Archive for ಡಿಸೆಂಬರ್ 1st, 2008

ಹೀಗ್ಯಾಕೆ ಮಾಡಬಾರದು ?

ಡಿಸೆಂಬರ್ 1, 2008

ನಾವು ಬ್ಲಾಗಿಗರು ಭಯೋತ್ಪಾದನೆ ವಿರುದ್ಧ ಒಂದು ಆಂದೋಲನ ಯಾಕೆ ಮಾಡಬಾರದು?
ನಮ್ಮೆಲ್ಲರ ಬ್ಲಾಗಿನ ಹಣೆಪಟ್ಟಿಯನ್ನು (ಕಪ್ಪು ಹಣೆಪಟ್ಟಿಗೆ) ಬದಲಾಯಿಸುವುದು. ಇಲ್ಲ ಅಂದರೆ ಒಂದು ಚಿಕ್ಕ ಚಿಹ್ನೆಯನ್ನು ಬ್ಲಾಗಿನಲ್ಲಿ ಪ್ರದರ್ಶಿಸುವುದು.
ಮಾನ್ಯ ಅಪಾರ ಅವರೇ,
ನಮಗೆಲ್ಲ ಅಂತ ಹೀಗೊಂದು ಲಾಂಛನ ಮಾಡಿಕೊಡುತ್ತೀರಾ?
ಮಾನ್ಯ ಮೋಹನ್ ಅವರೇ,
ನಿಮ್ಮ ಮೀಡಿಯಾ ಹೌಸ್ ವತಿಯಿಂದ ಲಾಂಛನವುಳ್ಳ ಸಾಮನುಗಳನ್ನು ಮಾರುಕಟ್ಟೆ ಮಾಡಬಹುದಲ್ಲವೇ? ಹೇಗೆ ಹನುಮಾನ್ ಕೀ ಬಂಚಗಳು, ವಾಚುಗಳು ಬಂದವೋ ಹಾಗೆ.

ಅದರಲ್ಲಿ ಬಂದ ಲಾಭದ ಒಂದಾಂಶದಲ್ಲಿ ಭಯೋತ್ಪಾನೆಯಿನ್ದ ಸತ್ತ ಜನರಿಗೆ ಸಹಾಯ ಮಾಡಬಹುದಲ್ಲವೇ ?
ಹಾಗೆನೇ
ಆದರಿಂದಲೇ ಟೀನಾ ಅವರು ಹೇಳಿದ ಹಾಗೆ ಸಾಮಾನ್ಯ ಜನರ ಸಂಘಟನೆ ಕಟ್ಟಬಾರದೇಕೆ ? (“ಈ ಬ್ಲೇಮ್ ಗೇಮುಗಳನ್ನು ನಾವೆ ಆಚೆ ಬಿಸಾಕಿ ಒಟ್ಟುಗೂಡಿ ಲೋಕಲ್ ಸರ್ವೇಲೆನ್ಸ್ ಟೀಮುಗಳನ್ನೇಕೆ ರಚಿಸಿಕೊಳ್ಳಬಾರದು. ಆರಾಮವಾಗಿ ಕೆಲಸವಿಲ್ಲದೆ ತಿರುಗುವ ಯುವಕರಿದ್ದಾರೆ, ಮನೆಯಲ್ಲಿ ಕುಳಿತಿರುವ ಯುವತಿಯರಿದಾರೆ. ಯಾವುದೆ ಮನೆಗೆ ಯಾರೆ ಹೊಸಬರು ಬಂದರೂ ಟೀಮಿಗೆ ಮಾಹಿತಿಸಿಗಬೇಕು. ಯಾವುದೆ ಹೊಟೆಲಿಗೆ ಜನ ಬರುವ ಮೊದಲು ತಪಾಸಣೆ ನಡೆಯಬೇಕು. ಹೀಗೆ ಕೈಹೊಸಕಿಕೊಂಡು ಕೂರುವ ಬದಲು ಏನಾದರು ಮಾಡಬೇಕು. ನಾವು ಕೈಲಾಗದವರಲ್ಲ ಎಂದು ತೋರಬೇಕು”-ನೆಲದ ಮಾತು ಬ್ಲಾಗಿನಿಂದ)
ನಿಮ್ಮೆಲ್ಲರನ್ನೂ ಹೀಗೆ ಎಳೆದು ತಂದಿದ್ದಕ್ಕೆ ಕ್ಷಮೆಯಿರಲಿ. ನನ್ನದು ಬಾಲಿ ಐಡಿಯಾ ಎಂದು ಅನ್ನಿಸಿದರೆ ಸ್ಸಾರಿ.

ನನ್ನ ಓದುಗರೇ , ಹೀಗೆ ಮಾಡೋಣವೇ? ಏನಂತೀರಿ ??

ಬದುಕ್ಕಿದ್ದೀನಿ

ಡಿಸೆಂಬರ್ 1, 2008

ನಿಜಕ್ಕೂ ಮಾತಿಗಿಂತ ಕೃತಿ ಲೇಸೇ ?!!

