ಅವಳು-ಇವಳು

ಇವಳು ಮನೆ ಕೆಲಸದ ಅವಳಿಗೆ ಪ್ಲೇಟಿನಲ್ಲಿ ಸ್ಪೂನ್ ಹಾಕಿ ಉಪ್ಪಿಟ್ಟು ಕೊಟ್ಟಳು.
ಇವಳು ಬರಿಗೈಯಲ್ಲಿ ಅವಳ ಜೊತೆ ಸೇರಿ ಆರಾಮವಾಗಿ ತಿನ್ನುತ್ತಿದ್ದಳು.
ಅವಳಿಗೆ ಸ್ಪೂನ್ ಇಲ್ಲದಿದ್ದರೆ ತಿನ್ನಲಿಕ್ಕಾಗುವುದಿಲ್ಲವಂತೆ.
ಅವಳು ಚಾ ಕುಡಿಯುವ ಪರಿಯನ್ನು ನೋಡಬೇಕು.
ಡೈನಿಂಗ್ ಟೇಬಲಿನ ಖುರ್ಚಿಯ ಮೇಲೆ ಕಾಲ ಮೇಲೆ ಕಾಲು ಹಾಕಿ ಕೂತು ಚಾ ಹೀರುತ್ತಾಳೆ.
ಕೆಲವೊಮ್ಮೆ ಸಾಸರ್ ಸಹ ಬೇಕಾಗುತ್ತೆ.

ಮೊನ್ನೆ ತಾನೇ ಹಾಸ್ಟೇಲ್ ಸೇರಿದ ಹಳ್ಳಿಯಿಂದ ಬಂದ ಅವಳು
ಇವತ್ತು ಥೇಟ್ ಮಾರ್ಡನ್ ಅಪ್ಸರೆಯಾಗಿದ್ದಾಳೆ.  ಟೈಟ್ ಜೀನ್ಸ್, ಟಿ ಶರ್ಟ್,
ಕೆತ್ತಿ ತೀಡಿದ ಹುಬ್ಬು, ಬಣ್ಣ ಬಳಿದ ಮುಖ,
ಮಿಂಚುತ್ತಿರುವ ತುಟಿ. ಕೊಂಕಿಸುತ್ತ, ಉಲಿಯುವ ಆ ಪರಿ!
ಇವಳು ಪೇಟೆಯಿಂದಲೆ ಬಂದವಳು.
ಆದರೆ ಯಾವುದೇ ತಳಕು ಬಳುಕಿಲ್ಲ.
ಸೀದಾ ಸಾದಾ ಮಾತು, ನಗು ಮತ್ತು  ಬಟ್ಟೆಗಳು.

ಅವಳು ಸೇಲ್ಸ್ ಗರ್ಲ್. ಒಳಗೆ ಬಂದವಳೇ ಸೋಫಾದ ಮೇಲೆ ಕುಕ್ಕರಿಸಿ,
ಕಾಲ ಮೇಲೆ ಕಾಲು ಹಾಕಿ, ಬಿಂಕದಿಂದ i know, u know ಎನ್ನುವವಳು.
ಇವಳು ಅಲ್ಲೇ ಪಕ್ಕದಲ್ಲೇ ಕಂಭಕ್ಕೆ ಒರಗಿ ನಿಂತು ಅವಳು
ಹೇಳಿದ್ದನ್ನೆಲ್ಲಾ ಕೇಳಿ ಮುಗುಳುನಗುತ್ತ ಅಚ್ಚ ಕನ್ನಡದಲ್ಲಿ ಬೇಡ ಅನ್ನುವವಳು.

ಆತ್ಮ ವಿಶ್ವಾಸವು  ಜಾಸ್ತಿ ಜನಕ್ಕೆ ಹೊರಗಿನಿಂದ ಒಳಗೆ ಬರುತ್ತದೆ.
ಕೆಲ ಒಬ್ಬರಿಗೆ ಒಳಗಿನಿಂದಲೇ ಇರುತ್ತದೆ.
ಹಾಗೂ
ಈ ಇಬ್ಬರೂ ಒಬ್ಬರೋಬ್ಬರನ್ನು ನೋಡಿ ಮುಸುಮುಸು ನಗುತ್ತಲೇ ಇರುತ್ತಾರೆ.

Advertisements

3 Responses to “ಅವಳು-ಇವಳು”

 1. vijayraj Says:

  aatamavishwaasa Olaginda bandaaga..adakke Torike bEkaagirolla…
  avara idee vyaktitvadallE adu adakavaagirutte…

  ಇಬ್ಬರೂ ಒಬ್ಬರೋಬ್ಬರಿಗೆ ಅಣಕಿಸಿ ಮುಸು-ಮುಸು ನಗುತ್ತಲೇ ಇರುತ್ತಾರೆ

  idee haaDu hEluva arthakkinta ee saalu swalpa vibhinna artha hELida haage kaanuttalla. aatmavishwaasa oLagE iruvavrige , adu illadavarannu anakisuva agatya iruttaa?

  Like

 2. neelanjala Says:

  ನಮಸ್ಕಾರ vijayraj,
  ನೀವು ಹೇಳಿದ್ದು ಸರಿ ಇದೆ. ಅದನ್ನು ‘ನೋಡಿ’ ಗೆ ಬದಲಾಯಿಸಲಾಗಿದೆ.

  Like

 3. gurubaliga Says:

  ಮೊನ್ನೆ ಯಾರೋ ಹೇಳ್ತಾ ಇದ್ರು.
  ನಮ್ಮ ಹಳ್ಳಿಯ ಹುಡುಗ ಹುಡುಗಿಯರಿಗೆ ಬರೇ ಕಾನ್ಫಿಡೆನ್ಸ್ ನ ಕೊರತೆ ಇದೆ. ಅದು ಬಿಟ್ಟರೆ ಅವರು ಪೇಟೆಯವರಿಗಿಂತ ಒಂದು ಕೈ ಮೇಲೇನೆ ಅಂತ.

  ನಿಮ್ಮ ಪದ್ಯದಂತಹ ಗದ್ಯ ಚೆನ್ನಾಗಿದೆ.

  ಆದರೆ ನೀವು ಹಳ್ಳಿ ಪೇಟೆಯ ನಡುವೆ ಸ್ವಲ್ಪ ಗಲಾಟೆ ತಂದು ಬಿಟ್ರಿ.

  ಎಷ್ಟೋ ಪೇಟೆಯ ಹುಡುಗರಿಗೆ ಕಾನ್ಫಿಡೆನ್ಸ್ ಮಾತ್ರ ಇರತ್ತೆ. ಆದರೆ ಕೆಲಸಕ್ಕೆ ಇಳಿಯುವಾಗ ಗೊತ್ತಾಗತ್ತೆ ಅವರಿಗೆ ಉಳಿದಿದ್ದು ಏನೂ ಇಲ್ಲಂತ.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: