಿ ಬಳಸಿಲ್ವ??
    ಯಾವತ್ತೂ ಇಂಟರ್ನೆಟ್ ನಿಂದ ಹಾಡುಗಳನ್ನು ಡೌನ್ ಲೋಡ್ ಮಾಡೇ ಇಲ್ವ??
    ಯಾವತ್ತೂ ರಸ್ತೆ ಬದಿ ಸಿಗುವ ಅಥವ ಸಿಡಿ ಅಂಗಡಿಗಳಲ್ಲಿ ಬಾಡಿಗೆ ಗೆ ಕೊಡುವ ಸಿಡಿಗಳನ್ನು ಬಳಸೇ ಇಲ್ವ??
    ಯಾವತ್ತೂ ರಸ್ತೆ ಬದಿ ಸಿಗುವ ಪೈರೇಟೆಡ್ ಪುಸ್ತಕಗಳನ್ನು ಬಳಸೇ ಇಲ್ವಾ?
    ಯಾವತ್ತೂ ಸೈಬರ್ ಸೆಂಟರ್ ನಲ್ಲಿ ಸರ್ಫಿಂಗ್ ಮಾಡಿಲ್ವಾ(ಇಲ್ಲಿ ಎಲ್ಲಾ ಪೈರೇಟೆಡ್ ಇರೋದಲ್ವ??)
    ಯಾವತೂ ಕಾಲೇಜಿಗೆ ಬೇಕಾದ ಟೆಕ್ಸ್ಟ್ ಬೂಕ್ xerox ಮಾಡಿಲ್ವಾ??(ಇದೂ ಕಾಪಿ ರೈಟ್ ನ ಉಲ್ಲಂಘನೆ)

    ಮೇಲಿನ ಎಲ್ಲ ಪ್ರಶ್ನೆಗಳಿಗೂ ನಿಮ್ಮ ಉತ್ತರ ಇಲ್ಲ ಅನ್ನೋದಾದ್ರೆ ಅಭಿನಂದನೆಗಳು !
    ನೀವು ಬರೆದಿರೋದು ತಪ್ಪಲ್ಲ.
    ಆದ್ರೆ ಯಾವುದೇ ಒಂದು ಪ್ರಶ್ನೆಗೂ ಹೌದು ಅಂತ ಉತ್ತರಿಸಿದ್ರೆ ಬರೆಯುವ ಮುನ್ನ ಯೋಚಿಸಿ .
    ನನ್ನ ಉದ್ದೇಶ ನಿಮ್ಮನ್ನು ನೋಯಿಸುವುದಲ್ಲ. ಆದ್ರೆ ಇಂಥ campaign ಗಳಿಗೆ ಇಳಿಯುದು ಸುಲಭ ,ಆದ್ರೆ ಸಮರ್ಥಿಸುವುದು ತಂಬಾ ಕಷ್ಟ .

    Like

  8. neelanjala Says:

    ಪ್ರಿಯ ಸಂದೀಪ್,
    ನೀವು ಯಾವತ್ತೂ ಮೈಕ್ರೋಸೊಫ್ಟ್ ನ ಪೈರೇಟೆಡ್ ವಿಂಡೋಸ್ ಕಾಪಿ ಬಳಸಿಲ್ವ??
    -only for personal use, proffessional work ella leagal softwaresnalli

    ಯಾವತ್ತೂ ಇಂಟರ್ನೆಟ್ ನಿಂದ ಹಾಡುಗಳನ್ನು ಡೌನ್ ಲೋಡ್ ಮಾಡೇ ಇಲ್ವ??
    -no, I am not that much fan of music

    ಯಾವತ್ತೂ ರಸ್ತೆ ಬದಿ ಸಿಗುವ ಅಥವ ಸಿಡಿ ಅಂಗಡಿಗಳಲ್ಲಿ ಬಾಡಿಗೆ ಗೆ ಕೊಡುವ ಸಿಡಿಗಳನ್ನು ಬಳಸೇ ಇಲ್ವ??
    -ತುಂಬಾ ಸಲ. ಆದರೆ silver dvd/cd ಆದರೆ ಮಾತ್ರ. blue dvd/cd quality ಚೆನ್ನಾಗಿರೋಲ್ಲ ಅಂತ

    ಯಾವತ್ತೂ ರಸ್ತೆ ಬದಿ ಸಿಗುವ ಪೈರೇಟೆಡ್ ಪುಸ್ತಕಗಳನ್ನು ಬಳಸೇ ಇಲ್ವಾ?
    – ಇಲ್ಲ
    ಯಾವತ್ತೂ ಸೈಬರ್ ಸೆಂಟರ್ ನಲ್ಲಿ ಸರ್ಫಿಂಗ್ ಮಾಡಿಲ್ವಾ(ಇಲ್ಲಿ ಎಲ್ಲಾ ಪೈರೇಟೆಡ್ ಇರೋದಲ್ವ??)
    – ಹೌದು
    ಯಾವತೂ ಕಾಲೇಜಿಗೆ ಬೇಕಾದ ಟೆಕ್ಸ್ಟ್ ಬೂಕ್ xerox ಮಾಡಿಲ್ವಾ??(ಇದೂ ಕಾಪಿ ರೈಟ್ ನ ಉಲ್ಲಂಘನೆ)
    -ಇಲ್ಲ

    Like

  9. neelanjala Says:

    ಸಂದೀಪ್,
    ನೀವು ನಿಮಗೆ ಅನ್ನಿಸಿದ್ದು ನೇರವಾಗಿ ಹೇಳಿ. ನನಗೆ ಬೇಜಾರಿಲ್ಲ. ಪಬ್ಲಿಕ್‌ನಲ್ಲಿ ನಾನು ಹೇಳ್ಬೇಕಾಗಿದ್ದನ್ನು ಹೇಳುವ ಮುಂಚೆ ಸಾಕಷ್ಟು ಯೋಚಿಸಿರುತ್ತೇನೆ. comments ಕೇಳುವ ಧೈರ್ಯವಿಲ್ಲ ಅಂದರೆ ಬ್ಲಾಗ್ ಮುಚ್ಚಿ ಮನೆಯಲ್ಲಿ ರಗ್ಗು ಹೊದ್ದು ಮುಖ ಮುಚ್ಚಿ ಕುಳಿತುಕೊಳ್ಳಬೇಕಾದೀತು 😀
    “ಆದ್ರೆ ಇಂಥ campaign ಗಳಿಗೆ ಇಳಿಯುದು ಸುಲಭ ,ಆದ್ರೆ ಸಮರ್ಥಿಸುವುದು ತಂಬಾ ಕಷ್ಟ ”
    ನೀವು ಹೇಳಿದ್ದು ನನಗೆ ಅರ್ಥ ಆಗಿದೆ. ನಾವು ಗೊತ್ತಿದ್ದೋ ಗೊತ್ತಿಲ್ದೆ ಈ ತರಹದ illegal ಕೆಲಸಗಳಿಗೆ support ಮಾಡ್ತಿವಿ.
    ಆದರೆ ……..
    “This is not fare. I feel every body should know and respect copyright.Please don’t publish others stuff/photos/articles/artwork in your publishing without getting prior permission. If you still want to add others work, please give credit n link to their respective page.”
    ಅಂತ ನಾ ಕೇಳಿದ್ದು ತಪ್ಪಾ ? ?
    ಹೇಳಿ.
    for eg. :
    ಕಟುಕ (ಕುರಿ ಕಡಿಯೊವನು), ಇನ್ನೊಬ್ಬನನ್ನು ಉದ್ದೇಶಿಸಿ ‘ಆತ ಮನುಷ್ಯನನ್ನೇ ಕಡಿತಾನೆ’ ಅಂತ ಖಂಡಿಸೋದು/ಹೇಳೊದೇ ದೊಡ್ಡ ತಪ್ಪಾಗುತ್ತಾ ??

