ನಾಳೆಯಿಂದ ನಾನಿಲ್ಲಿ ಇರುವುದಿಲ್ಲ ಎಂದು ಇವಕ್ಕೆ ಹೇಗೆ ಹೇಳುವುದು? ಪ್ರತಿದಿನ ಮಧ್ಯಾಹ್ನದ ಊಟದ ಜೊತೆಗೆ, ಟೀ ಜೊತೆಗೆ ಕಂಪನಿ ಕೊಡುತ್ತಿದ್ದ ಇವುಗಳನ್ನು ಇಲ್ಲಿಯೇ ಬಿಟ್ಟು ದೂರ ಹೋಗುತ್ತಿದ್ದೇನೆ. ಇನ್ಮುಂದೆ ಬೇಕಾದಾಗ ಬಂದು ನೀರಲ್ಲಿ ಆಡಲು ಇವಕ್ಕೆ ಇಲ್ಲಿ ನೀರುದಾನಿ ಇರುವುದಿಲ್ಲ. ಬೇಕಾದಾಗ ಬಂದು ತಿನ್ನಲು ಕಾಳುಗಳೂ ಇರುವುದಿಲ್ಲ. ಕಾಳುಗಳು ಖಾಲಿಯಾದಾಗ ಕಂಬಿಯ ಮೇಲೆ ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದರೆ, ಅತ್ತಿಂದಿತ್ತ ಕಿಟಕಿಯ ಬಳಿ ಸುಳಿಯುತ್ತಿದ್ದರೆ ಗಮನಿಸುವರ್‍ಯಾರಿಲ್ಲ. ಮುಂದೆ ನಮ್ಮ ಜಾಗದಲ್ಲಿ ಬರುವವರು ಕೊಳಕು ಪಾರಿವಾಳಗಳು ಎಂದು ಇವನ್ನು ಓಡಿಸಿ ಕಿಟಕಿಗೆ ಜಾಲಿ ಹಾಕಿಸಿದರೆ ಬಿಸಿಲಲ್ಲಿ ತಂಪಾರಿಸಿಕೊಳ್ಳಲು ಛಾವಣಿಯೊಂದಿರುವುದಿಲ್ಲ. ಕಾಗೆಗೆ, ಗುಬ್ಬಿಗೆ, ಮೈನಾಗೆ, ಬುಲ್ ಬುಲ್ಲಿಗೆ ಒಂದು ತುತ್ತು ಅನ್ನವೂ ದೊರಕುವುದಿಲ್ಲ. ಬಾಯಾರಿ ಕೂಗಿದರೆ ಮುಚ್ಚಿದ ಕಿಟಕಿ ಬಾಗಿಲು ತೆರೆಯುವುದಿಲ್ಲ.
ಹಾಗಂತ ಕೋಳಿ ಕೂಗಿದರೇನೆ ಬೆಳಗಾಗಬೇಕೆಂದಿಲ್ಲವಲ್ಲ. ಇನ್ನೊಂದು ಕೊಡುವ ಕೈ ಇವಕ್ಕಾಗಿ ಕಾದಿರುತ್ತದೆ. ನಾನಿಲ್ಲದಿದ್ದರೆ ಬೇರೊಬ್ಬ. ಇರುವಷ್ಟು ದಿನ ನನ್ನ ಕರ್ತವ್ಯ. ಬೇರೆಲ್ಲೊ ಇನ್ನೊಂದು ಜೀವಿಗಳ ಗುಂಪಿನ ಜೊತೆ ಸ್ನೇಹದ ವಿನಿಮಯ ನಡೆಯಲಿದೆ. ಅಷ್ಟೇ.
April 16, 2010 at 8:01 pm |
house Shifting?!
April 21, 2010 at 2:54 pm |
hun:(