ನಾನು ಗುರುವಾರ ಬೆಳಿಗ್ಗೆಯಿಂದ ಭಯೋತ್ಪಾದನೆಗೆ ವಿರೋಧ ಸೂಚಕವಾಗಿ ಕಪ್ಪು ಹಣೆ ಪಟ್ಟಿ ಮಾಡಿದ್ದೆ. ಆದರೆ ಯಾರಿಗೂ ಏನು ಗೊತ್ತಾಗಲೇ ಇಲ್ಲ. ಮುಂಬಯಿ ಸ್ಪೋಟಕ್ಕೆ ಬ್ಲಾಗಿಗರ ಸ್ಪಂದನದ ಲಿಸ್ಟ್ ನಲ್ಲಿ ನನ್ನ ಹೆಸರೇ ಇಲ್ಲ 😦 ಷೇ ! ನಾನು ಹಾಗಾಗಿ ಹೀಗೆ ಮಾಡಿದ್ದು ಎಂದೆಲ್ಲ ಭಾಷಣ ಕೊಟ್ಟು ಮಾಡಬೇಕಿತ್ತು. ಕಾರಣ ವಿವರಿಸದೇ ಮಾಡಿಬಿಟ್ಟಿದ್ದೆ. ನಾನೇನೋ ಇದು ಮೌನದ ಸಮಯ ಎಂದು ಮಾತಾಡದೇ ವಿರೋಧ ಸೂಚಿಸಿದ್ದೆ. ಆದರೆ ಮಾತನಾಡದೇ ಮಾಡುವ ಮೌನಕ್ಕೆ ಯಾವುದೇ ಬೆಲೆ ಇಲ್ಲ ಎಂದು ಇವತ್ತು ಗೊತ್ತಾಯಿತು. ಇನ್ನೂ ಮುಂದೆ ಮೌನದ ಬಗ್ಗೆ ಮಾತನಾಡಿ ಮೌನವಾಗುತ್ತೇನೆಆದರೂ ಅಚ್ಚರಿಯಾಗುತ್ತೆ. ಎಲ್ಲ ಕಡೆ ಮಾತಿಗಿಂತ ಕೃತಿ ಬೇಕು ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ!!

ಹಾಗಂತ ನಿಮ್ಮದೇನೂ ತಪ್ಪಿಲ್ಲ ಬಿಡಿ. ಏನೋ ಟೆಕ್ನಿಕಲ್ ಏರರ್ ಅಂದು ಕೊಂಡಿರುತ್ತೀರಾ. ಹೆಡ್ಡಿಂಗ್ ಫೋಟೋ ಅನ್ದವಾಗಿದೆ ಅನ್ನುವವರು ಸಲ ಕಪ್ಪು ಯಾಕಾಗಿದೆ ಎಂದು ಕೇಳಲಿಲ್ಲ. ! ನೀವು ಮೌನದಲ್ಲಿದ್ದೀರಾ ? (ವೈಶಾಲಿ ಒಬ್ಬರಿಗೆ ಕಾರಣ ಹೊಳೆದದ್ದು ನನ್ನ ಪುಣ್ಯ!)

ಹೋಗಲಿ ಯಾರೊಬ್ಬರೂ ನನ್ನ ಸುರಕ್ಷಿತ ವಾಗಿದ್ದೀರಾ ಎಂದು ಕೇಳಲಿಲ್ಲ (ಮೌನಗಾಳ, ಕೆನೆಕಾಫಿ ಬಿಟ್ಟು). ಸಹ ಬ್ಲಾಗೀಗ ಬದುಕಿದ್ದಾನಾ ಸತ್ತಿದ್ದಾನಾ ಅಂತಲೂ ವಿಚಾರಿಸಲಿಲ್ಲ. ಅಕ್ಕ ಪಕ್ಕದವರ ಬಗ್ಗೆ ವಿಚಾರಿಸಿಕೊಳ್ಳದ ನಾವು ನಮ್ಮಂತಾ ನರಸತ್ತವರಿಂದಲೇ ಆರಿಸಲ್ಪಟ್ಟವನಿಂದ ಪ್ರತಿಸ್ಪಂದನೆ ಬಯಸ್ತಿದ್ದೀವಿ. ನಮ್ಮೆಲ್ಲರ ಪ್ರತಿನಿಧಿಯಲ್ಲವೇ ಅವನುನಮಗಿಲ್ಲದ ಸ್ಪಂದನೆ ಅವನಿಗೆಲ್ಲಿನ್ದ ಬರುತ್ತದೆ?. ಆದರೂ ಇದಕ್ಕೆಲ್ಲ ಅವನೇ ಕಾರಣ ಎಂದು ಬೊಬ್ಬೆ ಹಾಕುತ್ತಿದ್ದೀವಿ.