    Like

  10. ಸಂದೀಪ್ ಕಾಮತ್ Says:

    ನೀಲಾಂಜಲ ,

    ನಿಮ್ಮ ಪ್ರಾಮಾಣಿಕತೆ ಕೂಡ ಮೆಚ್ಚತಕ್ಕದ್ದು !(ನನ್ನ ಅಪ್ರಿಯವಾದ ಕಮೆಂಟ್ ಪ್ರಟಿಸಿದ್ದಕ್ಕೆ)
    ನೀವು ಕೂಡ ಕಾಪಿ ರೈಟ್ ಉಲ್ಲಂಘಿಸಿದ್ದುದರಿಂದ (ತಿಳಿದೋ ,ತಿಳಿಯದೆಯೋ ,ಪರ್ಸನಲ್ ಅಥವ ಆಫೀಸಿಗೆ that doesn’t matter) ಈ ಕಾಪಿ ರೈಟ್ campaign ಬಗ್ಗೆ ಸ್ವಲ್ಪ ಎಚ್ಚರದಿಂದ ಬರೀರಿ.

    ನಾನು ವೈಯುಕ್ತಿಕ ಕೆಲಸಕ್ಕೆ ಮಾತ್ರ ಕಾಪಿರೈಟ್ ಉಲ್ಲಂಘಿಸ್ತೀನಿ ಅನ್ನೋದು excuse ಅಲ್ಲ ಅಲ್ವಾ??
    ಯಾವಾಗ ನಾವು ಸ್ವತ: ಇದನ್ನು ಪಾಲಿಸೋಕಾಗಲ್ಲ ,ಬೇರೆಯವ್ರಿಗೆ ಇದನ್ನು ಭೋದಿಸೋದೂ ಸರಿ ಅಲ್ಲ ಅಲ್ವ??

    ತುಂಬಾ ಇಷ್ಟಆಯ್ತು ನಿಮ್ಮ ಪ್ರಾಮಾಣಿಕತೆ .
    All the best for your campaign !

    Like

  11. neelanjala Says:

    gururaj,
    ಹೌದು, ಹಾಗೆ ಮಾಡಬಹುದು. ಆದರೆ water markನ photoshopನಲ್ಲಿ ತೆಗೆದು publish ಮಾಡಿದ್ರೆ ಏನು ಮಾಡೋದು ? copyright mark ಅನ್ನೇ crop ಮಾಡಿದ್ರೆ ?? ಅದು easy ಕೂಡ.
    ಬದಲು flickr photographersಗೆ phone/email ಮಾಡಿ permission ಕೇಳಿದ್ರೆ ಉತ್ತಮ ಅಲ್ವಾ?
    ನನ್ನ ಮೇಜ್ ಗಳಿಗೆ copyrightಚಿಹ್ನೆ ಮತ್ತು all rights reserved ಅಂತ ಸಹ ಇದ್ದರು use ಆಗಿಲ್ಲ 😦

    Like

  12. neelanjala Says:

    -aaaaaaaaaaaaaaaaaaaaah!
    “ಯಾವಾಗ ನಾವು ಸ್ವತ: ಇದನ್ನು ಪಾಲಿಸೋಕಾಗಲ್ಲ ,ಬೇರೆಯವ್ರಿಗೆ ಇದನ್ನು ಭೋದಿಸೋದೂ ಸರಿ ಅಲ್ಲ ಅಲ್ವ??”
    ಕಟುಕ (ಕುರಿ ಕಡಿಯೊವನು), ಇನ್ನೊಬ್ಬನನ್ನು ಉದ್ದೇಶಿಸಿ ‘ಆತ ಮನುಷ್ಯನನ್ನೇ ಕಡಿತಾನೆ’ ಅಂತ ಖಂಡಿಸೋದು/ಹೇಳೊದೇ ದೊಡ್ಡ ತಪ್ಪಾಗುತ್ತಾ ??
    -I have not given excuse. “ನೀವು ಹೇಳಿದ್ದು ನನಗೆ ಅರ್ಥ ಆಗಿದೆ. ನಾವು ಗೊತ್ತಿದ್ದೋ ಗೊತ್ತಿಲ್ದೆ ಈ ತರಹದ illegal ಕೆಲಸಗಳಿಗೆ support ಮಾಡ್ತಿವಿ.”
    -“ನನ್ನ ಅಪ್ರಿಯವಾದ ಕಮೆಂಟ್” alla, nIvu tale kelage maDi nintu yochistiddire annistu 🙂 bEjaragabEDi.
    -ಕಾಪಿ ರೈಟ್ ಉಲ್ಲಂಘಿಸಿದ್ದುದರಿಂದ ??? ಪರ್ಸನಲ್ ಅಥವ ಆಫೀಸಿಗೆ that “doesn’t matter” ??
    uff! pls read and understand about copyright. its not a sooooooooo simple concept. mattu barahadalli nanu Enu hELiddini annodu innondu sala odi artha maDikonDare chennagittu.