ಹಾಗಂತ ನಿಮ್ಮ ಬಗ್ಗೆ ನಂಗೆ ಖಂಡಿತ ಬೇಸರವಿಲ್ಲ. ( ನಾನು ಸಹ ಶೆಟ್ಟರನ್ನು ವಿಚಾರಿಸಿಲ್ಲ ). ನಾನು ಮುಂಬಯಿವಾಸಿ ಎಂದು ನಿಮಗೆ ಗೊತ್ತಿರಲಿಕ್ಕಿಲ್ಲ. ನಾನೇನು ಪ್ರತಿದಿನ ನಿಮ್ಮ ಬ್ಲಾಗ್ ನೋಡಿದರು ಸಹಿತ ಕಮೆನ್ಟಿಸುತ್ತೇನೆಯೇ? ನಾನು ನಿಮ್ಮನ್ನು ವಿಚಾರಿಸಿಲ್ಲ. ಅದಕ್ಕೆ ನೀವು ನನ್ನ ವಿಚಾರಿಸಿಲ್ಲ. ಸರಿಯಿದೆ. ನಮ್ಮಲ್ಲಿ ಎಷ್ಟೋ ಜನ ಟೈಮ್ ಪಾಸ್ ಎಂದೋ, ಬೋರ್ ಆಗುತ್ತೆ ಎಂದೋ ಆಫೀಸಿನ ದುಡ್ಡಲ್ಲೇ, ಅಲ್ಲೇ ಕೂತು ಬ್ಲಾಗ್ ಓದಿ ನಮ್ಮ ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ತೋರಿಸುತ್ತೀವಲ್ಲ. ನಮಗ್ಯಾಕೆ ಸ್ವಾಮಿ ಬೇರೆಯವರ ಉಸಾಬರಿ. ಬರೆದ್ರೆ ನೋಡೋದು, ಇಲ್ಲ ಅಂದ್ರೆ ಬೇರೆ ಬ್ಲಾಗ್ ಓದುತ್ತಾ ಇರೋದು.

ಹೋಗಲಿ ಬಿಡಿಎಲ್ಲ ಕಾಲದ ಮಹಿಮೆಈಗ ಯಾರ ಹತ್ರನೂ ಪಕ್ಕದಲ್ಲೇ ಏನಾಗ್ತಿದೆ ಎಂದು ನೋಡೋ ಪುರುಸೊತ್ತು ಇಲ್ಲಇನ್ಟರೆಸ್ಟು ಇಲ್ಲನಮ್ಮ ಬದುಕೇ ನಮ್ಮ ಮುಂದೆ ಹರಕೊಂಡು ಬಿದ್ದಿದೆಅದನ್ನು ಸರಿ ಮಾಡೋದೆ ಆಗ್ತಾ ಇಲ್ಲಇನ್ನು ಬೀದಿಲಿ ಹೋಗೋ ಮಾರಿನ ತಲೆ ಮೇಲೆ ಏಳ್ಕೊಳಕ್ಕೆ ಆಗುತ್ತಾ?
ನಾವೆಲ್ಲ ಸಾಮಾನ್ಯ ಪ್ರಜೆಗಳು. ಬುದ್ಧಿ ಇಲ್ಲದವರು, ಕೈಲಾಗದವರು. ಎರಡು ಜನ ಭಯೋತ್ಪಾದಕರನ್ನ ಅಲ್ಲಿದ್ದವರೇ ಸಾಯಿಸೋದಾ! ಜನರೆಲ್ಲ ಸೇರಿ ವಿಲನ್ ನನ್ನು ತದುಕೋದು ಬರೀ ಸಿನೆಮಾಕ್ಕೆ, ಕತೆಗೆ ಸೈ. ನಿಜ ಜೀವನದಲ್ಲಿ ಮಾಡೊಕಾಗೊಲ್ಲ. ಪೋಲಿಸ್ ಎಲ್ಲ ಡೈ ಹಾರ್ಡ್ ತರಹ ಸ್ಟನ್ಟ್ ಮಾಡೋಲ್ಲ.
ನಮ್ಮನ್ನು ನೋಡಿಕೊಳ್ಳೊಕೆ ಅನ್ತಾನೇ ಸರಕಾರ ಇರೋದಲ್ವಾ, ಅದು ಮಾಡಬೇಕಿರೊ ಕೆಲಸ ನಾವ್ಯಾಕೆ ಮಾಡಬೇಕುಜನರಿಂದ ಜನರಿಗಾಗಿ ಜನರಿಂದಲೇ ನಡೆಯೋ ಸರಕಾರನಾ, ಹೋಗಿ ಸ್ವಾಮಿ. ಸರಕಾರನೇ ಬೇರೆ, ಜನರೇ ಬೇರೆ. ಹಾಗೆಲ್ಲಾ ರಾಜಕಾರಣಿಯ ಸಾಮರ್ಥ್ಯದ ಬಗ್ಗೆ ಕೇಳೊದು ಜಾಹೀರಾತಲ್ಲಿ ಮಾತ್ರ……………………..