    – nimma tarahane uttarisodaadalli, yaradru nimma tumba tumba valle barahavannu/workannu (nivu kasta pattu maDiddu ) nimma permission illade tamma hesaralli publish maDi jasti jasti duDDu tagolli. adu nimage bereyavarinda gottagali.
    agelladaru nimage konchanadru bEjaradre (?) nanage hELi. aaga nIvu nanage kELida prashenella naanu nimage parat kELtini. hengide idea?
    -nillistini.

    Like

  13. ಸಂದೀಪ್ ಕಾಮತ್ Says:

    ಅಯ್ಯೊ ನನಗೂ ನಿಮ್ಮ ಕಷ್ಟ ಅರ್ಥ ಆಯ್ತು ನೀಲಾಂಜನ!
    ನನ್ನ ಒಳ್ಳೆಯ ಕೆಸ ಬಿಡಿ ಕೆಟ್ಟದಾಗಿರೋ ಕೆಲಸ ಕದ್ರೂ ನಂಗೆ ಬೇಜಾರಾಗುತ್ತೆ.ನಮ್ಮ ಬೇಸರವನ್ನು ವ್ಯಕ್ತಪಡಿಸೋದೂ ಸರೀನೇ .
    ನನ್ನ ಅನಿಸಿಕೇನೂ ಅದೇ ಆಗಿತ್ತು .ಕಾಪಿ ರೈಟ್ ಅನ್ನೋದು ಅಷ್ಟು ಸಿಂಪಲ್ ಅಲ್ಲ ಅನ್ನೋದು .

    ಯಾವಾಗ ನಾವು ಕಾಪಿರೈಟ್ ಉಲ್ಲಂಘಿಸೋರನ್ನು ಪ್ರತ್ಯಕ್ಷ ಅಥವ ಪರೋಕ್ಷ ರೀತಿಯಿಂದ ಸಹಕರಿಸ್ತೀವಿ,ಇನ್ನೊಬ್ಬರ ಬಗ್ಗೆ ಹೇಳೋದು ಸರಿ ಅಲ್ಲ ಅನ್ನಿಸ್ತು.
    ಇಂಥ ವಿಷಯ ಎಲ್ಲ ನಮಗೆ ಸ್ವತ: ಕಷ್ಟ ಬಂದಾಗ ಗೊತ್ತಾಗೋದು ಅಲ್ಲಿ ತನಕ ಸುಮ್ನೆ ಇರ್ತೀ್ವಿ.
    ನಾವು ಕಾಲೇಜಲ್ಲಿ ಇರ್ಬೇಕಾದ್ರೆ ಬೇಕಾಬಿಟ್ಟು xerox ತಗೊಂಡು ಓದ್ತೀವಿ .ಆದ್ರೆ ನಾವೆ ಸ್ವತ: text book ಏನಾದ್ರೂ ಬರೆದ್ರೆ ಅದ್ರಲ್ಲಿ ಕಾಪಿರೈಟ್ ಲೇಖಕರದ್ದು ! ಇದರ ಯಾವುದೇ ಭಾಗವನ್ನು xerox ಮಾಡಬಾರದು ಅಂತೀವಿ.

    ನೀವು ವಾಟರ್ ಮಾರ್ಕ್ ಅಲ್ಲ ಏನೇ ತಿಪ್ಪರಲಾಗ ಹಾಕಿದ್ರೂ ಕದಿಯೋರು ಕದ್ದೇ ಕದೀತಾರೆ. ಹಾಗಂತ ನಾನು ಅದನ್ನ ಸಮರ್ಥಿಸ್ತೀನಿ ಅಂತಲ್ಲ .
    Take it easy ಅಂದೆ ಅಷ್ಟೆ.

    Like

ನಿಮ್ಮ ಟಿಪ್ಪಣಿ ಬರೆಯಿರಿ